Saturday, 1 November 2014

ಮೈಸೂರು-ಕನ್ನಡಕ್ಕೆ ಎಲ್ಲರೂ ಒಟ್ಟಾಗಿ ಕೈಜೋಡಿಸಿ : ವಿ.ಶ್ರೀ ಕರೆ.


ಕನ್ನಡಕ್ಕೆ ಎಲ್ಲರೂ ಒಟ್ಟಾಗಿ ಕೈಜೋಡಿಸಿ : ವಿ.ಶ್ರೀ ಕರೆ
ಮೈಸೂರು,ನ.1- ಕನ್ನಡವನ್ನು ಬದ್ರ ಪಡಿಸಲು ಕನ್ನಡಿಗರೆಲ್ಲರು ಒಟ್ಟಾಗಿ ಕೈಜೋಡಿಸಿ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಕರೆ ನೀಡಿದರು.
ನಗರದ ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ 59ನೇ ಕನ್ನಡ ರಾಜ್ಯೋತ್ಸ ದ್ವಜಾರೋಹನ ನೆರವೇರಿಸಿ ಮಾತನಾಡಿದ ಅವರು, ಕನ್ನಡ ರಾಜ್ಯದ ಅಧಿಕೃತ ಭಾಷೆ. ಅದನ್ನು ಆಡಳಿತ ಭಾಷೆಯನ್ನಾಗಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಸರ್ಕಾರ ಮಾತ್ರ ಪ್ರಯತ್ನ ಪಟ್ಟರೆ ಸಾಲದು ಸಾರ್ವಜನಿಕರೂ ಸಹ ಕೈಜೋಡಿಸಬೇಕೆಂದರು.
ಹೊರಗಿನಿಂದ ಬಂದು ಕನ್ನಡ ನೆಲ, ಜಲ, ಗಾಳಿ ಸೇವಿಸುತ್ತ ಬದುಕಿರು ಕನ್ನಡೇತರರು ಕನ್ನಡ ನಾಡನ್ನು, ಸುಂದರ ಬೀಡನ್ನು ಕಟ್ಟಲು ಸಹಕರಿಸಬೇಕು ಆಗ ಮಾತ್ರ ಕನ್ನಡ ಸಂಸ್ಕøತಿ ಉಳಿಯುತ್ತದೆ, ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ರಾಷ್ಟ್ರದ ಅತ್ಯುನ್ನತ ಜ್ಞಾನ ಪೀಠ ಪ್ರಶಸ್ತಿಯು 8 ಬಾರಿ ದೊರೆತಿದ್ದು, ರಾಷ್ಟ್ರ ಕವಿ ಕುವೆಂಪು, ದಾ.ರಾ.ಬೆಂದ್ರೆ, ಶಿವರಾಮ ಕಾರಂತ, ಮಾಸ್ತಿವೆಂಕಟೇಶ ಅಯ್ಯಂಗರ್,ಡಾ. ವಿ.ಕೃ.ಗೋಕಾಕ್, ಡಾ.ಯು.ಆರ್ ಅನಂತ ಮೂರ್ತಿ, ಡಾ.ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರಂತಹ ಶ್ರೇಷ್ಠ ಸಾಹಿತಿಗಳನ್ನು     ಪಡೆದ ಕನ್ನಡ ನಾಡು ನಿಜಕ್ಕೂ ಧನ್ಯ.
ಸಾಹಿತ್ಯ ಮಾತ್ರವಲ್ಲದೆ, ಸಂಗೀತ, ರಂಗಭೂಮಿ, ಚಿತ್ರಕಲೆ, ಕನ್ನಡ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಗೈದ ಹಲವು ಗಣ್ಯರು ಜೀವಿಸಿದ ನಾಡು ಕರುನಾಡು ಎಂದರು.
ಕನ್ನಡಿಗರ ಸಮಸ್ಯೆಗಳನ್ನು ಅರ್ಥೈಸಿ, ನಿವಾರಿಸಿ, ಕನ್ನಡ ಭಾಷಿಗರನ್ನು ಒಂದಾಗಿಸುವ ನಿಟ್ಟಿನಲ್ಲಿ ಆಲೂರು ವೆಂಕಟರಾಯರು, ಅಂದಾನೆಪ್ಪ ದೊಡ್ಡಮೇಟಿ, ರಂಜಾನ್ ಸಾಬ್, ಉತ್ತಂಗಿ ಚನ್ನಪ್ಪ, ಕಡಪ ರಾಘವೇಂದ್ರರಾವ್, ಕಾರ್ನಾಡು ಸದಾಶಿವರಾವ್, ಎಂ.ಗೋವಿಂದಪ್ಪೈ, ಡೆಪ್ಯುಟಿ ಚನ್ನ ಬಸಪ್ಪ ಮುಂದಾದ ಕರ್ನಾಟಕ ಕುಲಪುರೋಹಿತರ ಸೇವೆಯ ಪ್ರತಿಫಲವೇ ಕರ್ನಾಟಕವೆಂದು ತಿಳಿಸಿದರು.
“ಕರ್ನಾಟಕ ನಮ್ಮ ಹೆಮ್ಮೆ” ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲಿ ಜಿಲ್ಲಾಧಿಕಾರಿ ಸಿ.ಶಿಖಾ, ಶಾಸಕ ಎಂ.ಕೆ.ಸೋಮಶೇಖರ್, ಜಿ.ಪಂ ಅಧ್ಯಕ್ಷೆ ಪುಷ್ಪ ಅಮರನಾಥ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.





No comments:

Post a Comment