ನರೇಂದ್ರ ಮೋದಿ ಅವರ ಮನ ಕಿ ಬಾತ್
ನನ್ನ ಪ್ರೀತಿಯ ದೇಶವಾಸಿಗಳೇ… ನಮಸ್ಕಾರ.
ಈ ವರ್ಷ ಮಳೆಗಾಲ ಉತ್ತಮ ರೀತಿಯಲ್ಲಿ ಆರಂಭಗೊಂಡಿದೆ. ನಮ್ಮ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆಮಾಡಲು ಅನುಕೂಲವಾಗಿರುವುದು ನನಗೆ ಸಂತಸ ನೀಡಿದೆ. ಈ ಮೊದಲು ನಮ್ಮ ದೇಶದಲ್ಲಿ ಬೇಳೆಕಾಳುಗಳು ಹಾಗೂ ಎಣ್ಣೆಕಾಳುಗಳು ಬಹಳ ಕಡಿಮೆ ಪ್ರಮಾಣದಲ್ಲಿರುತ್ತಿದ್ದವು, ಈ ಬಾರಿ ಬೇಳೆಕಾಳುಗಳ ಬಿತ್ತನೆಯಲ್ಲಿ ಸುಮಾರು ಶೇ 50 ರಷ್ಟು ವೃದ್ಧಿಯಾಗಿರುವುದು ನನಗೆ ಅತೀವ ಸಂತಸ ತಂದಿದೆ. ಹಾಗೂ ಎಣ್ಣೆ ಕಾಳುಗಳಲ್ಲಿ ಸುಮಾರು ಪ್ರತಿಷತ 33 ರಷ್ಟು ಹೆಚ್ಚಳವಾಗಿದೆ. ಅದ್ದರಿಂದ ನನ್ನ ರೈತರಿಗೆ ನನ್ನ ವಿಶೇಷ ಧನ್ಯವಾದಗಳನ್ನು ಹಾಗೂ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶ ವಾಸಿಗಳೇ,
ಜುಲೈ 26, ನಮ್ಮ ದೇಶ ಇತಿಹಾಸದಲ್ಲಿ ಕಾರ್ಗಿಲ್ ವಿಜಯದಿನ ಎಂದು ಆಚರಿಸಲ್ಪಡುತ್ತಿದೆ. ರೈತರಿಗೆ ಭೂತಾಯಿಯೊಂದಿಗಿನ ಸಂಬಂಧ ಎಷ್ಟಿದೆಯೋ ಅಷ್ಟೇ ಸಂಬಂಧ ಈ ದೇಶದ ಯೋಧರಿಗೂ ಇದೆ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಒಬ್ಬೊಬ್ಬ ಸೈನಿಕ, ನೂರು- ನೂರು ಶತ್ರು ಸೈನಿಕರ ಸಮನಾಗಿದ್ದರು. ತಮ್ಮ ಪ್ರಾಣದ ಹಂಗು ತೊರೆದು ಶತ್ರುಗಳ ವಿರುದ್ಧ ಹೋರಾಡಿದ ನಮ್ಮ ಸೈನಿಕರಿಗೆ ನನ್ನ ಕೋಟಿ ಕೋಟಿ ನಮನಗಳು. ಕಾರ್ಗಿಲ್ ಯುದ್ಧ ಕೇವಲ ಗಡಿಯಲ್ಲಿ ಮಾತ್ರ ನಡೆದಿಲ್ಲ, ಭಾರತದ ಪ್ರತಿ ನಗರ, ಹಳ್ಳಿಗಳಲ್ಲಿ ಈ ಯುದ್ಧಕ್ಕಾಗಿ ಯೋಗದಾನ ನೀಡಲಾಗಿತ್ತು. ಈ ಯುದ್ಧದಲ್ಲಿ ಕೇವಲ ಸೈನಿಕ ಮಾತ್ರವಲ್ಲದೇ, ಆ ಸೈನಿಕರ ತಾಯಿ- ತಂದೆ ಪತ್ನಿ, ಸಹೋದರ ಸಹೋದರಿಯರು ಮತ್ತು ಆಗತಾನೇ ತನ್ನ ತಂದೆಯ ಕಿರುಬೆರಳು ಹಿಡಿದು ನಡೆಯಲು ಕಲಿಯುತ್ತಿದ್ದ ಪುಟ್ಟ ಕಂದಮ್ಮಗಳು ಕೂಡ ಶತ್ರುಗಳ ವಿರುದ್ಧ ವಿರೋಚಿತ ಹೋರಾಟ ನಡೆಸಿದ್ದಾರೆ. ಈ ಬಲಿದಾನದ ಫಲವೇ ಇಂದು ಭಾರತ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವ ಗೌರವಕ್ಕೆ ಪಾತ್ರವಾಗಿದೆ. ಅದಕ್ಕಾಗಿ ಕಾರ್ಗಿಲ್ ವಿಜಯ ದಿವಸ ಆಚರಣೆ ನಿಮಿತ್ತ ನಮ್ಮ ಎಲ್ಲ ಸೈನಿಕರಿಗೂ ನನ್ನ ಕೋಟಿ ಕೋಟಿ ಪ್ರಣಾಮಗಳು.
ಜುಲೈ 26ರ ದಿನ ಮತ್ತೊಂದು ದೃಷ್ಟಿಯಲ್ಲಿ ನನಗೆ ಮಹತ್ವಪೂರ್ಣವಾದುದು ಯಾಕೆಂದರೆ 2014 ರಲ್ಲಿ ನಮ್ಮ ಸರಕಾರ ರಚನೆಯಾದಮೇಲೆ 26 ಜುಲೈ ದಿನದಂದೇ ನಾನು mಥಿgov ಆರಂಭಮಾಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಭಾಗಿಯಾಗುವ ಸಂಕಲ್ಪವನ್ನು ಮಾಡಿ ಎಲ್ಲ ಪ್ರಜೆಗಳನ್ನು ಅಭಿವೃದ್ಧಿಯ ಪಥದಲ್ಲಿ ಜೊತೆಗೂಡಿಸಿಕೊಳ್ಳುವುದು ಮತ್ತು ಒಂದೇ ವರ್ಷದ ನಂತರ ಸುಮಾರು 2 ಕೋಟಿ ಜನರು mಥಿgov ಜಾಲತಾಣ ವೀಕ್ಷಿಸಿದ್ದು, ಸುಮಾರು 5.5 ಲಕ್ಷ ಜನ ತಮ್ಮ ವಿಚಾರಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಪ್ರಧಾನಿ ಕಾರ್ಯಾಲಯದ ಉಪಯೋಗಕ್ಕೆ ಸಂಬಂಧಿಸಿದಂತೆ 50 ಸಾವಿರಕ್ಕಿಂತ ಹೆಚ್ಚು ಜನ ತಮ್ಮ ಅಮೂಲ್ಯ ಸಮಯ ನೀಡಿ, ತಮ್ಮ ಬುದ್ಧಿ ಉಪಯೋಗಿಸಿ ಸಲಹೆ- ಸೂಚನೆ ನೀಡಿ, ಈ ಕೆಲಸ ಮಹತ್ವಪೂರ್ಣವೆಂದು ಭಾವಿಸಿದ್ದು ಅತ್ಯಂತ ಸಂತಸದ ವಿಷಯವಾಗಿದೆ.
ಐ ಆರ್ ಸಿ ಟಿ ಸಿ ಜಾಲತಾಣದ ಮುಖಾಂತರ ವಿಕಲಚೇತನ ವ್ಯಕ್ತಿಗಳಿಗೆ ಖೋಟಾದಡಿ ಟಿಕೆಟ್ ನೀಡುವ ಬಗ್ಗೆ ಕಾನಪುರದ ಅಖಿಲೇಶ ವಾಜಪೇಯಿ ಉತ್ತಮ ಸಲಹೆ ನೀಡಿ, ಅಂಗವಿಕಲರು ತಮ್ಮ ಟಿಕೇಟ್‍ಗಾಗಿ ಉಳಿದವರಂತೆ ಕಷ್ಟಪಡುವುದು ಉಚಿತವೇ? ಎಂದು ಪ್ರಶ್ನಿಸಿದ್ದರು. ಈ ಸಲಹೆ ಸಣ್ಣದಾಗಿದ್ದರೂ ಇದರ ಬಗ್ಗೆ ಸರಕಾರವು ಇದುವರೆಗೂ ಯೋಚಿಸಲಿರಲಿಲ್ಲ. ಅಖಿಲೇಶ ಅವರ ಸಲಹೆ ಮೇರೆಗೆ ಸರಕಾರ ವಿಕಲ ಚೇತನ ಸಹೋದರ ಸಹೋದರಿಯರಿಗೆ ಐ ಆರ್ ಸಿ ಟಿ ಸಿ ಜಾಲತಾಣದಲ್ಲಿ ಖೋಟಾದಡಿ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇವತ್ತು ಒಥಿgov ಮೂಲಕ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಸಲಹೆಗಳಿಂದ ಲೋಗೋ, ಟ್ಯಾಗ್ ಲೈನ್, ಕಾರ್ಯಕ್ರಮಗಳ ರಚನೆ ಮತ್ತು ನೀತಿ ನಿರ್ಧಾರಗಳು ರೂಪಗೊಳ್ಳುತ್ತಿವೆ, ಇದರಿಂದ ದೇಶದಲ್ಲಿ ಒಂದು ಹೊಸ ಅನುಭವ ಹಾಗೂ ವಿನೂತನ ವಾತವರಣ ಸೃಷ್ಟಿಯಾಗಿದೆ. ನಾನು 15 ಆಗಸ್ಟ್ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬುದು ಸಹ ಒಥಿgov ಮೂಲಕ ಸಲಹೆ ಸೂಚನೆಗಳು ಬರುತ್ತಿವೆ.
ಬೇಟಿ ಬಚಾವೋ- ಬೇಟಿ ಪಢಾವೋ, ಗಂಗಾ ಶುದ್ಧಿಕರಣ,ಸ್ವಚ್ಛಭಾರತ ಆಂದೋಲನದ ಬಗ್ಗೆ ನನ್ನ ವಿಚಾರ ವ್ಯಕ್ತಪಡಿಸುವಂತೆ ನನಗೆ ಚೆನ್ನೈನ ಸುಚಿತ್ರಾ ರಾಘವಾಚಾರಿಯವರಿಂದ ಸಲಹೆ ಬಂದಿದೆ.
ನಾನು 15 ಆಗಸ್ಟ್ ದಿನದಂದು ಯಾವ ವಿಷಯದ ಕುರಿತು ಮಾತನಾಡಬೇಕೆಂದು ತಮ್ಮ ಸಲಹೆ ಗಳನ್ನು ಒಥಿgov ಮೂಲಕ ಹಾಗೂ ಪತ್ರ ಮುಖಾಂತರ ಆಕಾಶವಾಣಿ ಮತ್ತು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಿಕೊಡಬೇಕೆಂದು ನನ್ನ ಮನವಿ.
15 ಆಗಸ್ಟ್ ರಂದು ನಾನು ಮಾಡುವ ಭಾಷಣ ಜನತೆಯ ವಿಚಾರ, ಸಲಹೆಗಳನ್ನು ಒಳಗೊಂಡಿರುವುದು ಉತ್ತಮ ವಿಚಾರವಾಗಿದ್ದು ನನಗೆ ಉತ್ತಮ ಸಲಹೆ- ಸೂಚನೆಗಳನ್ನು ಕಳುಹಿಸುವುರೆಂದು ನಾನು ನಂಬಿದ್ದೇನೆ.
ನಾನು ಒಂದು ವಿಷಯದ ಮೇಲೆ ಚಿಂತೆ ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ನಾನು ಯಾವುದೇ ಉಪದೇಶವನ್ನು ಕೋಡಲು ಇಚ್ಛಿಸುವುದಿಲ್ಲ, ಮತ್ತು ರಾಜ್ಯ ಸರಕಾರ , ಕೇಂದ್ರ ಸರಕಾರ ಅಥವಾ ಸ್ಥಳೀಯ ಸಂಘ ಸಂಸ್ಥೆಗಳ ಮೇಲೆ ಜವಾಬ್ಧಾರಿ ಹೇರಿ ನುಣಚಿಕೊಳ್ಳಲು ಪ್ರಯತ್ನಿಸುತ್ತಿಲ್ಲ.
ಈಗ ಎರಡು ದಿನಗಳ ಹಿಂದೆ ದಿಲ್ಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರನು ಸುಮಾರು 10 ನಿಮಿಷ ನರಳಾಡುತ್ತಿದ್ದೂ ಅವನಿಗೆ ಯಾವೂದೇ ಸಹಾಯ ಸಿಗಲಿಲ್ಲ, ಈ ಕುರಿತು ಜನರು ನನಗೆ ನೀವೂ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಲು ಸೂಚನೆ ನೀಡಿ, ಜನರಲ್ಲಿ ಜಾಗೃತಿ ಮೂಡಿಸುವಂತೆ ಕೇಳಿಕೊಂಡರು. ಬೆಂಗಳೂರಿನ ಅಕ್ಷಯ, ಪುಣೆಯ ಅಮಯ ಜೋಶಿ, ಮುಡಬಿದರೆಯ ಪ್ರಸನ್ನ ಕಾಕುಂಜೆ ಸೇರಿದಂತೆ ಹಲವರು ಈ ಬಗ್ಗೆ ತಮ್ಮ ಚಿಂತೆಯನ್ನು ವ್ಯಕ್ತಪಡಿಸಿದ್ದು ಸರಿಯಾಗಿದೆ. ಈ ಕುರಿತ ಅಂಕಿಅಂಶಗಳನ್ನು ಗಮನಿಸಿದರೆ ಹೃದಯ ಒಡೆದು ಹೋಗುತ್ತದೆ. ನಮ್ಮ ದೇಶದಲ್ಲಿ ಪ್ರತಿ ನಿಮಿಷಕೊಂದು ಒಂದು ದುರ್ಘಟನೆ ಸಂಭವಿಸುತ್ತಿದ್ದು, ಆ ದುರ್ಘಟನೆಗೆ ರಸ್ತೆ ಅಪಘಾತವೇ ಕಾರಣವಾಗಿದ್ದು, ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿ ಮರಣಹೊಂದುತ್ತಾನೆ, ಎಲ್ಲದಕ್ಕೂ ಹೆಚ್ಚಿನ ಕಳವಳಕಾರಿ ಅಂಶವೆಂದರೆ , ಸತ್ತವರಲ್ಲಿ 1/3 ಜನ 15-20 ವರ್ಷದವರಾಗಿರುವುದು. ಒಂದು ಸಾವು ಸಂಪೂರ್ಣ ಪರಿವಾರನ್ನೂ ಛಿದ್ರಗೊಳಿಸುತ್ತದೆ.ಸರಕಾರ ಮತ್ತು ಶಾಸನ ತನ್ನ ಕಾರ್ಯವನ್ನು ಸಹಜವಾಗಿ ಮಾಡಿಯೇ ಮಾಡುತ್ತದೆ, ಅದರೊಂದಿಗೆ, ತಮ್ಮ ಮಕ್ಕಳು ಅತ್ಯಂತ ಸುರಕ್ಷಿತ ರೀತಿಯಲ್ಲಿ ತಮ್ಮ ದ್ವೀಚಕ್ರ ಹಾಗೂ ಚತುಷ್ಚಕ್ರ ವಾಹನಗಳ ಚಾಲನೆ ಬಗ್ಗೆ ತಂದೆ ತಾಯಿಗಳು ಕಾಳಜಿ ಪೂರ್ವಕವಾಗಿ ಅಗತ್ಯ ವಾತಾವರಣ ನಿರ್ಮಿಸಬೇಕೆಂದು ನನ್ನ ಕಳಕಳಿಯ ಮನವಿ.
ಕೆಲವೊಮ್ಮೆ ಆಟೋರಿಕ್ಷಾದ ಹಿಂಬದಿಯಲ್ಲಿ “ ಪಪ್ಪಾ ಬೇಗ ಮನೆಗೆ ಬಾ” ಎಂಬ ಬರಹ ಹೃದಯಕ್ಕೆ ತಟ್ಟುವಂತಿರುತ್ತದೆ, ಆದ್ದರಿಂದ ನಮ್ಮ ಸರಕಾರವು ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು, ರಸ್ತೆ ನಿರ್ಮಾಣದಲ್ಲಿ ತಾಂತ್ರಿಕತೆ ಅಳವಡಿಸುವುದು, ಕಾನೂನಿನ ಸಮರ್ಪಕ ಜಾರಿ, ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಮೊದಲಾದÀ ಹೊಸ ಆಯಾಮUಳನ್ನೊಳಗೊಂಡ ರಸ್ತೆ ಸಂಚಾರ ಹಾಗೂ ಸುರಕ್ಷತಾ ಕಾಯ್ದೆ ಜಾರಿಗೊಳಿಸಲಿದ್ದೇವೆ. ಮುಂದಿನ ದಿನಗಳಲ್ಲಿ ರಸ್ತೆ ಸಾರಿಗೆ ಮತ್ತು ಸುರಕ್ಷಾ ವಿಧೇಯಕವನ್ನು ಮತ್ತು ರಸ್ತೆ ಸುರಕ್ಷತಾ ಯೋಜನೆ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುವರಿದ್ದೇವೆ.
ಇನ್ನೊಂದು ಯೋಜನೆ ಕೈಗೆತ್ತಿಗೊಳ್ಳಲಿದ್ದು ಅದು ಮುಂದೆ ವಿಸ್ತಾರಗೊಳ್ಳಲಿದೆ.
ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಹಣವಿಲ್ಲದೆ ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸುವ ರಸ್ತೆ ಸಾರಿಗೆ ಮತ್ತು ಸುರಕ್ಷಾ ವಿಧೇಯಕವನ್ನು ಅತಿ ಶೀಘ್ರದಲ್ಲೇ ತಮ್ಮ ಸರ್ಕಾರ ಜಾರಿಗೆ ತರುತ್ತದೆ. ಜಾರಿಗೆ ತರಲಾಗುವ ಮಸೂದೆಯಲ್ಲಿ ಶುಲ್ಕ ರಹಿತ 1033 ದೂರವಾಣಿ ಮತ್ತು ಅಂಬ್ಯುಲೆನ್ಸ್ ನೆರವುಗಳು ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸುತ್ತವೆ, ಅಪಘಾತ ನಡೆದ ಮೊದಲ 50 ತಾಸಿನೊಳಗೆ ಉತ್ತಮವಾದ ಚಿಕಿತ್ಸೆ ನೀಡಲು ಅನುವು ಮಾಡಿಕೊಡುತ್ತದೆ. ಆದರೆ ಇವುಗಳೆಲ್ಲವೂ ಅಪಘಾತದ ನಂತರವಾಗಿದ್ದು, ಅಪಘಾತವಾಗದ ಹಾಗೇ ಎಚ್ಚರಿಕೆ ವಹಿಸಬೇಕಾದದ್ದು ಅವಶ್ಯಕವಾಗಿದ್ದು, ಪ್ರತಿಯೊಂದು ಜೀವವೂ ಅತ್ಯಮೂಲ್ಯದದ್ದು ಎಂಬ ಭಾವನೆ ತಾಳುವ ಅವಶ್ಯಕತೆ ಇದೆ.
ಕರ್ಮಚಾರಿಗಳು ಕರ್ಮಯೋಗಿಗಳಾಗಬೇಕೆಂದು ಹಲವು ಬಾರಿ ಹೇಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ ನಡೆದ ಕೆಲವು ಘಟನೆಗಳು ನನ್ನ ಮನಸ್ಸಿನಲ್ಲಿದ್ದು ಆ ಬಗ್ಗೆ ತಮ್ಮೊಂದಿಗೆ ಮಾತನಾಡಬಯಸುತ್ತೇನೆ. ಸಿಬ್ಬಂದಿಗಳು ಕೆಲಸ ಮಾಡುತ್ತ ಮಾಡುತ್ತ ದಣಿಯುತ್ತಾರೆ, ಪಗಾರ ಸಿಗುತ್ತದೆ, ಕೆಲಸ ಮಾಡೋಣ ಎಂಬ ಭಾವನೆ ವ್ಯಕ್ತವಾಗುತ್ತದೆ. ಆದರೆ, ಕೆಲವು ದಿನಗಳ ಹಿಂದೆ ರೈಲ್ವೆ ನೌಕರರ ಬಗ್ಗೆ ಮಾಹಿತಿ ಬಂದಿದ್ದು ನಾಗಪುರ ವಿಭಾಗದಲ್ಲಿ ಟಿ ಟಿ ಇ ಆಗಿರುವ ವಿಜಯ ಬಿಸ್ವಾಲ್ ಗೆ ಚಿತ್ರ ಬಿಡಿಸುವುದು ಹವ್ಯಾಸವಾಗಿದ್ದು, ರೈಲ್ವೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅವರು ಚಿತ್ರ ಬಿಡಿಸುವ ಮೂಲಕ ಆನಂದ ಪಡೆಯುತ್ತಿದ್ದಾರೆ. ನಮ್ಮ ಆಸಕ್ತಿ, ನಮ್ಮಲ್ಲಿಯ ಕಲೆ, ನಮ್ಮ ಕ್ಷಮತೆಯನ್ನು ನಮ್ಮ ಕಾರ್ಯದ ಜೊತೆಗೆ ಹೊಂದಿಸಿಕೊಂಡು ಹೇಗೆ ಆನಂದ ಹೊಂದಬಹುದೆಂದು ವಿಜಯ ಬಿಸ್ವಾಲ್ ತೋರಿಸಿದ್ದಾರೆ. ಮುಂಬರುವ ದಿನಗಳಲ್ಲಿ ವಿಜಯ ಬಿಸ್ವಾಲ್ ಅವರ ಕಲಾಚಿತ್ರಗಳು ಸಾರ್ವಜನಿಕ ಚರ್ಚೆಗೆ ಬರಬಹುದು.
ಮಧ್ಯಪ್ರದೇಶದ ಹಾರ್ದ ಜಿಲ್ಲೆಯ ಸರ್ಕಾರಿ ನೌಕರರು ಆರಂಭಿಸಿರುವ ಕಾರ್ಯವನ್ನು ನಮ್ಮ ಮನಸ್ಸಿಗೆ ನಾಟಿದೆ. “ಆಪರೇಶನ್ ಮಲಯುದ್ಧ” ಹೆಸರಿನಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದಾರೆ. ರಕ್ಷಾ ಬಂಧನ್ ಆಚರಣೆಗಾಗಿ ‘ಬ್ರದರ್ ನಂಬರ್ -1’ ಸ್ಪರ್ಧೆಯನ್ನು ಆರಂಭಿಸಿದ್ದಾರೆ. ತನ್ಮೂಲಕ ಸೋದರಿ ವರ್ಗಕ್ಕೆ ಶೌಚಾಲಯವನ್ನು ಕಾಣಿಕೆಯಾಗಿ ಸೋದರರು ನಿರ್ಮಿಸಿಕೊಡುತ್ತಿದ್ದಾರೆ . ಹೇಗೆ ರಕ್ಷಾಬಂಧನದ ಅರ್ಥ ಬದಲಾಗಿ ಅದು ಸಫಲವಾಗಿದೆ. ಹೀಗಾಗಿ ಹಾರ್ದ ಜಿಲ್ಲೆಯ ಸರಕಾರಿ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳು, ಘಟನೆಗಳು ನನ್ನ ಮನಸ್ಸಿಗೆ ಸಂತೋಷ ಉಂಟುಮಾಡುತ್ತವೆ.
ಛತ್ತಿಸಗಡ ದ ರಾಜನಂದಗಾಂವ್‍ನ ಕೆಶ್ಲಾ ಗ್ರಾಮದ ಕೆಲ ಜನರು ಕೆಲವು ತಿಂಗಳುಗಳ ಹಿಂದಿನಿಂದ ತಮ್ಮ ಗ್ರಾಮದಲ್ಲಿ ಶೌಚಾಲಯ ನಿರ್ಮಿಸುವ ಅಭಿಯಾನ ಆರಂಭಿಸಿದರು, ಇದೀಗ ಆ ಗ್ರಾಮದಲ್ಲಿ ಒಬ್ಬ ವ್ಯಕ್ತಿಯೂ ಬಹಿರ್ದೆಸೆಗೆ ಹೊರಗಡೆ ಹೋಗುವುದಿಲ್ಲ, ಯಾವಾಗ ಗ್ರಾಮದಲ್ಲಿ ಅಭಿಯಾನ ಯಶಸ್ಚಿಯಾಗಿತೋ ಆವಾಗ ಗ್ರಾಮದಲ್ಲಿ ಉತ್ಸವದ ರೀತಿಯಲ್ಲಿ ಸಂಭ್ರಮಿಸಿದರು. ಸಮಾಜ ಜೀವನದಲ್ಲಿ ಮೂಲ್ಯಗಳು ಹೇಗೆ ಬದಲಾಗುತ್ತಿವೆ, ಜನರ ಮನಸ್ಸುಗಳು ಹೇಗೆ ಬದಲಾಗುತ್ತಿವೆ, ಹಾಗೂ ದೇಶದ ನಾಗರಿಕರು ಹೇಗೆ ಮುಂದುವರೆಯುತ್ತಿದ್ದರೆಂದು ಕೆಶ್ಲಾ ಗ್ರಾಮ ಉತ್ತಮ ಉದಾಹರಣೆಯಾಗಿ ನನ್ನ ಮುಂದೆ ಬಂದಿದೆ. ಗುವಾಹತಿಯಿಂದ ಈಶಾನ್ಯರಾಜ್ಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಭಾವೇಶ ಡೆಕಾ ನನೆ ಬರೆದಿದ್ದು, ಅಲ್ಲಿನ ಜನರು ಕ್ರೀಯಾಶೀಲರಾಗಿ ಬಹಳವಾಗಿ ವಿವಿಧ ವಿಷಯಗಳ ಬಗ್ಗೆ ಬರೆಯುತ್ತಿರುವುದು ಒಳ್ಳೆಯ ವಿಷಯವಾಗಿದೆ. ತಮಗೆ ಒಂದು ವಿಷಯ ತಿಳಿಸಬೇಕೆಂದರೆ, ಈಶಾನ್ಯ ರಾಜ್ಯಗಳಿಗಾಗಿಯೇ ಪ್ರತ್ಯೇಕ ಮಂತ್ರಾಲಯ ರಚನೆ ಮಾಡಲಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರು ಇರುವಾಗ “ಈಶಾನ್ಯರಾಜ್ಯಗಳ ಅಭಿವೃದ್ಧಿ ವಲಯ ಮಂತ್ರಾಲಯ” ಸ್ಥಾಪಿತವಾಗಿತ್ತು. ನಮ್ಮ ಸರಕಾರ ಬಂದ ನಂತರ ದೇಶದ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಬಗ್ಗೆ ಒತ್ತು ನೀಡಲಾಗಿದ್ದು, ಪ್ರತಿ ಈಶಾನ್ಯ ರಾಜ್ಯದಲ್ಲೂ ಕನಿಷ್ಠ 7 ದಿವಸ ವಾಸ್ತವ್ಯ ಹೂಡಲು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ತನ್ಮೂಲಕ ಆಯಾ ರಾಜ್ಯದ ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ಬಗೆಹರಿಸಲು ಕಾರ್ಯಶೀಲರಾಗುವಂತೆ ನಿರ್ದೇಶಿಸಲಾಗಿದೆ. ಇದರಿಂದ ಅವರ ಸಮಸ್ಯೆ ತಿಳಿಯಲು, ಪರಿಹರಿಸಲು ಸಹಕಾರಿಯಾಗುತ್ತದೆ.
“ಮಾರ್ಸ್ ಮಿಷನ್” ಸಫಲತೆಯಿಂದ ಅತೀವ ಆನಂದವಾಗುತ್ತದೆ. ಕೆಲ ದಿನಗಳ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ, ಮೊದಲ ಬಾರಿಗೆ ಅತಿ ಹೆಚ್ಚು ತೂಕದ ವಾಣಿಜ್ಯ ಉದ್ದೇಶದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಪಿ.ಎಸ್.ಎಲ್.ವಿ. ಸಿ-28, ಯುನೈಟೆಡ್ ಕಿಂಗಡಮ್‍ನ 5 ಉಪಗ್ರಹಗಳನ್ನು, ಭೂ ಕಕ್ಷೆಗೆ ಹಾರಿ ಬಿಟ್ಟಿದೆ. ಇದು ಬಹುದೊಡ್ಡ ಸಾಧನೆಯಾಗಿದೆ. ನಿವೇನಾಗಬೇಕೆಂದು ಬಯಸಿದ್ದೀರೆಂದು ಕೆಲವು ಬಾರಿ ಯುವಕರೊಂದಿಗೆ ಮಾತನಾಡಿಸಿದಾಗ ನೂರರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ವಿಜ್ಞಾನಿಯಾಗಬೇಕೆಂದು ಹೇಳುತ್ತಾರೆ, ವಿಜ್ಞಾನದ ಬಗೆಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಬಹು ಚಿಂತೆಯ ವಿಷಯವಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಒಂದು ರೀತಿಯಲ್ಲಿ ಬೆಳವಣಿಗೆಯ ಡಿ ಎನ್ ಎ ಇದ್ದ ಹಾಗೆ, ನಮ್ಮ ಯುವ ಪೀಳೀಗೆ ವಿಜ್ಞಾನಿಯಗುವ ಕನಸು ಕಾಣಬೇಕು, ಸಂಶೊಧನೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು, ಅವರಿಗೆÉ ಪೆÇ್ರೀತ್ಸಾಹ ದೊರೆತು ಅವರ ಕ್ಷಮತೆಯನ್ನು ಅರಿಯುವುದು ಬಹುದೊಡ್ಡ ಅವಶ್ಯಕತೆಯಾಗಿದೆ.
ಇದೀಗ ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯು ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಆರಂಭಿಸಿದ್ದು, ಪೂರ್ವ ರಾಷ್ಟ್ರಪತಿ ಡಾ; ಕಲಾಮ್ ಇದರ ಆರಂಭಗೊಳಿಸಿದ್ದಾರೆ. ಈ ಅಭಿಯಾನದ ಅಡಿ ಐ ಐ ಟಿ, ಎನ್ ಐ ಟಿ, ಕೇಂದ್ರ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳು ಪೆÇೀಷಕರ ರೀತಿಯಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ, ಮಾರ್ಗದರ್ಶನ, ಸಹಾಯ ಮೊದಲಾದವುಗಳನ್ನು ನೀಡುವಲ್ಲಿ ಗಮನ ಹರಿಸಲಿವೆ.
ನಾನು ಐ ಎ ಎಸ್ ಅಧಿಕಾರಿಗಳಿಗೂ ಸಹ ತಮ್ಮ ಸಮೀಪದ ಶಾಲೆ ಕಾಲೇಜುಗಳಲ್ಲಿ ವಾರಕ್ಕೆ 3-4 ಗಂಟೆ ಮಕ್ಕಳೊಂದಿಗೆ ಮಾತನಾಡಿ ತಮ್ಮ ಅನುಭವ ಹಂಚಿಕೊಳ್ಳಲು ವಿನಂತಿಸಿದ್ದೇನೆ, ಮುಂದಿನ ಪೀಳಿಗೆಗೆ ನಿಮ್ಮ ಶಕ್ತಿ ಉಪಯುಕ್ತವಾಗಲೆಂದು ತಿಳಿಸಿದ್ದೇನೆ.
ನಮ್ಮ ದೇಶದ ಎಲ್ಲಾ ಗ್ರಾಮ ಮತ್ತು ಪಟ್ಟಣಗಳಲ್ಲಿ 24 ಗಂಟೆ ವಿದ್ಯುತ್ ಸೌಲಭ್ಯ ವಿರಬೇಕಲ್ಲವೇ? ಇದು ಕಠಿಣ ಕೆಲಸ ಅದರೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಶುಭಾರಂಭ ಮಾಡಿದ್ದೇವೆ. ಮುಂಬರುವ ವರ್ಷಗಳಲ್ಲಿ ಗ್ರಾಮಗಳಲ್ಲಿ 24 ತಾಸು ವಿದ್ಯುತ್ ಲಭವಿರುವಹಾಗೆ ಹಾಗೂ ಗ್ರಾಮದ ಮಕ್ಕಳು ಪರೀಕ್ಷೆಯ ದಿನಗಳಲ್ಲಿ ಅಭ್ಯಾಸ ಮಾಡಲು ವಿದ್ಯುತ್ ಸಮಸ್ಯೆ ಬರದ ಹಾಗೆ ಹಾಗೂ ಗ್ರಾಮಗಳಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಅವುಗಳಿಗೆ ವಿದ್ಯುತ್ ಒದಗಿಸಲು ಹಾಗೂ ಮೊಬೈಲ್ ಚಾರ್ಜ್ ಮಾಡಲು ವಿದ್ಯುತ್ ಅವಶ್ಯಕವಿದ್ದು, ಹೀಗಾಗಿ ನವು ಹೊಸ ಆರಂಭನ್ನು ಮಾಡಿದ್ದೇವೆ.ದೇಶದ ಎಲ್ಲಾ ಗ್ರಾಮಗಳಿಗೂ ದಿನವೀಡಿ ವಿದ್ಯುತ್ ಪೂರೈಕೆ ಮಾಡುವ ಸಂಕಲ್ಪ ಮಾಡಿದ್ದು, ಸರ್ಕಾರ ದೀನದಯಾಳ ಉಪಾಧ್ಯಾಯ ಗ್ರಾಮೀಣ ವಿದ್ಯುದೀಕರಣ ಕಾರ್ಯಕ್ರಮವನ್ನು ಆರಂಭಿಸಿದೆ .
ತಮಗೆಲ್ಲರಿಗೂ ಅನಂತ ಧನ್ಯವಾದಗಳು, 15 ಆಗಸ್ಟ್ ಭಾಷಣಕ್ಕಗಿ ನನಗೆ ಅವಶ್ಯವಾಗಿ ಸಲಹೆ ಸೂಚನೆ ನೀಡಿ, ತಮ್ಮ ವಿಚಾರಧಾರೆಗಳು ನನಗೆ ಬಹಳ ಉಪಯುಕ್ತವಾಗಿವೆ.

No comments:
Post a Comment