Thursday, 22 September 2016

ವಿಷಯ : ಐಐಎಮ್‍ಬಿ ಕಾರ್ಯಕ್ರಮದಲ್ಲಿ ತೀಸ್ತಾ ಸೆತಲ್ವಾಡ್‍ಗೆ ವೇದಿಕೆ ನೀಡುತ್ತಿರುವುದನ್ನು ಯುವಮೋರ್ಚಾದಿಂದ ಖಂಡನೆ.

 ಐಐಎಮ್‍ಬಿ ಕಾರ್ಯಕ್ರಮದಲ್ಲಿ ತೀಸ್ತಾ ಸೆತಲ್ವಾಡ್‍ಗೆ ವೇದಿಕೆ ನೀಡುತ್ತಿರುವುದನ್ನು ಯುವಮೋರ್ಚಾದಿಂದ ಖಂಡನೆ.
  
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಹಾಗೂ ದೇಶಕ್ಕೆ ಉತ್ತಮ ಕೊಡುಗೆಗಳನ್ನು, ಪ್ರತಿಭಾವಂತರನ್ನು ನೀಡುತ್ತಿರುವ ಬೆಂಗಳೂರಿನ ಐಐಎಮ್‍ಬಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್) ಸಂಸ್ಥೆಯು ‘ಥಿಂಕ್ ಈಸ್ಟ್-2016’ ಎಂಬ ಹೆಸರಿನ ಮೂರು ದಿನಗಳ ಮ್ಯಾನೇಜ್‍ಮೆಂಟ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ದಿನಾಂಕ 23/08/2016 ರಂದು ದೇಶದ ವಿವಾದಿತ ಲೇಖಕಿ ತೀಸ್ತಾ ಸೇತಲ್ವಾಡ್‍ರನ್ನುಮುಖ್ಯ ಭಾಷಣಕಾರರಾಗಿ ಕರೆಸುತ್ತಿರುವುದನ್ನು ಯುವಮೋರ್ಚಾ ಕರ್ನಾಟಕದ ಅಧ್ಯಕ್ಷ ಪ್ರತಾಪ್ ಸಿಂಹ ತೀವ್ರವಾಗಿ ಖಂಡಿಸಿದ್ದಾರೆ.
ತೀಸ್ತಾ ಸೇತಲ್ವಾಡ್‍ರ ‘ಸಬ್ರಾಂಗ್ ಕಮ್ಯುನಿಕೇಷನ್ಸ್’ ಸಂಸ್ಥೆಯು ವಿದೇಶದಿಂದ ಲೆಕ್ಕವಿಲ್ಲದೇ ಹಣಗಳನ್ನು ಪಡೆದು ದೇಶದಲ್ಲಿ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಗುಜರಾತ್‍ನ ಗೋಧ್ರಾ ಘಟನೆಯನ್ನು ಮುಂದಿಟ್ಟುಕೊಂಡು ಪ್ರಪಂಚದಾದ್ಯಂತ ದೇಣಿಗೆ ಸಂಗ್ರಹಿಸಿ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ, ಗುಜರಾತ್‍ನ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ನರೇಂದ್ರ ಮೋದಿಯವರನ್ನು ಸಿಕ್ಕಿಸುವ ಷಡ್ಯಂತ್ರ ಮಾಡಿದ್ದು ಸುಪ್ರಿಮ್ ಕೋರ್ಟ್‍ನ ಆದೇಶದಿಂದಲೇ ಜಗಜ್ಜಾಹಿರಾಗಿದೆ. ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಮೋಸ ಮಾಡಲು ಯತ್ನಿಸಿದ ಇಂತಹ ವ್ಯಕ್ತಿಯನ್ನು ಯುವ ವಿದ್ಯಾರ್ಥಿಗಳೆದುರು ಮಾದರಿ ವ್ಯಕ್ತಿ ಎಂಬಂತೆ ಕಾರ್ಯಕ್ರಮಕ್ಕೆ ಕರೆದಿರುವುದು ಶೋಚನೀಯ. ತೀಸ್ತಾ ಸೆತಲ್ವಾಡ್‍ರ ಸಂಸ್ಥೆಯ ಮೇಲೆ ಹಣಕಾಸಿನ ವಿಚಾರದಲ್ಲಿ ಇ.ಡಿ (ಎನ್‍ಫೋರ್ಸ್‍ಮೆಂಟ್ ಡೈರಕ್ಟರೇಟ್) ಹಾಗೂ ಸಿಬಿಐನಿಂದ ತನಿಖೆ ನಡೆಯುತ್ತಿದೆ. ಸರ್ವೋಚ್ಛ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವ ತೀಸ್ತಾ ಸೆತಲ್ವಾಡ್, ತನ್ನ ಸಂಸ್ಥೆಯ ಮುಖಾಂತರ ನಮ್ಮ ದೇಶದಲ್ಲಿ ನಕ್ಸಲ್ ಹಾಗೂ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದು, ಈ ರೀತಿಯ ದೇಶ ವಿರೋಧಿ ಕೆಲಸಗಳಲ್ಲಿ ತೊಡಗಿರುವ ಇಂತಹ ವ್ಯಕ್ತಿಗೆ, ಪ್ರತಿಷ್ಠಿತ ಐಐಎಮ್‍ಬಿ ಸಂಸ್ಥೆಯುವೇದಿಕೆ ನೀಡುತ್ತಿರುವುದು ಖಂಡನೀಯವಾಗಿದೆ. ಇನ್ನು ಮುಂದೆ ಇಂತಹ ವ್ಯಕ್ತಿಗಳನ್ನು ಆಹ್ವಾನಿಸುವ ಮೊದಲು ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಐಐಎಮ್‍ಬಿ ವಿರುದ್ಧ ಯುವಮೋರ್ಚಾ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ಧಾರೆ.

No comments:

Post a Comment