Tuesday, 7 July 2015

ಜಂಟೀ  ಹೋರಾಟಕ್ಕೆ ಪತ್ರಿಕಾ ಸಂಪಾದಕರ ಸಂಘ ನಿರ್ಧಾರ
ಚಿತ್ರದುರ್ಗ :ಜಿಲ್ಲಾ ಮಟ್ಟದ ಪತ್ರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಜಾಹೀರಾತು ನೀತಿ ಜಾರಿಗೆ ಆದೇಶ ಮಾಡಿ ಅದು ಜಾರಿಯಾ ಗುವ ಮುನ್ನವೇ, ಅದಕ್ಕೆ ತಿದ್ದುಪಡಿ ಮಾಡುವ ಮೂಲಕ ಜಿಲ್ಲಾ ಮಟ್ಟದ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿರುವ ತಿದ್ದುಪಡಿ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿ, ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಹಾಗೂ ಇಲಾಖೆ ನಿರ್ದೇ ಶಕರಿಗೆ ಪತ್ರ ಬರೆದಿದ್ದು, ಜುಲೈ 10 ರೊಳಗೆ ಜಾಹೀರಾತು ತಿದ್ದುಪಡಿ ಆದೇಶ ರದ್ದುಗೊಳಿ ಸದಿದ್ದರೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಹೋರಾಟ ಮಾಡಲು ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ತೀರ್ಮಾನಿಸಿದೆ.
ಸಂಘದ ನೂತನ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭ ಚಿತ್ರದುರ್ಗದ ಮೆ|| ಹೊಟೇಲ್ ಐಶ್ವರ್ಯ ಫೋರ್ಟ್ ಸಭಾಂಗಣ ದಲ್ಲಿ ನಡೆದ ನಂತರ ಸಂಘದ ನೂತನ ಕಾರ್ಯಕಾರಿ ಸಮಿತಿಯ ಸಂಘದ ಅಧ್ಯಕ್ಷ ಶ. ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆದ ಪ್ರಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜಿಲ್ಲಾ ಮಟ್ಟದ ಪತ್ರಿಕೆಗಳ ಹೋರಾಟಕ್ಕೆ ಸಹಮತ ವ್ಯಕ್ತ ಪಡಿಸಿ, ಜಾಹೀರಾತು ತಿದ್ದುಪಡಿ ಆದೇಶ ರದ್ದುಗೊಳಿಸುವಂತೆ ಈಗಾಗಲೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವೂ ಸಹಾ ಇಲಾಖೆಗೆ ಹಾಗೂ ಸಚಿವರಿಗೆ ಪತ್ರ ಬರೆದಿರುವುದನ್ನು ಕಾರ್ಯ ಕಾರಿ ಸಮಿತಿ ಶ್ಲಾಘಿಸಿ, ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಜುಲೈ ಮೂರನೇ ವಾರದಲ್ಲಿ ಮೊದಲ ಹಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿತಲ್ಲದೆ, ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಯವರಿಗೆ ಪ್ರತಿಭಟನೆ ದಿನಾಂಕ ವನ್ನು ನಿಗಧಿಗೊಳಿಸಲು ತುರ್ತಾಗಿ ಪತ್ರ ಬರೆಯಲು ಸಭೆ ಸರ್ವಾನು ಮತದಿಂದ ಸಮ್ಮತಿ ಸೂಚಿಸಿತು.
ಇದೇ ತಿಂಗಳ ಕಳೆದ ಮೂg Àರಂದು  ಬೆಳಗಾವಿಯಲ್ಲಿ ನಡೆಯು ತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಸದಸ್ಯ ಎನ್.ಎಸ್. ಬೋಸ್‍ರಾಜು ಅವರು ಜಾಹೀ ರಾತು ನೀತಿಗೆ ಸಂಬಂಧಿಸಿದಂತೆ ಕೇಳಿರುವ ಪ್ರಶ್ನೆಗಳಿಗೆ ವಾರ್ತಾ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ಸಭೆಯಲ್ಲಿ ಚರ್ಚಿಸಿ, ಈ ಉತ್ತರದ ಪ್ರತಿಯಿಂ ದಲೇ ಇಲಾಖೆ ತಪ್ಪೆಸಗುತ್ತಿರು ವುದನ್ನು ಸಾಬೀತುಪಡಿಸಬಹು ದಾಗಿದೆ ಎಂದು ನಿರ್ಧರಿಸಲಾಯಿತು.
ಸದಸ್ಯತ್ವ ಆಂದೋಲನ :  ರಾಜ್ಯದ ಪ್ರತಿ ಜಿಲ್ಲೆಗಳಿಗೂ ನೂತನ ಪದಾಧಿಕಾರಿಗಳ ತಂಡವನ್ನು ರಚಿಸಿ, ಸದಸ್ಯತ್ವ ಆಂದೋಲನ ನಡೆಸುವ ಮೂಲಕ ಮುಂದಿನ ಕಾರ್ಯಕಾರಿ ಸಮಿತಿಯೊಳಗೆ ಎಲ್ಲಾ ಜಿಲ್ಲೆಗಳ ಸಂಪಾದಕರನ್ನು ಸಂಪರ್ಕಿಸಿ, ಆಂದೋಲನ ಹಮ್ಮಿಕೊಳ್ಳುವ ಮೂಲಕ ಸದಸ್ಯತ್ವ ಮಾಡಿ ಕೊಳ್ಳಲು ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಯಿತು.
ಪದಗ್ರಹಣ : ಇದೇ ಸಂದ ರ್ಭದಲ್ಲಿ ನೂತನ ಪದಾಧಿಕಾರಿ ಗಳಿಗೆ ಸಂಘದ ಅಧ್ಯಕ್ಷ ಶ. ಮಂಜುನಾಥ ನೇಮಕಾತಿ ಪತ್ರವನ್ನು ವಿತರಿಸಿ ಮಾತನಾಡಿ, ಸಂಘದ ಸಂಘಟನೆಗಾಗಿ ಎಲ್ಲರೂ ಶ್ರಮವಹಿ ಸಬೇಕು.  ಸಂವಿಧಾನದತ್ತವಾಗಿ ಆಯಾ ಪತ್ರಿಕೆಗಳಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಒಗ್ಗಟ್ಟಿನಿಂದ ಹೋರಾಟ ನಡೆಸುವತ್ತ ಎಲ್ಲರೂ ಗಮನರಿಸಬೇಕೆಂದು ಕರೆ ನೀಡಿ ದರು.
ಉಪಾಧ್ಯಕ್ಷರಾಗಿ ಎನ್. ಮಂಜುನಾಥ  (ಶಿವಮೊಗ್ಗ), ಪ್ರಧಾನ ಕಾರ್ಯದರ್ಶಿ ಸಿದ್ದು  ಸುಬೇದಾರ್  (ಕಲಬುರಗಿ), ಸಹ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ (ಕೊಪ್ಪಳ), ಖಜಾಂಚಿ ಕಲಾವಿದ  ವಿಷ್ಣು (ಕೋಲಾರ), ನಿರ್ದೇಶಕರುಗಳಾಗಿ ಕೆ.ಕೆ. ಕುಲಕರ್ಣಿ (ವಿಜಯಾಪುರ), ಎಸ್. ಶ್ರೀನಿವಾಸ್ (ಚಿತ್ರದುರ್ಗ), ನಾಗತಿಹಳ್ಳಿ ನಾಗರಾಜ್ (ರಾಯ ಚೂರು), ಇ. ಪುರುಷೋತ್ತಮ (ಮಂಡ್ಯ), ಮುರುಗೇಶ್ ಬ. ಅಳಗವಾಡಿ (ಬಾಗಲಕೋಟೆ), ಎಂ.ಎಸ್. ಚಂದ್ರಯ್ಯ (ಚಿಕ್ಕಮ ಗಳೂರು), ರಶ್ಮಿ ಬಿ. ಪಾಟೀಲ (ವಿಜಯಪುರ), ಬಿ.ಆರ್. ವಿಜಯ ಕುಮಾರ್ ಒಡೆಯರ್ (ಬಿಡದಿ, ರಾಮನಗರ ಜಿಲ್ಲೆ), ಎಚ್.ಎಲ್. ಸುರೇಶ್ (ಬಂಗಾರ ಪೇಟೆ, ಕೋಲಾರ ಜಿಲ್ಲೆ), ಅಜೀಜ್ ವುಲ್ಲಾ ಸರಮಸ್ತ್ (ಕಲಬುರಗಿ) ಇವರುಗಳು ಅಧಿಕಾರ ಪದಗ್ರಹಣ ಮಾಡಿದರು.ಎಂದು ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ  ರಾಜ್ಯಾಧ್ಯಕ್ಷ.ರಾದ ಶ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

No comments:

Post a Comment