Thursday, 22 September 2016

ತಾಯಿ ಚಾಮುಂಡೇಶ್ವರಿಗೆ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಲ್ಲಜಮ್ಮ ಪೂಜೆ.

  

  ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಲ್ಲಜಮ್ಮ ಅವರು ನೂರಾರು ಮಹಿಳೆಯರೊಂದಿಗೆ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಬೆಳಿಗ್ಗೆ 7 ಗಂಟೆಗೆ ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟವನ್ನು ಹತ್ತಿ ರಾಜ್ಯದಲ್ಲಿ ಉದ್ಬವಿಸಿರುವ ನೀರಿನ ಸಮಸ್ಯೆಯನ್ನು ನಿವಾರಿಸುವಂತೆ ಪೂಜೆ ಸಲ್ಲಿಸುವರು.
              ದಸರಾ ರಜೆ ಅವಧಿಯನ್ನು ಮಾರ್ಪಾಡಿಸಲು ಶಿಕ್ಷಣ ಆಯುಕ್ತರಿಗೆ ಜಿಲ್ಲಾಧಿಕಾರಿಗಳ ಪತ್ರ
      ಮೈಸೂರು.ಸೆ.22. ಈ ಬಾರಿ ಮಕ್ಕಳಿಗಿಲ್ಲ ದಸರಾ ರಜಾ–ಮಜಾ, ಮಕ್ಕಳಿಗಿಲ್ಲ ದಸರಾ ಹಬ್ಬದ ಪೂರ್ಣ ರಜಾ-ಮಜಾ ಎಂಬ ಶೀರ್ಷಿಕೆಯಡಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ  ರಂದೀಪ್ ಡಿ. ಅವರು ದಸರಾ ಸಾಂಸ್ಕøತಿಕ ಹಬ್ಬದಲ್ಲಿ ಮಕ್ಕಳು ಸಂತೋಷವಾಗಿ ಪಾಲ್ಗೊಳ್ಳಲಿ ಎಂಬ ಸದುದ್ದೇಶದಿಂದ ದಸರಾ ರಜೆ ಅವಧಿ ಮಾರ್ಪಾಡಿಸುವಂತೆ ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬುಧವಾರ ಪತ್ರ ಬರೆದಿದ್ದಾರೆ.
     ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಮಕ್ಕಳ ದಸರಾ ಕಾರ್ಯಕ್ರಮ ಅಕ್ಟೋಬರ್ 4 ರಿಂದ 6 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಸಹಾ ಆಯೋಜಿಸಲಾಗಿದೆ.
    ಶಿಕ್ಷಣ ಇಲಾಖೆಯು ದಸರಾ ಮಧ್ಯಾಂತರ ರಜೆಯನ್ನು ಅಕ್ಟೋಬರ್ 9 ರಿಂದ 27 ರವರೆಗೆ ಘೋಷಿಸಿತ್ತು. ದಸರಾ ಕಾರ್ಯಕ್ರಮಗಳು ಅಕ್ಟೋಬರ್ 1 ರಿಂದ ಪ್ರಾರಂಭವಾಗಿ ಅಕ್ಟೋಬರ್  11 ರವರೆಗೆ ನಡೆಯಲಿದೆ. ಅಕ್ಟೋಬರ್ 9 ರಿಂದ ದಸರಾ ರಜೆ ಪ್ರಾರಂಭವಾದಲ್ಲಿ ಮಕ್ಕಳು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು  ರಜೆಯ ಅವಧಿಯನ್ನು ಮಾರ್ಪಾಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
     ಮಕ್ಕಳ ಸಾಂಸ್ಕøತಿಕ ಬೆಳವಣಿಗೆ ದಸರಾ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ದಸರಾ ಮಧ್ಯಂತರ ರಜಾ ಅವಧಿಯನ್ನು ಅಕ್ಟೋಬರ್ 3 ರಿಂದ 21 ರವರೆಗೆ ಘೋಷಿಸುವಂತೆ ಅವರು ಆಯುಕ್ತರಲ್ಲಿ ಕೋರಿದ್ದಾರೆ.
ಸಂಪೂರ್ಣ ಬೆಂಬಲ
       ಮೈಸೂರು.ಸೆ.22.ಸರ್ವೋಚ್ಫ ನ್ಯಾಯಾಲಯದ ಇತ್ತೀಚಿನ ಕಾವೇರಿ ನದಿ ನೀರಿನ ತೀರ್ಪಿನಂತೆ ನದಿ ನೀರನ್ನು ತಮಿಳುನಾಡಿಗೆ ಬಿಡುವುದರ ಬಗ್ಗೆ ವಿರೋಧಿಸಿ ರಾಜ್ಯದ ಜನರ ಹತಾಷೆ ಬುಗಿಲೆದ್ದು ತೀವ್ರವಾಗಿ ಪ್ರತಿಭಟಿಸುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳೊಡನೆ ಚರ್ಚಿಸಿ ಮಂತ್ರಿ ಮಂಡಲದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಬಿಡಬಾರದೆಂದು ತೀರ್ಮಾನಿಸಿದ್ದು, ಈ ಹಿನ್ನಲೆಯಲ್ಲಿ ದಿನಾಂಕ 23-09-2016 ರಂದು ಶುಕ್ರವಾರ ವಿಧಾನ ಸಭೆಯಲ್ಲಿ ನಿರ್ಣಯವನ್ನು ಮಂಡಿಸಿ ಸದನದ ಸಂಪೂರ್ಣ ಒಪ್ಪಿಗೆಯನ್ನು ಪಡೆಯಲು ಮಂಡಿಸಿರುವ ನಿರ್ಣಯಕ್ಕೆ ನನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಕೇಂದ್ರ ಸಚಿವರು ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ವಿ. ಶ್ರೀನಿವಾಸ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
      ಮೈಸೂರು.ಸೆ.22.-ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನವನ್ನು 2ನೇ ಅಕ್ಟೋಬರ್ 2014 ರಿಂದ ಪ್ರಾರಂಭಿಸಿದ್ದು, ಸದರಿ ಯೋಜನೆಯು ಮುಂದಿನ 5 ವರ್ಷಗಳ ಕಾಲಾವಧಿಯವರೆಗೆ (2ನೇ ಅಕ್ಟೋಬರ್ 2019 ರವರೆಗೆ) ಜಾರಿಯಲ್ಲಿರುತ್ತದೆ. ಸದರಿ ಯೋಜನೆಯ ಪ್ರಮುಖ ಉದ್ದೇಶ ಬಯಲು ಶೌಚ ಮುಕ್ತ ನಗರಗಳನ್ನು ಸೃಜಿಸುವುದು ಆಗಿರುತ್ತದೆ. ಈ ಸಂಬಂದಿಸಿದಂತೆ, ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಬಯಲು ಶೌಚ ಮುಕ್ತ ವಾರ್ಡ್‍ಗಳನ್ನು ಘೋಷಿಸಬೇಕಿದೆ.
ಪ್ರತಿ ವಾರ್ಡ್‍ನಲ್ಲಿ ಬಯಲು ಶೌಚ ಮುಕ್ತ ವಾರ್ಡ್ ಪ್ರದೇಶ ಎಂದು ಘೋಷಿಸಲು,  ಆಯಾ ವಾರ್ಡಿನ ಎಲ್ಲಾ ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿಸುತ್ತಿರುವ ಬಗ್ಗೆ  ಹಾಗೂ ಸ್ವ ಸಹಾಯ ಸಂಘಗಳು ತಮ್ಮ ವಾರ್ಡ್‍ನ ಎಲ್ಲಾ ನಿವಾಸಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯಿದ್ದು ಹಾಗೂ ಪ್ರತಿನಿತ್ಯ ಉಪಯೋಗಿಸುತ್ತಿರುವ ಬಗ್ಗೆ ಉಪ ಘೋಷಣೆಯನ್ನು ಪಡೆದು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಟ್ಟು 65 ವಾರ್ಡ್‍ಗಳಲ್ಲಿ ವಾರ್ಡ್ ನಂ.48, ನಾರ್ಥ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ(ಕಲ್ಪವೃಕ್ಷ ನಗರ) ವನ್ನು ಹೊರತುಪಡಿಸಿ, 64 ವಾರ್ಡ್‍ಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಲಾಗಿತ್ತು.
ಪ್ರಸ್ತುತ ಉಳಿದ ಒಂದು ವಾರ್ಡ್ ಆದ, ವಾರ್ಡ್ ನಂ. 48 ನ ನಾರ್ಥ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ(ಕಲ್ಪವೃಕ್ಷ ನಗರ) ಅನ್ನು ಬಯಲು ಶೌಚ ಮುಕ್ತ ವಾರ್ಡ್ ಎಂದು ಘೋಷಿಲು ವಾರ್ಡ್‍ನ ಎಲ್ಲಾ ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿಸುತ್ತಿರುವ ಬಗ್ಗೆ  ಹಾಗೂ ಸ್ವ ಸಹಾಯ ಸಂಘಗಳು ತಮ್ಮ ವಾರ್ಡ್‍ನ ಎಲ್ಲಾ ನಿವಾಸಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯಿದ್ದು ಹಾಗೂ ಪ್ರತಿನಿತ್ಯ ಉಪಯೋಗಿಸುತ್ತಿರುವ ಬಗ್ಗೆ ಉಪ ಘೋಷಣೆಯನ್ನು ಪಡೆದು ದಿನಾಂಕ:- 17-09-2016. ರಂದು ನಡೆದ ಕಾರ್ಪೋರೇಷನ್ ಕೌನ್ಸಿಲ್ ಸಭೆಯಲ್ಲಿ  ಮಂಡಿಸಿ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ 48. ನಾರ್ಥ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ(ಕಲ್ಪವೃಕ್ಷ ನಗರ) ಅನ್ನು ಬಯಲು ಶೌಚ ಮುಕ್ತ ವಾರ್ಡ್ ಎಂದು ಘೋಷಿಸಿ ಅನುಮೋದನೆಯನ್ನು ಪಡೆಯಲಾಗಿರುತ್ತದೆ. ನಗರ ವ್ಯಾಪ್ತಿಯಲ್ಲಿ ಮೂತ್ರ ವಿಸರ್ಜನೆ ಅಥವಾ ಬಯಲು ಶೌಚ ಮಾಡುತ್ತಿರುವುದು ಕಂಡು ಬಂದಲ್ಲಿ ಮೊದಲನೇ ಬಾರಿಗೆ ರೂ. 100/- ದಂಡ ವಿಧಿಸಲಾಗುವುದು ಹಾಗೂ ಪುನರಾವರ್ತನೆಯಾದಲ್ಲಿ ರೂ. 200/- ಗಳ ದಂಡ ವಿಧಿಸಲಾಗುವುದು.
      ಬಯಲು ಶೌಚ ವಾರ್ಡ್ ಎಂದು ಘೋಷಿಸಿರುವ ಬಗ್ಗೆ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲಿ, ಸಾರ್ವಜನಿಕರು 23.09.2016 ರೊಳಗೆ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಇವರಿಗೆ ಸಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಅಂಚೆ ಸಂತೆ

     ಮೈಸೂರು.ಸೆ.22.ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ವತಿಯಿಂದ  ಚಾಮರಾಜನಗರ ಜಿಲ್ಲೆಯ ಬೇಗೂರು ಹೋಬಳಿಯಲ್ಲಿ ಅಂಚೆ ಸಂತೆಯನ್ನು ಸೆಪ್ಟೆಂಬರ್ 27 ರಂದು ಹಮ್ಮಿಕೊಳ್ಳಲಾಗಿದೆ.
    ಈ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣಾ ಅಂಚೆ ಜೀವ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುವುದು. ವಾಟಾಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ಅವರು ಕೋರಿದ್ದಾರೆ

No comments:

Post a Comment