ಕೃಷ್ಣರಾಜಪೇಟೆ: ದೇಶ ಮತ್ತು ಸಮಾಜದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಂತಹ ವ್ಯಕ್ತಿಗಳು ಶಾರೀರಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿರುವ ಕೆಲಸ ಕಾರ್ಯಗಳು ಸದಾಕಾಲ ನಮ್ಮೊಂದಿಗೆ ಉಳಿದಿರುತ್ತವೆ, ಮಹಾನ್ ವ್ಯಕ್ತಿಗಳ ಸ್ಮರಣೆ ಮಾಡುವುದೇ ನಮ್ಮಭಾಗ್ಯ ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ತಿಳಿಸಿದರು.
ಅವರು ಹೊಸಹೊಳಲುವಿನ ಶ್ರೀ ಲಕ್ಷ್ಮೀನಾರಾಯಣ ಸಮುದಾಯ ಭವನದಲ್ಲಿ ತಾಲೂಕಿನ ಹೋಟೆಲ್ ಉದ್ಯಮದ ಅಧ್ಯಕ್ಷ, ಹಿಂದೂಪರ ಸಂಘಟನೆಗಳÀ ಮುಖ್ಯಸ್ಥರಾಗಿದ್ದ ಯು.ಆರ್.ಗೋಪಾಲ್‍ರಾವ್ ಮತ್ತು ಸಂಘಪರಿವಾರದ ಕುಟುಂಬದÀ ರಾಧಮ್ಮರವರ ಶ್ರದ್ದಾಂಜಲಿಸಭೆಯಲ್ಲಿ ಮಾತನಾಡಿದರು.
ತಮ್ಮ ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಎಲ್ಲರೂ ಸ್ವಾರ್ಥಿಗಳಾದರೆ ಸಮಾಜದ ಅಭಿವೃದ್ಧಿಯನ್ನು ಯಾರು ಮಾಡುತ್ತಾರೆ. ಛಕ್ರಪತಿಶಿವಾಜಿ ಅಂದು ಹೋರಾಟ ಮಾಡಿದ್ದರೆ ಹಿಂದೂ ಸಮಾಜ ಏನಾಗುತ್ತಿತ್ತು ಎಂಬುದನ್ನು ಹೇಳಲು ಅಸಾಧ್ಯ, ವೀರ ಸಾವರ್ಕರ್, ಭಗತ್‍ಸಿಂಗ್, ಮೇಡಂಕಾಮಾ ಸುಭಾಷ್‍ಚಂದ್ರ ನಂತಹ ವ್ಯಕ್ತಿಗಳು ತಮ್ಮ ಕುಟುಂಬವನ್ನು ಮಾತ್ರ ರಕ್ಷಣೆಮಾಡಿಕೊಂಡು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡದಿದ್ದರೆ ಇಂದು ನಾವುಗಳು ಮತ್ತೊಬ್ಬರ ದಾಸ್ಯದಲ್ಲಿ ಬದುಕನ್ನು ಸಾಗಿಸಬೇಕಾಗಿತ್ತು. ಸಮಾಜಿಕ ಕಾರ್ಯಗಳಲ್ಲಿ ತಮ್ಮ ಜೀವನವನ್ನು ತೊಡಿಗಿಸಿಕೊಂಡಿದ್ದ ಗೋಪಾಲ್‍ರಾವ್‍ರವರು ನಮಗೆ ಆದರ್ಶವ್ಯಕ್ತಿಯಾಗಿದ್ದರೆ. ತಾಲೂಕಿನಲ್ಲಿ ಸಂಘ ಪರಿವಾರ ನೆಲೆಯೂರಲು ದಿ.ಕೃಷ್ಣೇಗೌಡ, ದಿ.ಕೆ.ಟಿ.ಪಾಲಾಕ್ಷ, ದಿ.ಕೆ.ಎನ್.ಕೆಂಗೇಗೌಡ, ನಾಯಕನಹಳ್ಳಿ ನಂಜಪ್ಪ ಮತ್ತಿತರೊಂದಿಗೆ ಗೋಪಾಲ್‍ರಾವ್‍ರವರು ಶ್ರಮಿಸಿದ ಫಲ ಎಂದರೆ ತಪ್ಪಾಗಲಾರದು.
ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲು ಗುರು ಎಂಬ ಮಾತನ್ನು ಅಕ್ಷರಸಹ ಸತ್ಯಮಾಡಿರುವ ತಾಯಿ ರಾಧಮ್ಮನವರು ತಮಗೆ ಇರುವ ಇಬ್ಬರು ಮಕ್ಕಳನ್ನು ದೇಶ ಮತ್ತು ಧರ್ಮದ ರಕ್ಷಣೆಯ ಕಾರ್ಯದಲ್ಲಿ ತೊಡಗುವಂತೆ ಮಾಡಿದ್ದಾರೆ. ರಾಧಮ್ಮನವರು ತಮ್ಮ ಮನೆಯಲ್ಲಿ ಜಾತಿ-ಬೇದ ಮರೆತು ಎಲ್ಲಾ ಮಕ್ಕಳಿಗೂ ತಮ್ಮ ಮನೆಯಲ್ಲಿ ಆಶ್ರಯನೀಡಿ ಪೋಷಣೆ ಮಾಡಿದ್ದಾರೆ. ಇಂತಹ ಮಹನೀಯರು ಹಾಕಿಕೊಟ್ಟ ದಾರಿ ಯುವಕರಿಗೆ ಆದರ್ಶವಾಗಿವೆ ಎಂದು ಜಗದೀಶ್‍ಕಾರಂತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಕೆ.ಆರ್.ಹೇಮಂತ್‍ಕುಮಾರ್, ಟೈಲರ್‍ದಿನೇಶ್, ಕೋಳಿನಾಗರಾಜು, ಮುಖಂಡರಾದ ಮಂಡ್ಯಬಾಲು, ಮುರುಗೇಶ್, ಎಚ್.ಬಿ.ಮಂಜುನಾಥ್, ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ನಟರಾಜ್, ತಾಲೂಕು ಸಂಚಾಲಕ್ ಭಾಸ್ಕರ್‍ರಾಜೇಅರಸ್, ಡಿ.ಸಿ.ಕುಮಾರ್, ಯೋಗೇಶ್, ವಿಕ್ಕಿ ಮತ್ತಿತರು ಭಾಗವಹಿಸಿದ್ದರು.

No comments:
Post a Comment