Sunday, 5 July 2015


ರೈತರ ಸರಣಿ ಆತ್ಮಹತ್ಯೆ : ಕಾರಣ -ಪರಿಹಾರಗಳು.
ವಿಚಾರ ಸಂಕಿರಣ
ಈಗ ದಿನಪತ್ರಿಕೆಗಳು ಪ್ರತಿ ನಿತ್ಯ ರೈತರ ಸಾವಿನ ಸುದ್ದಿಯನ್ನು ಹೊತ್ತು ತರುತ್ತಿವೆ. ನಾಡಿನ ಮಾನವ ಸಂಕುಲಕ್ಕೆ ಅನ್ನ ನೀಡಿದ ಅನ್ನದಾತರು, ಸಾಲದ ಸುಳಿಗೆ ಸಿಲುಕಿ ನೇಣು, ವಿಷಗಳಿಗೆ ಆಹಾರವಾಗುತ್ತಿದ್ದಾರೆ. ಪ್ರತಿ ಪತ್ರಿಕೆಯಲ್ಲೂ ರೈತನ ಕಣ್ಣೀರು ಕೈಗಂಟುತ್ತಿದೆ, ದುಡಿಯುವ ಕೈಗಳನ್ನು ಕಳೆದುಕೊಂಡ ಕುಟುಂಬಗಳ ಆರ್ತನಾದ ನಾಡಿನಲ್ಲೆಲ್ಲಾ ವ್ಯಾಪಿಸುತ್ತಿದೆ. ಅದರಲ್ಲೂ ಕಬ್ಬು ಬೆಳೆಗಾರರು, ರೇಷ್ಮೆ ಬೆಳೆಗಾರರ ಸಂಕಷ್ಠ ಹೇಳತೀರದು. ಹೀಗೆ ಇದ್ದಕಿದ್ದಂತೆ ರೈತರು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದು ಏಕೆ ಇದಕ್ಕಿರುವ ಕಾರಣಗಳೇನು, ಬಾಕಿ ಕೊಡದ ಸಕ್ಕರೆ ಕಾರ್ಖಾನೆಗಳಷ್ಟೆ ಇವಕ್ಕೆ ಕಾರಣವೇ? ರೈತರ ಬೇಸಾಯದ ಮಾದರಿಯೆ? ಕಳಪೆ ಬಿತ್ತನೆ ಬೀಜನೆ, ಕಿತ್ತು ತಿನ್ನುವ ಖಾಸಗಿ ಸಾಲದ ಹೊಡೆತವೆ? ವೈಜ್ಞಾನಿಕ ಬೆಲೆಯ ಕೊರತೆಯೇ? ನೀರಾವರಿ ಮತ್ತು ಮಳೆ ವಿದ್ಯುತ್‍ನ ಜೂಜಾಟವೇ? ಹೊರ ದೇಶಗಳಿಂದÀ ಭಾರತಕ್ಕೆ ಬಂದಿಳಿಯುತ್ತಿರುವ ಆಮದು ಕಚ್ಚಾ ರೇಷ್ಮೆ, ಸಕ್ಕರೆ ಕಾರಣವೇ ಅಥವಾ ಸಣ್ಣ ಹಿಡುವಳಿಯೆ?  ಸರ್ಕಾರದ ನೀತಿಗಳೇ? ಹೀಗೆ ಒಂದೇ ಎರಡೇ ನೂರಾರು.....
ಈವತ್ತು ಕೃಷಿ ಲಾಭದಾಯಕ ವøತ್ತಿಯಲ್ಲ.್ಲ ಅನಿವಾರ್ಯ ಕಾರಣಗಳಿಂದ ಬೇರೆ ವೃತ್ತಿ ತಿಳಿಯದ, ಇನ್ನೊಂದು ವøತ್ತಿಗೂ ತಮ್ಮನ್ನು ವರ್ಗಾಯಿಸಿಕೊಳ್ಳಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಏರುತ್ತಿರುವ  ಕೃಷಿಯ ಮೇಲಿನ ಹೂಡಿಕೆ, ವೆಚ್ಚದಷ್ಟು ಬೆಳೆ ಮಾರಾಟದಿಂದ ರೈತನಿಗೆ ಒದಗುತ್ತಿಲ್ಲ, ‘ರೈತ’ ಭಾರತದ ರಾಜಕಾರಣದಲ್ಲಿ ಬಹಳ ವರ್ಷಗಳ ಕಾಲ ದಾಳವಾಗಿ ಬಳಕೆಯಾಗುತ್ತಲೇ ಬಂದಿದ್ದಾರೆ. ಇನ್ನೂ ಮುಂದುವರೆದು ರೈತ ಬಜೆಟ್‍ಗಳು ಬಂದರೂ, ರೈತರ ಬವಣೆಗಳು ಮಾತ್ರ ನೀಗುತ್ತಿಲ್ಲ.
ನಾಡಿನ ಅನ್ನದಾತರು ನೇಣಿಗೆ ಕೊರಳೊಡ್ಡುವಾಗ ನಾಡಿನ ಜನಪರ ಸಂಘಟನೆಗಳು, ನಾಗರೀಕರು, ಸುಮ್ಮನೇ ವೀಕ್ಷಕರಾಗಿ ಛೇ ಅಯ್ಯೋ ಪಾಪ ಎನ್ನುವುದರ ಬದಲು, ರೈತರ ಮೂಲಭೂತ ಸಮಸ್ಯೆಗಳ ಆಳ- ಅಗಲಗಳನ್ನು ಬಗೆದು ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ದಕ್ಕುವ ಹೋರಾಟಕ್ಕೆ ದನಿಯಾಗಿ, ಜೊತೆಗೂಡಲು ವಿಚಾರ ಸಂಕಿರಣಕ್ಕೆ ಬನ್ನಿ.
ಪ್ರಾಸ್ತಾವಿಕ ಮಾತು : ಲಕ್ಷ್ಮಣ್ ಚೀರನಹಳ್ಳಿ, ಕರ್ನಾಟಕ ಜನಶಕ್ತಿ.
ವಿಷಯ ಮಂಡನೆ : ಜಿ.ಸಿ.ಬಯ್ಯಾರೆಡ್ಡಿ, ಕರ್ನಾಟಕ ಪ್ರಾಂತ ರೈತಸಂಘ.
ಡಾ.ಚಂದ್ರಪೂಜಾರಿ.ಎಂ.,ಅಭಿವೃದ್ದಿ ಅದ್ಯಯನ ವಿಭಾಗ, ಕನ್ನಡ ವಿವಿ,ಹಂಪಿ
ಅದ್ಯಕ್ಷತೆ : ಪ್ರೊ.ಕೆ.ಸಿ.ಬಸವರಾಜು, ಅರ್ಥಶಾಸ್ತ್ರ ವಿಭಾಗ, ಮೈಸೂರು ವಿ.ವಿ.

ಸಂವಾದದಲ್ಲಿ, ಪೆÇ್ರ.ಎಚ್.ಎಲ್.ಕೇಶವಮೂರ್ತಿ, ಪೆÇ್ರ.ಜಿ.ಟಿ.ವೀರಪ್ಪ, ಪ್ರೊ.ಭೂಮಿಗೌಡ, ಕೆ.ಬೋರಯ್ಯ, ಸುನಂದಜಯರಾಂ, ಕೆ.ಎನ್.ರವಿ, ಪತ್ರಕರ್ತರ ಸಂಘ, ರಾಜೇಗೌಡ, ನಂದಿನಿ ಮತ್ತು ಜಯರಾಂ, ಸುರೇಶ್, ನರಸರಾಜು, ಕರ್ನಾಟಕ ರಾಜ್ಯ ರೈತಸಂಘ, ಎಂ.ಕೃಷ್ಣಮೂರ್ತಿ ಬಹುಜನ ಸಮಾಜ ಪಕ್ಷ, ಬಿ.ರಾಮಣ್ಣ-ಆಮ್ ಅದ್ಮಿ ಪಕ್ಷ, ಬೋರಾಪುರ ಶಂಕರೇಗೌಡ, ವಿಶ್ವನಾಥ ಸೊಳ್ಳೆಪುರ, ಹೆಚ್.ಡಿ.ಜಯರಾಂ ಕರವೇ,  ಶಂಭೂನಹಳ್ಳಿ ಕøಷ್ಣ, ಕಬ್ಬು ಬೆಳೆಗಾರರ ಸಂಘ, ದಾದಾಫೀರ್, ಪಾಪುಲರ್ ಫ್ರೆಂಟ್ ಆಫ್ ಇಂಡಿಯಾ, ವೆಂಕಟಗಿರಿಯಯ್ಯ ಕರಾದಸಂಸ, ಸಂದೇಶ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ, ಬಿ.ಟಿ.ವಿಶ್ವನಾಥ್, ಮಹೇಶ್ ಯಡಗನಹಳ್ಳಿ ವಕೀಲರು, ಹೊನ್ನಯ್ಯ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್, ಸತನೂರು ಕೃಷ್ಣ, ಕುರುಬರ ಸಂಘ, ಎಂ.ಸಿ.ಶಿವರಾಜು, ಭಾರತೀಯ ಭೌದ್ದ ಮಹಾಸಭಾ, ಯೋಗಣ್ಣ, ಜಯಕರ್ನಾಟಕ, ಟಿ.ಯಶವಂತ್, ಕರ್ನಾಟಕ ಪ್ರಾಂತ ರೈತಸಂಘ, ಮುತ್ತುರಾಜ್-ಕರ್ನಾಟಕ ಜನಶಕ್ತಿ, ಬೇಕರಿ ರಮೇಶ್-ಕದಂಬ ಸೈನ್ಯ, ಮಂಜುನಾಥ್ ಕನ್ನಡಸೇನೆ, ಮಾ.ಸೋ.ಚಿದಂಬರ್, ಶಂಕರೇಗೌಡ ಕರ್ನಾಟಕ ರಕ್ಷಣಾ ವೇದಿಕೆ, ಉಮಾಶಂಕರ, ಕರ್ನಾಟಕ ಜನಪರ ವೇದಿಕೆ, ಅಂಜನಪ್ಪ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ, ಹುರಗಲವಾಡಿ ರಾಮಯ್ಯ, ಗಾಯಕರು, ಸಿ.ಸೋಮಶೇಖರಯ್ಯ ಚಿನ್ನೇನಹಳ್ಳಿ, ಸಯ್ಯದ್ ಗನಿಆನ್ ಪ್ರಗತಿಪರ ರೈತರು.

No comments:

Post a Comment