ಸಫಾಯಿ ಕರ್ಮಚಾರಿಗಳ ಕಲ್ಯಾಣ ಕಾರ್ಯಕ್ರಮ ಅನುಷ್ಠಾನದಲ್ಲಿ ನಿರ್ಲಕ್ಷ ಸಹಿಸದು: ಶಿವಣ್ಣ
ಮೈಸೂರು, ನವೆಂಬರ್ 8. ಸಫಾಯಿ ಕರ್ಮಚಾರಿಗಳ ಸಮಗ್ರ ಏಳಿಗೆಗೆ ಪೂರಕವಾಗಿರುವ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ವಹಿಸಬಾರದೆಂದು ರಾಷ್ಟ್ರೀಯ ಸಫಾಯಿ ಕವರ್iಚಾರಿಗಳ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ತಾಕೀತು ಮಾಡಿದರು.
ನಗರದ ಸರ್ಕಾರಿ ಅತಿಥಿಗೃಹದ ಸಭಾಂಗಣದಲ್ಲಿ ಶುಕ್ರವಾರ ಸಫಾಯಿ ಕರ್ಮಚಾರಿಗಳ ಸಾಮಾಜಿಕ ಆರ್ಥಿಕ, ಹಾಗೂ ಸೇವಾ ಇತರೆ ಪರಿಸ್ಥಿತಿ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಚಾರಿಗಳ ಕುಟುಂಬಕ್ಕೆ ಅಗತ್ಯವಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ನಿಗದಿಯಾಗಿರುವ ಶೇ. 22.75ರ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರಿಗೆ ಕನಿಷ್ಠ 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಬೇಕು. ಸುರಕ್ಷತಾ ಕೈಗವಸು, ಸಮವಸ್ತ್ರವಿಲ್ಲದೆ ಕೆಲಸಕ್ಕೆ ನಿಯೋಜಿಸಬಾರದು ಎಂದು ಹೇಳಿದರು.
ಕಾರ್ಮಿಕರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನವನ್ನು ಸಫಾಯಿ ಕರ್ಮಚಾರಿಗಳಿಗೆ ನೀಡಬೇಕು. ಹೊರ ಗುತ್ತಿಗೆ ಪಡೆದಿರುವವರೂ ಸಹ ಇದೇ ಸೂಚನೆಯನ್ನು ಪಾಲಿಸಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದ ಅಧ್ಯಕ್ಷರು ರಾಜ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈನಂದಿನ ವೇತನ ಗುತ್ತಿಗೆ ಕಾರ್ಮಿಕರ ಕೆಲಸವನ್ನು ಸಕ್ರಮಗೊಳಿಸಲು ಸರ್ಕಾರ ಮುಂದಾದಂತೆ ಸಫಾಯಿ ಕರ್ಮಚಾರಿಗಳ ಕೆಲಸವನ್ನು ಇದೇ ಮಾದರಿಯಲ್ಲಿ ಸಕ್ರಮಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದರು.
ಸಮಾಜ ಕಲ್ಯಾಣ ಹಾಗೂ ಇತರೆ ಇಲಾಖೆಗಳು ನಡೆಸುತ್ತಿರುವ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಬಹಲ ಕಡಿಮೆ ವೇತನ ನೀಡಲಾಗುತ್ತಿರುವುದು ನನ್ನ ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಅಧ್ಯಕ್ಷರು ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಫಾಯಿ ಕರ್ಮಚಾರಿಗಳು ಕಷ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ಜಾರಿಗೊಳಿಸುವಂತೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಕೋರಲಾಗಿದೆ ಎಂದರು.
ಸಫಾಯಿ ಕರ್ಮಚಾರಿಗಳು ನಿರ್ವಹಿಸುವ ಕೆಲಸಕ್ಕೆ ಬೇಕಾಗುವ ಸುರಕ್ಷಾ ಕಿಟ್, ಆರ್ಥಿಕ ನೆರವು ಹಾಗೂ ಇತರೆ ಸವಲತ್ತನ್ನು ಒಂದೇ ದಿನ ನೀಡಿ ಅನುಕೂಲ ಕಲ್ಪಿಸುವ ವಿಶೇಷ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯಲ್ಲಿ ಆಯೋಜಿಸಬೇಕು. ಜಿಲ್ಲೆಯ ವಿವಿಧ ತಾಲೂಕಿನ ಸಫಾಯಿ ಕರ್ಮಚಾರಿಗಳನ್ನು ಆಹ್ವಾನಿಸಿ ಅವಶ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಮೈಸೂರು ಮಹಾನಗರ ಪಾಲೀಕೆ ಆಯುಕ್ತ ಬೆಠಸೂರಮಠ, ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಸರಸ್ವತಿ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಾರ್ವಜನಿಕ ಮಾಹಿತಿ ಆಂದೋಲನ
ದಾವಣಗೆರೆ, ನವೆಂಬರ್ 08, 2014
ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕÀ ವಾರ್ತಾ ಶಾಖೆ ಇತರ ಮಾಧ್ಯಮ ಘಟಕಗಳಾದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ, ಸಂಗೀತ ಮತ್ತು ನಾಟಕ ವಿಭಾಗ, ಚಲನಚಿತ್ರ ವಿಭಾಗ, ದೂರದರ್ಶನ ಮತ್ತು ಆಕಾಶವಾಣಿಗಳ ಸಹಯೋಗದೊಂದಿಗೆ ಇದೇ ನವೆಂಬರ್ 10 ರಿಂದ 12ರ ವರೆಗೆ ದಾವಣಗೆರೆಯ ಸರ್ಕಾರಿ ಬಾಲಕರ ಪ್ರೌಢ ಶಾಲಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಆಯೋಜಿಸಲಿದೆ. ದಿನಾಂಕ 10-11-2014 (ಸೋಮವಾರ) ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಬಾಲಕರ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ಶ್ರೀ. ಜಿ.ಎಮ್.ಸಿದ್ದೇಶ್ವರ ಅವರು ಆಂದೋಲನವನ್ನು ಉದ್ಘಾಟಿಸಲಿದ್ದಾರೆ.
ಸಾರ್ವಜನಿಕ ಮಾಹಿತಿ ಆಂದೋಲನದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯುಳ್ಳ ವಿಚಾರಗಳ ಕುರಿತು ಕಾರ್ಯಾಗಾರಗಳು, ಮುಕ್ತ ಸಾರ್ವಜನಿಕ ಚರ್ಚೆಗಳು ನಡೆಯಲಿವೆ. ಸಾರ್ವಜನಿಕ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಡಲು ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಬೃಹತ್ ವಸ್ತು ಪ್ರದರ್ಶನ ನಡೆಯಲಿದೆ. ಮಾಹಿತಿ ನೀಡುವ ಮತ್ತು ಸೇವೆಗಳನ್ನು ದೊರಕಿಸುವ ವ್ಯವಸ್ಥೆಯನ್ನು ಬಲಗೊಳಿಸುವ, ವೃದ್ಧಿಸುವ ಉದ್ದೇಶ ಈ ಆಂದೋಲನದ್ದಾಗಿದೆ.
ಆಂದೋನದ ಎರಡನೆಯ ಮತ್ತು ಮೂರನೆಯ ದಿನಗಳಾದ ದಿನಾಂಕ 11-11-2014 ಮತ್ತು 12-11-2014 ರಂದು ಸರಕಾರದ ವಿವಿಧ ಯೋಜನೆಗಳಾದ ಪಡೇ ಭಾರತ್ ಬಡೇ ಭಾರತ್ ,ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ, ಶಾಲಾ ದರ್ಪಣ, ಪ್ರಧಾನ ಮಂತ್ರಿ ಜನ ಧನ ಯೋಜನೆ, ಸಂಸದ ಆದರ್ಶ ಗ್ರಾಮ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಕಿಸಾನ್ ಸಿಂಚಯಿ ಯೋಜನೆ ಇತ್ಯಾದಿಗಳ ಕುರಿತು ವಿಷಯ ಪರಿಣತರಿಂದ ವಿಚಾರ ಸಂಕಿರಣಗಳು ನಡೆಯಲಿವೆ.
ದಾವಣಗೆರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್É ಈ ಸಾರ್ವಜನಿಕ ಮಾಹಿತಿ ಆಂದೋನದ ಬೃಹತ್ ಭಾಗಿದಾರರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ಬ್ಯಾಂಕ್‍ಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸಾರ್ವಜನಿಕ ಮಾಹಿತಿ ಆಂದೋನದ ಇತರ ಭಾಗಿದಾರರಾಗಿದ್ದಾರೆ. ದಿನಾಂಕ 12-11-2014ರಂದು ಅಪರಾಹ್ನ 12:30ಕ್ಕೆ ಆಂದೋಲನದ ಸಮಾರೋಪ ಸಮಾರಂಭ ದಾವಣಗೆರೆ ಸರ್ಕಾರಿ ಬಾಲಕರ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ.
No comments:
Post a Comment