ಮೈಸೂರಿನ ರೇಸ್‍ಕ್ಲಬ್ ಸ್ತಳಾಂತರಕ್ಕೆ ಶಾಸಕರ ಒತ್ತಾಯ
ಮೈಸೂರು,ಜು.11- ಶ್ರೀಮನ್ ಮಹಾರಾಜರ ಕಾಲದಲ್ಲಿ ಸ್ತಾಪಿತವಾದ, ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ರೇಸ್‍ಕ್ಲಬ್ ಅನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಕೆ.ಆರ್. ನಗರ ಶಾಸಕ ಎಸ್.ಆರ್. ಮಹೇಶ್ ಸರ್ಕಾರವನ್ನು ಒತ್ತಾಯಿಸಿದರು.
ಇಂದು ಪತ್ರಕತ್ರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರ ಬೃಹದ್ದಾಗಿ ಬೆಳೆಯುತ್ತಿದೆ, ಈ ರಸ್ತೆಯಲ್ಲಿ ವಾಹನ ದಟ್ಟಣಿ ಹೆಚ್ಚಾಗಿದೆ ಸಾವ್ಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ, ಈ ರಸ್ತೆಯಲ್ಲಿ ಅಪಘಾತಗಳೂ ಸಂಭವಿಸುವ ಸಾಧ್ಯತೆಗಳಿವೆ ಆದ್ದರಿಂದ ಇಲ್ಲಿನ ರೇಸ್ ಕೋರ್ಸ್ ಅನ್ನು ಬೇರೆ ಕಡೆ ವರ್ಗಾಯಿಸಿ ಸುಗಮ ವಾಹನಸಂಚಾರಕ್ಕೆ ಅನುಮಾಡಿಕೊಡಬೇಕಾಗಿ ಕೋರಿದರು.
2016ಕ್ಕೆ ಇದರ ನವೀಕರಣ ಅವಧಿ ಮುಗಿಯಲಿದೆ, ಆನಂತರ ಗುತಿಗೆ ನವೀಕರಣ ಬೇಡ, ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರಲ್ಲದೆ, 2001 ರಿಂದ 2006 ರ ವರೆಗೆ ರೇಸ್‍ಕ್ಲಬ್ ನಡೆಸಲು ಗುತ್ತಿಗೆ ತೆಗೆದು ಕೊಂಡಿತ್ತು ಅದರ ಅವಧಿ ಮುಗಿದ ಕಾರಣ, ಈ ಜಾಗ ಲೋಕೋಪಯೋಗಿ ಇಲಾಖೆಗೆ ಸೆರಿದ ಕಾರಣ, ರೇಸ್ ಕ್ಲಬ್ ಹಾಗೂ ಗಾಲ್ಫ್ ಕ್ಲಬ್ ನಡುವೆ ಕಿತ್ತಾಟ ನಡೆದಿತ್ತು, ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತರವರು ಕಾನೂನು ಬಾಹಿರ ಎಂದು ಪರಿಗಣಿಸಿ ಮರು ಗುತ್ತಿಗೆಯನ್ನು ತಡೆಹಿಡಿದಿದ್ದರು, ನಂತರ ಪ್ರಭಾವಿಗಳು ಅಂದಿ ಮುಖ್ಯಮಂತ್ರಿ ಹಾಗೂ ಸಚಿವರುಗಳ ಪ್ರಬಾವ ಬೆಳೆಸಿ ಮಾಮೂಲಿನಂತೆ ರೇಸ್ ಕ್ಲಬ್ ನಡೆಸಲು ಅನುಮತಿ ಕೋರಿ ತಡೆ ಆಜ್ಞೆ ತೆರವಯಗೊಳಿಸಿ ರೇಸ್ ನಡೆಸಲು ಪ್ರಾರಂಭಿಸಿದರು.
ಮತ್ತು ನವೀಕರಣಕ್ಕೆ 2.75 ಲಕ್ಷ ಕಟ್ಟಿ ಗುತ್ತಿಗೆ ಪಡೆದು 35 ಕೋಟಿ ವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ , ಕಳೆದ 30 ವರ್ಷಗಳಲ್ಲಿ ಕೇವಲ 12.45 ಲಕ್ಷ ಮಾತ್ರ ಕಟ್ಟಿದ್ದಾರೆ ಇನ್ನೂ 32 ಕೋಟಿ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಗುತ್ತಿಗೆದಾರರಿಂದ ವಸೂಲಿಮಾಡಬೇಕು, ಮತ್ತು ಅದಕ್ಕೆ ಶೆ. 2ರಷ್ಟು ಬಡ್ಡಿ ಸೇರಿಸಿ ವಸೂಲಿ ಮಾಡಿ ಸರ್ಕಾರದ ಬೊಕ್ಕಸ ತುಂಬಿಸಬೆಕು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಮದು ಹೇಳಿದರು.
ಮತ್ತು ಮುಂದೆ ಯಾರಿಗೂ ಗುತ್ತಿಗೆ ನೀಡದೇ ರೇಸ್ ಕೋರ್ಸ್ ಅನ್ನು ಬೇರೆಕಡೆಗೆ ಸ್ತಳಾಂತರಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ದ್ವಾರಕೀಶ್, ಚಿನ್ನಿರವಿ, ಸೋಮೇಸ್ ಉಪಸ್ಥಿತರಿದ್ದರು.

No comments:
Post a Comment