ಮೈಸೂರು,ಜು.07.ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಜುಲೈ 7 ಹಾಗೂ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜುಲೈ 7 ರಂದು ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಜುಲೈ 8 ರಂದು ಬೆಳಿಗ್ಗೆ 8-30 ಕ್ಕೆ ಹೆಚ್.ಡಿ.ಕೋಟೆ ತಾಲ್ಲೂಕಿನ ಈರೇಹಳ್ಳಿ ಹಾಡಿ, 10 ಗಂಟೆಗೆ ಸೋನಹಳ್ಳಿ ಹಾಡಿ, 11 ಗಂಟೆಗೆ ಮೇಟಿಕುಪ್ಪೆ ಹಾಡಿಗೆ ಭೇಟಿ ನೀಡಿ ಗಿರಿಜನ ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಚಾರಿಸಲಿದ್ದಾರೆ. ಮಧ್ಯಹ್ನ 1.30 ಗಂಟೆಗೆ ಹೆಚ್.ಡಿ.ಕೋಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸ್ಥಳೀಯ ಮಹಿಳೆಯರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದ ನಂತರ ಬೆಂಗಳೂರಿಗೆ ತೆರಳಲಿದ್ದಾರೆ.
ಸ್ಥಿರ ದೂರವಾಣಿ ಹಾಗೂ ಬ್ರಾಡ್ ಬ್ಯಾಂಡ್ ಸೇವೆ ವ್ಯತ್ಯಾಯ
ಮೈಸೂರು,ಜು.07.ಮೈಸೂರು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ರಾಜಮಾರ್ಗ ಕಾಮಗಾರಿ ಮುಡಾ ಸರ್ಕಾಲ್ ಬಳಿ ಇತರ ಕಾಮಗಾರಿ ನಡೆಸುವ ವೇಳೆ ಬಿ.ಎಸ್.ಎನ್.ಎಲ್ ಕೇಬಲ್ ಗಳಿಗೆ ತೀವ್ರ ಹಾನಿ ಉಂಟಾಗಿದ್ದು, ನಗರದ ಸಯ್ಯಾಜಿರಾವ್ ರಸ್ತೆ, ಕಾಳಮ್ಮ ಗುಡಿ ರಸ್ತೆ, ಮಂಡಿ ಮೊಹಲ್ಲಾ, ಮುಡಾ ಕಚೇರಿ, ವಿಶ್ವವಿದ್ಯಾನಿಲಯದ ಕಚೇರಿಗಳ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಿರ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಸಂಪರ್ಕ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುತ್ತದೆ.
ರಾಷ್ಟ್ರೀಯ ಹೆದ್ದಾರಿ-212 ಕಾಮಗಾರಿಯಲ್ಲಿ ಮೈಸೂರು ನಗರದ ಬಂಡಿಪಾಳ್ಯ, ಬೇಗೂರು ಗ್ರಾಮ ಮತ್ತು ಗುಂಡ್ಲುಪೇಟೆ ಪಟ್ಟಣ ಪ್ರದೇಶದಲ್ಲಿ ಬಿ.ಎಸ್.ಎನ್.ಎಲ್ ಕೇಬಲ್‍ಗಳಿಗೆ ಹಾನಿ ಉಂಟಾಗಿದ್ದು, ಬಂಡಿಪಾಳ್ಯ, ಗೌರಿಶಂಕರ ನಗರ, ವಿಶ್ವೇಶ್ವರನಗರ, ಬೇಗೂರು ಗ್ರಾಮ ಮತ್ತು ಗುಂಡ್ಲುಪೇಟೆ ಸ್ಥಿರ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಸೇವೆಯಲ್ಲೂ ಸಹ ತೀವ್ರ ವ್ಯತ್ಯಾಯ ಉಂಟಾಗಿರುತ್ತದೆ.
ಬಿಎಸ್‍ಎನ್‍ಎಲ್ ನಿಂದ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದು, ಸ್ಥಿರ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಸೇವೆಯನ್ನು ಸರಿಪಡಿಸಲಾಗುವುದು ಎಂದು ಬಿಎಸ್‍ಎನ್‍ಎಲ್ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ.ಎಫ್.ಎ ಸ್ನಾತಕೋತ್ತರ ಪದವಿ ಪ್ರವೇಶ ಅರ್ಜಿ ಆಹ್ವಾನ
ಮೈಸೂರು,ಜು.07.ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ 2015-16ನೇ ಶೈಕ್ಷಣಿಕ ಸಾಲಿನ ಪ್ರಥಮ ಎಂ.ಎಫ್.ಎ ಸ್ನಾತಕೋತ್ತರ ಪದವಿ ತರಗತಿ ಪ್ರವೇಶಕ್ಕಾಗಿ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಎಫ್.ಎ ಅಥವಾ ತತ್ಸಮಾನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರವೇಶದ ಅರ್ಜಿ ಮತ್ತು ವಿವರಣ ಪತ್ರಿಕೆಗಾಗಿ ಖುದ್ದಾಗಿ 250 ರೂ. ಪಾವತಿಸಿ ಅಥವಾ 275 ರೂ. ಡಿ.ಡಿ.ಯನ್ನು ಡೀನ್ ಕಾವಾ ಮೈಸೂರು ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಜುಲೈ 15 ರೊಳಗಾಗಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲೆ ಕಾಲೇಜು, ಭಾರತ ಸರ್ಕಾರ ಪಠ್ಯಪುಸ್ತಕ ಮುದ್ರಣಾಲಯದ ಆವರಣ, ಟಿ.ಎನ್.ಪುರ ರಸ್ತೆ, ಮೈಸೂರು ಇಲ್ಲಿಗೆ ಸಲ್ಲಿಸುವುದು.
ಅರ್ಹತಾ ಪರೀಕ್ಷೆ ಜುಲೈ 21 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಶುಲ್ಕ ಪಾವತಿಸಲು ಜುಲೈ 28 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2438931 ಯನ್ನು ಸಂಪರ್ಕಿಸುವುದು.
ಮನವಿ ಹಾಗೂ ಅಹವಾಲು ಸ್ವೀಕಾರ
ಮೈಸೂರು,ಜು.07.ರೇಷ್ಮೆ ಗೂಡು, ಕಚ್ಛಾ ರೇಷ್ಮೆ ಉತ್ಪಾದನೆ ಧಾರಣೆ ಹಾಗೂ ಮಾರಾಟ ವ್ಯವಸ್ಥೆ ಅಧ್ಯಯನ ತಾಂತ್ರಿಕ ಸಮಿತಿಯವರು ಜುಲೈ 10 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ
ರೇಷ್ಮೆ ಕೃಷಿಕರು, ರೈತ ಸಂಘಟನೆಗಳು, ರೀಲರ್ ಗಳು, ರೀಲರ್ ಸಂಘಟನೆಗಳು ಮತ್ತು ಇತರೆ ರೇಷ್ಮೆ ಭಾಗೀದಾರರು, ನೋಂದಾಯಿತ ಖಾಸಗಿ ಬಿತ್ತನೆ ಕೋಠಿ, ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರದ ರೀಲಿಂಗ್ ಯಂತ್ರೋಪಕರಣಗಳ ತಯಾರಕರು ಮನವಿ, ಬೇಡಿಕೆ ಹಾಗೂ ಅಹವಾಲುಗಳನ್ನು ಸಮಿತಿಗೆ ಸಲ್ಲಿಸಬಹುದಾಗಿದೆ ಎಂದು ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ರೇಷ್ಮೆ ಉಪನಿರ್ದೇಶಕರಾದ ದಿನೇಶ್ ಮೊಬೈಲ್ ಸಂಖ್ಯೆ 9448401205 ಅವರನ್ನು ಸಂಪರ್ಕಿಸುವುದು.
ದಾಖಲಾತಿ ಹಾಗೂ ಹಣ ಪಾವತಿಸಲು ಸೂಚನೆ
ಮೈಸೂರು,ಜು.07.ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮೈಸೂರು ನಂ 1ನೇ ಉಪ-ವಿಭಾಗ ಕಚೇರಿ ವ್ಯಾಪ್ತಿಯಲ್ಲಿ ಮೈಸೂರು ನಗರದ ವಿವಿಧ ಕೊಳಚೆ ಪ್ರದೇಶ/ಬಡಾವಣೆಗಳಲ್ಲಿ ನರ್ಮ್ -ಬಿಎಸ್‍ಯುಪಿ ಯೋಜನೆಯಡಿ ನಿರ್ಮಿಸಿರುವ ಹಂತ-1, 2 ಮತ್ತು 3 ಕ್ಕೆ ಅನುಮೋದನೆಯಾಗಿರುವ ಫಲಾನುಭವಿಗಳು ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಮಂಡಳಿ ವತಿಯಿಂದ ನಿಗಧಿಪಡಿಸಿರುವ ಮೊತ್ತದ ಡಿಡಿ ಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೈಸೂರು ನಂ 1ನೇ ಉಪ-ವಿಭಾಗ ಕಚೇರಿಗೆ ಜುಲೈ 24 ರೊಳಗಾಗಿ ಪಾವತಿಸುವಂತೆ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸೂಕ್ತ ದಾಖಲಾತಿಗಳನ್ನು ಒದಗಿಸದ/ಡಿ.ಡಿಯನ್ನು ಈವರೆಗೂ ಪಾವತಿಸದ ಫಲಾನುಭವಿಗಳ ಪಟ್ಟಿಯನ್ನು ಜಾವಾ ಫ್ಯಾಕ್ಟರಿ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೈಸೂರು ನಂ 1ನೇ ಉಪ-ವಿಭಾಗ ಕಚೇರಿಯಲ್ಲಿ ಪ್ರಕಟಿಸಲಾಗಿರುತ್ತದೆ. ನಿಗಧಿಪಡಿಸಿದ ದಿನಾಂಕದೊಳಗಾಗಿ ಸೂಕ್ತ ದಾಖಲಾತಿಗಳನ್ನು ಒದಗಿಸದ/ಡಿ.ಡಿಯನ್ನು ಕಟ್ಟದ ಫಲಾನುಭವಿಗಳನ್ನು ಅನುಮೋದನೆ ಪಟ್ಟಿಯಿಂದ ರದ್ದುಪಡಿಸುವಂತೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿಂಗ್ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೈಸೂರು,ಜು.07(ಕ.ವಾ.)-ಕರ್ನಾಟಕದಾದ್ಯಂತ ಇರುವ ಕಾವೇರಿ, ಪ್ರಗತಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿನ ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ಸ್ ಮತ್ತು ಗ್ರೂಪ್ ‘ಎ’ ಆಫೀಸರ್ ಹುದ್ದೆಗಳನ್ನು ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ‘ಆನ್‍ಲೈನ್’ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ , ಮೇಲಿನ ಗ್ರಾಮೀಣ ಬ್ಯಾಂಕುಗಳಲ್ಲಿನ ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ಸ್ ಮತ್ತು ಗ್ರೂಪ್ ‘ಎ’ ಆಫೀಸರ್ ಹುದ್ದೆಗಳಿಗೆ ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು. ಪ್ರತಿಯೊಂದು ಬ್ಯಾಂಕಿನ ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.ಅರ್ಜಿ ಸಲ್ಲಿಸುವವರು ದಿನಾಂಕ:1-07-2015 ಕ್ಕೆ ಯಾವುದಾದರೂ ಪದವಿ ತೇರ್ಗಡೆ ಹೊಂದಿರಬೇಕು. ವಯೋಮಿತಿ ದಿನಾಂಕ:1-7-2015 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು. ಗರಿಷ್ಟ 28ವರ್ಷ ಮೀರಿರಬಾರದು. ಪರಿಶಿಷ್ಟಜಾತಿ/ಪಂಗಡ & ಓಬಿಸಿ (ಕೇಂದ್ರ) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿಯನ್ನು ವೆಬ್ ಸೈಟ್; ತಿತಿತಿ.ibಠಿs.iಟಿ ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು
ದಿನಾಂಕ 28-07-2015 ಹಾಗೂ ಆನ್ ಲೈನ್ ಶುಲ್ಕ ಪಾವತಿಸಲು 28-07-2015 ಕೊನೆಯ ದಿನಾಂಕವಾಗಿರುತ್ತದೆ
ಹೆಚ್ಚಿನ ಮಾಹಿತಿಗೆ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು. ವಿಶ್ವವಿದ್ಯಾನಿಲಯ, ಮೈಸೂರು ದೂರವಾಣಿ- 0821-2516844/9449686641. ಸಂಪರ್ಕಿಸುವುದು.
ವಿಜಯಲಕ್ಷ್ಮಿ ಹೆಚ್.ಸಿ ಅವರಿಗೆ ಪಿಎಚ್.ಡಿ. ಪದವಿ
ಮೈಸೂರು,ಜು.07.ಮೈಸೂರು ವಿಶ್ವವಿದ್ಯಾಲಯವು ವಿಜಯಲಕ್ಷ್ಮಿ ಹೆಚ್.ಸಿ. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಸುದರ್ಶನ ಪಾಟಿಲ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “ಒuಟಣiಠಿಟe ಈಚಿಛಿe ಜeಣeಛಿಣioಟಿ ಚಿಟಿಜ ಟoಛಿಚಿಟizಚಿಣioಟಿ oಜಿ sಞiಟಿ ಣoಟಿe gಡಿouಠಿ imಚಿges ” ಕುರಿತು ಸಾದರಪಡಿಸಿದ ಇಟeಛಿಣಡಿoಟಿiಛಿs ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ವಿಜಯಲಕ್ಷ್ಮಿ ಹೆಚ್.ಸಿ. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

No comments:
Post a Comment