Monday, 24 November 2014

ಮೈಸೂರು-ಮಂಡ್ಯ ಸುದ್ದಿಗಳು.

ಕೃಷ್ಣರಾಜಪೇಟೆ. ಒಬ್ಬ ಸಾಮಾನ್ಯ ರೈತನ ಮಗನಾದ ನಾನು ರಾಜಕೀಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಜನತೆಯ ಆಶೀರ್ವಾದವು ನನ್ನ ಮೇಲಿರುವವರೆಗೆ ರಾಜಕೀಯವಾಗಿ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ನನ್ನ ಜೀವನದ ಕೊನೆಯ ಉಸಿರಿರುವವರೆಗೂ ಕರ್ನಾಟಕ ರಾಜ್ಯದ ಅಭಿವೃಧ್ಧಿಗೆ ದುಡಿಯುತ್ತೇನೆ ಎಂದು ಶಿವಮೊಗ್ಗ ಕ್ಷೇತ್ರದ ಲೋಕಸಭ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ತಮ್ಮ ಮನೆದೇವರು ತಾಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವೀಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಗದ್ದುಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ನಡೆದ ಕಾರ್ತೀಕ ದೀಪೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನನಗೆ ಜನ್ಮ ನೀಡಿದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಹಾಗೂ ನನಗೆ ರಾಜಕೀಯವಾಗಿ ಆಶೀರ್ವಾದ ಮಾಡಿದ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕುಗಳೆರಡೂ ನನಗೆ ಎರಡು ಕಣ್ಣುಗಳಿದ್ದಂತೆ, ಶಿವಮೊಗ್ಗ ಜಿಲ್ಲೆಯ ಜನತೆಯು ನನ್ನ ಮೇಲೆ ವಿಶ್ವಾಸವನ್ನಿಟ್ಟು ನೀಡಿದ ಆಶೀರ್ವಾದವನ್ನು ಈ ಜನ್ಮದಲ್ಲಿಯೇ ಮರೆಯಲು ಸಾಧ್ಯವಿಲ್ಲ. ಜನತೆಯ ನೀಡಿದ ಅಧಿಕಾರವನ್ನು ರಾಜ್ಯದ ಅಭಿವೃಧ್ಧಿಗೆ ಬಳಸಿ ಒಬ್ಬ ಸಾಮಾನ್ಯ ಸೇವಕನಂತೆ ಕೆಲಸ ಮಾಡಿ ಈ ಯಡಿಯೂರಪ್ಪನ ಶಕ್ತಿ ಏನೆಂಬುದನ್ನು ತೋರಿಸಿಕೊಡುತ್ತೇನೆ. ಯಾರು ಎಷ್ಟೇ ಶಡ್ಯಂತ್ರಗಳನ್ನು ನಡೆಸಿ ನನ್ನ ವಿರುದ್ಧ ಪಿಯೂರಿ ನಡೆಸಿ ಜೈಲಿಗೆ ಕಳುಹಿಸಿದ್ದರೂ ನನ್ನ ಶಕ್ತಿ, ಉತ್ಸಾಹವು ಕಡಿಮೆಯಾಗಿಲ್ಲ. ಕಲ್ಯಾಣ ಕರ್ನಾಟಕದ ನಿರ್ಮಾಣವು ನನ್ನ ಗುರಿಯಾಗಿದ್ದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಶ್ರಮಿಸಲು ಶಕ್ತಿ ನೀಡುವಂತೆ ಪ್ರಾರ್ಥಿಸಲು ನನ್ನ ಮನೆದೇವರು ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರನ್ನು ಬೇಡಿಕೊಳ್ಳಲು ಬಂದಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ದೈವಮಾರ್ಗದಿಂದ ಮಾನಸಿಕ ನೆಮ್ಮದಿ: ಇಂದಿನ ಒತ್ತಡದ ಬದುಕಿನಲ್ಲಿ ದೇವರು, ದೇವಾಲಯಗಳು, ಮಠಮಾನ್ಯಗಳು ಹಾಗೂ ಧ್ಯಾನದ ಮೊರೆ ಹೋದರೆ ಮಾನಸಿಕವಾಗಿ ನೆಮ್ಮದಿಯು ದೊರೆಯುವ ಜೊತೆಗೆ ಹಿಡಿದ ಕಾರ್ಯದಲ್ಲಿಯೂ ಯಶಸ್ಸು ದೊರೆಯುತ್ತದೆ. ನಮ್ಮ ಸಂಸ್ಕøತಿ ಹಾಗೂ ಪರಂಪರೆಯನ್ನು ಗೌರವಿಸುವ, ಗುರು-ಹಿರಿಯರನ್ನು ಗೌರವಿಸುವ ಮನೋಭವನೆಯನ್ನು ಯುವಜನರು ಬೆಳೆಸಿಕೊಂಡು ಸುಭದ್ರ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಾನು, ನನ್ನದು ಎಂಬ ಸ್ವಾರ್ಥವನ್ನು ಬದಿಗಿಟ್ಟು ಸಮಾಜಕ್ಕಾಗಿ ನಾವು ಎಂಬ ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಯಡಿಯೂರಪ್ಪ ನನ್ನ ಜನ್ಮಭೂಮಿ ಕೃಷ್ಣರಾಜಪೇಟೆ ತಾಲೂಕನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಯಾವುದೇ ರೀತಿಯ ಸಹಕಾರವನ್ನು ನೀಡಲು ಬದ್ಧನಾಗಿದ್ದೇನೆ. ಸೇವಾ ಮನೋಭಾವನೆಯನ್ನು ಹೊಂದಿರುವ ಕ್ಷೇತ್ರದ ಶಾಸಕರಾದ ನಾರಾಯಣಗೌಡರು ಉತ್ತಮವಾದ ಕೆಲಸಗಾರರಾಗಿದ್ದಾರೆ. ತಾಲೂಕಿನ ಅಭಿವೃಧ್ಧಿಯ ಬಗ್ಗೆ ಅಪಾರವಾದ ಕನಸನ್ನು ಕಂಡಿರುವ ಗೌಡರಿಗೆ ನನ್ನ ಸಂಪೂರ್ಣವಾದ ಸಹಕಾರವಿದೆ ಎಂದು ಹೇಳಿದರು.
ಗವಿಮಠದ ಪೀಠಾಧಿಪತಿಗಳಾದ ಶ್ರೀ ಸ್ವತಂತ್ರಬಸವಲಿಂಗಶಿವಯೋಗಿ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರಮಹಾಂತಶ್ರೀಗಳು, ಮಳವಳ್ಳಿಯ ಬಂಡೆಮಠದ ಶ್ರೀಗಳು, ಶಿಕಾರಿಪುರ ಕ್ಷೇತ್ರದ ನೂತನ ಶಾಸಕ ಬಿ.ವೈ.ರಾಘವೇಂದ್ರ, ಶಾಸಕ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಮುಖಂಡರಾದ ಬಿ.ಜವರಾಯಿಗೌಡ, ಎಸ್.ಸಿ.ಅಶೋಕ್, ಎಸ್.ಸಿ.ಅರವಿಂದ್, ಕೆ.ಎನ್.ಲಿಂಗರಾಜು, ಕೆ.ಜೆ.ವಿಜಯಕುಮಾರ್, ಕೆ.ಪಿ.ಜಯಂತ್, ತೋಟಪ್ಪಶೆಟ್ಟಿ, ವರದರಾಜೇಗೌಡ, ಶೀಳನೆರೆ ಭರತ್, ಪ್ರಮೀಳವರದರಾಜೇಗೌಡ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸಾಸಲು ಈರಪ್ಪ, ತಾಲೂಕು ಪಂಚಾಯಿತಿ ಸ್ಥಾಯಿಸಮಿತಿಯ ಅಧ್ಯಕ್ಷ ಮಹದೇವೇಗೌಡ, ಜಿಲ್ಲಾ ಕಸಾಪ ಮಾಜಿ ಉಪಾಧ್ಯಕ್ಷ ಕೆ.ಆರ್.ನೀಲಕಂಠ ಹಾಗೂ ಯಡಿಯೂರಪ್ಪನವರ ಕುಟುಂಬ ವರ್ಗದವರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖಂಡರಾದ ಜಿ.ಪಂ ಮಾಜಿಸದಸ್ಯ ವಿ.ಸಿ.ಚೆಲುವೇಗೌಡ ಸ್ವಾಗತಿಸಿದರು, ಸಾಸಲು ನಾಗೇಶ್ ವಂದಿಸಿದರು. ಪುರ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಶೀರ್ಷಿಕೆ: 24-ಏಖPಇಖಿಇ-02 ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗವಿಮಠದಲ್ಲಿ ಕಾರ್ತೀಕ ದೀಪೋತ್ಸವ ಸಮಾರಂಭದಲ್ಲಿ ಭಾಗತವಹಿಸಿದ್ದ ಮಾಜಿಮುಖ್ಯಮಂತ್ರಿ ಸಂಸದ ಬಿ.ಎಸ್.ಯಡಿಯೂರಪ್ಪ ಅವರನ್ನು ಶಾಸಕ ನಾರಾಯಣಗೌಡ ಅಭಿನಂದಿಸಿದರು.
               ಸೈಕಲ್ ಹೆರಿಟೇಜ್ ಕ್ವಿಜ್ ವಿಧ್ಯಾರ್ಥಿಗಳ ಗಮನ ಸೆಳೆದಿದೆ
ಮೈಸೂರು, ನ. 25- ಹೆಸರಾಂತ ಸೈಕಲ್ ಅಗರ್‍ಬತ್ತಿ ಸಂಸ್ಥೆಯವರು ಇತ್ತೀಚೆಗೆ ಮೈಸೂರಿನ ವೈದಗಯಕೀಯ ಅಲ್ಯೂಮ್ನಿ ಅಸೋಸಿಯೇಷನ್ ಹಾಲ್‍ನಲ್ಲಿ ಆಯೋಜಿಸಿದ್ದ  ಸೈಕಲ್ ಹೆರಿಟೇಜ್ ಕ್ವಿಜ್‍ನಲ್ಲಿ, ಈ ರಸಪ್ರಶ್ನೆ ಕಾರ್ಯಕ್ರಮ ಮೈಸೂರು ವಿಭಾಗದ ವಿಧ್ಯಾರ್ಥಿಗಳ ಗಮನ ಸೆಳೆಯಿತು.
 ವಿಶ್ವದಲ್ಲಿಯೇ ಅತ್ಯಧಿಕವಾದ ಉತ್ಪಾದನಾ ಸಂಸ್ಥೆಯಾದ ಸೈಕಲ್ ಪ್ಯೂರ್ ಅಗರ್ ಬತ್ತಿ  ಇಂದು ಬಹು ನಿರೀಕ್ಷಿತ ಸಂಸ್ಥೆಯಾಗಿದ್ದು, ದೇಶದ ಪರಂಪರೆ, ಸಂಸ್ಕøತಿಯನ್ನು ಕೇಂದ್ರೀಕರಿಸುವ 2014ರ ಏಕೈಕ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತ್ತು, ರಾಜ್ಯದ 50 ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿ ತಂಡಗಳು  ಇದರಲ್ಲಿ ಭಾಗವಹಿಸಿದ್ದವು. ಮೈಸೂರು ನಗರದಲ್ಲಿ ಈ ಸ್ಪರ್ಧೆ ಎರಡನೇ ಬಾರಿಯಾಗಿದ್ದು,  ಈ ಸಲವೂ ಅತ್ಯಂತ ಯಶಸ್ವಿಯಾಗಿ ವಿದ್ಯಾರ್ಥಿಗಳ ಮನಸೋರೆಗೊಂಡಿತು ಎಮದು ಅಗರ್ ಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗಾ ಅರ್ಜುನ್ ತಿಳಿಸಿದರು.
 ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸದ್ವಿದ್ಯಾ ಶಾಲೆಯ ಕೆ.ಭರತ್ ಮತ್ತು ಅರವಿಂದ್ ಹರ್ಷಿತಾ ತಂಡ ಪ್ರಶಸ್ತಿ ಗಳಿಸಿದರು,  ಮೊದಲ ರನ್ನರ್ಸ್‍ಆಫ್ ಸ್ಥಾನವನ್ನು  ಸಿಎಫ್ ಟಿಆರ್‍ಐ ಶಾಲೆಯ ಸಿ.ಜೆ. ಸಾಮ್ರಾಟ್ ಮತ್ತು ಜಿತೇಂದ್ರ ತಂಡ, ಎರಡನೇ  ರನ್ನರ್ಸ್ ಸ್ಥಾನವನ್ನು ಮರಿಮಲ್ಲಪ್ಪ ಶಾಲೆಯ ಸುಸ್ಮಿತಾ ಮತ್ತು ವೈಷ್ಣವಿ  ಪಡೆದುಕೊಂಡರು. ಇದಲ್ಲದೇ ಇನ್ನೂ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದುಕೊಂಡರು.
 ಸಮಾರಂಭದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ಧ  ನಗರ ಪೊಲೀಸ್ ಆಯುಕ್ತ ಎಂ.ಎ.ಸಲೀಮ್ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
 ಕಾರ್ಯಕ್ರಮದಲ್ಲಿ ಎನ್.ಆರ್.ಗ್ರೂಪ್‍ನ ಆರ್. ಗುರು, ಪಾಲುದಾರರಾದ ಪವನ್ ರಂಗಾ, ಮತ್ತು ಅನಿರುದ್ದಾರಂಗಾ ಉಪಸ್ಥಿತರಿದ್ದರು.
ನಗರ ಪಾಲಿಕೆ ವಾರ್ಡ್ ನಂ 15 ಕ್ಕೆ ಉಪ ಚುನಾವಣೆ : ಇಂದು ನಾಲ್ಕು ಮಂದಿ ನಾಮಪತ್ರ ಸಲ್ಲಿಕೆ
 
ಮೈಸೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ರಾಜೀನಾಮೆಯಿಂದ ತೆರವಾಗಿರುವ ಮೈಸೂರು ಮಹಾನಗರ ಪಾಲಿಕೆ ವಾಡ್ ್ ನಂ 15 ರ ಉಪ ಚುನಾವಣೆಗೆ ಕಣ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಇಂದು  ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು,ಬಂಡಾಯಗಾರರು ಹಾಗೂ ಪಕ್ಷೇತರರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಸೀಮಾ ಪ್ರಸಾದ್ ಅವರು ಪಕ್ಷದ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್, ನಗರ ಘಟಕದ ಅಧ್ಯಕ್ಷ ಇ.ಮಾರುತಿರಾವ್ ಪವಾರ್ ಹಾಗೂ ಮುಖಂಡರೊಂದಿಗೆ ನಗರ ಪಾಲಿಕೆ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಎಂ.ಜೆ.ರೂಪಾ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾರುತಿರಾವ್ ಪವಾರ್, ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯವಿಲ್ಲ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಕಣಕ್ಕೆ ಇಳಿಸಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕೋಮಲಾ ರಮೇಶ್, ಪಕ್ಷದ ಶಾಸಕ ವಾಸು, ಎಂ.ಕೆ.ಸೋಮನಶೇಖರ್, ನಗರ ಘಟಕದ ಅಧ್ಯಕ್ಷ ದಾಸೇಗೌಡ , ನಗರ ಪಾಲಿಕೆ ಪಕ್ಷದ ಸದಸ್ಯರು ಮತ್ತಿತರರೊಂದಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೋಮಲಾ ರಮೇಶ್, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದು, ಅವರ ರಾಜೀನಾಮೆಯಿಂದಾಗಿ ತೆರವಾಗಿರುವ ಈ ಕ್ಷೇತ್ರದಲ್ಲಿ ಮತದಾರರ ಒಲವು ಕಾಂಗ್ರೆಸ್‍ಗೆ ಇನ್ನು ಇರುವ ಕಾರಣ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಬಂಡಾಯವೆದ್ದಿರುವ ಹರಣಿ ಮನೋಜ್ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ತಮ್ಮ ಪತಿ ಮನೋಜ್ ಬಿಜೆಪಿಯಲ್ಲಿ ಕಳೆದ 20 ವರ್ಷಗಳಿಂದಲೂ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರೂ, ಟಿಕೆಟ್ ನೀಡದೆ ವಂಚಿಸಲಾಗಿದೆ, ಇದರಿಂದಾಗಿ ತಾವು ವಾಡ್ ್ನ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಸಲ್ಲಿಸಿದ್ದು, ವಾಡ್ ್ನ ಜನತೆ ಚುನಾವಣೆಯಲ್ಲಿ ಕೈಹಿಡಿಯಲಿದ್ದಾರೆ ಎಂದು ಕಂಬನಿ ತುಂಬಿಕೊಂಡು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ನಿಂದ ಈಗಾಗಲೇ ಲಕ್ಷ್ಮಿ ಆರ್.ಗಣೇಶ್, ಪಕ್ಷೇತರ ನಳಿನಿ ತಮ್ಮಯ್ಯ ಕಣದಲ್ಲಿದ್ದಾರೆ.  ನಾಮಪತ್ರ ಪರಿಶೀಲನೆ ಮಂಗಳವಾರ ನಡೆಯಲಿದ್ದು, ವಾಪಾಸ್ಸಾತಿಗೆ ನ.27 ಕೊನೆ ದಿನವಾಗಿದೆ. ಡಿ.5 ರಂದು ಚುನಾವಣೆ ನಡೆಯಲಿದೆ.
   ಪೊಲೀಸ್ ಮುಂದಿರಿಸಿಕೊಂಡ ಸರ್ಕಾರ ದುರ್ಬಲ : ಪುಟ್ಟಣ್ಣಯ್ಯ
ಮಂಡ್ಯ,ನ.24-ಚಳವಳಿಯನ್ನು ಎದುರಿಸಲಾಗದೆ ಪೊಲೀಸ್ ಮುಂದಿರಿಸಿಕೊಂಡು ಆಡಳಿತ ಮಾಡುತ್ತಲಿರುವ ಕಾಂಗ್ರೆಸ್ ದುರ್ಬಲ ಸರ್ಕಾರ ನಡೆಸುತ್ತಿದೆ ಎಂದು ಪುಟ್ಟಣ್ಣಯ್ಯ ವ್ಯಂಗ್ಯವಾಡಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚಳವಳಿಕಾರರೊಂದಿಗೆ ಮಾತುಕತೆ ನಡೆಸಿ, ಮರ ಕಡಿಯದಂತೆ ವಿದ್ಯುತ್ ಮಾರ್ಗ ಮಾಡಲು ಸರ್ಕಾರ ಮುಂದಾಗಬೇಕು. ಚಳವಳಿಕಾರರನ್ನು ಎದುರಿಸಲಾಗದೆ. ಪೊಲೀಸ್ ಮುಂದಿಟ್ಟುಕೊಂಡು ದೇಶ ಆಳಲಾಗುವುದಿಲ್ಲ ಎಂದು ಎಚ್ಚರಿಸಿದರು.
ಅರಣ್ಯ ಕಾಯ್ದೆಯಲ್ಲಿ ಮರಕ್ಕೆ ಒಂದು ಲೈಟ್‍ಹಾಕಲು ಸಹ ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೇರುತ್ತಾರೆ. ಹೀಗಿರುವಾಗ ವಿದ್ಯುತ್ ಮಾರ್ಗಕ್ಕಾಗಿ ಕಾಡನ್ನು ನಾಶಮಾಡಲು ಹೊರಟಿರುವುದು ಮೂರ್ಕತನ ಎಂದರು.
ಪರಿಸರ ಕ್ಷಣೆಯ ಹಿತದೃಷ್ಠಿಯಿಂದ ಚಳವಳಿಕಾರರು, ತಜ್ಞರನ್ನು ಕರೆದು ಸಭೆನಡೆಸಬೇಕು. ಸರ್ಕಾರವು ಮುಂದಿನ ಜನಾಂಗಕ್ಕಾಗಿ ಪರಿಸರವನ್ನು ರಕ್ಷಿಸುವ ಹೊಣೆಹೊರಬೇಕು, ಕರ್ನಾಟಕವನ್ನು ಸುಂದರ ರಾಜ್ಯವನ್ನಾಗಿಸಬೇಕೆಂದು ಮನವಿ ಮಾಡಿದರು.
ಪರಿಸರ ಮಾರಣಹೋಮಕ್ಕೆ ಸರ್ಕಾರವೂ ಸಹ ಮುಂದಾಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಸರ್ವೆ ಕಾರ್ಯವನ್ನು ಮಾಡುತ್ತಲಿದ್ದು, ಇದನ್ನು ವಿರೋಧಿಸಿ ಇದೇ ಗುರುವಾರ ಬೆಳಿಗ್ಗೆ ಮಂಡ್ಯದಿಂದ 1000 ಮಂದಿ ಕೊಡಗಿಗೆ ಹೋಗಿ ಮುತ್ತಿಗೆ ಹಾಕುವುದಾಗಿ, ಇದಕ್ಕೆ ಮೈಸೂರು, ಚಿಕ್ಕಮಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ರೈತರೂ ಸಹ ಭಾಗವಹಿಸುವುದಾಗಿ ತಿಳಿಸಿದರು.
                 ಶಿವಕುಮಾರ್‍ಗೆ ತಾಂತ್ರಿಕ ಜ್ಞಾನವಿಲ್ಲ.
ಇಂದನ ಸಚಿವ ಡಿ.ಕೆ.ಶಿವಕುಮಾರ್‍ಗೆ ತಾಂತ್ರಿಕ ಜ್ಞಾನವಿಲ್ಲ, ಅವರಿಗೆ ಅವರ ಮಂತ್ರಿಗಿರಿಯ ಬಗ್ಗೆ ತಾಂತ್ರಿಕ ಜ್ಞಾನವಿಲ್ಲದೇ ಇರುವಾಗ ತಾಂತ್ರಿಕ ತಜ್ಞ ಸಲಹೆಗಾರರನ್ನಾದರೂ ಇರಿಸಿಕೊಂಡು ಚರ್ಚಿಸಬೇಕು ಎಂದು ಟೀಕಿಸಿದರು.
ಪರಿಸರ ಮತ್ತು ಪವರ್(ವಿದ್ಯುತ್) ಮಂತ್ರಿಯನ್ನು ಆಯ್ಕೆ ಮಾಡುವ ಮೊದಲು ಆವಿಷಯವಾಗಿ ಅವರು ಎಂ.ಎಲ್.ಸಿ ಆಗಬೇಕು. ಇಲ್ಲವಾದರೆ ಆ ವಿಚಾರವಾಗಿ ನೋಬಲ್ ಪ್ರಶಸ್ತಿ ಪಡೆದವರಾದರೆ ಉತ್ತಮ ಎಂದು ಹೇಳಿದರು.
ಮೇಕೆದಾಟು ಡ್ಯಾಂ ಕಟ್ಟುತ್ತಿರುವುದು ಬೆಂಗಳೂರಿಗೆ ನೀರು ಪೂರೈಸಲು ಎನ್ನುವ ವಿವಾಧ ಕುರಿತಂತ ಪ್ರಶ್ನೆಗೆ ಮೇಕೆ ದಾಟು ಡ್ಯಾಂನಿಂದ ಬಂಗಾಳ ಕೊಲ್ಲಿಗೆ ಅನಾವಶ್ಯಕವಾಗಿ ಹರಿದು ಹೋಗುತ್ತಿರುವ ನೀರನ್ನು ಸಂಗ್ರಹಿಸಲು ಹಾಗೂ ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ಮಾತ್ರ ಇದನ್ನು ಬಿಟ್ಟರೆ ಬೇರಾವ ಉದ್ದೇಶ ಇಲ್ಲ ಎಂದು ಉತ್ತರಿಸಿದರು.
ಗೋಷ್ಠಿಯಲ್ಲಿ ಇವರೊಂದಿಗೆ ರೈತ ಮುಖಂಡರುಗಳಾದ ಶಂಭೂನಹಳ್ಳಿ ಸುರೇಶ್,  ಸೀತಾರಾಮು, ಲಿಂಗಪ್ಪಾಜಿ, ರಾಮಕೃಷ್ಣಯ್ಯ, ನಂಜುಡಯ್ಯ ಇತರರಿದ್ದರು.

                             ಮೆಗಾಡೈರಿಗಾಗಿ ಹಣ ಕಡಿತ ನಿಲ್ಲಿಸಿರುವುದು ಸ್ವಾಗತಾರ್ಹ
ಹಾಲು ಉತ್ಪಾದಕರಿಂದ 1.50 ರೂ. ಕಡಿತಗೊಳಿಸುವುದನ್ನು ನಿಲ್ಲಿಸುವ ಸಂಗತಿ ಸ್ವಾಗತಾರ್ಹ. ಹಣ ಕಡಿತ ಮಾಡುವ ಮೊದಲು ಜನರಲ್ ಬಾಡಿ, ಜನಪ್ರತಿನಿಧಿಗಳ ಸಭೆ ಮಾಡಿ, ಮೆಗಾಡೈರಿಯ ಖರ್ಚುವೆಚ್ಚ, ಎನ್‍ಡಿಡಿಪಿಇ ಹಾಗೂ ರಾಜ್ಯ ಸರ್ಕಾರಗಳಿಂದ ಎಷ್ಟು ಸಹಾಯ ದೊರೆಯುತ್ತದೆ ಎಂಬ ವಿಧಾನವನ್ನು ಪಾಲಿಸಬೇಕಿತ್ತು ಎಂದು ಪುಟ್ಟಣ್ಣಯ್ಯ ಸಲಹೆ ನೀಡಿದರು.
ಜಿಲ್ಲೆಗೆ ಮೆಗಾಡೈರಿಯ ಅವಶ್ಯಕತೆ ಇದೆ. 6.5 ಲಕ್ಷದಿಂದ 6.75 ಲಕ್ಷದ ವರೆಗೆ ಹಾಲು ಉತ್ಪಾದನೆ ಯಾಗುತ್ತಿರು ನಮ್ಮಜಿಲ್ಲೆಯಲ್ಲಿ ಅದರ ಸಂಗ್ರಹ ಅತಿಮುಖ್ಯವಾಗುತ್ತದೆ. ಹೈನುಗಾರಿಕೆಗೆ ಕನಿಷ್ಠ ನಿಗಧಿ ಬೆಲೆ. ಆದ್ದರಿಂದ ಮೆಗಾಡೈರಿ ಮಾಡು ಮೊದಲು ಉತ್ಪಾದಕರಿಗೆ ಹೊರೆಯಾಗದಂತೆ ನಿರ್ಣಯ ಕೈಗೊಳ್ಳಬೇಕೆಂದರು ಎಂದು ಹೇಳಿದರು.
ಉಸ್ತುವಾರಿ ಮಂತ್ರಿಗಳು ಮಧ್ಯೆ ಪ್ರವೇಶಿಸಿ ಮೆಗಾಡೈರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ನಿಧಿ ಕ್ರೂಢೀಕರಿಸುವತ್ತ ಗಮನ ಹರಿಸಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.


               ಮಸೂದೆ ಅಂಗೀಕಾರವಾದಲ್ಲಿ ನೌಕರರ ಮುಷ್ಕರ
ಮಂಡ್ಯ,ನ.24- ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ ವಿಮಾ ಕಾನೂನುಗಳ(ತಿದ್ದುಪಡಿ) ಮಸೂದೆ 2008 ಅಂಗೀಕಾರವಾದಲ್ಲಿ ದೇಶಾದ್ಯಂತ ವಿಮಾ ನೌಕರರು ಮುಷ್ಕರ ಮಾಡುವುದಾಗಿ ಮೈಸೂರು ವಿಮಾ ನಿಗಮ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಸ್.ಕೆ.ರಾಮು ತಿಳಿಸಿದರು.
 ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಈ ಮಸೂದೆಯನ್ನು ವಿರೋಧಿಸಿ ಚಳುವಳಿ ಮಾಡಿದ್ದು, ತಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿಯೇ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವುದು ವಿಪರ್ಯಾಸವಾಗಿದೆ ಎಂದರು.
ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ.26 ರಿಂದ ಹೆಚ್ಚಿಸುವುದು, ಜೀವ ವಿಮಾ ಪ್ರತಿನಿಧಿಗಳ ರಿನ್ಯೂಯಲ್ ಕಮಿಷನ್ ರದ್ದತಿ, ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಸಂಸ್ಥೆಗಳ ಬಂಡವಾಳ ಹಿಂತೆಗೆತ ಮಾಡುವುದು ಹಾಗೂ ಇನ್ನಿತರ ಅಪಾಯಕಾರಿ ಅಂಶಗಳನ್ನು ಮಸೂದೆ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಈ ಮಸೂದೆಯನ್ನು ಜಾರಿಗೆ ತರಬಾರದೆಂದು ವಿಮಾನೌಕರರು, ಪಾಲಿಸಿದಾರರು, ರಾಷ್ಟ್ರಪ್ರೇಮಿಗಳು ಆಗ್ರಹಿಸುತ್ತಿದ್ದು, ತೀವ್ರ ವಿರೋಧದ ಮೇಲೆ ಮಸೂದೆ ಅಂಗೀಕಾರವಾದಲ್ಲಿ, ವಿಮಾ ನೌಕರರು ಮರುದಿನವೇ ಮುಷ್ಕರ ಹೂಡುತ್ತಿದ್ದು, ಈ ನೀತಿಯ ವಿರುದ್ಧ ತೀವ್ರ ತರನಾದ ಆಂದೋಲನ ಮಾಡಲಾಗುವುದೆಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಮಂಡ್ಯ ಶಾಖಾ ಘಟಕ ಅಧ್ಯಕ್ಷ ಫಿಲಿಫ್ ಜೇಮ್ಸ್, ಕಾರ್ಯದರ್ಶಿ ರಾಜು, ಜಂಟಿಕಾರ್ಯದರ್ಶಿ ಶ್ರೀನಿವಾಸ್ ಇತರರಿದ್ದರು.
ಎಸ್.ಜೆ. ಸಿ.ಇ ಯಲ್ಲಿ 3 ದಿನ ಅಂತರಾಷ್ಟ್ರೀಯ ಸಮ್ಮೇಳನ
ಮೈಸೂರು:  ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ   ನ. 27 ರಿಂದ ನ. 29ರ  ವರೆಗೆ   ಮೂರು ದಿನಗಳ ಕಾಲ ತಾಂತ್ರಿಕ ವಿಷಯಗಳಿಗೆ ಕುರಿತಂತೆ ಮಹಾ ಸಮ್ಮೆಳನವನ್ನು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಾನ್ಸುಪಾಲಾದ ಡಾ. ಶಕೀಬ್ ಉರ್ ರೆಹಮಾನ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಸಮ್ಮೇಳನವು  ಎಸ್.ಜೆ.ಸಿ.ಇ.ನ  ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ವತಿಯಿಂದ  ಕಂಟೆಂಪರರಿ ಕಂಪ್ಯೂಟಿಂಗ್  ಅಂಡ್ ಇನ್ ಫಾರ್‍ಮೆಟಿಕ್ಸ್  ಎಂಬ ವಿಷಯದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದ್ದು,   ಇದಕ್ಕೆ  ಬೆಂಗಳೂರಿನ  ಐಇಇಇ ಸಂಸ್ಥೆಯು ತಾಂತ್ರಿಕ ಸಮ್ಮೇಳನಕ್ಕೆ   ಸಹ ಪ್ರಾಯೋಜಕತ್ವ  ನೀಡುತ್ತಿದೆ ಎಂದರು.
 ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಕ್ಷೇತ್ರಗಳು  ಹಾಗೂ ಇತರೆ ಸಂಬಂಧಿತ ಕ್ಷೇತಗಳಿಂದ  ಸಂಶೋಧಕರು, ಶಿಕ್ಷಣ ತಜ್ಷರುಗಳನ್ನು ಒಂದುಗೂಡಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ. ಈ ಸಮಾವೇಶದಲ್ಲಿ ದೇಶ-ವಿದೇಶಗಳಿಂದ ಕಂಪ್ಯೂಟಿಂಗ್ ಮತ್ತು ಇನ್ ಫಾರ್‍ಮೆಟಿಕ್ಸ್  ಕ್ಷೇತ್ರದ 10ಕ್ಕಿಂತಲೂ ಹೆಚ್ಚು ಸುಪ್ರಸಿದ್ಧ ಸಂಶೋಧಕರುಗಳು ಉಪನ್ಯಾಸ ನೀಡಲಿದ್ದಾರೆ. ಸುಮಾರು 9 ದೇಶಗಳಿಂದ 453 ತಾಂತ್ರಿಕ ಪ್ರಬಂಧಗಳು ಬಂದಿದ್ದು, ಇದರಲ್ಲಿ 250 ಪ್ರಬಂಧಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದರು.
ಈ ಸಮಾವೇಶದೊಂದಿಗೆ ಪ್ರಾಡೆಕ್ಟ್ ಡಿಸೈನ್, ಸ್ಪ್ರಿಂಟ್ ವಕ್ ್ ಶಾಪ್ ಎಂಬ ಎರಡು ಅಂತರಾಷ್ಟ್ರೀಯ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಈ ಸಮಾವೇಶದಲ್ಲಿ ಹಲವಾರು ಗಣ್ಯರು, ತಾಂತ್ರಿಕ ತಜ್ಞರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಎಸ್ ಜೆಸಿಯ ಅಧಿಕಾರಿಗಳಾದ ಮಹಾನಂದ, ಡಾ.ಎಸ್.ಕೆ.ನಿರಂಜನ್, ಪುಷ್ಪಾಲತಾ ಮತ್ತಿತರರು ಉಪಸ್ಥಿತರಿದ್ದರು.

ಉಸ್ತುವಾರಿ ಸಚಿವರಿಂದ ಪ್ರಗತಿ ಪರಿಶೀಲನೆ
ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು, ಇಲಾಖಾವಾರು ಕಾಮಗಾರಿಗಳ ಕುರಿತಂತೆ ಸಮಾಲೋಚನೆ ನಡೆಸಿ, ಮುಖ್ಯಮಂತ್ರಿಗಳ ಅನುದಾನ 100 ಕೋಟಿ ರೂ ನಡಿ ನಡೆಯುತ್ತಿರುವ ಕಾಮಗಾರಿಗಳ ಕಡತವನ್ನು ಪರಿಶೀಲಿಸಿ, ಕೆಲವು ಕಾಮಗಾರಿಗಳು ವಿಳಂಭವಾಗಿರುವುದಕ್ಕೆ ಕಾರಣವನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ತಿಳಿದುಕೊಂಡು, ಇನ್ನು ಮೂರು ತಿಂಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಮತ್ತಿತರರು ಉಪಸ್ಥಿತರಿದ್ದರು.
    ನಾಡು - ನುಡಿ, ಸಂಸ್ಕೃತಿ ರಕ್ಷಣೆಗೆ ಸಂಘಟಿತರಾಗಬೇಕು : ಸಚಿವ ಬೇಗ್

ಗೋವಾ (ಪಣಜಿ), ನ. 24 - (ಕರ್ನಾಟಕ ವಾರ್ತೆ) :-  ಕನ್ನಡ ನಾಡು, ಭಾಷೆ, ಸಂಸ್ಕೃತಿ ರಕ್ಷಣೆಗೆ ಗೋವಾದಲ್ಲಿರುವ ಎಲ್ಲಾ ಕನ್ನಡಿಗರು ಸಂಘಟಿತರಾಗಬೇಕು ಎಂದು ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್ ಇಂದು ಇಲ್ಲಿ ಕರೆ ನೀಡಿದರು.

ಅವರು, ಗೋವಾದ ಪಣಜಿಯಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಾ ಕನ್ನಡ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೋವಾದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಭಾಷೆ, ನಾಡಿನ ಹೆಸರಿನಲ್ಲಿ ಇಲ್ಲಿರುವ ಎಲ್ಲಾ ಕನ್ನಡಿಗರು ಒಂದೇ ವೇದಿಕೆಗೆ ಬರಬೇಕಿದೆ.  ಇಲ್ಲಿನ ಕನ್ನಡಿಗರು ಸಂಘಟಿತರಾದರೆ ಇಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ವಿದ್ಯಾಭ್ಯಾಸ, ಆರೋಗ್ಯ ಸೇವೆಗಳಿಗೆ ನೆರವು ಒದಗಿಸಲು ಸಾಧ್ಯ. ಎಲ್ಲಾ ಕನ್ನಡಿಗರಿಗೆ ವೇದಿಕೆಯಾಗಬಲ್ಲ ಕನ್ನಡ ಭವನ ಇಲ್ಲಿ ನಿರ್ಮಾಣವಾಗುವ ಅಗತ್ಯವಿದೆ.  ಇಲ್ಲಿನ ಕನ್ನಡಿಗರು ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾದರೆ ಕರ್ನಾಟಕ ಸರ್ಕಾರ ಎಲ್ಲಾ ನೆರವು ಒದಗಿಸಲಿದೆ ಎಂದರು.

ಹೊರನಾಡಿನಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ.  ಹೊರ ನಾಡಿನ ಕನ್ನಡಿಗರಿಗೆ ಸರ್ಕಾರ ಎಲ್ಲಾ ನೆರವು ಒದಗಿಸಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋವಾದ ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕ ಡಾ. ಸುರೇಶ್ ಶಾನ್‌ಭಾಗ್ ಮಾಡನಾಡಿ ನಾವು ಯಾವುದೇ ರಾಜ್ಯದಲ್ಲಿ ನೆಲೆಸಿದ್ದರೂ ತಾಯಿ ಕಲಿಸಿದ ಭಾಷೆಯೇ ನಮ್ಮ ಮಾತೃಭಾಷೆ.  ನಮ್ಮ ಯೋಚನಾ ಲಹರಿ ಸದಾ ಮಾತೃಭಾಷೆಯಲ್ಲೇ ಇರುತ್ರದೆ.  ಹುಟ್ಟಿದ ನೆಲದಿಂದ ಅನಿವಾರ್ಯವಾಗಿ ಬೇರೆಡೆಗೆ ವಲಸೆ ಬಂದಿರುವ ನಾವು ನಮ್ಮ ಸಂಸ್ಕೃತಿ, ನೆಲದ ಬೆಳವಣಿಗೆಗೆ ಒಗ್ಗಟ್ಟಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಹಾಬಲ ಭಟ್ ಮಾತನಾಡಿ, ಗೋವಾದಲ್ಲಿ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಜನರಿದ್ದಾರೆ.  ಕನ್ನಡದ ವೈವಿದ್ಯತೆಯನ್ನು ಇಲ್ಲಿ ಕಾಣಬಹುದು.  ಪ್ರಾದೇಶಿಕ ಹಾಗೂ ವರ್ಗ ಭಿನ್ನತೆಯನ್ನು ಮೀರಿದರೆ ಗೋವಾದಲ್ಲಿ ಕನ್ನಡಿಗರು ತಮ್ಮ ಧ್ವನಿಯನ್ನು ದಾಖಲಿಸಲು ಸಾಧ್ಯವಿದೆ ಎಂದು ಹೇಳಿದರು.

ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಉಪನಿರ್ದೇಶಕರಾದ ಬಸವರಾಜ ಕಂಬಿ, ಎಸ್.ವಿ.ಲಕ್ಷ್ಮೀನಾರಾಯಣ, ಗೋವಾ ಕನ್ನಡ ಕನ್ನಡ ಸಮಾಜದ ಅಧ್ಯಕ್ಷ  ಮಹಾಬಲ್ ಭಟ್, ಉಪಾಧಕ್ಷ ಮಲ್ಲಿಕಾರ್ಜುನ ಬಾದಾನಿ, ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
                                               ಕನ್ನಡ ಕಲರವ

ಕನ್ನಡನಾಡಿನಿಂದ ಬಹುದೂರದಲ್ಲಿದ್ದರೂ, ಭಾಷೆಯು ಅಲ್ಲಿ ಎಲ್ಲರನ್ನು ಒಂದುಗೂಡಿಸಿತ್ತು.  ದೂರದ ಗೋವಾದ ರಾಜಧಾನಿ ಪಣಜಿಯಲ್ಲಿ ಕನ್ನಡಿಗರನ್ನು ಒಂದುಕಡೆ ಸೇರಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಂಗವಹಿಸಿ ಭಾಷೆಯ ಅಭಿಮಾನ ಮೆರೆದರು.  ರಾಮಚಂದ್ರ ಹಡಪದ ಮತ್ತು ತಂಡದವರ ಗೀತೆಗಾಯನ ಕೇಳುಗರನ್ನು ಭಾವಪರವಶವಾಗಿಸಿತ್ತು.  ಕಾಣದಾ ಕಡಲಿಗೆ ಹಂಬಲಿಸಿದೆ ಮನ . . . . . . , ಶ್ರಾವಣ ಬಂತು ನಾಡಿಗೆ . . . . . . .,  ಕರ್ನಾಟಕ ಬರಿ ನಾಡಲ್ಲ . . . . . ., ಘಮ ಘಮ ಘಮಿಸ್ತಾವ ಮಲ್ಲಿಗೆ . . . . . . ಷರೀಫರ ಸೋರುತಿಹುದು ಮನೆಯ ಮಾಳಿಗೆ . . . . . . . ಹಾಡುಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ವಿಧುಷಿ ಸುಪರ್ಣ ವೆಂಕಟೇಶ್ ಮತ್ತು ತಂಡದವರು ಅಷ್ಟರತ್ನಗಳು ಹಾಗೂ ಅಂತಃಪುರ ಗೀತೆಗಳಿಗೆ ನೃತ್ಯ ರೂಪಕ ಮನಮೋಹಕವಾಗಿತ್ತು.



 ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್ ಅವರು, ಗೋವಾದ ಪಣಜಿಯಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಾ ಕನ್ನಡ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.  ಗೋವಾದ ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕ ಡಾ. ಸುರೇಶ್ ಶಾನ್‌ಭಾಗ್, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಉಪನಿರ್ದೇಶಕರಾದ ಬಸವರಾಜ ಕಂಬಿ, ಎಸ್.ವಿ.ಲಕ್ಷ್ಮೀನಾರಾಯಣ, ಗೋವಾ ಕನ್ನಡ ಕನ್ನಡ ಸಮಾಜದ ಅಧ್ಯಕ್ಷ  ಮಹಾಬಲ್ ಭಟ್, ಉಪಾಧಕ್ಷ ಮಲ್ಲಿಕಾರ್ಜುನ ಬಾದಾನಿ, ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



2. ಗೋವಾದ ಪಣಜಿಯಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಾ ಕನ್ನಡ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಮಚಂದ್ರ ಜಿ. ಹಡಪದ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.









No comments:

Post a Comment