ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಸೆಪ್ಟೆಂಬರ್ 27 ರಂದು ಬೆಳಿಗ್ಗೆ 8-30 ಕ್ಕೆ ಅರಮನೆ ಆವರಣದಲ್ಲಿ ಮಾವುತರೊಂದಿಗೆ ಉಪಹಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಸೆಪ್ಟೆಂಬರ್ 27 ರಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾಗಲು ಇಚ್ಫಿಸಿರುತ್ತಾರೆ.
ಮಾಧ್ಯಮ ಪ್ರತಿನಿಧಿಗಳು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕಾಗಿ ಕೋರಿದೆ.
ಸೆಪ್ಟೆಂಬರ್ 29 ರಂದು ಉದ್ಯೋಗ ಮೇಳ
ಮೈಸೂರು.ಸೆ.26. ಎನ್.ಆರ್.ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 10 ಘಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಮೈಸೂರಿನ ಸುರಭಿ ಪ್ಲಾನ್‍ಟೆಕ್, ಬಿ.ಎಸ್.ಗೌಡ ಎಂಟರ್ ಪ್ರೈಸಸ್, ಯುರೇಕಾಫೋಬ್ರ್ಸ್, ತೇಜಸ್ವಿನಿ ಎಂಟರ್‍ಪ್ರೈಸಸ್, ಹಿಂದುಜಾಗ್ಲೋಬಲ್ ಸಲ್ಯೂಷನ್, ರಾಜಾ ಬಯೋಟೆಕ್, ರ್ಯಾಕ್ ಮಂಡ್ ಟೆಕ್ನಾಲಜಿ ಪ್ರೈ.ಲಿ., ಬೆಂಗಳೂರಿನ ರೀಟೇಲ್ ವಕ್ರ್ಸ್‍ಇಂಡಿಯಾ ಪ್ರೈ., ಲಿ., ಹಾಗೂ ಇನ್ನಿತರೆ ಖಾಸಗಿ ನಿಯೋಜಕರುಗಳು ಭಾಗವಹಿಸಲಿದ್ದಾರೆ. ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸಿ.ವಿಶ್ವನಾಥ ಸಹಾಯಕ ನಿರ್ದೇಶಕರು, ಜಿಲಾ ್ಲಉದ್ಯೋಗ ವಿನಿಮಯ ಕಛೇರಿ, ಮೈಸೂರು-07 ದೂರವಾಣಿ ಸಂಖ್ಯೆ: 0821-2489972 ನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 29 ಹಾಗೂ 30 ರಂದು ಸುಕನ್ಯಾ ಸಮೃದ್ಧಿ ಖಾತೆ ಮೇಳ
ಮೈಸೂರು.ಸೆ.26.ಮೈಸೂರು ಅಂಚೆ ವಿಭಾಗವೂ ಉದಯಗಿರಿ ಅಂಚೆ ಕಛೇರಿಯಲ್ಲಿ “ಸುಕನ್ಯಾ ಸಮೃದ್ಧಿ ಖಾತೆ” ತೆರೆಯಲು ದಿನಾಂಕ 29.09.2016 & 30.09.2016 ರಂದು ಬೆಳಗ್ಗೆ 10 ಘಂಟೆ ಯಿಂದ ಸಂಜೆ 5 ರವರಗೆ “ಸುಕನ್ಯಾ ಸಮೃದ್ಧಿ ಖಾತೆ ಮೇಳ” ವನ್ನು ಅಯೋಜಿಸಿದೆ. 10 ವರ್ಷ ಒಳಪಟ್ಟ ಹೆಣ್ಣು ಮಕ್ಕಳ ಪೆÇೀಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ಉದಯಗಿರಿ ಅಂಚೆ ಕಛೇರಿ – 0821-2417336, ಇಲಾಖಾ ಪ್ರತಿನಿಧಿ– 9448164945, 9480809757 ನ್ನು ಸಂಪರ್ಕಿಸಬಹುದು.
ಅಕ್ಟೋಬರ್ 2 ರಂದು ಕುರಿಮಂಡಿ ಕಸಾಯಿಖಾನೆ ಬಂದ್
ಮೈಸೂರು.ಸೆ.26.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಗಾಂಧಿ ಜಯಂತಿ ಪ್ರಯುಕ್ತ 2016 ರ ಅಕ್ಟೋಬರ್ 2 ರಂದು ಮುಚ್ಚಲಾಗುವುದು. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರ ಸ್ವೀಕಾರ
ಮೈಸೂರು.ಸೆ.26.ಮೈಸೂರಿನ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್‍ರಾಗಿ ರಂಗಯ್ಯ ಅವರು ಸೆಪ್ಟೆಂಬರ್ 16 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.
ಸದರಿಯವರನ್ನು ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು-570023 ವಿಳಾಸ ಅಥವಾ ದೂರವಾಣಿ ಸಂಖ್ಯೆ 0821-2560853 ನ್ನು ಮೂಲಕ ಸಂಪರ್ಕಿಸಬಹುದು.
ಪಿಎಂಇಜಿಪಿ ಯೋಜನೆ : ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ
ಮೈಸೂರು.ಸೆ.26.ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ದಿನಾಂಕ 31-08-2016 ರಂದು ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ತೀರ್ಮಾನಿಸಿದ ಪ್ರಕಾರ ಪಿಎಂಇಜಿಪಿ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಫಿಸುವ ಅಭ್ಯರ್ಥಿಗಳು 2016-17ನೇ ಸಾಲಿಗೆ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ದಿನಾಂಕ 01-07-2016 ಕ್ಕೆ ಮುಂಚಿತವಾಗಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಸಹ ಪುನ: ಆನ್‍ಲೈನ್ ಮುಖಾಂತರ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಲೇ ಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.ಠಿmegಠಿ.iಟಿ / ತಿತಿತಿ.ಞviಛಿ.oಡಿg.iಟಿ ನ್ನು ಸಂಪರ್ಕಿಸುವುದು.
ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು.ಸೆ.26.-ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ/ಸಲ್ಲಿಸಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ/ಸಲ್ಲಿಸುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ
ನಿಗದಿತ ಅರ್ಜಿಯನ್ನು ವೆಬ್ ಸೈÀಟ್ (hಣಣಠಿ://ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞಚಿಡಿ.ಟಿiಛಿ.iಟಿ) ನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 14 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುಲಿಕೇಶಿ ರಸ್ತೆ, ತಿಲಕ್‍ನಗರ, ಮೈಸೂರು-570001 ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2490333/0821-2490111 ನ್ನು ಸಂಪರ್ಕಿಸುವುದು.
ಫಲಪುಷ್ಪ ಪ್ರದರ್ಶನ
ಮೈಸೂರು.ಸೆ.26.ಮೈಸೂರು ವಿಶ್ವವಿದ್ಯಾನಿಲಯ ತೋಟಗಾರಿಕಾ ವಿಭಾಗವು 13ನೇ ವರ್ಷದ ದಸರಾ ಫಲಪುಷ್ಪ ಪ್ರದರ್ಶನವನ್ನು ಕುಕ್ಕರಹಳ್ಳಿ ಕೆರೆಯ ಪೂರ್ವ ಹಾಗೂ ಪಶ್ಚಿಮ ದಂಡೆಯಲ್ಲಿ ಅಕ್ಟೋಬರ್ 1 ರಿಂದ ಅಕ್ಟೋಬರ್ 12 ರವರೆಗೆ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಈ ಪ್ರದರ್ಶನವನ್ನು ಅಕ್ಟೋಬರ್ 1 ರಂದು ಸಂಜೆ 5 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವರಾದ ಪ್ರೊ. ಕೆ.ಎಸ್. ರಂಗಪ್ಪ ಅವರು ಉದ್ಘಾಟಿಸಲಿದ್ದಾರೆ.
ಪುಷ್ಪ ಪ್ರದರ್ಶನದಲ್ಲಿ ವಿವಿಧ ಪುಷ್ಪಗಳು, ಮಾದರಿ ಎಲೆ ಗಿಡಗಳು ಹಾಗೂ ವೈವಿದ್ಯಮಯ ತರಕಾರಿ ಗಿಡಗಳನ್ನು ಪ್ರದರ್ಶಿಸಲಾಗುವುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ನಗರದ ಜನತೆ ಹಾಗೂ ಪ್ರವಾಸಿಗರು ಕುಕ್ಕರಹಳ್ಳಿ ಕೆರೆಯ ಸುಂದರ ಪ್ರಕೃತಿ ತಾಣಕ್ಕೆ ಭೇಟಿ ನೀಡುವಂತೆ ಮೈಸೂರು ವಿಶ್ವವಿದ್ಯಾನಿಲಯ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತ ದಸರಾ ಸೆಪ್ಟೆಂಬರ್ 29 ರಂದು ಕ್ರೀಡಾ ಕಾರ್ಯಕ್ರಮ
ಮೈಸೂರು.ಸೆ.26.ಮೈಸೂರು ದಸರಾ ಪ್ರಯುಕ್ತ ಮೈಸೂರು ತಾಲ್ಲೂಕಿನ ರೈತ ದಸರಾ ಕ್ರೀಡಾ ಕಾರ್ಯಕ್ರಮಗಳನ್ನು ಇಲವಾಲ ಹೋಬಳಿಯ ಇಲವಾಲ ಗ್ರಾಮದ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರುಹಾಗೂ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುವುದು.
ಮಹಿಳೆಯರಿಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟು ಓಡುವ ಸ್ಪರ್ಧೆ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಗುಂಡು ಎತ್ತುವ ಸ್ಪರ್ಧೆ, ಗೊಬ್ಬರ ಚೀಲ (50.ಕೆ.ಜಿ) ಹೊತ್ತು ಓಡುವ ಸ್ಪರ್ಧೆ ಹಾಗೂ ಕೆಸರು ಗದ್ದೆಯಲ್ಲಿ ಓಡುವ ಸ್ಪಧೆಗಳು ನಡೆಯಲಿವೆ. ರೈತ ಬಾಂಧವರು ರೈತ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ
ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಇಲವಾಲ ಕಂದಾಯ ಅಧಿಕಾರಿಗಳು ಮೊಬೈಲ್ ಸಂಖ್ಯೆ 9845313357, ಕೃಷಿ ಅಧಿಕಾರಿಗಳು ಮೊಬೈಲ್ ಸಂಖ್ಯೆ 7259005804 ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೊಬೈಲ್ ಸಂಖ್ಯೆ 9844238816 ಗಳನ್ನು ಸಂಪರ್ಕಿಸಬಹುದು.
ಸೆಪ್ಟೆಂಬರ್ 27 ರಂದು ಯೋಗ ಚಾರಣಾ ಕಾರ್ಯಕ್ರಮ
ಮೈಸೂರು.ಸೆ.26.ಮೈಸೂರು ದಸರಾ ಮಹೋತ್ಸವ -2016 ರ ಯೋಗ ದಸರಾ ಉಪ ಸಮಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಯೋಗ ಚಾರಣಾ ಕಾರ್ಯಕ್ರಮ ಸೆಪ್ಟೆಂಬರ್ 27 ರಂದು ಬೆಳಿಗ್ಗೆ 6 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಪ್ರಾರಂಭಿಕ ಮೆಟ್ಟಿಲುಗಳ ಬಳಿ ಆಯೋಜಿಸಿದೆ.
ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ ಅವರು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹಮದ್, ಶಾಸಕ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ಡಿ. ರಂದೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸೆಪ್ಟೆಂಬರ್ 28 ರಂದು ಸಿನಿಮಾ ಸಮಯದಲ್ಲಿ ಪಲ್ಲಟ
ಮೈಸೂರು.ಸೆ.26.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ, ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸಿನಿಮಾ ಸಮಯದಲ್ಲಿ ಸೆಪ್ಟೆಂಬರ್ 28 ರಂದು ಬುಧವಾರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ರಘು ಎಸ್.ಪಿ. ಅವರು ನಿರ್ದೇಶನದ ಪಲ್ಲಟ ಕನ್ನಡ ಚಲನಚಿತ್ರ ಪ್ರದರ್ಶಿಸಲಾಗುವುದು.
ಚಲನಚಿತ್ರ ಮುಗಿದ ನಂತರ ಪಲ್ಲಟ ಚಲನಚಿತ್ರದ ನಿರ್ದೇಶಕ ರಘು ಎಸ್.ಪಿ., ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಹಾಗೂ ಸಿನಿ ವಿಮರ್ಶಕ ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ್ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ ಹನೂರು ಅವರು ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.
ಇದಕ್ಕೂ ಮುನ್ನ ಅಂದು ಸಂಜೆ 5-30 ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು.
‘ಪಲ್ಲಟಗಳೆಂಬ ತಲ್ಲಣಗಳ ಸುತ್ತ...
ಗ್ರಾಮಭಾರತದ ಇಂದಿನ ಚಿತ್ರಣ ಹಿಂದಿನಂತಿಲ್ಲ. ಬದಲಾವಣೆಗೆ ಪಕ್ಕಾದ ಆಧುನಿಕ ಬದುಕಿನಂತೆಯೇ ಭಾರತದ ಹಳ್ಳಿಗಳ ಬಾಳೂ ಹೊಸ ಗಾಳಿಗೆ ತೆರೆದುಕೊಂಡಿದೆ. ‘ಹೊಸ ಗಾಳಿ’ ಎಂಬುದನ್ನು ನಾವು ಆಧುನಿಕತೆ ಎಂದೂ ಕರೆಯುವ ಸ್ಥಿತಿಯಲ್ಲಿ ಈಗ ಇಲ್ಲ. ಯಾಕೆಂದರೆ ಅಲ್ಲಿದ್ದ ಹಳೆಯ ವಿಚಾರಗಳು, ನಡಾವಳಿಗಳು, ಗ್ರಾಮೀಣರ ಬದುಕು, ಮೌಢ್ಯಗಳು ಕಂಡೂ ಕಾಣದಂತಿದ್ದರೂ ಪಳೆಯುಳಿಕೆಗಳಂತೆಯೇ ಕಣ್ಣಮುಂದಿನ ಊರ ‘ಮಾರಿ’ಹಬ್ಬಗಳಂತೆಯೇ ಉಳಿದುಕೊಂಡು ಬಂದಿವೆ.
ಪ್ರಜಾಪ್ರಭುತ್ವದ ಮಹತ್ವದ ಬದಲಾವಣೆಗಳನ್ನು ಇಂಡಿಯಾದ ಗ್ರಾಮ ಸಮಾಜ ಕಂಡಿದ್ದರೂ ಇಂದಿಗೂ ಹಳ್ಳಿಗಳನ್ನು ಭೂತ ಕಾಲದ ಭ್ರೂಣಗಳಂತೆ ಹಳೆಯ ಸಂಪ್ರದಾಯಗಳೇ ಆಳುತ್ತಿರುವುದು ಸುಳ್ಳಲ್ಲ. ಅಕ್ಷರಲೋಕವನ್ನು ಕಣ್ಣೆದುರಿಗೆ ಕಂಡಿದ್ದರೂ ನಮ್ಮ ಹಳ್ಳಿಗರು ಮುಗ್ಧರಂತೆಯೂ ಶೋಷಿತರಂತೆಯೂ ಅಥವಾ ಇವೆರಡನ್ನೂ ಒಟ್ಟಿಗೆ ಅನುಭವಿಸುತ್ತಿರುವ ಪಾತ್ರಗಳಂತೆಯೂ ಬದುಕುತ್ತಿರುವುದನ್ನು ಈಗಲೂ ನಮ್ಮ ಸುತ್ತಮುತ್ತಲಿನ ಸಾವಿರಾರು ಊರುಗಳಲ್ಲಿ ಕಾಣಬಹುದು.
ಹಳ್ಳಿಯೊಂದರಲ್ಲಿ ಶೋಷಣೆ ಎಂಬುದು ಶೋಷಣೆಯಂತೆ ಕಾಣುತ್ತಿಲ್ಲ. ಮೌಢ್ಯವೆಂಬುದು ಆಚರಣೆಯಂತೆಯೂ, ನಂಬಿಕೆ ಎಂಬುದು ಗುಲಾಮಗಿರಿಯಂತೆಯೂ ಒಟ್ಟೊಟ್ಟಿಗೆ ಆಳುತ್ತಿರುವ ತಲ್ಲಣಗಳು ಈಗಲೂ ಹಳ್ಳಿಗಳ ಕರುಳನ್ನು ಹಿಂಡುತ್ತಿವೆ. ಹಾಗೆಂದು ಇಲ್ಲಿ ನೋವೆಂಬುದೇ ಎಲ್ಲವೂ ಆಗಿಲ್ಲ. ಹಳ್ಳಿಯ ಒಡಬಾಳಿನ ಉಲ್ಲಾಸದ ಕ್ಷಣಗಳು, ನಲಿವಿನ ಗಳಿಗೆಗಳು ಎಲ್ಲವೂ ಮಿಳಿತಗೊಂಡಿವೆ. ಅದರ ನಡುವೆಯೂ ಗ್ರಾಮ ಸಮಾಜದ ಜೀವಗಳನ್ನು ಇಟ್ಟಾಡಿಸುವ, ತಟ್ಟಾಡಿಸುವ ಹತ್ತಾರು ಪಲ್ಲಟಗಳೂ ಇಲ್ಲಿವೆ. ಇಂತಹ ವೈವಿಧ್ಯಮಯ ‘ಪಲ್ಲಟ’ಗಳನ್ನು ಕಟ್ಟಿಕೊಡುವ ಪ್ರಯತ್ನವೊಂದು ಈ ಸಿನಿಮಾದಲ್ಲಿದೆ...
ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ
No comments:
Post a Comment