Thursday, 23 July 2015

.ಕೃಷಿ ಪಾಲಿ ಹೌಸ್ ಘಟಕಕ್ಕೆ ಅರ್ಜಿ ಆಹ್ವಾನ
   ಮಂಡ್ಯ ಜುಲೈ 24  ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ ಕೃಷಿ ಭಾಗ್ಯ ಯೋಜನೆಯಡಿ ಪಾಲಿ ಹೌಸ್ ಘಟಕ ನಿರ್ಮಾಣಕ್ಕಾಗಿ ಸಹಾಯಧನ ಪಡೆಯಲು ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಕೆ. ರುದ್ರೇಶ್ ಅವರು ತಿಳಿಸಿದ್ದಾರೆ.
ಪಾಲಿ ಹೌಸ್ ಘಟಕಕ್ಕೆ ಅಂದಾಜು 2000 ಚ.ಮೀ.ಗೆ 21.99 ಲಕ್ಷ ರೂ. 4000 ಚ.ಮೀ.ಗೆ 42.53 ಲಕ್ಷ ರೂ. ವೆಚ್ಚವಾಗುತ್ತದೆ. ಸರ್ಕಾರದಿಂದ ಶೇ. 50 ರಷ್ಟು ಸಹಾಯಧನ ದೊರೆಯುತ್ತದೆ. ಉಳಿದ ಬಾಕಿ ವೆಚ್ಚವನ್ನು ರೈತರು ಸ್ವಂತ ಹೂಡಿಕೆಯಿಂದಾಗಲಿ ಅಥವಾ ಬ್ಯಾಂಕ್ ಸಾಲದ ಮುಖಾಂತರವಾಗಲಿ ಹೂಡಿಕೆ ಮಾಡುವ ಬಗ್ಗೆ ಖಾತರಿ ನೀಡಬೇಕು.
ಕೃಷಿ ಭಾಗ್ಯ ಪಾಲಿ ಹೌಸ್‍ನಿಂದ ಸ್ಥಳದಲ್ಲಿಯೇ ಮಣ್ಣಿನ ತೇವಾಂಶ ಸಂರಕ್ಷಣೆ, ನೀರು ಸಂಗ್ರಹಣಾ ರಚನೆ, ಲಘು ನೀರಾವರಿ, ಮುಂತಾದ ಅನುಕೂಲಗಳಿವೆ. ಈ ಎಲ್ಲಾ ಚಟುವಟಿಕೆಗಳನ್ನು ರೈತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
ಆಸಕ್ತಿಯುಳ್ಳ ರೈತರು ಹೆಚ್ಚಿನ ಮಾಹಿತಿ ಹಾಗೂ ನಿಬಂಧನೆಗಳನ್ನು ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಂದ ಪಡೆದು,  2015ರ ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ. 

No comments:

Post a Comment