ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಹೊಂಸ್ಟೇ ಹಾಗೂ ವಾಣಿಜ್ಯಮಳಿಗೆ ನೆಲಸಮ
ಮೈಸೂರು, ಸೆ. 10- ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಿದ್ದ ಹೋಂ ಸ್ಟೇ, ವಾಣಿಜ್ಯ ಮಳಿಗೆಗಳನ್ನು ಹುಣಸೂರು ಉಪವಿಭಾಗಾಧಿಕಾರಿ ಡಾ: ಸೌಜನ್ಯ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ.ಪಿರಿಯಾಪಟ್ಟಣ ತಾಲ್ಲೂಕು ಹಾರನಹಳ್ಳಿ ಹೋಬಳಿ ಗಿರಗೂರು ಗ್ರಾಮದ ಸರ್ವೆ ನಂ 33 ರಲ್ಲಿ ಲಕ್ಷ್ಮಣಮೊದಲಿಯಾರ್ ಎಂಬುವರು ಸುಮಾರು 12 ಕುಂಟೆ ಜಾಗ ಒತ್ತುವಾರಿ ಮಾಡಿ ಹೋಂ ಸ್ಟೇ, ಹಾಗೂ ಮುಜೀಬ್ ಬಿನ್ ಸಿಕಂದರ್ ಅವರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದರು ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಶ್ರೀ ರಾಮನಾಯಕ, ಅಮಾಸೆ ಕರಿಯಪ್ಪ ದೇವಿರಮ್ಮ ಎಂಬುವವರು ತಲಾ 30 ಗುಂಟೆ, ಕಾಳಯ್ಯ ಎಂಬುವವರು 10 ಗುಂಟೆ ಹಾಗೂ ಮಾರುತಿ ಅವರು 1 ಎಕರೆ ಗೋಮಾಳ ಒತ್ತುವರಿ ಮಾಡಿ ಮುಸುಕಿನ ಜೋಳ ಬೆಳೆದಿರುತ್ತಾರೆ. ಅದನ್ನು ಸಹ ತೆರವುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ತೆರವು ಕಾರ್ಯಾಚರಣೆಯನ್ನು ಬುಧುವಾರ ಆರಂಭಿಸಲಾಗಿದ್ದು, ಗುರುವಾರ ಸಂಜೆಯವರೆಗೆ ನಡೆಸಲಾಗಿದೆ. ಶನಿವಾರ ಮುಂದುವರಿಸಿ ಸರ್ಕಾರಿ ಭೂಮಿಯನ್ನು ಸಂರಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ತಹಶೀಲ್ದಾರ್ ಹೆಚ್.ಆರ್.ರಂಗರಾಜು,ಪೊಲೀಸ್ ಇನ್ಸ್‍ಪೆಕ್ಟರ್ ಸಿದ್ದಯ್ಯ, ಕಂದಾಯ ನಿರೀಕ್ಷಕ ಸಿ.ಮಹೇಶ್, ತಾಲ್ಲೂಕು ಸರ್ವೇಯರ್ ಬಿ.ಜಿ.ನಾರಾಯಣ ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಎಂ.ಕೆ.ಪ್ರದೀಪ್, ಸಿಬ್ಬಂದಿ ಕೆ.ಎಂ.ರಾಜು ಮತ್ತಿತ್ತರರು ಉಪಸ್ಥಿತರಿದ್ದರು ಎಂದು ಅವರು ಹೇಳಿದರು.
No comments:
Post a Comment