Friday, 16 September 2016

ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ಪ್ರವಾಸ ಕಾರ್ಯಕ್ರಮ

                                             ಪ್ರವಾಸ ಕಾರ್ಯಕ್ರಮ
     ಮೈಸೂರು.ಸೆ.16.ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಸೆಪ್ಟೆಂಬರ್ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಸೆಪ್ಟೆಂಬರ್ 17 ರಂದು ಮಧ್ಯಾಹ್ನ  1 ಗಂಟೆಗೆ ಮೈಸೂರಿಗೆ ಆಗಮಿಸಿದ ನಂತರ ಮೈಸೂರು ಜಗನ್ಮೋಹನ ಅರಮನೆಯಲ್ಲಿ ಮೈಸೂರು ಸಿಟಿ ಆರ್ಯವೈಶ್ಯ ಮಹಿಳಾ ಮಂಡಳಿಗಳ ಒಕ್ಕೂಟದಿಂದ ಆಯೋಜಿಸಿರುವ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ  ಹೂಡಲಿದ್ದಾರೆ. ಸೆಪ್ಟೆಂಬರ್ 18 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
     ಸೆಪ್ಟೆಂಬರ್ 19 ರಂದು ಬೆಳಿಗ್ಗೆ 8-30 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.  
ಪ್ರವಾಸ ಕಾರ್ಯಕ್ರಮ
   ಮೈಸೂರು.ಸೆ.16.ರಾಷ್ಟ್ರೀಯ ಪರಿಶಿಷ್ಟ ಪಂಗಡದ ಅಧ್ಯಕ್ಷರಾದ ಶ್ರೀ ಡಾ|| ರಾಮೇಶ್ವರ್ ಒರೋನ್, ಆಯೋಗದ ಜಂಟಿ ಕಾರ್ಯದರ್ಶಿಗಳಾದ ಅಶೋಕ ಪೈ, ಸಹಾಯಕ ನಿರ್ದೇಶಕರಾದ ಆರ್.ಕೆ.ದುಬೆ, ಆಪ್ತ ಕಾರ್ಯದರ್ಶಿ ಟಿ.ಡಿ. ಕುಕ್ರೆಜ ಅವರುಗಳ ಸೆಪ್ಟೆಂಬರ್ 19 ರಂದು ಹೆಚ್.ಡಿ.ಕೋಟೆ ಮೂಲಕ ಮೈಸೂರಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಸೆಪ್ಟೆಂಬರ್ 20 ರಂದು ಬಿಳಿಗಿರಿರಂಗ ಬೆಟ್ಟಕ್ಕೆ ತೆರಳುವರು.
 ಬಹಿರಂಗ ಹರಾಜು
    ಮೈಸೂರು.ಸೆ.16.-ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ಹಳೆಯ ಅನುಪಯುಕ್ತ ಕನ್ನಡ-40 ಮತ್ತು ಇಂಗ್ಲೀಷ್ -79  ಬೆರಳಚ್ಚು ಯಂತ್ರಗಳು ಒಟ್ಟು 119 ಬೆರಳಚ್ಚು ಯಂತ್ರ ಹಾಗೂ ಒಂದು ದ್ವಿಪ್ರತಿ ಯಂತ್ರವನ್ನು ದಿನಾಂಕ 29-09-2016 ರಂದು ಮಧ್ಯಾಹ್ನ 12 ಗಂಟೆಗೆ ಟೆಂಡರ್ ಕಂ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
   ಆಸಕ್ತರು ಟೆಂಡರ್‍ದಾರರು ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು, ಸರ್ಕಾರಿ ವಿಭಾಗೀಯ ಲೇಖನ ಸಾಮಗ್ರಿ ಮಳಿಗೆ, ಉಪ ನಿರ್ದೇಶಕರ ಕಾರ್ಯಾಲಯ, ಸರಸ್ವತಿಪುರಂ, ಮೈಸೂರು ದೂರವಾಣಿ ಸಂಖ್ಯೆ 0821-2343226/2540684 ನ್ನು ಸಂಪರ್ಕಿಸುವುದು.
    ಕೈತೋಟ ಮತ್ತು ತಾರಸಿ ತೋಟ
     ಮೈಸೂರು,ಸೆ.16.ತೋಟಗಾರಿಕೆ ಇಲಾಖೆ ವತಿಯಿಂದ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮದಡಿ ತರಕಾರಿ ಕಿಟ್‍ಗಳು ಮತ್ತು  ಸಾಮಾಗ್ರಿಗಳನ್ನು ವಿತರಣೆ  ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಮೈಸೂರು ನಗರದಲ್ಲಿ ಮಾತ್ರ ಅನುಷ್ಠಾನಗೊಳಿಸುತ್ತಿದ್ದು, ಕೈತೋಟ ಕಾರ್ಯಕ್ರಮದಡಿ 294 ಫಲಾನುಭವಿಗಳು ಹಾಗೂ ತಾರಸಿ ಕಾರ್ಯಕ್ರಮದಡಿ ಸಾಮಾನ್ಯ ವರ್ಗಕ್ಕೆ 294 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
      ಮೈಸೂರು ನಗರದಲ್ಲಿ ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಮಾಡಲು ಆಸಕ್ತಿ ಹೊಂದಿರುವವರು ನಾಗರೀಕರು ಜಿಲ್ಲಾ ತೋಟಗಾರಿಕೆ ಸಂಘ ಕರ್ಜನ್ ಪಾರ್ಕ್ ಮೈಸೂರಿನಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅರ್ಜಿಯನ್ನು ಅಕ್ಟೋಬರ್ 3 ರೊಳಗಾಗಿ ಸಲ್ಲಿಸುವುದು. ಈ ಹಿಂದೆ ಉಪಯೋಗ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸುವಂತಿಲ್ಲ.
     ಆಸಕ್ತಿಯುಳ್ಳ ಸಾಮಾನ್ಯ ಫಲಾನುಭವಿಗಳು ಅರ್ಜಿಯೊಂದಿಗೆ ಒಂದು ಭಾವಚಿತ್ರ, ವಿಳಾಸ ದಾಖಲಾತಿ ಹಾಗೂ ಪರಿಶಿಷ್ಟ ಜಾತಿ/ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಲಗತ್ತಿಸಿ ಸಲ್ಲಿಸುವುದು. ಮೊದಲು ಸ್ವೀಕರಿಸಿದ ಅರ್ಜಿಗಳ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಿ ತರಕಾರಿ ಕಿಟ್ ಹಾಗೂ ತೋಟಗಾರಿಕೆ ಸಾಮಾಗ್ರಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ  ಮೊಬೈಲ್ ಸಂಖ್ಯೆ 7259123145 ನ್ನು ಸಂಪರ್ಕಿಸುವುದು.
ಸೆಪ್ಟೆಂಬರ್ 20 ರಿಂದ ಕೌನ್ಸಿಲಿಂಗ್
      ಮೈಸೂರು.ಸೆ.16.ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2016-17ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ಕೌನ್ಸಿಲಿಂಗ್ ಸೆಪ್ಟೆಂಬರ್ 20 ರಿಂದ 23 ರವರೆಗೆ ಜಿಲ್ಲಾ ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಇಲ್ಲಿ ನಡೆಯಲಿದೆ.
ಸೆಪ್ಟೆಂಬರ್ 20 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 1 ರಿಂದ 400 ವರೆಗೆ ಕೌನ್ಸಿಲಿಂಗ್ ನಡೆಯಲಿದೆ. ಸೆಪ್ಟೆಂಬರ್ 21 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 401 ರಿಂದ 850 ವರೆಗೆ ಕೌನ್ಸಿಲಿಂಗ್ ನಡೆಯಲಿದೆ. ಸೆಪ್ಟೆಂಬರ್ 22 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 851 ರಿಂದ 1350 ವರೆಗೆ ಕೌನ್ಸಿಲಿಂಗ್ ನಡೆಯಲಿದೆ. ಸೆಪ್ಟೆಂಬರ್ 23 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 1351 ರಿಂದ 1749 ವರೆಗೆ, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಕ್ರಮ ಸಂಖ್ಯೆ 1 ರಿಂದ 75 ರವರೆಗೆ ಹಾಗೂ ವಿಶೇಷ ಶಿಕ್ಷಕರು ಕ್ರಮ ಸಂಖ್ಯೆ 1 ರಿಂದ 92 ರವರೆಗೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

No comments:

Post a Comment