ಚಿತ್ರ ಬಿಡಿಸುವ ಸ್ಪರ್ಧೆ
ಮೈಸೂರು.ಸೆ.24. ಮೈಸೂರು ದಸರಾ ಮಹೋತ್ಸವ -2016 ರ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಯಿಂದ ಸೆಪ್ಟೆಂಬರ್ 25 ರಂದು 10 ಗಂಟೆಯಿಂದ 12-30 ರವರೆಗೆ ಕಲಾಮಂದಿರದ ಆವರಣದಲ್ಲಿ ಮೂರು ವಿಭಾಗಗಳಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ.
ಚಿತ್ರ ರಚನೆಗೆ ಬೇಕಾಗುವ ಬಣ್ಣ ಇತ್ಯಾದಿಗಳನ್ನು ಸ್ಪರ್ಧಿಗಳೇ ತರುವುದು ಡ್ರಾಯಿಂಗ್ ಪೇಪರ್‍ಗಳನ್ನು ಮಾತ್ರ ಸಮಿತಿಯಿಂದ ಒದಗಿಸಲಾಗುವುದು. ಮೊದಲನೇ ವಿಭಾಗ 1ನೇ ತರಗತಿಯಿಂದ 4ನೇ ತರಗತಿಯವರೆಗೆ, ಎರಡನೇ ವಿಭಾಗ 5 ರಿಂದ 8ನೇ ತರಗತಿಯವರೆಗೆ, ಮೂರನೇ ವಿಭಾಗ 9 ರಿಂದ 12ನೇ ತರಗತಿಯವರೆಗೆ ಮಕ್ಕಳು ಸ್ಪರ್ಧೆಗೆ ಹಾಜರಾಗುವ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಿಂದ ಅನುಮೋದಿಸಿದ ಪತ್ರ ಅಥವಾ ಶಾಲಾ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ ಎಂದು ದಸರಾ ಮಹೋತ್ಸವ-2016 ಹಾಗೂ ಲಲಿತಕಲೆ ಮತ್ತು ಕರಕುಶಲಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸಬಹುದು.
ಪಾರ್ಕ್ ನಿರ್ವಹಣೆ: ಆಸಕ್ತರು ಮನವಿ ಸಲ್ಲಿಸಿ
ಮೈಸೂರು.ಸೆ.24.ಮೈಸೂರು ನಗರ ವ್ಯಾಪ್ತಿಯಲ್ಲಿರುವ ಪಾರ್ಕ್, ವೃತ್ತ ಮತ್ತು ರಸ್ತೆ ವಿಭಜನೆ ಹಾಗೂ ಸ್ಮಶಾನಗಳನ್ನು ಆಸಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳು, ಕಂಪನಿಗಳು ಹಾಗೂ ಕೈಗಾರಿಕೆಗಳು ಸ್ವತ: ನಿರ್ವಹಣೆ ಮಾಡಲು ಉತ್ಸುಕರಾಗಿದ್ದು, ನಿರ್ವಹಣೆ ಮಾಡಲು ಇಚ್ಫಿಸಿ ಮುಂದೆ ಬಂದಲ್ಲಿ, ಸದರಿ ಪಾರ್ಕ್‍ನಲ್ಲಿ ಗರಿಷ್ಠ 3ಘಿ2 ಅಳತೆಯ ಪ್ರಾಯೋಜತ್ವದ ಬೋರ್ಡ್ ಅಳವಡಿಸಲು ಪಾಲಿಕೆಯ ಅನುಮೋದನೆಯೊಂದಿಗೆ ಅಳವಡಿಸಬಹುದಾಗಿದೆ. ಆಸಕ್ತರು ಮನವಿಯನ್ನು ನೀಡಲು ಅಕ್ಟೋಬರ್ 15 ರೊಳಗೆ ಮೈಸೂರು ಮಹಾನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಸಂಭ್ರಮ : ಸೆ. 25 ರಂದು ವಿವಿಧ ಕಾರ್ಯಕ್ರಮ
ಮೈಸೂರು.ಸೆ.24.ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2016 ರ ಯುವ ದಸರಾ ಉಪಸಮಿತಿ ವತಿಯಿಂದ ಯುವ ಸಂಭ್ರಮವು ಸೆಪ್ಟೆಂಬರ್ 23 ರಿಂದ 28 ರವರೆಗೆ ಪ್ರತಿ ದಿನ ಸಂಜೆ 6 ಗಂಟೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 25 ರಂದು ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನೃತ್ಯರೂಪಕ, ಕೊಳ್ಳೇಗಾಲ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಸ್ನಾತಕೋತ್ತರ ಕೇಂದ್ರದ ವತಿಯಿಂದ ನೃತ್ಯರೂಪಕ, ಹೊಳೇನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ದೇಶಭಕ್ತಿ ಸಂಸ್ಕøತಿ ಪರಂಪರೆ, ಮೈಸೂರಿನ ರಾಮಕೃಷ್ಣನಗರದ ನಿರೀಕ್ಷೆ ವಿಶೇಷ ಮಕ್ಕಳ ಶಾಲೆ ವತಿಯಿಂದ ಗೋವಿನ ಹಾಡು, ಹುಣಸೂರು ತಾಲ್ಲೂಕಿನ ಹನಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನೃತ್ಯರೂಪಕ, ಸುಳ್ಯಾ ತಾಲ್ಲೂಕಿನ ಕುಕ್ಕೆ ಸುಬ್ರಮ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ವತಿಯಿಂದ ನೃತ್ಯರೂಪಕ, ಚಾಮರಾಜನಗರ ಜೆ.ಎಸ್.ಎಸ್. ಕಾಲೇಜಿನವತಿಯಿಂದ ಜಾನಪದ ನೃತ್ಯ, ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ವತಿಯಿಂದ ಮಹಿಳಾ ಸಬಲೀಕರಣ, ಚಾಮರಾಜನಗರ ಕೊಳ್ಳೇಗಾಲ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ವತಿಯಿಂದ ಜಲ ಸಂರಕ್ಷಣೆ, ಮೈಸೂರಿನ ಹಿಂದೂಸ್ಥಾನ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕುರಿತು ಕಾರ್ಯಕ್ರಮ, ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ನೃತ್ಯರೂಪಕ, ಹುಣಸೂರು ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಪಲ್ ನೃತ್ಯ, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಂಸಾಳೆ ನೃತ್ಯ, ಶಿವಮೊಗ್ಗ ಜಿಲ್ಲೆ ಸಾಗರ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಫ್ಯೂಜನ, ಚಾಮರಾಜನಗರ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಜಲಸಂರಕ್ಷಣೆ ಮತ್ತು ಕಾಡಿನ ಸಂರಕ್ಷಣೆ, ಮೈಸೂರು ಜೆ.ಎಸ್.ಎಸ್. ಲಾ ಕಾಲೇಜಿನ ವತಿಯಿಂದ ಸಾಂಪ್ರದಾಯಿಕ ನೃತ್ಯ, ಹೊಳೇನರಸೀಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನೃತ್ಯರೂಪಕ, ಹಾಸನ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ವತಿಯಿಂದ ಜಲ ಸಂರಕ್ಷಣೆ, ಮೈಸೂರಿನ ಜೆ.ಎಸ್.ಎಸ್. ಲಾ ಕಾಲೇಜಿನ ವತಿಯಿಂದ ಆಫ್ರಿಕನ್ ವಿದ್ಯಾರ್ಥಿಗಳಿಂದ ಬ್ರೇಕ್ ಡ್ಯಾನ್ಸ್ ಹಾಗೂ ಮೈಸೂರಿನ ಕುವೆಂಪುನಗರ ಬಸುದೇವ್ ಸೋಮಾನಿ ಕಾಲೇಜಿನ ವತಿಯಿಂದ ಭಾರತೀಯ ಸಮಕಾಲೀನ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
ಯೋಗ ಆರೋಗ್ಯ ಭಾರತಿ ಕಾರ್ಯಕ್ರಮ
ಮೈಸೂರು.ಸೆ.24-ಮೈಸೂರು ದಸರಾ ಮಹೋತ್ಸವ, ಯೋಗ ದಸರಾ ಉಪಸಮಿತಿ -2016ರ ವತಿಯಿಂದ ಯೋಗ ಆರೋಗ್ಯ ಭಾರತಿ ಕಾರ್ಯಕ್ರಮ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 10-30 ಗಂಟೆಗೆ ಅಗ್ರಹಾರದ ನಟರಾಜ ಸಭಾ ಭವನದಲ್ಲಿ ಆಯೋಜಿಸಿದೆ.
ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಎಲ್. ಭೈರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು. ಮೈಸೂರಿನ ಶಂಕರಮಠ ರಸ್ತೆಯ ಹೊಸಮಠದ ಚಿದಾನಂದ ಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ನಜಿûೀರ್ ಅಹಮದ್, ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಿ. ನಟರಾಜ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಾಮಾಜಿಕ ಭದ್ರತಾ ಯೋಜನೆ : ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ
ಮೈಸೂರು.ಸೆ.24. ಮೈಸೂರು ತಾಲ್ಲೂಕು ತಹಶೀಲ್ದಾರ್ ಕಚೇರಿ ವತಿಯಿಂದ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ದಾಪ್ಯ, ಸಂದ್ಯಾಸುರಕ್ಷಾ, ವಿಧವಾ, ಮೈತ್ರಿ, ಮನಸ್ವಿನಿ ಮತ್ತು ಅಂಗವಿಕಲ ವೇತನ ಪಡೆಯುತ್ತಿರುವ ಆಧಾರ ಸಂಖ್ಯೆಯನ್ನು ಜಿಲ್ಲಾ ಖಜಾನೆ ವೇತನ ಬಡವಾಡೆಗೆ ನೋಂದಾಯಿಸಲಾಗುತ್ತಿದೆ.
ಗ್ರಾಮಾಂತರ ಮತ್ತು ನಗರದ ಎಲ್ಲಾ ರೀತಿಯ ವೇತನ ಪಡೆಯುತ್ತಿರುವ ಇಲ್ಲಿಯವರೆಗೆ ಆಧಾರ ದಾಖಲೆ ನೀಡದ ಫಲಾನುಭವಿಗಳು ವೇತನ ಮಂಜೂರಾತಿ ಆದೇಶ ಪ್ರತಿ, ಎಂ ಒ ರಶೀದಿ, ಬ್ಯಾಂಕ್, ಅಂಚೆ ಪಾಸ್ ಪುಸ್ತಕದ ನಕಲು ಪ್ರತಿ ಮತ್ತು ಆಧಾರ ಕಾರ್ಡ್ ನಕಲು ಪ್ರತಿಯನ್ನು ಲಗತ್ತಿಸಿ ಗ್ರಾಮಾಂತರ ಪ್ರದೇಶದವರು ಆಯಾ ಹೋಬಳಿ ನಾಡಕಚೇರಿಯಲ್ಲಿ ಮತ್ತು ನಗರ ಪ್ರದೇಶದವರು ನಗರದ ನಜûರ್‍ಬಾದ್ ನಲ್ಲಿರುವ ಮಿನಿ ವಿಧಾನಸೌಧ, ತಾಲ್ಲೂಕು ಕಚೇರಿ ಕೊಠಡಿ ಸಂಖ್ಯೆ 5 ರಲ್ಲಿ ನಗರ ರಾಜಸ್ವ ನಿರೀಕ್ಷಕರಿಗೆ ಅಕ್ಟೋಬರ್ 15 ರೊಳಗೆ ತಲುಪಿಸಲು ಕೋರಲಾಗಿದೆ. ತಪ್ಪಿದ್ದಲ್ಲಿ ವೇತನ ಬರುವುದು ನಿಂತುಹೋಗುತ್ತದೆ ಎಂಬುದಾಗಿ ಮೈಸೂರು ತಾಲ್ಲೂಕು ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಚಿಕಿತ್ಸಾ ಶಿಬಿರ
ಮೈಸೂರು.ಸೆ.24.ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಆಯುರ್ವೇದ ಸಿದ್ಧಾಂತ ಸ್ನಾತಕೋತ್ತರ ಕೇಂದ್ರದಲ್ಲಿ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಆಗುವ ಅತಿರಕ್ತಸ್ರಾವ ಹಾಗೂ ಆದರಿಂದ ಆಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಚಿತ ವಿಶೇಷ ಚಿಕಿತ್ಸಾ ಶಿಬಿರವನ್ನು ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9480585771ನ್ನು ಸಂಪರ್ಕಿಸಬಹುದು.
ಸೆಪ್ಟೆಂಬರ್ 26 ರಂದು ಸಂದರ್ಶನ
ಮೈಸೂರು.ಸೆ.24.ಮೈಸೂರು ವಿಶ್ವವಿದ್ಯಾನಿಲಯದ ನಾಲ್ಕು ಅಧ್ಯಯನ ವಿಭಾಗಗಳಿಗೆ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸೆಪ್ಟೆಂಬರ್ 26 ರಂದು ಸಂದರ್ಶನ ನಿಗಧಿಪಡಿಸಲಾಗಿದೆ. ಅರ್ಜಿ ಸಲ್ಲಿಸಿರುವವರು ಸಂದರ್ಶನ ನಡೆಯಲಿರುವ ಸಮಯ ಮತ್ತು ವಿಷಯಗಳಿಗೆ ವಿಶ್ವವಿದ್ಯಾನಿಲಯದ ವೆಬ್‍ಸೈಟ್ ತಿತಿತಿ.uಟಿi-mಥಿsoಡಿe.ಚಿಛಿ.iಟಿ ನೋಡುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 25 ರಂದು ಅಕಾಶವಾಣಿಯಲ್ಲಿ ಋಣಮುಕ್ತ
ಮೈಸೂರು, ಸೆ. 10 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆಕಾಶವಾಣಿ ರೂಪಿಸಿರುವ ವಿನೂತನ ಕಾರ್ಯಕ್ರಮ ಭಾಗ್ಯವಾಣಿ-ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣದ 4ನೇ ಸರಣಿಯಲ್ಲಿ ಋಣಮುಕ್ತ - ಹೊಸ ಬದುಕಿನ ಆಶಯಕ್ಕೆ ಮುನ್ನಡಿ ಕಾರ್ಯಕ್ರಮ ಸೆಪ್ಟೆಂಬರ್ 25 ರಂದು ರಾತ್ರಿ 7 ರಿಂದ 7-30ರವರೆಗೆ ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್‍ಮೂರ್ತಿ ಅವರು ನಿರ್ಮಿಸಿದ್ದಾರೆ.
ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಗ್ರಾಮೀಣ ಜನರ ಆಡುನುಡಿಯಲ್ಲಿ ಋಣಮುಕ್ತ ಯೋಜನೆಯ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ಫಲಾನುಭವಿಗಳು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಸುಶ್ರಾವ್ಯ ಹಾಡುಗಳೊಂದಿಗೆ ಯೋಜನೆ ಕುರಿತು ಸಂವಾದ ಕೂಡ ನಡೆಯಲಿದೆ.
ಸರ್ಕಾರ ರೂಪಿಸಿರುವ ಯೋಜನೆಯನ್ನು ಪರಿಣಾಮಕಾರಿಯಾಗಿ ತಿಳಿಸುವುದೇ ಭಾಗ್ಯವಾಣಿ ಸರಣಿಯ ಮುಖ್ಯ ಆಶಯವಾಗಿದೆ. ಈ ಕಾರ್ಯಕ್ರಮ ನವೆಂಬರ್ 27 ರವರೆಗೆ ಪ್ರತಿ ಭಾನುವಾರ ರಾತ್ರಿ 7 ರಿಂದ 7-30 ರವರೆಗೆ ಅರ್ಧ ಗಂಟೆ ಪ್ರಸಾರವಾಗಲಿದೆ. ಅಕಾಶವಾಣಿ ಮೂಲಕ ಪ್ರಸಾರವಾಗುವ ವಿವಿಧ ಯೋಜನೆಯ ಮಾಹಿತಿಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್ ವಿಶುಕುಮಾರ್ ಅವರು ಕೋರಿದ್ದಾರೆ

No comments:
Post a Comment