Saturday, 27 June 2015

ಮಂಡ್ಯ : ಸರ್ಕಾರಗಳು ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದ್ದು, ರೈತ ನಿರಾಸೆ, ಹತಾಶೆ ಹಾಗೂ ನೋವಿಗೆ ಒಳಗಾಗಿದ್ದಾನೆ. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಟ್ಟಾಗಿ ರೈತರ ಬೆಂಬಲಕ್ಕೆ ನಿಲ್ಲಬೇಕೆಂದು ಶಾಸಕ ಪುಟ್ಟಣ್ಣಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಂಕಷ್ಟ ಕುರಿತು ಆತ್ಮವಲೋಕನ ಮಾಡಬೇಕು. ರೈತ ಶ್ರಮಕ್ಕೆ ತಕ್ಕ ಬೆಲೆ ನೀಡಬೇಕು. ರೈತರ ಸಂಕಷ್ಟ ನಿವಾರಣೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಬ್ಯಾಂಕ್‍ಗಳು ಬಲವಂತವಾಗಿ ಸಾಲ ವಸೂಲಿ ಮಾಡಬಾರದು. ರೈತರ ಚಿನ್ನಾಭರಣಗಳ ಹರಾಜು ಮಾಡಬಾರದೆಂದು ಬ್ಯಾಂಕುಗಳಿಗೆ ಸಾರ್ಕರ ಸೂಚಿಸಬೇಕು. ರಾಜಕಾರಣಿಗೆಳು ರೈತರಿಗೆ ದೈರ್ಯ ತುಂಬಬೇಕು. ಅವರ ಪರ ಯೋಜನೆ ರೂಪಿಸಲು ಪಕ್ಷಾತೀತವಾಗಿ ಮುಂದಾಗಬೇಕೆಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ರೈತರು ಹಾಗೂ ಅವರ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆಗೆ ಅವಕಾಶ ನೀಡಬೇಕು. ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕೆ ಅಧಿವೇಶನ ಬಳಸಿಕೊಳ್ಳದೆ ರೈತರ ಸಮಸ್ಯೆಗಳ ಬಗೆಹರಿಸಲು ಒಗ್ಗಟ್ಟಾಗಬೇಕು ಎಂದರು.
ಸದನದ ಹೊರಗೆ ಸಾವಿರಾರು ರೈತರ ಪ್ರತಿಭಟಿಸಿ ಧರಣಿ ಕೂರಲಿದ್ದು, ನಾನು ಸದನದ ಒಳಗೆ ರೈತಪರ ವಿಷಯಗಳನ್ನು ಮಾತನಾಡುವುದುಗಾಗಿ ತಿಳಿಸಿದರು.
ನನಗೆ ಯಾರ, ಯಾವ ಸರ್ಟಿಫಿಕೆಟ್ ಬೇಡ : ರೈತ ಸಂಘದಲ್ಲಿ ನಾನು 33 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ರೈತಸಂಘದ ಪ್ರತಿಭಟನೆಗಳಿಂದ ಸಾಲ ಮನ್ನಾವಾಗಿದೆ. ರೈತರ ಮನೆ ಹಾಗೂ ಆಸ್ತಿ ಜಪ್ತಿ ಕೈಬಿಡಲಾಗಿದೆ. ರೈತ ಸಂಘದ ಶಕ್ತಿ ಕುಂದಿಲ್ಲ. ನಮಗೆ ಯಾರ, ಯಾವ ಸರ್ಟಿಫಿಕೆಟ್ ಬೇಕಿಲ್ಲ ಎಂದು ಪುಟ್ಟಣ್ಣಯ್ಯ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ರೈತ ಸಂಘ ವಿಬ್ಭಾಗವಾಗಿದೆ. ಹೋರಾಟಗಳ ಶಕ್ತಿ ಕುಂದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು, ರೈತ ಸಂಘದ ಪ್ರತಿಭಟನೆಗಳ ಸಂಖ್ಯೆ ಕಡಿಮೆಯಾಗಿದೆ ಹೊರತು ಪ್ರತಿಭಟನೆಯ ಶಕ್ತಿ ಕುಂದಿಲ್ಲ. ಗಂಬೀರವಾಗಿ ನಾವು ಕೆಲಸ ನಿರ್ವಹಿಸುತ್ತೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರೈತಮುಖಂಡರಾದ ಶಂಭುನಹಳ್ಳಿ ಸುರೇಶ್, ಮರಿದೇವೇಗೌಡ, ಬೊಮ್ಮೇಗೌಡ ಹನಿಯಂಬಾಡಿ ನಾಗರಾಜು ಉಪಸ್ಥಿತರಿದ್ದರು.

No comments:

Post a Comment