Tuesday 17 June 2014

ಮೈಸೂರು-ಲೋಕಾಯುಕ್ತ ನ್ಯಾಯ ಮೂರ್ತಿ ಭಾಸ್ಕರ್ ರಾವ್.



ಲೋಕಾಯುಕ್ತ ನ್ಯಾಯ ಮೂರ್ತಿ  ಡಾ. ವೈ. ಭಾಸ್ಕರ ರಾವ್ ಅವರು ಮೈಸೂರಿನಲ್ಲಿ ದಿನಾಂಕ 21-06-2014 ರಂದು ಬೆಳಿಗ್ಗೆ 10 ಕ್ಕೆ ಮೈಸೂರು ಜಿಲ್ಲಾ ವ್ಯಾಪ್ತಿಯ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸುವರು ಹಾಗೂ ಸ್ವೀಕೃತವಾಗುವ ದೂರುಗಳ ಬಗ್ಗೆಯೂ ವಿಚಾರಣೆ ನಡೆಸುವರು.
   
ಸಾರ್ವಜನಿಕ ಹಾಗೂ ರಾಜ್ಯ sarkaari  ಕಚೇರಿಗಳಲ್ಲಿ ಸಾರ್ವಜನಿಕ ಮನವಿಗಳ ಹಾಗೂ ದೂರುಗಳ ಪರಿಶೀಲನೆಯಲ್ಲಿ ಜರುಗುತ್ತಿರುವ ವಿಳಂಬ. ಅಧಿಕಾರ ದುರುಪಯೋಗ, sarkaari ಹಣದ ದುರುಪಯೋಗ, ದುರಾಡಳಿತ, ಭ್ರಷ್ಟಾಚಾರ ಇತ್ಯಾದಿಗಳ ಬಗ್ಗೆ ಸಾರ್ವಜನಿಕರು  ಲೋಕಾಯುಕ್ತ ಕಾಯಿದೆ, 1984 ರ ಅಡಿಯಲ್ಲಿ ನಮೂನೆ-01 ಹಾಗೂ ನಮೂನೆ-02 ರಲ್ಲಿ ಕ್ರಮಬದ್ಧವಾಗಿ ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ನೋಂದಾಯಿಸುವ ಕಾರ್ಯಕ್ರಮವನ್ನು ದಿನಾಂಕ 20-06-2014 ರಂದು ಬೆಳಿಗ್ಗೆ 10 ಗಂಟೆಗೆಯಿಂದ ಸಂಜೆ 5 ಗಂಟೆಯವರೆಗೆ ಮೈಸೂರು ದಿವಾನ್ಸ್ ರಸ್ತೆಯಲ್ಲಿರುವ  ಲೋಕಾಯುಕ್ತ ಪೊಲೀಸ್ ಅಧೀಕ್ಷಕರವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
   
ಲೋಕಾಯುಕ್ತ justice  ಡಾ. ವೈ. ಭಾಸ್ಕರ ರಾವ್ ದಿನಾಂಕ 21-06-2014 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಮೈಸೂರು ನಗರದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ  ಲೋಕಾಯುಕ್ತ ಕಾಯಿದೆ, 1984ರ ಅಡಿಯಲ್ಲಿ ನಮೂನೆ-1 ಹಾಗೂ 2ರಲ್ಲಿ ಸಲ್ಲಿಸುವ ಹಾಗೂ ವಿಚಾರಣಾ ಹಂತಗಳಲ್ಲಿರುವ ಮೈಸೂರು ಜಿಲ್ಲಾ ವ್ಯಾಪ್ತಿಯ arji  ವಿಚಾರಣೆ ನಡೆಸುವರು.
  
ನೊಂದ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಮೈಸೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಜಗದೀಶ್ ಪ್ರಸಾದ್ ಹಾಗೂ ಮೈಸೂರು ಜಿಲ್ಲಾಧಿಕಾರಿ ಪಾಲಯ್ಯ ತಿಳಿಸಿದರು.
          
  
ಲೋಕಾಯುಕ್ತ justice  ಡಾ. ವೈ. ಭಾಸ್ಕರ ರಾವ್ ಅವರು ಜೂನ್ 19 ರಂದು ಬೆಂಗಳೂರಿನಿಂದ ಹೊರಟು ಸಂಜೆ 6 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಜೂನ್ 20 ರಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ ಹಾಗೂ ಇತರೆ ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡುವರು. ಅಂದು ಸಂಜೆ ಮೈಸೂರಿಗೆ ವಾಪಸಾಗಿ ವಾಸ್ತವ್ಯ ಮಾಡುವರು. ಜೂನ್ 21 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನಲ್ಲಿ ಬಾಕಿ ಇರುವ ಪ್ರಕರಣಗಳ ಹಾಗೂ ಹೊಸದಾಗಿ ಸ್ವೀಕೃತವಾಗುವ ಪ್ರಕರಣಗಳ ವಿಚಾರಣೆ ನಡೆಸುವರು. ಹಾಗೂ ವಾಸ್ತವ್ಯ ಮಾಡುವರು. ಜೂನ್ 22 ರಂದು ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವರು.

No comments:

Post a Comment