Saturday, 27 June 2015

ಪೊಲೀಸರಿಂದ ಒಬ್ಬ ಮನೆ ಕಳ್ಳ ಹಾಗೂ ಒಬ್ಬ ದಿಚಕ್ರ ವಾಹನ ಕಳ್ಳನ ಬಂಧನ.

 ಪೊಲೀಸರಿಂದ ಒಬ್ಬ ಮನೆ ಕಳ್ಳ ಹಾಗೂ ಒಬ್ಬ ದಿಚಕ್ರ ವಾಹನ ಕಳ್ಳನ ಬಂಧನ.
ಒಟ್ಟು 90,000/- ಬೆಲೆಯ  ಚಿನ್ನಾಭರಣ, ಗ್ಯಾಸ್ ಸಿಲಿಂಡರ್, ಸ್ವೌವ್, ದ್ವಿ ಚಕ್ರ ವಾಹನ ವಶ.
 ದಿನಾಂಕ: ಜೂ 20ರಂದು ಮಂಡಿ ಪೊಲೀಸರು

   ಸಾಧಿಕ್ @ ಮೆಂಟಲ್ ಬಿನ್ ಲೇಟ್ ಡ್ರಮ್ ವಜೀರ್, 33 ವರ್ಷ, ಐದೂರು,
   ರಾಮನಗರ ಜಿಲ್ಲೆ.

ಎಂಬಾತನನ್ನು ದಸ್ತಗಿರಿ ಮಾಡಿ ಮಂಡಿ ಪೊಲೀಸ್ ಠಾಣೆಯ ಮನೆ ಕನ್ನ ಕಳುವು  ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 60,000/- ಬೆಲೆಯ ಚಿನ್ನಾಭರಣ, ಒಂದು ಗ್ಯಾಸ್ ಸಿಲಿಂಡರ್ ಮತ್ತು ಸ್ವೌವ್ ವಶಪಡಿಸಿಕೊಂಡಿರುತ್ತಾರೆ ಎಂದು ಪೋಲೀಸ್ ಆಯುಕ್ತರ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮತೊಬ್ಬ ಆರೋಪಿ    ಮುಸ್ತಾಕ್ ಅಹಮದ್ ಬಿನ್ ಲೇ|| ಅಬ್ದುಲ್ ರಜಾಕ್, 55 ವರ್ಷ, ಕಲಾಸಿಪಾಳ್ಯ, ಬೆಂಗಳೂರು
ಎಂಬಾತನನ್ನು ೨೦ರಂದು ಮಂಡಿ ಪೋಲೀಸರು ಬಂಧಿಸಿ ಆತನು ಕಳ್ಳತನ ಮಾಡಿದ್ದ  ರೂ. 30,000/- ಬೆಲೆಯ ಒಂದು ಹೊಂಡಾ ಆಕ್ಟಿವಾ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.  ಈ ವಾಹನದ ಮಾಲೀಕರು ಪತ್ತೆಯಾಗಬೇಕಾಗಿದೆ.
        ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ.  ಎನ್.ಡಿ.ಬಿರ್ಜೆ ಮತ್ತು    ಎ.ಸಿ.ಪಿ. ನರಸಿಂಹರಾಜ ವಿಭಾಗ ರವರಾದ  ಉಮೇಶ್ ಜಿ.ಸೇಠ್‍ರವರ ಮಾರ್ಗದರ್ಶನದಲ್ಲಿ ಮಂಡಿ ಠಾಣಾ ಇನ್ಸ್‍ಪೆಕ್ಟರ್  ಲಕ್ಷ್ಮಿಕಾಂತ ಕೆ.ತಳವಾರ್, ಪಿಎಸ್‍ಐರವರಾದ ಶ್ರೀಮತಿ ಯಾಸ್ಮೀನ್ ತಾಜ್,  ಎ.ಎಸ್.ಐ, ರಾಮಕೃಷ್ಣ,  ಸಿಬ್ಬಂದಿಯವರುಗಳಾದ  ಅನಂತರಾಜೇ ಅರಸ್,  ಚಂದ್ರೇಗೌಡ, ರಾಜೇಂದ್ರ, ರವಿಕುಮಾರ್ ರವರುಗಳು ಶ್ರಮವಹಿಸಿರುತ್ತಾರೆ.
     ಈ ಪತ್ತೆ ಕಾರ್ಯವನ್ನು  ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಶ್ರೀ ಬಿ.ದಯಾನಂದ್, ಐ.ಪಿ.ಎಸ್ ರವರು ಪ್ರಶಂಶಿಸಿರುತ್ತಾರೆ.

No comments:

Post a Comment