Monday, 3 November 2014

ರಾಜ್ಯ ಸರ್ಕಾರ ಕಣ್ಣಿದ್ದು ಕುರುಡು: ಯಡ್ಡಿ

                                            ರಾಜ್ಯ ಸರ್ಕಾರ ಕಣ್ಣಿದ್ದು ಕುರುಡು: ಯಡ್ಡಿ
ಮೈಸೂರು,ನ.3- ಈ ಹಿಂದೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ಕೈಬಿಟ್ಟು, ಅಭಿವೃದ್ಧಿಗೆ ಸ್ಪಂಧಿಸದ ರಾಜ್ಯ ಸರ್ಕಾರವು ಕಣ್ಣಿದ್ದು ಕುರುಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಮೈಸೂರಿನ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಸ್ಥಿತಿಯು ಹದಗೆಟ್ಟಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ಇದೆ ಭಾಗದವರಾದ ಮುಖ್ಯ ಮಂತ್ರಿಗಳು ಜಿಲ್ಲೆಗೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂದರು.
ಐಎಎಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ, ಇಲ್ಲಿ ಐಎಎಸ್ ಅಧಿಕಾರಿಗೂ ರಕ್ಷಣಿ ಇಲ್ಲದಂತಾಗಿದೆ, ಕಾನೂನು ಸುವ್ಯವಸ್ಥೆಯು ಹದಗೆಟ್ಟಿದ್ದು ಮಕ್ಕಳ ಮೇಲೆ ದಿನೇ ದಿನೇ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ರಾಜ್ಯದ ಮುಖ್ಯ ಮಂತ್ರಿಗಳು ಯಾವುದಕ್ಕೂ ಗಮನ ಹರಿಸುತ್ತಿಲ್ಲ ಎಂದು ಹೇಳಿದರು.
ಮೈಸೂರು ನಗರದ ಸವಾಂಗೀಣ ಅಭಿವೃದ್ಧಿಯಾಗಿಲ್ಲ, ವಿಮಾನ ನಿಲ್ದಾಣ ವಿಸ್ತರಣೆ, ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಳ್ಳದೆ ಮಿನಾಮೇಶ ಎಣಿಸುತ್ತಿದ್ದಾರೆ.
ಪ್ರಧಾನಿ ಮೋದಿರವರು ಮೈಸೂರಿನ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ತೋರುತ್ತಿದ್ದು, ಎಲ್ಲಾ ಸೌಲಭ್ಯ ಹಾಗೂ ಸಹಕಾರ ನೀಡಲು ಮುಂದಾಗಿದ್ದರೂ ಸಹ ಮುಖ್ಯ ಮಂತ್ರಿಗಳಿಗೆ ಅವರನ್ನು ಹೋಗಿ ಭೇಟಿ ಮಾಡುವ ಕೆಲಸಕ್ಕೂ ಮುಂದಾಗಿಲ್ಲ.
 ನಾವುಗಳು ಪಕ್ಷಾತೀತವಾಗಿ ಎಲ್ಲಾರೀತಿಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದವೇ, ನಾಡಿನ ಅಭಿವೃದ್ಧಿ ಎಲ್ಲಾ ಪಕ್ಷಗಳ ಗುರಿಯಾಗಬೇಕು. ಸರ್ಕಾರವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ  ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ನವೆಂಬರ್ 19 ರಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದು, ಒಂದು ದಿನ ಪೂರ್ತಿ ಅಲ್ಲಿನ  ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸುತ್ತೇನೆ. ಸರ್ಕಾರವು ಅಲ್ಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆಹೇಳಿದ್ದರು, 20ಕ್ಕೂ ಹೆಚ್ಚು ಕೆರೆಗಳ ಫೈಕಿ ಬರಿ 4 ಕೆರೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಕಡಿಮೆಯ ಪರಿಣಾಮ ದೇಶದಲ್ಲಿಯೂ ಬೆಲೆ ಕಡಿಮೆಯಾಗಿ ಅದನ್ನು ರಾಜ್ಯದಲ್ಲಿಯೂ ಜಾರಿಗೊಳಿಸಲಾಗಿದೆ. ಆದ್ದರಿಂದ ಬಸ್ ಪ್ರಯಾಣದರವನ್ನು ಕಡಿತ ಗೊಳಿಸುವಂತೆ ಸರ್ಕಾರನ್ನು ಆಗ್ರಹಿಸಿದರು.
ಪ್ರಯಾಣದರ ಕಡಿತ ಗೊಳಿಸದಿದ್ದಲ್ಲಿ ಬೆಂಗಳೂರಿನಲ್ಲಿ ಸಭೆಯನ್ನು ಕರೆದು ಚರ್ಚೆ ಮಾಡಿ ಹೋರಾಟ ನಡೆಸಲು ಸಿದ್ದರಾಗುತ್ತೇವೆಂದರು.
ಗೋಷ್ಠಿಯಲ್ಲಿ ಇವರೊಂದಿಗೆ ಮಾಜಿ ಶಾಸಕ ಕೃಷ್ಣಮೂರ್ತಿ, ರಾಮದಾಸ್, ತೋಂಟದಾರ್ಯ, ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

No comments:

Post a Comment