Wednesday, 30 July 2014

ಮಂಡ್ಯ-ಸೇವೆ ಮಾಡುವುದು ರಕ್ತಗತವಾಗಿ ಬರಬೇಕು- ಲ. ಹೇಮಂತ್‍ಕುಮಾರ್

ಮಂಡ್ಯ: ಸೇವೆ ಮಾಡುವುದು ರಕ್ತಗತವಾಗಿ ಬರಬೇಕು. ಮನೆಯಿಂದಲೇ ಸೇವೆ ಮಾಡುವುದನ್ನು ಪ್ರಾರಂಭಿಸಬೇಕು. ನಂತರ ಸಂಸ್ಥೆಯಿಂದ ನಡೆಯುತ್ತದೆ. ನಾವು ಮಾಡುವ ಸೇವೆ ಕಡೆಯವರೆವಿಗೂ ಉಳಿಯುತ್ತದೆ ಎಂದು ಎಂ.ಜೆ.ಎಫ್.ನ ಮೊದಲನೇ ಉಪ ರಾಜ್ಯಪಾಲ ಲ. ಹೇಮಂತ್‍ಕುಮಾರ್ ತಿಳಿಸಿದರು.
ಷುಗರ್‍ಸಿಟಿ ಮಂಡ್ಯ ಲಯನ್ಸ್ ಸಂಸ್ಥೆ ವತಿಯಿಂದ ನಗರದ ಅಗ್ರಿ ಕ್ಲಬ್‍ನ ಸಭಾಂಗಣದಲ್ಲಿ ಲ. ಆರ್. ಸುರೇಶ್ ಮತ್ತು ತಂಡದವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ಎಲ್ಲಾ ಕ್ಲಬ್‍ಗಳೂ ಸೇರಿ ಟ್ರಸ್ಟ್‍ವೊಂದನ್ನು ರಚಿಸಿ ಆ ಮೂಲಕ ಸಮಾಜ ಸೇವೆಗೆ ತೊಡಗಿದಾಗ ಹೆಚ್ಚು ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಲಯನ್ಸ್ ಸಂಸ್ಥೆಯಲ್ಲಿ ಹೆಚ್ಚು ಹೆಚ್ಚಾಗಿ ಸದಸ್ಯತ್ವ ಮಾಡಿಸಿಕೊಳ್ಳುವುದರ ಜೊತೆಗೆ ಸಂಸ್ಥೆ ಬಿಟ್ಟು ತೆರಳದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ನೂತನವಾಗಿ ಪದಗ್ರಹಣ ಸ್ವೀಕರಿಸಿ ತಂಡ ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಸಂಘಟನೆ ಮಾಡುವುದರ ಜೊತೆಗೆ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸಿ, ಸದಸ್ಯರ ಸಹಕಾರವಿಲ್ಲದೆ ಅಧ್ಯಕ್ಷರು ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಸೇವೆಯ ಜೊತೆಗೆ ಸಂಘಕ್ಕೆ ಒಳ್ಳೆಯ ಹೆಸರು ತರುವಂತೆ ಸಲಹೆ  ನೀಡಿದರು.
ಯಾವುದೇ ಸೌಲಭ್ಯವಿಲ್ಲದ ಕುಗ್ರಾಮಗಳಿಗೆ ಲಯನ್ಸ್ ಸಂಸ್ಥೆ ವತಿಯಿಂದ ಸೋಲಾರ್ ಲ್ಯಾಂಪ್ ಅಳವಡಿಸಲಾಗುತ್ತಿದೆ. ಇಂತಹ ಕಾರ್ಯವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ನೆರವೇರಿಸುವಂತೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಚಿಂದಗಿರಿದೊಡ್ಡಿ ಮಹಿಳೆಯೊಬ್ಬರಿಗೆ ಹೊಲಿಗೆ ಯಂತ್ರ, ಹಾಲಹಳ್ಳಿ ಬಡಾವಣೆ ಶಾಲಾ ಮಕ್ಕಳಿಗೆ ನೋಟ್‍ಬುಕ್ ವಿತರಿಸಲಾಯಿತು.
2ನೇ ಉಪ ರಾಜ್ಯಪಾಲ ಅನಿಲ್‍ಕುಮಾರ್, ಅಪರ ಜಿಲ್ಲಾ ಸಂಪುಟ ಕಾರ್ಯದರ್ಶಿ ವಿ.ಕೆ. ಜಗದೀಶ್, ಪ್ರಾಂತೀಯ ಅಧ್ಯಕ್ಷ ನಾರಾಯಣಸ್ವಾಮಿ, ವಲಯಾಧ್ಯಕ್ಷ ಚಿಕ್ಕಣ್ಣ, ಡಿ.ಎಲ್.ಎಸ್.ಎಫ್ ಟ್ರಸ್ಟಿ ಜಿ.ಎ. ರಮೇಶ್, ನಿಕಟಪೂರ್ವ ಅಧ್ಯಕ್ಷ ಮೋಹನ್‍ಕುಮಾರ್, ಷುಗರ್‍ಸಿಟಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಆರ್. ಸುರೇಶ್, ಕಾರ್ಯದರ್ಶಿ ಜಯರಾಮೇಗೌಡ, ಖಜಾಂಚಿ ಬಿ.ಎಂ. ರಮೇಶ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

No comments:

Post a Comment