Sunday 19 March 2017

ಉಪ ಚುನಾವಣೆ ಅನುಮಾನಸ್ಪದ ವಹಿವಾಟು ಕಂಡುಬಂದರೆ ನೀಡಲು : ಡಿ.ಸಿ. ಸೂಚನೆ

ಉಪ ಚುನಾವಣೆ ಅನುಮಾನಸ್ಪದ ವಹಿವಾಟು ಕಂಡುಬಂದರೆ ನೀಡಲು : ಡಿ.ಸಿ. ಸೂಚನೆ
ಮೈಸೂರು, ಮಾ.19. ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮ ನಡೆಯದಂತೆ ನೋಡಿಕೊಳ್ಳಲು ಬ್ಯಾಂಕುಗಳಲ್ಲಿ ಅನುಮಾನಾಸ್ಪದವಾಗಿ ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಂದೀಪ್ ಡಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಮಾತನಾಡಿದರು. ನಂಜನಗೂಡು ಉಪಚುನಾವಣೆ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದು, ಏಪ್ರಿಲ್ 15 ರವರೆಗೆ ಹೆಚ್ಚಿನ ನಗದು ಹಿಂಪಡೆಯುವ ಮತ್ತು ವರ್ಗಾವಣೆ ಮಾಡುವವರ ವಹಿವಾಟಿನ ಬಗ್ಗೆ ಪ್ರತಿ ದಿನ ವರದಿ ನೀಡುವಂತೆ ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಅಕ್ರಮಕ್ಕೆ ಆಸ್ಪದ ನೀಡದೆ ಇರುವ ಉದ್ದೇಶದಿಂದ ಹಣ ವಹಿವಾಟು, ವಾಹನಗಳ ತಪಾಸಣೆ ಇನ್ನಿತರ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಒಂದು ಬ್ಯಾಂಕ್‍ನಿಂದ ಇನ್ನೊಂದು ಬ್ಯಾಂಕಿಗೆ ಅಥವಾ ಎ.ಟಿ.ಎಂಗೆ ಹಣ ಜಮೆ ಮಾಡುವಾಗ ಬ್ಯಾಂಕಿನ ಕ್ಯಾಷಿಯರ್ ಹಾಗೂ ಭದ್ರತಾ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಬಳಿ ಗುರುತಿನ ಚೀಟಿ ಹೊಂದಿರಬೇಕು ಹಾಗೂ ತಮ್ಮ ಬಳಿ ಇರುವ ನಗದು ಹಣದ ಬಗ್ಗೆ ದಾಖಲೆ ಹೊಂದಿರಬೇಕು ಎಂದರು.
ಒಬ್ಬರೇ ವ್ಯಕ್ತಿ ಕಾರಣ ಹಾಗೂ ಸೂಕ್ತ ದಾಖಲೆಗಳನ್ನು ನೀಡದೆ ಪ್ರತಿ ದಿನ ಹೆಚ್ಚು ಹಣ ಪಡೆಯುವುದು, ವರ್ಗಾವಣೆ ಮಾಡುವುದು ಅಥವ ಜಮೆ ಮಾಡುವ ಪ್ರಕ್ರಿಯೆ ಕಂಡುಬಂದಲ್ಲಿ ಪರಿಶೀಲಿಸಬೇಕು. ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಅಸಹಜವಾಗಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಹಣ ಹಿಂಪಡೆಯುವ ಅನುಮಾನಾಸ್ಪದ ಪ್ರಕ್ರಿಯೆಗಳು ನಡೆದರೆ ಹಾಗೂ ಸ್ವಸಹಾಯ ಗುಂಪುಗಳು, ಸ್ತ್ರೀ ಶಕ್ತಿ  ಸಂಘಗಳಿಗೆ ಬ್ಯಾಂಕುಗಳಿಂದ ಮಂಜೂರಾಗಿರುವ ಸಾಲ, ಫಲಾನುಭವಿಗಳಿಗೆ ಮಂಜೂರಾಗಿರುವ ಸವಲತ್ತು ಹಣ ಹೊರತುಪಡಿಸಿ ಹೆಚ್ಚಿನ ಮೊತ್ತದ ಹಣ ಜಮೆಯಾದಲ್ಲಿ ವರದಿ ಸಲ್ಲಿಸುವುದು. ಚುನಾವಣೆ ಅಕ್ರಮ ತಡೆಗಟ್ಟಲು ಬ್ಯಾಂಕ್ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿ ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್ ಶಿವಲಿಂಗಯ್ಯ, ಕೆನರಾ, ಎಸ್.ಬಿ.ಎಂ, ವಿಜಯಾ, ಸಿಂಡಿಕೇಟ್, ಕಾವೇರಿ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಂ.ಡಿ.ಸಿ.ಸಿ, ಐಓಬಿ ಹಾಗೂ ಇನ್ನಿತರ ಬ್ಯಾಂಕ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
      ಮೈಸೂರು, ಮಾ.19-“2015-16ನೇ ಸಾಲಿನಲ್ಲಿ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ವರ್ಗದ ಕಾಲೇಜು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲು  ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದ್ದು, ಅರ್ಜಿಯನ್ನು ಮಾರ್ಚ್ 20 ರೊಳಗೆ
ಸಲ್ಲಿಸಬಹುದಾಗಿದೆ. ಈವರೆವಿಗೆ ನಗದು ಬಹುಮಾನಕ್ಕಾಗಿ ಅರ್ಜಿ ಸಲ್ಲಿಸದಿರುವ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ವರ್ಗದ ಕಾಲೇಜು ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯುತ್ ನಿಲುಗÀಡೆ
     

33 ದೂರು ದಾಖಲಿಸಿ ರೂ. 6,300/- ದಂಡ ವಸೂಲಿ
    ಮೈಸೂರು.ಮಾ.19. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗು ಜಿಲ್ಲಾ ತಂಬಾಕು ನಿಷೇಧ ಕೋಶದ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಅಔಖಿPಂ   ಕಾಯಿದೆ 2003ರ ಅಡಿಯಲ್ಲಿ ಸೆಕ್ಷನ್ 4  ಉಲ್ಲಂಘಿಸಿದವರ ವಿರುದ್ದ ಇತ್ತೀಚೆಗೆ ಮೈಸೂರು  ಟೌನಿನ ವಿ.ವಿ.ಮೊಹಲ್ಲಾದ ವ್ಯಾಪ್ತಿಯಲ್ಲಿ  ದಾಳಿ ನಡೆಸಲಾಯಿತು.
    ಅಔಖಿPಂ  ಕಾಯಿದೆ 2003 ಉಲ್ಲಂಘಿಸಿದವರ ವಿರುದ್ದ 33 ದೂರು ದಾಖಲಿಸಿ ರೂ. 6,300/- ದಂಡ ವಸೂಲಿ ಮಾಡಲಾಯಿತು. ದಾಳಿ ವೇಳೆಯಲ್ಲಿ ನಕಲಿ ಬೀಡಿ, ನಕಲಿ ಜಗಿಯುವ ತಂಬಾಕು ಮತ್ತು ಸಿಗರೇಟುಗಳನ್ನು ಜಪ್ತಿ ಮಾಡಲಾಯಿತು. ಈ ದಾಳಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕುಸುಮ ಹಾಗೂ ರವರ ನೇತೃತ್ವದಲಿ ಹಾಗೂ ಪೋಲೀಸ್ ನಿರೀಕ್ಷಕರು ಸಿ.ವಿ.ರವಿರವರ ಸಹಯೋಗದೊಂದಿಗೆ ನಡೆಸಲಾಯಿತು. ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರ ಶಿವಕುಮಾರ್ ಜಿ. ಜಿಲ್ಲಾ ಸಮಾಜ ಕಾರ್ಯಕರ್ತ ನವೀದುಲ್ಲಾ ಷರೀಫ್, ವಿ.ವಿ.ಮೊಹಲ್ಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಪೇದೆಯಾದ ಹನುಮಂತ ಮತ್ತು ಪೇದೆ ಮಹೇಶ್  ಭಾಗಿಯಾಗಿದ್ದರು.
 
ಕಚೇರಿ ಸ್ಥಳಾಂತರ
      ಮೈಸೂರು.ಮಾ.19. ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಚೇರಿಯು ಹಾಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಆವರಣ ನಜûರ್‍ಬಾದ್ ಮೈಸೂರು -10 ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯು ಸ್ಥಳಂತರವಾಗಿದ್ದು, ಮಾರ್ಚ್ 20 ಮೈಸೂರು. ಡಾ.ಬಾಬು ಜಗಜೀವನರಾಂ ಭವನದ ಕಟ್ಟಡ, ನಾರಾಯಣಸ್ವಾಮಿ ಬ್ಲಾಕ್, ಆದಿಪಂಪಾ ರಸ್ತೆ, ಒಂಟಿಕೊಪ್ಪಲು ಮೈಸೂರು ಇಲ್ಲಿ ಕಾರ್ಯನಿರ್ವಹಿಸಲಿದೆ ಹೆಚ್ಚಿನ ಮಾಹಿತಿಗೆ  ದೂರವಾಣಿ ಸಂಖ್ಯೆ 0821-2344661 ನ್ನು ಸಂಪರ್ಕಿಸುವುದು.

No comments:

Post a Comment