Friday, 31 July 2015

ಮೈಸೂರು ಸುದ್ದಿಗಳು

.ಎಸ್.ಟಿ.ಸಿ: ವಿವಿಧ ಪ್ರವಾಸ
     ಮೈಸೂರು೩೧-ಮೈಸೂರು ವಿಭಾಗದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಆಗಸ್ಟ್ 13 ರಂದು ಧರ್ಮಸ್ಥಳ, ಸುಬ್ರಮಣ್ಯ, ಹೊರನಾಡು ಶೃಂಗೇರಿ, ಕೊಲ್ಲೂರು, ಕಟೀಲು, ಮುರುಡೇಶ್ವರ, ಆಗಸ್ಟ್ 15 ರಂದು ಜೋಗ ಜಲಪಾತ ಮತ್ತು ಸಿಗಂಧೂರು ಆಗಸ್ಟ್ 7ರಂದು ಮಂತ್ರಾಲಯ ಟಿ.ಬಿ.ಡ್ಯಾಂ, ಹಂಪಿ, ಪ್ರತಿ ಭಾನುವಾರ ಮಡಿಕೇರಿ ಮತ್ತು ಶಿಂಷ, ತಲಕಾಡು, ಸೋಮನಾಥಪುರಕ್ಕೆ ಪ್ರವಾಸ ಹಮ್ಮಿಕೊಂಡಿದೆ.
     ಶೈಕ್ಷಣಿಕ, ಮದುವೆ, ಸಮಾರಂಭ ಇತರೆ ಪ್ರವಾಸಗಳಿಗೆ ಕೂಡ ಹವಾನಿಯಂತ್ರಿತ ಬಸ್ಸುಗಳು ಒಪ್ಪಂದದ ಮೇರೆಗೆ ಲಭ್ಯವಿದೆ. ಆಂಧ್ರ ಮತ್ತು ತಮಿಳುನಾಡು ಟ್ಯಾಕ್ಸ್ ಮನ್ನಾ ಸಹ ಇರುತ್ತದೆ. ಹೆಚ್ಚಿನ ವಿವರಗಳಿಗೆ ಮೈಸೂರು ಸಾರಿಗೆ ವಿಭಾಗದ ಅಧಿಕಾರಿಗಳು ದೂರವಾಣಿ ಸಂಖ್ಯೆ 0821-2423652, 8970650116 ನ್ನು ಸಂಪರ್ಕಿಸಬಹುದು.

ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರು ಪಾವತಿ ಅರ್ಜಿ ಆಹ್ವಾನ
      ಮೈಸೂರು,ಜು.31.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2015-16ನೇ ಸಾಲಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸುವ ಯೋಜನೆ  ಹಮ್ಮಿಕೊಂಡಿದೆ.
    ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ವಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಥಮ ಪಿ.ಯು.ಸಿ.ಯಿಂದ ಸ್ನಾತಕೋತ್ತರ ಪದವಿಯಲ್ಲಿ ವೃತ್ತಿಪರ ಕೋರ್ಸ್ ಒಳಗೊಂಡಂತೆ ವ್ಯಾಸಾಂಗ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳ ಅರ್ಹ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿಸಲಾಗುವುದು. ಜಿಮ್ನಾಸ್ಟಿಕ್ಸ್ ಮತ್ತು ಈಜು ಕ್ರೀಡಾಪಟುಗಳಿಗೆ 5ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳು ಅರ್ಹರಿರುತ್ತಾರೆ.
ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ದಿನಾಂಕ 31-09-2015 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179 ನ್ನು ಸಂಪರ್ಕಿಸುವುದು.

ಸ್ವಾತಂತ್ರ್ಯ ದಿನಾಚರಣೆ: ನೌಕರರ ಹಾಜರಾತಿ ಕಡ್ಡಾಯ
      ಮೈಸೂರು,ಜು.31.ಮೈಸೂರು ನಗರದ ಓವೆಲ್ ಮೈದಾನದಲ್ಲಿ  ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮೈಸೂರು ನಗರದಲ್ಲಿರುವ ಮಂಡಳಿ, ನಿಗಮ ಸ್ವಯತ್ತ ಸಂಸ್ಥೆಗಳು ಸೇರಿದಂತೆ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ  ಸಿ.ಶಿಖಾ ಸೂಚಿಸಿದ್ದಾರೆ.
    ಅಂದು ಬೆಳಿಗ್ಗೆ 8 ಗಂಟೆಗೆ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಧ್ವಜಾರೋಹಣಾ ನಡೆಸಿ ನಂತರ ಬೆಳಿಗ್ಗೆ 9 ಗಂಟೆಗೆ ಓವಲ್ ಮೈದಾನದಲ್ಲಿ ನಡೆಯುವ ಮುಖ್ಯ ಸಮಾರಂಭಕ್ಕೆ ತಪ್ಪದೇ ಹಾಜರಾಗುವುದು. ಸಮಾರಂಭ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರ ತಾತ್ಕಾಲಿಕ ಕಚೇರಿ ತೆರೆಯಲಾಗುತ್ತಿದ್ದು, ಅಧಿಕಾರಿ, ನೌಕರರು ಕಾರ್ಯಕ್ರಮಕ್ಕೆ ಹಾಜರಾದ ಬಗ್ಗೆ À ಹಾಜರಾತಿಯಲ್ಲಿ ಸಹಿ ಮಾಡುವುದು.
    ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಕಚೇರಿ ಆದೇಶ ಹೊರಡಿಸಿ ಅವರ ಹಾಜರಾತಿಯನ್ನು ಗಮನಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಹಾಜರಾದ ಸಿಬ್ಬಂದಿ ಸಹಿಯೊಂದಿಗೆ ಹಾಜರಾತಿ ಪಟ್ಟಿಯನ್ನು ಕಾರ್ಯಕ್ರಮ ಮುಗಿದ ಬಳಿಕ ಅಧ್ಯಕ್ಷರ ತಾತ್ಕಾಲಿಕ ಕಚೇರಿಗೆ ತಲುಪಿಸುವಂತೆ ತಿಳಿಸಿದ್ದಾರೆ.
    ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ವಿದ್ಯುತ್ ದೀಪಾಲಂಕಾರ ಮಾಡುವಂತೆ ಮನವಿ
       ಸ್ವಾತಂತ್ರ್ಯ ದಿನಾಚರಣೆ ಮುನ್ನ ದಿನವಾದ ಆಗಸ್ಟ್ 14 ಮತ್ತು ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15 ರಂದು ಮೈಸೂರು ನಗರದ ಸರ್ಕಾರಿ ಕಛೇರಿಗಳು, ಅಂಗಡಿ ಮುಂಗಟ್ಟು ಮತ್ತಿತರ ಉದ್ದಿಮೆಗಳ ಕಟ್ಟಡಗಳಿಗೆ ಸ್ವಯಂ ಸ್ಫೂರ್ತಿಯಿಂದ ವಿದ್ಯುತ್ ದೀಪಾಲಂಕಾರ ಮಾಡುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ
   ಕಾಗದ ಹಾಗೂ ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಳಸಿದ ಸಂದರ್ಭದಲ್ಲಿ ಪ್ರದರ್ಶನ ಮತ್ತು ಹಾರಾಟ ಸೂಕ್ತ ರೀತಿಯಲ್ಲಿ ಮಾಡದೆ ಇದ್ದರೆ ರಾಷ್ಟ್ರಧ್ವಜಕ್ಕೆ ಅಗೌರವ ಹಾಗೂ ಅಪಮಾನವಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರ ಧ್ವಜವನ್ನು ಬಳಸದೆ ಬಟ್ಟೆಯಲ್ಲಿ ತಯಾರಿಸಿದ ರಾಷ್ಟ್ರ ಧ್ವಜವನ್ನು ಬಳಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
     ವ್ಯಾಪಾರಸ್ಥರು ಸಹ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜ ಮಾರಾಟ ಮಾಡಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 2 ರಂದು ವಿದ್ಯುತ್ ದೀಪಾಲಂಕಾರ ರದ್ದು
      ಮೈಸೂರು,ಜು.31.ಮಾಜಿ ರಾಷ್ಟ್ರಪತಿ ಡಾ|| ಅಬ್ದುಲ್ ಕಲಾಂ ಅವರ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 7 ದಿನಗಳ ಶೋಕಾಚರಣೆ ಇರುತ್ತದೆ.  ಆಗಸ್ಟ್ 2 ಭಾನುವಾರದಂದು ಮೈಸೂರು ಅರಮನೆಯಲ್ಲಿ ಸಂಜೆ 7 ರಿಂದ 7-45 ರವರೆಗೆ ನಡೆಯಬೇಕಾಗಿದ್ದ ವಿದ್ಯುತ್ ದೀಪಾಲಂಕಾರವನ್ನು ರದ್ದುಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 27 July 2015

ಮಾಜಿ ರಾಷ್ಟ್ರಪತಿ  ಅಬ್ದುಲ್ ಕಲಾಂ ವಿಧಿವಶ ಅವರಿಗೆ ನಮನ ಸಲ್ಲಿಸೋಣ

ನರೇಂದ್ರ ಮೋದಿ ಅವರ ಮನ ಕಿ ಬಾತ್

ನರೇಂದ್ರ ಮೋದಿ ಅವರ ಮನ ಕಿ ಬಾತ್

ನನ್ನ  ಪ್ರೀತಿಯ ದೇಶವಾಸಿಗಳೇ… ನಮಸ್ಕಾರ.

ಈ ವರ್ಷ ಮಳೆಗಾಲ ಉತ್ತಮ ರೀತಿಯಲ್ಲಿ ಆರಂಭಗೊಂಡಿದೆ. ನಮ್ಮ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆಮಾಡಲು ಅನುಕೂಲವಾಗಿರುವುದು ನನಗೆ ಸಂತಸ ನೀಡಿದೆ.  ಈ ಮೊದಲು ನಮ್ಮ ದೇಶದಲ್ಲಿ  ಬೇಳೆಕಾಳುಗಳು ಹಾಗೂ ಎಣ್ಣೆಕಾಳುಗಳು  ಬಹಳ ಕಡಿಮೆ ಪ್ರಮಾಣದಲ್ಲಿರುತ್ತಿದ್ದವು,  ಈ ಬಾರಿ ಬೇಳೆಕಾಳುಗಳ ಬಿತ್ತನೆಯಲ್ಲಿ  ಸುಮಾರು ಶೇ 50 ರಷ್ಟು  ವೃದ್ಧಿಯಾಗಿರುವುದು ನನಗೆ  ಅತೀವ ಸಂತಸ ತಂದಿದೆ. ಹಾಗೂ  ಎಣ್ಣೆ ಕಾಳುಗಳಲ್ಲಿ ಸುಮಾರು ಪ್ರತಿಷತ 33 ರಷ್ಟು  ಹೆಚ್ಚಳವಾಗಿದೆ. ಅದ್ದರಿಂದ ನನ್ನ ರೈತರಿಗೆ ನನ್ನ ವಿಶೇಷ ಧನ್ಯವಾದಗಳನ್ನು ಹಾಗೂ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.

ನನ್ನ ಪ್ರೀತಿಯ ದೇಶ ವಾಸಿಗಳೇ,
ಜುಲೈ 26, ನಮ್ಮ ದೇಶ ಇತಿಹಾಸದಲ್ಲಿ ಕಾರ್ಗಿಲ್ ವಿಜಯದಿನ  ಎಂದು ಆಚರಿಸಲ್ಪಡುತ್ತಿದೆ. ರೈತರಿಗೆ ಭೂತಾಯಿಯೊಂದಿಗಿನ ಸಂಬಂಧ ಎಷ್ಟಿದೆಯೋ ಅಷ್ಟೇ ಸಂಬಂಧ ಈ ದೇಶದ ಯೋಧರಿಗೂ ಇದೆ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಒಬ್ಬೊಬ್ಬ ಸೈನಿಕ,  ನೂರು- ನೂರು ಶತ್ರು ಸೈನಿಕರ ಸಮನಾಗಿದ್ದರು. ತಮ್ಮ ಪ್ರಾಣದ ಹಂಗು ತೊರೆದು ಶತ್ರುಗಳ ವಿರುದ್ಧ ಹೋರಾಡಿದ ನಮ್ಮ ಸೈನಿಕರಿಗೆ ನನ್ನ ಕೋಟಿ ಕೋಟಿ ನಮನಗಳು. ಕಾರ್ಗಿಲ್ ಯುದ್ಧ ಕೇವಲ ಗಡಿಯಲ್ಲಿ ಮಾತ್ರ ನಡೆದಿಲ್ಲ, ಭಾರತದ ಪ್ರತಿ ನಗರ, ಹಳ್ಳಿಗಳಲ್ಲಿ ಈ ಯುದ್ಧಕ್ಕಾಗಿ ಯೋಗದಾನ ನೀಡಲಾಗಿತ್ತು.  ಈ ಯುದ್ಧದಲ್ಲಿ ಕೇವಲ ಸೈನಿಕ ಮಾತ್ರವಲ್ಲದೇ, ಆ ಸೈನಿಕರ  ತಾಯಿ- ತಂದೆ ಪತ್ನಿ, ಸಹೋದರ ಸಹೋದರಿಯರು ಮತ್ತು ಆಗತಾನೇ ತನ್ನ ತಂದೆಯ ಕಿರುಬೆರಳು ಹಿಡಿದು ನಡೆಯಲು ಕಲಿಯುತ್ತಿದ್ದ ಪುಟ್ಟ  ಕಂದಮ್ಮಗಳು ಕೂಡ  ಶತ್ರುಗಳ ವಿರುದ್ಧ ವಿರೋಚಿತ ಹೋರಾಟ ನಡೆಸಿದ್ದಾರೆ. ಈ  ಬಲಿದಾನದ ಫಲವೇ ಇಂದು ಭಾರತ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವ ಗೌರವಕ್ಕೆ  ಪಾತ್ರವಾಗಿದೆ. ಅದಕ್ಕಾಗಿ ಕಾರ್ಗಿಲ್ ವಿಜಯ ದಿವಸ ಆಚರಣೆ ನಿಮಿತ್ತ  ನಮ್ಮ ಎಲ್ಲ ಸೈನಿಕರಿಗೂ ನನ್ನ ಕೋಟಿ ಕೋಟಿ ಪ್ರಣಾಮಗಳು.
ಜುಲೈ 26ರ ದಿನ ಮತ್ತೊಂದು ದೃಷ್ಟಿಯಲ್ಲಿ ನನಗೆ ಮಹತ್ವಪೂರ್ಣವಾದುದು ಯಾಕೆಂದರೆ 2014 ರಲ್ಲಿ ನಮ್ಮ ಸರಕಾರ ರಚನೆಯಾದಮೇಲೆ 26 ಜುಲೈ ದಿನದಂದೇ ನಾನು mಥಿgov ಆರಂಭಮಾಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಭಾಗಿಯಾಗುವ ಸಂಕಲ್ಪವನ್ನು ಮಾಡಿ ಎಲ್ಲ ಪ್ರಜೆಗಳನ್ನು ಅಭಿವೃದ್ಧಿಯ ಪಥದಲ್ಲಿ ಜೊತೆಗೂಡಿಸಿಕೊಳ್ಳುವುದು ಮತ್ತು ಒಂದೇ ವರ್ಷದ ನಂತರ ಸುಮಾರು 2 ಕೋಟಿ ಜನರು mಥಿgov ಜಾಲತಾಣ ವೀಕ್ಷಿಸಿದ್ದು, ಸುಮಾರು 5.5 ಲಕ್ಷ ಜನ ತಮ್ಮ  ವಿಚಾರಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ.  ಪ್ರಧಾನಿ ಕಾರ್ಯಾಲಯದ ಉಪಯೋಗಕ್ಕೆ ಸಂಬಂಧಿಸಿದಂತೆ 50 ಸಾವಿರಕ್ಕಿಂತ ಹೆಚ್ಚು ಜನ ತಮ್ಮ ಅಮೂಲ್ಯ ಸಮಯ ನೀಡಿ, ತಮ್ಮ ಬುದ್ಧಿ ಉಪಯೋಗಿಸಿ ಸಲಹೆ- ಸೂಚನೆ ನೀಡಿ,  ಈ ಕೆಲಸ ಮಹತ್ವಪೂರ್ಣವೆಂದು ಭಾವಿಸಿದ್ದು ಅತ್ಯಂತ ಸಂತಸದ ವಿಷಯವಾಗಿದೆ.
ಐ ಆರ್ ಸಿ ಟಿ ಸಿ ಜಾಲತಾಣದ ಮುಖಾಂತರ ವಿಕಲಚೇತನ ವ್ಯಕ್ತಿಗಳಿಗೆ  ಖೋಟಾದಡಿ ಟಿಕೆಟ್ ನೀಡುವ ಬಗ್ಗೆ ಕಾನಪುರದ ಅಖಿಲೇಶ  ವಾಜಪೇಯಿ ಉತ್ತಮ ಸಲಹೆ ನೀಡಿ, ಅಂಗವಿಕಲರು ತಮ್ಮ ಟಿಕೇಟ್‍ಗಾಗಿ ಉಳಿದವರಂತೆ ಕಷ್ಟಪಡುವುದು ಉಚಿತವೇ?   ಎಂದು ಪ್ರಶ್ನಿಸಿದ್ದರು. ಈ ಸಲಹೆ ಸಣ್ಣದಾಗಿದ್ದರೂ  ಇದರ ಬಗ್ಗೆ ಸರಕಾರವು ಇದುವರೆಗೂ ಯೋಚಿಸಲಿರಲಿಲ್ಲ. ಅಖಿಲೇಶ ಅವರ ಸಲಹೆ ಮೇರೆಗೆ ಸರಕಾರ ವಿಕಲ ಚೇತನ ಸಹೋದರ ಸಹೋದರಿಯರಿಗೆ ಐ ಆರ್ ಸಿ ಟಿ ಸಿ ಜಾಲತಾಣದಲ್ಲಿ ಖೋಟಾದಡಿ ಟಿಕೆಟ್  ನೀಡುವ  ವ್ಯವಸ್ಥೆ ಜಾರಿಗೊಳಿಸಲಾಗಿದೆ.  ಇವತ್ತು ಒಥಿgov  ಮೂಲಕ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಸಲಹೆಗಳಿಂದ ಲೋಗೋ, ಟ್ಯಾಗ್ ಲೈನ್, ಕಾರ್ಯಕ್ರಮಗಳ ರಚನೆ ಮತ್ತು ನೀತಿ ನಿರ್ಧಾರಗಳು ರೂಪಗೊಳ್ಳುತ್ತಿವೆ, ಇದರಿಂದ ದೇಶದಲ್ಲಿ ಒಂದು ಹೊಸ ಅನುಭವ ಹಾಗೂ  ವಿನೂತನ ವಾತವರಣ ಸೃಷ್ಟಿಯಾಗಿದೆ. ನಾನು 15 ಆಗಸ್ಟ್ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬುದು ಸಹ ಒಥಿgov ಮೂಲಕ ಸಲಹೆ ಸೂಚನೆಗಳು ಬರುತ್ತಿವೆ.

ಬೇಟಿ ಬಚಾವೋ- ಬೇಟಿ ಪಢಾವೋ, ಗಂಗಾ ಶುದ್ಧಿಕರಣ,ಸ್ವಚ್ಛಭಾರತ ಆಂದೋಲನದ ಬಗ್ಗೆ ನನ್ನ ವಿಚಾರ ವ್ಯಕ್ತಪಡಿಸುವಂತೆ ನನಗೆ ಚೆನ್ನೈನ ಸುಚಿತ್ರಾ ರಾಘವಾಚಾರಿಯವರಿಂದ ಸಲಹೆ ಬಂದಿದೆ.
ನಾನು 15 ಆಗಸ್ಟ್ ದಿನದಂದು ಯಾವ ವಿಷಯದ ಕುರಿತು ಮಾತನಾಡಬೇಕೆಂದು ತಮ್ಮ ಸಲಹೆ ಗಳನ್ನು ಒಥಿgov  ಮೂಲಕ  ಹಾಗೂ ಪತ್ರ ಮುಖಾಂತರ ಆಕಾಶವಾಣಿ ಮತ್ತು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಿಕೊಡಬೇಕೆಂದು ನನ್ನ ಮನವಿ.
15 ಆಗಸ್ಟ್ ರಂದು ನಾನು ಮಾಡುವ ಭಾಷಣ ಜನತೆಯ ವಿಚಾರ, ಸಲಹೆಗಳನ್ನು ಒಳಗೊಂಡಿರುವುದು ಉತ್ತಮ ವಿಚಾರವಾಗಿದ್ದು ನನಗೆ ಉತ್ತಮ ಸಲಹೆ- ಸೂಚನೆಗಳನ್ನು ಕಳುಹಿಸುವುರೆಂದು ನಾನು ನಂಬಿದ್ದೇನೆ.

 ನಾನು ಒಂದು ವಿಷಯದ ಮೇಲೆ ಚಿಂತೆ ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ನಾನು ಯಾವುದೇ ಉಪದೇಶವನ್ನು ಕೋಡಲು ಇಚ್ಛಿಸುವುದಿಲ್ಲ, ಮತ್ತು ರಾಜ್ಯ ಸರಕಾರ , ಕೇಂದ್ರ ಸರಕಾರ ಅಥವಾ ಸ್ಥಳೀಯ ಸಂಘ ಸಂಸ್ಥೆಗಳ  ಮೇಲೆ ಜವಾಬ್ಧಾರಿ ಹೇರಿ ನುಣಚಿಕೊಳ್ಳಲು ಪ್ರಯತ್ನಿಸುತ್ತಿಲ್ಲ.

ಈಗ ಎರಡು ದಿನಗಳ ಹಿಂದೆ ದಿಲ್ಲಿಯಲ್ಲಿ ಸಂಭವಿಸಿದ  ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರನು ಸುಮಾರು 10 ನಿಮಿಷ ನರಳಾಡುತ್ತಿದ್ದೂ ಅವನಿಗೆ ಯಾವೂದೇ ಸಹಾಯ ಸಿಗಲಿಲ್ಲ, ಈ ಕುರಿತು ಜನರು ನನಗೆ ನೀವೂ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಲು ಸೂಚನೆ ನೀಡಿ, ಜನರಲ್ಲಿ ಜಾಗೃತಿ ಮೂಡಿಸುವಂತೆ ಕೇಳಿಕೊಂಡರು. ಬೆಂಗಳೂರಿನ ಅಕ್ಷಯ, ಪುಣೆಯ ಅಮಯ ಜೋಶಿ, ಮುಡಬಿದರೆಯ ಪ್ರಸನ್ನ ಕಾಕುಂಜೆ ಸೇರಿದಂತೆ ಹಲವರು  ಈ ಬಗ್ಗೆ ತಮ್ಮ ಚಿಂತೆಯನ್ನು ವ್ಯಕ್ತಪಡಿಸಿದ್ದು ಸರಿಯಾಗಿದೆ. ಈ ಕುರಿತ  ಅಂಕಿಅಂಶಗಳನ್ನು ಗಮನಿಸಿದರೆ ಹೃದಯ ಒಡೆದು ಹೋಗುತ್ತದೆ. ನಮ್ಮ ದೇಶದಲ್ಲಿ  ಪ್ರತಿ ನಿಮಿಷಕೊಂದು ಒಂದು ದುರ್ಘಟನೆ ಸಂಭವಿಸುತ್ತಿದ್ದು, ಆ  ದುರ್ಘಟನೆಗೆ ರಸ್ತೆ ಅಪಘಾತವೇ ಕಾರಣವಾಗಿದ್ದು, ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿ ಮರಣಹೊಂದುತ್ತಾನೆ, ಎಲ್ಲದಕ್ಕೂ ಹೆಚ್ಚಿನ ಕಳವಳಕಾರಿ ಅಂಶವೆಂದರೆ , ಸತ್ತವರಲ್ಲಿ 1/3 ಜನ 15-20 ವರ್ಷದವರಾಗಿರುವುದು. ಒಂದು ಸಾವು ಸಂಪೂರ್ಣ ಪರಿವಾರನ್ನೂ ಛಿದ್ರಗೊಳಿಸುತ್ತದೆ.ಸರಕಾರ ಮತ್ತು ಶಾಸನ ತನ್ನ ಕಾರ್ಯವನ್ನು ಸಹಜವಾಗಿ ಮಾಡಿಯೇ ಮಾಡುತ್ತದೆ,  ಅದರೊಂದಿಗೆ,  ತಮ್ಮ ಮಕ್ಕಳು ಅತ್ಯಂತ ಸುರಕ್ಷಿತ ರೀತಿಯಲ್ಲಿ ತಮ್ಮ ದ್ವೀಚಕ್ರ ಹಾಗೂ ಚತುಷ್ಚಕ್ರ ವಾಹನಗಳ ಚಾಲನೆ ಬಗ್ಗೆ ತಂದೆ ತಾಯಿಗಳು ಕಾಳಜಿ ಪೂರ್ವಕವಾಗಿ ಅಗತ್ಯ ವಾತಾವರಣ ನಿರ್ಮಿಸಬೇಕೆಂದು ನನ್ನ  ಕಳಕಳಿಯ ಮನವಿ.
ಕೆಲವೊಮ್ಮೆ ಆಟೋರಿಕ್ಷಾದ ಹಿಂಬದಿಯಲ್ಲಿ “  ಪಪ್ಪಾ ಬೇಗ ಮನೆಗೆ ಬಾ” ಎಂಬ ಬರಹ ಹೃದಯಕ್ಕೆ ತಟ್ಟುವಂತಿರುತ್ತದೆ, ಆದ್ದರಿಂದ ನಮ್ಮ ಸರಕಾರವು ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು, ರಸ್ತೆ ನಿರ್ಮಾಣದಲ್ಲಿ ತಾಂತ್ರಿಕತೆ ಅಳವಡಿಸುವುದು,  ಕಾನೂನಿನ ಸಮರ್ಪಕ ಜಾರಿ, ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಮೊದಲಾದÀ ಹೊಸ ಆಯಾಮUಳನ್ನೊಳಗೊಂಡ ರಸ್ತೆ ಸಂಚಾರ ಹಾಗೂ ಸುರಕ್ಷತಾ ಕಾಯ್ದೆ ಜಾರಿಗೊಳಿಸಲಿದ್ದೇವೆ. ಮುಂದಿನ ದಿನಗಳಲ್ಲಿ  ರಸ್ತೆ ಸಾರಿಗೆ ಮತ್ತು ಸುರಕ್ಷಾ ವಿಧೇಯಕವನ್ನು ಮತ್ತು  ರಸ್ತೆ ಸುರಕ್ಷತಾ ಯೋಜನೆ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುವರಿದ್ದೇವೆ.
 ಇನ್ನೊಂದು ಯೋಜನೆ ಕೈಗೆತ್ತಿಗೊಳ್ಳಲಿದ್ದು ಅದು ಮುಂದೆ ವಿಸ್ತಾರಗೊಳ್ಳಲಿದೆ.
ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಹಣವಿಲ್ಲದೆ ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸುವ ರಸ್ತೆ ಸಾರಿಗೆ ಮತ್ತು ಸುರಕ್ಷಾ ವಿಧೇಯಕವನ್ನು ಅತಿ ಶೀಘ್ರದಲ್ಲೇ ತಮ್ಮ ಸರ್ಕಾರ ಜಾರಿಗೆ ತರುತ್ತದೆ. ಜಾರಿಗೆ ತರಲಾಗುವ ಮಸೂದೆಯಲ್ಲಿ ಶುಲ್ಕ ರಹಿತ 1033 ದೂರವಾಣಿ ಮತ್ತು ಅಂಬ್ಯುಲೆನ್ಸ್ ನೆರವುಗಳು ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸುತ್ತವೆ, ಅಪಘಾತ ನಡೆದ ಮೊದಲ 50 ತಾಸಿನೊಳಗೆ ಉತ್ತಮವಾದ ಚಿಕಿತ್ಸೆ ನೀಡಲು ಅನುವು ಮಾಡಿಕೊಡುತ್ತದೆ. ಆದರೆ ಇವುಗಳೆಲ್ಲವೂ ಅಪಘಾತದ ನಂತರವಾಗಿದ್ದು, ಅಪಘಾತವಾಗದ ಹಾಗೇ ಎಚ್ಚರಿಕೆ ವಹಿಸಬೇಕಾದದ್ದು ಅವಶ್ಯಕವಾಗಿದ್ದು, ಪ್ರತಿಯೊಂದು ಜೀವವೂ ಅತ್ಯಮೂಲ್ಯದದ್ದು ಎಂಬ ಭಾವನೆ ತಾಳುವ ಅವಶ್ಯಕತೆ ಇದೆ.
ಕರ್ಮಚಾರಿಗಳು ಕರ್ಮಯೋಗಿಗಳಾಗಬೇಕೆಂದು ಹಲವು ಬಾರಿ ಹೇಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ ನಡೆದ ಕೆಲವು ಘಟನೆಗಳು ನನ್ನ ಮನಸ್ಸಿನಲ್ಲಿದ್ದು  ಆ ಬಗ್ಗೆ ತಮ್ಮೊಂದಿಗೆ ಮಾತನಾಡಬಯಸುತ್ತೇನೆ. ಸಿಬ್ಬಂದಿಗಳು ಕೆಲಸ ಮಾಡುತ್ತ ಮಾಡುತ್ತ  ದಣಿಯುತ್ತಾರೆ, ಪಗಾರ ಸಿಗುತ್ತದೆ, ಕೆಲಸ ಮಾಡೋಣ ಎಂಬ ಭಾವನೆ ವ್ಯಕ್ತವಾಗುತ್ತದೆ. ಆದರೆ, ಕೆಲವು ದಿನಗಳ ಹಿಂದೆ ರೈಲ್ವೆ ನೌಕರರ ಬಗ್ಗೆ ಮಾಹಿತಿ ಬಂದಿದ್ದು ನಾಗಪುರ ವಿಭಾಗದಲ್ಲಿ ಟಿ ಟಿ ಇ ಆಗಿರುವ ವಿಜಯ ಬಿಸ್ವಾಲ್ ಗೆ ಚಿತ್ರ ಬಿಡಿಸುವುದು ಹವ್ಯಾಸವಾಗಿದ್ದು, ರೈಲ್ವೆ ಸಂಬಂಧಿಸಿದ ವಿವಿಧ  ವಿಷಯಗಳ ಕುರಿತು ಅವರು ಚಿತ್ರ ಬಿಡಿಸುವ ಮೂಲಕ ಆನಂದ ಪಡೆಯುತ್ತಿದ್ದಾರೆ. ನಮ್ಮ ಆಸಕ್ತಿ, ನಮ್ಮಲ್ಲಿಯ ಕಲೆ, ನಮ್ಮ ಕ್ಷಮತೆಯನ್ನು ನಮ್ಮ ಕಾರ್ಯದ ಜೊತೆಗೆ ಹೊಂದಿಸಿಕೊಂಡು ಹೇಗೆ ಆನಂದ ಹೊಂದಬಹುದೆಂದು ವಿಜಯ ಬಿಸ್ವಾಲ್ ತೋರಿಸಿದ್ದಾರೆ. ಮುಂಬರುವ ದಿನಗಳಲ್ಲಿ ವಿಜಯ ಬಿಸ್ವಾಲ್ ಅವರ ಕಲಾಚಿತ್ರಗಳು ಸಾರ್ವಜನಿಕ ಚರ್ಚೆಗೆ ಬರಬಹುದು.
ಮಧ್ಯಪ್ರದೇಶದ ಹಾರ್ದ ಜಿಲ್ಲೆಯ ಸರ್ಕಾರಿ ನೌಕರರು ಆರಂಭಿಸಿರುವ ಕಾರ್ಯವನ್ನು  ನಮ್ಮ ಮನಸ್ಸಿಗೆ ನಾಟಿದೆ. “ಆಪರೇಶನ್ ಮಲಯುದ್ಧ” ಹೆಸರಿನಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದಾರೆ. ರಕ್ಷಾ ಬಂಧನ್ ಆಚರಣೆಗಾಗಿ ‘ಬ್ರದರ್ ನಂಬರ್ -1’ ಸ್ಪರ್ಧೆಯನ್ನು ಆರಂಭಿಸಿದ್ದಾರೆ. ತನ್ಮೂಲಕ ಸೋದರಿ ವರ್ಗಕ್ಕೆ ಶೌಚಾಲಯವನ್ನು ಕಾಣಿಕೆಯಾಗಿ ಸೋದರರು ನಿರ್ಮಿಸಿಕೊಡುತ್ತಿದ್ದಾರೆ . ಹೇಗೆ ರಕ್ಷಾಬಂಧನದ ಅರ್ಥ ಬದಲಾಗಿ ಅದು ಸಫಲವಾಗಿದೆ. ಹೀಗಾಗಿ ಹಾರ್ದ ಜಿಲ್ಲೆಯ ಸರಕಾರಿ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
 ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳು, ಘಟನೆಗಳು ನನ್ನ ಮನಸ್ಸಿಗೆ ಸಂತೋಷ ಉಂಟುಮಾಡುತ್ತವೆ.
ಛತ್ತಿಸಗಡ ದ ರಾಜನಂದಗಾಂವ್‍ನ ಕೆಶ್ಲಾ ಗ್ರಾಮದ ಕೆಲ ಜನರು ಕೆಲವು ತಿಂಗಳುಗಳ  ಹಿಂದಿನಿಂದ ತಮ್ಮ ಗ್ರಾಮದಲ್ಲಿ ಶೌಚಾಲಯ ನಿರ್ಮಿಸುವ ಅಭಿಯಾನ ಆರಂಭಿಸಿದರು, ಇದೀಗ ಆ ಗ್ರಾಮದಲ್ಲಿ ಒಬ್ಬ ವ್ಯಕ್ತಿಯೂ    ಬಹಿರ್ದೆಸೆಗೆ ಹೊರಗಡೆ ಹೋಗುವುದಿಲ್ಲ, ಯಾವಾಗ ಗ್ರಾಮದಲ್ಲಿ ಅಭಿಯಾನ ಯಶಸ್ಚಿಯಾಗಿತೋ ಆವಾಗ ಗ್ರಾಮದಲ್ಲಿ ಉತ್ಸವದ ರೀತಿಯಲ್ಲಿ ಸಂಭ್ರಮಿಸಿದರು. ಸಮಾಜ ಜೀವನದಲ್ಲಿ ಮೂಲ್ಯಗಳು ಹೇಗೆ ಬದಲಾಗುತ್ತಿವೆ, ಜನರ ಮನಸ್ಸುಗಳು ಹೇಗೆ ಬದಲಾಗುತ್ತಿವೆ, ಹಾಗೂ ದೇಶದ ನಾಗರಿಕರು ಹೇಗೆ ಮುಂದುವರೆಯುತ್ತಿದ್ದರೆಂದು ಕೆಶ್ಲಾ ಗ್ರಾಮ ಉತ್ತಮ ಉದಾಹರಣೆಯಾಗಿ ನನ್ನ ಮುಂದೆ ಬಂದಿದೆ. ಗುವಾಹತಿಯಿಂದ ಈಶಾನ್ಯರಾಜ್ಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಭಾವೇಶ ಡೆಕಾ ನನೆ ಬರೆದಿದ್ದು, ಅಲ್ಲಿನ ಜನರು ಕ್ರೀಯಾಶೀಲರಾಗಿ ಬಹಳವಾಗಿ  ವಿವಿಧ ವಿಷಯಗಳ ಬಗ್ಗೆ ಬರೆಯುತ್ತಿರುವುದು ಒಳ್ಳೆಯ ವಿಷಯವಾಗಿದೆ.  ತಮಗೆ ಒಂದು ವಿಷಯ ತಿಳಿಸಬೇಕೆಂದರೆ, ಈಶಾನ್ಯ ರಾಜ್ಯಗಳಿಗಾಗಿಯೇ ಪ್ರತ್ಯೇಕ ಮಂತ್ರಾಲಯ ರಚನೆ ಮಾಡಲಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರು ಇರುವಾಗ “ಈಶಾನ್ಯರಾಜ್ಯಗಳ ಅಭಿವೃದ್ಧಿ ವಲಯ ಮಂತ್ರಾಲಯ”  ಸ್ಥಾಪಿತವಾಗಿತ್ತು. ನಮ್ಮ ಸರಕಾರ ಬಂದ ನಂತರ ದೇಶದ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಬಗ್ಗೆ  ಒತ್ತು ನೀಡಲಾಗಿದ್ದು, ಪ್ರತಿ ಈಶಾನ್ಯ ರಾಜ್ಯದಲ್ಲೂ ಕನಿಷ್ಠ 7 ದಿವಸ ವಾಸ್ತವ್ಯ ಹೂಡಲು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ತನ್ಮೂಲಕ ಆಯಾ ರಾಜ್ಯದ ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ಬಗೆಹರಿಸಲು ಕಾರ್ಯಶೀಲರಾಗುವಂತೆ ನಿರ್ದೇಶಿಸಲಾಗಿದೆ. ಇದರಿಂದ ಅವರ ಸಮಸ್ಯೆ ತಿಳಿಯಲು, ಪರಿಹರಿಸಲು ಸಹಕಾರಿಯಾಗುತ್ತದೆ.
“ಮಾರ್ಸ್ ಮಿಷನ್” ಸಫಲತೆಯಿಂದ ಅತೀವ ಆನಂದವಾಗುತ್ತದೆ. ಕೆಲ ದಿನಗಳ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ, ಮೊದಲ ಬಾರಿಗೆ ಅತಿ ಹೆಚ್ಚು ತೂಕದ ವಾಣಿಜ್ಯ ಉದ್ದೇಶದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಪಿ.ಎಸ್.ಎಲ್.ವಿ. ಸಿ-28, ಯುನೈಟೆಡ್ ಕಿಂಗಡಮ್‍ನ 5 ಉಪಗ್ರಹಗಳನ್ನು, ಭೂ ಕಕ್ಷೆಗೆ ಹಾರಿ ಬಿಟ್ಟಿದೆ. ಇದು ಬಹುದೊಡ್ಡ ಸಾಧನೆಯಾಗಿದೆ. ನಿವೇನಾಗಬೇಕೆಂದು ಬಯಸಿದ್ದೀರೆಂದು ಕೆಲವು ಬಾರಿ ಯುವಕರೊಂದಿಗೆ ಮಾತನಾಡಿಸಿದಾಗ ನೂರರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ವಿಜ್ಞಾನಿಯಾಗಬೇಕೆಂದು ಹೇಳುತ್ತಾರೆ, ವಿಜ್ಞಾನದ ಬಗೆಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಬಹು ಚಿಂತೆಯ ವಿಷಯವಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಒಂದು ರೀತಿಯಲ್ಲಿ ಬೆಳವಣಿಗೆಯ ಡಿ ಎನ್ ಎ ಇದ್ದ ಹಾಗೆ, ನಮ್ಮ ಯುವ ಪೀಳೀಗೆ ವಿಜ್ಞಾನಿಯಗುವ ಕನಸು ಕಾಣಬೇಕು, ಸಂಶೊಧನೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು, ಅವರಿಗೆÉ ಪೆÇ್ರೀತ್ಸಾಹ ದೊರೆತು ಅವರ ಕ್ಷಮತೆಯನ್ನು ಅರಿಯುವುದು ಬಹುದೊಡ್ಡ ಅವಶ್ಯಕತೆಯಾಗಿದೆ.
ಇದೀಗ ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯು ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಆರಂಭಿಸಿದ್ದು, ಪೂರ್ವ ರಾಷ್ಟ್ರಪತಿ ಡಾ; ಕಲಾಮ್ ಇದರ ಆರಂಭಗೊಳಿಸಿದ್ದಾರೆ. ಈ ಅಭಿಯಾನದ ಅಡಿ ಐ ಐ ಟಿ, ಎನ್ ಐ ಟಿ, ಕೇಂದ್ರ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳು ಪೆÇೀಷಕರ ರೀತಿಯಲ್ಲಿ  ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ, ಮಾರ್ಗದರ್ಶನ, ಸಹಾಯ ಮೊದಲಾದವುಗಳನ್ನು ನೀಡುವಲ್ಲಿ ಗಮನ ಹರಿಸಲಿವೆ.
ನಾನು ಐ ಎ ಎಸ್ ಅಧಿಕಾರಿಗಳಿಗೂ ಸಹ ತಮ್ಮ ಸಮೀಪದ ಶಾಲೆ ಕಾಲೇಜುಗಳಲ್ಲಿ ವಾರಕ್ಕೆ 3-4 ಗಂಟೆ ಮಕ್ಕಳೊಂದಿಗೆ ಮಾತನಾಡಿ ತಮ್ಮ ಅನುಭವ ಹಂಚಿಕೊಳ್ಳಲು ವಿನಂತಿಸಿದ್ದೇನೆ,  ಮುಂದಿನ ಪೀಳಿಗೆಗೆ ನಿಮ್ಮ ಶಕ್ತಿ ಉಪಯುಕ್ತವಾಗಲೆಂದು ತಿಳಿಸಿದ್ದೇನೆ.
ನಮ್ಮ ದೇಶದ ಎಲ್ಲಾ ಗ್ರಾಮ ಮತ್ತು ಪಟ್ಟಣಗಳಲ್ಲಿ 24 ಗಂಟೆ ವಿದ್ಯುತ್ ಸೌಲಭ್ಯ ವಿರಬೇಕಲ್ಲವೇ? ಇದು ಕಠಿಣ ಕೆಲಸ ಅದರೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ  ನಾವು ಶುಭಾರಂಭ ಮಾಡಿದ್ದೇವೆ. ಮುಂಬರುವ ವರ್ಷಗಳಲ್ಲಿ ಗ್ರಾಮಗಳಲ್ಲಿ 24 ತಾಸು ವಿದ್ಯುತ್ ಲಭವಿರುವಹಾಗೆ ಹಾಗೂ ಗ್ರಾಮದ ಮಕ್ಕಳು ಪರೀಕ್ಷೆಯ ದಿನಗಳಲ್ಲಿ ಅಭ್ಯಾಸ ಮಾಡಲು ವಿದ್ಯುತ್ ಸಮಸ್ಯೆ ಬರದ ಹಾಗೆ ಹಾಗೂ ಗ್ರಾಮಗಳಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಅವುಗಳಿಗೆ ವಿದ್ಯುತ್ ಒದಗಿಸಲು ಹಾಗೂ ಮೊಬೈಲ್ ಚಾರ್ಜ್ ಮಾಡಲು ವಿದ್ಯುತ್ ಅವಶ್ಯಕವಿದ್ದು, ಹೀಗಾಗಿ ನವು ಹೊಸ ಆರಂಭನ್ನು ಮಾಡಿದ್ದೇವೆ.ದೇಶದ ಎಲ್ಲಾ ಗ್ರಾಮಗಳಿಗೂ ದಿನವೀಡಿ ವಿದ್ಯುತ್ ಪೂರೈಕೆ ಮಾಡುವ ಸಂಕಲ್ಪ ಮಾಡಿದ್ದು, ಸರ್ಕಾರ ದೀನದಯಾಳ ಉಪಾಧ್ಯಾಯ ಗ್ರಾಮೀಣ ವಿದ್ಯುದೀಕರಣ ಕಾರ್ಯಕ್ರಮವನ್ನು ಆರಂಭಿಸಿದೆ .
ತಮಗೆಲ್ಲರಿಗೂ ಅನಂತ ಧನ್ಯವಾದಗಳು, 15 ಆಗಸ್ಟ್ ಭಾಷಣಕ್ಕಗಿ ನನಗೆ ಅವಶ್ಯವಾಗಿ ಸಲಹೆ ಸೂಚನೆ ನೀಡಿ, ತಮ್ಮ ವಿಚಾರಧಾರೆಗಳು ನನಗೆ ಬಹಳ ಉಪಯುಕ್ತವಾಗಿವೆ.

Saturday, 25 July 2015

ಮಂಡ್ಯ : ಆಧುನಿಕ ಜಗತ್ತಿನ ಪೈಪೋಟಿ ಎದುರಿಸಲು ಮಾನವ ಶಕ್ತನಾಗಬೇಕಾದರೆ ಹಾಗೂ ಆತನ ಮಾನಸಿಕ ಹಾಗೂ ದೈಹಿಕ ಶಕ್ತಿಯ ವಿಕಾಸ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ನಗರದ ಜನತಾ ಶಿಕ್ಷಣ ಟ್ರಸ್ಟ್‍ನ ಸುವರ್ಣ ಮಹೋತ್ಸವ ಹಾಗೂ ಸುವರ್ಣ ಸೌಧ ಕಟ್ಟಡ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಶೇ.76ರಷ್ಟು ವಿದ್ಯಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಾಗಿದೆ. ಅದನ್ನು ಶೇ.100ಕ್ಕೆ ಏರಿಸುವ ಕಾಯಕದಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಪ್ರತಿವರ್ಷ 17 ಸಾವಿರ ಕೋಟಿ ರೂ. ಹಣ ವ್ಯಯಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಪ್ರಜೆ ಸಮಾಜ ದಲ್ಲಿ ಒಳ್ಳೆಯ ಬದುಕು ಹಾಗೂ ನಾಗರೀಕತೆಯ ಬಾಳ್ವೆ ನಡೆಸಲು ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ 16 ವರ್ಷದೊಳಗಿನ ಸರ್ವರಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದೆ ಎಂದರು.
ಆಧುನಿಕ ಜಗತ್ತಿನ ಸ್ಪರ್ಧೆ ಎದುರಿಸಲು ಬೇಕಾದ ಗುಣ ಮಟ್ಟದ ಶಿಕ್ಷಣ ನೀಡಲು ಸಕಾರಿ ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿ ಸಲಾಗುತ್ತಿದೆ. ಇದಕ್ಕಾಗಿ 12 ಸಾವಿರು ಸಂಖ್ಯೆಯ ವಿವಿಧ ಹಂತದ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದ್ದು, ಗ್ರಾಮಾಂತರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಕಾಪಾಡಲು ಹಾಸ್ಟೆಲ್‍ಗಳ ಗುಣಮಟ್ಟ ಸುಧಾರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಪೌಷ್ಠಿಕತೆ ಯಿಂದ ಬಳಲುತ್ತಿದ್ದ ಸುಮಾರು 60 ಸಾವಿರ ವಿದ್ಯಾರ್ಥಿಗಳ ಅಪೌಷ್ಠಿಕತೆ ನಿವಾರಣೆಗೆ ಹಾಲು ವಿತರಣೆ, ಬಿಸಿಯೂಟದ ವ್ಯವಸ್ಥೆ ಕೈಗೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯದ ಹಲವು ಗಣ್ಯರು ಶ್ರಮಿಸಿದ್ದು ಆ ನಿಟ್ಟಿನಲ್ಲಿ  ಕೆ.ವಿ.ಶಂಕರಗೌಡ, ಹೆಚ್.ಜಿ. ಗೋವಿಂದೇಗೌಡ, ಹೆಚ್.ಡಿ. ಚೌಡಯ್ಯರವರ ಸೇವೆ ಅಗಣಿತ ಎಂದು ಬಣ್ಣಿಸಿದರು.
ಮಂಡ್ಯ ಜಿಲ್ಲೆಯ ವಿದ್ಯಾರ್ಥಿ ಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ದೂರ ದೃಷ್ಠಿಯಿಂದ ಕೆ.ವಿ.ಶಂಕರಗೌ ಡರು ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆ 50 ವರ್ಷ ಪೂರೈಸಿರುವುದು ಶ್ಲಾಘನೀಯ. ಸಂಸ್ಥೆಯ ಅಭಿವೃದ್ಧಿಗೆ ಚೌಡಯ್ಯನವರ ಕಾಣಿಕೆಯು ಅಪಾರ ಎಂದು ಪ್ರಸಂಶಿಸಿದರು.
ಶಂಕರಗೌಡರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕುವೆಂಪು ಅವರಿಂದ ಗುಣಗಾ ನಕ್ಕೆ ಪಾತ್ರರಾಗಿದ್ದರು. ಅದೇ ರೀತಿ ಜಿಲ್ಲೆಯ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯರವರ ದುಡಿಮೆ ಅಪಾರ ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪಿ.ಇ.ಟಿ. ಅಧ್ಯಕ್ಷ ಹೆಚ್.ಡಿ.ಚೌಡಯ್ಯ ವಹಿಸಿದ್ದರು. ಉಪಸಭಾಪತಿ ಮರಿತಿಬ್ಬೇಗೌಡ, ಸಂಸದ ಸಿ.ಎಸ್.ಪುಟ್ಟರಾಜು, ಶಾಸಕÀ ಪಿ.ಎಂ.ನರೇಂದ್ರಸ್ವಾಮಿ, ನಗರಸಭೆ ಅಧ್ಯಕ್ಷ ಲೋಕೇಶ್, ಮಾಜಿ ಸಂಸದ ಜಿ.ಮಾದೇ ಗೌಡ, ಕೆ.ವಿ.ಶಂಕರಗೌಡರ ಧರ್ಮಪತ್ನಿ ಸುಶೀಲಮ್ಮ, ಜಿ.ಪಂ.ಸದಸ್ಯ ಕೆ.ಎಸ್. ವಿಜಯಾನಂದ, ಸಂಸ್ಥೆಯ ಕಾರ್ಯದರ್ಶಿ ಹೆಚ್.ಹೊನ್ನಪ್ಪ, ನಿರ್ದೇಶಕ ಡಾ.ರಾಮ ಲಿಂಗಯ್ಯ, ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ಮತ್ತಿತರಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Thursday, 23 July 2015



ಜುಲೈ 27ರಂದು ‘ಕೃಷಿಯಿಂದ ಖುಷಿ ಕಂಡವರು - ರೈತರಿಗೆ ರೈತರೇ ಮಾದರಿ’ ಸಂವಾದ
ಮಂಡ್ಯ ಜುಲೈ 23 (ಕರ್ನಾಟಕ ವಾರ್ತೆ):- ಕೃಷಿ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳಲ್ಲಿ ಉತ್ತಮ ಹವ್ಯಾಸಗಳುಳ್ಳ ರೈತರು ಹಾಗೂ ಇತರ ರೈತರ ನಡುವೆ ವಿಚಾರ ವಿನಿಮಯ ಆಗುವಂತೆ ‘ಕೃಷಿಯಿಂದ ಖುಷಿ ಕಂಡವರು-ರೈತರಿಗೆ ರೈತರೇ ಮಾದರಿ’ ಎಂಬ ಸಂವಾದ ಕಾರ್ಯಕ್ರಮವನ್ನು ಜುಲೈ 27 ರಂದು ಮಂಡ್ಯದ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮಂಡ್ಯ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವಿಕಸನ ಸಂಸ್ಥೆ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬುಧವಾರ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿದರು.
ಸಮಗ್ರ ಕೃಷಿ ಪದ್ಧತಿ ಪ್ರೋತ್ಸಾಹಿಸಲು ಹಾಗೂ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರೇ ರೈತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ರೈತರೇ ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಹೇಳಿದರು.
ರೈತರು ಏಕ ರೀತಿಯ ಬೆಳೆಗಳ ಮೇಲೆ ಹೆಚ್ಚು ಹೆಚ್ಚು ಅವಲಂಬಿತರಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಹವಾಮಾನ ಹಾಗೂ ಮಾರುಕಟ್ಟೆ ಏರುಪೇರುಗಳಿಂದ ಸಂಕಷ್ಟಗಳಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಕೃಷಿಯನ್ನು ಸುಸ್ಥಿತರಗೊಳಿಸಲು ಇರುವ ಅವಕಾಶಗಳನ್ನು, ಅಂತಹ ವಿಧಾನಗಳನ್ನು ಅಳವಡಿಸಿಕೊಂಡ ರೈತರ ಬಗ್ಗೆ ಇತರರಿಗೆ ಮನವರಿಕೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದರು.
ಗಣ್ಯರು ಹಾಗೂ ಅಧಿಕಾರಿಗಳು ಕೇವಲ ಅನುವುಗಾರರಾಗಿ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದು ಸಂಪೂರ್ಣ ಕೃಷಿಕರ ಕಾರ್ಯಕ್ರಮ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ನಬಾರ್ಡ್‍ನ  ಸಹಾಯಕ ಮಹಾ ಪ್ರಬಂಧಕರಾದ ಬಿಂದುಮಾಧವ ವಡವಿ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಪಶು ಸಂಗೋಪನೆ ಉಪ ನಿರ್ದೇಶಕ ಡಾ. ಪ್ರಸಾದ್ ಮೂರ್ತಿ, ತೋಟಗಾರಿಕೆ ಉಪ ನಿರ್ದೇಶಕ ಕೆ. ರುದ್ರೇಶ್, ವಾರ್ತಾಧಿಕಾರಿ ಆರ್. ರಾಜು, ಕೃಷಿ ಇಲಾಖೆ ಸಲಹೆಗಾರ ರವೀಂದ್ರ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ಚಂದ್ರಗುರು ಮತ್ತಿತರರು ಉಪಸ್ಥಿತರಿದ್ದರು.

.ಕೃಷಿ ಪಾಲಿ ಹೌಸ್ ಘಟಕಕ್ಕೆ ಅರ್ಜಿ ಆಹ್ವಾನ
   ಮಂಡ್ಯ ಜುಲೈ 24  ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ ಕೃಷಿ ಭಾಗ್ಯ ಯೋಜನೆಯಡಿ ಪಾಲಿ ಹೌಸ್ ಘಟಕ ನಿರ್ಮಾಣಕ್ಕಾಗಿ ಸಹಾಯಧನ ಪಡೆಯಲು ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಕೆ. ರುದ್ರೇಶ್ ಅವರು ತಿಳಿಸಿದ್ದಾರೆ.
ಪಾಲಿ ಹೌಸ್ ಘಟಕಕ್ಕೆ ಅಂದಾಜು 2000 ಚ.ಮೀ.ಗೆ 21.99 ಲಕ್ಷ ರೂ. 4000 ಚ.ಮೀ.ಗೆ 42.53 ಲಕ್ಷ ರೂ. ವೆಚ್ಚವಾಗುತ್ತದೆ. ಸರ್ಕಾರದಿಂದ ಶೇ. 50 ರಷ್ಟು ಸಹಾಯಧನ ದೊರೆಯುತ್ತದೆ. ಉಳಿದ ಬಾಕಿ ವೆಚ್ಚವನ್ನು ರೈತರು ಸ್ವಂತ ಹೂಡಿಕೆಯಿಂದಾಗಲಿ ಅಥವಾ ಬ್ಯಾಂಕ್ ಸಾಲದ ಮುಖಾಂತರವಾಗಲಿ ಹೂಡಿಕೆ ಮಾಡುವ ಬಗ್ಗೆ ಖಾತರಿ ನೀಡಬೇಕು.
ಕೃಷಿ ಭಾಗ್ಯ ಪಾಲಿ ಹೌಸ್‍ನಿಂದ ಸ್ಥಳದಲ್ಲಿಯೇ ಮಣ್ಣಿನ ತೇವಾಂಶ ಸಂರಕ್ಷಣೆ, ನೀರು ಸಂಗ್ರಹಣಾ ರಚನೆ, ಲಘು ನೀರಾವರಿ, ಮುಂತಾದ ಅನುಕೂಲಗಳಿವೆ. ಈ ಎಲ್ಲಾ ಚಟುವಟಿಕೆಗಳನ್ನು ರೈತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
ಆಸಕ್ತಿಯುಳ್ಳ ರೈತರು ಹೆಚ್ಚಿನ ಮಾಹಿತಿ ಹಾಗೂ ನಿಬಂಧನೆಗಳನ್ನು ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಂದ ಪಡೆದು,  2015ರ ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ. 

Wednesday, 22 July 2015

ಕೃಷ್ಣರಾಜಪೇಟೆ. ತಾಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದ ರೈತ ಪಾಪೇಗೌಡ(75) ಸಾಲಭಾದೆಯಿಂದ ನಿನ್ನೆ ರಾತ್ರಿ ತಮ್ಮ ಜಮೀನಿನ ಬಳಿ ವಿಷ ಸೇವಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಸೊಳ್ಳೇಪುರ ಗ್ರಾಮದ ದಿ.ನಂಜೇಗೌಡರ ಮಗನಾದ ಪಾಪೇಗೌಡ ಅವರು ಎರಡೂವರೆ ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು ಈ ಒಣ ಭೂಮಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಬಾಳೆ ಗಿಡ, ತೆಂಗು ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆದಿದ್ದರು. ಕಳೆದ ಒಂದು ತಿಂಗಳ ಹಿಂದೆ ಬೋರ್‍ವೆಲ್‍ನಲ್ಲಿ ಅಂತರ್ಜಲ ಕುಸಿದು ಬೆಳೆಗಳಿಗೆ ನೀರು ದೊರೆಯದೇ ಒಣಗಿದ್ದರಿಂದಾಗಿ ಕೈಗೆ ಬಂದ ಫಸಲಿನ ಲಾಭವು ಸಿಗದೇ ಸಾಲಗಾರರ ಕಾಟ ಹೆಚ್ಚಾದಾಗ ಪಾಪೇಗೌಡರು ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ತಮ್ಮ ಜಮೀನಿನ ಬಳಿ ವಿಷ ಕುಡಿದು ಅಸ್ವಸ್ಥರಾಗಿ ಬಿದ್ದಿದ್ದ ಪಾಪೇಗೌಡರನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಚೆನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಇಂದು ಬೆಳಿಗ್ಗೆ ಪಾಪೇಗೌಡರು ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಜೀವನದ ಅಂತಿಮಯಾತ್ರೆಯನ್ನು ಮುಗಿಸಿ ಮೃತರಾಗಿದ್ದಾರೆ. ಘಟನೆಯ ಬಗ್ಗೆ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಸಬ್‍ಇನ್ಸ್‍ಪೆಕ್ಟರ್ ಯಶ್ವಂತ್‍ಕುಮಾರ್ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಲದ ಬಾಧೆಯಿಂದ ಮೃತರಾದ ರೈತ ಪಾಪೇಗೌಡರು ಕಿಕ್ಕೇರಿಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80ಸಾವಿರರೂ ಮತ್ತು ಕೈಸಾಲ ಒಂದು ಲಕ್ಷರೂಗಳನ್ನು ಮಾಡಿಕೊಂಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವೃತ್ತ ಆರಕ್ಷಕ ನಿರೀಕ್ಷಕ ಡಿ.ಯೋಗೇಶ್, ತಹಶೀಲ್ದಾರ್ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ತಾ.ಪಂ ಮಾಜಿಅಧ್ಯಕ್ಷ ಕಿಕ್ಕೇರಿ ಸುರೇಶ್, ತಾಲೂಕು ಪಂಚಾಯಿತಿಯ ನೂತನ ಅಧ್ಯಕ್ಷೆ ಭುವನೇಶ್ವರಿಮೋಹನ್, ಉಪಾಧ್ಯಕ್ಷೆ ನಾಗರತ್ನಮ್ಮ, ಕಾರ್ಯನಿರ್ವಹಣಾಧಿಕಾರಿ ಜಿ.ರಾಮಚಂದ್ರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಗಂಗೇನಹಳ್ಳಿ ರುಕ್ಮಾಂಗಧ, ಮುಖಂಡರಾದ ಕೋಡಿಮಾರನಹಳ್ಳಿ ದೇವರಾಜು, ಕಾಯಿ ಸುರೇಶ್, ಮತ್ತಿತರರು ಸೊಳ್ಳೇಪುರ ಗ್ರಾಮಕ್ಕೆ ಭೇಟಿ ನೀಡಿ ಪಾಪೇಗೌಡರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ.
ಯುವಕ ಆತ್ಮಹತ್ಯೆ: ತಾಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿಗನಹಳ್ಳಿ ಗ್ರಾಮದಲ್ಲಿ ಕುಮಾರ್ ಅವರ ಮಗನಾದ ಶಂಕರ(28) ಜೀವನದಲ್ಲಿ ಜಿಗುಪ್ಸೆಗೊಂಡು ಬೇಸತ್ತು ತನ್ನ ಜಮೀನಿನಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತ ಶಂಕರ ಪತ್ನಿ, ಪುತ್ರಿ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾನೆ. ಘಟನೆಯ ಬಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ರೈತರ ಆಶತ್ಮಹತ್ಯೆ ತಡೆಯಲು ಹೋಮ

ಮೈಸೂರು,ಜು.22- ರಾಜ್ಯದಲ್ಲಿ ರೈತರು ದಿನೇ ದಿನೇ ಆತ್ಮಹತ್ಯೆ ಮಾಡಿಕೊಳ್ಳುತಿರುವ್ಯದರಿಂದ ಸಾರ್ವಜನಿಕರು ಆತಂಕಗೋಂಡಿದ್ದು, ರೈತರ ಆತ್ಮಹತ್ಯೆಯನ್ನು ತಡೆಯುವ ಸಲುವಾಗಿ ಹಾಗೂ ಭಗವಂತನು ಆತ್ಮಸ್ಥೈರ್ಯ ಕಲ್ಪಿಸಲಿ ಎಂದು ಒತ್ತಾಯಿಸಿ  ಮೈಸೂರು ನಗರದ ಅಭಿನವ ಬ್ರಾಹ್ಮಣ ಸಮಾಜ ವತಿಯಿಂದ ಜೆಎಲ್‍ಬಿ ರÀಸ್ತೆÉಯಲ್ಲಿರುವ ಅಮೃತೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಂದು ವಿಷೇಶ ಪ್ರಜೆ ಹಾಗೂ ಹೊಮವನ್ನು ನಡೆಸಲಾಯಿತು.
 ರಾಜ್ಯದಲ್ಲಿ ಅನ್ನದತರು ಸಂಕಷ್ಟಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ರೈತರ ಹಿತ ಕಾಪಾಡಬೇಕಾದ ಸರ್ಕಾರ ಗಳು ರೈತರ ಸಮಸ್ಯೆಗಳನ್ನು  ಅರಿವಲ್ಲಿ ವಿಫಲವಾಗಿದೆ. ಇಚಿತಹ ಸನ್ನಿವೇಸದಲ್ಲಿ ರೈತರಲ್ಲಿ ಆತ್ಮ ಸ್ಥೈರ್ಯತುಂಲು, ಅವರ ಕಷ್ಟಗಳನ್ನು ಪರಿಹರಿಸಲು ಹಾಗೂ ಅವರು ಅಪಮೃತ್ಯುಗೊಳಪಡುವುದನ್ನು ತಡೆಯಲು ದೈವಾನುಗ್ರಹಕ್ಕಾಗಿ ಇಂದು ನಗರದ ದಿವಾನ್ಸ್ ರಸ್ತೆಯಲ್ಲಿರುವ ಆಮೃತೇಶ್ವರ ದೇವಸ್ಥಾನದಲ್ಲಿ ರೈತರ ಏಳಿಗೆಗಾಗಿ ವಿಶೇಷ ಪ್ರಜೆ- ಪ್ರಾರ್ಥನೆ, ಹಾಗೂ ಲಕ್ಕಷ್ಮೀನಾರಾಯಣ ಅಷ್ಟಾಕ್ಷರಿ ಮತ್ರ ಪಠಣ, ಅಪಮೃತ್ಯು ಂಜೀವಿನಿ ಮೃತ್ಯುಂಜಯ ಹೋಮಗಳನ್ನು ನಡೆಸಲಾಯಿತು.
 ಮೈ-ಕುಮಾರ್ ನೇತೃತ್ವದಲ್ರ್ಲೆಇ ನಡೆದ ಈ ಹೋಮದಲ್ಲಿ ಹೆಚ್.ಎನ್. ಶ್ರೀದರ್‍ಮೂರ್ತಿ, ರಾಕೇಶ್‍ಭಟ್, ವಿಕ್ರಮ್ ಸ್ಭೆರಿದಂತೆ ಹಲವಾರು ಮಂದಿ ಬಾಗವಹಿಸಿದ್ದರು.

ಕೋರಂ ಇಲ್ಲದ ಕಾರಣ ಜಿ. ಪಂ. ಸಭೆ ಮುಂದಕ್ಕೆ
ಮೈಊರು,ಜು,22- ಮೈಸೂರು ಜಿಲ್ಲಾಪಂಚಾಯಿತಿ ಆಮಾನ್ಯ ಸಭೆ ನಡೆಸಲು ಇಂದು ಎಂದಿನಂತೆ 11 ಗಂಟೆಗೆ ಸೇರಿತ್ತು, ಸುಮಾರು ಅರ್ಧ ಗಂಟೆಯಾದರೂ ವಿರೋಧ ಪಕ್ಷದ ಸದಸ್ಯರುಗಳು ಸಭೆಗೆ ಹಾಜರಾಗಲಿಲ್ಲ, ಇದರಿಂದ ಅದ್ಯಕ್ಷೆ ಪುಷ್ಪಾ ಅಮರ್‍ನಾಥ್ ಸಭೆಗೆ ಕೋರಂ ಇಲ್ಲೊದ ಕಾರಣ ಇಂದು ನಡೆಯ ಬೇಕಾಗಿದ್ದ ಸಭೆಯನ್ನು ಬೇರೊಂದು ದಿನಕ್ಕೆ ಮುಂದೂಡಿದರು.
  ಈ ಹಿಂದೆ ಸಬೇ ಏರಿದಾಗ ಆಗಲೂ ವಿರೋಧ ಪಕ್ಷದ ಸದಸ್ಯರುಗಳು ಗೈರು ಹಾಜರಾಗಿದ್ದರು ಆಗಲೂ ಸಭೆಯನ್ನು ಮುಂದೂಡಲಾಗಿತ್ತು, ಇಂದು ಹಲವರು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲು ಸಭೆಗೆ ಸದಸ್ಯರುಗಳನ್ನು ಆಹ್ವಾನಿಸಲಾಗಿತ್ತಾದರೂ ಇಂದೂ ಸಹ ಅದೇರೀತಿ ನಡೆದುಕೊಂಡಿದ್ದಾರೆ, ಎಂದು ಸಭೆಯನ್ನು ಮುಂದೂಡಿದರು. ನಂತರ ಅಧ್ಯಕ್ಷರು ಮಾತನಾಡಿ ವಿರೋಧ ಪಕ್ಷದ ಸದಸ್ಯರುಗಳು  ಎರಡುಬಾರಿ ಸಭೆ ಮುಂದೂಡಲು ಈ ರೀತಿ  ನಡೆದುಕೊಂಡಿದ್ದಾರೆ, ಮುಂದೆಯೂ ರೀತಿ ನಡೆದುಕೊಂಡರೆ  ಸಭೆಗೆ ಹಾಜರಾಗದ ಸದಸ್ಯರುಗಳÀ ವಿರುದ್ದ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಆಕಸ್ಮಿಕ ಬೆಂಕಿ : 1 ಎಕರೆ ಕಬ್ಬು ಭಸ್ಮ
ಶ್ರೀರಂಗಪಟ್ಟಣ : ಆಕಸ್ಮಿಕ ಬೆಂಕಿ ಸಂಭವಿಸಿ 1 ಎಕರೆ ಜಮೀನಿನಲ್ಲಿದ್ದ ಕಬ್ಬು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಜರುಗಿದೆ.
ಚಿನ್ನೇನಹಳ್ಳಿ ಗ್ರಾಮದ ಶಿವನಂಜಯ್ಯರವರ ಮಗ ಕುಮಾರಸ್ವಾಮಿ ಎಂಬುವರಿಗೆ ಸೇರಿದ 1 ಎಕರೆ ಜಮೀನಿನಲ್ಲಿದ್ದ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಹಲವು ದಿನಗಳಿಂದ ನಾಲೆಯಲ್ಲಿ ನೀರು ಬಿಡದ ಕಾರಣ ಕಬ್ಬು ಒಣಗಿತ್ತು. ನಿನ್ನೆ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಗದ್ದೆಯಲ್ಲಿದ್ದ ಬಹುತೇಕ ಕಬ್ಬು ಸುಟ್ಟು ಭಸ್ಮವಾಗಿದೆ. 13 ತಿಂಗಳು ತುಂಬಿದ್ದ ಕಬ್ಬನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಸದರಿ ಘಟನೆಯಿಂದ ಸುಮಾರು 60 ಟನ್ ಕಬ್ಬು ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಕರಣವನ್ನು ಶ್ರೀರಂಗಪಟ್ಟಣ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಮೂಗಮಾರಮ್ಮನ ಹಬ್ಬ
ಪಾಂಡವಪುರ : ತಾಲ್ಲೂಕಿನ ಸಿಂಡಬೋಗನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಮೂಗಮಾರಮ್ಮ(ಡಿಂಕದಮ್ಮ)ನ ಹಬ್ಬ ವಿಜೃಂಭಣೆಯಿಂದ ಜರುಗಿತು.
ನಿನ್ನೆ ಬೆಳಿಗ್ಗೆ ಗ್ರಾಮದ ಯಜಮಾನರುಗಳ ಸಮ್ಮುಖದಲ್ಲಿ ಹೋಮನಡೆಯಿತು. ನಂತರ ಕಳಸಹೊತ್ತ ಮಹಿಳೆಯರು ಕೆರೆತೊಣ್ಣೂರು ಕೆರೆಗೆ ಬಂದು ಕಳಸ ಪೂಜೆ, ಗಂಗಾಪೂಜೆ ನೆರವೇರಿಸಲಾಯಿತು.
ಪೂಜೆ ಬಳಿಕ ಬಲ್ಲೇನಹಳ್ಳಿ, ಅಗಸನಹಳ್ಳಿ ಮಾರ್ಗವಾಗಿ ಗ್ರಾಮಕ್ಕೆ ಕಾಲ್ನಡಿಗೆ ಮೂಲಕ ಬರಲಾಯಿತು. ಗ್ರಾಮದ ಬೀದಿಗಳಲ್ಲಿ ಸಂಚರಿಸಿ ದೇವಿಗೆ ಪ್ರತಿಮನೆಯಲ್ಲೂ ಪೂಜೆಸಲ್ಲಿಸಲಾಯಿತು.
ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಹಾಗೂ ಆವರಣದಲ್ಲಿ ಪೂಜಾ ಕುಣಿತ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನಡೆದವು.
ಗ್ರಾಮದ ಎಲ್ಲಾ ಬೀದಿಗಳಿಗೂ ವಿದ್ಯುತ್ ದೀಪಲಂಕಾರ ಮಾಡಲಾಗಿತ್ತು. ಪ್ರತಿಮೆನೆಯ ಮುಂಭಾಗ ರಂಗೋಲಿ ಬಿಡಿಸಿ, ಹಸಿರು ತೋರಣ ಕಟ್ಟಲಾಗಿತ್ತು.
ಪ್ರತಿವರ್ಷವೂ ನಡೆಯುತ್ತಿದ್ದು ಈ ಹಬ್ಬ, ಕಳೆದ 6 ವರ್ಷಗಳಿಂದ ಕೆಲವು ಕಾರಣಗಳಿಂದ ಆಚರಣೆಯಾಗಿರಲಿಲ್ಲ. ಈ ಭಾರಿ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಮುಖಂಡರಾದ ಪಟೇಲ್ ಹೆಚ್.ಮಾದೇಗೌಡ, ನಾಗಣ್ಣ, ನರಸಿಂಹೇಗೌಡ, ಸಣ್ಣೇಗೌಡ, ಮರಂಕೇಗೌಡ, ಎಳವಪ್ಪ ನೇತೃತ್ವದಲ್ಲಿ ಹಬ್ಬ ಜರುಗಿತು.
ಪತ್ರಕರ್ತರ ಕ್ರೀಡಾಕೂಟ : ವಿಜೇತರು
ಮಂಡ್ಯ : ಇತ್ತೀಚೆಗೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ  ನಡೆದ ಕ್ರೀಡಾಕೂಟದ ವಿಜೇತರ ಪಟ್ಟಿ ಕೆಳಕಂಡಂತಿದೆ.
100 ಮೀ ಓಟ (11-15 ವರ್ಷ): ದರ್ಶನ್ ಮಂಜುನಾಥ್  ಪ್ರಥಮ, ವಿಕಾಸ್ ಬಾಲಕೃಷ್ಣ  ದ್ವಿತೀಯ, ಜಯಂತ್ ಶಿವಪ್ರಕಾಶ್ ತೃತೀಯ
10ರಿಂದ 15 ವರ್ಷ : ಸ್ಪಂದನ ಸತೀಶ್ ಪ್ರಥಮ, ಮನೋಜ್ ಸತೀಶ್ (ದ್ವಿತೀಯ)
100 ಮೀ ಓಟ (6-10ವರ್ಷ) ದೀಪ್ತಿ ನವೀನ್ ಪ್ರಥಮ, ರುಚಿತ ಶ್ರೀನಿವಾಸ್ ದ್ವಿತೀಯ, ಹಿತಾಶ್ರೀ ದಶರಥಕುಮಾರ್ ತೃತೀಯ.
ಮಹಿಳೆಯರ ವಿಭಾಗ ಮ್ಯೂಸಿಕಲ್ ಚೇರ್ : ಜೈಭಾರತಿ ದಶರಥಕುಮಾರ್ ಪ್ರಥಮ, ನೀಲಾ ವಿದ್ಯಾಶಂಕರ್ ದ್ವಿತೀಯ, ಉಮಾಬಾಲಕೃಷ್ಣ ತೃತೀಯ.
 ಲಿಂಬು ಚಮಚ ಓಟ (ಬಾಲಕಿಯರು): ದೀಪ್ತಿ ನವೀನ್ ಪ್ರಥಮ, ಸ್ಪಂದನ ಸತೀಶ್ ದ್ವಿತೀಯ, ರುಚಿತಾ ಶ್ರೀನಿವಾಸ್ ತೃತೀಯ.
40ವರ್ಷದೊಳಗಿನ ಮಹಿಳೆಯರ 100 ಮೀ.ಓಟ :ಉಮಾ ಬಾಲಕೃಷ್ಣ ಪ್ರಥಮ, ತಿರುಮಲ ರಜನೀಶ್ ಪಾಟೀಲ್ ದ್ವಿತೀಯ, ಸೌಮ್ಯ ನವೀನ್ ತೃತೀಯ.
40 ವರ್ಷ ಮೇಲ್ಪಟ್ಟ ಮಹಿಳೆಯರ 100 ಮೀ : ಜೈಭಾರತಿ ದಶರಥ ಪ್ರಥಮ, ನೀಲಾ ವಿದ್ಯಾಶಂಕರ್ ದ್ವಿತೀಯ, ಪುಷ್ಪಾ ವೇಣುಗೋಪಾಲ್ ತೃತೀಯ.
100 ಮೀ. ಓಟ (50ವರ್ಷ ಮೇಲ್ಪಟ್ಟು) ಪಿ.ಸಿ.ಮಂಜುನಾಥ್ ಪ್ರಥಮ, ಸಿ.ಪಿ.ವಿದ್ಯಾಶಂಕರ್ ದ್ವಿತೀಯ, ಬಸವರಾಜ ಹೆಗ್ಡೆ ತೃತೀಯ.
40ವರ್ಷ ಮೇಲ್ಪಟ್ಟು :ಬಸವರಾ ಹವಾಲ್ದಾರ ಪ್ರಥಮ, ಶಂಭು ದ್ವಿತೀಯ, ನಂಜೇಗೌಡ ತೃತೀಯ.
30ವರ್ಷ ಮೇಲ್ಪಟ್ಟು :ಅಲ್ಲಾಪಟ್ಟಣ ಸತೀಶ್ ಪ್ರಥಮ, ಕೃಷ್ಣಮೂರ್ತಿ ದ್ವಿತೀಯ, ಸಂತೋಷ್ ತೃತೀಯ
30ವರ್ಷ ಒಳಪಟ್ಟು : ಶೇಷಣ್ಣ ಪ್ರಥಮ, ಮಧು ದ್ವಿತೀಯ, ಸಂತೋಷ್ ತೃತೀಯ.
200 ಮೀ.ಓಟ (50 ವರ್ಷ ಮೇಲ್ಪಟ್ಟು) ಮಂಜುನಾಥಶಾಸ್ತ್ರಿ ಪ್ರಥಮ, ಸಿ.ಪಿ.ವಿದ್ಯಾಶಂಕರ್ ದ್ವಿತೀಯ, ಶ್ರೀಪಾದು ತೃತೀಯ.
40ವರ್ಷ ಮೇಲ್ಪಟ್ಟು :ಸಂತೋಷ್ ಪ್ರಥಮ, ಬಸವರಾಜ ಹವಾಲ್ದಾರ ದ್ವಿತೀಯ, ಶಂಭು ತೃತೀಯ.
30ವರ್ಷ ಮೇಲ್ಪಟ್ಟು : ಕೃಷ್ಣಮೂರ್ತಿ ಪ್ರಥಮ, ಅಲ್ಲಾಪಟ್ಟಣ ಸತೀಶ್ ದ್ವಿತೀಯ, ನವೀನ್ ತೃತೀಯ.
30ವರ್ಷ ಒಳಪಟ್ಟು :ಮಧು ಪ್ರಥಮ, ಸಂತೋಷ್ ದ್ವಿತೀಯ, ಅಶೋಕ್ ತೃತೀಯ
ಷಾಟ್‍ಪುಟ್ (30ವರ್ಷ ಒಳಪಟ್ಟು) ಮಧು ಪ್ರಥಮ, ಶಶಿಕುಮಾರ್ ದ್ವಿತೀಯ, ರವಿ ತೃತೀಯ
30ವರ್ಷ ಮೇಲ್ಪಟ್ಟು : ನಾಗೇಶ್ ಪ್ರಥಮ, ಸೋಮಶೇಖರ್ ಬಿ.ಜಿ. ದ್ವಿತೀಯ, ನವೀನ್ ತೃತೀಯ.
40ವರ್ಷ ಮೇಲ್ಪಟ್ಟು: ಬಸವರಾಜ ಹವಾಲ್ದಾರ ಪ್ರಥಮ, ನಂಜೇಗೌಡ ದ್ವಿತೀಯ, ಶಂಭು ತೃತೀಯ.
50ವರ್ಷ ಮೇಲ್ಪಟ್ಟು :ಡಿ.ಎಲ್.ಲಿಂಗರಾಜು ಪ್ರಥಮ, ಬಸವರಾಜ್ ಹೆಗ್ಡೆ ದ್ವಿತೀಯ, ಕೆ.ವೇಣುಗೋಪಾಲ್ ತೃತೀಯ.
ಜಾವೆಲಿನ್ ಎಸೆತ (30ವರ್ಷ ಒಳಪಟ್ಟು): ಮಧು ಪ್ರಥಮ, ಶೇಷಣ್ಣ ದ್ವಿತೀಯ, ರವಿ ತೃತೀಯ.
20ವರ್ಷ ಮೇಲ್ಪಟ್ಟು : ಅಲ್ಲಾಪಟ್ಟಣ ಸತೀಶ್ ಪ್ರಥಮ, ಕೃಷ್ಣಮೂರ್ತಿ ದ್ವಿತೀಯ, ನವೀನ್‍ಕುಮಾರ್ ತೃತೀಯ
40ವರ್ಷ ಮೇಲ್ಪಟ್ಟು : ನಂಜೇಗೌಡ ಪ್ರಥಮ, ಶಂಭು ದ್ವಿತೀಯ, ಶಿವಪ್ರಕಾಶ್ ತೃತೀಯ.
50ವರ್ಷ ಮೇಲ್ಪಟ್ಟು : ಬಸವರಾಜ್ ಹೆಗ್ಡೆ ಪ್ರಥಮ, ಡಿ.ಎಲ್.ಲಿಂಗರಾಜು ದ್ವಿತೀಯ, ವಿದ್ಯಾಶಂಕರ್ ತೃತೀಯ.

Tuesday, 21 July 2015

ಮಂಡ್ಯ: ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಸರ್ವೆ ನಂ. 157ರಲ್ಲಿ 78.30 ಎಕರೆ ಜಮೀನಿದ್ದು, 22.30 ಎಕರೆ ಜಮೀನು ತೆರವು ಮಾಡಲಾಯಿತು. ಸುಂಡಹಳ್ಳಿ ಗ್ರಾಮದಲ್ಲಿ ಸರ್ವೆ ನಂ. 126ರಲ್ಲಿ 43.20 ಎಕರೆ ಜಮೀನಿದ್ದು, 7.30 ಎಕರೆ ಜಮೀನನ್ನು ಒತ್ತುವರಿದಾರರಿಂದ ತೆರವುಗೊಳಿಸಲಾಯಿತು.
ಮಂಡ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಮಾರ್ಗದರ್ಶನದಲ್ಲಿ ಉಪ ತಹಸೀಲ್ದಾರ್ ಕೆ.ಎಂ. ಸ್ವಾಮಿಗೌಡ ಮತ್ತು ತಂಡ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಕಂದಾಯ ನಿರೀಕ್ಷಕ ಎಸ್.ಕೆ. ರಾಜು, ಗ್ರಾಮ ಲೆಕ್ಕಾಧಿಕಾರಿ ಸಿ. ಪ್ರಭು, ಸರ್ವೆಯರ್ ಶಿವಕುಮಾರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.


ಮಂಡ್ಯ: ನಗರಸಭೆ ವ್ಯಾಪ್ತಿಯಲ್ಲಿ 13ನೇ ಹಣಕಾಸು ಯೋಜನೆಯಡಿ ಅನುಮೋದನೆಯಾಗಿರುವ ವಾರ್ಡ್ ನಂ. 19ರ ಅಶೋಕನಗರದ ಬಾಲಭವನದಲ್ಲಿ ಬೋರ್ ಕೊರೆದು ವಿದ್ಯುತ್ ಪಂಪ್ ಅಳವಡಿಸುವ ಕಾಮಗಾರಿಗೆ ನಗರಸಭಾಧ್ಯಕ್ಷ ಲೋಕೇಶ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 2014-15ನೇ ಸಾಲಿನಲ್ಲಿ ನಗರದ ವಾರ್ಡುಗಳಿಗೆ 13ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಚಾಲನೆಗೊಳಿಸಲಾಯಿತು. 19ನೇ ವಾರ್ಡಿನ ಬಾಲಭವನದ ಆವರಣದಲ್ಲಿ ವಾಯುವಿಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರಣದಿಂದಾಗಿ ಕುಡಿಯುವ ನೀರಿನ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದು ಹೇಳಿದರು.
ನಗರಸಭಾ ಸದಸ್ಯರಾದ ಎಸ್.ಕೆ. ಶಿವಪ್ರಕಾಶ್‍ಬಾಬು, ಚಂದ್ರಕುಮಾರ್, ಮಧುಸೂದನ್, ವಾರ್ಡ್‍ನ ನಿವಾಸಿಗಳಾದ ಜಿ.ವಿ. ನಾಗರಾಜು, ಕೆ. ರವೀಂದ್ರ, ಜಲಮಂಡಳಿ ಸಹಾಯಕ ಅಭಿಯಂತರ ಶಿವಕುಮಾರ್ ಇತರರಿದ್ದರು.

Tuesday, 14 July 2015

ಮೈಸೂರು ಜಿಲ್ಲೆಯ ಬನ್ನೂರು ಪಟ್ಟಣದಲ್ಲಿಏರ್ಪಡಿಸಿದ್ದ ಲಯನ್ಸ್ ಹಾಗೂ ರೋಟರಿ ವಿದ್ಯಾ ಸಂಸ್ಥೆಗಳು ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ರೋಟರಿ  ಕೆ.ಮಹೇಂದ್ರಸಿಂಗ್ ಕಾಳಪ್ಪ ರವರು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂಬಡ ರೋಗಿಗಳಿಗೆ ದನ ಸಹಾಯದ ಚೆಕ್  ವಿತರಿಸಿದರು.ರಾಕೇಶ್ ಕುಮಾರ್ ರವರುಲಯನ್ಸ್ ಕ್ಲಬ್ (ಗ್ರೀನ್ ಲ್ಯಾಡ್ ಅಧಯಕ್ಷರಾಗಿ ಅಧಿಕಾರ ವಹಿಸಿಕೊಂಡರು.ಕಾರ್ಯಕ್ರಮದಲ್ಲಿ ರೋ ರಾಮಚಂದ್ರು,ಹನುಮಂತೇಗೌಡ,ಸುರೇಶ್,ಕೆಂಪೇಗೌಡ, ಲ ಮಹೇಶ,ಅನಿಲ್ ಕುಮಾರ್ ಉಪಸ್ತಿತರಿದ್ದರು.

Sunday, 12 July 2015

ಕೆ.ಆರ್.ಪೇಟೆ,ಜು.12- ಕಳೆದ 17 ವರ್ಷಗಳ ಕಾನೂನು ಹೋರಾಟ ನಡೆಸಿ ಹರೀನಹಳ್ಳಿ ಗ್ರಾಮದ ವ್ಯಾಪ್ತಿಯ ಪಹಣಿಯನ್ನು ಸರಿಮಾಡಿಸಿಕೊಂಡಿದ್ದ ರೈತನ ಪಹಣಿಯನ್ನು ದುರುದ್ಧೇಶದಿಂದ ಮತ್ತೆ ದೋಷಪೂರಿತಗೊಳಿಸಿರುವ ಕಂದಾಯ ಇಲಾಖೆಯ ಅಧಿಕಾರಿಗಳ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ರೈತ ಹೆಚ್.ಬಿ.ಮಂಜುನಾಥ್ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನ ಮುಖ್ಯ ರಸ್ತೆಯ ಬದಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ತಾಲೂಕಿನ ಅಗ್ರಹಾರಬಾಚಹಳ್ಳಿ ವೃತ್ತಕ್ಕೆ ಸೇರಿದ ಹರೀನಹಳ್ಳಿ ಗ್ರಾಮದ ವ್ಯಾಪ್ತಿಯ ಸರ್ವೇ ನಂ8/5ರ ಪೈಕಿ 25 ಗುಂಟೆ ಜಮೀನನ್ನು ಬೇರೆಯವರಿಂದ ಕ್ರಯಕ್ಕೆ ಪಡೆದಿದ್ದರೂ ಸಹ  ಹೇಮಾವತಿ ಜಲಾಶಯ ಯೋಜನೆಯ ಕಾಲುವೆಗೆ ಸೇರಿದೆ ಎಂದು ದಾಖಲೆ ಮಾಡಿದ್ದರ ವಿರುದ್ಧ ನ್ಯಾಯಾಲಯಕ್ಕೆ  ಹೋದಾಗ ಕಂದಾಯ ಇಲಾಖೆಯ ಆದೇಶದ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ 17 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಪಹಣಿಯಿಂದ ಹೇಮಾವತಿ ಜಲಾಶಯದ ಕಾಲುವೆಗೆ ಸೇರಿದೆ ಎಂಬ ಅಂಶವನ್ನು ತೆಗೆದುಹಾಕಿ ರೈತನ ಹೆಸರಿಗೆ ಪಹಣಿ ಮತ್ತು ಖಾತೆ ಮಾಡಲಾಡಲಾಗಿತ್ತು. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯಿಂದ ಮತ್ತೆ ಪಹಣಿಯಲ್ಲಿ ಸದರಿ ಸರ್ವೆ ನಂಬರಿನ ವಿಸ್ತೀರ್ಣದ ಭೂಮಿಯು ನೀರಾವರಿ ಇಲಾಖೆಗೆ ಸೇರಿದ ಎಂದು ದಾಖಲೆಯನ್ನು ಬದಲಾಯಿಸಲಾಗಿದೆ. ಇದು ಕಂದಾಯ ಇಲಾಖೆಯ ಬೇಜವಾಬ್ಧಾರಿತನವನ್ನು ಖಂಡಿಸಿರುವ ಮಂಜುನಾಥ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಕಂದಾಯ ಇಲಾಖೆಯ ಬೇಜವಾಬ್ಧಾರಿತನದಿಂದಾಗಿ ಮತ್ತೆ ಕೋರ್ಟಿಗೆ ಅಲೆಬೇಕಾದ ಪರಿಸ್ಥಿತಿ ಎದುರಾಗಿದೆ ಹಾಗಾಗಿ ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಭೂಮಿ ಬಾಗಿಲು ಹತ್ತಬೇಕಾಗಿದೆ. ಮಾನ್ಯ ಉಪವಿಭಾಗಾಧಿಕಾರಿಯವರು ಈಬಗ್ಗೆ ಪರಿಶೀಲನೆ ನಡೆಸಿ ತಮ್ಮ ತಾಯಿ ಅಕ್ಕಮ್ಮ ಕೋಂ ಬೀರಯ್ಯ ಹೆಸರಿನಲ್ಲಿ ಉಂಟಾಗಿರುವ ಪಹಣಿಯ ದೋಶವನ್ನು ಸರಿಪಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಧರಣಿಗೆ ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಾಗೂ ಆಟೋ ಚಾಲಕರು  ಭಾಗವಹಿಸಿ ತಮ್ಮ ಬೆಂಬಲ ಸೂಚಿಸದರು.

ಕೆ.ಆರ್.ಪೇಟೆ,ಜು.12.ಆರ್.ಎಸ್.ವ್ಯಾಪ್ತಿಯ ರೈತರಿಗೆ ಹರಿಸುತ್ತಿರುವ ಮಾದರಿಯಲ್ಲಿ ಹೇಮಾವತಿ ಜಲಾಶಯ ವ್ಯಾಪ್ತಿಗೆ ಒಳಪಡುವ ತಾಲೂಕಿನ ಕಾಲುವೆಗಳಲ್ಲಿಯೂ ನೀರು ಹರಿಸಬೇಕು.  ಇದರಿಂದ  ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಕುಸಿಯದಂತೆ,  ರೈತರ ಬೆಳೆಗಳು ಒಣಗದಂತೆ ತಡೆಯಬೇಕು.  ಗ್ರಾಮೀಣ ಭಾಗದಲ್ಲಿ ತಲೆ ಎತ್ತಿರುವ ರಿಕ್ರಿಯೇಷನ್ ಕ್ಲಬ್‍ಗಳನ್ನು ಬಂದ್ ಮಾಡಿಸಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಮುಚ್ಚಬೇಕು. ಕಳಪೆ ಬಿತ್ತನೆ ಬೀಜ ಮಾರಾಟ ತಡೆಗಟ್ಟಬೇಕು. ಪ್ರತಿ 3ತಿಂಗಳಿಗೊಮ್ಮೆ ರೈತ ಕುಂದುಕೊರತೆ ಸಭೆ ನಡೆಸಬೇಕು.........ಇತ್ಯಾದಿ ಮನವಿಗಳನ್ನು ಮಾಡಿ ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡರೆ ರೈತರ ಆತ್ಮಹತ್ಯೆಗಳನ್ನು ತಡೆಹಿಡಿದು ಅವರ ಬದುಕು ಬಂಗಾರವಾಗಿಸಬಹುದು ಎಂದು ರೈತರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ.ಅಜಯ್‍ನಾಗಭೂಷಣ್,  ಶಾಸಕ ಕೆ.ಸಿ.ನಾರಾಯಣಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್.ಜಿ.ಬೊರಸೆ, ಉಪವಿಭಾಗಾಧಿಕಾರಿ ಡಾ.ಜೆಚ್.ಎಲ್.ನಾಗರಾಜು ಅವರ  ಸಮ್ಮುಖದಲ್ಲಿ ಪಟ್ಟಣದ ಮಿನಿವಿಧಾನಸೌಧದಲ್ಲಿ ನಡೆದ ರೈತರ ಕುಂದು-ಕೊರತೆ ಸಭೆಯಲ್ಲಿ ರೈತರು ಮಾಡಿದ ಮನವಿಗಳಿವು.
ಪ್ರತಿ ಮೂರು ತಿಂಗಳಿಗೊಮ್ಮೆ ರೈತರ ಕುಂದುಕೊರತೆ ಸಭೆಯನ್ನು ಜಿಲ್ಲಾಡಳಿತವು ತಾಲೂಕು ಕೇಂದ್ರದಲ್ಲಿ ಆಯೋಜಿಸಿದರೆ ರೈತರು ತಮಗಾಗುತ್ತಿರುವ ತೊಂದರೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಸಹಕಾರವಾಗಲಿದೆ  ಈ ಬಗ್ಗೆ ಜಿಲ್ಲಾಡಳಿತವು ಸೂಕ್ತ ಕ್ರಮ ವಹಿಸುವ ಮೂಲಕ ರೈತರಲ್ಲಿ ಆತ್ಮಸ್ಥೆರ್ಯ ತುಂಬಲು ಮುಂದಾಗಬೇಕು.
ಮಹಿಳಾ ಸ್ವಸಹಾಯ ಸಂಘಗಳು, ಗ್ರಾಮೀಣ ಭಾಗದಲ್ಲಿ ಮೈಕ್ರೋ ಪೈನಾನ್ಸ್ ಸಂಸ್ಥೆಗಳು ತಲೆ ಎತ್ತಿದ್ದು ರೈತರಿಗೆ ಶೇ.5ರಿಂದ 10ರಷ್ಟು ಬಡ್ಡಿಗೆ  ಮಹಿಳಾ ಗುಂಪುಗಳ ಮೂಲಕ ಮೂಲಕ ಸಾಲ ನೀಡುತ್ತಿರುವುದರಿಂದ ಪ್ರತಿ ವಾರವೂ ಹಣ ನೀಡಿ ಎಂದು ಮಹಿಳೆಯರು ರೈತರ ಬಳಿ ಹೋಗಿ ಗಲಾಟೆ ಮಾಡಿ ಅವಮಾನ ಮಾಡುತ್ತಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ.  ಇದರಿಂದ ಮನನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇಂತಹ ಸಂಸ್ಥೆಗಳಿಗೆ ಕಡಿವಾಣ ಹಾಕಿ, ರೈತರ ಆತ್ಮಹತ್ಯೆಯನ್ನು ತಪ್ಪಸಬೇಕು.
ಫುಡ್‍ಪಾರ್ಕ್ ಆರಂಭ ಮಾಡುವ ಮೂಲಕ ಸ್ಥಳೀಯ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಜಿಲ್ಲಾಡಳಿತವು ಕ್ರಮ ವಹಿಸಬೇಕು. ಖಾಲಿ ಚೆಕ್ ಮತ್ತು ಪ್ರೊನೋಟ್ ಪಡೆದ ಸಾಲ ನೀಡುತ್ತಿರುವ ಖಾಸಗಿ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸಹಕಾರ ಸಂಸ್ಥೆಗಳು ಯಾವುದೇ ಅಡಮಾನವಿಲ್ಲದೆ 50ಸಾವಿರ ಸುಲಭವಾಗಿ ಸಾಲ ನೀಡುವಂತೆ ಬ್ಯಾಂಕುಗಳಿಗೆ ಆದೇಶ ನೀಡಬೇಕು.  ಗ್ರಾಮೀಣ ಭಾಗದಲ್ಲಿ   ನಾಯಿ ಕೊಡೆಗಳಂತೆ ತಲೆ ಎತ್ತಿರುವ ಕ್ಲಬ್‍ಗಳನ್ನು ಬಂದ್ ಮಾಡಿಸಬೇಕು.  ಗ್ರಾಮೀಣ ಭಾಗದ ರೈತರು ಕೃಷಿ ಜೊತೆಗೆ ಉಪಕಸುಬುಗಳನ್ನು ಕೈಗೊಳ್ಳಲು ಸೂಕ್ತ ತರಬೇತಿ ಮತ್ತು ಸಾಲ ಸೌಲಭ್ಯ ಒದಗಿಸಿಕೊಡಬೇಕು.
ರೈತರು ಸರಬರಾಜು ಮಾಡಿದ ಕಬ್ಬಿಗೆ ಸಕಾಲದಲ್ಲಿ ಕಬ್ಬು ಕಟಾವು ಆಗುವಂತೆ ಸಕ್ಕರೆ ಕಾರ್ಖಾನೆಗೆ ಸೂಚನೆ ನೀಡಬೇಕು. ಯಾವುದೇ ಕಾರಣಕ್ಕೂ ಹೊರತಾಲೂಕಿನ ಕಬ್ಬು ಸರಬರಾಜಾಗದಂತೆ ಕ್ರಮ ವಹಿಸಬೇಕು ಮತ್ತಿತರರ ಮನವಿಗಳನ್ನು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರೈತರು ಮತ್ತು ಮುಖಂಡರು ಅಧಿಕಾರಿಗಳಿಗೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ಅಧ್ಯಕ್ಷ ಮರುವನಹಳ್ಳಿ ಶಂಕರ್, ತಹಸೀಲ್ದಾರ್ ಶಿವಕುಮಾರ್, ಜಿ.ಪಂ.ಸದಸ್ಯರಾದ ಸರ್ವಮಂಗಳಾವೆಂಕಟೇಶ್, ಅನುಸೂಯಗಂಗಾಧರ್,  ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್,  ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಎಸ್.ಸಂತೋಷ್‍ಕುಮಾರ್, ವಿಠಲಾಪುರ ಸುಬ್ಬೇಗೌಡ, ತಾ.ಪಂ.ಸದಸ್ಯರಾದ ಕೆ.ಆರ್.ರವೀಂದ್ರಬಾಬು, ರೇಣುಕಾಕಿಟ್ಟಿ, ಚೆಲುವಯ್ಯ, ಎಂ.ಸಿ.ರಾಮೇಗೌಡ, ಮುಖಂಡರಾದ ಕೆ.ಜೆ.ವಿಜಯಕುಮಾರ್, ಬಸ್ತಿರಂಗಪ್ಪ,  ಎಂ.ಆರ್.ಪ್ರಸನ್ನಕುಮಾರ್, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಕೆ.ಬಾಬುರಾಜ್, ಸರ್ಕಲ್ ಇನ್ಸ್‍ಪೆಕ್ಟರ್ ಯೋಗೇಶ್, ಸಬ್‍ಇನ್ಸ್‍ಪೆಕ್ಟರ್ ವಿನಯ್ ಮತ್ತಿತರರು ಭಾಗವಹಿಸಿದ್ದರು.

ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಜಿಲ್ಲಾಧಿಕಾರಿಗಳ ಅಗತ್ಯ ನಾಗಭೂಷಣ್.


ದೇ.ಜಗೌ ಕನ್ನಡದ ಕಟ್ಟಾಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ದೇ.ಜಗೌ ಕನ್ನಡದ ಕಟ್ಟಾಳು: ಮುಖ್ಯಮಂತ್ರಿ ಸಿದ್ದರಾಮಯ್ಯ
    ಮೈಸೂರು,ಜು.12.ಹಿರಿಯ ಸಾಹಿತಿ ನಡೋಜ ಡಾ|| ದೇ.ಜವರೇಗೌಡ ಅವರು ಕನ್ನಡದ  ಕಟ್ಟಾಳು ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಹೇಳಿದರು.
      ಅವರು ಇಂದು ಮೈಸೂರು ನಗರದ ಕಲಾಮಂದಿರದಲ್ಲಿ ಡಾ.ದೇಜಗೌ ಅಭಿನಂದನ ಸಮಿತಿಯವರು ಅಯೋಜಿಸಿದ್ದ ಶತಮಾನದ ಹೊಸ್ತಿಲಿನಲ್ಲಿ ನಡೋಜ ದೇಜಗೌ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
       ದೇ.ಜ.ಗೌ ಅವರು ತಮ್ಮ ಜೀವನದ ಉದ್ದಕ್ಕೂ ಕನ್ನಡ ಸಾಹಿತ್ಯ, ಕನ್ನಡದ ಬೆಳವಣಿಗೆಗೆ, ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಕೊಡಿಸಲು ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಗೆ ಅವರು ಸಲ್ಲಿಸಿರುವ ಸೇವೆಗೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕದ 6 ಕೋಟಿ ಜನರ ಪರವಾಗಿ ಗೌರವಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ  ಎಂದರು.
     ಮನುಷ್ಯ ಎಷ್ಟು ವರ್ಷಗಳ ಕಾಲ ಬದುಕುತ್ತಾನೆ ಎಂಬುವುದು ಮುಖ್ಯವಲ್ಲ. ಅವನು ಆರೋಗ್ಯವಾಗಿ ಕ್ರಿಯಾಶೀಲರಾಗಿ, ತನ್ನ ಮಾತೃಭೂಮಿ, ಭಾಷೆಗೆ ಸಲ್ಲಿಸುವ ಸೇವೆ ಮುಖ್ಯ. ದೇ.ಜವರೇಗೌಡ ಅವರ ಜೀವನ ಇಂದಿನ ಯುವಜನರಿಗೆ ಮಾದರಿಯಾಗಲಿ ಎಂದರು.
      ದೇಜಗೌ ಅವರು ಬಡತನದಲ್ಲೇ ಬೆಳೆದವರು, ಅವರ ತಂದೆ ತಾಯಿ ವಿದ್ಯಾಭ್ಯಾಸವನ್ನು ಪ್ರೋತ್ಸಹಿಸದೆ ಕುರಿ ಕಾಯುವಂತೆ ತಿಳಿಸಿದರು. ಆದರೂ ಕಷ್ಟದಲ್ಲೇ ವಿದ್ಯಾಭ್ಯಾಸ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಅವರ ಸಾಧನೆ ಎಲ್ಲರಿಗೂ ಮಾದರಿ. ಮಾನಸಗಂಗೋತ್ರಿಯಲ್ಲಿ ಕನ್ನಡ ಅಧ್ಯಯಾನ ಸಂಸ್ಥೆ ಬೆಳವಣಿಗೆಯಲ್ಲಿಯೂ ಇವರ ಶ್ರಮವಿದೆ ಎಂದರು.
     ಸಾಮಾಜದಲ್ಲಿರುವ ಮೂಡನಂಬಿಕೆಗಳು ದೂರವಾಗಬೇಕು. ಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಯವುದೇ ಹಣೆಬರಹ, ಪಂಚಾಂಗ ಹಾಗೂ ಜೋತಿಷ್ಯದಿಂದ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ. ವಿಜೃಂಭಣೆಯಿಂದ ಮಕ್ಕಳ ಮದುವೆ ಮಾಡಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದಂತಹ ಸರಳ ವಿವಾಹ, ಮಂತ್ರ ಮಾಂಗಲ್ಯ ಪದ್ಧತಿಯನ್ನು ಅನುಸರಿಸುವುದು ಸೂಕ್ತ ಎಂದರು.
       ಮೈಸೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಫ್.ಟಿ.ಆರ್.ಐ ಸಂಸ್ಥೆಯಲ್ಲಿ ಕನ್ನಡದ ಜನರಿಗೆ ಅಲ್ಲಿಯ ನಿರ್ದೇಶಕರು ತೊಂದರೆ ನೀಡುತ್ತಿರುವುದಾಗಿ ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೇ.ಜಗೌ ಅವರು ಮನವಿ ಸಲ್ಲಿಸಿದ್ದಾರೆ. ಸಿ.ಎಫ್.ಟಿ.ಆರ್.ಐ  ಕೇಂದ್ರ ಸರ್ಕಾರದ ಸಂಸ್ಥೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
     ಕನ್ನಡ ಭಾಷೆ ಹಾಗೂ ರಾಜ್ಯದ ಅಭಿವೃದ್ಧಿಯ ಕೆಲಸಕ್ಕೆ ಸರ್ಕಾರ ಸದಾ ಸಿದ್ಧವಿದ್ದು, ಈ ಬಗ್ಗೆ ನೀಡುವ ಸಲಹೆಗಳನ್ನು ಸ್ವೀಕರಿಸಲು ಸಿದ್ಧವಿರುವುದಾಗಿ ತಿಳಿಸಿದರು.
        ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಶಾಸಕ ವಾಸು, ಸೋಮಶೇಖರ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ರಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Saturday, 11 July 2015

ಜು. 12 ರಂದು ಮುಖ್ಯಮಂತ್ರಿಗಳಿಂದ ವಿ.ವಿ.ಶತಮಾನೋತ್ಸವ ಗೀತೆ ಲೋಕಾರ್ಪಣೆ

ಜು. 12 ರಂದು ಮುಖ್ಯಮಂತ್ರಿಗಳಿಂದ ವಿ.ವಿ.ಶತಮಾನೋತ್ಸವ ಗೀತೆ ಲೋಕಾರ್ಪಣೆ
ಮೈಸೂರು,ಜು.11- ಮೈಸೂರು ವಿಶ್ವ ವಿದ್ಯಾನಿಲಯ ಸ್ಥಾಪನೆಯಾಗಿ ಜುಲೈ 27ಕ್ಕೆ ನೂರನೇ ವರ್ಷಕ್ಕೆ ಕಾಲಿಡಲಿದೆ,  ಈ ಶುಭ ಸಂದರ್ಭವನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಉದ್ಘಾಟಿಸಿ, ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ತಿಳಿಸಿದರು.
  ಅವರು ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿ ಮಾತನಾಡುತ್ತಾ ಮೈ. ವಿ.ವಿ.ಯ ಶತಮಾನೋತ್ಸವದ ಅಂಗವಾಗಿ ಅಂಶಲೇಖರವರು ಬರೆದು, ಗೀತೆ  ರಚಿಸಿ, ಸಂಗೀತ ನೀಡಿರುವ ವಿ.ವಿ. ಶತಮಾನೋತ್ಸವ ಗೀತೆಯನ್ನು ಇದೇ 12ರಂದು  ಸಂಜೆ 6 ಗಂಟೆಗೆ ಮೈಸೂರು ಮಾನಸಗಂಗೋಂತ್ರಿಯ ಬಯಲು ರಂಗಮಂದಿರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
  ಈ ಗೀತೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು  ಪ್ರಾರಂಭವಾದಾಗಿನಿಂದ ಇಲ್ಲಿಯ ವರೆಗೆ ನೂರು ವರ್ಷಗಳಲ್ಲಿ ಸಾಧಿಸಿರುವ  ಸಾಧನೆಗಳ ಕುರಿತು ಗೀತೆಯ ರೂಪದಲ್ಲಿ ರಚಿಸಲಾಗಿದೆ. ಈ ಗೀತೆ ಇತರೆ  ವಿಶ್ವ ವಿದ್ಯಾನಿಲಯಗಳಿಗೆ ಮಾದರಿಯಾಗಿದ್ದು, ಮೈಸೂರಿನ ಮತ್ತು ಮೈವಿವಿಯ ಘನತೆಯನ್ನು ಹೆಚ್ಚಿಸಲಿದೆ, ಇಂತಹ ಸುಮಧುರವಾದ ಗೀತೆಯನ್ನು ಕನ್ನಡನಾಡಿನ ದೊರೆ  ಸಿದ್ದರಾಮಯ್ಯ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಷಯವೆಂದರು.
  ಮೈವಿವಿಯ ಶತಮಾನೋತ್ಸವದ ಅಂಗವಾಗಿ ವರ್ಷವಿಡೀ ಹಲವಾರು ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಜುಲೈ 27 ರಂದು ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ರಾಷ್ಟ್ರಪತಿಗಳು ಚಾಲನೆ ನೀಡಲಿದ್ದಾರೆ ಎಂದು ರಂಗಪ್ಪ ತಿಳಿಸಿದರು.
 ಈ ಶತಮಾನೋತ್ಸವದ ಅಂಗವಾಗಿ ಹಲವಾರು ಗಣ್ಯರಿಗೆ, ವಿದ್ವಾಂಸರಿಗೆ, ಸೈಂಟಿಸ್ಟ್ ಗಳಿಗೆ  ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಬೆಳವಣಿಗೆಗೆ ಕಾರಣರಾದ ಕೆಲವರನ್ನು ಗುರುತಿಸಿ ಅವರುಗಳನ್ನು ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ, ಸರ್.ಸಿ.ವಿ ರಾಮನ್, ವಿಶ್ವೇಶ್ವರಯ್ಯ, ಹಾಗೂ ಸಿ.ಎನ್. ರಾವ್ ಪ್ರಶಸ್ತಿಗಳನ್ನು ಆಯ್ದ ಗಣ್ಯರಿಗೆ ನೀಡಿ ಗೌರವಿಸಲಾಗುತ್ತದೆ ಎಂದು ನುಡಿದರು.
  ಮುಂದಿನ ನೂರು ವರ್ಷಗಳಲ್ಲಿ ಮೈವಿವಿಯನ್ನು ಮತ್ತಷ್ಟು ಬಲವರ್ಧನೆಗೊಳಿಸಿ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ಅಭಿವೃದ್ದಿಪಡಿಸಲು ಯೋಜನೆಗಳನ್ನು ಸಿದ್ದಪಡಿಸಿಕೊಂಡಿದೆ,  ಅದರಂತೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಲ್ಲಿ ತಂತ್ರಜ್ಞಾನ ಆಳವಡಿಸಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರುಗಳಿಂದಲೇ ದೇಶದ ಪ್ರಗತಿಗೆ ತಯಾರಿಪಡಿಸು ಪ್ರಯತ್ನ ನಮ್ಮದಾಗಿರುತ್ತದೆ, ಎಂದ ಅವರು ವಿದ್ಯಾಥಿಗಳಿಗೆ ಅದರಲ್ಲೂ ಹಾಸ್ಟಲ್‍ಗಳಲ್ಲಿ ತಂಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂಲಭೂತ ಕೊರತೆಗಳು ಎದ್ದು ಕಾಣುತ್ತಿವೆ ಇವುಗಳನ್ನು ಸರಿಪಡಿಸಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ವಿವಿ ಕೆಲಸ ಮಾಡಲಿದೆ ಎಂದರು.
  ಚಾಮುಂಡಿ ಬೆಟ್ಟದ ತಪ್ಪಲಲ್ಲಿ 20 ಎಕರೆ ಪ್ರದೇಶದಲ್ಲಿ ವಿವಿಯ ಕ್ಯಾಂಪಸ್ ರಚನೆ ಮಾಡಲಿದೆ, ಚಾಮರಾಜನಗರದಲ್ಲಿರುವ ಸ್ಯಾಟ್‍ಲೈಟ್ ಕೇಂದ್ರವನ್ನು ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನಾಗಿ ಪರಿವತಿಸಲಾಗುತ್ತದೆ ಎಂದು ಹೇಳಿದರಲ್ಲದೆ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ಶತಮಾನೋತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮಕ್ಕಾಗಿ ಕರ್ನಾಟಕ ಸರ್ಕಾರದಿಂದ 50 ಕೋಟಿ ಅನುದಾನ ಬರಲಿದೆ ಎಂದು ಹೇಳಿದರು.
  -------------------------------------------------

ದಲಿತ ಎಂಬ ಕಾರಣಕ್ಕೆ ಸಿ.ಎಫ್.ಟಿ.ಆರ್.ಐ ನಿರ್ದೇಶಕರ ವಿರುದ್ಧ ಕಿಡಿ
ಮೈಸೂರು,ಜು.11- ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಡುವ ಮೈಸೂರು ನಗರದ ಸಿ.ಎಫ್.ಟಿ.ಆರ್.ಐ (ಆಹಾರ ಸಂಶೋದನೆ ಮತ್ತು ತಯಾರಿಕಾ ತರಬೇತಿ ಕೇಂದ್ರ) ನಿರ್ದೇಶಕ ಪ್ರೊ. ರಾಮ ರಾಜ ಶೇಖರನ್ ರವರು ಒಬ್ಬ ದಲಿತ ಎಂಬ ಕಾರಣಕ್ಕಾಗಿ ಅವರ ಏಳಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಕನ್ನಡ ಪರ ಸಂಘಟನೆಗಳನ್ನು ಎತ್ತಿಕಟ್ಟಿ ಅವರ ವರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
 ಪ್ರೊ. ರಾಮರಾಜಶೇಖರನ್‍ರವರು ಮೂಲತಃ ತಮಿಳುನಾಡಿನವರಾಗಿದ್ದು,  ಇವರು ದಲಿತ  ಆದಿದ್ರಾವಿಡ ವರ್ಗಕ್ಕೆ  ಸೇರಿದವರಾಗಿರುತ್ತಾರೆ, ಇವರು ನವದೆಹಲಿಯ ಡಿಎಫ್.ಆರ್.ಎಲ್ ನ ಆಹಾರ ಸಂಶೋಧನೆ ಇಲಾಖೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದು, ಕಳೆದೆರಡು ವರ್ಷಗಳ ಹಿಂದೆಯಷ್ಟೇ ಮೈಸೂರಿನ ಸಿ.ಎಫ್.ಟಿ.ಆರ್.ಐ ನಿರ್ದೇಶಕರಾಗಿ ಇಲ್ಲಿಗೆ ಬಂದು  ಸೇವೆ ಸಲ್ಲಿಸುತಿದ್ದಾರೆ, ಇವರು ಅಧಿಕಾರ ವಹಿಸಿಕೊಂಡಾಗಿನಿಂದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಕೆಲವು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ,
 ನಮ್ಮ ಪತ್ರಿಕೆಯ ಪ್ರತಿನಿಧಿ ಅಲ್ಲಿನ ನೌಕರರನ್ನು ಸಂದರ್ಶಿಸಿ ನಿರ್ದೇಶಕರ ನಡಾವಳಿ ಬಗ್ಗೆ ವಿಚಾರಿಸಿದಾಗ 90 ಭಾಗ ನೌಕರರು ಇವರ ವಿರುದ್ಧ ಯಾವುದೆ ಮಾತನಾಡಿಲ್ಲ, ಬದಲಾಗಿ  ರಾಮರಾಜನ್ ಸಾರ್ ತುಂಬಾ ಒಳ್ಳೆಯವರು, ಅವರು ಬಂದಮೇಲೆ  ಸಂಸ್ಥೆಯಲ್ಲಿ ಉತ್ತಮ ಚಟುವಟಿಕೆಗಳು ನಡೆಯುತ್ತಿವೆ, ಅವರಿಂದ  ಕನ್ನಡಕ್ಕಾಗಲೀ, ಇಲ್ಲಿನ ನೌಕರರಿಗಾಗಲೀ ಯಾವುದೇ ತೊಂದರೆ ಆಗಿಲ್ಲ ಎಂಬ ಮಾತುಗಳು ಕೇಳಿಬಂದವು.
 ನಿರ್ದೇಶಕರು ಎಲ್ಲಾ ಭಾಷೆಗಳನ್ನು ಪ್ರೀತಿಸುತ್ತಾ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ   ಕನ್ನಡದ ಕಲೆ ಮತ್ತು ಸಂಸ್ಖøತಿ ಕಾರ್ಯಕ್ರಮಗಳಿಗೆ  ಹೆಚ್ಚು ಒತ್ತು ನೀಡುತ್ತಿದ್ದಾರೆ ಇವರಿಂದ ಕನ್ನಡಕ್ಕೆ ಯಾವುದೇ ರೀತಿಯ ಧಕ್ಕೆ ಆಗಿಲ್ಲ ಇದನ್ನರಿಯದ ಕೆಲವು ಕನ್ನಡ ಪರ ಸಂಘಗಳ ಕಾರ್ಯಕರ್ತರು, ಕೂಲಂಕುಶವಾಗಿ ಪರಿಶಿಲಿಸದೇ ಯಾರೋ ಹೇಳಿದ ಚಾಡಿ ಮಾತುಗಳನ್ನು ಕೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನೌಕರರು ಹೇಳುತ್ತಾರೆ.
 ಸಿ.ಎಫ್.ಟಿ.ಆರ್. ನಡೆದಿದ್ದಾರೂ ಏನು? ಅಲ್ಲಿ ಕೆಲಸಮಾಡುತ್ತಿರುವ  ಕೆಲವೇ ಬೆರಳೆಣಿಕೆಯ ನೌಕರರು ನಿರ್ದೇಶಕರ ಆದೇಶದಂತೆ ಕೆಲಸ ಮಾಡದೇ ಕಾಲಹರಣ ಮಾಡುವುದು, ಹಾಜರಾತಿ ಪುಸ್ತಕಕ್ಕೆ  ಸಹಿಹಾಕಿ ಎಲ್ಲಿಯೋ ಹೋಗಿ ಸುತ್ತಾಡಿಕೊಂಡು  ಬರುವುದು, ಕೆಲಸ ಮಾಡದೇ ಹೋತ್ಲಾ ಹೊಡೆದು, ಕಾಲಕಳೆದು ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವುದು, ರೌಡಿಗಳಂತೆ ವರ್ತಿಸುವುದು, ಇತರೆ ನೌಕರರಿಗೆ ಕಿರುಕುಳ ನೀಡುವುದು ಮುಂತಾದವುಗಳನ್ನು ಮಾಡುತ್ತಿದ್ದರು, ಈ ವಷಯ ನಿರ್ದೇಶಕರ ಗಮನಕ್ಕೆ  ಬಂದು ಅವರುಗಳಿಗೆ ಹಿಂದೊಮ್ಮೆ ಎಚ್ಚರಿಕೆ ನೀಡಿದ್ದರು, ಆದರೂ ಇದನ್ನೇ ಮುಂದುವರಿಸಿದ್ದರಿಂದ, ನಿರ್ದೇಶಕರು ಈ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ, ಇದರಿಂದಾಗಿ ಈ ನೌಕರರು ಒಬ್ಬ ದಲಿತ ವಿಜ್ಞಾನಿ ಹಾಗೂ ನಿರ್ದೇಶಕರ ಏಳೀಗೆ ಸಹಿಸಿಕೊಳ್ಳದೆ, ಸಿ.ಎಫ್.ಟಿ.ಆರ್.ಐ ನಿರ್ದೇಶಕರು ಕನ್ನಡ ವಿರೋಧಿ ಧೋರಣೆ  ಅನುಸರಿಸುತ್ತಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳನ್ನು ಎತ್ತಿಕಟ್ಟಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
  ಸಿಎಫ್‍ಟಿಆರ್‍ಐ ನಿರ್ದೇಶಕರಿಗೆ ಬೆಂಬಲ
 ಸಿ.ಎಫ್.ಟಿ.ಆರ್.ಐ ನಿದೇರ್ಶಕರ ಪರವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ಪರ ಸಂಘಟನೆಗಳು ನಿಂತ್ತಿದ್ದು, ರಾಮರಾಜ ಶೇಖರನ್‍ಗೆ ಬೆಂಬಲ ಸೂಚಿಸುವುದಾಗಿಯೂ, ಇಂತಹ ಢೋಂಗಿ ಪ್ರತಿಭಟನೆಗಳಿಗೆ  ಜನತೆ ಮನ್ನಣೆ ನೀಡಬಾರದೆಂದು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವೇದಿಕೆಯ ಉಪಾಧ್ಯಕ್ಷ ಸೋಮಯ್ಯ ಮಲೆಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನ ರೇಸ್‍ಕ್ಲಬ್ ಸ್ತಳಾಂತರಕ್ಕೆ ಶಾಸಕ ಸಾರಾ ಮಹೇಶ್ ಒತ್ತಾಯ

ಮೈಸೂರಿನ ರೇಸ್‍ಕ್ಲಬ್ ಸ್ತಳಾಂತರಕ್ಕೆ  ಶಾಸಕರ ಒತ್ತಾಯ
ಮೈಸೂರು,ಜು.11- ಶ್ರೀಮನ್ ಮಹಾರಾಜರ ಕಾಲದಲ್ಲಿ ಸ್ತಾಪಿತವಾದ,  ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ರೇಸ್‍ಕ್ಲಬ್ ಅನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಕೆ.ಆರ್. ನಗರ ಶಾಸಕ ಎಸ್.ಆರ್. ಮಹೇಶ್ ಸರ್ಕಾರವನ್ನು ಒತ್ತಾಯಿಸಿದರು.
  ಇಂದು ಪತ್ರಕತ್ರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರ ಬೃಹದ್ದಾಗಿ ಬೆಳೆಯುತ್ತಿದೆ, ಈ ರಸ್ತೆಯಲ್ಲಿ ವಾಹನ ದಟ್ಟಣಿ ಹೆಚ್ಚಾಗಿದೆ ಸಾವ್ಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ, ಈ ರಸ್ತೆಯಲ್ಲಿ ಅಪಘಾತಗಳೂ ಸಂಭವಿಸುವ ಸಾಧ್ಯತೆಗಳಿವೆ  ಆದ್ದರಿಂದ  ಇಲ್ಲಿನ ರೇಸ್ ಕೋರ್ಸ್ ಅನ್ನು ಬೇರೆ ಕಡೆ ವರ್ಗಾಯಿಸಿ  ಸುಗಮ ವಾಹನಸಂಚಾರಕ್ಕೆ ಅನುಮಾಡಿಕೊಡಬೇಕಾಗಿ ಕೋರಿದರು.
  2016ಕ್ಕೆ ಇದರ ನವೀಕರಣ ಅವಧಿ ಮುಗಿಯಲಿದೆ, ಆನಂತರ ಗುತಿಗೆ  ನವೀಕರಣ ಬೇಡ, ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರಲ್ಲದೆ, 2001 ರಿಂದ 2006 ರ ವರೆಗೆ ರೇಸ್‍ಕ್ಲಬ್ ನಡೆಸಲು ಗುತ್ತಿಗೆ ತೆಗೆದು ಕೊಂಡಿತ್ತು ಅದರ ಅವಧಿ ಮುಗಿದ ಕಾರಣ, ಈ ಜಾಗ ಲೋಕೋಪಯೋಗಿ ಇಲಾಖೆಗೆ ಸೆರಿದ ಕಾರಣ,  ರೇಸ್ ಕ್ಲಬ್ ಹಾಗೂ ಗಾಲ್ಫ್ ಕ್ಲಬ್ ನಡುವೆ ಕಿತ್ತಾಟ ನಡೆದಿತ್ತು, ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತರವರು ಕಾನೂನು ಬಾಹಿರ ಎಂದು ಪರಿಗಣಿಸಿ ಮರು ಗುತ್ತಿಗೆಯನ್ನು ತಡೆಹಿಡಿದಿದ್ದರು, ನಂತರ ಪ್ರಭಾವಿಗಳು ಅಂದಿ ಮುಖ್ಯಮಂತ್ರಿ ಹಾಗೂ  ಸಚಿವರುಗಳ ಪ್ರಬಾವ ಬೆಳೆಸಿ  ಮಾಮೂಲಿನಂತೆ  ರೇಸ್ ಕ್ಲಬ್ ನಡೆಸಲು  ಅನುಮತಿ ಕೋರಿ ತಡೆ ಆಜ್ಞೆ  ತೆರವಯಗೊಳಿಸಿ ರೇಸ್ ನಡೆಸಲು ಪ್ರಾರಂಭಿಸಿದರು.
ಮತ್ತು ನವೀಕರಣಕ್ಕೆ 2.75 ಲಕ್ಷ ಕಟ್ಟಿ ಗುತ್ತಿಗೆ ಪಡೆದು 35 ಕೋಟಿ ವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ , ಕಳೆದ 30 ವರ್ಷಗಳಲ್ಲಿ ಕೇವಲ 12.45 ಲಕ್ಷ ಮಾತ್ರ ಕಟ್ಟಿದ್ದಾರೆ ಇನ್ನೂ 32 ಕೋಟಿ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಗುತ್ತಿಗೆದಾರರಿಂದ  ವಸೂಲಿಮಾಡಬೇಕು, ಮತ್ತು ಅದಕ್ಕೆ ಶೆ. 2ರಷ್ಟು ಬಡ್ಡಿ ಸೇರಿಸಿ ವಸೂಲಿ ಮಾಡಿ ಸರ್ಕಾರದ ಬೊಕ್ಕಸ ತುಂಬಿಸಬೆಕು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಮದು ಹೇಳಿದರು.
  ಮತ್ತು ಮುಂದೆ ಯಾರಿಗೂ  ಗುತ್ತಿಗೆ ನೀಡದೇ  ರೇಸ್ ಕೋರ್ಸ್ ಅನ್ನು  ಬೇರೆಕಡೆಗೆ ಸ್ತಳಾಂತರಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿಮಾಡಿದರು.
 ಪತ್ರಿಕಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ದ್ವಾರಕೀಶ್, ಚಿನ್ನಿರವಿ, ಸೋಮೇಸ್ ಉಪಸ್ಥಿತರಿದ್ದರು. 

Friday, 10 July 2015

ಮೈಸೂರು ಸುದ್ದಿಗಳು

ಹುಣಸೂರು ತಾಲ್ಲೂಕಲ್ಲಿ ತಂಬಾಕು ಬೆಳೆಗಾರ ಆತ್ಮಹತ್ಯೆ
ಮೈಸೂರು, ಜು. 10- ತಂಬಾಕು ಬೆಳೆಗಾರನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲ್ಲೂಕಿನ ಮೂಡಲು ಕೊಪ್ಪಲಿನ ಗ್ರಾಮದಲ್ಲಿ ಇಂದು ಬೆಳಿಗ್ಗೆ ಜರುಗಿದೆ.
  ಗ್ರಾಮವಾಸಿ ಸಣ್ಣಸ್ವಾಮಿ ಗೌಡ (42) ಎಂಬುವರೇ  ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಮೃತ ಸಣ್ಣಸ್ವಾಮಿಗೌಡ ಬೆಳೆಗಾಗಿ 4 ಲಕ್ಷ ರೂ. ಸಾಲ ಮಾಡಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
 ಈತನ  ಆತ್ಮಹತೆÀ ಬಗ್ಗೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಹುಣಸೂರು ತಾಲ್ಲೂಕಿನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದು, ಮತ್ತೂಬ್ಬ ರೈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಂಜನಗೂಡು ತಾಲ್ಲೂಕಿನಲ್ಲಿ ರೈತ ವಿಷ ಸೇವಿಸಿ  ಆತ್ಮಹತ್ಯೆ
ಮೈಸೂರು, ಜು.10-ಹುಣಸೂರು ತಾಲ್ಲೂಕಿನ ಕೆಂಪ್ಪಮ್ಮನ ಹೂಸೂರು ಗ್ರಾಮದ ರೈತ ಸ್ವಾಮೇಗೌಡ (42) ಜಮೀನಿನಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 ತಂಬಾಕು ಬೆಳೆಗಾರನಾದ ಮೃತ ಸ್ವಾಮೇಗೌಡ 5 ಲಕ್ಷ ರೂ. ಗಳ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟಕ್ಕೆ ಈತ ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗಿದೆ.
ಈ ಬಗ್ಗೆ ಬಿಳಿಕೆರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹುಣಸೂರು ತಾಲ್ಲೂಕಿನ ಚನ್ನಸೋಗೆಯ ಸಣ್ಣಪ್ಪ (40) ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಣ್ಣಪ್ಪ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಇವರೂ ಸಹ 5.5 ಲಕ್ಷ ರೂ.ಗಳ ಸಾಲ ಮಾಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಂಜನಗೂಡಿನಲ್ಲಿ ರೈತ ಆತ್ಮಹತ್ಯೆ
ಮೈಸೂರು,ಜು.10- ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 ತಾಲ್ಲೂಕಿನ ಹುರಾ ಗ್ರಾಮದ ವಾಸಿ ಮಹದೇವನಾಯ್ಕ (50)  ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಸಾಲಗಾರರ ಕಾಟ ತಾಳಲಾರದೆ ಸಾವಿಗೆ ಶರಣಾಗಿದ್ದಾರೆ.
   ಕಳೆದ 2 ದಿನಗಳ ಹಿಂದೆ ಮಹದೇವನಾಯ್ಕ ವಿಷ ಸೇವಿಸಿದ್ದರು. ಇವರನ್ನು ನಗರದ ಕೆ. ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
2 ಎಕರೆ ಪ್ರದೇಶದಲ್ಲಿ ಮೃತ ಮಹದೇವನಾಯ್ಕ ಹತ್ತಿ ಬೆಳೆ ಬೆಳೆದಿದ್ದರು.  ಬೆಲೆ ಕೈ ಕೊಟ್ಟಿದ್ದರಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹತ್ತಿ ಬೆಳೆ ಬೆಳೆಯಲು ಮಹದೇವನಾಯ್ಕ 2.5 ಲಕ್ಷ ರೂ. ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ.
 ಹುಲ್ಲಹಳ್ಳಿ ಪೊಲೀರು ಈ ಬಗ್ಗೆ ದೂರನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆನೆ ತುಳಿದು ರೈತ ಸಾವು
  ಮೈಸೂರು , ಜು. 10- ರೈತನೊಬ್ಬ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ನೆಮ್ಮನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
 ವೆಂಕಟೇಶ್ (35) ಆನೆ ಧಾಳಿಯಿಂದ ಸಾವನ್ನಪ್ಪಿರುವ ರೈತ.
ರಾತ್ರಿ ಜಮೀನಿಗೆ ನೀರು ಹಾಯಿಸಲು ಹೋದಾಗ ಈತನ ಮೇಲೆ ಆನೆ ದಾಳಿ ಮಾಡಿ ತುಳಿದು ಸಾಯಿಸಿದೆ.
  ವೆಂಕಟೇಶ್ ತನ್ನ ಜಮೀನಿಗೆ ನೀರು ಹಾಯಿಸಲು ಹೊಲಕ್ಕೆ ಹೋಗಿದ್ದಾಗ ಜಮೀನಿಲ್ಲಿ ಮೇವುತಿನ್ನಲು ಬಂದಿದ್ದ ಕಾಡಾನೆ ಈತನನ್ನು ತುಳಿದು ಸಾಯಿಸಿದೆ , ಇಂಉ ಬೆಳಿಗ್ಗೆ ಜಮೀನಿನಲ್ಲಿ ವೆಂಕಟೇಶ್ ಸತ್ತುಬಿದ್ದಿದನ್ನು ಕಂಡ ಗ್ರಾಮಸ್ತರು  ಗಾಬರಿಗೊಂಡು ಆತಂಕವ್ಯಕ್ತಪಡಿಸಿ ಆರಣ್ಯ ಇಲಾಖೆ ಅಧಿಕಾರಿಗಳಿಗೆ  ವಿಷಯ ತಿಳಿಸಿದ್ದಾರೆ ಸ್ಥಳಕ್ಕಾಗಮಿಸಿದ ಸರಗೂರು ಪೊಲೀಸರು ಹಾಗೂ ಅರಣ್ಯ ಇಲಾಖೆ ಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾg.É ಈ ಘಟನೆಯಿಮದಾಗಿ ಗ್ರಾಮದ ವಾಸಿಗಳಲ್ಲಿ ಆತಂಕದ ವಾತಾವರಣ ಮನೆಮಾಡಿದೆ.

Thursday, 9 July 2015

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ-ಜಿಲ್ಲಾ ಪಂಚಾಯತ್ ಸಿಇಒ.ರೋಹಿಣಿ

 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ

ಮಂಡ್ಯ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣಾಭಿವೃದ್ಧಿಗಾಗಿ ರೂಪಿಸಿರುವ 15 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಯಶಸ್ವಿಯಾಗಿದ್ದು ಗಮನ ಸೆಳೆದಿದೆ.
`ಜನಸ್ನೇಹಿ’ ಪರಿಕಲ್ಪನೆಯ ವ್ಯಕ್ತಿಗತ ಕಾಮಗಾರಿಗಳು, ಕುರಿ/ದನದ ದೊಡ್ಡಿ, ರೈತರ ಒಕ್ಕಣೆ ಕಣ, ನಮ್ಮ ಹೊಲ-ನಮ್ಮ ದಾರಿ, ಆಟದ ಮೈದಾನ, ಮನೆಗೊಂದು ಶೌಚಾಲಯ, ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿ `ಪ್ರಗತಿ ಪಥ’ದಲ್ಲಿ ಮುನ್ನಡೆದಿದೆ.
2014-15ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಡಿ ಜಾರಿ ಮಾಡಿದ ಅಭಿವೃದ್ಧಿ ಕಾಮಗಾರಿಗಳು ಹಾಗೂ ರೈತರ ಒಕ್ಕಣೆ ಕಣ, ಮನೆಗೊಂದು ಶೌಚಾಲಯ ಮತ್ತು ಕುಡಿಯುವ ನೀರಿನ ಮರುಪೂರಣ ಘಟಕಗಳ ನಿರ್ಮಾಣದಲ್ಲಿ `ಗುರಿ ಮೀರಿದ ಸಾಧನೆ’ ಆಗಿದೆ. ಕುರಿ/ದನದ ದೊಡ್ಡಿ, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ರಾಜೀವ್‍ಗಾಂಧಿ ಸೇವಾ ಕೇಂದ್ರ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲೂ ಗಮನಾರ್ಹ ಪ್ರಗತಿ ಸಾಧಿsಸಲಾಗಿದೆ.
69,842 ಕುಟುಂಬಗಳಿಗೆ ಉದ್ಯೋಗ
ಜಿಲ್ಲೆಯಲ್ಲಿ, 2015ರ ಮಾರ್ಚ್ ತಿಂಗಳಾಂತ್ಯದವರೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2,29,208 ಜಾಬ್‍ಕಾರ್ಡ್‍ಗಳನ್ನು ವಿತರಿಸಿದ್ದು, 69,842 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 14.64 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ.
2013-14ನೇ ಸಾಲಿನಲ್ಲಿ ಇದೇ ಯೋಜನೆಗಳಡಿ (15 ಅಂಶಗಳ ಕಾರ್ಯಕ್ರಮ) 17,299 ಕಾಮಗಾರಿಗಳನ್ನು ಕೈಗೊಂಡು 664.95 ಲಕ್ಷ ರೂಪಾಯಿ ವ್ಯಯಿಸಲಾಗಿತ್ತು. ಆದರೆ, 2014-15 ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳ ಸಂಖ್ಯೆ 46,164ಕ್ಕೆ ಏರಿಕೆಯಾಗಿದ್ದು, ರೂ. 1,553.31 ಲಕ್ಷ ವೆಚ್ಚ ಮಾಡಲಾಗಿದೆ.

ತೋಟಗಾರಿಕೆ ಇಲಾಖೆಯಿಂದ ತೆಂಗು (303 ಹೆಕ್ಟೇರ್), ನುಗ್ಗೆ (4.4 ಹೆಕ್ಟೇರ್), ಮಾವು (12 ಹೆಕ್ಟೇರ್) ಹಾಗೂ ಸಪೋಟಾ (0.4 ಹೆಕ್ಟೇರ್) ಬೆಳೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 899 ಕಾಮಗಾರಿಗಳು ಪೂರ್ಣಗೊಂಡಿದ್ದು 194 ಲಕ್ಷ ರೂ. ವ್ಯಯಿಸಲಾಗಿದೆ. 23 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ರೇಷ್ಮೆ ಇಲಾಖೆಯಿಂದ ಹಿಪ್ಪನೇರಳೆ, ನರ್ಸರಿ ಮತ್ತು ಇಂಗು ಗುಂಡಿ ನಿರ್ಮಾಣದ 93 ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, 32.35 ಲಕ್ಷ ರೂ. ಖರ್ಚು ಮಾಡಲಾಗಿದೆ. ಅರಣ್ಯ ಇಲಾಖೆಯು 4,195 ಕಾಮಗಾರಿಗಳನ್ನು ಕೈಗೊಂಡು, 522.07 ಲಕ್ಷ ರೂ. ವೆಚ್ಚ ಮಾಡಿದೆ. ಇದರಲ್ಲಿ 60 ಕಿ.ಮೀ ರಸ್ತೆ ಬದಿ, ರೈತರ ಜಮೀನು, ಶಾಲೆ, ಸರ್ಕಾರಿ ಕಚೇರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಆವರಣದಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಒತ್ತು ನೀಡಿದ್ದು ಹಸಿರುಕರಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.

1 ಲಕ್ಷ ಶೌಚಾಲಯ ನಿರ್ಮಾಣ
ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಆಂದೋಲನ ಪ್ರಾರಂಭವಾದ ಒಂದು ವರ್ಷದ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಶೌಚಾಲಯ ನಿರ್ಮಿಸಲಾಗಿದೆ. ನಿರ್ಮಲ ಭಾರತ ಅಭಿಯಾನ ಮತ್ತು ಉದ್ಯೋಗ ಖಾತ್ರಿ ಯೋಜನೆ ಒಗ್ಗೂಡಿಸುವಿಕೆಯಲ್ಲಿ 38,658 ಶೌಚಾಲಯಗಳನ್ನು (2014ರ ಅ. 1ರವರೆಗೆ) ನಿರ್ಮಿಸಲಾಗಿದೆ.
ಹಾಗೇ, 930 ಕುರಿ/ದನದ ದೊಡ್ಡಿ ಕಾಮಗಾರಿಗಳು ಪೂರ್ಣಗೊಂಡಿದ್ದು, 28 ಪ್ರಗತಿ ಹಂತದಲ್ಲಿವೆ. ಇದಕ್ಕಾಗಿ 22.20 ಲಕ್ಷ ರೂ. ವ್ಯಯಿಸಲಾಗಿದೆ. 88 ರೈತರ ಒಕ್ಕಣೆ ಕಣ ನಿರ್ಮಾಣಕ್ಕಾಗಿ 20 ಲಕ್ಷ ರೂ. ಖರ್ಚು ಮಾಡಲಾಗಿದೆ. 413 ಆಟದ ಮೈದಾನಗಳು ಪೂರ್ಣಗೊಂಡಿದ್ದು, 10 ಪ್ರಗತಿ ಹಂತದಲ್ಲಿವೆ. ಒಟ್ಟು 26.30 ಲಕ್ಷ ರೂ. ವೆಚ್ಚ ಮಾಡಲಾಗಿದೆ. 213 ಸ್ಮಶಾನಗಳನ್ನು ಅಭಿವೃದ್ಧಿಯಾಗಿದ್ದು, 12 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಒಟ್ಟು 11.35 ಲಕ್ಷ ರೂ ಭರಿಸಲಾಗಿದೆ. 17 ರಾಜೀವ್ ಗಾಂಧಿ ಸೇವಾ ಕೇಂದ್ರಗಳ ಕಾಮಗಾರಿ ಪೂರ್ಣವಾಗಿದ್ದು, 18 ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 55.45 ಲಕ್ಷ ರೂ. ವ್ಯಯಿಸಲಾಗಿದೆ.
ಪ್ರಗತಿಯ `ಹಾದಿ’ಯಲ್ಲಿ...!
ರೈತರ ಹೊಲ, ಗದ್ದೆ, ತೋಟ-ಮನೆಗಳನ್ನು ಬೆಸೆಯುವ `ನಮ್ಮ ಗ್ರಾಮ-ನಮ್ಮ ದಾರಿ’ ಯೋಜನೆಯಡಿ 28 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 28.63 ಲಕ್ಷ ರೂ. ಬಳಸಲಾಗಿದೆ. `ನಮ್ಮೂರ ಕೆರೆ’ ಯೋಜನೆಯಡಿ 64 ಕೆರೆಗಳನ್ನು ಪುನಶ್ಚೇತನ ಮಾಡಲಾಗಿದೆ. ಎಸ್‍ಸಿ/ಎಸ್‍ಟಿ, ಸಣ್ಣ/ಅತಿಸಣ್ಣ ಹಿಡುವಳಿದಾರರು ಹಾಗೂ ಇತರೆ ಅರ್ಹ ವೈಯಕ್ತಿಕ ಫಲಾನುಭವಿಗಳ ಜಮೀನಿನಲ್ಲಿ 41 ಭೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು 32.78 ಲಕ್ಷ ರೂ. ವ್ಯಯಿಸಲಾಗಿದೆ.
ಹಸಿರು `ಅಭಿವೃದ್ಧಿ’ ಪಥ
ಜಿಲ್ಲೆಯ ಒಣಭೂಮಿ ಪ್ರದೇಶದ ಬರೋಬ್ಬರಿ 60 ಕಿ.ಮೀ. ಉದ್ದದ ರಸ್ತೆ ಇಕ್ಕೆಲಗಳಲ್ಲಿ ತೇಗ, ಸಿಲ್ವರ್, ಹೆಬ್ಬೇವು, ರಕ್ತಚಂದನ, ಬೇವು, ಆಲ, ಶ್ರೀಗಂಧ ಸೇರಿದಂತೆ ನಾನಾ ಜಾತಿಯ ಗಿಡಗಳನ್ನು ನೆಡುವ ಮೂಲಕ ಹಸಿರುಕರಣಕ್ಕೂ ಒತ್ತು ನೀಡಲಾಗಿದೆ. ಪ್ರತಿ ಕಿ.ಮೀ. ಉದ್ದದಲ್ಲಿ ಸುಮಾರು 200 ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಒಟ್ಟು 8,293 ಮಾನವ ಉದ್ಯೋಗ ದಿನಗಳು ಸೃಜನೆ ಆಗಿದೆ.
ಐಇಸಿ ಚಟುವಟಿಕೆಗಳು
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವ್ಯಾಪಕ ಪ್ರಚಾರಕ್ಕಾಗಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ವಿಭಾಗದಿಂದ ಒಟ್ಟು 10.37 ಲಕ್ಷ ರೂ. ವ್ಯಯಿಸಲಾಗಿದೆ. ಯೋಜನೆ ಕುರಿತ ಮಾಹಿತಿ, ಉದ್ಯೋಗ ಪಡೆದ ಫಲಾನುಭವಿಗಳ ವಿವರ, ರೋಜ್‍ಗಾರ್ ದಿವಸಗಳ ಮಾಹಿತಿಗಾಗಿ ಇಷ್ಟೂ ಹಣವನ್ನು ಗೋಡೆ ಬರಹಕ್ಕಾಗಿ ಬಳಸಲಾಗಿದೆ.
ಗ್ರಾಮೀಣಾಭಿವೃದ್ಧಿಗಾಗಿ ರೂಪಿಸಿರುವ 21 ಅಂಶಗಳ ಕಾರ್ಯಕ್ರಮಗಳನ್ನು (2015-16ನೇ ಸಾಲಿನಿಂದ ಹೊಸದಾಗಿ 6 ಯೋಜನೆಗಳನ್ನು ಸೇರ್ಪಡೆ ಮಾಡಲಾಗಿದೆ) 2015-16ನೇ ಸಾಲಿನಲ್ಲೂ ಯಶಸ್ಸಿಯಾಗಿ ಜಾರಿಗೊಳಿಸಲು ಮಂಡ್ಯ ಜಿಲ್ಲಾ ಪಂಚಾಯತ್ ಗುರಿ ನಿಗದಿಪಡಿಸಿಕೊಂಡಿದ್ದು, ಮುನ್ನಡೆದಿದೆ.

“2015-16ನೇ ಸಾಲಿನಲ್ಲೂ 21 ಅಂಶಗಳ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. 50 ಸಾವಿರ ಕುರಿ/ದನದ ದೊಡ್ಡಿ, ವೈಯಕ್ತಿಕ ಶೌಚಾಲಯದ ಸುತ್ತ 50 ಸಾವಿರ ಗಿಡ ನೆಡುವಿಕೆ, 5 ಸಾವಿರ ಇಂಗು ಗುಂಡಿ ನಿರ್ಮಾಣ, ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ 90 ಮಾನವ ಉದ್ಯೋಗ ದಿನಗಳ ಸೃಜನೆ ಸೇರಿದಂತೆ ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಜಾರಿಗೆ ಪ್ರಥಮ ಆದ್ಯತೆ ನೀಡಿದ್ದು, ಸಮಗ್ರ ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇವೆ”
- ರೋಹಿಣಿ ಸಿಂಧೂರಿ, ಸಿಇಒ, ಜಿಲ್ಲಾ ಪಂಚಾಯತ್, ಮಂಡ್ಯ

Wednesday, 8 July 2015

ಸಾಮೂಹಿಕ ವಿವಾಹವನ್ನು ಪ್ರೋತ್ಸಹಿಸಿ: ಸಿ.ಶಿಖಾ

ಸಾಮೂಹಿಕ ವಿವಾಹವನ್ನು ಪ್ರೋತ್ಸಹಿಸಿ: ಸಿ.ಶಿಖಾ
 
 ಮೈಸೂರು,ಜು.08.ಮದುವೆ ಸಮಾರಂಭವನ್ನು ಆದ್ಧೂರಿಯಾಗಿ ಆಯೋಜಿಸಲು 5 ರಿಂದ 6 ಲಕ್ಷ  ಹಣ ಖರ್ಚು ಮಾಡುತಾರೆ ಬಡವರು ಸಹ ಅದ್ಧೂರಿ ಮದುವೆಯಿಂದ ಆಕರ್ಷಿತರಾಗಿ ತಮ್ಮ ಮಕ್ಕಳಿಗೂ ಸಹ ಅದ್ಧೂರಿಯಾಗಿ ಮದುವೆ ಮಾಡಲು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯುತ್ತಾರೆ. ಬಡವರು ಸಾಲ ಪಡೆದು ಮಕ್ಕಳ ಮದುವೆ ಮಾಡುವುದನ್ನು ತಪ್ಪಿಸಲು ಸಾಮೂಹಿಕ ಮದುವೆಯನ್ನು ಪ್ರೋತ್ಸಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದರು.
     ಅವರು ಇಂದು ಸರ್ಕಾರಿ ಅತಿಥಿ ಗೃಹದಲ್ಲಿ ಆಯೋಜಿಸಲಾಗಿದ್ದ ಕಂದಾಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಬೇಕಾಗುವ ಸಿದ್ಧತೆಗಳನ್ನು ಎಲ್ಲಾ ತಾಲ್ಲೂಕಿನ ತಹಶೀಲ್ದಾರ್‍ಗಳು ಮಾಡಿಕೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಇಲಾಖಾ ಸಮುದಾಯ ಭವನವನ್ನು ಉಚಿತವಾಗಿ ಪಡೆಯಬಹುದು. ಮುಜರಾಯಿ ಇಲಾಖೆಯಲ್ಲಿರುವ  ಪುರೋಹಿತರನ್ನು ಮದುವೆ ಮಾಡಿಸಲು ನಿಯೋಜಿಸಿಕೊಳ್ಳಬಹುದು. ಕಾರ್ಖನೆ ಮಾಲೀಕರ ಸಭೆ ಕರೆದು ಆಯೋಜಿಸುವ ಸಾಮೂಹಿಕ ಮದುವೆಗೆ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡಬಹುದು ಎಂದರು.
     ರೈತರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾಡಳಿತದ ಬಳಿ ಬರುವುದು ತಪ್ಪಬೇಕು. ಅವರ ಸಮಸ್ಯಗಳು ತಾಲ್ಲೂಕು, ಹೋಬಳಿ ಮಟ್ಟದಲ್ಲಿಯೇ ಪರಿಹಾರವಾಗುವಂತಾಗಬೇಕು. ತಹಶೀಲ್ದಾರ್‍ಗಳು ತಾಲ್ಲೂಕು ಮಟ್ಟದಲ್ಲಿ ರೈತರ ಸಭೆಗಳನ್ನು ಆಯೋಜಿಸಬೇಕು. ಸಭೆಯಲ್ಲಿ ರೈತರಿಗೆ ಸರ್ಕಾರ ನೀಡುವ ಎಲ್ಲಾ ಯೋಜೆನೆಗಳ ಬಗ್ಗೆ ತಿಳಿಸಿ ಎಂದರು.
     ರೈತರು ಆತ್ಮಹತ್ಯೆ  ಅಥವಾ ಮರಣ ಹೊಂದಿದಾಗ ಅವರಿಗೆ  ಕಾನೂನು ರೀತ್ಯ ಪರಿಹಾರ ಹಣ ಒದಗಿಸುವುದು ಮಾತ್ರ ಕಂದಾಯ ಇಲಾಖೆ ಕೆಲಸವಲ್ಲ ಇದರ ಜೊತೆಗೆ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಹೆಚ್ಚಿನ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಿ ಒತ್ತಡ ಏರಿ ಸಾಲ ವಸೂಲಾತಿ ಮಾಡುತ್ತಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ರೈತರ ಸಮಸ್ಯೆಯ ಮೂಲ ತಿಳಿದು ಪರಿಹರಿಸುವುದು ಮುಖ್ಯ ಎಂದರು.
    ರೈತ ಸಂಪರ್ಕ ಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಯದಲ್ಲಿ ರೈತರು ತಮ್ಮ ಸಮಸ್ಯಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
    ಹೆಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು- ಸೋಮವಾರ, ಕಸಬಾ-ಮಂಗಳವಾರ, ಅಂತರಸಂತೆ-ಬುಧವಾರ, ಕಂದಲಿಕೆ-ಗುರುವಾರ,ಸರಗೂರು- ಶುಕ್ರವಾರ, ಹುಣಸೂರು ತಾಲ್ಲೂಕಿನ ಗಾವಡಗೆರೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಹನಗೂಡು-ಬುಧವಾರ, ಕಸಬಾ-ಗುರುವಾರ, ಬಿಳಿಕೆರೆ-ಶನಿವಾರ, ಕೆ.ಆರ್.ನಗರ ತಾಲ್ಲೂಕಿನ ಮಿರ್ಲೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಹೊಸಅಗ್ರಹಾರ-ಮಂಗಳವಾರ, ಚುಂಚನಕಟ್ಟೆ-ಬುದವಾರ, ಹೆಬ್ಬಾಳ್-ಗುರುವಾರ, ಕಸಬಾ-ಶುಕ್ರವಾರ, ಸಾಲಿಗ್ರಾಮ-ಶನಿವಾರ, ಮೈಸೂರು ತಾಲ್ಲೂಕಿನ ಜಯಪುರ ರೈತಸಂಪರ್ಕ ಕೇಂದ್ರದಲ್ಲಿ  ಅಧಿಕಾರಿಗಳು-ಸೋಮವಾರ, ವರುಣ-ಮಂಗಳವಾರ, ಇಲವಾಲ-ಬುಧವಾರ, ಕಸಬಾ-ಗುರುವಾರ, ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯಛತ್ರ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಬಿಳಿಗೆರೆ-ಮಂಗಳವಾರ, ದೊಡ್ಡಕವಲಂದೆ-ಬುಧವಾರ, ಹುಳ್ಳಹಳ್ಳಿ-ಗುರುವಾರ, ಕಸಬಾ-ಶುಕ್ರವಾರ, ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಮಂಗಳವಾರ, ಹಾರನಹಳ್ಳಿ-ಬುಧವಾರ, ಬೆಟ್ಟದಪುರ-ಶುಕ್ರವಾರ, ಕಸಬಾ-ಶನಿವಾರ, ಟಿ.ನರಸೀಪುರ ತಾಲ್ಲೂಕಿನ ಸೋಸಲೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಕಸಬಾ-ಮಂಗಳವಾರ, ಮೂಗೂರು-ಬುಧವಾರ, ಬನ್ನೂರು-ಗುರುವಾರ ಹಾಗೂ ತಲಕಾಡಿನಲ್ಲಿ ಶುಕ್ರವಾರ ಹಾಜರಿರುತ್ತಾರೆ.  ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಬಹುದಾಗಿದೆ ಎಂದರು.
    ತಾಲ್ಲೂಕು ಮಟ್ಟ ಹಾಗೂ ಹೋಬಳಿ ಕೇಂದ್ರಗಳಲ್ಲಿ ಸ್ಟೋರ್‍ಹೌಸ್‍ಗಳನ್ನು ಪ್ರಾರಂಭಿಸಲು ಅವಶ್ಯಕವಿರುವ ಭೂಮಿಯನ್ನು ಗುರುತಿಸಿ ತಹಶೀಲ್ದಾರ್ ಹಾಗೂ  ಕಂದಾಯ ನಿರೀಕ್ಷಕರು ವರದಿ ನೀಡಬೇಕು. ತಾಲ್ಲೂಕು ಮಟ್ಟದಲ್ಲಿ ನಿರ್ಮಿಸಲು 5 ಎಕರೆ ಭೂಮಿ ಹಾಗೂ ಹೋಬಳಿ ಮಟ್ಟದಲ್ಲಿ ನಿರ್ಮಿಸಲು 2 ಎಕರೆ ಭೂಮಿಯ ಅವಶ್ಯಕತೆಯಿರುತ್ತದೆ. ಸ್ಟೋರ್‍ಹೌಸ್‍ಗಳಲ್ಲಿ ರೈತರು ತಾವು ಬೆಳದಂತಹ ಬೆಳೆಗಳನ್ನು ಸಂಗ್ರಹಿಸಿ ಉತ್ತಮ ಬೆಲೆ ದೊರೆತ ಸಂದರ್ಭದಲ್ಲಿ ಮಾರಾಟ ಮಾಡಬಹುದು ಎಂದರು.
     ತಾಲ್ಲೂಕು ಮಟ್ಟದಲ್ಲೂ ಹಾಪ್‍ಕಾಮ್ಸ್: ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ತಾಲ್ಲೂಕು ಮಟ್ಟದಲ್ಲಿಯೂ ಹಾಪ್‍ಕಾಮ್ಸ್ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದಾಗ ತೋಟಗಾರಿಕ ಇಲಾಖೆ ಉಪನಿರ್ದೇಶಕರು ಮಾರಾಟ ಮಳಿಗೆಗಳ ವ್ಯವಸ್ಥೆ ಮಾಡಿಕೊಟ್ಟಲ್ಲಿ ಹಾಪ್‍ಕಾಮ್ಸ್‍ನ್ನು ತಾಲ್ಲೂಕು ಮಟ್ಟದಲ್ಲಿಯೂ ಪ್ರಾರಂಭಿಸಲಾಗುವುದು ಎಂದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅರ್ಚನಾ, ಮೈಸೂರು ಉಪವಿಭಾಗಾಧಿಕಾರಿ ಸೈಯಿದಾ ಆಯಿಷ್, ಹುಣಸೂರು ಉಪವಿಭಾಗಾಧಿಕಾರಿ ಜಗದೀಶ್, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಜುಲೈ 22 ರಂದು ಜಿ.ಪಂ. ಸಾಮಾನ್ಯ ಸಭೆ
     ಮೈಸೂರು,ಜು.08.ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜೂನ್ 30 ರಂದು ಕರೆಯಲಾಗಿದ್ದ ಸಾಮಾನ್ಯ ಸಭೆ ಕೋರಂ ಅಭಾವದಿಂದ ಮುಂದೂಡಲ್ಪಟ್ಟ ಸಾಮಾನ್ಯ ಸಭೆ ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .
    ಜುಲೈ 10 ರಂದು ಸಿನಿಮಾ ಸಮಯದಲ್ಲಿ ಹರಿವು ಚಿತ್ರ ಪ್ರದರ್ಶನ
       ಮೈಸೂರು,ಜು.08.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಮೈಸೂರು ಫಿಲ್ಮ್ ಸೊಸೈಟಿ, ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯದಲ್ಲಿ ಜುಲೈ 10 ರಂದು ಶುಕ್ರವಾರ ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಅವಿನಾಶ ವಿ. ಶೆಟ್ಟಿ ನಿರ್ಮಿಸಿರುವ ಹರಿವು ಚಲನಚಿತ್ರ ಪ್ರದರ್ಶಿಸಲಾಗುವುದು. ಈ ಚಿತ್ರವನ್ನು ಮನ್‍ಸೂರ್ ನಿರ್ದೇಶಿಸಿದ್ದು  ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ಇದಾಗಿರುತ್ತದೆ.  
    ಇದಕ್ಕೂ ಮುನ್ನ ಸಂಜೆ 5-30 ಗಂಟೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ನಾಡೋಜ ದೇ.ಜವರೇಗೌಡ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಕೋರಿದ್ದಾರೆ. (ಛಾಯಾಚಿತ್ರ ಲಗತ್ತಿಸಿದೆ).
ನೈರ್ಮಲ್ಯ ವಾಹಿನಿಯ ಪ್ರವಾಸ ಕಾರ್ಯಕ್ರಮ
   ಮೈಸೂರು,ಜು.08.ಮೈಸೂರು ಜಿಲ್ಲಾ ಪಂಚಾಯಿತಿಯ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2015ರ ಜುಲೈ ಮಾಹೆಯಲ್ಲಿ ಮೈಸೂರು, ಕೆ.ಆರ್.ನಗರ, ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
ಮೈಸೂರು ತಾಲ್ಲೂಕಿನಲ್ಲಿ ಜುಲೈ 14  ರಂದು ಗುಂಗ್ರಾಲ್ ಛತ್ರ, ಜುಲೈ 22 ರಂದು ಸೋಮೇಶ್ವರಪುರ, ಹುಣಸೂರು ತಾಲ್ಲೂಕಿನಲ್ಲಿ ಜುಲೈ 9  ರಂದು ಹನಗೂಡು, ಜುಲೈ 17 ರಂದು ಮರದೂರು, ಜುಲೈ 23 ರಂದು ಕರ್ಣಕುಪ್ಪೆ, ಕೆ.ಆರ್.ನಗರ ತಾಲ್ಲೂಕಿನಲ್ಲಿ ಜುಲೈ 10 ರಂದು ಕರ್ಪೂರಹಳ್ಳಿ, ಜುಲೈ 25 ರಂದು ಲಾಳದೇವನಹಳ್ಳಿ, ಜುಲೈ 31 ರಂದು ಮಾವತ್ತೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಜುಲೈ 13 ರಂದು ಭುವನಹಳ್ಳಿ, ಜುಲೈ 21  ರಂದು  ದೊಡ್ಡಕಮರವಳ್ಳಿ, ಜುಲೈ 29 ರಂದು ಹುಣಸವಾಡಿ, ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಜುಲೈ 15 ರಂದು ಹಂಚಿಪುರ, ಜುಲೈ 20 ರಂದು ಸಾಗರೆ, ಜುಲೈ 24 ರಂದು ಜಿ.ಬಿ. ಸರಗೂರು, ಜುಲೈ 30 ರಂದು ಕೆ. ಬೆಳ್ತೂರು, ನಂಜನಗೂಡು ತಾಲ್ಲೂಕಿನಲ್ಲಿ ಜುಲೈ 16 ರಂದು ತಾಯೂರು, ಜುಲೈ 28 ರಂದು ನವಿಲೂರು, ಹಾಗೂ ತಿ.ನರಸೀಪುರ ತಾಲ್ಲೂಕಿನಲ್ಲಿ ಜುಲೈ 27 ರಂದು ಕೊತ್ತೇಗಾಲ ಗ್ರಾಮದಲ್ಲಿ ವಾಹನ ಸಂಚರಿಸಲಿದೆ  ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತÀ ವ್ಯಕ್ತಿ ಶವÀ ಪತ್ತೆಗಾಗಿ ಮನವಿ
ಮೈಸೂರು,ಜು.08.ಬೆಳಗೋಳ-ಸಾಗರಕಟ್ಟೆ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ  ಕಿ.ಮಿ. ನಂ. 10/700-800 ರಲ್ಲಿ ಜುಲೈ 8 ರಂದು ಸುಮಾರು 35 ವರ್ಷ ವಯೋಮಿತಿಯ  ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ವ್ಯಕ್ತಿಯು 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ, ದುಂಡು ಮುಖ, ತಲೆಯಲ್ಲಿ ಸುಮಾರು 3  ಇಂಚು ಉದ್ದದ ಕಪ್ಪು ಕೂದಲು, ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ. ಬಲ ಮೊಣಕೈಯಲ್ಲಿ ಕಮಲದ ಆಕೃತಿ ಹಸಿರು ಹಜ್ಜೆ ಗುರುತು ಇರುತ್ತದೆ. ನೀಲಿ ಟೀ ಶರ್ಟ್, ನೀಲಿ ಪ್ಯಾಂಟ್, ಕೆಂಪು ಸ್ಯಾಂಡೋ ಬನಿಯನ್ ಧರಿಸಿರುತ್ತಾರೆ.
ಮೃತ ವ್ಯಕ್ತಿಯ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

ಮೈಸೂರು, ಜು.8- ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದೆಂದು ಮಾಜಿ ಸಂಸದ ಹೆಚ್. ವಿಶ್ವನಾಥ್ ತಿಳಿಸಿದರು.
ನಗರದ ಪತ್ರಕರ್ತರಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಕಟ್ಟಡವು ಬ್ರಿಟೀಷರ ಕಾಲದಲ್ಲಿ ಅಂದಿನ ಮಹಾರಾಜರು ಲಂಡನ್ ಕಟ್ಟಡಗಳ ಶೈಲಿಯಲ್ಲಿ ಬಹು ಆಕರ್ಷಕವಾಗಿ ನಿರ್ಮಿಸಿದ್ದಾರೆ. ಈ ಕಟ್ಟವು ಇಂದಿಗೂ ಯಾವುದೇ ಅಪಾಯಕ್ಕೆ ಒಳಗಾಗದೆ ಅದರ ಭದ್ರತೆ ಹಾಗೂ ಪಾರಂಪರಿಕತೆಯನ್ನು ಉಳಿಸಿಕೊಂಡಿದೆ ಎಂದರು.
ಇದು ನೋಡಲು ಸುಂದರವಾಗಿದ್ದು ನಗರದ ಮಧ್ಯಭಾಗದಲ್ಲಿ ಜನಾಕರ್ಷಣೀಯ ಕೇಂದ್ರವೂ ಆಗಿದೆ ಎಂದವರು ಹೇಳಿದರು.
125 ವರ್ಷಗಳ ಹಳೇಯದಾದ ಈ ಕಟ್ಟಡ ತನ್ನ ವಾಸ್ತು ವಿನ್ಯಾಸ ಶೈಲಿಯಲ್ಲಿ ಗಟ್ಟಿಯಾಗಿದ್ದು, ಇನ್ನು ಹೆಚ್ಚಿನ ಕಾಲ ಬಾಳಿಕೆ ಬರಲಿದೆ. ಈ ಕಟ್ಟಡದಲ್ಲಿ ಹಲವಾರು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜನತೆಗೆ ಹತ್ತಿರದ ಸ್ಥಳವಾಗಿದೆ ಎಂದ ಅವರು ಈ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲಿನ ಜಿಲ್ಲಾಡಳಿತ ಕಚೇರಿಯನ್ನು ಸ್ಥಳಾಂತರಿಸಬಾರದು ಎಂದರು.
ಈ ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಸ್ಥಳಾಂತರ ಮಾಡಬಾರದೆಂದು ಮನವಿ ಮಾಡುತ್ತೇನೆ ಎಂದರು.
ಪಾರಂಪರಿಕ ಕಟ್ಟಡದಲ್ಲಿನ ಕಚೇರಿಗಳನ್ನು ಸ್ಥಳಾಂತರ ಮಾಡಬೇಕಾದರೆ ಅದಕ್ಕೆ ತನ್ನದೇ ಆದ ಕಾನೂನು ಕಟ್ಟಳೆಯನ್ನು ಅನುಸರಿಸಬೇಕು. ಕೇಂದ್ರ ಸರಕಾರದ ಅನುಮತಿ ಪಡೆದು ನಿರ್ಧಾರ ಕೈಗೊಳ್ಳಬೇಕು. ಆದರೆ ಇಲ್ಲಿನ ಜಿಲ್ಲಾಧಿಕಾರಿ ಶಿಖಾ ಪಾರಂಪರಿಕ ಕಟ್ಟಡಗಳ ಕಾಯ್ದೆಯನ್ನೇ ಮರೆಮಾಚಿ ಜಿಲ್ಲಾಧಿಕಾಗಳ ಕಚೇರಿ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.
ಮೈಸೂರು ನಗರ ಲಂಡನ್ ಮಾದರಿಯಲ್ಲಿದೆ. ಅಂದಿನ ಮಹಾರಾಜರು ಲಂಡನ್ ನಗರದಲ್ಲಿನ ಕಟ್ಟಡಗಳ ಮಾದರಿಯಲ್ಲಿಯೇ ಮೈಸೂರು ನಗರವನ್ನು ನಿರ್ಮಿಸಬೇಕೆಂದು ಪಣತೊಟ್ಟು ಇಲ್ಲಿನ ಎಲ್ಲಾ ಪಾರಂಪರಿಕ ಕಟ್ಟಡಗಳು, ಉದ್ಯಾನವನಗಳನ್ನು ನಿರ್ಮಸಿದ್ದಾರೆಂದು ಅವರು ಹೇಳಿದರು.
ಎಸ್. ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಆಯೋಗ ರಚಿಸಿದ್ದರು. ಇದರ ಕೇಂದ್ರ ಕಚೇರಿ ಮೈಸೂರಿನಲ್ಲೇ ಕಾರ್ಯ ನಿರ್ವಹಿಸುತ್ತಿದೆ ಎಂದವರು ತಿಳಿಸಿ, ಆ ಸಂಸ್ಥೆ ಈ ಬಗ್ಗೆ ಯಾವುದೇ ಚಕಾರವೆತ್ತಿಲ್ಲ. ಇದು ವಿಷಾದದ ಸಂಗತಿ ಎಂದರು.
ಜಿಲ್ಲಾಡಳಿತ ಕಚೇರಿ ಸ್ಥಳಾಂತರ ಬಗ್ಗೆ ಸಾರ್ವಜನಿಕರಲ್ಲಿ ಜಗೃತಿ ಮೂಡಿಸಿ ಸಂಘ ಸಂಸ್ಥೆಗಳವರು ಇದನ್ನು ಇಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ  ಹೋರಾಡಬೇಕಾದ ಅವಶ್ಯಕತೆ ಇದೆ ಎಂದು ವಿಶ್ವನಾಥ್ ಕರೆ ನೀಡಿದರು.

ಮೈಸೂರು, ಜು. 8- ದಕ್ಷಿಣ ಕರ್ನಾಟಕ ಅಂಚೆ ವಲಯದಲ್ಲಿ ಡಿಜಿಟಲ್ ಇಂಡಿಯಾ ಸಪ್ತಾಹವನ್ನು ಜು. 1ರಿಂದ 7ರ ವರೆಗೆ ಆಯೋಜಿಸಲಾಗಿತ್ತು. ಈ ಸಪ್ತಹಾದಲ್ಲಿ ಸಾರ್ವಜನಿಕರಿಗೆ ಅನುಕೂಲವಾದ ಹಲವಾರು ಯೋಜನೆಗಳನ್ನು ಅಳವಡಿಲಾಗಿದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರಕುಮಾರ್ ತಿಳಿಸಿದರು.
ಯಾದವಗಿರಿಯಲ್ಲಿರುವ ಅಂಚೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಹತ್ವಾಂಕಾಂಕ್ಷೆ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅಂತರ ಜಾಲವನ್ನು ವಿಸ್ತರಿಸಿದ್ದು, ಕೋರ್ ಬ್ಯಾಂಕಿಂಗ್ ಮತ್ತು ಗ್ರಾಮೀಣ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಎಂಬ ಹೊಸ ಆಯಾಮಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.
ಮೈಸೂರು ಅಂಚೆ ವಿಭಾಗದಲ್ಲಿ ಅಂತರಜಾಲದ ಮುಖೇನ ಅಂಚೆ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವವಿಮೆಯ ಎಲ್ಲ ವಹಿವಾಟುಗಳನ್ನು ಸುಲಲಿತವಾಗಿ ಮ್ಯಕಾಮಿಶ್ ಎಂಬ ವ್ಯವಸ್ಥೆಯ ಮೂಲಕ ನಿರ್ವಹಿಸುವ ಸೌಲಭ್ಯವನ್ನು ಪ್ರಪ್ರಥಮವಾಗಿ ಪ್ರಯೋಗಿಸಿ ಕಾರ್ಯಗತಗೊಳಿಸಲಾಗಿದೆ ಎಂದರು.
ಈ ವ್ಯವಸ್ಥೆಯಿಂದ ಅಂಚೆ ವಿಮೆಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ಆನ್‍ಲೈನ್ ಮೂಲಕ ನಿರ್ವಹಿಸಬಹುದಾಗಿದೆ ಎಂದವರು ತಿಳಿಸಿದರು.
ಕೋರ್ ಬ್ಯಾಂಕಿಗ್ ವ್ಯವಸ್ಥೆಯನ್ನು ಮೈಸೂರಿನ  ಮುಖ್ಯ ಅಂಚೆ ಕಚೇರಿ, ಸರಸ್ವತಿಪುರಂ, ಕುವೆಂಪುನಗರ, ಯಾದವಗಿರಿ, ಬನ್ನಿಮಂಟಪ, ಮೈಸೂರು ವಿವಿ ಹಾಗೂ ಜೆಪಿ ನಗರ ಉಪ ಅಂಚೆ ಕಚೇರಿಗಳಲ್ಲಿ ವಿಸ್ತರಿಸಲಾಗುವುದೆಂದರು.
ಮೈಸೂರು ಸೌತ್ ಮತ್ತು ಇಟ್ಟಿಗೆಗೂಡು ಉಪ ಅಂಚೆ ಕಚೇರಿಯಡಿ ಬರುವ ಎಲ್ಲಾ ಶಾಖೆಗಳನ್ನು ಆಧುನೀಕ ಜಾಲದ ಮೂಲಕ ಬೆಸೆಯುವ ಮತ್ತೊಂದು ಪ್ರಮುಖ ಯೋಜನೆ ಆಗಿದೆ ಹಾಗೂ ಮುಖ್ಯ ಅಂಚೆ ಕಚೇರಿಗಳಲ್ಲಿ ಎಟಿಎಂ ವ್ಯವಸ್ಥೆಯಲ್ಲಿ ಅಳವಡಿಸಲಾಗುವುದೆಂದರು.
ಅಂಚೆ ಇಲಾಖೆ ಅಧಿಕಾರಿಗಳಾದ ಡಿ. ಶಿವಣ್ಣ, ಚಂದ್ರಕಾಂತಕಾಮತ್ ಉಪಸ್ಥಿತರಿದ್ದರು.

 ಅಳವಡಿಸಿಕೊಂಡರೆ ಬದುಕು ಸುಂದರ-ಮಹೇಶಚಂದ್ರ
ಮಂಡ್ಯ: ದೇಶದ ಸಂಸ್ಕøತಿ ಉಳಿವಿಗೆ ಅನೇಕ ಜನರ ಅವಿರತ ಶ್ರಮ ಕಾರಣವಾಗಿದೆ.ಅವರು ಅಳವಡಿಸಿಕೊಂಡಿದ್ದ ಜೀವನ ಮೌಲ್ಯಗಳು ದೇಶದ ಹಿರಿಮೆಯನ್ನು ಹೆಚ್ಚಿಸಿದುವು.ಇಂತಹ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ವಿಕಸನ ಸಂಸ್ಥೆಯ ನಿರ್ದೇಶಕರಾದ ಮಹೇಶಚಂದ್ರಗುರು ಅಭಿಪ್ರಾಯಪಟ್ಟರು.
    ಅವರು ತಾಲೂಕಿನ ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಮಂಡ್ಯ,ಅನನ್ಯ ಹಾರ್ಟ ಟ್ರಸ್ಟ್ ,ಜಾಗೃತಿ ಯುವತಿ ಮತ್ತು ಮಹಿಳಾ ಮಂಡಳಿ ಹಾಗೂ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಏರ್ಪಡಿಸಿದ್ದ ಪಂಡಿತ್ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
      ಶ್ಯಾಮ್ ಸುಂದರ್ ಮುಖರ್ಜಿಯವರು ತಮ್ಮ ತನುಮನಧನಗಳನ್ನು ದೇಶಕ್ಕಾಗಿ ಮೀಸಲಿಟ್ಟವರು.ಜನರಲ್ಲಿ ರಾಜಕೀಯ ಮುಖಂಡರಲ್ಲಿ ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಜನಸಂಘವನ್ನು ಹುಟ್ಟುಹಾಕಿ ದೇಶದ ಸಂಸ್ಕøತಿ ಉಳಿಸಲು ಶ್ರಮಿಸಿದರು.ದೇಶ ಒಂದೇ ಸಂವಿಧಾನ ಒಂದೇ ಆಗಿರಬೇಕು ಎಂದು ಪ್ರತಿಪಾದಿಸಿ ಹೋರಾಟ ಹಮ್ಮಿಕೊಂಡವರು.ಮುಖರ್ಜಿಯವರಂತಹವರ ತ್ಯಾಗಮಯ ಕೊಡುಗೆಯಿಂದ ದೇಶ ಇಂದು ಉನ್ನತ ಸ್ಥಾನದಲ್ಲಿದೆ.ಇಂತಹವರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಮಹಾತ್ಮರ ಕನಸನ್ನು ಸಾಕಾರಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
   ಮುಖ್ಯ ಅತಿಥಿಗಳಾಗಿದ್ದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ಎಸ್.ಸಿದ್ದರಾಮಪ್ಪ ಮಾತನಾಡಿ ಕಾಲ ಮುಂದುವರೆದಂತೆ ನಮ್ಮ ಮನಸ್ಥಿತಿ ಬದಲಾಗುತ್ತಿದೆ,ಮೌಲ್ಯಗಳು ನಶಿಸುತ್ತಿವೆ.ಮುಖರ್ಜಿಯಂತವರ ವಿಚಾರಗಳನ್ನು ಅರಿತು ದೇಶಪ್ರೇಮ ಬೆಳೆಸಿಕೊಳ್ಳಬೇಕು.ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ,ಯಾವುದೂ ಅಸಾಧ್ಯ ಎಂಬುದಿಲ್ಲ.ಪ್ರಯತ್ನವಿದ್ದರೆ ಯಶಸ್ಸು ಸಾಧ್ಯ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
     ಕಾಲೇಜನ ಪ್ರಭಾರಿ ಪ್ರಾಂಶುಪಾಲರಾದ ಕೆ.ಎನ್.ಮಲ್ಲೇಗೌಡ ಮಾತನಾಡಿ ಹಿರಿಯರ ತ್ಯಾಗ ಬಲಿದಾನಗಳನ್ನು ಅರಿತು ದೇಶದ ಬಗ್ಗೆ ಅಭಿಮಾನ,ಪ್ರೀತಿ ಬೆಳೆಸಿಕೊಳ್ಳಬೇಕು.ಆಗಾಗ್ಗೆ ಇಂತಹ ಹಿರಿಯರ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಕು ಇದು ನಿಮಗೆ ಮಾರ್ಗದರ್ಶಕವಾಗುತ್ತದೆ ಎಂದರು.ಸಮಾರಂಭವನ್ನು  ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಂಕರನಾರಾಯಣಶಾಸ್ತ್ರಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
    ಸಮಾರಂಭದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ಬಿ.ಎಸ್.ಅನುಪಮ,ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಜಿಎನ್.ಮನುಕುಮಾರ್, ಉಪನ್ಯಾಸಕರಾದ ಎಚ್.ಪುಟ್ಟಸ್ವಾಮಿ,ಹೊಳಲು ಶ್ರೀಧರ್,ಮಂಜುನಾಥ್,ಓ.ನಾಗರಾಜು ಉಪಸ್ಥಿತರಿದ್ದರು
                                                                     .                                                                            

Tuesday, 7 July 2015

 ಸಂಸ್ಥೆಗಳು/ ಗ್ರಾಪಂಗಳಿಗೆ ಸೂಚನೆ
ಗ್ರಂಥಾಲಯ ಕರ ಪಾವತಿಸಿ: ರೋಹಿಣಿ ಸಿಂಧೂರಿ
ಮಂಡ್ಯ: ಜಿಲ್ಲೆಯಲ್ಲಿ, ಸ್ಥಳೀಯ ಸಂಸ್ಥೆಗಳಾದ ಪುರಸಭೆ/ ಪಟ್ಟಣ ಪಂಚಾಯಿತಿಗಳು ಹಾಗೂ ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಕರವನ್ನು ತತ್‍ಕ್ಷಣವೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಜಮಾ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ರೋಹಿಣಿ ಸಿಂಧೂರಿ ಸೂಚಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಗ್ರಂಥಾಲಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಂದ ಗ್ರಂಥಾಲಯ ಕರವಾಗಿ ಸಂಗ್ರಹಿಸಿರುವ ಶೇ 6ರಷ್ಟು ಹಣವನ್ನು ಈ ಎಲ್ಲಾ ಸಂಸ್ಥೆಗಳು ಜರೂರಾಗಿ ಭರಿಸಬೇಕು ಎಂದು ಹೇಳಿದರು.
ಸ್ಥಳೀಯ ಲೆಕ್ಕ ಪರಿಶೋಧನೆ ವರ್ತುಲ ವರದಿ ಅನ್ವಯ 2013-14ನೇ ಸಾಲಿನವರೆಗೆ ಜಿಲ್ಲೆಯ ಸ್ಥಳಿಯ ಸಂಸ್ಥೆಗಳಾದ ಪುರಸಭೆ/ ಪಟ್ಟಣ ಪಂಚಾಯತ್‍ಗಳು ಒಟ್ಟು ರೂ 68,06,049 ಗ್ರಂಥಾಲಯ ಕರ ಬಾಕಿ ಉಳಿಸಿಕೊಂಡಿವೆ. ನಾಗಮಂಗಲ ರೂ. 20,43,267; ಮದ್ದೂರು ರೂ. 11,42,216, ಪಾಂಡವಪುರ ರೂ. 4,78,439; ಶ್ರೀರಂಗಪಟ್ಟಣ ರೂ. 8,09,299; ಕೆ.ಆರ್.ಪೇಟೆ ರೂ. 7,10,317; ಮಳವಳ್ಳಿ ರೂ. 16,22,511É ಬಾಕಿ ಉಳಿಸಿಕೊಂಡಿವೆ ಎಂದರು.
ಹಾಗೇ ಜಿಲ್ಲೆಯ 234 ಗ್ರಾಮ ಪಂಚಾಯಿತ್‍ಗಳೂ ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಕರವೂ ದೊಡ್ಡದಿದ್ದು ಎಲ್ಲಾ ಪಂಚಾಯತ್‍ಗಳು ಪಾವತಿಸಬೇಕು. ಬಾಕಿ ಹಣವನ್ನು ಸಕಾಲದಲ್ಲಿ ಬಟಾವಡೆ ಮಾಡದಿದ್ದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಂಥಾಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಕಟ್ಟಡ ಬಾಡಿಗೆ, ವಿದ್ಯುಚ್ಛಕ್ತಿ, ದೂರವಾಣಿ, ನೀರಿನ, ಪುಸಕ್ತಗಳ ಮತ್ತು ವಾರ್ತಾ ಪ್ರತಿಕೆಗಳ ಬಿಲ್ಲುಗಳನ್ನು ಗ್ರಂಥಾಲಯ ಕರದಿಂದ ಪಾವತಿ ಮಾಡಬೇಕಿರುವುದರಿಂದ ಬಾಕಿ ಹಣವನ್ನು ಪಾವತಿಸಬೇಕು ಎಂದರು.
ಸದಸ್ಯತ್ವ ನೋಂದಣಿ ಅಭಿಯಾನ:
ಗ್ರಾಮೀಣ ಯುವಜನರಲ್ಲಿ ವಾಚನ ಆಭಿರುಚಿ ಹೆಚ್ಚಿಸುವುದು ಹಾಗೂ ಸದಸ್ಯತ್ವ ನೋಂದಣಿ ಅಭಿಯಾನವನ್ನು ಇದೇ 24 ರಿಂದ 31ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಕೆ.ಎಸ್. ಲತಾಮಣಿ ಹೇಳಿದರು.
ಜುಲೈ 24ರದು ಮಳವಳ್ಳಿ, ಜು. 25ರಂದು ಮದ್ದೂರು, ಜು. 27ರಂದು ಮಂಡ್ಯ, ಜು. 28ರಂದು ನಾಗಮಂಗಲ, ಜು. 29ರಂದು ಕೆ.ಆರ್.ಪೇಟೆ, ಜು. 30ರಂದು ಪಾಂಡವಪುರ ಹಾಗೂ ಜು. 31ರಂದು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

ಮಂಡ್ಯ: ಕೃಷಿ ನೀತಿ ಜಾರಿಗೆ ತರುವ ಮೂಲಕ ರೈತರ ಆತ್ಮಹತ್ಯೆ ತಡೆಯಲು ಸಾಧ್ಯ ಎಂದು ರೈತಪರ ಹೋರಾಟಗಾರ ಬಯ್ಯಾರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಜನಪರ ಕ್ರಿಯಾ ವೇದಿಕೆ ಆಯೋಜಿಸಲಾಗಿದ್ದ `ರೈತರ ಸರಣಿ ಆತ್ಮಹತ್ಯೆ : ಕಾರಣ, ಪರಿಹಾರಗಳು ಎಂಬ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕೃಷಿ ನೀತಿಯನ್ನು ಜಾರಿಗೆ ತರಬೇಕು. ಆಗ ಮಾತ್ರ ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ರೈತರಿಗೆ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜಗಳನ್ನು ಖಾಸಗಿಯವರಿಗೆ ಕೊಡದೆ ಕಡಿಮೆ ಬೆಲೆಗೆ ಸರ್ಕಾರವೇ ವಿತರಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿ ಮಾಡಬೇಕು. ಬ್ಯಾಂಕ್‍ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಬಂಡವಾಳಗಾರರು ವಶಪಡಿಸಿಕೊಂಡಿರುವ ಸಾವಿರಾರು ಎಕರೆ ಕೃಷಿ ಭೂಮಿಯನ್ನು ದುಡಿಯವ ರೈತರಿಗೆ ಗ್ರಾಮೀಣ ಪ್ರದೇಶದಲ್ಲಿರುವ ಭೂ ರಹಿತ ರೈತರಿಗೆ ನೀಡಬೇಕು ಹಾಗೂ ರೈತಪರ ಸರ್ಕಾರ ಜಾರಿಗೆ ಬರಬೇಕು. ಇವುಗಳನ್ನು ಜಾರಿಗೆ ಬಂದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಾಗತೀಕರಣದಿಂದ ದೇಶಕ್ಕೆ ಅನ್ನ ನೀಡುವ ಅನ್ನದಾತ ದೊಡ್ಡ ಸಮಸ್ಯೆಗಳಿಂದ ನರಳುತ್ತಿದ್ದಾನೆ. ಕೃಷಿ ಬಿಕ್ಕಟ್ಟು ಬಿಗಡಾಯಿಸಿದೆ. ಬದುಕಲು ಪರ್ಯಾಯ ವ್ಯವಸ್ಥೆ ಇಲ್ಲದೆ, ಹಲವಾರು ಸಮಸ್ಯೆಗಳಿಂದ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾನೆ ಎಂದರು.
ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣದಿಂದ ದೇಶದಲ್ಲಿ ಬಂಡವಾಳಶಾಹಿಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ರೈತರ ಕೃಷಿ ಭೂಮಿಗಳು ಬಂಡವಾಳಶಾಹಿಗಳ ಕೈವಶವಾಗುತ್ತಿವೆ. ದೇಶಕ್ಕೆ ಬಂಡವಾಳ ಹೂಡಿಕೆಯಾಗುತ್ತದೆ ಎಂಬ ಉದ್ದೇಶದಿಂದ 1991ರಲ್ಲಿ ಜಾಗತೀಕರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ಜಾಗತೀಕರಣ ನೀತಿಗಳನ್ನು ಜಾರಿಗೆ ತಂದರು. ಇದರಿಂದ ಕೃಷಿ ಮೇಲೆ ಹೂಡಿಕೆಯಾಗಿ ಕೃಷಿ ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ಬುದ್ದಿಜೀವಿಗಳು ಸಹ ಬೆಂಬಲ ವ್ಯಕ್ತಪಡಿಸಿದರು. ಆದರೆ ಈ ಜಾಗತೀಕರಣದಿಂದ ಕೃಷಿಯ ಚಟುವಟಿಕೆ ಮೇಲೆ ಬಿಕ್ಕಟ್ಟು ಎದುರಾಗಿ ಮತ್ತಷ್ಟು ಬಿಗಡಾಯಿಸಿ, ಶೇ.70ರಷ್ಟು ರೈತರ ಮೇಲೆ ಪರಿಣಾಮ ಬೀರಿ ಮಾರಣ ಹೋಮ ಸೃಷ್ಟಿಯಾಯಿತು. ಪ್ರಸ್ತುತ ದಿನಗಳಲ್ಲಿ ಅದೇ ಮುಂದುವರೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಾಗತೀಕರಣದ ನೀತಿಯಿಂದ ಕೃಷಿ ಬಿಕ್ಕಟ್ಟಿನಿಂದ ದೇಶದಲ್ಲಿ ಸುಮಾರು 3.61 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರಸ್ತುತ ದಿನಗಳಲ್ಲಿ ಅತಿ ವೇಗವಾಗಿ ರೈತರ ಆತ್ಮಹತ್ಯೆ ಸರಣಿಗಳು ಹೆಚ್ಚಾಗುತ್ತಿವೆ. ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ನೀಡದೇ ನೀಡುತ್ತಿರುವ ಕಿರುಕುಳ, ಸಾಲಬಾಧೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶೇ.65ರಷ್ಟು ರೇಷ್ಮೆ ಬೆಳೆ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕೃಷಿ ಚಟುವಟಿಕೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಅಂತಹ ಜಿಲ್ಲೆಯಲ್ಲಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿರುವುದು ಶೋಚನೀಯವಾಗಿದೆ ಎಂದರು.
ರೇಷ್ಮೆಗೆ ವೈಜ್ಞಾನಿಕ ಬೆಲೆ ಇಲ್ಲದೆ 350 ರಿಂದ 400 ರೂ. ಇದ್ದ ಬೆಲೆ 100-150 ರೂ.ಗಳಿಗೆ ಇಳಿಕೆಯಾಗುವುದರಿಂದ ರೇಷ್ಮೆ ಬೆಳೆಗಾರರು ಮುಂದಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಕೇಂದ್ರ ಸರ್ಕಾರ ರೇಷ್ಮೆ ಆಮದಿನ ಮೇಲೆ ಶುಲ್ಕವನ್ನು ಹೆಚ್ಚಿಸಬೇಕು. ಇದಕ್ಕೆ ದೇಶದ ಎಲ್ಲಾ ರೈತರು ಪರಿಣಾಮಕಾರಿಯಾದ ಹೋರಾಟ, ಚಳುವಳಿ ನಡೆಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾದ ಚಳುವಳಿಗಳು ನಡೆಯುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ತಡೆಯಲು ಮುಂದಾಗುತ್ತಿಲ್ಲ. ಮಂತ್ರಿಗಳು ಹಾಗೂ ಶಾಸಕರ ವೇತನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ರೈತರ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣ ಪಾವತಿ ಮಾಡದ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಹಾಕುವ ದೃಢ ನಿರ್ಧಾರ ಕೈಗೊಳ್ಳುತ್ತಿಲ್ಲ. ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬಗೆಹರಿಸುವಲ್ಲಿ ವಿಫಲವಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಇದರಿಂದ ರೈತರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಪರ ನಿಂತು ಹೋರಾಡುವ ರೈತ ಸಂಘಗಳು ಕೇವಲ ನಾಮಾಕಾವಸ್ಥೆ ಮಾತ್ರ ಇವೆ. ಯಾವ ಸಂಘಟನೆಗಳು ಕೂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬ್ಯಾಂಕ್‍ಗಳು, ಖಾಸಗೀ ಲೇವಾದೇವಿದಾರರು ನೀಡುವ ಕಿರುಕುಳದ ವಿರುದ್ಧ ಹೋರಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿಲ್ಲ ಎಂದರು.
ಕೃಷಿಗೆ ಬೇಕಾದ ಉಪಕರಣಗಳು, ರಸಗೊಬ್ಬರ, ಕೂಲಿ, ಬಿತ್ತನೆ ಬೀಜಗಳ ಬೆಲೆ ಹೆಚ್ಚಾಗುತ್ತಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮಾತ್ರ ಸಿಗುತ್ತಿಲ್ಲ. ರಾಜ್ಯದಲ್ಲಿ ಶೇ.80ರಷ್ಟು ಸಣ್ಣ ಹಾಗೂ ಅತಿಸಣ್ಣ ರೈತರಿದ್ದಾರೆ. ಅದರಲ್ಲಿ ಶೇ.35ರಷ್ಟು ರೈತರಿಗೆ ಮಾತ್ರ ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತಿದೆ. ಇನ್ನುಳಿದ ಶೇ.65ರಷ್ಟು ರೈತರು ಖಾಸಗಿ ಲೇವಾದೇವಿದಾರರಲ್ಲಿ ಹೆಚ್ಚಿನ ಹಣ ಪಡೆದು ಅವರ ಕಿರುಕುಳದಿಂದ ನರಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂತಹವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರಗಳು ರೈತಪರವಾದ ಕೃಷಿ ನೀತಿಯನ್ನು ಜಾರಿಗೆ ತಂದು ದೇಶದ ಬೆನ್ನುಲುಬಾದ ರೈತರ ಹಿತಕಾಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಪ್ರೊ.ಕೆ.ಸಿ.ಬಸವರಾಜು, ಲಕ್ಷ್ಮಣ್‍ಚೀರನಹಳ್ಳಿ, ಎಂ.ಕೃಷ್ಣಮೂರ್ತಿ, ಪ್ರೊ.ಹೆಚ್.ಎಲ್.ಕೇಶವಮೂರ್ತಿ, ಪ್ರೊ.ಜಿ.ಟಿ.ವೀರಪ್ಪ, ಜಯರಾಂ, ವೆಂಕಟಗಿರಿಯಯ್ಯ, ಬೋರೇಗೌಡ, ನಂದಿನಿಜಯರಾಂ, ಎಲ್.ಸಂದೇಶ್, ಯಶವಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.
 10 ರಂದು ನಗರ ಸಭೆ ಸಾಮಾನ್ಯ ಸಭೆ
       ನಗರಸಭೆ ಸಾಮಾನ್ಯ  ಸಭೆಯನ್ನು  ಜುಲೈ 10 ರಂದು ಬೆಳಿಗ್ಗೆ 11.00 ಗಂಟೆಗೆ ಮಂಡ್ಯ ನಗರಸಭಾ ಕಾರ್ಯಾಲಯದ ಶ್ರೀ ಧರಣಪ್ಪ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
              ಬ್ಯಾಂಕಿಂಗ್ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ  2015
 ಕರ್ನಾಟಕದಾದ್ಯಂತ  ಇರುವ  ಕಾವೇರಿ, ಪ್ರಗತಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿನ  ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ಸ್ ಮತ್ತು   ಗ್ರೂಪ್ ‘ಎ’ ಆಫೀಸರ್ ಹುದ್ದೆಗಳನ್ನು  ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ‘ಆನ್‍ಲೈನ್’ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ , ಮೇಲಿನ ಗ್ರಾಮೀಣ ಬ್ಯಾಂಕುಗಳಲ್ಲಿನ   ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ಸ್ ಮತ್ತು   ಗ್ರೂಪ್ ‘ಎ’ ಆಫೀಸರ್ ಹುದ್ದೆಗಳಿಗೆ ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು.  ಪ್ರತಿಯೊಂದು ಬ್ಯಾಂಕಿನ  ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಹತೆ ದಿನಾಂಕ:1-07-2015 ಕ್ಕೆ ಯಾವುದಾದರೂ ಪದವಿ  ತೇರ್ಗಡೆ ಹೊಂದಿರಬೇಕು. ವಯೋಮಿತಿ ದಿನಾಂಕ:1-7-2015 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು.ಗರಿಷ್ಟ 28ವರ್ಷ ಮೀರಿರಬಾರದು. ಪರಿಶಿಷ್ಟಜಾತಿ/ಪಂಗಡ & ಓಬಿಸಿ (ಕೇಂದ್ರ) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ   ಇರುತ್ತದೆ. ಅರ್ಜಿ ಸಲ್ಲಿಸುವ ವಿಧಾನ  ವೆಬ್ ಸೈಟ್ ತಿತಿತಿ.ibಠಿs.iಟಿ   ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಕೊನೆ ದಿನಾಂಕ: ಅರ್ಜಿ ಸಲ್ಲಿಸಲು 28-07-2015 ಆನ್‍ಲೈನ್ ಶುಲ್ಕ ಪಾವತಿಸಲು 28-07-2015.                           ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ ತಿತಿತಿ.ibಠಿs.iಟಿ ನೋಡಿ  ಅಥವಾ  ಎ.ವೆಂಕಟೇಶಪ್ಪ, ಉಪ ಮುಖ್ಯಸ್ಥರು,ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು. ವಿಶ್ವವಿದ್ಯಾನಿಲಯ, ಮೈಸೂರು ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ. ದೂರವಾಣಿ- 0821-2516844/9449686641.

 ಮೈಸೂರು,ಜು.07.ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಜುಲೈ 7 ಹಾಗೂ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜುಲೈ 7 ರಂದು ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
       ಜುಲೈ 8 ರಂದು ಬೆಳಿಗ್ಗೆ 8-30 ಕ್ಕೆ ಹೆಚ್.ಡಿ.ಕೋಟೆ ತಾಲ್ಲೂಕಿನ ಈರೇಹಳ್ಳಿ ಹಾಡಿ, 10 ಗಂಟೆಗೆ ಸೋನಹಳ್ಳಿ ಹಾಡಿ, 11 ಗಂಟೆಗೆ ಮೇಟಿಕುಪ್ಪೆ ಹಾಡಿಗೆ ಭೇಟಿ ನೀಡಿ ಗಿರಿಜನ ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಚಾರಿಸಲಿದ್ದಾರೆ. ಮಧ್ಯಹ್ನ 1.30 ಗಂಟೆಗೆ ಹೆಚ್.ಡಿ.ಕೋಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸ್ಥಳೀಯ ಮಹಿಳೆಯರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದ ನಂತರ ಬೆಂಗಳೂರಿಗೆ ತೆರಳಲಿದ್ದಾರೆ.
ಸ್ಥಿರ ದೂರವಾಣಿ ಹಾಗೂ ಬ್ರಾಡ್ ಬ್ಯಾಂಡ್ ಸೇವೆ ವ್ಯತ್ಯಾಯ
         ಮೈಸೂರು,ಜು.07.ಮೈಸೂರು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ರಾಜಮಾರ್ಗ ಕಾಮಗಾರಿ ಮುಡಾ ಸರ್ಕಾಲ್ ಬಳಿ ಇತರ ಕಾಮಗಾರಿ ನಡೆಸುವ ವೇಳೆ ಬಿ.ಎಸ್.ಎನ್.ಎಲ್ ಕೇಬಲ್ ಗಳಿಗೆ ತೀವ್ರ ಹಾನಿ ಉಂಟಾಗಿದ್ದು, ನಗರದ ಸಯ್ಯಾಜಿರಾವ್ ರಸ್ತೆ, ಕಾಳಮ್ಮ ಗುಡಿ ರಸ್ತೆ, ಮಂಡಿ ಮೊಹಲ್ಲಾ, ಮುಡಾ ಕಚೇರಿ, ವಿಶ್ವವಿದ್ಯಾನಿಲಯದ ಕಚೇರಿಗಳ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಿರ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಸಂಪರ್ಕ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುತ್ತದೆ.
        ರಾಷ್ಟ್ರೀಯ ಹೆದ್ದಾರಿ-212 ಕಾಮಗಾರಿಯಲ್ಲಿ ಮೈಸೂರು ನಗರದ ಬಂಡಿಪಾಳ್ಯ, ಬೇಗೂರು ಗ್ರಾಮ ಮತ್ತು ಗುಂಡ್ಲುಪೇಟೆ ಪಟ್ಟಣ ಪ್ರದೇಶದಲ್ಲಿ ಬಿ.ಎಸ್.ಎನ್.ಎಲ್ ಕೇಬಲ್‍ಗಳಿಗೆ ಹಾನಿ ಉಂಟಾಗಿದ್ದು, ಬಂಡಿಪಾಳ್ಯ, ಗೌರಿಶಂಕರ ನಗರ, ವಿಶ್ವೇಶ್ವರನಗರ, ಬೇಗೂರು ಗ್ರಾಮ ಮತ್ತು ಗುಂಡ್ಲುಪೇಟೆ ಸ್ಥಿರ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಸೇವೆಯಲ್ಲೂ ಸಹ ತೀವ್ರ ವ್ಯತ್ಯಾಯ ಉಂಟಾಗಿರುತ್ತದೆ.
        ಬಿಎಸ್‍ಎನ್‍ಎಲ್ ನಿಂದ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದು, ಸ್ಥಿರ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಸೇವೆಯನ್ನು ಸರಿಪಡಿಸಲಾಗುವುದು ಎಂದು ಬಿಎಸ್‍ಎನ್‍ಎಲ್ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ.ಎಫ್.ಎ ಸ್ನಾತಕೋತ್ತರ ಪದವಿ ಪ್ರವೇಶ ಅರ್ಜಿ ಆಹ್ವಾನ
ಮೈಸೂರು,ಜು.07.ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ 2015-16ನೇ ಶೈಕ್ಷಣಿಕ ಸಾಲಿನ ಪ್ರಥಮ ಎಂ.ಎಫ್.ಎ ಸ್ನಾತಕೋತ್ತರ ಪದವಿ ತರಗತಿ ಪ್ರವೇಶಕ್ಕಾಗಿ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಎಫ್.ಎ ಅಥವಾ ತತ್ಸಮಾನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
      ಪ್ರವೇಶದ ಅರ್ಜಿ ಮತ್ತು ವಿವರಣ ಪತ್ರಿಕೆಗಾಗಿ ಖುದ್ದಾಗಿ 250 ರೂ. ಪಾವತಿಸಿ ಅಥವಾ  275 ರೂ. ಡಿ.ಡಿ.ಯನ್ನು ಡೀನ್ ಕಾವಾ ಮೈಸೂರು ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಪಡೆಯಬಹುದಾಗಿದೆ.
   ಭರ್ತಿ ಮಾಡಿದ ಅರ್ಜಿಯನ್ನು ಜುಲೈ 15 ರೊಳಗಾಗಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲೆ ಕಾಲೇಜು, ಭಾರತ ಸರ್ಕಾರ ಪಠ್ಯಪುಸ್ತಕ ಮುದ್ರಣಾಲಯದ ಆವರಣ, ಟಿ.ಎನ್.ಪುರ ರಸ್ತೆ, ಮೈಸೂರು ಇಲ್ಲಿಗೆ ಸಲ್ಲಿಸುವುದು.
ಅರ್ಹತಾ ಪರೀಕ್ಷೆ ಜುಲೈ 21 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಶುಲ್ಕ ಪಾವತಿಸಲು ಜುಲೈ 28 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2438931 ಯನ್ನು ಸಂಪರ್ಕಿಸುವುದು.
ಮನವಿ ಹಾಗೂ ಅಹವಾಲು ಸ್ವೀಕಾರ
ಮೈಸೂರು,ಜು.07.ರೇಷ್ಮೆ ಗೂಡು, ಕಚ್ಛಾ ರೇಷ್ಮೆ ಉತ್ಪಾದನೆ ಧಾರಣೆ ಹಾಗೂ ಮಾರಾಟ ವ್ಯವಸ್ಥೆ ಅಧ್ಯಯನ ತಾಂತ್ರಿಕ ಸಮಿತಿಯವರು ಜುಲೈ 10 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ
         ರೇಷ್ಮೆ ಕೃಷಿಕರು, ರೈತ ಸಂಘಟನೆಗಳು, ರೀಲರ್ ಗಳು, ರೀಲರ್ ಸಂಘಟನೆಗಳು ಮತ್ತು ಇತರೆ ರೇಷ್ಮೆ ಭಾಗೀದಾರರು, ನೋಂದಾಯಿತ ಖಾಸಗಿ ಬಿತ್ತನೆ ಕೋಠಿ, ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರದ ರೀಲಿಂಗ್ ಯಂತ್ರೋಪಕರಣಗಳ ತಯಾರಕರು ಮನವಿ, ಬೇಡಿಕೆ ಹಾಗೂ ಅಹವಾಲುಗಳನ್ನು ಸಮಿತಿಗೆ ಸಲ್ಲಿಸಬಹುದಾಗಿದೆ ಎಂದು ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     ಹೆಚ್ಚಿನ ಮಾಹಿತಿಗೆ ರೇಷ್ಮೆ ಉಪನಿರ್ದೇಶಕರಾದ ದಿನೇಶ್ ಮೊಬೈಲ್ ಸಂಖ್ಯೆ 9448401205 ಅವರನ್ನು ಸಂಪರ್ಕಿಸುವುದು.
ದಾಖಲಾತಿ ಹಾಗೂ ಹಣ ಪಾವತಿಸಲು ಸೂಚನೆ
ಮೈಸೂರು,ಜು.07.ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮೈಸೂರು ನಂ 1ನೇ ಉಪ-ವಿಭಾಗ ಕಚೇರಿ ವ್ಯಾಪ್ತಿಯಲ್ಲಿ ಮೈಸೂರು ನಗರದ ವಿವಿಧ ಕೊಳಚೆ ಪ್ರದೇಶ/ಬಡಾವಣೆಗಳಲ್ಲಿ ನರ್ಮ್ -ಬಿಎಸ್‍ಯುಪಿ ಯೋಜನೆಯಡಿ ನಿರ್ಮಿಸಿರುವ ಹಂತ-1, 2 ಮತ್ತು 3 ಕ್ಕೆ ಅನುಮೋದನೆಯಾಗಿರುವ ಫಲಾನುಭವಿಗಳು ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಮಂಡಳಿ ವತಿಯಿಂದ ನಿಗಧಿಪಡಿಸಿರುವ ಮೊತ್ತದ ಡಿಡಿ ಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೈಸೂರು ನಂ 1ನೇ ಉಪ-ವಿಭಾಗ ಕಚೇರಿಗೆ ಜುಲೈ 24 ರೊಳಗಾಗಿ ಪಾವತಿಸುವಂತೆ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
    ಸೂಕ್ತ ದಾಖಲಾತಿಗಳನ್ನು ಒದಗಿಸದ/ಡಿ.ಡಿಯನ್ನು ಈವರೆಗೂ ಪಾವತಿಸದ ಫಲಾನುಭವಿಗಳ ಪಟ್ಟಿಯನ್ನು ಜಾವಾ ಫ್ಯಾಕ್ಟರಿ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೈಸೂರು ನಂ 1ನೇ ಉಪ-ವಿಭಾಗ ಕಚೇರಿಯಲ್ಲಿ ಪ್ರಕಟಿಸಲಾಗಿರುತ್ತದೆ. ನಿಗಧಿಪಡಿಸಿದ ದಿನಾಂಕದೊಳಗಾಗಿ ಸೂಕ್ತ ದಾಖಲಾತಿಗಳನ್ನು ಒದಗಿಸದ/ಡಿ.ಡಿಯನ್ನು ಕಟ್ಟದ ಫಲಾನುಭವಿಗಳನ್ನು ಅನುಮೋದನೆ ಪಟ್ಟಿಯಿಂದ ರದ್ದುಪಡಿಸುವಂತೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿಂಗ್ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೈಸೂರು,ಜು.07(ಕ.ವಾ.)-ಕರ್ನಾಟಕದಾದ್ಯಂತ  ಇರುವ  ಕಾವೇರಿ, ಪ್ರಗತಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿನ  ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ಸ್ ಮತ್ತು   ಗ್ರೂಪ್ ‘ಎ’ ಆಫೀಸರ್ ಹುದ್ದೆಗಳನ್ನು  ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ‘ಆನ್‍ಲೈನ್’ ಮೂಲಕ ಅರ್ಜಿ ಆಹ್ವಾನಿಸಿದೆ.
     ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ , ಮೇಲಿನ ಗ್ರಾಮೀಣ ಬ್ಯಾಂಕುಗಳಲ್ಲಿನ   ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ಸ್ ಮತ್ತು   ಗ್ರೂಪ್ ‘ಎ’ ಆಫೀಸರ್ ಹುದ್ದೆಗಳಿಗೆ ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು.  ಪ್ರತಿಯೊಂದು ಬ್ಯಾಂಕಿನ  ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.ಅರ್ಜಿ ಸಲ್ಲಿಸುವವರು ದಿನಾಂಕ:1-07-2015 ಕ್ಕೆ ಯಾವುದಾದರೂ ಪದವಿ ತೇರ್ಗಡೆ ಹೊಂದಿರಬೇಕು. ವಯೋಮಿತಿ ದಿನಾಂಕ:1-7-2015 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು. ಗರಿಷ್ಟ 28ವರ್ಷ ಮೀರಿರಬಾರದು.   ಪರಿಶಿಷ್ಟಜಾತಿ/ಪಂಗಡ & ಓಬಿಸಿ (ಕೇಂದ್ರ) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ   ಇರುತ್ತದೆ.
ಅರ್ಜಿಯನ್ನು   ವೆಬ್ ಸೈಟ್; ತಿತಿತಿ.ibಠಿs.iಟಿ   ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು
ದಿನಾಂಕ 28-07-2015  ಹಾಗೂ   ಆನ್ ಲೈನ್ ಶುಲ್ಕ ಪಾವತಿಸಲು 28-07-2015 ಕೊನೆಯ ದಿನಾಂಕವಾಗಿರುತ್ತದೆ                          
    ಹೆಚ್ಚಿನ ಮಾಹಿತಿಗೆ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು. ವಿಶ್ವವಿದ್ಯಾನಿಲಯ, ಮೈಸೂರು ದೂರವಾಣಿ- 0821-2516844/9449686641. ಸಂಪರ್ಕಿಸುವುದು.

ವಿಜಯಲಕ್ಷ್ಮಿ ಹೆಚ್.ಸಿ ಅವರಿಗೆ ಪಿಎಚ್.ಡಿ. ಪದವಿ
       
 ಮೈಸೂರು,ಜು.07.ಮೈಸೂರು ವಿಶ್ವವಿದ್ಯಾಲಯವು ವಿಜಯಲಕ್ಷ್ಮಿ ಹೆಚ್.ಸಿ. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಸುದರ್ಶನ ಪಾಟಿಲ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಒuಟಣiಠಿಟe ಈಚಿಛಿe ಜeಣeಛಿಣioಟಿ ಚಿಟಿಜ ಟoಛಿಚಿಟizಚಿಣioಟಿ oಜಿ sಞiಟಿ ಣoಟಿe gಡಿouಠಿ imಚಿges ” ಕುರಿತು ಸಾದರಪಡಿಸಿದ ಇಟeಛಿಣಡಿoಟಿiಛಿs  ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ವಿಜಯಲಕ್ಷ್ಮಿ ಹೆಚ್.ಸಿ. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ. 
ಜಂಟೀ  ಹೋರಾಟಕ್ಕೆ ಪತ್ರಿಕಾ ಸಂಪಾದಕರ ಸಂಘ ನಿರ್ಧಾರ
ಚಿತ್ರದುರ್ಗ :ಜಿಲ್ಲಾ ಮಟ್ಟದ ಪತ್ರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಜಾಹೀರಾತು ನೀತಿ ಜಾರಿಗೆ ಆದೇಶ ಮಾಡಿ ಅದು ಜಾರಿಯಾ ಗುವ ಮುನ್ನವೇ, ಅದಕ್ಕೆ ತಿದ್ದುಪಡಿ ಮಾಡುವ ಮೂಲಕ ಜಿಲ್ಲಾ ಮಟ್ಟದ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿರುವ ತಿದ್ದುಪಡಿ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿ, ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಹಾಗೂ ಇಲಾಖೆ ನಿರ್ದೇ ಶಕರಿಗೆ ಪತ್ರ ಬರೆದಿದ್ದು, ಜುಲೈ 10 ರೊಳಗೆ ಜಾಹೀರಾತು ತಿದ್ದುಪಡಿ ಆದೇಶ ರದ್ದುಗೊಳಿ ಸದಿದ್ದರೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಹೋರಾಟ ಮಾಡಲು ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ತೀರ್ಮಾನಿಸಿದೆ.
ಸಂಘದ ನೂತನ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭ ಚಿತ್ರದುರ್ಗದ ಮೆ|| ಹೊಟೇಲ್ ಐಶ್ವರ್ಯ ಫೋರ್ಟ್ ಸಭಾಂಗಣ ದಲ್ಲಿ ನಡೆದ ನಂತರ ಸಂಘದ ನೂತನ ಕಾರ್ಯಕಾರಿ ಸಮಿತಿಯ ಸಂಘದ ಅಧ್ಯಕ್ಷ ಶ. ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆದ ಪ್ರಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜಿಲ್ಲಾ ಮಟ್ಟದ ಪತ್ರಿಕೆಗಳ ಹೋರಾಟಕ್ಕೆ ಸಹಮತ ವ್ಯಕ್ತ ಪಡಿಸಿ, ಜಾಹೀರಾತು ತಿದ್ದುಪಡಿ ಆದೇಶ ರದ್ದುಗೊಳಿಸುವಂತೆ ಈಗಾಗಲೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವೂ ಸಹಾ ಇಲಾಖೆಗೆ ಹಾಗೂ ಸಚಿವರಿಗೆ ಪತ್ರ ಬರೆದಿರುವುದನ್ನು ಕಾರ್ಯ ಕಾರಿ ಸಮಿತಿ ಶ್ಲಾಘಿಸಿ, ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಜುಲೈ ಮೂರನೇ ವಾರದಲ್ಲಿ ಮೊದಲ ಹಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿತಲ್ಲದೆ, ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಯವರಿಗೆ ಪ್ರತಿಭಟನೆ ದಿನಾಂಕ ವನ್ನು ನಿಗಧಿಗೊಳಿಸಲು ತುರ್ತಾಗಿ ಪತ್ರ ಬರೆಯಲು ಸಭೆ ಸರ್ವಾನು ಮತದಿಂದ ಸಮ್ಮತಿ ಸೂಚಿಸಿತು.
ಇದೇ ತಿಂಗಳ ಕಳೆದ ಮೂg Àರಂದು  ಬೆಳಗಾವಿಯಲ್ಲಿ ನಡೆಯು ತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಸದಸ್ಯ ಎನ್.ಎಸ್. ಬೋಸ್‍ರಾಜು ಅವರು ಜಾಹೀ ರಾತು ನೀತಿಗೆ ಸಂಬಂಧಿಸಿದಂತೆ ಕೇಳಿರುವ ಪ್ರಶ್ನೆಗಳಿಗೆ ವಾರ್ತಾ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ಸಭೆಯಲ್ಲಿ ಚರ್ಚಿಸಿ, ಈ ಉತ್ತರದ ಪ್ರತಿಯಿಂ ದಲೇ ಇಲಾಖೆ ತಪ್ಪೆಸಗುತ್ತಿರು ವುದನ್ನು ಸಾಬೀತುಪಡಿಸಬಹು ದಾಗಿದೆ ಎಂದು ನಿರ್ಧರಿಸಲಾಯಿತು.
ಸದಸ್ಯತ್ವ ಆಂದೋಲನ :  ರಾಜ್ಯದ ಪ್ರತಿ ಜಿಲ್ಲೆಗಳಿಗೂ ನೂತನ ಪದಾಧಿಕಾರಿಗಳ ತಂಡವನ್ನು ರಚಿಸಿ, ಸದಸ್ಯತ್ವ ಆಂದೋಲನ ನಡೆಸುವ ಮೂಲಕ ಮುಂದಿನ ಕಾರ್ಯಕಾರಿ ಸಮಿತಿಯೊಳಗೆ ಎಲ್ಲಾ ಜಿಲ್ಲೆಗಳ ಸಂಪಾದಕರನ್ನು ಸಂಪರ್ಕಿಸಿ, ಆಂದೋಲನ ಹಮ್ಮಿಕೊಳ್ಳುವ ಮೂಲಕ ಸದಸ್ಯತ್ವ ಮಾಡಿ ಕೊಳ್ಳಲು ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಯಿತು.
ಪದಗ್ರಹಣ : ಇದೇ ಸಂದ ರ್ಭದಲ್ಲಿ ನೂತನ ಪದಾಧಿಕಾರಿ ಗಳಿಗೆ ಸಂಘದ ಅಧ್ಯಕ್ಷ ಶ. ಮಂಜುನಾಥ ನೇಮಕಾತಿ ಪತ್ರವನ್ನು ವಿತರಿಸಿ ಮಾತನಾಡಿ, ಸಂಘದ ಸಂಘಟನೆಗಾಗಿ ಎಲ್ಲರೂ ಶ್ರಮವಹಿ ಸಬೇಕು.  ಸಂವಿಧಾನದತ್ತವಾಗಿ ಆಯಾ ಪತ್ರಿಕೆಗಳಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಒಗ್ಗಟ್ಟಿನಿಂದ ಹೋರಾಟ ನಡೆಸುವತ್ತ ಎಲ್ಲರೂ ಗಮನರಿಸಬೇಕೆಂದು ಕರೆ ನೀಡಿ ದರು.
ಉಪಾಧ್ಯಕ್ಷರಾಗಿ ಎನ್. ಮಂಜುನಾಥ  (ಶಿವಮೊಗ್ಗ), ಪ್ರಧಾನ ಕಾರ್ಯದರ್ಶಿ ಸಿದ್ದು  ಸುಬೇದಾರ್  (ಕಲಬುರಗಿ), ಸಹ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ (ಕೊಪ್ಪಳ), ಖಜಾಂಚಿ ಕಲಾವಿದ  ವಿಷ್ಣು (ಕೋಲಾರ), ನಿರ್ದೇಶಕರುಗಳಾಗಿ ಕೆ.ಕೆ. ಕುಲಕರ್ಣಿ (ವಿಜಯಾಪುರ), ಎಸ್. ಶ್ರೀನಿವಾಸ್ (ಚಿತ್ರದುರ್ಗ), ನಾಗತಿಹಳ್ಳಿ ನಾಗರಾಜ್ (ರಾಯ ಚೂರು), ಇ. ಪುರುಷೋತ್ತಮ (ಮಂಡ್ಯ), ಮುರುಗೇಶ್ ಬ. ಅಳಗವಾಡಿ (ಬಾಗಲಕೋಟೆ), ಎಂ.ಎಸ್. ಚಂದ್ರಯ್ಯ (ಚಿಕ್ಕಮ ಗಳೂರು), ರಶ್ಮಿ ಬಿ. ಪಾಟೀಲ (ವಿಜಯಪುರ), ಬಿ.ಆರ್. ವಿಜಯ ಕುಮಾರ್ ಒಡೆಯರ್ (ಬಿಡದಿ, ರಾಮನಗರ ಜಿಲ್ಲೆ), ಎಚ್.ಎಲ್. ಸುರೇಶ್ (ಬಂಗಾರ ಪೇಟೆ, ಕೋಲಾರ ಜಿಲ್ಲೆ), ಅಜೀಜ್ ವುಲ್ಲಾ ಸರಮಸ್ತ್ (ಕಲಬುರಗಿ) ಇವರುಗಳು ಅಧಿಕಾರ ಪದಗ್ರಹಣ ಮಾಡಿದರು.ಎಂದು ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ  ರಾಜ್ಯಾಧ್ಯಕ್ಷ.ರಾದ ಶ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Monday, 6 July 2015

ಸಂಸದ ಸಿ.ಎಸ್.ಪುಟ್ಟರಾಜುರವರನ್ನ ಕೃಷಿ ಹಾಗೂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಚೆ ದಿವ್ಯಶ್ರಿ ಪ್ರಭುಸ್ವಾಮಿ ಅಭಿನಂದಿಸಿದರು.


ಕೃಷ್ಣರಾಜಪೇಟೆ: ದೇಶ ಮತ್ತು ಸಮಾಜದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಂತಹ ವ್ಯಕ್ತಿಗಳು ಶಾರೀರಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿರುವ ಕೆಲಸ ಕಾರ್ಯಗಳು ಸದಾಕಾಲ ನಮ್ಮೊಂದಿಗೆ ಉಳಿದಿರುತ್ತವೆ, ಮಹಾನ್ ವ್ಯಕ್ತಿಗಳ ಸ್ಮರಣೆ ಮಾಡುವುದೇ ನಮ್ಮಭಾಗ್ಯ ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ತಿಳಿಸಿದರು.
ಅವರು ಹೊಸಹೊಳಲುವಿನ ಶ್ರೀ ಲಕ್ಷ್ಮೀನಾರಾಯಣ ಸಮುದಾಯ ಭವನದಲ್ಲಿ  ತಾಲೂಕಿನ ಹೋಟೆಲ್ ಉದ್ಯಮದ ಅಧ್ಯಕ್ಷ, ಹಿಂದೂಪರ ಸಂಘಟನೆಗಳÀ ಮುಖ್ಯಸ್ಥರಾಗಿದ್ದ ಯು.ಆರ್.ಗೋಪಾಲ್‍ರಾವ್  ಮತ್ತು ಸಂಘಪರಿವಾರದ ಕುಟುಂಬದÀ ರಾಧಮ್ಮರವರ ಶ್ರದ್ದಾಂಜಲಿಸಭೆಯಲ್ಲಿ ಮಾತನಾಡಿದರು.
ತಮ್ಮ ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಎಲ್ಲರೂ ಸ್ವಾರ್ಥಿಗಳಾದರೆ ಸಮಾಜದ ಅಭಿವೃದ್ಧಿಯನ್ನು ಯಾರು ಮಾಡುತ್ತಾರೆ. ಛಕ್ರಪತಿಶಿವಾಜಿ ಅಂದು ಹೋರಾಟ ಮಾಡಿದ್ದರೆ ಹಿಂದೂ ಸಮಾಜ ಏನಾಗುತ್ತಿತ್ತು ಎಂಬುದನ್ನು ಹೇಳಲು ಅಸಾಧ್ಯ, ವೀರ ಸಾವರ್ಕರ್, ಭಗತ್‍ಸಿಂಗ್, ಮೇಡಂಕಾಮಾ ಸುಭಾಷ್‍ಚಂದ್ರ ನಂತಹ ವ್ಯಕ್ತಿಗಳು ತಮ್ಮ ಕುಟುಂಬವನ್ನು ಮಾತ್ರ ರಕ್ಷಣೆಮಾಡಿಕೊಂಡು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡದಿದ್ದರೆ ಇಂದು ನಾವುಗಳು ಮತ್ತೊಬ್ಬರ ದಾಸ್ಯದಲ್ಲಿ ಬದುಕನ್ನು ಸಾಗಿಸಬೇಕಾಗಿತ್ತು. ಸಮಾಜಿಕ ಕಾರ್ಯಗಳಲ್ಲಿ ತಮ್ಮ ಜೀವನವನ್ನು ತೊಡಿಗಿಸಿಕೊಂಡಿದ್ದ ಗೋಪಾಲ್‍ರಾವ್‍ರವರು ನಮಗೆ  ಆದರ್ಶವ್ಯಕ್ತಿಯಾಗಿದ್ದರೆ. ತಾಲೂಕಿನಲ್ಲಿ ಸಂಘ ಪರಿವಾರ ನೆಲೆಯೂರಲು ದಿ.ಕೃಷ್ಣೇಗೌಡ, ದಿ.ಕೆ.ಟಿ.ಪಾಲಾಕ್ಷ, ದಿ.ಕೆ.ಎನ್.ಕೆಂಗೇಗೌಡ, ನಾಯಕನಹಳ್ಳಿ ನಂಜಪ್ಪ ಮತ್ತಿತರೊಂದಿಗೆ ಗೋಪಾಲ್‍ರಾವ್‍ರವರು ಶ್ರಮಿಸಿದ ಫಲ ಎಂದರೆ ತಪ್ಪಾಗಲಾರದು.
ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲು ಗುರು ಎಂಬ ಮಾತನ್ನು ಅಕ್ಷರಸಹ ಸತ್ಯಮಾಡಿರುವ ತಾಯಿ ರಾಧಮ್ಮನವರು ತಮಗೆ ಇರುವ ಇಬ್ಬರು ಮಕ್ಕಳನ್ನು ದೇಶ ಮತ್ತು ಧರ್ಮದ ರಕ್ಷಣೆಯ ಕಾರ್ಯದಲ್ಲಿ ತೊಡಗುವಂತೆ ಮಾಡಿದ್ದಾರೆ.  ರಾಧಮ್ಮನವರು ತಮ್ಮ ಮನೆಯಲ್ಲಿ ಜಾತಿ-ಬೇದ ಮರೆತು ಎಲ್ಲಾ ಮಕ್ಕಳಿಗೂ ತಮ್ಮ ಮನೆಯಲ್ಲಿ ಆಶ್ರಯನೀಡಿ ಪೋಷಣೆ ಮಾಡಿದ್ದಾರೆ. ಇಂತಹ ಮಹನೀಯರು  ಹಾಕಿಕೊಟ್ಟ ದಾರಿ ಯುವಕರಿಗೆ ಆದರ್ಶವಾಗಿವೆ ಎಂದು ಜಗದೀಶ್‍ಕಾರಂತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಕೆ.ಆರ್.ಹೇಮಂತ್‍ಕುಮಾರ್, ಟೈಲರ್‍ದಿನೇಶ್, ಕೋಳಿನಾಗರಾಜು, ಮುಖಂಡರಾದ ಮಂಡ್ಯಬಾಲು, ಮುರುಗೇಶ್, ಎಚ್.ಬಿ.ಮಂಜುನಾಥ್, ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ನಟರಾಜ್, ತಾಲೂಕು ಸಂಚಾಲಕ್ ಭಾಸ್ಕರ್‍ರಾಜೇಅರಸ್, ಡಿ.ಸಿ.ಕುಮಾರ್, ಯೋಗೇಶ್, ವಿಕ್ಕಿ ಮತ್ತಿತರು ಭಾಗವಹಿಸಿದ್ದರು.