Sunday, 16 November 2014

ಮಂಡ್ಯ-ನ,16:-ದೇಶ ಮತ್ತು ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದಂತಹ ಕೃತ್ಯಗಳನ್ನು ತಡೆಯಲು ನಮ್ಮ ಸಂವಿಧಾನದಲ್ಲಿ ಕಠಿಣ ಕಾನೂನು ಜಾರಿ ಮಾಡಿದರೆ ಮಾತ್ರ ಸಾಧ್ಯ ಎಂದು, ಬಹುಭಾಷಾ ನಟ ಅರ್ಜುನ್‍ಸರ್ಜಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ಪ್ರಥಮ ನಿರ್ದೇಶನದ ಅಭಿಮನ್ಯು ಚಿತ್ರ ವೀಕ್ಷಿಸಲು ಮಂಡ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರ್ಜುನ್‍ಸರ್ಜಾ, ನಮ್ಮ ದೇಶದ ಕಾನೂನಿನ ಶಿಕ್ಷೆಯಲ್ಲಿ ದುಷ್ಕøತ್ಯ ಎಸಗುವ ಮಂದಿಗೆ ಭಯವಿಲ್ಲಾ. ದೌರ್ಜನ್ಯದಂತಹ ಕೃತ್ಯಗಳಿಗೆ ಮುಸ್ಲಿಂ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಕಠಿಣ ಕಾನೂನಿನ ರೀತಿ ನಮ್ಮ ದೇಶದಲ್ಲೂ ಜಾರಿಯಾದಾಗ ಮಾತ್ರ ಇಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ಇದಕ್ಕೂ ಮೊದಲು ತಮ್ಮ ಚಿತ್ರ ವೀಕ್ಷಿಸಲು ಮಂಡ್ಯಕ್ಕೆ ಆಗಮಿಸಿದ ಕುರಿತು ಮಾತನಾಡಿದ ಅರ್ಜುನ್ ಸರ್ಜಾ, ಅಭಿಮನ್ಯು ನಾನು ನಿರ್ದೇಶನ ಮಾಡಿದ ಕನ್ನಡದ ಪ್ರಥಮ ಚಿತ್ರ. ಮಂಡ್ಯ ಸೇರಿದಂತೆ ಪ್ರದರ್ಶನಗೊಳ್ಳುತ್ತಿರುವ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ಈ ಚಿತ್ರ ಶೈಕ್ಷಣಿಕ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಕುರಿತಾದ ಚಿತ್ರಕತೆ ಆಧರಿಸಿದ್ದು, ಇದನ್ನು ರಾಜಕಾರಣಿಗಳು ಸೇರಿದಂತೆ ವಿಚಾರವಂತ ಮಂದಿ ಈ ಕಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಸಂತಸ ವ್ಯಕತಪಡಿಸಿದರು. ಮುಂದೆ ತಮ್ಮ ಪುತ್ರಿಯನ್ನು ಚಿತ್ರರಂಗಕ್ಕೆ ತರುವ ಕುರಿತು ಮಾತನಾಡಿ, ಕನ್ನಡ ಸೇರಿದಂತೆ ಇತರ ಭಾಷೆಗಳ ಚಿತ್ರಗಳಲ್ಲಿ ಅಭಿನಯ ಮಾಡಿಸಲು ಸಮ್ಮತವಿದೆ ಎಂದರು.
ಗುರುಶ್ರೀ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಅಭಿಮನ್ಯು ಚಿತ್ರ ವೀಕ್ಷಿಸಲು ತಮ್ಮ ನೆಚ್ಚಿನ ನಟ ಮಂಡ್ಯಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಪುಷ್ಪ ಮಾಲೆ ಹಾಕಿ ಜಯಗೋಷ ಕೂಗುತ್ತಾ ಅತ್ಮೀಯವಾಗಿ ಬರಮಾಡಿಕೊಂಡರು.
                      ---------------
            

No comments:

Post a Comment