Thursday, 22 September 2016

ಸೆಪ್ಟೆಂಬರ್ 23 ರಂದು ವಿದ್ಯುತ್ ವ್ಯತ್ಯಯ

                                  ಸೆಪ್ಟೆಂಬರ್ 23 ರಂದು ವಿದ್ಯುತ್ ವ್ಯತ್ಯಯ
ಮಂಡ್ಯ ಸೆಪ್ಟೆಂಬರ್ 22. ದಿನಾಂಕ 23.09.2016 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ವಿ.ಸಿ.ಫಾರಂ, ಶಿವಳ್ಳಿ , ದುದ್ದ,  ಬಿ.ಹಟ್ನ, ಬೇವಕಲ್ಲು, ಹುಲಿಕೆರೆ, ಚಂದಗಾಲು, ಮಾಚಗೌಡನಹಳ್ಳಿ, ಹುಲ್ಲೇನಹಳ್ಳಿ, ಹೊಳಲು ಹಾಗೂ ಈ ಸುತ್ತ ಮುತ್ತಲಿನ ಗ್ರಾಮಗಳಿಗೆ ವಿದ್ಯುತ್‍ನಲ್ಲಿ ವ್ಯತಯ ಉಂಟಾಗುವುದರಿಂದ ಕಂಪನಿಯೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಅಭಿಯಂತರರಾದ ಎ.ಎನ್.ರವಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                                             ಕನ್ನಡ ಪುಸ್ತಕ ಮೇಳ : ಅರ್ಜಿ ಆಹ್ವಾನ
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:1-10-2016 ರಿಂದ 9-10-2016ರವರೆಗೆ ಮೈಸೂರಿನಲ್ಲಿ ದಸರಾ ಕನ್ನಡ ಪುಸ್ತಕ ಮೇಳ-2016ನ್ನು ಏರ್ಪಡಿಸಲಾಗಿದೆ. ಪುಸ್ತಕ ಮಾರಾಟಕ್ಕೆ ಮಳಿಗೆ ಅವಶ್ಯವಿರುವ ಪುಸ್ತಕ ಮಾರಾಟಗಾರರು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ದಿನಾಂಕ:28-9-2016 ರಂದು ಸಂಜೆ 5.00 ಗಂಟೆಯೊಳಗೆ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು-560002, ದೂರವಾಣಿ ಸಂಖ್ಯೆ:22484516/22107704 ನ್ನು ಸಂಪರ್ಕಿಸಬಹುದು.

                                   ಸೆಪ್ಟೆಂಬರ್ 24 ರಂದು ವಾರ್ಷಿಕ ಸಾಮಾನ್ಯ ಸಭೆ
ಮಂಡ್ಯ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ 2015-16ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ 24 ರಂದು ಶನಿವಾರ ಬೆಳಿಗ್ಗೆ 10.30 ಘಂಟೆಗೆ ರೈತ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಮಂಡ್ಯ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment