ಸಿದ್ದಲಿಂಗಪುರದಲ್ಲಿ ಷಷ್ಟಿಜಾತ್ರೆ ; ಭಕ್ತರ ದಂಡು
ವಾಹನ ಸಂಚಾರ ಬದಲು
ಮೈಸೂರು, ನ. 27- ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ
ಸಿದ್ದಲಿಂಪುರದಲ್ಲಿ ಇಂದು ಸುಬ್ರಹ್ಮಣ್ಯ ಷಷ್ಟಿ ಪ್ರಯುಕ್ತ ಜಾತ್ರೆ ನಡೆಯಿತು.
ಇಂದು ಬೆಳಗಿನ ಜಾವ ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿದ್ದ
ಬೆಳ್ಳಿ ನಾಗರ ಕಿರೀಟವನ್ನು ದೇವಸ್ಥಾನದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ
ಮೂರ್ತಿಗೆ ಧಾರಣೆ ಮಾಡಿ, ವಿವಿಧ ಅಭಿಷೇಕ ಸೇರಿದಂತೆ ವಿಶೇಷ ಪೂಜೆ
ನೆರವೇರಿಸಲಾಯಿತು, ಈ ಸಂದರ್ಭದಲ್ಲಿ ಮೈಸೂರು ಮತ್ತು ಮಮಡ್ಯ
ಜಿಲ್ಲಾಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು,
ಅಧಿಕಾರಿಗಳು ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಾವಿರಾರು ಭಕ್ತರು ಅಲ್ಲಿ ನೆರೆದಿದ್ದು ಅಲ್ಲಿನ ಬೃಹತ್ ಹುತ್ತಕ್ಕೆ ತನಿ
ಎರೆಯುತ್ತಿದ್ದರಿಂದ ಜನಜಂಗುಳಿ ಹೆಚ್ಚಾಗಿತ್ತು, ರಸ್ತೆಯ ಇಕ್ಕೆಲಗಳಲ್ಲಿ ಪೂಜಾ
ಸಮಾಗ್ರಿ, ಹೂವು ಹಣ್ಣು, ಕಡಲೆಪುರಿ, ಸಿಹಿತಿಂಡಿ ಅಂಗಡಿಗಳು, ಮಕ್ಕಳ ಆಟಾಟಿಕೆ
ವಸ್ತುಗಳ ಮಾರಾಟದ ಮಳಿಗೆಗಳು ಸೇರಿದಂತೆ ನೂರಾರು ಅಂಗಡಿಗಳು ತಲೆ
ಎತ್ತಿದ್ದವು. ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳೂ ಒಡಾಡಲಾಗದಷ್ಟು ಜನ
ಸಂದಣಿ ನೆರೆದಿತ್ತು.
ದೆವಸ್ಥಾನದಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸಲು ಸಾವಿರಾರು ಭಕ್ತರು
ಬೆಳಿಗ್ಗೆಯಿಂದಲೇ ಸರದಿ ಸಲಿನಲ್ಲಿ ಕಾದು ನಿಂತ್ತಿದ್ದರು, ಅಲ್ಲಿರುವ ಬೃಹತ್ತಾದ
ಹುತ್ತಕ್ಕೆ ಮಹಿಳೆಯರು ಹಾಲು, ಎಳನೀರು, ಮೊಟ್ಟೆ, ಬಾಳೆಹಣ್ಣು ಹೂವ
ಇತ್ಯಾಧಿಗಳನ್ನು ಹಾಕಿ, ಹುತ್ತದ ಮೇಲೆ ಹರಿಸಿನ, ಕುಂಕುಮ ಗಳನ್ನು
ಚೆಲ್ಲಿದ್ದರಿಂದ ಹುತ್ತವೆಲ್ಲಾ ವರ್ಣಮಯವಾಗಿ ಹರಿಸಿನ ಕುಂಕುಮ ಮತ್ತು
ಗಂಧದ ಕಡ್ಡಿಯ ಹೊಗೆಯ ವಾಸನೆಯ ಘಾಟಿನಿಂದ ಕಂಗೊಳಿಸುತ್ತಿತ್ತು.
ಕೆಲ ಹಾವಾಡಿಗರು ಹಲ್ಲುಕಿತ್ತ ನಾಗರ ಹಾವುಗಳನ್ನು ತಂದು ಹುತ್ತದ
ಮೇಲಿರಿಸಿ ಜನರನ್ನು ಮರಳುಮಾಡಿ ಹಣ ಸಂಪಾದಿಸುತ್ತಿದ್ದುದು ವಿಶೇóಷವಾಗಿತ್ತು,
ದೇವಸ್ಥಾನದಲ್ಲಿ ಪೊಲೀಸರ ಬಂದೋಬಸ್ತಿನಲ್ಲಿ ಭಕ್ತರು ದೇವರಿಗೆ ಪೂಜೆ
ಸಲ್ಲಿಸಲು ಅನುವು ಮಾಡಿಕೊಡಲಾಗಿತ್ತು.
ಇಲ್ಲಿನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ
ಸೇರಿರುವುದರಿಂದ ಮೈಸೂರು ಜಿಲ್ಲಾಡಳಿತದ ವತಿಯಿಂದ ಪೂಜೆ ಸಕಲ ಏರ್ಪಾಡು
ಮಾಡಲಾಗಿತ್ತು.
ದೇವಸ್ಥಾನದ ಮುಖ್ಯ ಅರ್ಚಕರು ಬೆಳಿಗ್ಗೆ ಪ್ರಾತ: ಕಾಲ ದೇವರ ಮೂರ್ತಿಗೆ
ವಿವಿಧ ದ್ರವಗಳಿಂದ ಅಭಿಶೇಕವ ಮಾಡಿ, ಹಲವಾರು ಪುಷ್ಪಗಳು, ತುಳಸಿ,
ಬಿಲ್ವಪತ್ರೆಗಳಿಂದ ಅರ್ಚನೆ ಮಾಡಿ, ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ
ಸಲ್ಲಿಸಲಾಯಿತು. ಆನಂತರ ಸಾರ್ವಜನಿಕರ ದರ್ಶನಕ್ಕೆ ಎಡೆಮಾಡಿಕೊಡಲಾಯಿತು.
ಒಟ್ಟಿನಲ್ಲಿ ಇಂದು ಸಿದ್ದಲಿಂಗಪುರದ ಹೆದ್ದಾರಿ ರಸ್ತೆ ಕಿಕ್ಕಿರಿದ ಜನಸಂದಣಿಯಿಂದ
ಕೂಡಿದ್ದು, ಷಷ್ಟಿಜಾತ್ರೆ ಭಕ್ತರ ಸಮೂಹದಿಂದಾಗಿ ಯಶಸ್ವಿಯಾಗಿ ಜರುಗಿತು.
ವಾಹನ ಸಂಚಾರ ಮಾರ್ಗ ಬದಲಾವಣೆ
ಸಿದ್ದಲಿಂಗಪುರದಲ್ಲಿ ಇಂದು ಷಷ್ಟಿ ಜಾತ್ರೆ ಇದ್ದುದರಿಂದ ಮೈಸೂರು ಕಡೆಯಿಂದ
ಬೆಂಗಳೂರು ಮಾರ್ಗವಾಗಿ ತೆರಳು ವಾಹನಗಳ ಸಮಚಾರ ಮಾರ್ಗವನ್ನು
ಬದಲಾಯಿಸಲಾಗಿತ್ತು.
ಎಲ್ಲಾ ವಾಹನಗಳನ್ನು ಮೈಸೂರು-ಬೆಂಗಳೂರು ರಸ್ತೆಯ ಟೋಲ್‍ಗೇಟ್‍ನಿಂದ
ವರ್ತುಲ ರಸ್ತೆಯಿಂದ ಕೆ.ಆರ್.ಎಸ್. ರಸ್ತೆಯ ಮಾರ್ಗ, ಅಲ್ಲಿಂದ ಪಂಪ್‍ಹೌಸ್
ಮಾರ್ಗದಲ್ಲಿ ತಿರುಗಿ ರಂಗನ ತಿಟ್ಟು, ಪಾಲಳ್ಳಿ ಮಾರ್ಗವಾಗಿ ಶ್ರೀರಂಗಪಟ್ಟಣ ರಸ್ತೆ
ತಲುಪಿ ಸಂಚರಿಸುವಂತೆ ವ್ಯವಸ್ತೆ ಮಾಡಲಾಗಿತ್ತು.
No comments:
Post a Comment