Friday, 30 September 2016

ಅಕ್ಟೋಬರ್ 1 ರಂದು ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ

ಅಕ್ಟೋಬರ್ 1 ರಂದು ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ
ಮೈಸೂರು ಅ30-ಮೈಸೂರು ದಸರಾ ಮಹೋತ್ಸವ -2016 ರ ದಸರಾ ಚಲನಚಿತ್ರೋತ್ಸವ ಅಕ್ಟೋಬರ್ 1 ಮಧ್ಯಾಹ್ನ 1 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ.
  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ವಾಸು ಅವರು ಅಧ್ಯಕ್ಷತೆ ವಹಿಸುವರು.
  ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್, ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ ನಜೀರ್ ಅಹಮದ್, ಬೆಂಗಳೂರಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾ.ರಾ. ಗೋವಿಂದ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರುಗಳಾದ ವಿ. ಶ್ರೀನಿವಾಸ್ ಪ್ರಸಾದ್, ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಎಂ.ಕೆ. ಸೋಮಶೇಖರ್, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಿ. ನಟರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸುವರು.
 ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಮತಿ ಭಾರತಿ ವಿಷ್ಣುವರ್ಧನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಮತಿ ಸುಧಾರಾಣಿ, ಚಲನಚಿತ್ರ ನಿರ್ದೇಶಕ ಪವನ್ ಕುಮಾರ್, ಚಲನಚಿತ್ರ ಕಲಾವಿದರಾದ ವಿಜಯ್ ಸೂರ್ಯ, ಚಲನಚಿತ್ರ ಕಲಾವಿದರಾದ ಕು|| ಮಯೂರಿ, ಕು|| ಕಾವ್ಯ ಶೆಟ್ಟಿ ಹಾಗೂ ಚಿತ್ರೋದ್ಯಮದ ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
 ರಘುಲೀಲಾ ಸಂಗೀತ ಮಂದಿರದ ಕಲಾವಿದರಿಂದ ಮಧ್ಯಾಹ್ನ 12 ಗಂಟೆಗೆ ಕನ್ನಡದ ಹಳೆಯ ಹಾಗೂ ಹೊಸ ಚಲನಚಿತ್ರಗಳು ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
    
ಅಕ್ಟೋಬರ್ 1 ರಂದು ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು
    ಮೈಸೂರು.ಸೆ.30. ದಸರಾ ಮಹೋತ್ಸವ 2016 ರ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ಅಕ್ಟೋಬರ್ 1 ರಂದು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ವಿವರ ಇಂತಿದೆ.

ಅರಮನೆ ವೇದಿಕೆ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಅಕ್ಟೋಬರ್ 1 ರಂದು ಸಂಜೆ 6 ಗಂಟೆಗೆ ಅರಮನೆ ಆವರಣದ ಸಾಂಸ್ಕøತಿಕ ವೇದಿಕೆಯಲ್ಲಿ ರಾಜ್ಯ ಸಂಗೀತ ವಿದ್ವಾನ್ -2016 ಗೌರವ ಪುರಸ್ಕಾರ ಸಮಾರಂಭ ನಡೆಯಲಿದೆ.
    ಹಿಂದೂಸ್ತಾನಿ ಸಂಗೀತ ಕಲಾವಿದ ಪಂ. ಸೋಮನಾಥ ಮರಡೂರ ಅವರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಹಾಗೂ ಇತರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಿದ್ದಾರೆ.
ಸಂಜೆ 6 ರಿಂದ 6-30 ಗಂಟೆಯವರೆಗೆ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಜೆ 6-30 ರಿಂದ 7-45 ಗಂಟೆಯವರೆಗೆ  ಬೆಂಗಳೂರಿನ ಶ್ರೀಮತಿ ರೂಪಾರಾಜೇಶ್ ಮತ್ತು ತಂಡದವರಿ ನೃತ್ಯರೂಪಕ ಹಾಗೂ  ಸಂಜೆ 7-45 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಶ್ರೀಮತಿ ಚೈತ್ರಾ ಮತ್ತು ತಂಡದಿಂದ ಅವರಿಂದ ಸಂಗೀತ ವೈವಿಧ್ಯ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಶ್ರೀನಿವಾಸ ವಿ.ಎಸ್. ಮತ್ತು ತಂಡದವರಿಂದ ಸ್ಯಾಕ್ಸೋಫೋನ್, ಸಂಜೆ 6 ರಿಂದ 7 ಗಂಟೆಯವರೆಗೆ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಭರತನಾಟ್ಯಂ, ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಡಾ|| ಸಿ.ಎ. ಶ್ರೀಧರ ಮತ್ತು ತಂಡದವರಿಂದ ಕೊಳಲು ವಾಹನ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಡಾ|| ಸಂಪದಾಭಟ್ ಮರಬಳ್ಳಿ ಅವರಿಂದ ಹಿಂದೂಸ್ತಾನಿ ಸಂಗೀತ.
      ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ಮಂಡ್ಯ ಜಿಲ್ಲೆ ಮೇಲುಕೋಟೆ ಎಂ.ಎಸ್. ಆನಂದ ಅವರಿಂದ ನಾದಸ್ವರ, ಸಂಜೆ 6 ರಿಂದ 7 ಗಂಟೆಯವರೆಗೆ ಮಹಾರಾಷ್ಟ್ರ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಲಾವಣಿ,  ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಶ್ರೀಮತಿ ಕವಿತಾ ಕಾಮತ್ ಅವರಿಂದ ಸುಗಮ ಸಂಗೀತ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ಬೆಂಗಳೂರಿನ ವಿಜಯಕುಮಾರ್ ಮೈಕೋ ಮತ್ತು ತಂಡದವರಿಂದ ಭರತನಾಟ್ಯ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಬೀದರ ಬದರಿನಾಥ ಮುಡಬಿ ಮತ್ತು ತಂಡದವರಿಂದ ಪಿಟೀಲು ವಾದನ, ಸಂಜೆ 6 ರಿಂದ 7 ಗಂಟೆಯವರೆಗೆ ತೆಲಂಗಾಣ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ವತಿಯಿಂದ ಬಧುಕಂ ನೃತ್ಯ ಹಾಗೂ ಸಂಜೆ 7 ರಿಂದ 8 ಗಂಟೆಯವರೆ ಬೆಂಗಳೂರಿನ ಚಿಗುರು ತಂಡದರಿಂದ ಸಮೂಹ ನೃತ್ಯ. ಸಂಜೆ 8 ರಿಂದ 9 ಗಂಟೆಯವರೆ ಮೈಸೂರಿನ ಎ.ವಿ. ದತ್ತಾತ್ರೇಯ ಮತ್ತು ತಂಡದವರಿಂದ ಕೊಳಲು ವಾದನ.
     ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ನಂಜನಗೂಡು ಕಳಲೆ ನಾರಾಯಣ ಮತ್ತು ತಂಡದವರಿಂದ ಮರಗಾಲು ಕಂಸಾಳೆ, ಸಂಜೆ 6 ರಿಂದ 7 ಗಂಟೆಯವರೆಗೆ  ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ವತಿಯಿಂದ ರಣಪ್ಪಾ ನೃತ್ಯ ಹಾಗೂ ಸಂಜೆ 7 ರಿಂದ 8 ಗಂಟೆಯವರೆಗೆ ಹುಣಸೂರು ಬಿ.ಕೆ. ಚಿಕ್ಕಣ್ಣ ಮತ್ತು ತಂಡದವರಿಂದ ಸುಗ್ಗಿ ಕುಣಿತ.
ಪುರಭವನ ವೇದಿಕೆ: ಸಂಜೆ 7 ರಿಂದ 9 ಗಂಟೆಯವರೆಗೆ ನಂಜನಗೂಡು ಹೆಮ್ಮರಗಾಲ ವಿಶ್ವಮೂರ್ತಿ ಅವರಿಂದ ದಕ್ಷಯಜ್ಞ ಪೌರಾಣಿಕ ನಾಟಕ ನಡೆಯಲಿದೆ.
ಮಹಿಳಾ ದಸರಾ:- ಅಕ್ಟೋಬರ್ 1 ರಂದು ಬೆಳಿಗ್ಗೆ 7 ರಿಂದ 9-30 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಹಿಳೆಯರಿಂದ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11-30 ರಿಂದ 2 ಗಂಟೆಯವರೆಗೆ ಜೆ.ಕೆ.ಗ್ರೌಂಡ್‍ನಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಸ್ತ್ರೀಶಕ್ತಿ/ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಿವಿಧ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ  2-30  ರಿಂದ 4 ಗಂಟೆಯವರೆಗೆ ಮಹಿಳಾ ದಸರಾ-2016 ಹಾಗೂ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.  ಸಂಜೆ 4-30 ರಿಂದ 5-30 ಗಂಟೆಯವರೆಗೆ ಹಿರಿಯ ನಾಗರೀಕರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು “ಕಾಳಜಿ ಹಿರಿಯರಲಿ: ಸಹಬಾಳ್ವೆ ಕಿರಿಯರಲಿ” ಹಿರಿಯ ನಾಗರೀಕರು ಹಾಗೂ ಕಿರಿಯರ ಸಮಾಗಮ ಕಾರ್ಯಕ್ರಮಗಳು ನಡೆಯಲಿವೆ.
    ಪ್ರವಾಸ ಕಾರ್ಯಕ್ರಮ   
       ಮೈಸೂರು.ಸೆ.30. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 1 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
      ಮೈಸೂರು ವಿಮಾನ ನಿಲ್ಲಾಣಕ್ಕೆ ಬೆಳಿಗ್ಗೆ 10-05 ಗಂಟೆಗೆ ಮೈಸೂರಿಗೆ ಆಗಮಿಸುವರು. ಬೆಳಿಗ್ಗೆ  11-30 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಪೂಜೆ ಹಾಗೂ ದರ್ಶನ ಮಾಡುವರು ನಂತರ  11-40ಕ್ಕೆ ದಸರಾ ಮಹೋತ್ಸವ 2016 ಉದ್ಘಾಟಿಸುವರು. ಮಧ್ಯಾಹ್ನ 12-40 ಗಂಟೆಗೆ  ಚಾಮುಂಡಿಬೆಟ್ಟದಲ್ಲಿ ದಸರಾ ಕ್ರೀಡಾ ಜ್ಯೋತಿ ಉದ್ಘಾಟಿಸುವರು.
     ಮಧ್ಯಾಹ್ನ 1-15 ಗಂಟೆಗೆ ಜೆ.ಕೆ. ಮೈದಾನದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. ಸಂಜೆ 4 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಕ್ರೀಡಾಕೂಟ ಉದ್ಘಾಟಿಸುವರು. ಸಂಜೆ 4-30 ಗಂಟೆಗೆ ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ನಂತರ ರಾತ್ರಿ 8 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ಅವರ ಪ್ರವಾಸ ಕಾರ್ಯಕ್ರಮ.
   ಮೈಸೂರು.ಸೆ.30. ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಕ್ಟೋಬರ್ 1 ಹಾಗೂ 2 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಕ್ಟೋಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿಗೆ ಆಗಮಿಸುವರು. ಬೆಳಿಗ್ಗೆ 11-45 ಗಂಟೆಗೆ  ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮುಖ್ಯಮಂತ್ರಿಗಳೊಂದಿಗೆ ಕ್ರೀಡಾಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12-30 ಗಂಟೆಗೆ ವರುಣ ಕೆರೆಯಲ್ಲಿ ದಸರಾ ಪ್ರಯುಕ್ತ ಆಯೋಜಿಸಿರುವ ಸಾಹಸ ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳೊಂದಿಗೆ ರಾಜ್ಯ ದಸರಾ ಕ್ರೀಡಾ ಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
    ಅಕ್ಟೋಬರ್ 2 ರಂದು ಬೆಳಿಗ್ಗೆ 6-30 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹ್ಯಾಫ್ ಮ್ಯಾರಥಾನ್ ಕಾರ್ಯಕ್ರಮ ಉದ್ಘಾಟಿಸುವರು. ಬೆಳಿಗ್ಗೆ 10 ಗಂಟೆಗೆ ಮೈಸೂರು ನಗರದಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆಗಳ ವೀಕ್ಷಣೆ ಮತ್ತು ಕರ್ನಾಟಕ ಸಹಕಾರಿ ಮೀನುಗಾರಿಕೆ ಮಹಾಮಂಡಳದ ಕುಕ್ಕರಹಳ್ಳಿ ಮೀನು ಮಾರುಕಟ್ಟೆ ಕಿಯೋಸ್ಕ್‍ಗೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಮೈಸೂರು ಜಿಲ್ಲೆ ಗಂಗಾ ಮತಸ್ಥ ಸಮಾಜದ ವತಿಯಿಂದ ಸಂಘಟಿಸಿರುವ ಸಭೆಯಲ್ಲಿ ಭಾಗವಹಿಸಿ ನಂತರ ಮಧ್ಯಾಹ್ನ 12 ಗಂಟೆಗೆ ಮೈಸೂರಿನಿಂದ ಕುಶಾಲನಗರಕ್ಕೆ ತೆರಳುವರು.
        ಚಾಮುಂಡಿಬೆಟ್ಟಕ್ಕೆ ಉಚಿತ ಸಾರಿಗೆ ವ್ಯವಸ್ಥೆ
    ಮೈಸೂರು.ಸೆ.30.ಮೈಸೂರು ದಸರಾ ಮಹೋತ್ಸವ  ಅಂಗವಾಗಿ ಚಾಮುಂಡಿ ಬೆಟ್ಟದ ಮೇಲೆ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಚಾಮುಂಡಿಬೆಟ್ಟಕ್ಕೆ ಹೋಗುವಂತಹ  ಸಾರ್ವಜನಿಕ ಪ್ರಯಾಣಿಕರಿಗೆ ಉಚಿತ ಹಾಗೂ ಉತ್ತಮ ಸಾರಿಗೆ ಸೌಲಭ್ಯವನ್ನು ಅಕ್ಟೋಬರ್ 2 ರಿಂದ ಬೆಳಿಗ್ಗೆ 6-30 ರಿಂದ ರಾತ್ರಿ 8-30 ಗಂಟೆಯವರೆಗೆ ಪ್ರತಿ 15 ನಿಮಿಷಗಳಿಗೆ ಒಂದು ಟ್ರಿಪ್‍ನಂತೆ 4 ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಕಾರ್ಯಚರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ತಿಳಿಸಿದ್ದಾರೆ.
    ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್‍ನ ಹತ್ತಿರ ವ್ಯವಸ್ಥೆ ಮಾಡಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲಿ ಬೆಟ್ಟದ ಮೇಲೆ ಹೋಗಿ ಬರಬಹುದಾಗಿದೆ. ಅಕ್ಟೋಬರ್ 1 ರಂದು ಬೆಟ್ಟದ ಮೇಲೆ ಹೋಗಲು ಯಾವುದೇ ನಿರ್ಬಂಧ ಇರುವುದಿಲ್ಲವೆಂದು ದಸರಾ ವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಕ್ರೀಡಾ ಜ್ಯೋತಿಗೆ ಚಾಲನೆ
      ಮೈಸೂರು.ಸೆ.30. ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕ್ರೀಡಾ ಉಪಸಮಿತಿ ವತಿಯಿಂದ ರಾಜ್ಯ ಮಟ್ಟದ ದಸರಾ ಕ್ರೀಡಾ ಸ್ಪರ್ಧೆಗಳು ಅಕ್ಟೋಬರ್ 1 ರಿಂದ 9 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ.
   ಅಕ್ಟೋಬರ್ 1 ರಂದು ಬೆಳಿಗ್ಗೆ 11 -40 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ದಸರಾ-2016ರ ದಸರಾ ಕ್ರೀಡಾಕೂಟಗಳ ಕ್ರೀಡಾಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅವರು ಅಧ್ಯಕ್ಷತೆ ವಹಿಸುವರು.
   ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್, ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್, ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್,   ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಕು|| ಅಶ್ವಿನಿ ಪೊನ್ನಪ್ಪ ಅವರು ಕ್ರೀಡಾಜ್ಯೋತಿಗೆ ಚಾಲನೆ ನೀಡಲಿದ್ದಾರೆ.
ದಸರಾ ಚಲನಚಿತ್ರೋತ್ಸವಕ್ಕೆ ತಾರೆಯರ ರಂಗಿನ ಜೊತೆ
ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ
       ಮೈಸೂರು.ಸೆ.30.ಕನ್ನಡ ಚಲನಚಿತ್ರರಂಗದ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಅಕ್ಟೋಬರ್ 1 ರಂದು ಕಲಾಮಂದಿರದಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವದ ಉದ್ಘಾಟನೆಗೂ ಮುನ್ನ  ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
     ದಸರಾ ಚಲನಚಿತ್ರೋತ್ಸವ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ  ಉದಯೋನ್ಮುಖ ಗಾಯಕ, ಗಾಯಕಿಯರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ಕನ್ನಡ ಚಿತ್ರರಂಗದ ಇತಿಹಾಸವನ್ನು ಚಿತ್ರಗೀತೆಗಳ ಮೂಲಕ ಮೆಲುಕುಹಾಕುವ ಪ್ರಯತ್ನ ಇದಾಗಿದೆ. ವೃತ್ತಿ ರಂಗಭೂಮಿ ಹಿನ್ನೆಲೆಯ ಕನ್ನಡ ಚಲನಚಿತ್ರ ರಂಗ ಪೌರಾಣಿಕ ಚಿತ್ರಗಳಿಂದ ಆರಂಭಿಸಿ, ಸಾಮಾಜಿಕ ಚಿತ್ರಗಳಿಗೆ ಹೊರಳಿ, ಹೊಸ ಅಲೆಯ ಚಿತ್ರಗಳನ್ನು ನಿರ್ಮಿಸಿ ಇದೀಗ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದುವರಿಯುತ್ತಿದ್ದು, ಈ ಎಲ್ಲಾ ಕಾಲಘಟ್ಟಗಳನ್ನು ಗುರುತಿಸುವ ಪ್ರಯತ್ನವನ್ನು ಕಾರ್ಯಕ್ರಮದ ಮೂಲಕ ಮಾಡಲಾಗಿದೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞಾರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ.
         ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು. ಹಾಡಿನ ಜತೆಗೆ ಆಯಾ ಕಾಲಘಟ್ಟದ ಪ್ರಮುಖ ಚಿತ್ರಗಳ ತುಣಕುಗಳನ್ನು ಪ್ರದರ್ಶಿಸಲಾಗುವುದು.
      ಮೈಸೂರಿನ ಹೆಸರಾಂತ ಸಂಗೀತ ಸಂಯೋಜಕರು ರಘುಲೀಲಾ ಸಂಗೀತ ಶಾಲೆಯ ಸುನೀತಾ ಚಂದ್ರಕುಮಾರ್ ಅವರು ಕಾರ್ಯಕ್ರಮದ ಸಮನ್ವಯ ನಿರ್ವಹಿಸುತ್ತಿದ್ದು,   ಸಿ ವಿಶ್ವನಾಥ್( ಮ್ಯಾಂಡೋಲೀನ್), ಷಣ್ಮುಗ (ಕೀಬೋರ್ಡ್), ವಿನ್‍ಸೆಂಟ್ (ರಿದಂಸ್ಯಾಟ್), ಕಿರಣ್ (ತಬಲ) ವಾದ್ಯ ಸಹಕಾರ ನೀಡುವರು.ಶ್ರೇಯ ಕೆ ಭಟ್ಟ,  ವಸುಧಾ ಶಾಸ್ತ್ರಿ, ನವನೀತ್ ಕೃಷ್ಣ, ಕಾರ್ತೀಕ ಹಾಗೂ ರಕ್ಷಿತಾ ಸುರೇಶ್ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ.
      ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಚಲನಚಿತ್ರ ಕಲಾವಿದರಾದ ಸುಧಾರಾಣಿ, ಚಲನಚಿತ್ರ ನಿರ್ದೇಶಕ ಪವನ್ ಕುಮಾರ್, ಚಲನಚಿತ್ರ ಕಲಾವಿದರಾದ ವಿಜಯ್ ಸೂರ್ಯ, ಚಲನಚಿತ್ರ ಕಲಾವಿದರಾದ ಕು|| ಮಯೂರಿ, ಕು|| ಕಾವ್ಯ ಶೆಟ್ಟಿ ಹಾಗೂ ಚಿತ್ರೋದ್ಯಮದ ಗಣ್ಯರು ಭಾಗವಹಿಸಿ ದಸರಾ ಚಲನಚಿತ್ರೋತ್ಸವಕ್ಕೆ ವಿಶೇಷ ರಂಗು ನೀಡಲಿದ್ದಾರೆ.
      ಅಕ್ಟೋಬರ್ 2 ರಿಂದ 6 ರವರೆಗೆ ಮೈಸೂರು ನಗರದ ಸ್ಕೈಲೈನ್, ಒಲಂಪಿಯಾ, ಡಿ.ಆರ್.ಸಿ., ಐನಾಕ್ಸ್, ಲಕ್ಷ್ಮೀ, ಹೆಚ್.ಡಿ.ಕೋಟೆಯ ಮಂಜುನಾಥ್, ಕೆ.ಆರ್.ನಗರದ ಗೌರಿಶಂಕರ, ನಂಜನಗೂಡು ಲಲಿತ, ಪಿರಿಯಾಪಟ್ಟಣದ ಮಹದೇಶ್ವರ, ಹುಣಸೂರಿನ ಲೀಲಾ ಹಾಗೂ ಟಿ.ನರಸೀಪುರದ ಭಗವಾನ್ ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಪ್ರವೇಶ ದರ ನೆಲ ಅಂತಸ್ತಿಗೆ ರೂ. 10/-, ಬಾಲ್ಕನಿ ರೂ. 20/- ಹಾಗೂ ಮಲ್ಟಿಫ್ಲೆಕ್ಸ್‍ಗೆ ರೂ. 30/- ನಿಗಧಿಪಡಿಸಲಾಗಿದೆ.
    ಚಿತ್ರಮಂದಿರಗಳಲ್ಲಿ ಮಾಣಿಕ್ಯ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರನ್ನ, ಇಷ್ಟಕಾಮ್ಯ, ಬಬ್ರುವಾಹನ, ಉಳಿದವರು ಕಂಡಂತೆ, ಜೂಮ್, ಬುಲ್ ಬುಲ್, ವಾಸ್ತುಪ್ರಕಾರ, ಕ್ರಾಂತೀ ವೀರಾ ಸಂಗೊಳ್ಳಿ ರಾಯಣ್ಣ, ದೇವರ ನಾಡಲ್ಲಿ, ಕಿರಗೂರಿನ ಗಯ್ಯಾಳಿಗಳು, ಗೋಭಿ ಬಣ್ಣ ಸಾಧಾರಣ ಮೈಕಟ್ಟು, ಯುಟರ್ನ್, ಫಸ್ಟ್ ರ್ಯಾಂಕ್ ರಾಜು, ತಿಥಿ, ಸಂತೆಯಲ್ಲಿ ನಿಂತ ಕಬೀರ, ರಂಗಿತರಂಗ, ಲಾಸ್ಟ್ ಬಸ್, ಪ್ರಿಯಾಂಕ, ನಾನು ಅವನಲ್ಲ ಅವಳು, ನಾನು ನನ್ನ ಕನಸು, ರಿಕ್ಕಿ, ಅಸ್ತಿತ್ವ, ಕೆಂಡಸಂಪಿಗೆ, ಶಿವಲಿಂಗ, ಕನ್ನಡದ ಜನಪ್ರಿಯ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.
     ಅಕ್ಟೋಬರ್ 2 ರಿಂದ 8 ರವರೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮತ್ತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿರುತ್ತದೆ.
      ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮತ್ತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಗಸಿ ಪಾರ್ಲರ್, ಅತ್ತಿ ಹಣ್ಣು ಮತ್ತು ಕಣಜ, ಚುರುಕುಮಾರ, ಗಾಳಿ ಬೀಜ, ಮುನ್ಸೀಫಾ, ಪ್ರಕೃತಿ, ಪುಟ ತಿರುಗಿಸಿ ನೋಡಿ, ತಲ್ಲಣ, ತಿಥಿ ಹಾಗೂ ವಿದಾಯ ಕನ್ನಡ ಚಲನಚಿತ್ರಗಳು ಪನೋರಮಾ ಚಿತ್ರಗಳಾದ ಆಂಖೋ ದೇಖಿ, ಸಿನಿಮಾ ವಾಲಾ, ಕೋರ್ಟ್ ಏಕ್ ಹಜಾರ್ ಜಿ ನೋಟ್, ಎಲಿಝಬೆತ್ ಏಕಾದಶಿ, ಜಲ್, ಕುತ್ಯಾರ್ ಕಾಲ್ವಾತ್ ಗುರ್ಲಿ, ಕಿಲ್ಲ, ಕೋ ಯಾದ್, ಮಸಾನ್, ನಚೋಮ್-ಇ ಕುಂಪಸರ್, ರಾಮ್‍ಸಿಂಗ್ ಚಾರ್ಲಿ ಹಾಗೂ ದಿ ಹೆಡ್ ಹಂಟರ್ ಪ್ರದರ್ಶಿಸಲಾಗುವುದು.
     ವಿಶ್ವ ಚಿತ್ರಗಳಾದ 35 ರಮ್ಸ್, ಲಾರೆನ್ಸ್ ಎನಿವೇಸ್, ಮ್ಯಾಕ್‍ಬೆತ್, ಮಾನ್ ಅಂಕಲ್, ಮೈ ವಡ್ರ್ಸ್, ಮೈ ಲೈಸ್-ಮೈ ಲವ್, ಓ ಬಾಯ್, ಪೇರೆಂಟ್ಸ್, ಪೇಟರ್, ಪೋಲ್, ಸೋಲ್ ಕಿಚನ್, ಟಾಮ್ ಬಾಯ್, ಟೇಸ್ಟ್ ಆಫ್ ಚೆರ್ರಿ ಹಾಗೂ ದಿ ವಿಂಡ್ ವಿಲ್ ಕ್ಯಾರಿ ಅಸ್ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಮುಂಬೈ ಇಂಟರ್ ನ್ಯಾಷನಲ್ ಚಲನಚಿತ್ರಗಳಾ ಅಗ್ಲಿ ಬಾರ್, ಆಲೈಸ್/ಕಮಲಾಕ್ಷಿ, ಛಾಯಾ, ಫೇಮಸ್ ಇನ್ ಅಹ್ಮದಾಬಾದ್, ಫಿಶರ್ ವುಮನ್ ಅಂಡ್ ಟುಕ್ ಟುಕ್, ಗೋಲ್ಡನ್ ಬರ್ಡ್, ಲೆಟರ್ ಫ್ರಂ ಕಾರ್ಲೈ, ನಪ್ಯಿಯಲ್ ಮೆಮೋರಿಸ್, ರೋಟರಿ ಲೈಫೈನ್, ಸೋಲೋ ಫಿನಾಲೆ, ಟಾಕಿಂಗ್ ವಾಲ್ಸ್, ದ ಲಾಸ್ಟ್ ಮ್ಯಾಂಗೊ ಬಿಫೋರ್ ದ ಮಾನ್ಸೂನ್, ಪಾರ್ ಪ್ರೌಂ ಹೋಂ, ಫೈರ್‍ಪೈಸ್ ಇನ್ ದಿ ಎಬಿಸ್, ಮೈ ನೇಮ್ ಇಸ್ ಸಾಲ್ಟ್, ಪುಮ್ ಶಾಂಗ್, ಪ್ಲೆಸಿಬೊ, ರಸನ್ ಪಿಯ, ದಿ ಇಮ್ಮಾರ್ಟಲ್ಸ್ ಹಾಗೂ ದಿ ಕ್ವೀನ್ ಆಫ್ ಸೈಲೆನ್ಸ್ ಪ್ರದರ್ಶಿಸಲಾಗುವುದು.
     ಉದ್ಘಾಟನಾ ಹಾಗೂ ಚಲನಚಿತ್ರೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಸರಾ ಚಲನಚಿತ್ರೋತ್ಸವ ಸಮಿತಿಯ ಉಪವಿಶೇಷಧಿಕಾರಿ, ಕಾರ್ಯಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕೋರಿದ್ದಾರೆ.

No comments:

Post a Comment