Thursday, 27 November 2014

ಮೈಸೂರು ಶಾಸಕ ಎಂ.ಕೆ.ಸೋಮಶೇಖರ್ ರಸ್ತೆ ಅಭಿವೃಧ್ದಿಕಾಮಗಾರಿಗೆ ಚಾಲನೆ ನೀಡಿದರು.

ಮೈಸೂರು ಶಾಸಕ ಎಂ.ಕೆ.ಸೋಮಶೇಖರ್ ರಸ್ತೆ ಅಭಿವೃಧ್ದಿಕಾಮಗಾರಿಗೆ ಚಾಲನೆ ನೀಡಿದರು.

ಕೆ.ಆರ್.ಪೇಟೆ ಸಂತೆಬಾಚಹಳ್ಳಿಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಧನ ವಿತರಣೆ.


ಮಂಡ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮ.



ಸಿದ್ದಲಿಂಗಪುರದಲ್ಲಿ ಷಷ್ಟಿಜಾತ್ರೆ ; ಭಕ್ತರ ದಂಡು
ವಾಹನ ಸಂಚಾರ ಬದಲು
ಮೈಸೂರು, ನ. 27- ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ
ಸಿದ್ದಲಿಂಪುರದಲ್ಲಿ ಇಂದು ಸುಬ್ರಹ್ಮಣ್ಯ ಷಷ್ಟಿ ಪ್ರಯುಕ್ತ ಜಾತ್ರೆ  ನಡೆಯಿತು.
   ಇಂದು ಬೆಳಗಿನ ಜಾವ ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿದ್ದ
ಬೆಳ್ಳಿ ನಾಗರ ಕಿರೀಟವನ್ನು  ದೇವಸ್ಥಾನದಲ್ಲಿರುವ  ಸುಬ್ರಹ್ಮಣ್ಯಸ್ವಾಮಿಯ
ಮೂರ್ತಿಗೆ ಧಾರಣೆ ಮಾಡಿ, ವಿವಿಧ ಅಭಿಷೇಕ ಸೇರಿದಂತೆ ವಿಶೇಷ ಪೂಜೆ
ನೆರವೇರಿಸಲಾಯಿತು, ಈ ಸಂದರ್ಭದಲ್ಲಿ ಮೈಸೂರು ಮತ್ತು ಮಮಡ್ಯ
ಜಿಲ್ಲಾಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು,
ಅಧಿಕಾರಿಗಳು ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಿದರು.
 ಸಾವಿರಾರು ಭಕ್ತರು ಅಲ್ಲಿ ನೆರೆದಿದ್ದು ಅಲ್ಲಿನ ಬೃಹತ್ ಹುತ್ತಕ್ಕೆ  ತನಿ
ಎರೆಯುತ್ತಿದ್ದರಿಂದ ಜನಜಂಗುಳಿ ಹೆಚ್ಚಾಗಿತ್ತು, ರಸ್ತೆಯ ಇಕ್ಕೆಲಗಳಲ್ಲಿ ಪೂಜಾ
ಸಮಾಗ್ರಿ, ಹೂವು ಹಣ್ಣು, ಕಡಲೆಪುರಿ, ಸಿಹಿತಿಂಡಿ ಅಂಗಡಿಗಳು, ಮಕ್ಕಳ ಆಟಾಟಿಕೆ
ವಸ್ತುಗಳ  ಮಾರಾಟದ ಮಳಿಗೆಗಳು ಸೇರಿದಂತೆ ನೂರಾರು ಅಂಗಡಿಗಳು  ತಲೆ
ಎತ್ತಿದ್ದವು. ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳೂ ಒಡಾಡಲಾಗದಷ್ಟು ಜನ
ಸಂದಣಿ  ನೆರೆದಿತ್ತು.
  ದೆವಸ್ಥಾನದಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸಲು ಸಾವಿರಾರು ಭಕ್ತರು
ಬೆಳಿಗ್ಗೆಯಿಂದಲೇ ಸರದಿ ಸಲಿನಲ್ಲಿ ಕಾದು ನಿಂತ್ತಿದ್ದರು, ಅಲ್ಲಿರುವ ಬೃಹತ್ತಾದ
ಹುತ್ತಕ್ಕೆ  ಮಹಿಳೆಯರು ಹಾಲು, ಎಳನೀರು, ಮೊಟ್ಟೆ, ಬಾಳೆಹಣ್ಣು ಹೂವ
ಇತ್ಯಾಧಿಗಳನ್ನು ಹಾಕಿ, ಹುತ್ತದ ಮೇಲೆ  ಹರಿಸಿನ, ಕುಂಕುಮ ಗಳನ್ನು
ಚೆಲ್ಲಿದ್ದರಿಂದ ಹುತ್ತವೆಲ್ಲಾ ವರ್ಣಮಯವಾಗಿ ಹರಿಸಿನ ಕುಂಕುಮ ಮತ್ತು
ಗಂಧದ ಕಡ್ಡಿಯ ಹೊಗೆಯ ವಾಸನೆಯ ಘಾಟಿನಿಂದ ಕಂಗೊಳಿಸುತ್ತಿತ್ತು.
 ಕೆಲ ಹಾವಾಡಿಗರು  ಹಲ್ಲುಕಿತ್ತ ನಾಗರ  ಹಾವುಗಳನ್ನು ತಂದು ಹುತ್ತದ
ಮೇಲಿರಿಸಿ ಜನರನ್ನು ಮರಳುಮಾಡಿ ಹಣ ಸಂಪಾದಿಸುತ್ತಿದ್ದುದು ವಿಶೇóಷವಾಗಿತ್ತು,
 ದೇವಸ್ಥಾನದಲ್ಲಿ ಪೊಲೀಸರ ಬಂದೋಬಸ್ತಿನಲ್ಲಿ ಭಕ್ತರು ದೇವರಿಗೆ ಪೂಜೆ
ಸಲ್ಲಿಸಲು ಅನುವು ಮಾಡಿಕೊಡಲಾಗಿತ್ತು.
 ಇಲ್ಲಿನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು  ಮುಜರಾಯಿ ಇಲಾಖೆಗೆ
ಸೇರಿರುವುದರಿಂದ ಮೈಸೂರು ಜಿಲ್ಲಾಡಳಿತದ ವತಿಯಿಂದ  ಪೂಜೆ ಸಕಲ ಏರ್ಪಾಡು
ಮಾಡಲಾಗಿತ್ತು.
ದೇವಸ್ಥಾನದ ಮುಖ್ಯ ಅರ್ಚಕರು  ಬೆಳಿಗ್ಗೆ ಪ್ರಾತ: ಕಾಲ ದೇವರ ಮೂರ್ತಿಗೆ
ವಿವಿಧ ದ್ರವಗಳಿಂದ ಅಭಿಶೇಕವ ಮಾಡಿ, ಹಲವಾರು ಪುಷ್ಪಗಳು, ತುಳಸಿ,
ಬಿಲ್ವಪತ್ರೆಗಳಿಂದ  ಅರ್ಚನೆ ಮಾಡಿ, ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ
ಸಲ್ಲಿಸಲಾಯಿತು. ಆನಂತರ ಸಾರ್ವಜನಿಕರ ದರ್ಶನಕ್ಕೆ  ಎಡೆಮಾಡಿಕೊಡಲಾಯಿತು.
  ಒಟ್ಟಿನಲ್ಲಿ ಇಂದು  ಸಿದ್ದಲಿಂಗಪುರದ ಹೆದ್ದಾರಿ ರಸ್ತೆ ಕಿಕ್ಕಿರಿದ  ಜನಸಂದಣಿಯಿಂದ
ಕೂಡಿದ್ದು, ಷಷ್ಟಿಜಾತ್ರೆ ಭಕ್ತರ ಸಮೂಹದಿಂದಾಗಿ ಯಶಸ್ವಿಯಾಗಿ ಜರುಗಿತು.
   ವಾಹನ ಸಂಚಾರ ಮಾರ್ಗ ಬದಲಾವಣೆ
ಸಿದ್ದಲಿಂಗಪುರದಲ್ಲಿ ಇಂದು ಷಷ್ಟಿ ಜಾತ್ರೆ ಇದ್ದುದರಿಂದ  ಮೈಸೂರು ಕಡೆಯಿಂದ
ಬೆಂಗಳೂರು ಮಾರ್ಗವಾಗಿ ತೆರಳು ವಾಹನಗಳ ಸಮಚಾರ ಮಾರ್ಗವನ್ನು
ಬದಲಾಯಿಸಲಾಗಿತ್ತು.
  ಎಲ್ಲಾ ವಾಹನಗಳನ್ನು ಮೈಸೂರು-ಬೆಂಗಳೂರು ರಸ್ತೆಯ ಟೋಲ್‍ಗೇಟ್‍ನಿಂದ
ವರ್ತುಲ ರಸ್ತೆಯಿಂದ ಕೆ.ಆರ್.ಎಸ್. ರಸ್ತೆಯ ಮಾರ್ಗ, ಅಲ್ಲಿಂದ ಪಂಪ್‍ಹೌಸ್
ಮಾರ್ಗದಲ್ಲಿ ತಿರುಗಿ ರಂಗನ ತಿಟ್ಟು, ಪಾಲಳ್ಳಿ ಮಾರ್ಗವಾಗಿ ಶ್ರೀರಂಗಪಟ್ಟಣ ರಸ್ತೆ
ತಲುಪಿ ಸಂಚರಿಸುವಂತೆ ವ್ಯವಸ್ತೆ ಮಾಡಲಾಗಿತ್ತು.
ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ.

ಮೈಸೂರು: ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಅನಿಷ್ಟ ಪದ್ದತಿಗಳಲ್ಲಿ ಒಂದಾದ ಮಡೆ ಮಡೆ ಸ್ನಾನ ವಿರೋಧಿಸಿ ನಿಡುಮಾಮಿಡಿ ಮಠದ ವೀರಭದ್ರ ಚೇನ್ನಮಲ್ಲ ಸ್ವಾಮಿಜಿ ನೇತೃತ್ವದಲ್ಲಿ ಇತ್ತಿಚೇಗೆ ಬೆಂಗಳೂರಿನಲ್ಲಿ ಪ್ರಗತಿಪರ ಮಠಾಧಿಶರುಗಳು  ಪ್ರತಿಭಟನೆ ನಡೆಸಿದರು.
 ಈ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಜಿ ಪ್ರಸ್ಥಾಪಿಸಿ ಲಿಂಗಾಯಿಯಿತ, ಹಿಂದುಳಿದ, ದಲಿತ ವರ್ಗದ ಸ್ವಾಮಿಜಿಗಳೇಲ್ಲಾ ಡೋಂಗಿಸ್ವಾಮಿಜಿಗಳು ಕಪಟ ವೇಶಧಾರಿಗಳು ಇವರಿಗೆ ಧಾರ್ಮಿಕತೆಯ
ಆಚಾರ ವಿಚಾರಗಳು ಗೊತ್ತಿಲ್ಲ ಎಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿದನ್ನು ವಿರೋಧಿಸಿ ಪ್ರಗತಿಪರ ಮಠಾಧಿಶರ ವೇದಿಕೆ,ಕರ್ನಾಟಕ ದಲಿತ ವೇದಿಕೆ,ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
              ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ.

ಮೈಸೂರು: ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಅನಿಷ್ಟ ಪದ್ದತಿಗಳಲ್ಲಿ ಒಂದಾದ ಮಡೆ ಮಡೆ ಸ್ನಾನ ವಿರೋಧಿಸಿ ನಿಡುಮಾಮಿಡಿ ಮಠದ ವೀರಭದ್ರ ಚೇನ್ನಮಲ್ಲ ಸ್ವಾಮಿಜಿ ನೇತೃತ್ವದಲ್ಲಿ ಇತ್ತಿಚೇಗೆ ಬೆಂಗಳೂರಿನಲ್ಲಿ ಪ್ರಗತಿಪರ ಮಠಾಧಿಶರುಗಳು  ಪ್ರತಿಭಟನೆ ನಡೆಸಿದರು.

 ಈ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಜಿ ಪ್ರಸ್ಥಾಪಿಸಿ ಲಿಂಗಾಯಿಯಿತ, ಹಿಂದುಳಿದ, ದಲಿತ ವರ್ಗದ ಸ್ವಾಮಿಜಿಗಳೇಲ್ಲಾ ಡೋಂಗಿಸ್ವಾಮಿಜಿಗಳು ಕಪಟ ವೇಶಧಾರಿಗಳು ಇವರಿಗೆ ಧಾರ್ಮಿಕತೆಯ

ಆಚಾರ ವಿಚಾರಗಳು ಗೊತ್ತಿಲ್ಲ ಎಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿದನ್ನು ವಿರೋಧಿಸಿ ಪ್ರಗತಿಪರ ಮಠಾಧಿಶರ ವೇದಿಕೆ,ಕರ್ನಾಟಕ ದಲಿತ ವೇದಿಕೆ,ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಗಾಂಧಿನಗರ ಹುರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮಿಜಿ, ನೇತೃತ್ವದಲ್ಲಿ, ಹೋರಾಟಗಾರರಾದ ದ್ಯಾವಪ್ಪ ನಾಯಕ, ಎಸ್.ಡಿ.¥, ಐ, ಅಧ್ಯಕ್ಷ ಅಬ್ದಲ್ ಮಜೀದ್, ದಲಿತ ಮುಖಂಡ ಹರಿಹರ ಆನಂದ ಸ್ವಾಮಿ ಸೇರಿದಂತೆ ಇನ್ನು ಹಲವಾರು ಮಂದಿ ಭಾಗವಹಿಸಿದು ಪೇಜಾವರ ಶ್ರೀಗಳ ವಿರುದ್ದ ಧಿಕ್ಕಾರ ಘೋಷನೆ ಕೂಗಿದರು.

ರಸ್ತೆ ಅಭಿವೃದ್ದಿಗಾಗಿ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ನಗರದ ಎನ್.ಆರ್.ಕ್ಷೆತ್ರದ ವ್ಯಾಪ್ತಿಗೊಳಪಡುವ ಅಜ್ಜಿಜ್ ಸೇಠ್ ಮುಖ್ಯರಸ್ತೆಯನ್ನು ಮುಖ್ಯಮಂತ್ರಿಗಳ ನೂರು ಕೋಟಿ ಅನುದಾನದಲ್ಲಿ ಅ¨üವೃದ್ದಿಪಡಿಸುವಂತೆ ಸರ್ವಾಜನಾಂಗ ಹಿತರಕ್ಷಣಾ ವೇದಿಕೆ ವತಿಯಿಂದ ಅಧ್ಯಕ್ಷ ವೇಣುಗೋಪಾಲ್ ನೇತೃತ್ವದಲ್ಲಿ ನಜರ್‍ಬಾದ್‍ನ ತಾಲ್ಲೂಕು ಕಚೇg ಮುಂಭಾಗ ಪ್ರತಿಭಟನೆ ನಡೆಸಿದರು

ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೋಡಿದರು
              ಹೆಚ್.ಡಿ.ಕೋಟೆಯ 49 ಗ್ರಾಮ ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶ: ಆರ್.ಕೆ.ಸಿಂಗ್
ಮೈಸೂರು, ನವೆಂಬರ್ 27 ಕಸ್ತೂರಿ ರಂಗನ್ ವರದಿಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ 49 ಗ್ರಾಮಗಳನ್ನು ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶವೆಂದು ಸೇರ್ಪಡೆಗೊಳಿಸಲಾಗಿದೆ ಎಂದು ರಾಜ್ಯ ಜೀವ ವೈವಿದ್ಯದ ಬೋರ್ಡ್‍ನ ಕಾರ್ಯದರ್ಶಿ ಆರ್.ಕೆ.ಸಿಂಗ್ ಹೇಳಿದರು.
 ಜಿಲ್ಲಾಧಿಕಾರಿಯವ ಕಚೇರಿ ಸಭಾಂಗಣದಲ್ಲಿ ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶಕ್ಕೆ ಸಂಬಂಧ ಇಂದು ಕರೆಯಲಾದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
 ಹೆಚ್.ಡಿ.ಕೋಟೆ ತಾಲೂಕಿನ 49 ಗ್ರಾಮಗಳನ್ನು ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶವೆಂದು ಸೇರ್ಪಡೆಗೊಳಿಸಲಾದ ಪೈಕಿ 45 ಗ್ರಾಮಗಳನ್ನು ಈಗಾಗಲೇ ಬಂಡೀಪುರ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶದ ಬಫರ್ ವಲಯ  ಎಂದು ಘೋಷಣೆ ಮಾಡಲಾಗಿರುತ್ತದೆ. ಆದ ಕಾರಣ ಈ ಪ್ರದೇಶಗಳಿಗೆ ಸಾರ್ವಜನಿಕ ಅಭಿಪ್ರಾಯ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದ ಅವರು ಉಳಿದ ನಾಲ್ಕು ಗ್ರಾಮಗಳಾದ  ಹೊನ್ನೂರುಕುಪ್ಪೆ, ತೆನೆಕಲ್ಲು, ಚಿಕ್ಕಕುಂದೂರು ಮತ್ತು ಅಂಕುಪುರ ಗ್ರಾಮಗಳು ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಿಂದ ಹೊರಗಡೆ ಬರುವುದರಿಂದ ಕ್ಷೇತ್ರ ಪರಿಶೀಲನೆ ಹಾಗೂ ಸಾರ್ವಜನಿಕ ಅಭಿಪ್ರಾಯ ಪಡೆಯುವ ಅವಶ್ಯಕತೆ ಇತ್ತು ಎಂದು ಹೇಳಿದರು.
 ನಾಲ್ಕು ಗ್ರಾಮಗಳಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ಸಾರ್ವಜನಿಕ ಅಭಿಪ್ರಾಯ ಪಡೆಯುವ ಸಲುವಾಗಿ  ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಲೆಕ್ಕಿಗರು, ಕೃಷಿ ಇಲಾಖೆ ಅಧಿಕಾರಿ ಹಾಗೂ ಅರಣ್ಯ ರಕ್ಷಕರುಗಳನ್ನು ಒಳಗೊಂಡಂತೆ ಗ್ರಾಮ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಗಳು ಸಾರ್ವಜನಿಕ ಅಭಿಪ್ರಾಯ ಪಡೆಯಲು ಗ್ರಾಮಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸಾರ್ವಜನಿಕರು ಸ್ವತಂತ್ರವಾಗಿ ಅವರ ಅಭಿಪ್ರಾಯವನ್ನು ಸಮಿತಿ ಸದಸ್ಯರಿಗೆ ಸಲ್ಲಿಸಲು ನವೆಂಬರ್ 27 ಕಡೆ ದಿನವಾಗಿತ್ತು. ಆದರೆ ಯಾವುದೇ ದೂರುಗಳು ಬಂದಿರುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಸಿ.ಶಿಖಾ ಮಾತನಾಡಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಒಂದು ವಿಶೇಷ ಶಾಖೆಯನ್ನು ಈ ಸಂಬಂಧ ತೆರಯಲಾಗಿದ್ದು, ಸಾರ್ವಜನಿಕರಿಗೆ ನವೆಂಬರ್ 27 ಮಧ್ಯಾಹ್ನ 3 ಗಂಟೆಯವರೆಗೆ ಕಾಲವಕಾಶ ನೀಡಲಾಗಿತ್ತು. ಆದರೆ ಇಲ್ಲಿವೂ ಸಹ 4 ಗ್ರಾಮಗಳನ್ನು ಸೂಕ್ಷ್ಮ ಜೀವ-ವೈವಿಧ್ಯತಾ ಪ್ರದೇಶವೆಂದು ಸೇರ್ಪಡೆಗೊಳಿಸಬಾರದೆಂದು ಯಾರೂ ದೂರು ನೀಡಿರುವುದಿಲ್ಲ ಎಂದರು.
ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಕರಿಕಳ್ಳಣ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಹೇಶ್ ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.  
ನ.29 ರಂದು ಭಕ್ತ ಕನಕದಾಸ ಜಯಂತ್ಯುತ್ಸವ
ಮಂಡ್ಯ,ನ.27- ಕರ್ನಾಟಕ ರಾಜ್ಯ ಅಹಿಂದ ಯುವ ಸಂಘಟನೆ ಹಾಗೂ ಸಂಸ್ಕøತಿ ಸಂಘದ ವತಿಯಿಂದ ನ.29 ರ ಮಧ್ಯಾಹ್ನ 2ಕ್ಕೆ ನಗರದ ಕಲಾಮಂದಿರದಲ್ಲಿ 527ನೇ ಭಕ್ತ ಕನಕದಾಸರ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ಕ.ರಾ.ಅ.ಯು.ಸ ಅಧ್ಯಕ್ಷ ಮರಿಗೌಡ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಸಚಿವ ಹೆಚ್.ಎಂ.ರೇವಣ್ಣರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕನಕದಾಸರ ಭಾವಚಿತ್ರಕ್ಕೆ ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿರವರು ಮಾಲಾರ್ಪಣೆ ಮಾಡುವರು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರದಾನ ಕಾರ್ಯದರ್ಶಿಗಳಾದ ರಾಮಚಂದ್ರಪ್ಪರವರು ಕನಕ ಶ್ರೀ ಪ್ರಶಸ್ತಿ ಪ್ರದಾನ ಮಾಡುವರು,ಕನಕ ಜ್ಯೋತಿಯನ್ನು ರಾಮಮನೋಹರ ಲೋಹಿಯ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಶಿವಣ್ಣ, ಕನಕ ಸೂಕ್ತಿ ಬಿಡುಗಡೆಯನ್ನು ಜಿಲ್ಲಾ ಕಾಂಗ್ರೆಸ್ ಕೋಶಾಧ್ಯಕ್ಷ ಅಮರಾವತಿ ಚಂದ್ರಶೇಖರ್, ಕುರುಬರ ಸಂಘದ ಅಧ್ಯಕ್ಷ ಕೆ.ಚ್.ನಾಗರಾಜುರವರು ಪ್ರಾಸ್ತಾವಿಕ ನುಡಿಗಳನ್ನಾಡುವರು.
ಮುಖ್ಯ ಭಾಷಣಾಕಾರರಾಗಿ ಪ್ರೊ.ಕರೀಂ ಮುದ್ದೀನ್‍ರವರು ಭಾಗವಹಿಸಲಿದ್ದು, ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕಾರ್ಯಕ್ರಮದ ವಿವರಣೆ ನೀಡಿದರು.
ಗೋಷ್ಠಿಯಲ್ಲಿ ಇವರೊಂದಿಗೆ ಪ್ರಮೀಳಾ, ರಾಧಾಮಣಿ ಇದ್ದರು.

ಎಲ್ಲಾ ರೀತಿಯ ಪ್ರಕರಣಗಳಲ್ಲಿಯೂ ಪರಿಣಿತರಾಗಿ : ಕರೆ

ನಾಗಮಂಗಲ,ನ.27- ವಕೀಲರು ಒಂದೇ ರೀತಿಯ ಪ್ರಕರಣದಲ್ಲಿ ಪರಿಣಿತರಾಗದೆ, ಎಲ್ಲಾ ರೀತಿಯ ಪ್ರಕರಣದಲ್ಲಿ ಪರಿಣಿತರಾಗ ಬೇಕೆಂದು ಹಿರಿಯ ವಕೀಲ ಬಸವಯ್ಯ ಕರೆ ನೀಡಿದರು.
ತಾಲ್ಲೂಕಿನ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾನೂನು ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ವಕೀಲರುಗಳು ತಮ್ಮ ವೃತ್ತಿ ಬದುಕಿನಲ್ಲಿ ತಮಗೆ ತಿಳಿದು ತಿಳಿಯದೆ, ಒಂದೇ ರೀತಿಯ ಪ್ರಕರಣಗಳಿಗೆ ಮಾರು ಹೋಗಿರುತ್ತಾರೆ. ಒಂದೇ ವಿಷಯವಾಗಿ ವಾದಿಸಲು ಮುಂದಾಗಿರುತ್ತಾರೆ. ವಕೀಲರ ಎಂದಮೇಲೆ ಅವರು ಎಲ್ಲಾ ರೀತಿಯ ಕಾನೂನು ಅರಿವನ್ನು ಹೊಂದಿದವರಾಗಿ ತಾವು ಇದುವರೆಗೂ ಕೈಗೆತ್ತಿಕೊಳ್ಳದ ಪ್ರಕರಣಗಳತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಅತ್ಯಾಚಾರ ಪ್ರಕರಣಗಳ ವಿಚಾರಕ್ಕೆ ಬಂದಾಗ ಈ ಹಿಂದಿನ ರೀತಿಯ ಕಾನೂನುಗಳು ಬದಲಾಗಿ ಹೊಸ-ಹೊಸ ರೀತಿಯಾದ ಕಾನೂನುಗಳು ಬಂದಿವೆ. ಪ್ರತಿಯೊಬ್ಬರು ಅವುಗಳನ್ನು ಅರಿತ ತದನಂತರ ವಾದ ಮಂಡಿಸಬೇಕೆಂದು ಹೇಳಿದರು.
ಕಾನೂನಿನಲ್ಲಿ ಆಗುವಂತಹ ಬದಲಾವಣೆಗಳು, ಹಾಗೂ ಕಾನೂನಿನ ಸಮಗ್ರ ಅರಿವನ್ನು ಪಡೆದಂತಹ ವಕೀಲರು ಜನರ ಪ್ರಶಂಸೆಗೆ ಒಳಗಾಗುತ್ತಾರೆ. ಆಗ ಅವರು ಸ್ವಾಮಿ ಎಂದು ಕರೆಯುವ ಮಟ್ಟಿಗೆ ಜನಮಣ್ಣನೆಗೆ ಪಾತ್ರರಾಗುತ್ತಾರೆ. ವೃತ್ತಿನಿಷ್ಠೆಯನ್ನು ಪಾಲಿಸಿದಾಗ ಜನರಲ್ಲಿ ಭರವಸೆ ಮೂಡುತ್ತದೆ. ಆಪ್ರಕರಣವು ಮತ್ತೊಂದು ತಿರುವನ್ನು ಪಡೆದು ಅದನ್ನು ನಿಭಾಯಿಸಲು ಆಗದಿದ್ದಾಗ ಅದು ವಕೀಲನಿಗೆ ಆಗುವ ಅವಮಾನವೇ ಸರಿ ಎಂದರು.
ವಕೀಲರಾದವರು ಭಾರತೀಯ ಸಾಕ್ಷಾಧಾರಿತ ನಿಯಮಗಳ ವಿಚಾರವಾಗಿ ಪರಿಣಿತರಾಗುವುದು ಬಹಳ ಮುಖ್ಯವೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಮುಜೀರುಲ್ಲಾ ಉದ್ಘಾಟಿಸಿದರು, ಅಧ್ಯಕ್ಷತೆನ್ನು ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶೆ ಅನುಪಮ ವಹಿಸಿದ್ದರು, ಸರ್ಕಾರಿ ಅಭಿಯೋಜಕಿ ಹೆಚ್.ವಿಮಲಾ, ಸಹಾಯಕ ಅಭಿಯೋಜಕ ಕೆ.ಪಿ.ಜ್ಞಾನೇಂದ್ರ, ಕೆಂಪೇಗೌಡ ಉಪಸ್ಥಿತರಿದ್ದರು.

Monday, 24 November 2014

 ಕೃಷ್ಣರಾಜಪೇಟೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸ್ವಾಭಾವಿಕವಾಗಿದೆ. ಇಂದಿನ ಸೋಲು ನಾಳಿನ ಗೆಲುವಾಗುವುದರಿಂದ ಯುವವಕೀಲರು ಸೋಲು-ಗೆಲುವನ್ನು ಸ್ಪರ್ಧಾ ಮನೋಭಾವನೆಯಿಂದ ಸ್ವೀಕರಿಸಿಕೊಂಡು ಎದೆಗುಂದದೇ ಮುನ್ನಡೆಯಬೇಕು ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಕರೆ ನೀಡಿದರು.
ಅವರು ಇಂದು ಪಟ್ಟಣದ ನಾಲ್ವಡಿ ಕೃಷ್ಣರಾಜಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ವಕೀಲರ ಸಂಘವು ನ.26ರಂದು ನಡೆಯಲಿರುವ ವಕೀಲರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಕೀಲರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್’ಅನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡದ ಬದುಕಿನಿಂದ ಯುವ ವಕೀಲರು ಮುಕ್ತಿ ಪಡೆಯಲು ಕ್ರೀಡಾ ಚಟುವಟಿಕೆಗಳು, ಧ್ಯಾನ, ಯೋಗಾಸನ ಮತ್ತು ದೈಹಿಕ ವ್ಯಾಯಾಮವು ವರದಾನವಾಗಿದೆ. ಏಕಾಗ್ರತೆಯಿಂದ ಒತ್ತಡ ಮುಕ್ತರಾಗಿ ಅಭ್ಯಾಸ ಮಾಡಿದರೆ ಯಾವುದೇ ಸಾಧನೆಯನ್ನು ಸುಲಭವಾಗಿ ಮಾಡಲು ಅವಕಾಶವಿರುವುದರಿಂದ ಶ್ರದ್ಧೆಯಿಂದ ಅಭ್ಯಾಸ ಮಾಡಿ ಕ್ರೀಡೆಯಲ್ಲಿ ಸಾಧನೆ ಮಾಡಿ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಬೇಕು ಎಂದು ಮನವಿ ಮಾಡಿದ ನ್ಯಾಯಾಧೀಶ ಗೋಪಾಲಪ್ಪ ಮಾನಸಿಕ ಒತ್ತಡದಿಂದ ಹೊರಬರಲು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಅಭ್ಯಾಸವು ಚೇತೋಹಾರಿ ದಿವ್ಯ ಸಾಧನವಾಗಿದೆ. ವಕೀಲರ ದಿನಾಚರಣೆಯ ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ವಕೀಲ ಮಿತ್ರರನ್ನು ಒಂದೆಡೆ ಸೇರಿಸಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನಡೆಸುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವಂತಹ ವಿಚಾರವಾಗಿದೆ. ವಕೀಲರು ತಮ್ಮಲ್ಲಿ ನ್ಯಾಯವನ್ನು ಅರಸಿ ಬರುವ ಬಡ ಕಕ್ಷೀದಾರರಿಗೆ ನ್ಯಾಯವನ್ನು ದೊರಕಿಸಿಕೊಡಲು ಬದ್ಧತೆಯಿಂದ ವಾದವನ್ನು ಮಂಡಿಸಿ ವೃತ್ತಿಧರ್ಮ ಹಾಗೂ ನ್ಯಾಯವನ್ನು ಎತ್ತಿಹಿಡಿಯಲು ಶ್ರಮಿಸಬೇಕು. ನಿತ್ಯವೂ ಕಾನೂನು ಪುಸ್ತಕಗಳನ್ನು ಓದುವ, ವಿಶ್ವದ ವಿದ್ಯಮಾನಗಳ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ಬೋಲಿಂಗ್ ಮಾಡಿ ನಂತರ ಬ್ಯಾಟಿಂಗ್ ಮಾಡಿದ ಕಿರಿಯಶ್ರೇಣಿ ನ್ಯಾಯಾಧೀಶ ಎಸ್.ಕುಮಾರ್ ಮಾತನಾಡಿ ಕ್ರೀಡಾ ಚಟುವಟಿಕೆಗಳು ಒತ್ತಡ ಮುಕ್ತವಾದ ಬದುಕಿಗೆ ಸಂಜೀವಿನಿಯಿದ್ದಂತೆ, ಸತತವಾದ ಅಭ್ಯಾಸ ಹಾಗೂ ಏಕಾಗ್ರತೆಯಿಂದ ಅಭ್ಯಾಸ ಮಾಢಿ ಮುನ್ನಡೆದರೆ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಬಹುದು. ವಕೀಲರು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲಾ  ವಿಚಾರಗಳನ್ನು ಅಭ್ಯಾಸ ಮಾಡುವ ಮೂಲಕ ಕೀರ್ತಿಗಳಿಸಬೇಕು ಎಂದು ಕರೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಸ ಪಂದ್ಯದಲ್ಲಿ ಶ್ರೀರಂಗಪಟ್ಟಣ ಮತ್ತು ಕೆ.ಆರ್.ಪೇಟೆ ಎ’ತಂಡಗಳು ಆಟವಾಡಿದವು. ಜಿಲ್ಲೆಯ ಎಲ್ಲಾ ಏಳೂ ತಾಲೂಕುಗಳ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ, ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಹೆಚ್.ರವಿ, ಬಂಡಿಹೊಳೆ ಗಣೇಶ್, ಎಸ್.ಡಿ.ಸರೋಜಮ್ಮ, ಸ್ವರೂಪ, ಎಂ.ಎಲ್.ಸುರೇಶ್, ಸಿ.ಎನ್.ಮೋಹನ್, ಕೆರೆಮೇಗಳಕೊಪ್ಪಲು ಶಂಕರೇಗೌಡ, ಎಂ.ಆರ್.ಪ್ರಸನ್ನಕುಮಾರ್, ಅಪರ ಸರ್ಕಾರಿ ವಕೀಲರಾದ ಪುರಮಂಜುನಾಥ್, ಮತ್ತಿತರರು  ಭಾಗವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಸ್ವಾಗತಿಸಿದರು, ಶಂಕರೇಗೌಡ ವಂದಿಸಿದರು. ರಾಜೇಗೌಡ ಮತ್ತು ಪಾಂಡು ಕಾರ್ಯಕ್ರಮ ನಿರೂಪಿಸಿದರು.




ಮೈಸೂರು-ಮಂಡ್ಯ ಸುದ್ದಿಗಳು.

ಕೃಷ್ಣರಾಜಪೇಟೆ. ಒಬ್ಬ ಸಾಮಾನ್ಯ ರೈತನ ಮಗನಾದ ನಾನು ರಾಜಕೀಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಜನತೆಯ ಆಶೀರ್ವಾದವು ನನ್ನ ಮೇಲಿರುವವರೆಗೆ ರಾಜಕೀಯವಾಗಿ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ನನ್ನ ಜೀವನದ ಕೊನೆಯ ಉಸಿರಿರುವವರೆಗೂ ಕರ್ನಾಟಕ ರಾಜ್ಯದ ಅಭಿವೃಧ್ಧಿಗೆ ದುಡಿಯುತ್ತೇನೆ ಎಂದು ಶಿವಮೊಗ್ಗ ಕ್ಷೇತ್ರದ ಲೋಕಸಭ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ತಮ್ಮ ಮನೆದೇವರು ತಾಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವೀಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಗದ್ದುಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ನಡೆದ ಕಾರ್ತೀಕ ದೀಪೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನನಗೆ ಜನ್ಮ ನೀಡಿದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಹಾಗೂ ನನಗೆ ರಾಜಕೀಯವಾಗಿ ಆಶೀರ್ವಾದ ಮಾಡಿದ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕುಗಳೆರಡೂ ನನಗೆ ಎರಡು ಕಣ್ಣುಗಳಿದ್ದಂತೆ, ಶಿವಮೊಗ್ಗ ಜಿಲ್ಲೆಯ ಜನತೆಯು ನನ್ನ ಮೇಲೆ ವಿಶ್ವಾಸವನ್ನಿಟ್ಟು ನೀಡಿದ ಆಶೀರ್ವಾದವನ್ನು ಈ ಜನ್ಮದಲ್ಲಿಯೇ ಮರೆಯಲು ಸಾಧ್ಯವಿಲ್ಲ. ಜನತೆಯ ನೀಡಿದ ಅಧಿಕಾರವನ್ನು ರಾಜ್ಯದ ಅಭಿವೃಧ್ಧಿಗೆ ಬಳಸಿ ಒಬ್ಬ ಸಾಮಾನ್ಯ ಸೇವಕನಂತೆ ಕೆಲಸ ಮಾಡಿ ಈ ಯಡಿಯೂರಪ್ಪನ ಶಕ್ತಿ ಏನೆಂಬುದನ್ನು ತೋರಿಸಿಕೊಡುತ್ತೇನೆ. ಯಾರು ಎಷ್ಟೇ ಶಡ್ಯಂತ್ರಗಳನ್ನು ನಡೆಸಿ ನನ್ನ ವಿರುದ್ಧ ಪಿಯೂರಿ ನಡೆಸಿ ಜೈಲಿಗೆ ಕಳುಹಿಸಿದ್ದರೂ ನನ್ನ ಶಕ್ತಿ, ಉತ್ಸಾಹವು ಕಡಿಮೆಯಾಗಿಲ್ಲ. ಕಲ್ಯಾಣ ಕರ್ನಾಟಕದ ನಿರ್ಮಾಣವು ನನ್ನ ಗುರಿಯಾಗಿದ್ದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಶ್ರಮಿಸಲು ಶಕ್ತಿ ನೀಡುವಂತೆ ಪ್ರಾರ್ಥಿಸಲು ನನ್ನ ಮನೆದೇವರು ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರನ್ನು ಬೇಡಿಕೊಳ್ಳಲು ಬಂದಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ದೈವಮಾರ್ಗದಿಂದ ಮಾನಸಿಕ ನೆಮ್ಮದಿ: ಇಂದಿನ ಒತ್ತಡದ ಬದುಕಿನಲ್ಲಿ ದೇವರು, ದೇವಾಲಯಗಳು, ಮಠಮಾನ್ಯಗಳು ಹಾಗೂ ಧ್ಯಾನದ ಮೊರೆ ಹೋದರೆ ಮಾನಸಿಕವಾಗಿ ನೆಮ್ಮದಿಯು ದೊರೆಯುವ ಜೊತೆಗೆ ಹಿಡಿದ ಕಾರ್ಯದಲ್ಲಿಯೂ ಯಶಸ್ಸು ದೊರೆಯುತ್ತದೆ. ನಮ್ಮ ಸಂಸ್ಕøತಿ ಹಾಗೂ ಪರಂಪರೆಯನ್ನು ಗೌರವಿಸುವ, ಗುರು-ಹಿರಿಯರನ್ನು ಗೌರವಿಸುವ ಮನೋಭವನೆಯನ್ನು ಯುವಜನರು ಬೆಳೆಸಿಕೊಂಡು ಸುಭದ್ರ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಾನು, ನನ್ನದು ಎಂಬ ಸ್ವಾರ್ಥವನ್ನು ಬದಿಗಿಟ್ಟು ಸಮಾಜಕ್ಕಾಗಿ ನಾವು ಎಂಬ ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಯಡಿಯೂರಪ್ಪ ನನ್ನ ಜನ್ಮಭೂಮಿ ಕೃಷ್ಣರಾಜಪೇಟೆ ತಾಲೂಕನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಯಾವುದೇ ರೀತಿಯ ಸಹಕಾರವನ್ನು ನೀಡಲು ಬದ್ಧನಾಗಿದ್ದೇನೆ. ಸೇವಾ ಮನೋಭಾವನೆಯನ್ನು ಹೊಂದಿರುವ ಕ್ಷೇತ್ರದ ಶಾಸಕರಾದ ನಾರಾಯಣಗೌಡರು ಉತ್ತಮವಾದ ಕೆಲಸಗಾರರಾಗಿದ್ದಾರೆ. ತಾಲೂಕಿನ ಅಭಿವೃಧ್ಧಿಯ ಬಗ್ಗೆ ಅಪಾರವಾದ ಕನಸನ್ನು ಕಂಡಿರುವ ಗೌಡರಿಗೆ ನನ್ನ ಸಂಪೂರ್ಣವಾದ ಸಹಕಾರವಿದೆ ಎಂದು ಹೇಳಿದರು.
ಗವಿಮಠದ ಪೀಠಾಧಿಪತಿಗಳಾದ ಶ್ರೀ ಸ್ವತಂತ್ರಬಸವಲಿಂಗಶಿವಯೋಗಿ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರಮಹಾಂತಶ್ರೀಗಳು, ಮಳವಳ್ಳಿಯ ಬಂಡೆಮಠದ ಶ್ರೀಗಳು, ಶಿಕಾರಿಪುರ ಕ್ಷೇತ್ರದ ನೂತನ ಶಾಸಕ ಬಿ.ವೈ.ರಾಘವೇಂದ್ರ, ಶಾಸಕ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಮುಖಂಡರಾದ ಬಿ.ಜವರಾಯಿಗೌಡ, ಎಸ್.ಸಿ.ಅಶೋಕ್, ಎಸ್.ಸಿ.ಅರವಿಂದ್, ಕೆ.ಎನ್.ಲಿಂಗರಾಜು, ಕೆ.ಜೆ.ವಿಜಯಕುಮಾರ್, ಕೆ.ಪಿ.ಜಯಂತ್, ತೋಟಪ್ಪಶೆಟ್ಟಿ, ವರದರಾಜೇಗೌಡ, ಶೀಳನೆರೆ ಭರತ್, ಪ್ರಮೀಳವರದರಾಜೇಗೌಡ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸಾಸಲು ಈರಪ್ಪ, ತಾಲೂಕು ಪಂಚಾಯಿತಿ ಸ್ಥಾಯಿಸಮಿತಿಯ ಅಧ್ಯಕ್ಷ ಮಹದೇವೇಗೌಡ, ಜಿಲ್ಲಾ ಕಸಾಪ ಮಾಜಿ ಉಪಾಧ್ಯಕ್ಷ ಕೆ.ಆರ್.ನೀಲಕಂಠ ಹಾಗೂ ಯಡಿಯೂರಪ್ಪನವರ ಕುಟುಂಬ ವರ್ಗದವರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖಂಡರಾದ ಜಿ.ಪಂ ಮಾಜಿಸದಸ್ಯ ವಿ.ಸಿ.ಚೆಲುವೇಗೌಡ ಸ್ವಾಗತಿಸಿದರು, ಸಾಸಲು ನಾಗೇಶ್ ವಂದಿಸಿದರು. ಪುರ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಶೀರ್ಷಿಕೆ: 24-ಏಖPಇಖಿಇ-02 ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗವಿಮಠದಲ್ಲಿ ಕಾರ್ತೀಕ ದೀಪೋತ್ಸವ ಸಮಾರಂಭದಲ್ಲಿ ಭಾಗತವಹಿಸಿದ್ದ ಮಾಜಿಮುಖ್ಯಮಂತ್ರಿ ಸಂಸದ ಬಿ.ಎಸ್.ಯಡಿಯೂರಪ್ಪ ಅವರನ್ನು ಶಾಸಕ ನಾರಾಯಣಗೌಡ ಅಭಿನಂದಿಸಿದರು.
               ಸೈಕಲ್ ಹೆರಿಟೇಜ್ ಕ್ವಿಜ್ ವಿಧ್ಯಾರ್ಥಿಗಳ ಗಮನ ಸೆಳೆದಿದೆ
ಮೈಸೂರು, ನ. 25- ಹೆಸರಾಂತ ಸೈಕಲ್ ಅಗರ್‍ಬತ್ತಿ ಸಂಸ್ಥೆಯವರು ಇತ್ತೀಚೆಗೆ ಮೈಸೂರಿನ ವೈದಗಯಕೀಯ ಅಲ್ಯೂಮ್ನಿ ಅಸೋಸಿಯೇಷನ್ ಹಾಲ್‍ನಲ್ಲಿ ಆಯೋಜಿಸಿದ್ದ  ಸೈಕಲ್ ಹೆರಿಟೇಜ್ ಕ್ವಿಜ್‍ನಲ್ಲಿ, ಈ ರಸಪ್ರಶ್ನೆ ಕಾರ್ಯಕ್ರಮ ಮೈಸೂರು ವಿಭಾಗದ ವಿಧ್ಯಾರ್ಥಿಗಳ ಗಮನ ಸೆಳೆಯಿತು.
 ವಿಶ್ವದಲ್ಲಿಯೇ ಅತ್ಯಧಿಕವಾದ ಉತ್ಪಾದನಾ ಸಂಸ್ಥೆಯಾದ ಸೈಕಲ್ ಪ್ಯೂರ್ ಅಗರ್ ಬತ್ತಿ  ಇಂದು ಬಹು ನಿರೀಕ್ಷಿತ ಸಂಸ್ಥೆಯಾಗಿದ್ದು, ದೇಶದ ಪರಂಪರೆ, ಸಂಸ್ಕøತಿಯನ್ನು ಕೇಂದ್ರೀಕರಿಸುವ 2014ರ ಏಕೈಕ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತ್ತು, ರಾಜ್ಯದ 50 ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿ ತಂಡಗಳು  ಇದರಲ್ಲಿ ಭಾಗವಹಿಸಿದ್ದವು. ಮೈಸೂರು ನಗರದಲ್ಲಿ ಈ ಸ್ಪರ್ಧೆ ಎರಡನೇ ಬಾರಿಯಾಗಿದ್ದು,  ಈ ಸಲವೂ ಅತ್ಯಂತ ಯಶಸ್ವಿಯಾಗಿ ವಿದ್ಯಾರ್ಥಿಗಳ ಮನಸೋರೆಗೊಂಡಿತು ಎಮದು ಅಗರ್ ಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗಾ ಅರ್ಜುನ್ ತಿಳಿಸಿದರು.
 ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸದ್ವಿದ್ಯಾ ಶಾಲೆಯ ಕೆ.ಭರತ್ ಮತ್ತು ಅರವಿಂದ್ ಹರ್ಷಿತಾ ತಂಡ ಪ್ರಶಸ್ತಿ ಗಳಿಸಿದರು,  ಮೊದಲ ರನ್ನರ್ಸ್‍ಆಫ್ ಸ್ಥಾನವನ್ನು  ಸಿಎಫ್ ಟಿಆರ್‍ಐ ಶಾಲೆಯ ಸಿ.ಜೆ. ಸಾಮ್ರಾಟ್ ಮತ್ತು ಜಿತೇಂದ್ರ ತಂಡ, ಎರಡನೇ  ರನ್ನರ್ಸ್ ಸ್ಥಾನವನ್ನು ಮರಿಮಲ್ಲಪ್ಪ ಶಾಲೆಯ ಸುಸ್ಮಿತಾ ಮತ್ತು ವೈಷ್ಣವಿ  ಪಡೆದುಕೊಂಡರು. ಇದಲ್ಲದೇ ಇನ್ನೂ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದುಕೊಂಡರು.
 ಸಮಾರಂಭದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ಧ  ನಗರ ಪೊಲೀಸ್ ಆಯುಕ್ತ ಎಂ.ಎ.ಸಲೀಮ್ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
 ಕಾರ್ಯಕ್ರಮದಲ್ಲಿ ಎನ್.ಆರ್.ಗ್ರೂಪ್‍ನ ಆರ್. ಗುರು, ಪಾಲುದಾರರಾದ ಪವನ್ ರಂಗಾ, ಮತ್ತು ಅನಿರುದ್ದಾರಂಗಾ ಉಪಸ್ಥಿತರಿದ್ದರು.
ನಗರ ಪಾಲಿಕೆ ವಾರ್ಡ್ ನಂ 15 ಕ್ಕೆ ಉಪ ಚುನಾವಣೆ : ಇಂದು ನಾಲ್ಕು ಮಂದಿ ನಾಮಪತ್ರ ಸಲ್ಲಿಕೆ
 
ಮೈಸೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ರಾಜೀನಾಮೆಯಿಂದ ತೆರವಾಗಿರುವ ಮೈಸೂರು ಮಹಾನಗರ ಪಾಲಿಕೆ ವಾಡ್ ್ ನಂ 15 ರ ಉಪ ಚುನಾವಣೆಗೆ ಕಣ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಇಂದು  ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು,ಬಂಡಾಯಗಾರರು ಹಾಗೂ ಪಕ್ಷೇತರರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಸೀಮಾ ಪ್ರಸಾದ್ ಅವರು ಪಕ್ಷದ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್, ನಗರ ಘಟಕದ ಅಧ್ಯಕ್ಷ ಇ.ಮಾರುತಿರಾವ್ ಪವಾರ್ ಹಾಗೂ ಮುಖಂಡರೊಂದಿಗೆ ನಗರ ಪಾಲಿಕೆ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಎಂ.ಜೆ.ರೂಪಾ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾರುತಿರಾವ್ ಪವಾರ್, ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯವಿಲ್ಲ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಕಣಕ್ಕೆ ಇಳಿಸಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕೋಮಲಾ ರಮೇಶ್, ಪಕ್ಷದ ಶಾಸಕ ವಾಸು, ಎಂ.ಕೆ.ಸೋಮನಶೇಖರ್, ನಗರ ಘಟಕದ ಅಧ್ಯಕ್ಷ ದಾಸೇಗೌಡ , ನಗರ ಪಾಲಿಕೆ ಪಕ್ಷದ ಸದಸ್ಯರು ಮತ್ತಿತರರೊಂದಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೋಮಲಾ ರಮೇಶ್, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದು, ಅವರ ರಾಜೀನಾಮೆಯಿಂದಾಗಿ ತೆರವಾಗಿರುವ ಈ ಕ್ಷೇತ್ರದಲ್ಲಿ ಮತದಾರರ ಒಲವು ಕಾಂಗ್ರೆಸ್‍ಗೆ ಇನ್ನು ಇರುವ ಕಾರಣ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಬಂಡಾಯವೆದ್ದಿರುವ ಹರಣಿ ಮನೋಜ್ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ತಮ್ಮ ಪತಿ ಮನೋಜ್ ಬಿಜೆಪಿಯಲ್ಲಿ ಕಳೆದ 20 ವರ್ಷಗಳಿಂದಲೂ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರೂ, ಟಿಕೆಟ್ ನೀಡದೆ ವಂಚಿಸಲಾಗಿದೆ, ಇದರಿಂದಾಗಿ ತಾವು ವಾಡ್ ್ನ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಸಲ್ಲಿಸಿದ್ದು, ವಾಡ್ ್ನ ಜನತೆ ಚುನಾವಣೆಯಲ್ಲಿ ಕೈಹಿಡಿಯಲಿದ್ದಾರೆ ಎಂದು ಕಂಬನಿ ತುಂಬಿಕೊಂಡು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ನಿಂದ ಈಗಾಗಲೇ ಲಕ್ಷ್ಮಿ ಆರ್.ಗಣೇಶ್, ಪಕ್ಷೇತರ ನಳಿನಿ ತಮ್ಮಯ್ಯ ಕಣದಲ್ಲಿದ್ದಾರೆ.  ನಾಮಪತ್ರ ಪರಿಶೀಲನೆ ಮಂಗಳವಾರ ನಡೆಯಲಿದ್ದು, ವಾಪಾಸ್ಸಾತಿಗೆ ನ.27 ಕೊನೆ ದಿನವಾಗಿದೆ. ಡಿ.5 ರಂದು ಚುನಾವಣೆ ನಡೆಯಲಿದೆ.
   ಪೊಲೀಸ್ ಮುಂದಿರಿಸಿಕೊಂಡ ಸರ್ಕಾರ ದುರ್ಬಲ : ಪುಟ್ಟಣ್ಣಯ್ಯ
ಮಂಡ್ಯ,ನ.24-ಚಳವಳಿಯನ್ನು ಎದುರಿಸಲಾಗದೆ ಪೊಲೀಸ್ ಮುಂದಿರಿಸಿಕೊಂಡು ಆಡಳಿತ ಮಾಡುತ್ತಲಿರುವ ಕಾಂಗ್ರೆಸ್ ದುರ್ಬಲ ಸರ್ಕಾರ ನಡೆಸುತ್ತಿದೆ ಎಂದು ಪುಟ್ಟಣ್ಣಯ್ಯ ವ್ಯಂಗ್ಯವಾಡಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚಳವಳಿಕಾರರೊಂದಿಗೆ ಮಾತುಕತೆ ನಡೆಸಿ, ಮರ ಕಡಿಯದಂತೆ ವಿದ್ಯುತ್ ಮಾರ್ಗ ಮಾಡಲು ಸರ್ಕಾರ ಮುಂದಾಗಬೇಕು. ಚಳವಳಿಕಾರರನ್ನು ಎದುರಿಸಲಾಗದೆ. ಪೊಲೀಸ್ ಮುಂದಿಟ್ಟುಕೊಂಡು ದೇಶ ಆಳಲಾಗುವುದಿಲ್ಲ ಎಂದು ಎಚ್ಚರಿಸಿದರು.
ಅರಣ್ಯ ಕಾಯ್ದೆಯಲ್ಲಿ ಮರಕ್ಕೆ ಒಂದು ಲೈಟ್‍ಹಾಕಲು ಸಹ ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೇರುತ್ತಾರೆ. ಹೀಗಿರುವಾಗ ವಿದ್ಯುತ್ ಮಾರ್ಗಕ್ಕಾಗಿ ಕಾಡನ್ನು ನಾಶಮಾಡಲು ಹೊರಟಿರುವುದು ಮೂರ್ಕತನ ಎಂದರು.
ಪರಿಸರ ಕ್ಷಣೆಯ ಹಿತದೃಷ್ಠಿಯಿಂದ ಚಳವಳಿಕಾರರು, ತಜ್ಞರನ್ನು ಕರೆದು ಸಭೆನಡೆಸಬೇಕು. ಸರ್ಕಾರವು ಮುಂದಿನ ಜನಾಂಗಕ್ಕಾಗಿ ಪರಿಸರವನ್ನು ರಕ್ಷಿಸುವ ಹೊಣೆಹೊರಬೇಕು, ಕರ್ನಾಟಕವನ್ನು ಸುಂದರ ರಾಜ್ಯವನ್ನಾಗಿಸಬೇಕೆಂದು ಮನವಿ ಮಾಡಿದರು.
ಪರಿಸರ ಮಾರಣಹೋಮಕ್ಕೆ ಸರ್ಕಾರವೂ ಸಹ ಮುಂದಾಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಸರ್ವೆ ಕಾರ್ಯವನ್ನು ಮಾಡುತ್ತಲಿದ್ದು, ಇದನ್ನು ವಿರೋಧಿಸಿ ಇದೇ ಗುರುವಾರ ಬೆಳಿಗ್ಗೆ ಮಂಡ್ಯದಿಂದ 1000 ಮಂದಿ ಕೊಡಗಿಗೆ ಹೋಗಿ ಮುತ್ತಿಗೆ ಹಾಕುವುದಾಗಿ, ಇದಕ್ಕೆ ಮೈಸೂರು, ಚಿಕ್ಕಮಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ರೈತರೂ ಸಹ ಭಾಗವಹಿಸುವುದಾಗಿ ತಿಳಿಸಿದರು.
                 ಶಿವಕುಮಾರ್‍ಗೆ ತಾಂತ್ರಿಕ ಜ್ಞಾನವಿಲ್ಲ.
ಇಂದನ ಸಚಿವ ಡಿ.ಕೆ.ಶಿವಕುಮಾರ್‍ಗೆ ತಾಂತ್ರಿಕ ಜ್ಞಾನವಿಲ್ಲ, ಅವರಿಗೆ ಅವರ ಮಂತ್ರಿಗಿರಿಯ ಬಗ್ಗೆ ತಾಂತ್ರಿಕ ಜ್ಞಾನವಿಲ್ಲದೇ ಇರುವಾಗ ತಾಂತ್ರಿಕ ತಜ್ಞ ಸಲಹೆಗಾರರನ್ನಾದರೂ ಇರಿಸಿಕೊಂಡು ಚರ್ಚಿಸಬೇಕು ಎಂದು ಟೀಕಿಸಿದರು.
ಪರಿಸರ ಮತ್ತು ಪವರ್(ವಿದ್ಯುತ್) ಮಂತ್ರಿಯನ್ನು ಆಯ್ಕೆ ಮಾಡುವ ಮೊದಲು ಆವಿಷಯವಾಗಿ ಅವರು ಎಂ.ಎಲ್.ಸಿ ಆಗಬೇಕು. ಇಲ್ಲವಾದರೆ ಆ ವಿಚಾರವಾಗಿ ನೋಬಲ್ ಪ್ರಶಸ್ತಿ ಪಡೆದವರಾದರೆ ಉತ್ತಮ ಎಂದು ಹೇಳಿದರು.
ಮೇಕೆದಾಟು ಡ್ಯಾಂ ಕಟ್ಟುತ್ತಿರುವುದು ಬೆಂಗಳೂರಿಗೆ ನೀರು ಪೂರೈಸಲು ಎನ್ನುವ ವಿವಾಧ ಕುರಿತಂತ ಪ್ರಶ್ನೆಗೆ ಮೇಕೆ ದಾಟು ಡ್ಯಾಂನಿಂದ ಬಂಗಾಳ ಕೊಲ್ಲಿಗೆ ಅನಾವಶ್ಯಕವಾಗಿ ಹರಿದು ಹೋಗುತ್ತಿರುವ ನೀರನ್ನು ಸಂಗ್ರಹಿಸಲು ಹಾಗೂ ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ಮಾತ್ರ ಇದನ್ನು ಬಿಟ್ಟರೆ ಬೇರಾವ ಉದ್ದೇಶ ಇಲ್ಲ ಎಂದು ಉತ್ತರಿಸಿದರು.
ಗೋಷ್ಠಿಯಲ್ಲಿ ಇವರೊಂದಿಗೆ ರೈತ ಮುಖಂಡರುಗಳಾದ ಶಂಭೂನಹಳ್ಳಿ ಸುರೇಶ್,  ಸೀತಾರಾಮು, ಲಿಂಗಪ್ಪಾಜಿ, ರಾಮಕೃಷ್ಣಯ್ಯ, ನಂಜುಡಯ್ಯ ಇತರರಿದ್ದರು.

                             ಮೆಗಾಡೈರಿಗಾಗಿ ಹಣ ಕಡಿತ ನಿಲ್ಲಿಸಿರುವುದು ಸ್ವಾಗತಾರ್ಹ
ಹಾಲು ಉತ್ಪಾದಕರಿಂದ 1.50 ರೂ. ಕಡಿತಗೊಳಿಸುವುದನ್ನು ನಿಲ್ಲಿಸುವ ಸಂಗತಿ ಸ್ವಾಗತಾರ್ಹ. ಹಣ ಕಡಿತ ಮಾಡುವ ಮೊದಲು ಜನರಲ್ ಬಾಡಿ, ಜನಪ್ರತಿನಿಧಿಗಳ ಸಭೆ ಮಾಡಿ, ಮೆಗಾಡೈರಿಯ ಖರ್ಚುವೆಚ್ಚ, ಎನ್‍ಡಿಡಿಪಿಇ ಹಾಗೂ ರಾಜ್ಯ ಸರ್ಕಾರಗಳಿಂದ ಎಷ್ಟು ಸಹಾಯ ದೊರೆಯುತ್ತದೆ ಎಂಬ ವಿಧಾನವನ್ನು ಪಾಲಿಸಬೇಕಿತ್ತು ಎಂದು ಪುಟ್ಟಣ್ಣಯ್ಯ ಸಲಹೆ ನೀಡಿದರು.
ಜಿಲ್ಲೆಗೆ ಮೆಗಾಡೈರಿಯ ಅವಶ್ಯಕತೆ ಇದೆ. 6.5 ಲಕ್ಷದಿಂದ 6.75 ಲಕ್ಷದ ವರೆಗೆ ಹಾಲು ಉತ್ಪಾದನೆ ಯಾಗುತ್ತಿರು ನಮ್ಮಜಿಲ್ಲೆಯಲ್ಲಿ ಅದರ ಸಂಗ್ರಹ ಅತಿಮುಖ್ಯವಾಗುತ್ತದೆ. ಹೈನುಗಾರಿಕೆಗೆ ಕನಿಷ್ಠ ನಿಗಧಿ ಬೆಲೆ. ಆದ್ದರಿಂದ ಮೆಗಾಡೈರಿ ಮಾಡು ಮೊದಲು ಉತ್ಪಾದಕರಿಗೆ ಹೊರೆಯಾಗದಂತೆ ನಿರ್ಣಯ ಕೈಗೊಳ್ಳಬೇಕೆಂದರು ಎಂದು ಹೇಳಿದರು.
ಉಸ್ತುವಾರಿ ಮಂತ್ರಿಗಳು ಮಧ್ಯೆ ಪ್ರವೇಶಿಸಿ ಮೆಗಾಡೈರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ನಿಧಿ ಕ್ರೂಢೀಕರಿಸುವತ್ತ ಗಮನ ಹರಿಸಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.


               ಮಸೂದೆ ಅಂಗೀಕಾರವಾದಲ್ಲಿ ನೌಕರರ ಮುಷ್ಕರ
ಮಂಡ್ಯ,ನ.24- ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ ವಿಮಾ ಕಾನೂನುಗಳ(ತಿದ್ದುಪಡಿ) ಮಸೂದೆ 2008 ಅಂಗೀಕಾರವಾದಲ್ಲಿ ದೇಶಾದ್ಯಂತ ವಿಮಾ ನೌಕರರು ಮುಷ್ಕರ ಮಾಡುವುದಾಗಿ ಮೈಸೂರು ವಿಮಾ ನಿಗಮ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಸ್.ಕೆ.ರಾಮು ತಿಳಿಸಿದರು.
 ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಈ ಮಸೂದೆಯನ್ನು ವಿರೋಧಿಸಿ ಚಳುವಳಿ ಮಾಡಿದ್ದು, ತಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿಯೇ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವುದು ವಿಪರ್ಯಾಸವಾಗಿದೆ ಎಂದರು.
ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ.26 ರಿಂದ ಹೆಚ್ಚಿಸುವುದು, ಜೀವ ವಿಮಾ ಪ್ರತಿನಿಧಿಗಳ ರಿನ್ಯೂಯಲ್ ಕಮಿಷನ್ ರದ್ದತಿ, ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಸಂಸ್ಥೆಗಳ ಬಂಡವಾಳ ಹಿಂತೆಗೆತ ಮಾಡುವುದು ಹಾಗೂ ಇನ್ನಿತರ ಅಪಾಯಕಾರಿ ಅಂಶಗಳನ್ನು ಮಸೂದೆ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಈ ಮಸೂದೆಯನ್ನು ಜಾರಿಗೆ ತರಬಾರದೆಂದು ವಿಮಾನೌಕರರು, ಪಾಲಿಸಿದಾರರು, ರಾಷ್ಟ್ರಪ್ರೇಮಿಗಳು ಆಗ್ರಹಿಸುತ್ತಿದ್ದು, ತೀವ್ರ ವಿರೋಧದ ಮೇಲೆ ಮಸೂದೆ ಅಂಗೀಕಾರವಾದಲ್ಲಿ, ವಿಮಾ ನೌಕರರು ಮರುದಿನವೇ ಮುಷ್ಕರ ಹೂಡುತ್ತಿದ್ದು, ಈ ನೀತಿಯ ವಿರುದ್ಧ ತೀವ್ರ ತರನಾದ ಆಂದೋಲನ ಮಾಡಲಾಗುವುದೆಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಮಂಡ್ಯ ಶಾಖಾ ಘಟಕ ಅಧ್ಯಕ್ಷ ಫಿಲಿಫ್ ಜೇಮ್ಸ್, ಕಾರ್ಯದರ್ಶಿ ರಾಜು, ಜಂಟಿಕಾರ್ಯದರ್ಶಿ ಶ್ರೀನಿವಾಸ್ ಇತರರಿದ್ದರು.
ಎಸ್.ಜೆ. ಸಿ.ಇ ಯಲ್ಲಿ 3 ದಿನ ಅಂತರಾಷ್ಟ್ರೀಯ ಸಮ್ಮೇಳನ
ಮೈಸೂರು:  ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ   ನ. 27 ರಿಂದ ನ. 29ರ  ವರೆಗೆ   ಮೂರು ದಿನಗಳ ಕಾಲ ತಾಂತ್ರಿಕ ವಿಷಯಗಳಿಗೆ ಕುರಿತಂತೆ ಮಹಾ ಸಮ್ಮೆಳನವನ್ನು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಾನ್ಸುಪಾಲಾದ ಡಾ. ಶಕೀಬ್ ಉರ್ ರೆಹಮಾನ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಸಮ್ಮೇಳನವು  ಎಸ್.ಜೆ.ಸಿ.ಇ.ನ  ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ವತಿಯಿಂದ  ಕಂಟೆಂಪರರಿ ಕಂಪ್ಯೂಟಿಂಗ್  ಅಂಡ್ ಇನ್ ಫಾರ್‍ಮೆಟಿಕ್ಸ್  ಎಂಬ ವಿಷಯದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದ್ದು,   ಇದಕ್ಕೆ  ಬೆಂಗಳೂರಿನ  ಐಇಇಇ ಸಂಸ್ಥೆಯು ತಾಂತ್ರಿಕ ಸಮ್ಮೇಳನಕ್ಕೆ   ಸಹ ಪ್ರಾಯೋಜಕತ್ವ  ನೀಡುತ್ತಿದೆ ಎಂದರು.
 ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಕ್ಷೇತ್ರಗಳು  ಹಾಗೂ ಇತರೆ ಸಂಬಂಧಿತ ಕ್ಷೇತಗಳಿಂದ  ಸಂಶೋಧಕರು, ಶಿಕ್ಷಣ ತಜ್ಷರುಗಳನ್ನು ಒಂದುಗೂಡಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ. ಈ ಸಮಾವೇಶದಲ್ಲಿ ದೇಶ-ವಿದೇಶಗಳಿಂದ ಕಂಪ್ಯೂಟಿಂಗ್ ಮತ್ತು ಇನ್ ಫಾರ್‍ಮೆಟಿಕ್ಸ್  ಕ್ಷೇತ್ರದ 10ಕ್ಕಿಂತಲೂ ಹೆಚ್ಚು ಸುಪ್ರಸಿದ್ಧ ಸಂಶೋಧಕರುಗಳು ಉಪನ್ಯಾಸ ನೀಡಲಿದ್ದಾರೆ. ಸುಮಾರು 9 ದೇಶಗಳಿಂದ 453 ತಾಂತ್ರಿಕ ಪ್ರಬಂಧಗಳು ಬಂದಿದ್ದು, ಇದರಲ್ಲಿ 250 ಪ್ರಬಂಧಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದರು.
ಈ ಸಮಾವೇಶದೊಂದಿಗೆ ಪ್ರಾಡೆಕ್ಟ್ ಡಿಸೈನ್, ಸ್ಪ್ರಿಂಟ್ ವಕ್ ್ ಶಾಪ್ ಎಂಬ ಎರಡು ಅಂತರಾಷ್ಟ್ರೀಯ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಈ ಸಮಾವೇಶದಲ್ಲಿ ಹಲವಾರು ಗಣ್ಯರು, ತಾಂತ್ರಿಕ ತಜ್ಞರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಎಸ್ ಜೆಸಿಯ ಅಧಿಕಾರಿಗಳಾದ ಮಹಾನಂದ, ಡಾ.ಎಸ್.ಕೆ.ನಿರಂಜನ್, ಪುಷ್ಪಾಲತಾ ಮತ್ತಿತರರು ಉಪಸ್ಥಿತರಿದ್ದರು.

ಉಸ್ತುವಾರಿ ಸಚಿವರಿಂದ ಪ್ರಗತಿ ಪರಿಶೀಲನೆ
ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು, ಇಲಾಖಾವಾರು ಕಾಮಗಾರಿಗಳ ಕುರಿತಂತೆ ಸಮಾಲೋಚನೆ ನಡೆಸಿ, ಮುಖ್ಯಮಂತ್ರಿಗಳ ಅನುದಾನ 100 ಕೋಟಿ ರೂ ನಡಿ ನಡೆಯುತ್ತಿರುವ ಕಾಮಗಾರಿಗಳ ಕಡತವನ್ನು ಪರಿಶೀಲಿಸಿ, ಕೆಲವು ಕಾಮಗಾರಿಗಳು ವಿಳಂಭವಾಗಿರುವುದಕ್ಕೆ ಕಾರಣವನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ತಿಳಿದುಕೊಂಡು, ಇನ್ನು ಮೂರು ತಿಂಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಮತ್ತಿತರರು ಉಪಸ್ಥಿತರಿದ್ದರು.
    ನಾಡು - ನುಡಿ, ಸಂಸ್ಕೃತಿ ರಕ್ಷಣೆಗೆ ಸಂಘಟಿತರಾಗಬೇಕು : ಸಚಿವ ಬೇಗ್

ಗೋವಾ (ಪಣಜಿ), ನ. 24 - (ಕರ್ನಾಟಕ ವಾರ್ತೆ) :-  ಕನ್ನಡ ನಾಡು, ಭಾಷೆ, ಸಂಸ್ಕೃತಿ ರಕ್ಷಣೆಗೆ ಗೋವಾದಲ್ಲಿರುವ ಎಲ್ಲಾ ಕನ್ನಡಿಗರು ಸಂಘಟಿತರಾಗಬೇಕು ಎಂದು ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್ ಇಂದು ಇಲ್ಲಿ ಕರೆ ನೀಡಿದರು.

ಅವರು, ಗೋವಾದ ಪಣಜಿಯಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಾ ಕನ್ನಡ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೋವಾದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಭಾಷೆ, ನಾಡಿನ ಹೆಸರಿನಲ್ಲಿ ಇಲ್ಲಿರುವ ಎಲ್ಲಾ ಕನ್ನಡಿಗರು ಒಂದೇ ವೇದಿಕೆಗೆ ಬರಬೇಕಿದೆ.  ಇಲ್ಲಿನ ಕನ್ನಡಿಗರು ಸಂಘಟಿತರಾದರೆ ಇಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ವಿದ್ಯಾಭ್ಯಾಸ, ಆರೋಗ್ಯ ಸೇವೆಗಳಿಗೆ ನೆರವು ಒದಗಿಸಲು ಸಾಧ್ಯ. ಎಲ್ಲಾ ಕನ್ನಡಿಗರಿಗೆ ವೇದಿಕೆಯಾಗಬಲ್ಲ ಕನ್ನಡ ಭವನ ಇಲ್ಲಿ ನಿರ್ಮಾಣವಾಗುವ ಅಗತ್ಯವಿದೆ.  ಇಲ್ಲಿನ ಕನ್ನಡಿಗರು ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾದರೆ ಕರ್ನಾಟಕ ಸರ್ಕಾರ ಎಲ್ಲಾ ನೆರವು ಒದಗಿಸಲಿದೆ ಎಂದರು.

ಹೊರನಾಡಿನಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ.  ಹೊರ ನಾಡಿನ ಕನ್ನಡಿಗರಿಗೆ ಸರ್ಕಾರ ಎಲ್ಲಾ ನೆರವು ಒದಗಿಸಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋವಾದ ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕ ಡಾ. ಸುರೇಶ್ ಶಾನ್‌ಭಾಗ್ ಮಾಡನಾಡಿ ನಾವು ಯಾವುದೇ ರಾಜ್ಯದಲ್ಲಿ ನೆಲೆಸಿದ್ದರೂ ತಾಯಿ ಕಲಿಸಿದ ಭಾಷೆಯೇ ನಮ್ಮ ಮಾತೃಭಾಷೆ.  ನಮ್ಮ ಯೋಚನಾ ಲಹರಿ ಸದಾ ಮಾತೃಭಾಷೆಯಲ್ಲೇ ಇರುತ್ರದೆ.  ಹುಟ್ಟಿದ ನೆಲದಿಂದ ಅನಿವಾರ್ಯವಾಗಿ ಬೇರೆಡೆಗೆ ವಲಸೆ ಬಂದಿರುವ ನಾವು ನಮ್ಮ ಸಂಸ್ಕೃತಿ, ನೆಲದ ಬೆಳವಣಿಗೆಗೆ ಒಗ್ಗಟ್ಟಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಹಾಬಲ ಭಟ್ ಮಾತನಾಡಿ, ಗೋವಾದಲ್ಲಿ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಜನರಿದ್ದಾರೆ.  ಕನ್ನಡದ ವೈವಿದ್ಯತೆಯನ್ನು ಇಲ್ಲಿ ಕಾಣಬಹುದು.  ಪ್ರಾದೇಶಿಕ ಹಾಗೂ ವರ್ಗ ಭಿನ್ನತೆಯನ್ನು ಮೀರಿದರೆ ಗೋವಾದಲ್ಲಿ ಕನ್ನಡಿಗರು ತಮ್ಮ ಧ್ವನಿಯನ್ನು ದಾಖಲಿಸಲು ಸಾಧ್ಯವಿದೆ ಎಂದು ಹೇಳಿದರು.

ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಉಪನಿರ್ದೇಶಕರಾದ ಬಸವರಾಜ ಕಂಬಿ, ಎಸ್.ವಿ.ಲಕ್ಷ್ಮೀನಾರಾಯಣ, ಗೋವಾ ಕನ್ನಡ ಕನ್ನಡ ಸಮಾಜದ ಅಧ್ಯಕ್ಷ  ಮಹಾಬಲ್ ಭಟ್, ಉಪಾಧಕ್ಷ ಮಲ್ಲಿಕಾರ್ಜುನ ಬಾದಾನಿ, ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
                                               ಕನ್ನಡ ಕಲರವ

ಕನ್ನಡನಾಡಿನಿಂದ ಬಹುದೂರದಲ್ಲಿದ್ದರೂ, ಭಾಷೆಯು ಅಲ್ಲಿ ಎಲ್ಲರನ್ನು ಒಂದುಗೂಡಿಸಿತ್ತು.  ದೂರದ ಗೋವಾದ ರಾಜಧಾನಿ ಪಣಜಿಯಲ್ಲಿ ಕನ್ನಡಿಗರನ್ನು ಒಂದುಕಡೆ ಸೇರಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಂಗವಹಿಸಿ ಭಾಷೆಯ ಅಭಿಮಾನ ಮೆರೆದರು.  ರಾಮಚಂದ್ರ ಹಡಪದ ಮತ್ತು ತಂಡದವರ ಗೀತೆಗಾಯನ ಕೇಳುಗರನ್ನು ಭಾವಪರವಶವಾಗಿಸಿತ್ತು.  ಕಾಣದಾ ಕಡಲಿಗೆ ಹಂಬಲಿಸಿದೆ ಮನ . . . . . . , ಶ್ರಾವಣ ಬಂತು ನಾಡಿಗೆ . . . . . . .,  ಕರ್ನಾಟಕ ಬರಿ ನಾಡಲ್ಲ . . . . . ., ಘಮ ಘಮ ಘಮಿಸ್ತಾವ ಮಲ್ಲಿಗೆ . . . . . . ಷರೀಫರ ಸೋರುತಿಹುದು ಮನೆಯ ಮಾಳಿಗೆ . . . . . . . ಹಾಡುಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ವಿಧುಷಿ ಸುಪರ್ಣ ವೆಂಕಟೇಶ್ ಮತ್ತು ತಂಡದವರು ಅಷ್ಟರತ್ನಗಳು ಹಾಗೂ ಅಂತಃಪುರ ಗೀತೆಗಳಿಗೆ ನೃತ್ಯ ರೂಪಕ ಮನಮೋಹಕವಾಗಿತ್ತು.



 ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್ ಅವರು, ಗೋವಾದ ಪಣಜಿಯಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಾ ಕನ್ನಡ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.  ಗೋವಾದ ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕ ಡಾ. ಸುರೇಶ್ ಶಾನ್‌ಭಾಗ್, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಉಪನಿರ್ದೇಶಕರಾದ ಬಸವರಾಜ ಕಂಬಿ, ಎಸ್.ವಿ.ಲಕ್ಷ್ಮೀನಾರಾಯಣ, ಗೋವಾ ಕನ್ನಡ ಕನ್ನಡ ಸಮಾಜದ ಅಧ್ಯಕ್ಷ  ಮಹಾಬಲ್ ಭಟ್, ಉಪಾಧಕ್ಷ ಮಲ್ಲಿಕಾರ್ಜುನ ಬಾದಾನಿ, ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



2. ಗೋವಾದ ಪಣಜಿಯಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಾ ಕನ್ನಡ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಮಚಂದ್ರ ಜಿ. ಹಡಪದ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.









Sunday, 16 November 2014



ಮಂಡ್ಯ-ನ,16:-ದೇಶ ಮತ್ತು ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದಂತಹ ಕೃತ್ಯಗಳನ್ನು ತಡೆಯಲು ನಮ್ಮ ಸಂವಿಧಾನದಲ್ಲಿ ಕಠಿಣ ಕಾನೂನು ಜಾರಿ ಮಾಡಿದರೆ ಮಾತ್ರ ಸಾಧ್ಯ ಎಂದು, ಬಹುಭಾಷಾ ನಟ ಅರ್ಜುನ್‍ಸರ್ಜಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ಪ್ರಥಮ ನಿರ್ದೇಶನದ ಅಭಿಮನ್ಯು ಚಿತ್ರ ವೀಕ್ಷಿಸಲು ಮಂಡ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರ್ಜುನ್‍ಸರ್ಜಾ, ನಮ್ಮ ದೇಶದ ಕಾನೂನಿನ ಶಿಕ್ಷೆಯಲ್ಲಿ ದುಷ್ಕøತ್ಯ ಎಸಗುವ ಮಂದಿಗೆ ಭಯವಿಲ್ಲಾ. ದೌರ್ಜನ್ಯದಂತಹ ಕೃತ್ಯಗಳಿಗೆ ಮುಸ್ಲಿಂ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಕಠಿಣ ಕಾನೂನಿನ ರೀತಿ ನಮ್ಮ ದೇಶದಲ್ಲೂ ಜಾರಿಯಾದಾಗ ಮಾತ್ರ ಇಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ಇದಕ್ಕೂ ಮೊದಲು ತಮ್ಮ ಚಿತ್ರ ವೀಕ್ಷಿಸಲು ಮಂಡ್ಯಕ್ಕೆ ಆಗಮಿಸಿದ ಕುರಿತು ಮಾತನಾಡಿದ ಅರ್ಜುನ್ ಸರ್ಜಾ, ಅಭಿಮನ್ಯು ನಾನು ನಿರ್ದೇಶನ ಮಾಡಿದ ಕನ್ನಡದ ಪ್ರಥಮ ಚಿತ್ರ. ಮಂಡ್ಯ ಸೇರಿದಂತೆ ಪ್ರದರ್ಶನಗೊಳ್ಳುತ್ತಿರುವ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ಈ ಚಿತ್ರ ಶೈಕ್ಷಣಿಕ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಕುರಿತಾದ ಚಿತ್ರಕತೆ ಆಧರಿಸಿದ್ದು, ಇದನ್ನು ರಾಜಕಾರಣಿಗಳು ಸೇರಿದಂತೆ ವಿಚಾರವಂತ ಮಂದಿ ಈ ಕಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಸಂತಸ ವ್ಯಕತಪಡಿಸಿದರು. ಮುಂದೆ ತಮ್ಮ ಪುತ್ರಿಯನ್ನು ಚಿತ್ರರಂಗಕ್ಕೆ ತರುವ ಕುರಿತು ಮಾತನಾಡಿ, ಕನ್ನಡ ಸೇರಿದಂತೆ ಇತರ ಭಾಷೆಗಳ ಚಿತ್ರಗಳಲ್ಲಿ ಅಭಿನಯ ಮಾಡಿಸಲು ಸಮ್ಮತವಿದೆ ಎಂದರು.
ಗುರುಶ್ರೀ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಅಭಿಮನ್ಯು ಚಿತ್ರ ವೀಕ್ಷಿಸಲು ತಮ್ಮ ನೆಚ್ಚಿನ ನಟ ಮಂಡ್ಯಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಪುಷ್ಪ ಮಾಲೆ ಹಾಕಿ ಜಯಗೋಷ ಕೂಗುತ್ತಾ ಅತ್ಮೀಯವಾಗಿ ಬರಮಾಡಿಕೊಂಡರು.
                      ---------------
            
ಮೈಸೂರು ವಾರಿಯರ್ಸ್ ಕ್ರಿಕೆಟ್ ಕ್ವಿಜ್‍ಗೆ
ಸೈಕಲ್ ಪ್ಯೂರ್ ಅಗರಬತ್ತಿ ಆತಿಥ್ಯ
ಮೈಸೂರು, ನವೆಂಬರ್  2014:ಸೈಕಲ್ ಪ್ಯೂರ್ ಅಗರಬತ್ತಿ, ವಿಶ್ವದಲ್ಲಿಯೇ ಅತಿಹೆಚ್ಚು ಅಗರಬತ್ತಿ ಉತ್ಪಾದಿಸುವ ಸಂಸ್ಥೆಯಾಗಿದ್ದು,  ಎಸಿಯುಕೆ (ಅಸೋಸಿಯೇಷನ್ ಆಫ್ ಕ್ರಿಕೆಟ್ ಅಂಪೈರ್ಸ್ ಕರ್ನಾಟಕ) ಮೈಸೂರು ವಲಯಸಹಯೋಗದಲ್ಲಿ  ಮೈಸೂರು ನಗರದಲ್ಲಿ “ಮೈಸೂರು ವಾರಿಯ್ಸ್ ಕ್ರಿಕೆಟ್ ಕ್ರಿಜ್” ಅನ್ನು ಆಯೋಜಿಸಿದೆ. ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಈ ಕ್ವಿಜ್‍ನಲ್ಲಿ ನಗರದ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎಸಿಯುಕೆ ಕರ್ನಾಟಕ ಘಟಕದ ಅಧ್ಯಕ್ಷ ಎಸ್.ಮುರಳೀಧರ ಮತ್ತು ಮೈಸೂರು ವಲಯದ ಕೆಎಸ್‍ಸಿಎ ಅಧ್ಯಕ್ಷ ಬಾಲಚಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಜೇತರನ್ನು ಅಭಿನಂದಿಸಿದ ಮುರಳೀಧರ ಅವರು, `ಈ ಕ್ವ್ವಿಜ್‍ಗೆ ದೊರೆತ ಅತೀವ ಪ್ರತಿಕ್ರಿಯೆಯಿಂದ ನಮಗೆ ಹೆಚ್ಚಿನ ಸಂತಸವಾಗಿದೆ. ಜ್ಞಾನ ಎಂಬುದು ಎಂದಿಗೂ ಯಾರೊಬ್ಬರೂ ಉತ್ತಮ ಸಾಧನೆ ಮಾಡಲು ಸಹಕಾರಿ ಆÀಗಲಿದೆ. ಈ ಕಾರ್ಯಕ್ರಮದ ಮೂಲಕ ಕ್ರೀಡಾ ಜ್ಞಾನ ಉತ್ತಮಪಡಿಸಲು ಹಾಗೂಮಕ್ಕಳು ಕ್ರೀಡೆಯನ್ನು ತಮ್ಮ ಆಯ್ಕೆಯಾಗಿ ಪರಿಗಣಿಸಲು ಸಹಕಾರಿಯಾಗಲಿದೆ’ ಎಂದರು.
24ನೇ ಅಂಪ್ಶೆರ್ಸ್‍ಗಳ ದಿನದ ನಿಮಿತ್ತ ರಾಜ್ಯ ಮಟ್ಟದ ಕ್ರಿಕೆಟ್ ಕ್ವಿಜ್ ಸ್ಪರ್ಧೆಯ ಮೈಸೂರು ವಲಯ ಸುತ್ತಿನ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯು 8 ರಿಂದ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ವಲಯ ಮಟ್ಟದ ಟ್ರೋಫಿ ಅಲ್ಲದೆ ವಿಜೇತರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೆಂಬರ್ 22, 2014ರ ಶನಿವಾರ ನಡೆಯಲಿರುವ ರಾಜ್ಯ ಮಟ್ಟದ ಉಪಾಂತ್ಯ ಸ್ಪರ್ಧೆಗಳಲ್ಲಿ ಮೈಸೂರು ವಲಯ ಪ್ರತಿನಿಧಿಸಲು ಅರ್ಹತೆ ಪಡೆದಿದ್ದರು.
ಕಳೆದ ವರ್ಷಗಳಲ್ಲಿ, ಸೈಕಲ್ ಪ್ಯೂರ್ ಅಗರಬತ್ತಿ ಭಾರತದಲ್ಲಿ ಕ್ರಿಕೆಟ್ ಜೊತೆಗೆ ಸಹಯೋಗ ಹೊಂದಿರುವ ಪ್ರಮುಖ ಬ್ರಾಂಡ್‍ಗಳಲ್ಲಿ ಒಂದಾಗಿದೆ. ರೆಡ್ ಅಲರ್ಟ್, ಥರ್ಡ್ ಅಂಪೈರ್ ಬ್ರಾಂಡಿಂಗ್, ಮೈಲ್‍ಸ್ಟೋನ್ ಬ್ರಾಂಡಿಂಗ್ ಜೊತೆಗೂ ಸಂಸ್ಥೆಯು ಗುರುತಿಸಿಕೊಂಡಿದೆ. ವಿಶ್ವದ ವಿವಿಧೆಡೆ ನಡೆಯುವ  ವಿವಿಧ ಕ್ರಿಕೆಟ್ ಪಂದ್ಯಾವಳಿಗಳ ಜೊತೆಗೆ ಸೈಕಲ್ ಪ್ಯೂರ್ ಅಗರಬತ್ತಿಯು ಸಾಕಷ್ಟು ಜನಪ್ರಿಯವಾಗಿದ್ದ `ಪ್ರೇ ಫಾರ್ ಇಂಡಿಯಾ’ ಪ್ರಚಾರಾಂದೋಲನವನ್ನು 2011ರಲ್ಲಿ ಐಸಿಸಿ ವಲ್ರ್ಡ್ ಕಪ್ ಸಂದರ್ಭದಲ್ಲಿ 100ಕ್ಕೂ ಅಧಿಕ ನಗರಗಳಲ್ಲಿ ಆಯೋಜಿಸಿತ್ತು.
ಸೈಕಲ್ ಪ್ಯೂರ್ ಸೇರ್ಪಡೆಯುಕ್ತ ಪ್ರಗತಿಗೆ ಒತ್ತು ನೀಡಲಿದ್ದು, ಭಾರತದ ಸಣ್ಣ ಪಟ್ಟಣಗಳಲ್ಲಿ ಕ್ರಿಕೆಟ್ ಪ್ರತಿಭೆಗಳು ಇದ್ದು, ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎಂದು ಭಾವಿಸುತ್ತದೆ. ಸೈಕಲ್ ಪ್ಯೂರ್ ಅಗರಬತ್ತಿ ಕ್ರಿಕೆಟ್ ಕ್ರೀಡೆ ಬಗೆಗೆ ಒಲವು ಹೊಂದಿದ್ದು, ಒಟ್ಟಾರೆಆಟ ಮತ್ತು ಆಟಗಾರರ ಪ್ರಗತಿಗೆ ಆದ್ಯತೆ ನೀಡಲಿದೆ. ಈ ಒಲವಿನ ಪರಿಣಾಮ ಸೈಕಲ್ ಪ್ಯೂರ್ ಅಗರಬತ್ತಿ ಕೆಪಿಎಲ್ ಜೊತೆಗೆ ಗುರುತಿಸಿಕೊಂಡಿದೆ. ಇದು, ಅಂತಿಮವಾಗಿ ಮೈಸೂರು ಫ್ರಾಂಚೈಸಿ ಪಡೆಯಲು ಕಾರಣವಾಯಿತು.  ಪೂರ್ಣ ಸಹಕಾರದ ಪರಿನಾಮ ಮೈಸೂರು ವಾರಿಂiÀiರ್ಸ್ ತಂಡವು ಕೆಪಿಎಲ್‍ನ 2014ರ ವಿಜೇತ ತಂಡವಾಗಿ ಹೊರಹೊಮ್ಮಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 10 November 2014

ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು: ಕೆ .ಶಿವಮೂರ್ತಿ


ಭಾರತ ಸರ್ಕಾರದ ವಾರ್ತಾ ಶಾಖೆ
ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು: ಕೆ .ಶಿವಮೂರ್ತಿ

ದಾವಣಗೆರೆ, ನವೆಂಬರ್ 10, 2014

ಭಾರತ ಸರ್ಕಾರದ ವಾರ್ತಾ ಶಾಖೆ ,ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಇತರ ಮಾಧ್ಯಮ ಘಟಕಗಳ ಸಹಭಾಗಿತ್ವದಲ್ಲಿ ದಾವಣಗೆರೆಯಲ್ಲಿ ಆಯೋಜಿಸಿರುವ ಮೂರು ದಿನಗಳ ‘ಸಾರ್ವಜನಿಕ ಮಾಹಿತಿ ಆಂದೋಲನ'ದ ಉದ್ಘಾಟನಾ ಸಮಾರಂಭ ಇಂದು ದಾವಣಗೆರೆ ಜಿಲ್ಲೆಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಜರುಗಿತು. ಶ್ರೀ.ಕೆ ಶಿವಮೂರ್ತಿ, ಶಾಸಕರು, ಮಾಯಕೊಂಡ ವಿಧಾನಸಭಾ ಕ್ಷೇತ್ರ ಇವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಾರ್ವಜನಿಕ ಮಾಹಿತಿ ಆಂದೋಲನಗಳು ಸಹಾಯಕಾರಿಯಾಗಿವೆ. ಸರ್ಕಾರದ ಯೋಜನೆಗಳು ಜನಪರವಾಗಿದ್ದಲ್ಲಿ ಸುಲಭವಾಗಿ ಅವು ಗ್ರಾಮೀಣ ಜನತೆಯನ್ನು ತಲುಪಲು ಸಾಧ್ಯ. ಆಡಳಿತ ಮತ್ತು ಕಾನೂನುಗಳ ಸುವ್ಯವಸ್ಥೆಗೆ ಜನರ ಸಹಭಾಗಿತ್ವ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಸರ್ಕಾರದ ಯೋಜನೆಗಳಿಗೆ ನಿಧಾನಗತಿಯ ಪ್ರಚಾರ ದೊರಕುವುದರಿಂದ ಅವು ಜನಸಾಮಾನ್ಯರನ್ನು ತಡವಾಗಿ ತಲುಪುತ್ತಿವೆ. ಸರ್ಕಾರದ ಪ್ರಚಾರ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಕುರಿತು ನಾವಿಂದು ಚಿಂತಿಸಬೇಕಾಗಿದೆ ಎಂದರು. ಸಾರ್ವಜನಿಕ ಮಾಹಿತಿ ಆಂದೋಲನದ ಅಂಗವಾಗಿ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯದ ವತಿಯಿಂದ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನವನ್ನೂ ಶಾಸಕರು ಉದ್ಘಾಟಿಸಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶ್ರೀ. ಅಬ್ದುಲ್ ಜಬ್ಬಾರ್,  ಶಾಸಕರು, ವಿಧಾನ ಪರಿಷತ್, ಮೂಲ ಸೌಲಭ್ಯ ವಂಚಿತ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವನ್ನು ಮೂಡಿಸುವುದು ಮತ್ತು ಸೂಕ್ತ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ಉದ್ದೇಶಗಳನ್ನು ಸಾರ್ವಜನಿಕ ಮಾಹಿತಿ ಆಂದೋಲನ ಒಳಗೊಂಡಿದ್ದು ಇಂತಹ ಆಂದೋಲನಗಳ ಸದುಪಯೋಗವನ್ನು ಜನಸಾಮಾನ್ಯರು ಪಡೆಯಬೇಕು ಎಂದರು.

ದಾವಣಗೆರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ. ಯಶೋದಮ್ಮ ಹಾಲೇಶಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಫಲಾನುಭವಿಯ ಮನೆ ಬಾಗಿಲಿಗೆ ಸೇವೆ ಒದಗಿಸುವ ಮತ್ತುÀ ಯೋಜನೆಗಳ ಕುರಿತ ಮಾಹಿತಿ ನೀಡುವ ಉದ್ದೇಶವನ್ನು ಸಾರ್ವಜನಿಕ ಮಾಹಿತಿ ಆಂದೋಲನಗಳು ಹೊಂದಿವೆ ಎಂದರು. ಆಂದೋಲನದ ಅಂಗವಾಗಿ ನಗರದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಏರ್ಪಡಸಿದ್ದ ಬೃಹತ್ ರ್ಯಾಲಿಗೆ ಇವರು ಚಾಲನೆ ನೀಡಿದರು.

ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆ ಶ್ರೀಮತಿ ಸಹನಾ ರವಿ, ಜಿಲ್ಲಾ ಪಂಚಾಯತ್ ಸದಸ್ಯೆಯರಾದ ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀಮತಿ ಶಾರದಾ ಉಮೇಶ್ ನಾಯ್ಕ್,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಧಿಕಾರಿ ಶ್ರೀ. ಎಸ್ ಬಿ ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀ.ಟಿ.ಎಮ್ ಶಶಿಧರ್ , ಬೆಂಗಳೂರಿನ ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಶ್ರೀ.ಎಸ್ ವೆಂಕಟೇಶ್ವರ್ ಉಪಸ್ಥಿತರಿದ್ದರು.



ಕೃಷ್ಣರಾಜಪೇಟೆ. ಮಾನವರಾದ ನಾವುಗಳು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಮಧ್ಯದಲ್ಲಿಯೇ ಜೀವನ ನಡೆಸುವುದರಿಂದ ಕಡ್ಡಾಯವಾಗಿ ಕಾನೂನನ್ನು ಪಾಲಿಸಿ ಗೌರವಿಸಿ ಜೀವನ ನಡೆಸಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸತ್ಯವನ್ನು ಅರಿಯಬೇಕು ಎಂದು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಕುಮಾರ್ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸ್ವಾರ್ಥ, ಮೋಸ, ವಂಚನೆ ತುಂಭಿ ತುಳುಕುತ್ತಿದ್ದು ಜನಸಾಮಾನ್ಯರಲ್ಲಿ ಪ್ರಾಮಾಣಿಕತೆಯು ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೌಲ್ಯಗಳನ್ನು ಉಳಿಸಿ ನ್ಯಾಯವನ್ನು ಎತ್ತಿಹಿಡಿಯಲು ನ್ಯಾಯವಾಧಿಗಳು ಬದ್ಧತೆಯಿಂದ ವಾದವನ್ನು ಮಂಡಿಸಬೇಕು. ನೊಂದು ನ್ಯಾಯಾಲಯದ ಮೊರೆ ಹೋಗಿರುವ ಬಡ ಕಕ್ಷೀದಾರನಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿ ಮಾತು ಹೇಳಿದ ಕುಮಾರ್ ಬಡವರು ಶ್ರೀಮಂತರು ಎಂಬ ಬೇಧ-ಭಾವವಿಲ್ಲದಂತೆ ಎಲ್ಲ ವರ್ಗಗಳ ಜನರು ನ್ಯಾಯಾಲಯಕ್ಕೆ ಬಂದು ನ್ಯಾಯವನ್ನು ಪಡೆಯಬಹುದು. ಆದರೆ ಹಠ ಮತ್ತು ಪ್ರತಿಷ್ಠೆಗೆ ಕಟ್ಟು ಬಿದ್ದು ಸಣ್ಣ-ಪುಟ್ಟ ಕಾರಣಗಳಿಗೆ ನ್ಯಾಯಾಲಯದ ಮೆಟ್ಟಿಲನ್ನು ಹತ್ತಬಾರದು. ಗ್ರಾಮಗಳಲ್ಲಿಯೇ ಸಣ್ಣ-ಪುಟ್ಟ ವಿಚಾರಗಳನ್ನು ರಾಜಿ ಸಂಧಾನದ ಮೂಲಕ ತಮ್ಮ-ತಮ್ಮಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಮಾತನಾಡಿ ಭಾರತ ದೇಶದ ನ್ಯಾಯಾಲಯ ಹಾಗೂ ನೆಲದ ಕಾನೂನಿನ ಬಗ್ಗೆ ನಮ್ಮಜನರಿಗೆ ಇಂದಿಗೂ ಪೂಜ್ಯವಾದ ಗೌರವ ಭಾವನೆಯಿದೆ. ನ್ಯಾಯಾಲಯಗಳು ತಪ್ಪು ಮಾಡಿರುವ ವ್ಯಕ್ತಿಯೂ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ನ್ಯಾಯವನ್ನು ಎತ್ತಿಹಿಡಿದು ತಪ್ಪು ಮಾಡಿದರಿಗೆ ಉಗ್ರವಾದ ಶಿಕ್ಷೆಯನ್ನು ನೀಡುತ್ತಿರುವುದರಿಂದಾಗಿ ಜನರು ಕಾನೂನನ್ನು ಗೌರವಿಸಿ ಕಾನೂನಿಗೆ ಹೆದರಿಕೊಂಡು ಜೀವನ ನಡೆಸುತ್ತಿದ್ದಾರೆ. ಸಮಾಜದಲ್ಲಿ ಮೌಲ್ಯಗಳ ಉಳಿವಿಗಾಗಿ ಹಾಗೂ ನ್ಯಾಯವನ್ನು ಉಳಿಸಲು ನ್ಯಾಯಾಂಗ ಇಲಾಖೆಯು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಜನಸಾಮಾನ್ಯರು ಸಾದ್ಯವಾದಷ್ಟೂ ಕಾನೂನಿನ ಪರಿಮಿತಿಯೊಳಗೆ ಜೀವನ ನಡೆಸಬೇಕು. ದ್ವೇಶ-ಅಸೂಯೆಯನ್ನು ಬದಿಗಿಟ್ಟು ನಾವೆಲ್ಲರೂ ಒಂದು ಎಂಬ ಸ್ನೇಹ-ಸಹಬಾಳ್ವೆಯಿಂದ ಜೀವನ ನಡೆಸಬೇಕು. ಯುವ ವಕೀಲರು ಕಾನೂನಿನ ಬಗ್ಗೆ ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಬಂದು ಸಮರ್ಥವಾಗಿ ವಾದವನ್ನು ಮಂಡಿಸುವ ಮೂಲಕ ಬಡಜನರಿಗೆ ನ್ಯಾಯವನ್ನು ದೊರಕಿಸಿಕೊಡಬೇಕು. ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ಕೆ.ಆರ್.ಮಹೇಶ್, ಹಿರಿಯ ವಕೀಲರಾದ ಹೆಚ್.ರವಿ, ಬಂಡಿಹೊಳೆ ಗಣೇಶ್, ಎಸ್.ಡಿ.ಸರೋಜಮ್ಮ, ಆರ್.ಕೆ.ರಾಜೇಗೌಡ, ಡಿ.ಆರ್.ಮೋಹನ್, ಕೃಷ್ಣಕುಮಾರ್, ಸೋಮೇಗೌಡ. ಕೆ.ರಾಮೇಗೌಡ, ಕೆ.ಎನ್.ನಾಗರಾಜು, ಬಿ.ಆರ್.ಪಲ್ಲವಿ, ವಿ.ಕೆ.ಸ್ವರೂಪ, ಕೌಶಿಕ್, ಎಂ.ಎನ್.ರಾಮಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕೃಷ್ಣರಾಜಪೇಟೆ. ಗ್ರಾಮೀಣ ಪ್ರದೇಶದ ಜನರು ಆಸ್ತಿ ಸಂಪಾದನೆಯ ಕಡೆಗೆ ಗಮನ ನೀಡದೇ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡುವ ಮೂಲಕ ತಮ್ಮ ಮಕ್ಕಳನ್ನೇ ಸಮಾಜಕ್ಕೆ ಕೊಡುಗೆಯನ್ನಾಗಿ ನೀಡಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು. 
ಅವರು ಇಂದು ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯ ಅನ್ನಪೂರ್ಣ ಅಡುಗೆ ಮನೆಯನ್ನು ಉದ್ಘಾಟಿಸಿದ ನಂತರ ನಡೆದ ಸಭೆಯಲ್ಲಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಹಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದರೆ ನಾವು ಕಷ್ಟಪಟ್ಟು ಕಲಿತ ವಿದ್ಯೆಯ ಜ್ಞಾನದಿಂದ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಿ ಶ್ರೇಷ್ಠ ಸಾಧನೆಯನ್ನು ಮಾಡುವ ಮೂಲಕ ಹಣ ಮತ್ತು ಕೀರ್ತಿ ಎರಡನ್ನೂ ಪಡೆಯಬಹುದು. ಇಂದಿನ ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸುವ ಶಕ್ತಿಯು ಶಿಕ್ಷಣದ ಜ್ಞಾನಕ್ಕಿದೆಯಾದ್ದರಿಂದ ಗ್ರಾಮೀಣ ಜನರು ಹೆಣ್ಣು-ಗಂಡು ಎಂಬ ಭೇಧ-ಭಾವವನ್ನು ಮಾಡದೇ ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ವಿದ್ಯೆಯ ಜ್ಞಾನದ ಶಕ್ತಿಯನ್ನು ಕೊಡಿಸಿ ಸಾಧನೆ ಮಾಡಿ ಮುನ್ನಡೆಯುವಂತೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ ಶಾಸಕರು ಇಂದು ಸರ್ಕಾರಿ ಶಾಲೆಗಳಲ್ಲಿಯೇ ಉಚಿತವಾಗಿ ಗುಣಮಟ್ಟದ ಶಿಕ್ಷಣವು ಉಚಿತವಾಗಿ ದೊರೆಯುತ್ತಿರುವುದರಿಂದ ಪೋಷಕರು ಕಾನ್ವೆಂಟ್ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿ ಹೆಚ್ಚಿನ ಜ್ಞಾನವಂತರನ್ನಾಗಿ ಮಾಡಬೇಕು. ಸಕಾರವು ಮಕ್ಕಳಿಗೆ ಉಚಿತವಾಗಿ ನೀಡುವ ಬೈಸಿಕಲ್, ಮಧ್ಯಾಹ್ನದ ಬಿಸಿಯೂಟ, ಶಾಲಾ ಸಮವಸ್ತ್ರ, ವಿದ್ಯಾರ್ಥಿವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಶ್ರೇಷ್ಠಸಾಧನೆ ಮಾಡುವ ಮೂಲಕ ತಂದೆ ತಾಯಿಗಳು ಹಾಗೂ ಗುರು-ಹಿರಿಯರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಜಗಧೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಫ್ರಾಂಕ್ಲಿನ್ ಕ್ರಿಸ್ಟೋಫರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಹೆಚ್ಚುವರಿ ಕೊಠಡಿಗಳು ಹಾಗೂ ಶಾಲಾ ಮೈದಾನಕ್ಕೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಸಿ.ಚೆಲುವೇಗೌಡ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿಶಕಂಠೇಗೌಡ, ಸದಸ್ಯರಾದ ವಿಠಲಾಪುರ ಸುಬ್ಬೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಡಿ.ಮೋಹನ್, ಜಯರಾಮೇಗೌಡ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಮಾಜಿ ಅಧ್ಯಕ್ಷ ಪಾಪೇಗೌಡ, ಮುಖಂಡರಾದ ದೊದ್ದನಕಟ್ಟೆ ಪಾಂಡು, ಕಿರಣ್, ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ್, ಶಿವಲಿಂಗಪ್ಪ, ಶಾಲಾಭಿವೃಧ್ಧಿ ಸಮಿತಿಯ ರಾಜು, ನಾಗರಾಜು, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಬಿಇಓ ಜವರೇಗೌಡ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ, ಜಿ.ಪಂ ಕುಡಿಯುವ ನೀರು ವಿಭಾಗದ ಎಇಇ ರಮೇಶ್, ಸಹಾಯಕ ಎಂಜಿನಿಯರ್ ಮೋಹನ್‍ಕುಮಾರ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿರಿಯ ಉಪನ್ಯಾಸಕರಾದ ಡಿ.ಲಿಂಗರಾಜು ಸ್ವಾಗತಿಸಿದರು, ಬಸವರಾಜು ವಂದಿಸಿದರು. ಎಂ.ಮಲ್ಲಿಕಾರ್ಜುನ ಮತ್ತು  ರಾಜಾಚಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ರಂಜಿತ ಪ್ರಾರ್ಥಿಸಿದರು.

Saturday, 8 November 2014

ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣರವರಿಗೆ 65ನೇ ಹುಟ್ಟು ಹಬ್ಬ













ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣರವರಿಗೆ 65ನೇ   ಹುಟ್ಟು ಹಬ್ಬ
     
ಶೋಷಿತ ಸಮಾಜದ ಸಂಘಟನಾಕಾರ, ಜನಪರ ಹಿರಿಯ ರಾಜಕಾರಣಿ, ಸಮಾಜಿಕ ನ್ಯಾಯದ ಪ್ರತಿಪಾದಕ ಶೋಷಿತರ ದ್ವನಿ ಶ್ರೀ ಹೆಚ್.ಎಂ.ರೇವಣ್ಣರವರಿಗೆ 65 ನೇ ಹುಟ್ಟು ಹಬ್ಬದ ಶುಭಾಷಯಗಳು.
ರೇವಣ್ಣನವರು ಈ ಗಿನ ರಾಮನಗರ ಜಿಲ್ಲೆಯ ಐತಿಹಾಸಿಕ ನಾಡು ಮಾಗಡಿ ತಾಲ್ಲೋಕಿನ ಹೊಸಪೇಟೆ ಗ್ರಾಮದಲ್ಲಿ ಹಿಂದುಳಿದ ಕುರುಬ ಸಮಾಜದ ಮಾಗಡಪ್ಪ ಮತ್ತು ಲಕ್ಷಮ್ಮ ರವರ ಸುಪುತ್ರರಾಗಿ ದಿನಾಂಕ 8-11-1949ರಲ್ಲಿ ಜನಿಸಿದರು.
ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣ :- ಶಾಲಾ ಕಾಲೇಜುಗಳಲ್ಲಿಯೇ ವಿದ್ಯಾರ್ಥಿನಾಯಕರಾಗಿ ಬೆಳೆದ ಅವರು, ಉತ್ಸಾಹಿ ಯುವ ನಾಯಕರಾಗಿ, ತಮ್ಮ ಅಚ್ಚು ಮೆಚ್ಚಿನ ಕಬ್ಬಡಿ ಆಟಗಾರರಾಗಿ, ಕುಸ್ತಿ ಪಟುವಾಗಿಯೂ ಚಿಕ್ಕಂದಿನಿಂದಲೂ ನಾಟಕ ಕಾರರಾಗಿ ಅಭಿನಯಿಸಿ ಜನಪ್ರಿಯತೆ ಪಡೆದರು. ಕಾಂಗ್ರೆಸ್ ಕ್ಷದಲ್ಲಿ ಸಕ್ರಿಯವಾಗಿ ದುಡಿದು ಹಂತ ಹಂತವಾಗಿ ಮೇಲೇರಿದವರು ರೇವಣ್ಣನವರು.
ಸಾಂಸ್ಕøತಿಕ ಸಂಘಟನೆ ಮತ್ತು ಯುವ ಮುಖಂಡರಾಗಿ ರೇವಣ್ಣ:- ಸಮಾಜದಲ್ಲಿ ಯುವ ನಾಯಕರಾಗಿ ಗುರುತಿಸಿಕೊಂಡ ರೇವಣ್ಣ ಉತ್ತಮವಾದ ಜನಪ್ರಿಯ ನಾಯಕರಾಗಿ ಬೆಳೆದರು. ಸಾಸ್ಕøತಿಕ ಸಂಘಟನೆಗಳ ಮೂಲಕ ಬೆಳಕಿಗೆ ಬಂದ ನಾಯಕರಾದ ಇವರು ಕಾಂಗ್ರೆಸ್ ವಲಯಕ್ಕೆ ಚಿರಪರಿಚಿತರಾದರು, ಹೀಗೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕಸ್ತ ಭಕ್ತ ಹನುಮಂತನಂತೆ ಮಹಾ ಸ್ವಾಭಿಮಾನಿಯಾಗಿ ಪ್ರಮಾಣಿಕ ನಾಯಕರಾದರು.
ಕಾಂಗ್ರೆಸ್ ಪಕ್ಷದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲಾ ನಾಯಕರೊಂದಿಗೆ ನಿಕಟ ಸಂಪರ್ಕ ಹಾಗೂ ಒಳ್ಳೆಯ ಸಂಬಂಧವನ್ನು ರೇವಣ್ಣ ಹೊಂದಿದ್ದಾರೆ. ತಮ್ಮನ್ನು ತಾವು ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡದ್ದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ನೇಮಿಸಿರುವುದು ರೇವಣ್ಣನವರು ಒಬ್ಬ ವ್ಯಕ್ತಿಯಲ್ಲ ಪ್ರಬಲವಾದ ಶಕ್ತಿ ಎಂಬುದು ಸಾಭೀತಾಗಿದೆ.
ನಮ್ಮದೇಶ ನಮ್ಮರಾಜ್ಯ ರಾಜಿ ಪ್ರಧಾನವಾದುದು, ಇಂತಹ ಸಂದರ್ಭದಲ್ಲಿ ಮಾಗಡಿ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರಾದ ಕುರುಬ ಸಮಾಜದ ಹೆಚ್.ಎಂ.ರೇವಣ್ಣರವರು ಸ್ವಂತ ಬಲದಿಂದ ಮೇಲೆ ಬಂದಿದ್ದಾರೆ.ಈ ರೀತಿಯಲ್ಲಿ ಜಾತಿ ಬೆಂಬಲವಿಲ್ಲದೆ ಪ್ರತಿ ಚುನಾವಣೆಯಲ್ಲಿ ಗೆದ್ದು ಬಂದವರಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮತ್ತು ಸ್ಪೀಕರ್ ರಮೇಶ್‍ಕುಮಾರ್.
ರೇವಣ್ಣನವರು ಜಾತ್ಯಾತೀತ ವ್ಯಕ್ತಿಯಾಗಿದ್ದು, ಮಾಗಡಿ ಕ್ಷೇತ್ರದಿಂದ ಗೆಲ್ಲುವುದು ಸಾಧ್ಯವಾಗುತ್ತಿದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜನ್ಮ ಸ್ಥಳದಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದಾರೆ.
ನಿತ್ಯ ಸಚಿವ ರೇವಣ್ಣ:- 1989ರಲ್ಲಿ ಮತ್ತು 1999 ರಲ್ಲಿ ಶಾಸಕರಾಗಿ ಮಂತ್ರಿಗಳಾಗಿ ಹಲವಾರು ಪ್ರಬಲ ಖಾತೆಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿ ಜನಪ್ರಿಯರಾಗಿ ಮಡಿಕೇರಿಯಿಂದ ದೂರದ ಬೀದರ್-ಬಳ್ಳಾರಿ ರಾಯಚೂರು-ವಿಜಾಪುರ-ಬೆಳಗಾವಿ ಹೀಗೆ ಉತ್ತರ ಕರ್ನಾಟಕದ ಬಹುದೂರದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಚುನಾವಣೆಯಲ್ಲಿ ಸೋತರು ಸಹ ಎದೆಗುಂದದೆ ತಮ್ಮ ಸಮಾಜ ಸೇವೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಮಾಗಡಿ ಕ್ಷೇತ್ರದ ಮತದಾರರು ಹಾಗೂ ಹೆಬ್ಬಾಳ ಕ್ಷೇತ್ರದ ಮತದಾರರು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ರೇವಣ್ಣರವರ ಬಳಿಗೆ ಬರುತ್ತಾರೆ.
ಆದರೆ ರೇವಣ್ಣರವರು ನಿತ್ಯ ಬರುವ ತಮ್ಮ ಅಭಿಮಾನಿಗಳಿಗೆ ನಗು ಮುಖದಿಂದ ಮಾತನಾಡಿಸಿ, ಅವರ ಕೆಲಸಗಳನ್ನು ಮಾಡಿ ಕೊಡುತ್ತಾರೆ. ಅಧಿಕಾರದಲ್ಲಿ ಇರಲಿ-ಇಲ್ಲದೇ ಇರಲಿನಿರಂತರವಾಗಿ ಜನರ ಸಮಸ್ಯೆಗಳನ್ನು ಆಲಿಸುತ್ತಾ ಜನ ಸೇವೆಗಾಗೆಯೇ ಹುಟ್ಟಿ ಬಂದಿದ್ದಾರೆ.
ಸಿದ್ದರಾಮಯ್ಯರವರ ಸರ್ಕಾರಕ್ಕೆ ಗೌರವ:-ಹೆಚ್.ಎಂ. ರೇವಣ್ಣನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಅವರ ಸರ್ಕಾರಕ್ಕೆ ಗೌರವ ಹೆಚ್ಚಾಗುತ್ತದೆ. ಅವರ ಜನಪ್ರಿಯ ಕಾರ್ಯಕ್ರಮಗಳನ್ನು ರೇವಣ್ಣನವರು ಸಮರ್ಥನೆ ಮಾಡಿಕೊಳ್ಳುವ ಮೂಲಕ ನಾಡಿನ ಸಮಸ್ತ ಜನತೆಗೆ ಜನಪರ ರೈತಪರ, ಪ್ರಗತಿಪರ ಬಡವರ ಕೆಲಸಗಳನ್ನು ತಿಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ನಾಡಿನ ಸಮಸ್ತ ಜನತೆಯ ಪರವಾಗಿ ರೇವಣ್ಣರವರಿಗೆ 65ನೇ ಹುಟ್ಟು ಹಬ್ಬದ ಶುಭಾಷಯಗಳು.
ಸಭೆ- ಸಮಾರಂಭಗಳಲ್ಲಿಯೂ ಸಹ ಜನಪರ ಕಾರ್ಯಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಮೂಲಕ ಜನಪ್ರಿಯ ನಾಕರಾಗಿದ್ದಾರೆ. ಇಂತಹ ನಿಷ್ಠೆಯನ್ನು ಹೊಂದಿರುವ ಪ್ರಾಮಾಣಿಕ ವ್ಯಕ್ತಿಯಾದ ಹೆಚ್.ಎಂ.ರೇವಣ್ಣರವರಿಗೆ ಸಂಪುಟ ಸೇರ್ಪಡೆ ಗೊಳಿಸುವುದರ ಮೂಲಕ ರಾಜ್ಯ ಸರ್ಕಾರಕ್ಕೆ ಯಶಸ್ಸು ಖಂಡಿತ ಸಿಗುತ್ತದೆ.
ಹೆಚ್.ಎಂ.ರೇವಣ್ಣನವರು 8-11-2014ರಂದು 65ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಇವರಿಗೆ ಮುಂದೆ ಇನ್ನಷ್ಟು ಉಜ್ವಲವಾದ ಭವಿಷ್ಯ ದೊರೆಯಲಿ-ರಾಜ್ಯಮಾತ್ರವಲ್ಲದೆ ದೇಶವೇ ಮೆಚ್ಚುವಂತಹ ಜನನಾಯಕರಾಗಲಿ ಎಂದು ಒಕ್ಕೊರಲಿನಿಂದ ಶುಭ ಕೋರುತ್ತೇವೆ

            ಸಫಾಯಿ ಕರ್ಮಚಾರಿಗಳ ಕಲ್ಯಾಣ ಕಾರ್ಯಕ್ರಮ ಅನುಷ್ಠಾನದಲ್ಲಿ ನಿರ್ಲಕ್ಷ ಸಹಿಸದು: ಶಿವಣ್ಣ 
ಮೈಸೂರು, ನವೆಂಬರ್ 8. ಸಫಾಯಿ ಕರ್ಮಚಾರಿಗಳ ಸಮಗ್ರ ಏಳಿಗೆಗೆ ಪೂರಕವಾಗಿರುವ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ವಹಿಸಬಾರದೆಂದು ರಾಷ್ಟ್ರೀಯ ಸಫಾಯಿ ಕವರ್iಚಾರಿಗಳ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ತಾಕೀತು ಮಾಡಿದರು.
ನಗರದ ಸರ್ಕಾರಿ ಅತಿಥಿಗೃಹದ ಸಭಾಂಗಣದಲ್ಲಿ ಶುಕ್ರವಾರ ಸಫಾಯಿ ಕರ್ಮಚಾರಿಗಳ ಸಾಮಾಜಿಕ ಆರ್ಥಿಕ, ಹಾಗೂ ಸೇವಾ ಇತರೆ ಪರಿಸ್ಥಿತಿ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಚಾರಿಗಳ ಕುಟುಂಬಕ್ಕೆ ಅಗತ್ಯವಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ನಿಗದಿಯಾಗಿರುವ ಶೇ. 22.75ರ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರಿಗೆ ಕನಿಷ್ಠ 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಬೇಕು. ಸುರಕ್ಷತಾ ಕೈಗವಸು, ಸಮವಸ್ತ್ರವಿಲ್ಲದೆ ಕೆಲಸಕ್ಕೆ ನಿಯೋಜಿಸಬಾರದು ಎಂದು ಹೇಳಿದರು.
ಕಾರ್ಮಿಕರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನವನ್ನು ಸಫಾಯಿ ಕರ್ಮಚಾರಿಗಳಿಗೆ ನೀಡಬೇಕು. ಹೊರ ಗುತ್ತಿಗೆ ಪಡೆದಿರುವವರೂ ಸಹ ಇದೇ ಸೂಚನೆಯನ್ನು ಪಾಲಿಸಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದ ಅಧ್ಯಕ್ಷರು ರಾಜ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈನಂದಿನ ವೇತನ ಗುತ್ತಿಗೆ ಕಾರ್ಮಿಕರ ಕೆಲಸವನ್ನು ಸಕ್ರಮಗೊಳಿಸಲು ಸರ್ಕಾರ ಮುಂದಾದಂತೆ ಸಫಾಯಿ ಕರ್ಮಚಾರಿಗಳ ಕೆಲಸವನ್ನು ಇದೇ ಮಾದರಿಯಲ್ಲಿ ಸಕ್ರಮಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದರು.     
ಸಮಾಜ ಕಲ್ಯಾಣ ಹಾಗೂ ಇತರೆ ಇಲಾಖೆಗಳು ನಡೆಸುತ್ತಿರುವ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಬಹಲ ಕಡಿಮೆ ವೇತನ ನೀಡಲಾಗುತ್ತಿರುವುದು ನನ್ನ ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಅಧ್ಯಕ್ಷರು ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಫಾಯಿ ಕರ್ಮಚಾರಿಗಳು ಕಷ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ  ಜಾರಿಗೊಳಿಸುವಂತೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಕೋರಲಾಗಿದೆ ಎಂದರು.
ಸಫಾಯಿ ಕರ್ಮಚಾರಿಗಳು ನಿರ್ವಹಿಸುವ ಕೆಲಸಕ್ಕೆ ಬೇಕಾಗುವ ಸುರಕ್ಷಾ ಕಿಟ್, ಆರ್ಥಿಕ ನೆರವು ಹಾಗೂ ಇತರೆ  ಸವಲತ್ತನ್ನು ಒಂದೇ ದಿನ ನೀಡಿ ಅನುಕೂಲ ಕಲ್ಪಿಸುವ ವಿಶೇಷ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯಲ್ಲಿ ಆಯೋಜಿಸಬೇಕು.    ಜಿಲ್ಲೆಯ ವಿವಿಧ ತಾಲೂಕಿನ ಸಫಾಯಿ ಕರ್ಮಚಾರಿಗಳನ್ನು ಆಹ್ವಾನಿಸಿ ಅವಶ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಮೈಸೂರು ಮಹಾನಗರ ಪಾಲೀಕೆ ಆಯುಕ್ತ ಬೆಠಸೂರಮಠ, ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಸರಸ್ವತಿ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
                                        ಸಾರ್ವಜನಿಕ ಮಾಹಿತಿ ಆಂದೋಲನ
                              ದಾವಣಗೆರೆ, ನವೆಂಬರ್ 08, 2014

ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕÀ ವಾರ್ತಾ ಶಾಖೆ ಇತರ ಮಾಧ್ಯಮ ಘಟಕಗಳಾದ  ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ, ಸಂಗೀತ ಮತ್ತು ನಾಟಕ ವಿಭಾಗ, ಚಲನಚಿತ್ರ ವಿಭಾಗ, ದೂರದರ್ಶನ ಮತ್ತು ಆಕಾಶವಾಣಿಗಳ ಸಹಯೋಗದೊಂದಿಗೆ ಇದೇ ನವೆಂಬರ್ 10 ರಿಂದ 12ರ ವರೆಗೆ ದಾವಣಗೆರೆಯ ಸರ್ಕಾರಿ ಬಾಲಕರ ಪ್ರೌಢ ಶಾಲಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಆಯೋಜಿಸಲಿದೆ. ದಿನಾಂಕ 10-11-2014 (ಸೋಮವಾರ) ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಬಾಲಕರ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ಶ್ರೀ. ಜಿ.ಎಮ್.ಸಿದ್ದೇಶ್ವರ ಅವರು ಆಂದೋಲನವನ್ನು ಉದ್ಘಾಟಿಸಲಿದ್ದಾರೆ. 
ಸಾರ್ವಜನಿಕ ಮಾಹಿತಿ ಆಂದೋಲನದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯುಳ್ಳ ವಿಚಾರಗಳ ಕುರಿತು ಕಾರ್ಯಾಗಾರಗಳು, ಮುಕ್ತ ಸಾರ್ವಜನಿಕ ಚರ್ಚೆಗಳು ನಡೆಯಲಿವೆ. ಸಾರ್ವಜನಿಕ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಡಲು ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಬೃಹತ್ ವಸ್ತು ಪ್ರದರ್ಶನ ನಡೆಯಲಿದೆ. ಮಾಹಿತಿ ನೀಡುವ ಮತ್ತು ಸೇವೆಗಳನ್ನು ದೊರಕಿಸುವ ವ್ಯವಸ್ಥೆಯನ್ನು ಬಲಗೊಳಿಸುವ, ವೃದ್ಧಿಸುವ ಉದ್ದೇಶ ಈ ಆಂದೋಲನದ್ದಾಗಿದೆ. 
ಆಂದೋನದ ಎರಡನೆಯ ಮತ್ತು ಮೂರನೆಯ ದಿನಗಳಾದ ದಿನಾಂಕ 11-11-2014 ಮತ್ತು 12-11-2014 ರಂದು ಸರಕಾರದ ವಿವಿಧ ಯೋಜನೆಗಳಾದ ಪಡೇ ಭಾರತ್ ಬಡೇ ಭಾರತ್ ,ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ, ಶಾಲಾ ದರ್ಪಣ, ಪ್ರಧಾನ ಮಂತ್ರಿ ಜನ ಧನ ಯೋಜನೆ,  ಸಂಸದ ಆದರ್ಶ ಗ್ರಾಮ ಯೋಜನೆ, ಸ್ವಚ್ಛ ಭಾರತ ಅಭಿಯಾನ,  ಪ್ರಧಾನ ಮಂತ್ರಿ ಕಿಸಾನ್ ಸಿಂಚಯಿ ಯೋಜನೆ  ಇತ್ಯಾದಿಗಳ ಕುರಿತು ವಿಷಯ ಪರಿಣತರಿಂದ ವಿಚಾರ ಸಂಕಿರಣಗಳು ನಡೆಯಲಿವೆ.
ದಾವಣಗೆರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್É ಈ ಸಾರ್ವಜನಿಕ ಮಾಹಿತಿ ಆಂದೋನದ ಬೃಹತ್ ಭಾಗಿದಾರರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ಬ್ಯಾಂಕ್‍ಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸಾರ್ವಜನಿಕ ಮಾಹಿತಿ ಆಂದೋನದ ಇತರ ಭಾಗಿದಾರರಾಗಿದ್ದಾರೆ. ದಿನಾಂಕ 12-11-2014ರಂದು ಅಪರಾಹ್ನ 12:30ಕ್ಕೆ ಆಂದೋಲನದ ಸಮಾರೋಪ ಸಮಾರಂಭ ದಾವಣಗೆರೆ ಸರ್ಕಾರಿ ಬಾಲಕರ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ.

Monday, 3 November 2014


 ಫಲಾನುಭವಿಗಳ ಆಯ್ಕೆಯಲ್ಲಿ ಸ್ವಾರ್ಥಬೇಡ: ಡಾ. ಎಂ.ಎಚ್.ಅಂಬರೀಷ್
ಮಂಡ್ಯ ನ.3 ಗ್ರಾಮ ಪಂಚಾಯಿತಿಯಿಂದ ಬಡವರಿಗೆ ವಸತಿ ಸೌಲಭ್ಯಗಳನ್ನು ನೀಡಲು ಫಲಾನುಭವಿಗಳ ಆಯ್ಕೆ ಮಾಡುವಾಗ ಸ್ವಾರ್ಥ ಇರಬಾರದು ಎಂದು ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್.ಅಂಬರೀಷ್ ಅವರು ಹೇಳಿದರು.
ಸೋಮವಾರ ಮಂಡ್ಯ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡೊಡ್ಡಗರುಡನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿರ್ಮಿಸಿರುವ ರಾಜೀವ್‍ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ವಸತಿ ಸೌಲಭ್ಯ ಕೊಡುವ ಅವಕಾಶ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೂ ದೊರೆತಿದೆ. ಈ ಸೌಲಭ್ಯವನ್ನು ಅಣ್ಣ-ತಮ್ಮಂದಿರಿಗೆ ಹಾಗೂ ಸಂಬಂಧಿಗಳಿಗೆ ನೀಡುವ ಬದಲು ನಿಜವಾದ ಅರ್ಹರಿಗೆ ನೀಡಬೇಕು ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಸಾಧ್ಯವಾದಷ್ಟು ಎಲ್ಲಾ ರೀತಿಯ ಕೆಲಸಗಳನ್ನು ಮಾಡಲು ಸಿದ್ಧನಿದ್ದೇನೆ. ನಮ್ಮ ಮೇಲೆ ಇಟ್ಟರುವ ನಿರೀಕ್ಷೆಗಳನ್ನು ಸುಳ್ಳು ಮಾಡುವುದಿಲ್ಲ ಎಂದು ಹೇಳಿದರು.
ಬಸರಾಳು ಭಾಗದ ಕೆರೆಗಳಿಗೆ ನೀರು ತುಂಬಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ, ಈ ವರ್ಷ ಸಾಧ್ಯವಾದಷ್ಟು ಕೆರೆ ತುಂಬಿಸಿದ್ದೇವೆ. ಈ ಭಾಗದಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಇನ್ನೂ ಹಲವಾರು ಸಮಸ್ಯೆಗಳು ಇವೆ. ದೊಡ್ಡಗರುಡನಹಳ್ಳಿಗೆ ಆಸ್ಪತ್ರೆ ಬೇಕು ಎಂದು ಕೇಳಿದ್ದೀರಿ. ಆಸ್ಪತ್ರೆ ಮಂಜೂರು ಮಾಡಿಸಲು ಕ್ರಮಕೈಗೊಳ್ಳಲಾಗುವುದು. ಗುಡಿಗೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲ ಆಗುವಂತೆ ಬಿ.ಹೊಸೂರಿನಲ್ಲಿ ನಾಡಕಚೇರಿ ಬೇಕು ಎಂದು ಮನವಿ ಬಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕ್ರಮವಹಿಸಲು ತಿಳಿಸಲಾಗಿದೆ. ನಿಮ್ಮೆಲ್ಲಾ ಬೇಡಿಕೆಗಳ ಈಡೇರಿಕೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಗುಡಿಗೇನಹಳ್ಳಿ, ಚಾಕನಹಳ್ಳಿ, ರಾಮೇಗೌಡನಕೊಪ್ಪಲು, ಈರೇಗೌಡನಕೊಪ್ಪಲು ಗ್ರಾಮಗಳನ್ನು ಸಂಪರ್ಕಿಸುವ 5.79 ಕಿ.ಮೀ. ಉದ್ದದ ರಸ್ತೆ ಸುಧಾರಣೆಗಾಗಿ ಪಿಎಂಜಿಎಸ್‍ವೈ-2 ಯೋಜನೆಯಡಿ 215.8 ಲಕ್ಷ ರೂ.ಗಳ ಕಾಮಗಾರಿ ಕೈಗೆತ್ತುಕೊಳ್ಳಲಾಗಿದ್ದು, ಸಚಿವರು ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಮಂಡ್ಯ-ನಾಗಮಂಗಲ ರಸ್ತೆಯಿಂದ ಹುನಗನಹಳ್ಳಿಗೆ ಹೋಗುವ ಮಾರ್ಗದಲ್ಲಿ 60 ಲಕ್ಷ ರೂ.ಗಳಲ್ಲಿ ಸೇತುವೆ ನಿರ್ಮಿಸಲು ಗುದ್ದಲಿಪೂಜೆ ನೆರವೇರಿಸಿದರು.  ಬಸರಾಳು ಐ.ಟಿ.ಐ ಹಾಗೂ ಇತರೆ ಕಾಲೇಜು ಕಟ್ಟಡಗಳ ಕಾಮಗಾರಿ ವೀಕ್ಷಣೆ ಮಾಡಿದರು. ಚಂದಗಾಲು ಗ್ರಾಮದಲ್ಲಿ ನಿರ್ಮಿಸಿರುವ ರಾಜೀವ್‍ಗಾಂಧೀ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಬಸರಾಳು ಹೋಬಳಿ ಚಿಕ್ಕಬಳ್ಳಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಮಂಡ್ಯ ನಗರದಲ್ಲಿ ಬನ್ನೂರು ರಸ್ತೆ ಹಾಗೂ ಗುತ್ತಲು ರಸ್ತೆಯಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ಮಾಡಿದರು.
ಸಚಿವರ ಪ್ರವಾಸದ ವೇಳೆ ಮಂಡ್ಯ ಉಪ ವಿಭಾಗಾಧಿಕಾರಿ ಅರುಳ್‍ಕುಮಾರ್, ತಹಶೀಲ್ದಾರ್ ವಿ. ಪ್ರಿಯದರ್ಶಿನಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಗೋಪಾಲ್, ಕುಡಿಯುವ ನೀರು ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಚೆನ್ನಯ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಚಂದ್ರಹಾಸ್, ಮತ್ತಿತರರು ಉಪಸ್ಥಿತರಿದ್ದರು.

                           ನ.7 ರಂದು ಜಿ.ಪಂ. ಸಾಮಾನ್ಯ ಸಭೆ
    ಮಂಡ್ಯ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ನವೆಂಬರ್ 7ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಟಿ.ಮಂಜುಳಾ ಪರಮೇಶ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.11 ರಂದು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
     ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) 2014-15ನೇ ಸಾಲಿನ ಅಕ್ಟೋಬರ್ 2014ರ ಅಂತ್ಯದವರೆಗಿನ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನವೆಂಬರ್ 11 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ತರಬೇತಿ: ಅರ್ಜಿ ಆಹ್ವಾನ
       ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದ್ಯಾವಂತ ನಿರುದ್ಯೋಗಿಗಳಿಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಫಂಡಮೆಂಟಲ್, ಎಂ.ಎಸ್. ಆಫೀಸ್, ಇಂಟರ್‍ನೆಟ್ ಮತ್ತು ಡಿಟಿಪಿ, ಲಘುವಾಹನ ಚಾಲನಾ ತರಬೇತಿ  ಹಾಗೂ ಭಾರಿವಾಹನ ಚಾಲನಾ ತರಬೇತಿಗಳನ್ನು ಉಚಿತವಾಗಿ ಪಡೆಯಲು  ಅರ್ಜಿ ಆಹ್ವಾನಿಸಲಾಗಿದೆ.
      ನಿಗದಿತ ಅರ್ಜಿ ನಮೂನೆಗಳನ್ನು ಮದ್ದೂರು ಪುರಸಭಾ ಕಚೇರಿಯಿಂದ ಪಡೆದು ಸೂಕ್ತ ದಾಖಲೆಗಳೊಂದಿಗೆ ನವೆಂಬರ್ 15 ರಂದು ಸಂಜೆ 5.30 ಗಂಟೆಯೊಳಗೆ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಮದ್ದೂರು ಪುರಸಭೆ ಕಚೇರಿಯನ್ನು ಸಂಪರ್ಕಿಸುವಂತೆ ಮದ್ದೂರು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



    
  ಮುಖ್ಯಮಂತ್ರಿ ಸಿದ್ದರಾಮಯ್ಯರವರ  ಪ್ರವಾಸ ಕಾರ್ಯಕ್ರಮ.
    ಮೈಸೂರು.ನ.03.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್4 ಹಾಗೂ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ನವೆಂಬರ್ 4 ರಂದು ಬೆಳಿಗ್ಗೆ 11-30 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 5 ಬೆಳಿಗ್ಗೆ 11 ಗಂಟೆಗೆ ಹೊಸ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯ ನೂತನ ಸ್ನಾತಕೋತ್ತರ ವಿಭಾಗವನ್ನು ಉದ್ಘಾಟಿಸುವರು. ಮಧ್ಯಾಹ್ನ 2 ಗಂಟೆಗೆ ಜಗನ್ಮೋಹನ ಪ್ಯಾಲೇಸ್‍ನಲ್ಲಿ ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆ ವಿಭಜನೆಯ 75 ವರ್ಷ ತುಂಬಿರುವ ಸಂದರ್ಭದಲ್ಲಿ ಆಯೋಜಿಸಿರುವ ವಜ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಮೈಸೂರು ವಕೀಲರ ಸಂಘದ ಕಟ್ಟಡದ ಶಂಕುಸ್ಥಾಪನೆಯಲ್ಲಿ ಭಾಗವಹಿಸಿದ ನಂತರ ರಾತ್ರಿ 7 ಗಂಟೆಗೆ  ಬೆಂಗಳೂರಿಗೆ  ತೆರಳುವರು.
  ದೌರ್ಜನ್ಯ ಪ್ರಕರಣ: ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ


ಮೈಸೂರು.ನ.03.ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗಕ್ಕೆ ಸೇರಿದ ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರ ವಿತರಣೆಯಾಗಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಸೂಚಿಸಿದರು.
     ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ವರ್ಗಕ್ಕೆ ಸೇರಿದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
 ಯಾವುದೇ ಕಾರಣಕ್ಕೂ ಪರಿಹಾರ ವಿಳಂಬವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗಕ್ಕೆ ಸೇರಿದ ಜನರ ಮೇಲೆ ನಡೆಯುವ ದೌರ್ಜನ್ಯ ಗಂಭೀರವಾದುದು.  ದೌರ್ಜನ್ಯ ಪ್ರಕರಣದಡಿ ದಾಖಲಾದ ಅಪರಾಧಗಳಲ್ಲಿ ಸಂತ್ರಸ್ಥರಿಗೆ ಮಂಜೂರು ಮಾಡಬೇಕಾದ ಪರಿಹಾರ ಮೊತ್ತವನ್ನು ನಿಯಮಾನುಸಾರ ಮಂಜೂರು ಮಾಡಬೇಕು ಮತ್ತು ರೂ. 60000 ವರೆಗೆ ಪರಿಹಾರ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದ ಜಿಲ್ಲಾಧಿಕಾರಿ ದೌರ್ಜನ್ಯ ಪ್ರಕರಣ ದಾಖಲಿಸಿ ಚಾರ್ಜ್‍ಶೀಟ್ ಕಳುಹಿಸಿದ ಕೊಡಲೇ ಮಂಜೂರು ಮಾಡಬೇಕಾದ ಒಟ್ಟು ಮೊತ್ತದಲ್ಲಿ ಶೇ.25 ಪರಿಹಾರ ಮೊತ್ತವನ್ನು ಸಂತ್ರಸ್ಥರಿಗೆ ನೀಡಬೇಕು ಮತ್ತು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಅರೋಪಿಗೆ ಶಿಕ್ಷೆ ಆದಲ್ಲಿ ಉಳಿಕೆ ಶೇ.75 ಪರಿಹಾರ ಹಣವನ್ನು ಮಂಜೂರು ಮಾಡಬೇಕು ಎಂದರು.
      ದೌರ್ಜನ್ಯಕೊಳ್ಳಗಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂತ್ರಸ್ಥರು, ಸಾಕ್ಷಿದಾರರಿಗೆ ಹಾಗೂ ಇನ್ನಿತರರು ನ್ಯಾಯಾಲಯದ ವಿಚಾರಣೆಗೆ ಹಾಗೂ ತನಿಖೆ ಸಮಯದಲ್ಲಿ ಹಾಜರಾದಗ ಪ್ರಯಾಣಭತ್ಯೆ, ದಿನಭತ್ಯೆ, ಆಹಾರ ಭತ್ಯೆ ಮತ್ತು  ವೈದ್ಯಕೀಯ ವೆಚ್ಚಗಳನ್ನು ಮಂಜೂರು ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ನಿಯಾಮನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ತಿಳಿಸಿದರು. 
 ಅಸ್ಪøಶ್ಯತೆ ಆಚರಣೆ ಮತ್ತು ದೌರ್ಜನ್ಯ ಪ್ರಕರಣ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಅರಿವಿನ ಕೊರತೆ ಇರುವುದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಒಟ್ಟಾಗಿ ಒಂದು ದಿನದ ಕಾರ್ಯಗಾರವನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ದೌರ್ಜನ್ಯಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕೇಂದ್ರ ಹಾಗೂ ರಾಜ್ಯ ಆಯೋಗ್ಯಗಳು ಗಂಭೀರವಾಗಿ ಪರಿಗಣಿಸುತ್ತಿದೆ. ಇಂತಹ ಪ್ರಕರಣಗಳಲ್ಲಿ ತಪ್ಪುವೆಸಗಿದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷೆಯಾಗಬೇಕು. ಆಗಾದರೆ ಮಾತ್ರ ದೌರ್ಜನ್ಯಕ್ಕೊಳಗಾದವರಿಗೆ ಕಾನೂನಿನ ಮೇಲೆ ನಂಬಿಕೆ ಹೆಚ್ಚಾಗುತ್ತದೆ ಎಂದರು. 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಕರೆ ಮಾತನಾಡಿ ಪೊಲೀಸ್ ಇಲಾಖೆÀಯು ದೌರ್ಜನ್ಯ, ಅಸ್ಪøಶ್ಯತೆ ಹಾಗೂ ಸಮಾಜದಲ್ಲಿರುವ ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗಕ್ಕೆ ಸೇರಿದ ಜನರ ವಿರುದ್ದ ಆಚರಿಸುವ ಅನಿಷ್ಟ ಪದ್ದತಿ ವಿರುದ್ದ ದೂರು ಬಂದಲ್ಲಿ ನಿದ್ರ್ಯಾಕ್ಷಿಣ್ಯವಾಗಿ ಕ್ರಮವಹಿಸುತ್ತಿದೆ. ಪ್ರಕರಣ ದಾಖಲೆ ಮಾಡುವಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗದ ಜನರ ದೌರ್ಜನ್ಯ ಗಂಭೀರವಾದ ವಿಷಯ ಎಂದರು. 
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಜನವರಿ 1, 2014 ರಿಂದ ಅಕ್ಟೋಬರ್ 31, 2014ರ ವರೆಗೆ ಒಟ್ಟು 94 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆÉ. ಅದರಲ್ಲಿ 2 ಕೊಲೆ, 3 ಅತ್ಯಾಚಾರ, 7 ಮಹಿಳೆಯ ಮರ್ಯಾದೆಗೆ ಭಂಗ ಉಂಟು ಮಾಡಿರುವುದು, 82 ಹಲ್ಲೆ, ಜಾತಿ ನಿಂದನೆಯಾಗಿದ್ದು, 5 ಪ್ರಕರಣಗಳಲ್ಲಿ ಬಿ ವರದಿ ಬಂದಿವೆÉ ಎಂದರು.
ಕಂದಾಯ ಉಪ ವಿಭಾಗದ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಯವರ ಅಧ್ಯಕ್ಷತೆಯಲ್ಲಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚನೆಯಾಗಿಬೇಕು ಮತ್ತು ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ನಡೆಸಬೇಕು ಎಂದು ತಿಳಿಸಿದರು.
ಶಾಸಕರಾದ ಚಿಕ್ಕಮಾದು, ಸಾ.ರಾ.ಮಹೇಶ್, ಮಂಜುನಾಥ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ನಿಂಗರಾಜು ಮಲ್ಲಾಡಿ, ಗಾಯಿತ್ರಿ ಮೋಹನ್, ದೇವಳ್ಳಿ ಸೋಮಶೇಖರ್, ಪ್ರಸನ್ನ, ಎಸ್.ರಾಮು. ಡಿ.ಸಿ.ಪಿ ರಾಜಣ್ಣ, ಉಪ ವಿಭಾಗಾಧಿಕಾರಿ ಜಗದೀಶ್ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.        
ಪರವಾನಗಿ ಪಡೆಯದ ಪ್ಯಾಕೇಜ್ ಕುಡಿಯುವ ನೀರಿನ ಘಟಕ ವಿರುದ್ದ ಕ್ರಮ
ಮೈಸೂರು.ನ.03. ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ಮೈಸೂರು ಜಿಲ್ಲೆಯಲ್ಲಿ ISI ಮತ್ತು ಈSSಂ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ) ಪರವಾನಗಿ ಪಡೆಯದೇ ಪ್ಯಾಕೇಜ್ ಕುಡಿಯುವ ನೀರಿನ ವ್ಯಾಪಾರ ವಹಿವಾಟು ನಡೆಸುವವರ ವಿರುದ್ದ ಕ್ರಮವಹಿಸಲಾಗುವುದು.  ಈಗಾಗಲೇ ದೂರಿನ ಹಿನ್ನೆಲ್ಲೆಯಲ್ಲಿ 12 ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳನ್ನು ಮುಚ್ಚÀಲಾಗಿದೆ.
   ಯಾವುದೇ ಪ್ಯಾಕೇಜ್ ಕುಡಿಯುವ ನೀರಿನ ಘಟಕವು ISI ಮತ್ತು ಈSSಂ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ) ಪರವಾನಗಿ ಪಡೆಯದೇ ನೀರಿನ ವ್ಯಾಪಾರ ನಡೆಸುವಂತಿಲ್ಲ. ISI ಮತ್ತು ಈSSಂ ನಿಯಮಾನುಸಾರ ಸ್ವಚ್ಚತೆ ಮತ್ತು ನೀರಿನ ಗುಣಮಟ್ಟ ಕಾಯ್ದುಕೊಂಡು ವಹಿವಾಟು ನಡೆಸುವುದು ಕಡ್ಡಾಯವಾಗಿದೆ. ಗುಣಮಟ್ಟ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸಿದ್ದಲ್ಲಿ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮಜರುಗಿಸಲಾಗುವುದು.
    ಸಾರ್ವಜನಿಕರಿಗೆ ಯಾವುದಾದರೂ ISI ಮತ್ತು ಈSSಂ ಪರವಾನಗಿ ಇಲ್ಲದ ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳು ಕಂಡುಬಂದಲ್ಲಿ, ಅಂಕಿತ ಅಧಿಕಾರಿಗಳ ಕಛೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಎನ್.ಪಿ.ಸಿ. ಆಸ್ಪತ್ರೆ ಆವರಣ, ನಜರ್‍ಬಾದ್, ಮೈಸೂರು-10 ಇಲ್ಲಿಗೆ ಲಿಖಿತ ದೂರನ್ನು ನೇರವಾಗಿ, ದೂರವಾಣಿ ಸಂಖ್ಯೆ: 0821- 2438144, ಅಥವಾ (
ಜomಛಿಛಿಚಿ2013@gmಚಿiಟ.ಛಿom)  ಈ ಮೇಲ್  ಮೂಲಕ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ
   
ನವೆಂಬರ್ 7 ರಿಂದ ಕರ್ನಾಟಕ ವೈಭವ ಧ್ವನಿ ಬೆಳಕು ಕಾರ್ಯಕ್ರಮ:ಸಿದ್ದತೆ ಚುರುಕು
      ಮೈಸೂರು.ನ.03.ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತವು ಹಲವಾರು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ವಿಶ್ವವಿಖ್ಯಾತ ದಸರಾ ಮುಗಿಯುತ್ತಿದ್ದಂತೆ ವಾರಾಂತ್ಯ  ಸಾಂಸ್ಕøತಿಕ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದರ ಜೊತೆಯಲ್ಲಿ ನವೆಂಬರ್ 7 ರಿಂದ 11 ರವರೆಗೆ ಪ್ರತಿ ದಿನ ಸಂಜೆ 6-30 ರಿಂದ ರಾತ್ರಿ 9 ಗಂಟೆಯವರೆಗೆ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ವೈಭವ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ.
     ಈ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸಂದರ್ಶನ ನಡೆಸಿ 85 ಮಂದಿ ನುರಿತ ಕಲಾವಿದರನ್ನು ಆಯ್ಕೆ ಮಾಡಿ ನಂಜರಾಜ್ ಬಹದ್ದೂರ್ ಛತ್ರದಲ್ಲಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ತರಬೇತಿ ನೀಡಲಾಗುತ್ತಿದೆ.
    ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಗೀತ ಮತ್ತು ನಾಟಕವಿಭಾಗ ಬೆಂಗಳೂರು ಘಟಕ ನಡೆಸುತ್ತಿರುವ ಈ ಬೃಹತ್ ಧ್ವನಿ ಬೆಳಕು ಕಾರ್ಯಕ್ರಮವನ್ನು ಜಿ.ವಿ.ಜಿತೇಂದ್ರ ಪಾನ್‍ಪಾಟೀಲ್ ನಿರ್ದೇಶಿಸಿದ್ದಾರೆ. ಎಂ. ಮನೋಹರ್-ಸಹನಿರ್ದೇಶನ, ಡಾ| ಎನ್.ಎನ್.ಜಾ-ನಿರ್ವಹಣೆ, ಸಂಗೀತ-ಸರಳಾ ರಾವ್, ನೃತ್ಯ-ಶ್ರೀಲಕ್ಷ್ಮೀ, ಬೆಳಕು-ರವೀಂದ್ರ, ಪ್ರದೀಪ್, ಕಿಶನ್‍ಲಾಲ್, ಧ್ವನಿ-ಮಂದಾರ ಮತ್ತು ಅವಿನಾಶ್.
    ಇಂದಿನ ವಿದ್ಯಾರ್ಥಿಗಳಿಗೆ ಯುವ ಪೀಳಿಗೆಗೆ ಹಾಗೂ ಸಾರ್ವಜನಿಕರಿಗೆ ಭಾರತ ಹಾಗೂ ಕರ್ನಾಟಕದ ಇತಿಹಾಸ, ಕ್ವಿಟ್ ಇಂಡಿಯಾದಂತಹ ಐತಿಹಾಸಿಕ ಘಟನೆಗಳನ್ನು ಸಂಗೀತ, ನೃತ್ಯ ಹಾಗೂ ಕಥೆಯ ರೂಪದಲ್ಲಿ ಪರಿಚಯಿಸಿ ಕೊಡಲಿದೆ ಬೃಹತ್ ಧ್ವನಿ ಬೆಳಕು ಕಾರ್ಯಕ್ರಮ
    ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬಲಿದಾನ ನೀಡಿದ ಭಗತ್‍ಸಿಂಗ್, ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ್, ಕಿತ್ತೂರುರಾಣಿ ಚೆನ್ನಮ್ಮ ಮುಂತಾದವರ ಬಗ್ಗೆ ತಿಳಿಸುವುದರ ಜೊತೆ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವನ್ನು ಆಳಿದ ರಾಜ ಮಹಾರಾಜರ ಜೀವನವನ್ನು ರೂಪಕಗಳು ಪ್ರಸ್ತುತಗೊಳ್ಳಲಿದೆ.
     ಕೆ.ಎಂ.ದೊರೆಸ್ವಾಮಿ, ಸುಬ್ಬಶೆಟ್ಟಿ, ಶೇಷಾಚಲ, ವೆಂಕಟೇಶ್ ಪ್ರಕಾಶ್, ನಾಗೇಶ್ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿ ನೋಡುಗರ ಕಣ್ಮನ ಸೆಳೆಯಲಿದ್ದಾರೆ. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ.
ನವೆಂಬರ್ 5 ರಂದು ನವೀಕೃತ ಶಿಕ್ಷಕರ ಸದನದ ಉದ್ಘಾಟನೆ
 ಮೈಸೂರು.ನ.03.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ), ಬೆಂಗಳೂರು, ಜಿಲ್ಲಾ ಶಾಖೆ ಮೈಸೂರು ಸಹಭಾಗಿತ್ವದಲ್ಲಿ ನವೀಕೃತ ಶಿಕ್ಷಕರ ಸದನದ ಉದ್ಘಾಟನೆ ಅನ್ನಪೂರ್ಣ ಭವನದ ಭೂಮಿ ಪೂಜೆ ಹಾಗೂ ಜಿಲ್ಲಾ ಶೈಕ್ಷಣಿಕ ವಿಚಾರ ಸಂಕಿರಣ ನವೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಬನ್ನೂರು ರಸ್ತೆಯ ಸಿದ್ದಾರ್ಥನಗರದ ಜಿಲ್ಲಾ ಶಿಕ್ಷಕರ ಸದನದಲ್ಲಿ ನಡೆಯಲಿದೆ.
     ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಭೂಮಿ ಪೂಜೆ ನೆರವೇರಿಸುವರು. ವಿಧಾನಸಭಾ ಸದಸ್ಯ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸುವರು.
     ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ್, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ಎಂ.ಕೆ. ಸೋಮಶೇಖರ್, ವಾಸು ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ. ಲೋಕಮಣಿ ಭಾಗವಹಿಸುವರು.
    ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ| ರಾಜಕುಮಾರ್ ಖತ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮೊಹಮದ್ ಮೊಹಸಿನ್, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಗೋಪಾಲ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಗುರಿಕಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ. ರಾಮು ಅವರುಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.                              
ನವೆಂಬರ್ 8 ರಂದು ಕನಕದಾಸರ ಜಯಂತಿ
     ಮೈಸೂರು,ನ.3.ಜಿಲ್ಲಾಡಳಿತ ವತಿಯಿಂದ ನವೆಂಬರ್ 8 ರಂದು ಬೆಳಗ್ಗೆ 11-30 ಗಂಟೆಗೆ ಕಲಾಮಂದಿರದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥನಂದ ಸ್ವಾಮೀಜಿ ಅವರುಗಳು ದಿವ್ಯ ಸಾನಿಧ್ಯದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮದ ಉದ್ಘಾಟಿಸಿ ಕನಕಮೂರ್ತಿಗೆ ಮಾಲಾರ್ಪಣೆ ಮಾಡುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.
     ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ. ಲೋಕಮಣಿ ಭಾಗವಹಿಸುವರು ಹಾಗೂ ಮೈಸೂರಿನ ಪ್ರೊ|| ಅರವಿಂದ ಮಾಲಗತ್ತಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು.
   ಅಂದು ಬೆಳಗ್ಗೆ 9-30 ಗಂಟೆಗೆ ಪೂಜ್ಯ ಮಹಾ ಪೌರರು ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆಯು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದ ಮುಂಭಾಗದಿಂದ ಹೊರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಸಂಸ್ಕøತ ಪಾಠಶಾಲೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಡಿ. ದೇವರಾಜಅರಸು ರಸ್ತೆ, ಮೆಟ್ರೊಪೋಲ್ ವೃತ್ತ, ವಿನೋಬ ರಸ್ತೆ ಮಾರ್ಗವಾಗಿ  ಕಲಾಮಂದಿರ ತಲುಪುವುದು.
     ಮೈಸೂರಿನ ವಿದ್ವಾನ್ ಎಂ.ಎಸ್. ನವೀನ್ ಮತ್ತು ತಂಡದಿಂದ ಕನಕದಾಸರ ಪದಗಳ ಕಾರ್ಯಕ್ರಮ ಮೈಸೂರಿನ ಕಲಾಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ನವೆಂಬರ್ 7 ರಂದು ಮೈಸೂರು ನಗರ, ತಾಲೂಕು ಕಲಾಶ್ರೀ ಆಯ್ಕೆ
     ಮೈಸೂರು,ನ.3.ಬೆಂಗಳೂರಿನ ಬಾಲ ಭವನ ಸೂಸೈಟಿ ಆಶ್ರಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಭಾಗÀವಹಿಸಲು 9 ರಿಂದ 16 ವರ್ಷದೊಳಗಿನ ಸೃಜನಾತ್ಮಕ ಪ್ರತಿಭೆಯನ್ನು ಹೊಂದಿರುವ ಮಕ್ಕಳನ್ನು ಆಯ್ಕೆ ಮಾಡಲು ಬನ್ನಿಮಂಟಪದಲ್ಲಿರುವ ಜಿಲ್ಲಾ ಜವಾಹರ ಬಾಲ ಭವನದಲ್ಲಿ  ನವೆಂಬರ್ 7 ರಂದು ಬೆಳಗ್ಗೆ 11 ಗಂಟೆಗೆ ಬನ್ನಿಮಂಟಪದಲ್ಲಿ ಮೈಸೂರು ನಗರ ಮತ್ತು  ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಹಮ್ಮಿಕೊಳ್ಳಲಾಗಿದೆ.
 ಆಯ್ಕೆಯಲ್ಲಿ ಭಾಗವಹಿಸುವ ಮಕ್ಕಳು ತಮಗೆ ಬೇಕಾಗುವ ಅಗತ್ಯ ಸಾಮಗ್ರಗಳನ್ನು ತರÀಬೇಕು ಹಾಗೂ ಅಕ್ಟೋಬರ್ 30ರ ಸಂಜೆ 5:30ಗಂಟೆಯೊಳಗೆ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
      ಕಲಾ ಪ್ರಕಾರಗಳು: ರಚನಾ ಕಲೆಯಲ್ಲಿ ಚಿತ್ರ ಬಿಡಿಸುವುದು, ಕರಕುಶಲ ಕಲೆ, ಮತ್ತು ಕ್ಲೇ ಮಾಡಲಿಂಗ್. ಪ್ರದರ್ಶನ ಕಲೆಯಲ್ಲಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಸಂಗೀತ, ವಾದ್ಯ ಸಂಗೀತ, ಯಕ್ಷಗಾನ ಮತ್ತು  ಅಭಿನಯಕ್ಕೆ ಸಂಬಂಧಿಸಿದ ಕಲೆಗಳು. ಸೃಜನಾತ್ಮಕ ಬರವಣಿಗೆಯಲ್ಲಿ ಕಥೆ, ಕವನ, ಪ್ರಬಂಧ ರಚನೆ ಹಾಗೂ ವಿಜ್ಞಾನದ ನೂತನ ಅವಿಷ್ಕಾರ ವಿಭಾಗದಲ್ಲಿ ವಿಜ್ಞಾನ ವಿಷಯದಲ್ಲಿ ಮಾದರಿ ಪ್ರದರ್ಶನ, ವಿವರಣೆ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನೆ ಮತ್ತು ಇತ್ಯಾದಿಗಳು.  
      ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2495486 ಸಂರ್ಪಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.




















ಕೆ.ಆರ್.ಪೇಟೆ.ನ.03- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ  ನಂದಿತಾ ಎಂಬ ಬಾಲಕಿಯ ಮೇಲೆ ನಡೆದ ಹತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನ್ಯಾಯಯುತವಾಗಿ  ಹೋರಾಟ ಮಾಡುತ್ತಿರುವವರನ್ನು ಬಂಧಿಸುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿರುವ ಪೊಲೀಸರ ವರ್ತನೆಯನ್ನು ಖಂಡಿಸಿ ಹಾಗೂ ದುಷ್ಕರ್ಮಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಸರ್ಕಾರದ ನಿಲುವನ್ನು ವಿರೋಧಿಸಿ  ತಾಲೂಕು ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಪ್ರತಿಭಟನಾ ಪ್ರದರ್ಶನ ಆರಂಭಿಸಿದ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಪ್ರವಾಸಿ ಮಂದಿರ ಬಳಿ ಇರುವ ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ಮೈಸೂರು ಚನ್ನರಾಯಪಟ್ಟಣ ಮತ್ತು ಬೇರ್ಯ-ಕೆ.ಆರ್.ಪೇಟೆ  ಮುಖ್ಯರಸ್ತೆಯನ್ನು ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಬಿವಿಪಿ  ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿ ತೀರ್ಥಹಳ್ಳಿಯಲ್ಲಿ  ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ವಿಷಪ್ರಾಶಾನವನ್ನು ಮಾಡಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು.  ಕಠಿಣ ಕಾನೂನು ಕ್ರಮ  ಜರುಗಿಸಬೇಕು. ರಾಜ್ಯದಲ್ಲಿ ಮೂರು ವರ್ಷದ ಪುಟ್ಟಮಕ್ಕಳನ್ನು ಬಿಡದೆ ಅತ್ಯಾಚಾರ ಕೊಲೆ ಮಾಡುತ್ತಿರುವ ವಿಕೃತಕಾಮುಕ ವ್ಯಕ್ತಿಗಳನ್ನು ಬಂದಿಸದೆ ನಿರ್ಲಕ್ಷ್ಯವಹಿಸಿರುವ ಬ್ಯಾಟರಿ ಚಾರ್ಜ್ ಇಲ್ಲದ ಗೃಹಸಚಿವರ ಜಾರ್ಜ್ ಸ್ವಿಚ್ ಆಫ್‍ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಈ ಕೂಡಲೇ ರಾಜ್ಯದಲ್ಲಿ ನಡೆಯುತ್ತಿರುವ ಅನಾಚಾರಗಳಿಗೆ ನೈತಿಕತೆಗಳ ಹೊಣೆಹೊತ್ತು ರಾಜೀನಾಮೆ ನೀಡಬೇಕು.
ಹಾಡು ಹಗಲೇ ಯುವತಿಯನ್ನು ಮನೆಗೆ ತಲುಪಿಸುವುದಾಗಿ ನಂಬಿಸಿ ಕರೆದ್ಯೊದು ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ ಎಂದರೆ ನಮ್ಮ ಸರ್ಕಾರ  ಆಡಳಿತ ನಡೆಸುತ್ತಿರುವದಕ್ಕೆ ಅನಾಲಾಯಕ್ ಈ ಕೂಡಲೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಮನೆಗೆ ತೆರಳುವುದು ರಾಜ್ಯದ ಹಿತದೃಷ್ಠಿಯಿಂದ ಒಳ್ಳೆಯದು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನ್ಯಾಯಯುತವಾಗಿ ಪ್ರತಿಭಟನೆ ನಡೆಸುವ ವ್ಯಕ್ತಿಗಳನ್ನು ಬಂಧಿಸುವ ಮೂಲಕ ಸರ್ಕಾರ ತನ್ನ ಅಸಹಾಯಕತೆಯನ್ನು ತೋರುತ್ತಿದೆ, ರಾಜ್ಯದಲ್ಲಿ ನ್ಯಾಯಕ್ಕಾಗಿ ಜನತೆ ದಂಗೆ ಏಳುವ ಮುನ್ನವೇ ಎಚ್ಚೆತ್ತು ಕೊಂಡು ತಪ್ಪಿಸ್ಥರನ್ನು ಬಂದಿಸಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾ ನೇತೃತ್ವವನ್ನು ಎಬಿವಿಪಿ ಸಂಘನೆಯ ಪದಾಧಿಕಾರಿಗಳಾದ ಮುರುಳಿ, ಮಧು, ಎಚ್.ಬಿ.ಮಂಜುನಾಥ್, ಚಂದು, ಪವಿತ್ರ, ರಾಧಿಕಾ, ದೀಕ್ಷಿತ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿ ಅತ್ಯಾಚಾರಿಗಳನ್ನು ಕೂಡಲೇ ಬಂಧಿಸುವಂತೆ ರಸ್ತೆತಡೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯ ನಂತರ  ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

========================
 
ಕೆ.ಆರ್.ಪೇಟೆ,ನ.03- ಗಣೇಶೋತ್ಸವವು ಭಾರತ ಸ್ವಾತಂತ್ರ ಚಳುವಳಿಗೆ ಬ್ರಿಟೀಷರ ಬಂಧನದಿಂದ  ಪಾರಾಗಿ ದೇಶದ  ಜನರನ್ನು ಸಂಘಟಿಸಲು ದೇಶದ ಸ್ವಾತಂತ್ರ ಹೋರಾಟಗಾರರು ಆರಂಭಿಸಿದ  ಜಾತಿರಹಿತ  ಧರ್ಮರಹಿತ  ಕಾರ್ಯಕ್ರಮವಾಗಿತ್ತು. ಇದೇ ರೀತಿಯ ಕಾರ್ಯಕ್ರಮವನ್ನು ಸಂತೇಬಾಚಹಳ್ಳಿ ಗೆಳೆಯರ ಬಳಗವು  ಕಳೆದ 56ವರ್ಷಗಳಿಂದ ನಿರಂತರವಾಗಿ  ಗಣೇಶೋತ್ಸವ ನಡೆಸುವ  ಮೂಲಕ ಹತ್ತು ಹಲವು ಸಮಾಜಮುಖಿ  ಕಾರ್ಯಕ್ರಮಗಳನ್ನು ಹಮ್ಮಿಕೊಂಡು   ಈ ಭಾಗದ ಜನರ ಅಭಿವೃದ್ಧಿಗೆ ಶ್ರಮಿಸುತ್ತಾ ಬರುತ್ತಿರುವುದು ಶ್ಲಾಘನೀಯವಾದುದು ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.
ಅವರು ತಾಲೂಕಿನ ಸಂತೇಬಾಚಹಳ್ಳಿಯ ಗೆಳೆಯರ ಬಳಗದ 56ನೇ ವರ್ಷದ ಗಣೇಶೋತ್ಸವ ಮತ್ತು ಜನಪದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚೆಗೆ ಸಂಘ ಸಂಸ್ಥೆಗಳು ಆರಂಭಗೊಂಡ ಕೆಲವೇ ವರ್ಷಗಳಲ್ಲಿ ಪದಾಧಿಕಾರಿಗಳ ಆಂತರಿಕ ಕಚ್ಚಾಟದಿಂದ ಇಬ್ಬಾಗವಾಗುವುದು, ಸಮಾಜಮುಖಿ ಚಟುವಟಿಕೆಗಳಿಂದ ದೂರ ಉಳಿಯುವುದೇ ಹೆಚ್ಚು ಕಂಡು ಬರುತ್ತಿದೆ ಆದರೆ ಸಂತೇಬಾಚಹಳ್ಳಿಯ ಗೆಳೆಯರ ಬಳಗವು ಕಳೆದ 56ವರ್ಷಗಳಿಂದ ನಿರಂತರವಾಗಿ ವರ್ಷಕ್ಕಿಂತ ವರ್ಷಕ್ಕೆ ಹೆಚ್ಚು ಹೆಚ್ಚು ವಿಜೃಂಭಣೆಯಿಂದ ನಡೆಯುತ್ತಾ ಬರುತ್ತಿರುವುದು ಬಹುಷಃ ದೇಶದಲ್ಲಿಯೇ ಪ್ರಥಮ ಎಂದರೂ ಅಡ್ಡಿಯಿಲ್ಲ.
ಗೆಳೆಯರ ಬಳಗದ ಅಧ್ಯಕ್ಷ ಬಿ.ಶಿವಪ್ಪ ಅವರು ಬಳಗ ಸ್ಥಾಪನೆಯಾದ ದಿನಗಳಲ್ಲಿ ಯಾವ  ರೀತಿ ಹುರುಪಿನಿಂದ ಇದ್ದರೋ ಅದೇ ರೀತಿ ಈಗಲೂ ಸಂಘದ ಚಟುವಟಿಕೆಗಳಲ್ಲಿ ಇದ್ದಾರೆ ಎಂಬುದು ಅವರ ಚಟುವಟಿಕೆಗಳನ್ನು ನೋಡಿದಾಗ ಕಂಡು ಬರುತ್ತದೆ.  ಬಳಗವು ಈ ಭಾಗದ ರಾಜಕಾರಣಿ ಕೃಷ್ಣ ಮತ್ತಿತರರ ರಾಜಕೀಯ ಏಳಿಗೆಗೂ ವೇದಿಕೆ ಸೃಷ್ಟಿಸಿದೆ ಎಂಬುದು ಕೂಡ  ಗಮನಾರ್ಹವಾದುದು. ಇಲ್ಲಿ ಪ್ರತಿವರ್ಷ ಸಾವಿರಾರು ಜನತೆ ಸೇರುವುದು ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿದೆ.  ಗೆಳೆಯರ ಬಳಗವು ಯಾವುದೇ ಒಂದು ಪಕ್ಷದ ಮುಖವಾಣಿಯಂತೆ ಕೆಲಸ ಮಾಡುತ್ತಿಲ್ಲ.  ಇದು  ಪಕ್ಷತೀತವಾದ ಸಂಘಟನೆಯಾಗಿದೆ.  ಇಲ್ಲಿ ಎಲ್ಲಾ ಪಕ್ಷದವರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ ಈ ಸಂಘಟನೆಯು ಇಷ್ಟು ವರ್ಷ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ.  ಸಂಘವು ಕೇವಲ ಮನರಂಜನಾ ಕಾರ್ಯಕ್ರಮಕ್ಕೆ ಮೀಸಲಾಗದೇ ಉಚಿತ ಕಣ್ಣು ತಪಾಸಣೆ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ,  ರಕ್ತದಾನ ಶಿಬಿರಗಳ್ನು ನಡೆಸುತ್ತಿರುವುದು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುತ್ತಿರುವುದು  ಅಭಿನಂದನೀಯ. ಅದೇ ರೀತಿ ಕಲಾವಿದರನ್ನು ಆಹ್ವಾನಿಸಿ ಅವರಿಗೆ ಗೌರವ ಧನ ನೀಡುತ್ತಾ ಅವರಿಗೂ ವೇದಿಕೆ ಸೃಷ್ಟಿಸಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ  ಎಂದು ಸಂಸದ ಪುಟ್ಟರಾಜು ಶ್ಲಾಘನೆ ವ್ಯಕ್ತಪಡಿಸಿದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.  ಬಳಗದ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.   ಶಾಸಕ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಬಳಗದ ಅಧ್ಯಕ್ಷ ಜಯಕುಮಾರ್,  ಕಾರ್ಯದರ್ಶಿ ಎಸ್.ಹೆಚ್.ಕೃಷ್ಣ, ಖಜಾಂಚಿ ಎಸ್.ಎಂ.ಲೋಕೇಶ್,  ರಾಜ್ಯ ಮೈಸೂರು ಲ್ಯಾಂಪ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಾನಕೀರಾಂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಚಂದ್ರಶೇಖರ್, ಚಿತ್ರನಟ ಸಾಯಿಕುಮಾರ್ ಅವರ ಸಹೋದರ ನಟ ರವಿಕಿರಣ್, ತಾಲೂಕು ಪಂಚಾಯಿತಿ ಸದಸ್ಯ ವಿ.ಎನ್.ಮಹದೇವೇಗೌಡ, ಮಾಳಗೂರು ಜಗದೀಶ್, ಧನ್ಯಕುಮಾರ್, ಎಸ್.ಎಂ.ನಾಗೇಶ್, ಬಂಗಾರ ಪರಿಶೋಧಕರಾದ ಸಾವಂದಚಾರ್  ಸೇರಿದಂತೆ   ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಚಿತ್ರಶೀರ್ಷಿಕೆ:03 ಞಡಿಠಿeಣ-02 ಕೆ.ಆರ್.ಪೇಟೆ: ತಾಲೂಕಿನ  ಸಂತೇಬಾಚಹಳ್ಳಿಯ ಗೆಳೆಯರ ಬಳಗದ 56ನೇ ವರ್ಷದ ಗಣೇಶೋತ್ಸವ ಮತ್ತು ಜನಪದ ಸಂಜೆ ಕಾರ್ಯಕ್ರಮವನ್ನು ಸಂಸದ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಕೆ.ಸಿ.ನಾರಾಯಣಗೌಡ, ಗೆಳೆಯರ ಬಳಗದ ಸಂಸ್ಥಾಪಕ ಬಿ.ಶಿವಪ್ಪ, ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ ಎಸ್.ಹೆಚ್,ಕೃಷ್ಣ, ರಾಜ್ಯ ಮೈಸೂರು ಲ್ಯಾಂಪ್ಸ್ ಮಾಜಿ ಬಿ.ಎಲ್.ದೇವರಾಜು, ತಾ.ಪಂ.ಮಾಜಿ ಅಧ್ಯಕ್ಷ ಜಾನಕೀರಾಂ ಇತರರು ಇದ್ದಾರೆ.
======================


ರಾಜ್ಯ ಸರ್ಕಾರ ಕಣ್ಣಿದ್ದು ಕುರುಡು: ಯಡ್ಡಿ

                                            ರಾಜ್ಯ ಸರ್ಕಾರ ಕಣ್ಣಿದ್ದು ಕುರುಡು: ಯಡ್ಡಿ
ಮೈಸೂರು,ನ.3- ಈ ಹಿಂದೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ಕೈಬಿಟ್ಟು, ಅಭಿವೃದ್ಧಿಗೆ ಸ್ಪಂಧಿಸದ ರಾಜ್ಯ ಸರ್ಕಾರವು ಕಣ್ಣಿದ್ದು ಕುರುಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಮೈಸೂರಿನ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಸ್ಥಿತಿಯು ಹದಗೆಟ್ಟಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ಇದೆ ಭಾಗದವರಾದ ಮುಖ್ಯ ಮಂತ್ರಿಗಳು ಜಿಲ್ಲೆಗೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂದರು.
ಐಎಎಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ, ಇಲ್ಲಿ ಐಎಎಸ್ ಅಧಿಕಾರಿಗೂ ರಕ್ಷಣಿ ಇಲ್ಲದಂತಾಗಿದೆ, ಕಾನೂನು ಸುವ್ಯವಸ್ಥೆಯು ಹದಗೆಟ್ಟಿದ್ದು ಮಕ್ಕಳ ಮೇಲೆ ದಿನೇ ದಿನೇ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ರಾಜ್ಯದ ಮುಖ್ಯ ಮಂತ್ರಿಗಳು ಯಾವುದಕ್ಕೂ ಗಮನ ಹರಿಸುತ್ತಿಲ್ಲ ಎಂದು ಹೇಳಿದರು.
ಮೈಸೂರು ನಗರದ ಸವಾಂಗೀಣ ಅಭಿವೃದ್ಧಿಯಾಗಿಲ್ಲ, ವಿಮಾನ ನಿಲ್ದಾಣ ವಿಸ್ತರಣೆ, ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಳ್ಳದೆ ಮಿನಾಮೇಶ ಎಣಿಸುತ್ತಿದ್ದಾರೆ.
ಪ್ರಧಾನಿ ಮೋದಿರವರು ಮೈಸೂರಿನ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ತೋರುತ್ತಿದ್ದು, ಎಲ್ಲಾ ಸೌಲಭ್ಯ ಹಾಗೂ ಸಹಕಾರ ನೀಡಲು ಮುಂದಾಗಿದ್ದರೂ ಸಹ ಮುಖ್ಯ ಮಂತ್ರಿಗಳಿಗೆ ಅವರನ್ನು ಹೋಗಿ ಭೇಟಿ ಮಾಡುವ ಕೆಲಸಕ್ಕೂ ಮುಂದಾಗಿಲ್ಲ.
 ನಾವುಗಳು ಪಕ್ಷಾತೀತವಾಗಿ ಎಲ್ಲಾರೀತಿಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದವೇ, ನಾಡಿನ ಅಭಿವೃದ್ಧಿ ಎಲ್ಲಾ ಪಕ್ಷಗಳ ಗುರಿಯಾಗಬೇಕು. ಸರ್ಕಾರವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ  ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ನವೆಂಬರ್ 19 ರಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದು, ಒಂದು ದಿನ ಪೂರ್ತಿ ಅಲ್ಲಿನ  ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸುತ್ತೇನೆ. ಸರ್ಕಾರವು ಅಲ್ಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆಹೇಳಿದ್ದರು, 20ಕ್ಕೂ ಹೆಚ್ಚು ಕೆರೆಗಳ ಫೈಕಿ ಬರಿ 4 ಕೆರೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಕಡಿಮೆಯ ಪರಿಣಾಮ ದೇಶದಲ್ಲಿಯೂ ಬೆಲೆ ಕಡಿಮೆಯಾಗಿ ಅದನ್ನು ರಾಜ್ಯದಲ್ಲಿಯೂ ಜಾರಿಗೊಳಿಸಲಾಗಿದೆ. ಆದ್ದರಿಂದ ಬಸ್ ಪ್ರಯಾಣದರವನ್ನು ಕಡಿತ ಗೊಳಿಸುವಂತೆ ಸರ್ಕಾರನ್ನು ಆಗ್ರಹಿಸಿದರು.
ಪ್ರಯಾಣದರ ಕಡಿತ ಗೊಳಿಸದಿದ್ದಲ್ಲಿ ಬೆಂಗಳೂರಿನಲ್ಲಿ ಸಭೆಯನ್ನು ಕರೆದು ಚರ್ಚೆ ಮಾಡಿ ಹೋರಾಟ ನಡೆಸಲು ಸಿದ್ದರಾಗುತ್ತೇವೆಂದರು.
ಗೋಷ್ಠಿಯಲ್ಲಿ ಇವರೊಂದಿಗೆ ಮಾಜಿ ಶಾಸಕ ಕೃಷ್ಣಮೂರ್ತಿ, ರಾಮದಾಸ್, ತೋಂಟದಾರ್ಯ, ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
                                                                
                                  ನ.7 ರಂದು ಜಿ.ಪಂ. ಸಾಮಾನ್ಯ ಸಭೆ
    ಮಂಡ್ಯ ನ.3-ಮಂಡ್ಯ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ನವೆಂಬರ್ 7ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಟಿ.ಮಂಜುಳಾ ಪರಮೇಶ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                               ನ.11 ರಂದು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
     ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) 2014-15ನೇ ಸಾಲಿನ ಅಕ್ಟೋಬರ್ 2014ರ ಅಂತ್ಯದವರೆಗಿನ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನವೆಂಬರ್ 11 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ತರಬೇತಿ: ಅರ್ಜಿ ಆಹ್ವಾನ
       ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದ್ಯಾವಂತ ನಿರುದ್ಯೋಗಿಗಳಿಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಫಂಡಮೆಂಟಲ್, ಎಂ.ಎಸ್. ಆಫೀಸ್, ಇಂಟರ್‍ನೆಟ್ ಮತ್ತು ಡಿಟಿಪಿ, ಲಘುವಾಹನ ಚಾಲನಾ ತರಬೇತಿ  ಹಾಗೂ ಭಾರಿವಾಹನ ಚಾಲನಾ ತರಬೇತಿಗಳನ್ನು ಉಚಿತವಾಗಿ ಪಡೆಯಲು  ಅರ್ಜಿ ಆಹ್ವಾನಿಸಲಾಗಿದೆ.
      ನಿಗದಿತ ಅರ್ಜಿ ನಮೂನೆಗಳನ್ನು ಮದ್ದೂರು ಪುರಸಭಾ ಕಚೇರಿಯಿಂದ ಪಡೆದು ಸೂಕ್ತ ದಾಖಲೆಗಳೊಂದಿಗೆ ನವೆಂಬರ್ 15 ರಂದು ಸಂಜೆ 5.30 ಗಂಟೆಯೊಳಗೆ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಮದ್ದೂರು ಪುರಸಭೆ ಕಚೇರಿಯನ್ನು ಸಂಪರ್ಕಿಸುವಂತೆ ಮದ್ದೂರು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೆ.ಆರ್.ಪೇಟೆ,ನ.03- ಜನಸಂಖ್ಯಾ ಸ್ಪೋಟ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ದೇಶದ ಯುವಶಕ್ತಿ ಜಾಗೃತವಾಗಿರಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಚ್.ಟಿ.ಹರೀಶ್ ಅಭಿಪ್ರಾಯಪಟ್ಟಿದ್ದಾರೆ.
ಅವರು ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಕಿಕ್ಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.
ನಾವು ಶುದ್ದವಾಗಿದ್ದರೆ ಸಾಲದು. ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಪರಿಸರ ಸ್ವಚ್ಚತೆಗೆ ಸಾಂಘಿಕ ಪರಿಶ್ರಮ ಅತ್ಯಗತ್ಯ ಎಂದ ಡಾ.ಹರೀಶ್ ಸಾಂಕ್ರಾಮಿಕ ರೋಗಗಳಾದ ಕಾಲರ, ಪ್ಲೇಗು, ಮಲೇರಿಯಾ, ಸಿಡುಬುಗಳಲ್ಲದೆ ಪೋಲೀಯೋ, ಕುಷ್ಠ ಮುಂತಾದ ಮಾರಕ ಕಾಯಿಲೆಗಳ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೇವೆ. ಆಧುನಿಕ ಜೀವನ ಶೈಲಿಯಿಂದಾಗಿ ಅಸಾಂಕ್ರಮಿಕ ಕಾಯಿಲೆಗಳಾದ ರಕ್ತದೊತ್ತಡ, ಮದುಮೇಹ ಮುಂತಾದ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಇದರ ವಿರುದ್ದ ನಾವು ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದ ಅವರು ಶುದ್ದ ಕುಡಿಯುವ ನೀರು ಮತ್ತು ಶೌಚಾಲಯ ನಮ್ಮ ಕನಿಷ್ಠ ಅಗತ್ಯತೆಗಳಾಗಬೇಕು. ಇದರಿಂದ ಹತ್ತು ಹಲವು ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಬಹುದೆಂದರು. ಕೈ ತೊಳೆಯುವುದರಿಂದ ಹಿಡಿದು ಗ್ರಾಮದೊಳಗಿನ ತಿಪ್ಪೆಗುಂಡಿಗಳನ್ನು ತೆರವುಗೊಳಿಸುವವರೆಗೂ ನಾವು ಶುಚಿತ್ವದ ಮಹತ್ವದ ಅರಿವು ಮೂಡಿಸಿಕೊಳ್ಳಬೇಕೆಂದ ಅವರು ಪ್ರತಿಯೊಬ್ಬರು ವಿದ್ಯಾವಂತರಾಗಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡರೆ ಮಾತ್ರ ಆರೋಗ್ಯಕರ ಭಾರತ ನಿರ್ಮಾಣ ಸಾಧ್ಯವೆಂದರು.
ಆರೋಗ್ಯಕರ ಭಾರತ ನಿರ್ಮಾಣಕ್ಕೆ ಆರೋಗ್ಯ ಇಲಾಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು ತಾಲೂಕಿನ 113 ಹಳ್ಳಿಗಳಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೇಡ್ ಅಂಶ ಪತೆಯಾಗಿದೆ. ಇದರ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇವೆ, ಶಿಶು ಮರಣ, ಹೆರಿಗೆ ಸಂದರ್ಭದಲ್ಲಿನ ತಾಯಿಯ ಮರಣ ಪ್ರಮಾಣವನ್ನು ನಿಯಂತ್ರಿಸಿದ್ದೇವೆ. ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡಕ್ಕೂ ಆಧ್ಯಾತ್ಮದಲ್ಲಿ ಸೂಕ್ತ ಉತ್ತರವಿದ್ದು ಜನ ದೈನಂದಿನ ವ್ಯಾಯಾಮ, ಯೋಗ ಕಲಿಕೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಡಾ.ಹರೀಶ್ ಕರೆ ನೀಡಿದರು.
ಗ್ರಾಮ ಮುಖಂಡ ದೇವರಾಜು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಚನ್ನರಾಯಪಟ್ಟಣ ತಾಲೂಕು ಅಗ್ರಹಾರ ಗ್ರಾಮದ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಸಿಂದೂ ಚಂದ್ರಶೇಖರ್, ಉಪನ್ಯಾಸಕರಾದ ಎಂ.ಕೆ.ಹರಿಚರಣತಿಲಕ್, ನರೇಂದ್ರಬಾಬು, ಗ್ರಾ.ಪಂ ಸದಸ್ಯ ಮಂಜೇಗೌಡ, ಜಿ.ಪಂ ಮಾಜಿ ಸದಸ್ಯ ಬೋಜೇಗೌಡ, ಪ್ರಭಾರ ಪ್ರಾಂಶುಪಾಲ ಲೇಪಾಕ್ಷಿಗೌಡ ಮುಖ್ಯ ಅತಿಥಿಗಳಾಗಿದ್ದರು.

============

ಕೆ.ಆರ್.ಪೇಟೆ,ನ.03- ಧರ್ಮದಲ್ಲಿ ನಂಬಿಕೆಯಿರಬೇಕು. ಆದರೆ ಧಾರ್ಮಿಕ ಅಂದಾಭಿಮಾನವಿರಬಾರದು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.
ಅವರು ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶ್ರೀ ಅಂಬಾಭವಾನಿ ಮತ್ತು ಪಾಂಡುರಂಗಸ್ವಾಮಿ ದೇವಸ್ಥಾನ ಸಮಿತಿಯು ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಿಸಿರುವ  ಶ್ರೀ ಅಂಬಾಭವಾನಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೆರದಿದ್ದ ಭಕ್ತಾಧಿಗಳನ್ನು ಕುರಿತು ಮಾತನಾಡುತ್ತಿದ್ದರು.
ಧರ್ಮ ಮತ್ತು ವಿಜ್ಞಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇಂದು ವೈಜ್ಞಾನಿಕ ತಳಹದಿಯ ಮೇಲೆ ಸಮಾಜ ನಿರ್ಮಾಣವಾಗುತ್ತಿದೆಯಾದರೂ ದೈವ ಶಕ್ತಿ ಇಲ್ಲದಿದ್ದರೆ ಯಾವುದೇ ಕೆಲಸವು ಕೈಗೂಡುವುದಿಲ್ಲ ಎಂದು ಅಭಿಪ್ರಾಯಪಟ್ಟ ಸಿಂದ್ಯಾ ಒಂದು ಕೆಲಸವನ್ನು ದೈವ ಭಕ್ತಿಯಿಂದ ಮಾಡಿದರೆ ಅದು ಯಶಸ್ಸು ಕಾಣುತ್ತದೆ. ಎಲ್ಲವನ್ನು ದೇವರೇ ಮಾಡುತ್ತಾನೆ ಎಂದು ಹೇಳುವುದು ತಪ್ಪು, ದೇವರು ಅಘೋಚರ ಶಕ್ತಿಯಲ್ಲಿದ್ದಾನೆಂದರು.   ಮನುಷ್ಯ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ದಾನಧರ್ಮದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ದ್ವೇಷ ಅಸೂಯೆಗಳನ್ನು ದೂರ ಮಾಡಬೇಕು. ಧರ್ಮ ಯಾವುದಾದರೇನು ದೇವರೊಬ್ಬನೇ ಎಂಬ ನಾಣ್ಣುಡಿಯನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದ ಸಿಂದ್ಯಾ ವಿಶ್ವದಾದ್ಯಂತ ಕೆಲವರು ನಡೆಸುತ್ತಿರುವ ಭಯೋತ್ಪಾದನೆಯಿಂದ ಒಂದು ಧರ್ಮದ ವಿರುದ್ಧ ಇತರೆ ಧರ್ಮದ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಹಾಗಾಗಿ ಈ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಲು ಎಲ್ಲರೂ ಶ್ರಮಿಸಬೇಕಾಗಿದೆ. ಇದಕ್ಕಾಗಿ ಕಠಿಣ ಕಾನೂನು ಜಾರಿಯಾಗಬೇಕಾಗಿದೆ.  ಭಯೋತ್ಪಾದನೆಯು ವಿಶ್ವದ ಅಭಿವೃದ್ಧಿಗೆ ಮಾರಕವಾಗಿದ್ದು ಭಯೋತ್ಪಾದಕರಿಗೆ ಮಾನವೀಯತೆಯ ಪಾಠ ಹೇಳಬೇಕಾಗಿದೆ. ಈ ಮೂಲಕ ವಿಶ್ವದ ಎಲ್ಲಾ ಜನತೆ ಶಾಂತಿ ನೆಮ್ಮದಿಯ  ಜೀವನ ಸಾಗಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯ ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಬಹುದು. ಆದರೆ ಮನಸ್ಸಿಗೆ ಬೇಕಾದ ಶಾಂತಿ ನೆಮ್ಮದಿಯನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲ. ಅದು ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಸಿಗುತ್ತದೆಯೇ ಹೊರತು ಯಾವುದೇ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಹಾಗಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಿಂಧ್ಯಾ ಮನವಿ ಮಾಡಿದರು.
ಉಡುಪಿ ಶ್ರೀ ಮಠದ ಕಿರಿಯ ಶ್ರೀಗಳು, ಡಾ.ಭಾಷ್ಯಂ ಸ್ವಾಮೀಜಿ, ಶ್ರೀ ಈಶ್ವರಗಿರಿ ಸ್ವಾಮೀಜಿ, ಶ್ರೀ ಸ್ವಾಮಿನಾಮ ದೇವಾನಂದಸ್ವಾಮೀಜಿ, ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ,  ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಧರ್ಮ ಸಂದೇಶ ನೀಡಿದರು.   ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ಜಿ.ಪಂ.ಸದಸ್ಯೆ ಗೌರಮ್ಮಶ್ರೀನಿವಾಸ್, ತಾ.ಪಂ. ಸದಸ್ಯೆ ರೇಣುಕಾಕಿಟ್ಟು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಆರ್.ರಘು, ತಾಲೂಕು ಮರಾಠ ಸಮಾಜದ ಮುಖಂಡರಾದ ಕೃಷ್ಣೋಜಿರಾವ್‍ಹಿತೇಶ್, ಶ್ರೀನಿವಾಸಕಾಳೆ, ಶ್ರೀ ಅಂಬಾಭವಾನಿ ಮತ್ತು ಪಾಂಡುರಂಗಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುಬ್ಬಾರಾವ್‍ಸಿಂಧೆ, ಮುಖ್ಯಸ್ಥ ಭೈರೋಜಿರಾವ್ ಚವ್ಹಾಣ್, ಉಪಾಧ್ಯಕ್ಷ ರಾಜ್‍ಕುಮಾರ್, ಕಾರ್ಯದರ್ಶಿ ವಿಠ್ಠಲ್‍ರಾವ್‍ಗವಾನೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.