10ನೇ ಸೆಪ್ಟೆಂಬರ್.ತೋಟಗಾರಿಕ ಕೃಷಿಕರಿಗೆ ಪ್ರತಿವಾರ-ಪರಿಹಾರ ಕಾರ್ಯಕ್ರಮ
ಮೈಸೂರು, ಸೆ. 10 : ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕವಾದ ಮೈಸೂರಿನ ಇಲವಾಲದಲ್ಲಿರುವ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕೆ ಕೃಷಿಕರಿಗೆ ಅತ್ಯುಪಯುಕ್ತವಾದ ಸೇವೆ ನೀಡಲು “ಪ್ರತಿ ವಾರ - ಪರಿಹಾರ” ಎಂಬ ವಿನೂತನವಾದ ಕಾರ್ಯಕ್ರಮವನ್ನು ಪ್ರತಿ ಸೋಮವಾರ ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಹಮ್ಮಿಕೊಂಡಿದೆ.
ನುರಿತ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿ ತೋಟಗಾರಿಕೆ ಕೃಷಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲಿದ್ದಾರೆ. ರೈತರು ತಮ್ಮ ಬೆಳೆಗಳಿಗೆ ಸಂಬಂಧಿಸಿದ ರೋಗ, ಕೀಟ, ಪೋಷಕಾಂಶ ಕೊರತೆ ಇತ್ಯಾದಿ ಯಾವುದೇ ಸಮಸ್ಯೆಗಳ ಮಾದರಿಗಳನ್ನು ತೆಗೆದುಕೊಂಡು ಬಂದು ತಜ್ಞರಲ್ಲಿ ಪರೀಕ್ಷೆಗೊಳಪಡಿಸಿ ಸೂಕ್ತ ಪರಿಹಾರ ಪಡೆಯಬಹುದಾಗಿದೆ.
ಮಣ್ಣು ಹಾಗೂ ಇತರೇ ಸಂಪನ್ಮೂಲಗಳ ವಿವರ ನೀಡಿ ಅದರ ಆಧಾರದ ಮೇಲೆ ಸೂಕ್ತ ಬೆಳೆ ಯೋಜನೆ ರೂಪಿಸವಲ್ಲೂ ಈ ತಜ್ಞರ ತಂಡದ ಸಲಹೆಗಳನ್ನು ಪಡೆಯಬುದಾಗಿದೆ. ಈ ಸೇವೆ ಬಗ್ಗೆ ಹೆಚ್ಚಿನ ಮಾಹಿತಿಗೆ ರೈತರು ಮೊಬೈಲ್ ಸಂಖ್ಯೆ 9880445919/9480557634 ಸಂಪರ್ಕಿಸಬಹುದಾಗಿದೆ.

No comments:
Post a Comment