Monday 24 October 2016

ಭಾರತೀಯರ ರತ್ನ ಡಾ|| ಬಿ.ಆರ್.ಅಂಬೇಡ್ಕರ್: ಡಾ|| ಹೆಚ್.ಸಿ.ಮಹದೇವಪ್ಪ

ಬರ ಕಾಮಗಾರಿ ನಿರ್ವಹಣೆಗೆ ಸೂಚನೆ
      ಮೈಸೂರು.ಅ.24.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಹೀಮಾ ಸುಲ್ತಾನ್ ನಜೀರ್ ಅಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯಿತು.
     ಸಭೆಯಲ್ಲಿ ಬರದ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾದ್ಯಾಂತ ವ್ಯಾಪಕವಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳು ಕೈಗೊಂಡ  ಕ್ರಮದ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ ಜಿಲ್ಲಾ ಪಂಚಾಯತ್ ಸದಸ್ಯರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ ಎಂದು ಹಲವಾರು ಸದಸ್ಯರು ಪ್ರಸ್ತಾಪಿಸಿದರು.
     ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್ ಅವರು ಈ ವರ್ಷ ಶೇ. 57 ರಷ್ಟು ಮಾತ್ರ ಮಳೆಯಾಗಿದ್ದು, ಶೇ. 43 ರಷ್ಟು ಮಳೆ ಕೊರತೆಯಾಗಿದೆ. ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಒಟ್ಟು ಮಳೆ ಶೇ 80 ರಷ್ಟು ಮಳೆಯಾಗುತ್ತಿದ್ದು, ಆದರೆ ಸೆಪ್ಟೆಂಬರ್ ಶೇ. 78 ರಷ್ಟು ಮಳೆ ಕೊರತೆ ಹಾಗೂ ಅಕ್ಟೋಬರ್ ನಲ್ಲಿ  ಈವರೆಗೆ 88 ರಷ್ಟು ಮಳೆ ಕೊರತೆಯಾಗಿದೆ ಎಂದು ಹೇಳಿದರು.
     ಬೆಳೆ ನಷ್ಟದ ಬಗ್ಗೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯ ಕೈಗೊಂಡಿದೆ. ಶೇ. 90 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 1.21 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಮಾಡಲಾಗಿದ್ದು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪರಿಹಾರವನ್ನು ಕೇಳಲು ಕ್ರಮವಹಿಸಿದೆ. ಕೇಂದ್ರದಿಂದ ಅನುದಾನ ಬಿಡುಗಡೆ ನಂತರ ಬೆಳೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದರು.
     2015-16ನೇ ಸಾಲ್ಲಿನಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಹೊಸದಾಗಿ ಕೈಗೊಳ್ಳಲು ಕ್ರಿಯಾಯೋಜನೆಗೆ ಅನುಮೋದನೆ ನೀಡಿರುವುದಿಲ್ಲ. 2016-17 ನೇ ಸಾಲಿಗೆ 82 ಕೋಟಿ ರೂ, ಒದಗಿಸಲಾಗಿದ್ದು, ಮುಂದುವರೆದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಬಳಸಲಾಗುತ್ತಿದೆ ಎಂದರು.
    ಬೀಕರ ಬರದ ಹಿನ್ನೆಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ. ಬರ ನಿರ್ವಹಣೆಗಾಗಿ ಜಿಲ್ಲೆಗೆ 15 ಕೋಟಿ ರೂ. ನೀಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ 13 ವಾರಕ್ಕೆ ಸಾಕಾಗುವಷ್ಟು ಮೇವು ಸಂಗ್ರಹಣೆ ಇದೆ. 16 ಕಡೆ ಮೇವು ಬ್ಯಾಂಕ್ ತೆರೆಯಲು ಪ್ರಸ್ತಾವನೆ ಇರುತ್ತದೆಎಂದರು.
    ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರನ್ನು ಸೇರಿಸಲು ಮನವಿ ಸರ್ಕಾರಕ್ಕೆ ನಿರ್ಣಾಯ ಮಾಡಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರುಗಳು ತಿಳಿಸಿದರು.
     ಪ್ರತಿ ಹೋಬಳಿಯಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವುಗಳಿಗಾಗಿ ಮೇವು ಘಟಕ ಪ್ರಾರಂಭಿಸುವಂತೆ ನಿರ್ಣಯ ಮಾಡಲು ಸಭೆ ನಿರ್ಣಯಿಸಿತು.
      ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರತೀಯರ ರತ್ನ ಡಾ|| ಬಿ.ಆರ್.ಅಂಬೇಡ್ಕರ್: ಡಾ||      ಹೆಚ್.ಸಿ.ಮಹದೇವಪ್ಪ







 ಮೈಸೂರು.ಅ.24.ಭಾರತದ ಸಂವಿಧಾನ ರಚಿಸಿ ಎಲ್ಲರಿಗೂ ಬೇಕಿರುವ ಮೂಲಭೂತ ಹಕ್ಕುಗಳನ್ನು ಒದಗಿಸಿಕೊಟ್ಟ ಡಾ|| ಬಿ.ಆರ್ ಅಂಬೇಡ್ಕರ್ ಅವರು ಭಾರತೀಯರ ರತ್ನ ಎಂದು ಲೋಕೋಪಯೋಗಿ  ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
    ಅವರು ಇಂದು ಮೈಸೂರು ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ, ಡಾ|| ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು ಡಾ|| ಬಿ.ಆರ್.ಅಂಬೇಡ್ಕರ್  ಅವರು ಗ್ರಂಥಾಲಯದಲ್ಲೇ ತಮ್ಮ ಹೆಚ್ಚಿನ ಕಾಲ ಕಳೆದು, ಜ್ಞಾನ ವೃದ್ಧಿಸಿಕೊಂಡು ಇಡೀ ಪ್ರಪಂಚದಲ್ಲೇ 5 ಬುದ್ಧಿ ಜೀವಿಗಳಲ್ಲಿ ಒಬ್ಬರಾದರು. ಭಾರತ ದೇಶದ 125 ಕೋಟಿ ಜನರಿಗೆ ಬೇಕಿರುವ ಸಂವಿಧಾನ ರೂಪಿಸಿದ ಇವರು ಕೇವಲ ಒಂದು ವರ್ಗಕ್ಕೆ ಸೇರಿದ ನಾಯಕರಲ್ಲ. ಇಡೀ ದೇಶದ ಎಲ್ಲಾ ವರ್ಗಕ್ಕೆ ಸೇರಿದ ನಾಯಕರು ಎಂದರು.
     ಧರ್ಮ, ಗುಂಪು, ಜಾತಿ, ಲಿಂಗ ಭೇದದ ಪರಿಕಲ್ಪನೆ ಮೀರಿ ಸರ್ವರಿಗೂ ಸಮಬಾಳು ಸಮಪಾಲು ಎಂಬ ಉದ್ದೇಶದಿಂದ ಸಂವಿಧಾನ ರೂಪಿಸಿದರು. ಮತದಾನದ ಹಕ್ಕು ನೀಡಿದರು. ಮತದಾನದ ಮೂಲಕ ಉತ್ತಮ ನಾಯಕ ಹಾಗೂ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಬೇಕು. ಶೋಷಿತ ಸಮುದಾಯಗಳು ಸಂಘಟನಾತ್ಮಕ ಹೋರಾಟ ಮಾಡಬೇಕು ಆಗಲೇ  ಶೋಷಣೆಯನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
      ಡಾ|| ಬಿ.ಆರ್.ಅಂಬೇಡ್ಕರ್ ಅವರು ಕಾನೂನು, ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿ ಉತ್ತಮ ಕೊಡುಗೆಗಳನ್ನು ನೀಡಿದರು. ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಹಿಂದೂ ಕೋಡ್ ಬಿಲ್ ಅಂಗೀಕಾರವಾಗದ ಸಂದರ್ಭದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲಿಂಗ ತಾರತಮ್ಯ ವಿರುದ್ಧ ಸಹ  ಹೋರಾಟ ನಡೆಸಿದರು ಎಂದರು.
        ಡಾ|| ಬಿ.ಆರ್.ಅಂಬೇಡ್ಕರ್ ಅವರು ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ ಎಂದರು. ತಳ ಸಮುದಾಯದವರು ಸ್ವಾಭಿಮಾನದಿಂದ ಬದುಕಬೇಕು. ಮೂಡನಂಬಿಕೆಯನ್ನು ದೂರ ಮಾಡಿಕೊಂಡು ಶಿಕ್ಷಣಕ್ಕೆ  ಆದ್ಯತೆ ನೀಡಬೇಕು ಎಂದರು.
      ಪರಿಶಿಷ್ಟ ಜಾತಿ ಹಾಗೂ ವರ್ಗದವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅನುದಾನವನ್ನು ಮೀಸಲಿಡಲಾಗಿದೆ. ಮೈಸೂರು ನಗರಕ್ಕೆ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಬಂದಿರುವ ಹಿಂದೆ ಪೌರಕಾರ್ಮಿಕರ ಶ್ರಮವಿದೆ ಎಂದರು.
      ಕಾರ್ಯಕ್ರಮದಲ್ಲಿ ಶಾಸಕ ವಾಸು, ಹೆಚ್.ಪಿ.ಮಂಜುನಾಥ್, ಸೋಮಶೇಖರ್ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್.ಭೈರಪ್ಪ, ಉಪಮಹಾಪೌರರಾದ ವನಿತಾಪ್ರಸನ್ನ, ವಿವಿಧ ಸ್ಥಯಿ ಸಮಿತಿ ಅಧ್ಯಕ್ಷರಾದ ಪುಟ್ಟಲಿಂಗು, ಬಾಲು, ಎಂ.ಕೆ.ಶಂಕರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಅ. 27 ರಂದು ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ
      ಮೈಸೂರು.ಅ.24.ಸರ್ವ ಶಿಕ್ಷಣ ಅಭಿಯಾನ ವತಿಯಿಂದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸಾರ್ವಜನಿಕ  ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳನ್ನು  ಪರಿಚಯಿಸಲು ನಿರ್ಮಿಸಿರುವ ಮಳಿಗೆಯನ್ನು ಅಕ್ಟೋಬರ್ 27 ರಂದು         ಸಂಜೆ 6-30 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪ ಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವರಾದ ತನ್ವೀರ್ ಸೇಠ್ ಅವರು ಉದ್ಘಾಟಿಸುವರು ಎಂದು ಸರ್ವ ಶಿಕ್ಷಣ  ಅಭಿಯಾನ ಸಾರ್ವಜನಿಕ  ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಹಾರ ಸಂಸ್ಕøರಣ ಘಟಕಗಳ ಸ್ಥಾಪನೆ ಬಗ್ಗೆ ವಿಚಾರ ಸಂಕಿರಣ: ಹೆಸರು ನೊಂದಾಯಿಸಿಕೊಳ್ಳಿ
     ಮೈಸೂರು.ಅ.24. ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಪೋಬಿಕ್ಸ್ ಪುಡ್ಸ್ ಅಂಡ್ ಬಯೋಟೆಕ್ನಾಲಜಿ ಕನ್ಸಲ್‍ಟೆನ್ಸಿ ಸರ್ವಿಸಸ್ ಎಲ್‍ಎಲ್‍ಪಿ. ಇವರ ಸಹಯೋಗದೊಂದಿಗೆ ಆಹಾರ ಸಂಸ್ಕøರಣ ಘಟಕಗಳ ಸ್ಥಾಪನೆ ಬಗ್ಗೆ ವಿಚಾರ ಸಂಕಿರಣವನ್ನು ನವೆಂಬರ್ ಮಾಹೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
     ವಿಚಾರ ವಿನಿಯಮ ಮತ್ತು ಮಾಹಿತಿಯನ್ನು ಹಾಲಿ ಮತ್ತು ಭಾವೀ ಉದ್ದಿಮೆದಾರರ ಜೊತೆ ಹಂಚಿಕೊಂಡು ಉದ್ಯಮ ಸ್ಥಾಪನೆ/ವಿಸ್ತರಣೆಗೆ ಅನುವು ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ಬಗ್ಗೆ ಈಗಾಗಲೇ ನೋಂದಾಯಿಸಿಕೊಂಡಿರುವುದು ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಸಕ್ತಿವುಳ್ಳವರು ಯಾವುದೇ ಶುಲ್ಕವಿಲ್ಲದೆ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ 0821-2520886 ನ್ನು ಸಂಪರ್ಕಿಸಿ ನವೆಂಬರ್ 5 ರೊಳಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಸಂತೆ
     ಮೈಸೂರು. ಅ. 24.ಮೈಸೂರು ಜಿಲ್ಲೆಯ ಓಲ್ಡ್ ಸೋಸಲೆ ಗ್ರಾಮದಲ್ಲಿ ಅಂಚೆ ಸಂತೆಯನ್ನು ಅಕ್ಟೋಬರ್ 25 ರಂದು ಹಮ್ಮಿಕೊಳ್ಳಲಾಗಿದೆ.
    ಈ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣಾ ಅಂಚೆ ಜೀವ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುವುದು. ಓಲ್ಡ್ ಸೋಸಲೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ಅವರು ಕೋರಿದ್ದಾರೆ.     
ಸಾಧನ ಸಲಕರಣೆಗಳನ್ನು ವಿತರಿಸುವ ಶಿಬಿರ
     ಮೈಸೂರು.ಅ.24.ಬೆಂಗಳೂರಿನ ಅಲಿಂಕೋ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಶಿಬಿರ ಅಕ್ಟೋಬರ್ 25 ರಂದು ಮಧ್ಯಾಹ್ನ 12-30 ಗಂಟೆಗೆ ಹುಣಸರು ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
     ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಂ.ಕೆ. ಸೋಮಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
     ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ,್ಪ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಉಮಾಶ್ರೀ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ ನಜೀರ್ ಅಹಮದ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರುಗಳಾದ  ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಹೆಚ್.ಪಿ. ಮಂಜುನಾಥ್, ಸಾ.ರಾ. ಮಹೇಶ್, ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಿ. ನಟರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸುವರು.
ಪ್ರೋತ್ಸಾಹಧನ: ಅರ್ಜಿ ಆಹ್ವಾನ
     ಮೈಸೂರು. ಅ. 24- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿಗೆ “ಸಮೃದ್ಧಿ ಯೋಜನೆ”ಯಡಿ ಆರ್ಥಿಕವಾಗಿ ಹಿಂದುಳಿದ, ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ಕೈಗೊಂಡಿರುವ ಮಹಿಳಾ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ತಲಾ ರೂ. 10,000/- ಪ್ರೋತ್ಸಾಹಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಸ್ವ ಬರಹದ ಅರ್ಜಿ ಆಹ್ವಾನಿಸಿದೆ.
    ಅಭ್ಯರ್ಥಿಗಳು ಸ್ವ ಬರಹದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ 3 ಪ್ರತಿಯಲ್ಲಿ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ನವೆಂಬರ್ 7  ರೊಳಗೆ ಸಲ್ಲಿಸುವುದು.
 ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 60 ವಯೋಮಿತಿಯಲ್ಲಿರಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಪೌರಾಡಳಿತ ಇಲಾಖೆಯಲ್ಲಿ ಮತ್ತು ಮೈಸೂರು ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿ “ಬೀದಿಬದಿ ವ್ಯಾಪಾರಿ”ಎಂದು ನೊಂದಣಿ ಮಾಡಿಸಿರುವ ಗುರಿತಿನ ಚೀಟಿ ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ರವರಿಂದ ಬೀದಿಬದಿ ವ್ಯಾಪಾರಿ ಎಂದು ಧೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು.
  ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು. ಒಬ್ಬ ಫಲಾನುಭವಿ ಕೇವಲ ಒಂದು ಭಾರಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
     ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ-0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742, ಟಿ.ನರಸೀಪುರ-08227-261267 ನ್ನು ಸಂಪರ್ಕಿಸಲು ಕೋರಿದೆ.
ಕಲಾಪ್ರಕಾರಗಳ ತರಬೇತಿ ಕಾರ್ಯಾಗಾರ : ಅರ್ಜಿ ಆಹ್ವಾನ
       ಮೈಸೂರು, ಅ. 24. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2016-17ನೇ ಸಾಲಿನಲ್ಲಿ ವಿಶೇಷಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಕಲಾವಿದರಿಗೆ ಹಾಗೂ ಪರಿಶಿಷ್ಟ ಪಂಗಡದ ಕಲಾವಿದರಿಗೆ ನೇರವಾಗಿ ಪ್ರಯೋಜನವಾಗುವಂತಹ ವಿವಿಧ ಕಲಾಪ್ರಕಾರಗಳ ತರಬೇತಿ ಕಾರ್ಯಾಗಾರ ಕಮ್ಮಟವನ್ನು ಹಮ್ಮಿಕೊಂಡಿದೆ.
    ತರಬೇತಿ ಕಾರ್ಯಾಗಾರ ಮತ್ತು ಕಮ್ಮಟವನ್ನು 3 ದಿನಗಳ ಕಾಲ ಮೈಸೂರಿನ ಕರ್ನಾಟಕ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ನಶಿಸಿ ಹೋಗುತ್ತಿರುವ ಕಲೆಗಳಿಗೆ ಆದ್ಯತೆ ನೀಡಿ ಇದಕ್ಕೆ ಸಂಬಂಧಪಟ್ಟ ತರಬೇತಿಯನ್ನು ನೀಡಲಾಗುತ್ತಿದೆ. ಈ ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ದಿನಕ್ಕೆ 500/- ರಂತೆ ಗೌರವ ಸಂಭಾವನೆಯನ್ನು ಪಾವತಿಸಲಾಗುವುದು.
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷದಿಂದ 50 ವರ್ಷದೊಳಗಿನವರಾಗಿರಬೇಕು. ಆಸಕ್ತರು ನವೆಂಬರ್ 4 ರೊಳಗೆ ಅರ್ಜಿಯ ಜೊತೆಗೆ ಜಾತಿ ಪ್ರಮಾಣ ಪತ್ರದೊಂದಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು. ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸುವುದು.
ಎಲ್.ಪಿ.ಜಿ ಸಂಪರ್ಕ ಇದ್ದಲ್ಲಿ ಮಾಹಿತಿ ನೀಡಿ
      ಮೈಸೂರು, ಅ. 24. ಪಡಿತರ ಚೀಟಿದಾರರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಎಲ್.ಪಿ.ಜಿ. ಸಂಪರ್ಕ ಹೊಂದಿದ್ದು, ಆ ಮಾಹಿತಿಯನ್ನು ಬಹಿರಂಗಪಡಿಸದೆ ಸೀಮೆಎಣ್ಣೆ ಪಡೆಯುತ್ತಿರುವ ನಿಯಮಬಾಹಿರವಾಗಿರುತ್ತದೆ. ಪಡಿತರ ಚೀಟಿದಾರರು ಎಲ್.ಪಿ.ಜಿ ಸಬ್ಬಿಡಿ ಮತ್ತು ಸೀಮೆಎಣ್ಣೆ ಸಬ್ಸಿಡಿ ಎರಡನ್ನೂ ಪಡೆಯುವುದು ಸಹ ನಿಯಮಬಾಹಿರವಾಗಿರುತ್ತದೆ.
      ಒಬ್ಬ ವ್ಯಕ್ತಿ ಅಥವಾ ಕುಟುಮಬ ಈ ರೀತಿ ಎರಡೂ ಸೌಲಭ್ಯವನ್ನು ಪಡೆಯುತ್ತಿದ್ದಲ್ಲಿ ಅಂತಹ ಸೌಲಭ್ಯಗಳನ್ನು ರದ್ದುಪಡಿಸಲು ನಿಯಮಗಳಲ್ಲಿ ಅವಕಾಶವಿರುತ್ತದೆ. ಎಲ್.ಪಿ.ಜಿ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗೆ ಅಥವಾ ಸಂಬಂಧಿಸಿದ ಆಹಾರ ನಿರೀಕ್ಷಕರುಗಳಿಗೆ ಅಕ್ಟೋಬರ್ 25 ರೊಳಗೆ ನೀಡುವುದು.
      ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಸೀಮೆಎಣ್ಣೆ ಮುಕ್ತ ಪ್ರದೇಶವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.
      ಇಲಾಖೆಯು ಕಳೆದ ವರ್ಷದಿಂದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸೀಮೆಎಣ್ಣೆ ಬಳಕೆದಾರ ಪಡಿತರ ಚೀಟಿದಾರರು ಎಲ್.ಪಿ.ಜಿ ಸಂಪರ್ಕ ಪಡೆಯಲು ಮನವಿ ಮಾಡುತ್ತಿದೆ. ಆದರೂ ಸಹ  ಜಿಲ್ಲೆಯ ನಗರ/ಪಟ್ಟಣ ಪ್ರದೇಶಗಳಲ್ಲಿ 39690 ಪಡಿತರ ಚೀಟಿದಾರರು ಇನ್ನು ಅಡುಗೆ ಅನಿಲ ಸಂಪರ್ಕ ಪಡೆದಿಲ್ಲವೆಂದು ಪ್ರತೀ ತಿಂಗಳು ಸೀಮೆಎಣ್ಣೆ ಪಡೆಯುತ್ತಿದ್ದಾರೆ.
      ಮೈಸೂರು -20454, ನಂಜನಗೂಡು-3324, ಟಿ.ನರಸೀಪುರ-6158, ಹುಣಸೂರು-2593, ಕೆ.ಆರ್.ನಗರ-2198, ಹೆಚ್.ಡಿ.ಕೋಟೆ-2955 ಹಾಗೂ ಪಿರಿಯಾಪಟ್ಟಣ-2008 ನಗರ ಮತ್ತು ಇತರೆ ಪಟ್ಟಣ ಪ್ರದೇಶಗಳಲ್ಲಿ ಅಡುಗೆ ಅನಿಲ ಸಂಪರ್ಕ ಪಡೆದಿಲ್ಲವೆಂದು ಸೀಮೆಎಣ್ಣೆ ಪಡೆಯುತ್ತಿರುವುದು ಕಂಡುಬಂದಿರುತ್ತದೆ.
    ಯಾವ ಪಡಿತರ ಚೀಟಿದಾರರು ಇದುವರೆವಿಗೆ ಎಲ್.ಪಿ.ಜಿ ಸಂಪರ್ಕ ಪಡೆದಿರುವುದಿಲ್ಲವೋ ಅವರುಗಳಿಗೆ ಪ್ರಥಮ ಆದ್ಯತೆ ಮೇಲೆ ಎಲ್.ಪಿ.ಜಿ. ಸಂಪರ್ಕ ನೀಡಲು ಜಿಲ್ಲೆಯ ಎಲ್ಲಾ ಎಲ್.ಪಿ.ಜಿ ವಿತರಕರಿಗೆ ಆದೇಶಿಸಲಾಗಿದೆ. ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಪಡಿತರ ಚೀಟಿದಾರರು ಇದುವರೆವಿಗೆ ಎಲ್.ಪಿ.ಜಿ ಸಂಪರ್ಕ ಪಡೆದುಕೊಳ್ಳದಿದ್ದಲ್ಲಿ ಅಕ್ಟೋಬರ್ 25 ರೊಳಗೆ ತಮ್ಮ ಹತ್ತಿರದ ಎಲ್.ಪಿ.ಜಿ. ವಿತರಕರಿಂದ ಕಡ್ಡಾಯವಾಗಿ ಎಲ್.ಪಿ.ಜಿ ಸಂಪರ್ಕ ಪಡೆದುಕೊಳ್ಳುವುದು.
     ಯಾವುದೇ ಎಲ್.ಪಿ.ಜಿ ವಿತರಕರು ಎಲ್.ಪಿ.ಜಿ. ಸಂಪರ್ಕ ನೀಡಲು ತೊಂದರೆ ಮಾಡಿದಲ್ಲಿ ತಾಲ್ಲೂಕಿನ ಆಹಾರ ಶಿರಸ್ತೇದಾರರು/ಆಹಾರ ನಿರೀಕ್ಷಕರು ಅಥವಾ ಡಾ|| ಕೆ. ರಾಮೇಶ್ವರಪ್ಪ ಹಿರಿಯ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಇವರ ಮೊಬೈಲ್ ಸಂಖ್ಯೆ 9611165367 ಅಥವಾ ಸಹಾಯವಾಣಿ ಸಂಖ್ಯೆ 1967 ಗೆ ದೂರು ಸಲ್ಲಿಸುವಂತೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕರಾದ ಡಾ|| ಕಾ. ರಾಮೇಶ್ವರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೀಮೆಎಣ್ಣೆ ಬಿಡುಗಡೆ
     ಮೈಸೂರು, ಅ. 24. ನಗರ ಮತ್ತು ಗ್ರಾಮಾಂತರ ಪ್ರದೇಶದ ಅನಿಲ ರಹಿತ ಆದ್ಯತಾ ಕುಟುಂಬಗಳು ಬಿಪಿಎಲ್ ಮತ್ತು ಗ್ರಾಮಾಂತರ ಪ್ರದೇಶಗಳ ಆದ್ಯತೇತರ ಎಪಿಎಲ್ ಪಡಿತರ ಚೀಟಿದಾರರಿಗೆ 2016 ಅಕ್ಟೋಬರ್ ಮಾಹೆಯ ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.
     ನಗರ ಪ್ರದೇಶದ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ ಹಾಗೂ  ಗ್ರಾಮಾಂತರ ಪ್ರದೇಶದಲ್ಲಿ ಬಯೋಕೂಪನ್ ವ್ಯವಸ್ಥೆ ಜಾರಿಯಿರುವ ಪ್ರದೇಶದಲ್ಲಿ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ 3 ಲೀಟರ್ ಸೀಮೆಎಣ್ಣೆ  ಗ್ರಾಮಾಂತರ ಪ್ರದೇಶದಲ್ಲಿ ಬಯೋಕೂಪನ್ ವ್ಯವಸ್ಥೆ ಜಾರಿಯಿಲ್ಲದ ಪ್ರದೇಶದ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ  2.5 ಲೀಟರ್ ಸೀಮೆಎಣ್ಣೆ ಮತ್ತು  ಆದ್ಯತೇತರ ಕುಟುಂಬ ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎಪಿಎಲ್ ಪಡಿತರ ಚೀಟಿದಾರರಿಗೆ 2 ಲೀಟರ್ ಸೀಮೆಎಣ್ಣೆ ನೀಡಲಾಗುವುದು. ಪ್ರತಿ ಲೀಟರ್ ಸೀಮೆಎಣ್ಣೆಗೆ ರೂ. 20/- ನಿಗಧಿಪಡಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕರಾದ ಡಾ|| ಕಾ. ರಾಮೇಶ್ವರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಂಗು ಬೆಳೆ ಕುರಿತು ತರಬೇತಿ ಪ್ರಾತ್ಯಕ್ಷಿಕೆ
ಮೈಸೂರು, ಅ. 24. ತೋಟಗಾರಿಕೆ ಮಹಾವಿದ್ಯಾಲಯ ಮೈಸೂರಿನ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕವು, 28-10-2016 ರಂದು ತೆಂಗು ಕುರಿತಾದ ತರಬೇತಿ- ಪ್ರಾತ್ಯಕ್ಷಿಕೆÉ – ಸಂವಾದ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಅನುಭವಿ ಕೃಷಿಕರು ಹಾಗೂ ನುರಿತ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಆಸಕ್ತರು ಹೆಸರು ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿದ್ದು, ಹೆಸರು ನೋಂದಾಯಿಸಿಕೊಳ್ಳಲು 7829500130 / 9945832499 / 8904790461 / 9880445913 / 0821 2970411 ನ್ನು ಸಂಪರ್ಕಿಸಬಹುದಾಗಿದೆ. ನೋಂದಾಯಿಸಿದ ಬೆಳೆಗಾರರು ತಮ್ಮ ಪ್ರಸ್ತುತ ತೆಂಗು ಬೆಳೆಯಲ್ಲಿ ರೋಗ/ಕೀಟ/ಇತರೇ ಸಮಸ್ಯೆಗಳಿಗೊಳಗಾದ ಗಿಡದ ಭಾಗಗಳನ್ನು ಬರುವಾಗ ತೆಗೆದುಕೊಂಡು ಬಂದು ಘಟಕದಲ್ಲಿ ಪರೀಕ್ಷೆಗೊಳಪಡಿಸಿ ಸೂಕ್ತ ಸಲಹೆಯನ್ನು ಉಚಿತವಾಗಿ ಪಡೆಯಬಹುದು.

ಮಾಂಸದ ಕೋಳಿ ಸಾಕಾಣಿಕೆ ತರಬೇತಿ
     ಮೈಸೂರು, ಅ. 24. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ವತಿಯಿಂದ  2016-17ನೇ ಸಾಲಿನ ನಿರುದ್ಯೋಗ ಯುವಕ/ಯುವತಿಯರಿಗೆ ಹಾಗೂ ಸಣ್ಣ ರೈತರಿಗೆ ಮಾಂಸದ ಕೋಳಿ ಸಾಕಾಣಿಕೆ ತರಬೇತಿಯನ್ನು ದಿನಾಂಕ:             07-11-2016 ರಿಂದ 11-11-2016 ರವರೆಗೆ ಸಹಾಯಕ ನಿರ್ದೆಶಕರವರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿ., ಪ್ರಾದೇಶಿಕ ಕೇಂದ್ರ, ಧನ್ವಂತರಿ ರಸ್ತೆ, ಮೈಸೂರು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
    ಸದರಿ ತರಬೇತಿ ಶಿಬಿರದ ಪ್ರಯೋಜನವನ್ನು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಒಂಭತ್ತು ಜಿಲ್ಲೆಯ ಆಸಕ್ತರು ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರವರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ (ನಿ), ಪ್ರಾದೇಶಿಕ ಕೇಂದ್ರ, ಧನ್ವಂತರಿ ರಸ್ತೆ, ಮೈಸೂರು.   0821-2422775 ನ್ನು ಸಂಪರ್ಕಿಸಬಹುದು.

No comments:

Post a Comment