Monday, 3 November 2014


ಕೆ.ಆರ್.ಪೇಟೆ.ನ.03- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ  ನಂದಿತಾ ಎಂಬ ಬಾಲಕಿಯ ಮೇಲೆ ನಡೆದ ಹತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನ್ಯಾಯಯುತವಾಗಿ  ಹೋರಾಟ ಮಾಡುತ್ತಿರುವವರನ್ನು ಬಂಧಿಸುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿರುವ ಪೊಲೀಸರ ವರ್ತನೆಯನ್ನು ಖಂಡಿಸಿ ಹಾಗೂ ದುಷ್ಕರ್ಮಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಸರ್ಕಾರದ ನಿಲುವನ್ನು ವಿರೋಧಿಸಿ  ತಾಲೂಕು ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಪ್ರತಿಭಟನಾ ಪ್ರದರ್ಶನ ಆರಂಭಿಸಿದ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಪ್ರವಾಸಿ ಮಂದಿರ ಬಳಿ ಇರುವ ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ಮೈಸೂರು ಚನ್ನರಾಯಪಟ್ಟಣ ಮತ್ತು ಬೇರ್ಯ-ಕೆ.ಆರ್.ಪೇಟೆ  ಮುಖ್ಯರಸ್ತೆಯನ್ನು ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಬಿವಿಪಿ  ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿ ತೀರ್ಥಹಳ್ಳಿಯಲ್ಲಿ  ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ವಿಷಪ್ರಾಶಾನವನ್ನು ಮಾಡಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು.  ಕಠಿಣ ಕಾನೂನು ಕ್ರಮ  ಜರುಗಿಸಬೇಕು. ರಾಜ್ಯದಲ್ಲಿ ಮೂರು ವರ್ಷದ ಪುಟ್ಟಮಕ್ಕಳನ್ನು ಬಿಡದೆ ಅತ್ಯಾಚಾರ ಕೊಲೆ ಮಾಡುತ್ತಿರುವ ವಿಕೃತಕಾಮುಕ ವ್ಯಕ್ತಿಗಳನ್ನು ಬಂದಿಸದೆ ನಿರ್ಲಕ್ಷ್ಯವಹಿಸಿರುವ ಬ್ಯಾಟರಿ ಚಾರ್ಜ್ ಇಲ್ಲದ ಗೃಹಸಚಿವರ ಜಾರ್ಜ್ ಸ್ವಿಚ್ ಆಫ್‍ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಈ ಕೂಡಲೇ ರಾಜ್ಯದಲ್ಲಿ ನಡೆಯುತ್ತಿರುವ ಅನಾಚಾರಗಳಿಗೆ ನೈತಿಕತೆಗಳ ಹೊಣೆಹೊತ್ತು ರಾಜೀನಾಮೆ ನೀಡಬೇಕು.
ಹಾಡು ಹಗಲೇ ಯುವತಿಯನ್ನು ಮನೆಗೆ ತಲುಪಿಸುವುದಾಗಿ ನಂಬಿಸಿ ಕರೆದ್ಯೊದು ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ ಎಂದರೆ ನಮ್ಮ ಸರ್ಕಾರ  ಆಡಳಿತ ನಡೆಸುತ್ತಿರುವದಕ್ಕೆ ಅನಾಲಾಯಕ್ ಈ ಕೂಡಲೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಮನೆಗೆ ತೆರಳುವುದು ರಾಜ್ಯದ ಹಿತದೃಷ್ಠಿಯಿಂದ ಒಳ್ಳೆಯದು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನ್ಯಾಯಯುತವಾಗಿ ಪ್ರತಿಭಟನೆ ನಡೆಸುವ ವ್ಯಕ್ತಿಗಳನ್ನು ಬಂಧಿಸುವ ಮೂಲಕ ಸರ್ಕಾರ ತನ್ನ ಅಸಹಾಯಕತೆಯನ್ನು ತೋರುತ್ತಿದೆ, ರಾಜ್ಯದಲ್ಲಿ ನ್ಯಾಯಕ್ಕಾಗಿ ಜನತೆ ದಂಗೆ ಏಳುವ ಮುನ್ನವೇ ಎಚ್ಚೆತ್ತು ಕೊಂಡು ತಪ್ಪಿಸ್ಥರನ್ನು ಬಂದಿಸಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾ ನೇತೃತ್ವವನ್ನು ಎಬಿವಿಪಿ ಸಂಘನೆಯ ಪದಾಧಿಕಾರಿಗಳಾದ ಮುರುಳಿ, ಮಧು, ಎಚ್.ಬಿ.ಮಂಜುನಾಥ್, ಚಂದು, ಪವಿತ್ರ, ರಾಧಿಕಾ, ದೀಕ್ಷಿತ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿ ಅತ್ಯಾಚಾರಿಗಳನ್ನು ಕೂಡಲೇ ಬಂಧಿಸುವಂತೆ ರಸ್ತೆತಡೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯ ನಂತರ  ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

========================
 
ಕೆ.ಆರ್.ಪೇಟೆ,ನ.03- ಗಣೇಶೋತ್ಸವವು ಭಾರತ ಸ್ವಾತಂತ್ರ ಚಳುವಳಿಗೆ ಬ್ರಿಟೀಷರ ಬಂಧನದಿಂದ  ಪಾರಾಗಿ ದೇಶದ  ಜನರನ್ನು ಸಂಘಟಿಸಲು ದೇಶದ ಸ್ವಾತಂತ್ರ ಹೋರಾಟಗಾರರು ಆರಂಭಿಸಿದ  ಜಾತಿರಹಿತ  ಧರ್ಮರಹಿತ  ಕಾರ್ಯಕ್ರಮವಾಗಿತ್ತು. ಇದೇ ರೀತಿಯ ಕಾರ್ಯಕ್ರಮವನ್ನು ಸಂತೇಬಾಚಹಳ್ಳಿ ಗೆಳೆಯರ ಬಳಗವು  ಕಳೆದ 56ವರ್ಷಗಳಿಂದ ನಿರಂತರವಾಗಿ  ಗಣೇಶೋತ್ಸವ ನಡೆಸುವ  ಮೂಲಕ ಹತ್ತು ಹಲವು ಸಮಾಜಮುಖಿ  ಕಾರ್ಯಕ್ರಮಗಳನ್ನು ಹಮ್ಮಿಕೊಂಡು   ಈ ಭಾಗದ ಜನರ ಅಭಿವೃದ್ಧಿಗೆ ಶ್ರಮಿಸುತ್ತಾ ಬರುತ್ತಿರುವುದು ಶ್ಲಾಘನೀಯವಾದುದು ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.
ಅವರು ತಾಲೂಕಿನ ಸಂತೇಬಾಚಹಳ್ಳಿಯ ಗೆಳೆಯರ ಬಳಗದ 56ನೇ ವರ್ಷದ ಗಣೇಶೋತ್ಸವ ಮತ್ತು ಜನಪದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚೆಗೆ ಸಂಘ ಸಂಸ್ಥೆಗಳು ಆರಂಭಗೊಂಡ ಕೆಲವೇ ವರ್ಷಗಳಲ್ಲಿ ಪದಾಧಿಕಾರಿಗಳ ಆಂತರಿಕ ಕಚ್ಚಾಟದಿಂದ ಇಬ್ಬಾಗವಾಗುವುದು, ಸಮಾಜಮುಖಿ ಚಟುವಟಿಕೆಗಳಿಂದ ದೂರ ಉಳಿಯುವುದೇ ಹೆಚ್ಚು ಕಂಡು ಬರುತ್ತಿದೆ ಆದರೆ ಸಂತೇಬಾಚಹಳ್ಳಿಯ ಗೆಳೆಯರ ಬಳಗವು ಕಳೆದ 56ವರ್ಷಗಳಿಂದ ನಿರಂತರವಾಗಿ ವರ್ಷಕ್ಕಿಂತ ವರ್ಷಕ್ಕೆ ಹೆಚ್ಚು ಹೆಚ್ಚು ವಿಜೃಂಭಣೆಯಿಂದ ನಡೆಯುತ್ತಾ ಬರುತ್ತಿರುವುದು ಬಹುಷಃ ದೇಶದಲ್ಲಿಯೇ ಪ್ರಥಮ ಎಂದರೂ ಅಡ್ಡಿಯಿಲ್ಲ.
ಗೆಳೆಯರ ಬಳಗದ ಅಧ್ಯಕ್ಷ ಬಿ.ಶಿವಪ್ಪ ಅವರು ಬಳಗ ಸ್ಥಾಪನೆಯಾದ ದಿನಗಳಲ್ಲಿ ಯಾವ  ರೀತಿ ಹುರುಪಿನಿಂದ ಇದ್ದರೋ ಅದೇ ರೀತಿ ಈಗಲೂ ಸಂಘದ ಚಟುವಟಿಕೆಗಳಲ್ಲಿ ಇದ್ದಾರೆ ಎಂಬುದು ಅವರ ಚಟುವಟಿಕೆಗಳನ್ನು ನೋಡಿದಾಗ ಕಂಡು ಬರುತ್ತದೆ.  ಬಳಗವು ಈ ಭಾಗದ ರಾಜಕಾರಣಿ ಕೃಷ್ಣ ಮತ್ತಿತರರ ರಾಜಕೀಯ ಏಳಿಗೆಗೂ ವೇದಿಕೆ ಸೃಷ್ಟಿಸಿದೆ ಎಂಬುದು ಕೂಡ  ಗಮನಾರ್ಹವಾದುದು. ಇಲ್ಲಿ ಪ್ರತಿವರ್ಷ ಸಾವಿರಾರು ಜನತೆ ಸೇರುವುದು ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿದೆ.  ಗೆಳೆಯರ ಬಳಗವು ಯಾವುದೇ ಒಂದು ಪಕ್ಷದ ಮುಖವಾಣಿಯಂತೆ ಕೆಲಸ ಮಾಡುತ್ತಿಲ್ಲ.  ಇದು  ಪಕ್ಷತೀತವಾದ ಸಂಘಟನೆಯಾಗಿದೆ.  ಇಲ್ಲಿ ಎಲ್ಲಾ ಪಕ್ಷದವರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ ಈ ಸಂಘಟನೆಯು ಇಷ್ಟು ವರ್ಷ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ.  ಸಂಘವು ಕೇವಲ ಮನರಂಜನಾ ಕಾರ್ಯಕ್ರಮಕ್ಕೆ ಮೀಸಲಾಗದೇ ಉಚಿತ ಕಣ್ಣು ತಪಾಸಣೆ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ,  ರಕ್ತದಾನ ಶಿಬಿರಗಳ್ನು ನಡೆಸುತ್ತಿರುವುದು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುತ್ತಿರುವುದು  ಅಭಿನಂದನೀಯ. ಅದೇ ರೀತಿ ಕಲಾವಿದರನ್ನು ಆಹ್ವಾನಿಸಿ ಅವರಿಗೆ ಗೌರವ ಧನ ನೀಡುತ್ತಾ ಅವರಿಗೂ ವೇದಿಕೆ ಸೃಷ್ಟಿಸಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ  ಎಂದು ಸಂಸದ ಪುಟ್ಟರಾಜು ಶ್ಲಾಘನೆ ವ್ಯಕ್ತಪಡಿಸಿದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.  ಬಳಗದ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.   ಶಾಸಕ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಬಳಗದ ಅಧ್ಯಕ್ಷ ಜಯಕುಮಾರ್,  ಕಾರ್ಯದರ್ಶಿ ಎಸ್.ಹೆಚ್.ಕೃಷ್ಣ, ಖಜಾಂಚಿ ಎಸ್.ಎಂ.ಲೋಕೇಶ್,  ರಾಜ್ಯ ಮೈಸೂರು ಲ್ಯಾಂಪ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಾನಕೀರಾಂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಚಂದ್ರಶೇಖರ್, ಚಿತ್ರನಟ ಸಾಯಿಕುಮಾರ್ ಅವರ ಸಹೋದರ ನಟ ರವಿಕಿರಣ್, ತಾಲೂಕು ಪಂಚಾಯಿತಿ ಸದಸ್ಯ ವಿ.ಎನ್.ಮಹದೇವೇಗೌಡ, ಮಾಳಗೂರು ಜಗದೀಶ್, ಧನ್ಯಕುಮಾರ್, ಎಸ್.ಎಂ.ನಾಗೇಶ್, ಬಂಗಾರ ಪರಿಶೋಧಕರಾದ ಸಾವಂದಚಾರ್  ಸೇರಿದಂತೆ   ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಚಿತ್ರಶೀರ್ಷಿಕೆ:03 ಞಡಿಠಿeಣ-02 ಕೆ.ಆರ್.ಪೇಟೆ: ತಾಲೂಕಿನ  ಸಂತೇಬಾಚಹಳ್ಳಿಯ ಗೆಳೆಯರ ಬಳಗದ 56ನೇ ವರ್ಷದ ಗಣೇಶೋತ್ಸವ ಮತ್ತು ಜನಪದ ಸಂಜೆ ಕಾರ್ಯಕ್ರಮವನ್ನು ಸಂಸದ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಕೆ.ಸಿ.ನಾರಾಯಣಗೌಡ, ಗೆಳೆಯರ ಬಳಗದ ಸಂಸ್ಥಾಪಕ ಬಿ.ಶಿವಪ್ಪ, ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ ಎಸ್.ಹೆಚ್,ಕೃಷ್ಣ, ರಾಜ್ಯ ಮೈಸೂರು ಲ್ಯಾಂಪ್ಸ್ ಮಾಜಿ ಬಿ.ಎಲ್.ದೇವರಾಜು, ತಾ.ಪಂ.ಮಾಜಿ ಅಧ್ಯಕ್ಷ ಜಾನಕೀರಾಂ ಇತರರು ಇದ್ದಾರೆ.
======================


No comments:

Post a Comment