ಶ್ರೀರಂಗಪಟ್ಟಣ ಉಪವಿಬಾsಗದ ಪೊಲೀಸರ ಕಾರ್ಯಾಚರಣೆ ಸುಮಾರು 29 ಲಕ್ಷ ಮËಲ್ಯದ ರಕ್ತ ಚಂದನ ವಶಪಡಿಸಿಕೊಂಡಿರುವುದಾಗಿ ಎಸ್ಪಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ದಿನಾಂಕ: 02-07-2015 ರಂದು ಬೆಳಿಗ್ಗೆ ಪಾಂಡವಪುರ ತಾಲ್ಲೋಕು, ಸುಂಕಾತೊಣ್ಣೂರು ಗ್ರಾಮದ ಜ್ಞಾನೇಶ್ ಎಂಬುವವರ ಆಲೆಮನೆಯಲ್ಲಿ ರಕ್ತ ಚಂದನ ಮರವನ್ನು ಕಳ್ಳತನದಿಂದ ಇಟ್ಟುಕೊಂಡಿದ್ದು ಸಾಗಾಣೆ ಮಾಡುತ್ತಿದ್ದಾರೆಂದು ಶ್ರೀರಂಗಪಟ್ಟಣ ಉಪವಿಬಾಗದ ಡಿ.ಎಸ್.ಪಿ. ಶ್ರೀ ಸಿದ್ದೇಶ್ವರ.ಎನ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಡಿ.ಎಸ್.ಪಿ. ಶ್ರೀರಂಗಪಟ್ಟಣ ರವರು ಶ್ರೀ. ದಯಾನಂದ, ಅಪರಾದ ವಿಬಾಗದ ಪಿ.ಎಸ್.ಐ, ಶ್ರೀರಂಗಪಟ್ಟಣ, ಶ್ರೀ. ಪ್ರಬಾಕರ್, ಪಿ.ಎಸ್.ಐ ಮಂಡ್ಯ ಸಂಚಾರಿ ಠಾಣೆ ಹಾಗು ಸಿಬ್ಬಂದಿಗಳಾದ ಎಲ್.ಕೆ.ಧನಂಜಯ, ಪಿ.ಸಿ-240. ಸಂತೋಷ್ ಎಂ.ಆರ್. ಎ.ಪಿ.ಸಿ-194., ಹೇಮಂತ ಎಸ್.ಕೆ., ಎ.ಪಿ.ಸಿ-263., ಮಹೇಂದ್ರ ಜೆ, ಎ.ಪಿ.ಸಿ-170., ಹೇಮಂತ್‍ಕುಮಾರ್ ಎಂ.ಕೆ. ಎ.ಪಿ.ಸಿ-86., ಮರಿಯಪ್ಪ ವೈ.ಡಿ ಎ.ಪಿ.ಸಿ-90 ಹಾಗೂ ಮಾರುತಿ ಎಸ್. ಬ್ಯಾಳಿ ಸಿ.ಪಿ.ಸಿ-256 ರವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಖಾಸಗಿ ವಾಹನಗಳಲ್ಲಿ ಆಲೆಮನೆಯ ಬಳಿಗೆ ಮದ್ಯಾಹ್ನ ಸುಂಕತೊಣ್ಣೂರು ಗ್ರಾಮದ ಜ್ಞಾನೇಶ್ ರವರ ಪಾಳು ಬಿದ್ದಿರುವ ಆಲೆಮನೆಯ ಮೇಲೆ ದಾಳಿ ಮಾಡಲಾಗಿ ಇಬ್ಬರು ಅಸಾಮಿಗಳು ಸಿಕ್ಕಿ ಬಿದ್ದು ಇತರೆ 5-6 ಜನರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದರು. ಸಿಕ್ಕಬಿದ್ದವರ ಹೆಸರು ವಿಳಾಸ ತಿಳಿಯಲಾಗಿ 1] ನಂದೀಶ ಬಿನ್ ಕೆಂಪಣ್ಣ @ ಪಡಿಯಪ್ಪ 25 ವರ್ಷ, ಸುಂಕತೊಣ್ಣೂರು ಗ್ರಾಮ 2] ಸಂತೋಷ ಬಿನ್ ರಾಮೇಗೌಡ, ಮೇಣಾಗ್ರ ಗ್ರಾಮ, ಪಾಂಡವಪುರ ತಾಲ್ಲೂಕು ಎಂದು ತಿಳಿದು ಬಂದಿದ್ದು, ತಪ್ಪಿಸಿಕೊಂಡು ಓಡಿಹೋದವರ ಹೆಸರು ರವಿ, ಕೊಡಗಹಳ್ಳಿ ಗ್ರಾಮ, ಮಂಜು ಬಿನ್ ರಾಮಕೃಷ್ಣೇಗೌಡ, ಮೇಣಾಗ್ರ ಗ್ರಾಮ, ಸುನೀಲ್ ಸುಂಕತೊಣ್ಣೂರು ಗ್ರಾಮ ಹಾಗೂ ಮತ್ತಿಬ್ಬರ ಹೆಸರು ಗೊತ್ತಿಲ್ಲವೆಂದು ತಿಳಿದು ಬಂದಿರುತ್ತದೆ. ಆಲೆಮನೆಯಲ್ಲಿ ಪರಿಶೀಲಿಸಲಾಗಿ ಆಲೆಮನೆಯ ಬೆಲ್ಲ ಬೇಯಿಸುವ ಒಲೆಯ ಗುಂಡಿಯೊಳಗೆ 5 ರಕ್ತಚಂದನ ಮರದ ತುಂಡುಗಳಿದ್ದು ಆಲೆಮನೆಯ ಗೋಡೆ ಪಕ್ಕದಲ್ಲಿ 3 ರಕ್ತ ಚಂದನ ಮರದ ತುಂಡುಗಳು ಇದ್ದು ಇವುಗಳನ್ನು ಕಬ್ಬಿನ ಸಿಪ್ಪೆ (ರಚ್ಚು) ಯಿಂದ ಮುಚ್ಚಲಾಗಿದ್ದು ಇವುಗಳನ್ನು ಬೇರೆಡೆಗೆ ಸಾಗಾಣಿಕೆ ಮಾಡಲು ಆರೋಪಿಗಳು ವಾಹನಕ್ಕಾಗಿ ಕಾಯುತ್ತ ಕುಳಿತಿರುವುದು ತಿಳಿದು ಬಂದಿದ್ದು, ಇವುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಅವುಗಳ ಒಟ್ಟು ತೂಕ 295 ಕೆ.ಜಿ ಇದ್ದು ಪ್ರತಿ ಕೆ.ಜಿಗೆ 10 ಸಾವಿರ ರೂ ಆಗಿರುತ್ತದೆಂದು ಅರಣ್ಯ ಇಲಾಖೆಯವರಿಂದ ತಿಳಿದು ಬಂದಿದ್ದು, ಒಟ್ಟು ಬೆಲೆ 29,50,000/- ರೂ ಗಳಾಗಿರುತ್ತೆ.
ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಮೇಲ್ಕಂಡ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.
No comments:
Post a Comment