Sunday 4 August 2013

ಬಸವ ಧರ್ಮಪೀಠ -ಮಾತೆ ಮಹಾದೇವಿ.



“ಬಸವಣ್ಣ ಜೀವಿತಾವಧಿ 63, 36 ವರ್ಷವಲ್ಲ”
ªÉÄʸÀÆgÀÄ,.3-ವಿಶ್ವಗುರು ಬಸವಣ್ಣನವರ ಜೀವಿತಾವಧಿ ಬಗ್ಗೆ ತಪ್ಪು ಮಾಹಿತಿ ನೀಡಿ ಕೆಲವು ಸಾಹಿತಿಗಳು ಜನರನ್ನು ಹಾದಿ ತಪ್ಪಿಸುತ್ತಿರುವುದಕ್ಕೆ ಬಸವ ಧರ್ಮ ಪೀಠದ ಮಾತೆ ಮಹಾದೇವಿ  ವಿಷಾದಿಸಿದ್ದಾರೆ.
ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ಬದುಕಿದ್ದು 63 ವರ್ಷವೇ ಹೊರತು, ಕೆಲವರು ಪ್ರತಿಪಾದಿಸುತ್ತಿರುವಂತೆ 36 ವರ್ಷವಲ್ಲವೆಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬಸವಣ್ಣನವರು ಮನೆಯಲ್ಲಿದ್ದದ್ದು ಕೇವಲ ಒಂಭತ್ತು ವರ್ಷ. ನಂತರ ಹನ್ನೆರಡು ವರ್ಷಗಳು ಕೂಡಲಸಂಗಮದ ಗುರುಕುಲದಲ್ಲಿ ವಿದ್ಯಾಭ್ಯಾಸ, ಯೋಗಸಾಧನೆ ಮಾಡಿದರು. ಅಲ್ಲಿಂದ ಮಂಗಳವೇಡೆಗೆ ಹೋಗಿ ಅಲ್ಲಿ ಐದು ವರ್ಷ ಇದ್ದು, ನಂತರ, ಕಲ್ಯಾಣಕ್ಕೆ ಆಗಮಿಸಿದರು. ಬಸವ ಕಲ್ಯಾಣದಲ್ಲಿ 36 ವರ್ಷಗಳು, ಇದ್ದು, ಸುಮಾರು 27 ವರ್ಷ ಅನುಭವ ಮಂಟಪ ನಡೆಯಿತು. ಕಡೆಯಲ್ಲಿ ವರ್ಣಾಂತರ ವಿವಾಹವಾಯಿತೆಂದು ಅವರು ವಿವರಿಸಿದರು.
 ವಿಕ್ರಮನಾಮ ಸಂವತ್ಸರ ಕ್ರಿ.ಶ. 1160ರಲ್ಲಿ ಕಲ್ಯಾಣವನ್ನು ಪ್ರವೇಶಿಸಿದ ಗುರು ಬಸವಣ್ಣ ರಾಕ್ಷಸನಾಮ ಸಂವತ್ಸರ ಕ್ರಿ.ಶ. 1196ರಲ್ಲಿ ಕಲ್ಯಾಣದಿಂದ ಕೂಡಲಸಂಗಮದತ್ತ ಧಾವಿಸಿದರು. ಆದ್ದರಿಂದ, ಅವರು ಕಲ್ಯಾಣದಲ್ಲಿ ವಾಸವಿದ್ದದ್ದು 36 ವರ್ಷ, ಜೀವಿಸಿದ್ದು 63 ವರ್ಷ ಎಂದು ಅವರು ಪ್ರತಿಪಾದಿಸಿದರು.
ಬಸವಣ್ಣ  ಆತ್ಮಹತ್ಯ ಮಾಡಿಕೊಂಡರೆಂದು ಕೆಲವರು, ಕ್ರಾಂತಿಕಾರಿ ವಿಚಾರಗಳಿಗಾಗಿ ವಧಿಸಲ್ಪಟ್ಟರೆಂದು ಮತ್ತೆ ಕೆಲವರು ವಾದಿಸುತ್ತಾರೆ. ಈ ಎರಡೂ ವಾದಗಳೂ ಸರಿಯಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲರಾಗಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲೂ ಇರಲಿಲ್ಲ. ಬಿಜ್ಜಳನ ಸೈನ್ಯ ಬೆನ್ನುಹತ್ತಿದ್ದು ಉಳವಿಯತ್ತ ವಚನ ಸಾಹಿತ್ಯ ತೆಗೆದುಕೊಂಡು ಹೋದ ತಂಡವನ್ನೇ ಹೊರತು, ಗಡೀಪಾರಾಗಿ ಏಕಾಂಗಿಯಾಗಿ ಹೊರಟ ಬಸಣವಣ್ಣನವರನ್ನಲ್ಲ. ಒಂದು ವೇಳೆ, ಮಾರ್ಗಮಧ್ಯೆ ವಧೆಯಾಗಿದ್ದಿದ್ದರೆ ಆ ಸ್ಥಳವನ್ನು ಅವರ ಅನುಯಾಯಿಗಳು ಸ್ಮಾರಕವಾಗಿ ಮಾಡುತ್ತಿದ್ದರೆಂದು ಅವರು ವಿವರಿಸಿದರು.
ಸಂಸ್ಮರಣೆ ಇಂದುಃ   ಬಸವಣ್ಣನವರು ಲಿಂಗೈಕ್ಯರಾಗಿ 818 ವರ್ಷಗಳು ಸಂದಿರುವ ಕಾರಣ 818ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮವನ್ನು ಅಗ್ರಹಾರದಲ್ಲಿರುವ ಹೊಸಮಠದ ನಟರಾಜ ಕಲ್ಯಾಣ ಮಂಟಪದಲ್ಲಿ ನಾಳೆ ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದ್ದು, ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್, ಸಂಸದ ಎಚ್. ವಿಶ್ವನಾಥ್, ಶಾಸಕ ಸಾ.ರಾ. ಮಹೇಶ್ ಅತಿಥಿಗಳಾಗಿ ಆಗಮಿಸುವರು. ಈ ಸಂದರ್ಭದಲ್ಲಿ ಸಚಿವ ಮಹಾದೇವ ಪ್ರಸಾದ್ ಪತ್ನಿ ಡಾ||ಮೋಹನ ಕುಮಾರಿ ಅವರನ್ನು ಸತ್ಕರಿಸಲಾಗುವುದು.
ಸಮಾಜಸೇವಾ ರತ್ನ ಕೆ.ಎಂ. ಶಿವಶಂಕರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

No comments:

Post a Comment