Friday, 10 July 2015

ಮೈಸೂರು ಸುದ್ದಿಗಳು

ಹುಣಸೂರು ತಾಲ್ಲೂಕಲ್ಲಿ ತಂಬಾಕು ಬೆಳೆಗಾರ ಆತ್ಮಹತ್ಯೆ
ಮೈಸೂರು, ಜು. 10- ತಂಬಾಕು ಬೆಳೆಗಾರನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲ್ಲೂಕಿನ ಮೂಡಲು ಕೊಪ್ಪಲಿನ ಗ್ರಾಮದಲ್ಲಿ ಇಂದು ಬೆಳಿಗ್ಗೆ ಜರುಗಿದೆ.
  ಗ್ರಾಮವಾಸಿ ಸಣ್ಣಸ್ವಾಮಿ ಗೌಡ (42) ಎಂಬುವರೇ  ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಮೃತ ಸಣ್ಣಸ್ವಾಮಿಗೌಡ ಬೆಳೆಗಾಗಿ 4 ಲಕ್ಷ ರೂ. ಸಾಲ ಮಾಡಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
 ಈತನ  ಆತ್ಮಹತೆÀ ಬಗ್ಗೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಹುಣಸೂರು ತಾಲ್ಲೂಕಿನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದು, ಮತ್ತೂಬ್ಬ ರೈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಂಜನಗೂಡು ತಾಲ್ಲೂಕಿನಲ್ಲಿ ರೈತ ವಿಷ ಸೇವಿಸಿ  ಆತ್ಮಹತ್ಯೆ
ಮೈಸೂರು, ಜು.10-ಹುಣಸೂರು ತಾಲ್ಲೂಕಿನ ಕೆಂಪ್ಪಮ್ಮನ ಹೂಸೂರು ಗ್ರಾಮದ ರೈತ ಸ್ವಾಮೇಗೌಡ (42) ಜಮೀನಿನಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 ತಂಬಾಕು ಬೆಳೆಗಾರನಾದ ಮೃತ ಸ್ವಾಮೇಗೌಡ 5 ಲಕ್ಷ ರೂ. ಗಳ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟಕ್ಕೆ ಈತ ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗಿದೆ.
ಈ ಬಗ್ಗೆ ಬಿಳಿಕೆರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹುಣಸೂರು ತಾಲ್ಲೂಕಿನ ಚನ್ನಸೋಗೆಯ ಸಣ್ಣಪ್ಪ (40) ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಣ್ಣಪ್ಪ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಇವರೂ ಸಹ 5.5 ಲಕ್ಷ ರೂ.ಗಳ ಸಾಲ ಮಾಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಂಜನಗೂಡಿನಲ್ಲಿ ರೈತ ಆತ್ಮಹತ್ಯೆ
ಮೈಸೂರು,ಜು.10- ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 ತಾಲ್ಲೂಕಿನ ಹುರಾ ಗ್ರಾಮದ ವಾಸಿ ಮಹದೇವನಾಯ್ಕ (50)  ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಸಾಲಗಾರರ ಕಾಟ ತಾಳಲಾರದೆ ಸಾವಿಗೆ ಶರಣಾಗಿದ್ದಾರೆ.
   ಕಳೆದ 2 ದಿನಗಳ ಹಿಂದೆ ಮಹದೇವನಾಯ್ಕ ವಿಷ ಸೇವಿಸಿದ್ದರು. ಇವರನ್ನು ನಗರದ ಕೆ. ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
2 ಎಕರೆ ಪ್ರದೇಶದಲ್ಲಿ ಮೃತ ಮಹದೇವನಾಯ್ಕ ಹತ್ತಿ ಬೆಳೆ ಬೆಳೆದಿದ್ದರು.  ಬೆಲೆ ಕೈ ಕೊಟ್ಟಿದ್ದರಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹತ್ತಿ ಬೆಳೆ ಬೆಳೆಯಲು ಮಹದೇವನಾಯ್ಕ 2.5 ಲಕ್ಷ ರೂ. ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ.
 ಹುಲ್ಲಹಳ್ಳಿ ಪೊಲೀರು ಈ ಬಗ್ಗೆ ದೂರನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆನೆ ತುಳಿದು ರೈತ ಸಾವು
  ಮೈಸೂರು , ಜು. 10- ರೈತನೊಬ್ಬ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ನೆಮ್ಮನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
 ವೆಂಕಟೇಶ್ (35) ಆನೆ ಧಾಳಿಯಿಂದ ಸಾವನ್ನಪ್ಪಿರುವ ರೈತ.
ರಾತ್ರಿ ಜಮೀನಿಗೆ ನೀರು ಹಾಯಿಸಲು ಹೋದಾಗ ಈತನ ಮೇಲೆ ಆನೆ ದಾಳಿ ಮಾಡಿ ತುಳಿದು ಸಾಯಿಸಿದೆ.
  ವೆಂಕಟೇಶ್ ತನ್ನ ಜಮೀನಿಗೆ ನೀರು ಹಾಯಿಸಲು ಹೊಲಕ್ಕೆ ಹೋಗಿದ್ದಾಗ ಜಮೀನಿಲ್ಲಿ ಮೇವುತಿನ್ನಲು ಬಂದಿದ್ದ ಕಾಡಾನೆ ಈತನನ್ನು ತುಳಿದು ಸಾಯಿಸಿದೆ , ಇಂಉ ಬೆಳಿಗ್ಗೆ ಜಮೀನಿನಲ್ಲಿ ವೆಂಕಟೇಶ್ ಸತ್ತುಬಿದ್ದಿದನ್ನು ಕಂಡ ಗ್ರಾಮಸ್ತರು  ಗಾಬರಿಗೊಂಡು ಆತಂಕವ್ಯಕ್ತಪಡಿಸಿ ಆರಣ್ಯ ಇಲಾಖೆ ಅಧಿಕಾರಿಗಳಿಗೆ  ವಿಷಯ ತಿಳಿಸಿದ್ದಾರೆ ಸ್ಥಳಕ್ಕಾಗಮಿಸಿದ ಸರಗೂರು ಪೊಲೀಸರು ಹಾಗೂ ಅರಣ್ಯ ಇಲಾಖೆ ಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾg.É ಈ ಘಟನೆಯಿಮದಾಗಿ ಗ್ರಾಮದ ವಾಸಿಗಳಲ್ಲಿ ಆತಂಕದ ವಾತಾವರಣ ಮನೆಮಾಡಿದೆ.

No comments:

Post a Comment