ಭಾರತೀನಗರ.ಜು.25- ಕೆ.ಎಂ.ದೊಡ್ಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15 ಸಾವಿರಕ್ಕೂ ಹೆಚ್ಚು ಇರುವುದರಿಂದ ಬಸ್ ಸಂಚಾರದಲ್ಲಿ ತೊಡಕು ಉಂಟಾಗುತ್ತಿದೆ ಎಂಬ ದೂರಿನ ಮೇರೆಗೆ ಪೊಲೀಸ್ ವರಿಷ್ಟಾಧಿಕಾರಿ ಭೂಷಣ್‍ಜಿಬೊರಸೆರವರ ಸೂಚನೆ ಮೇರೆಗೆ ಸಹಾಯಕ ಪೊಲೀಸ್ ವರಿಷ್ಟಾಧಿಕಾರಿ ಎಂ.ಪುಟ್ಟಮಾದಯ್ಯ ಸ್ಥಳಕ್ಕೆ ಭೇಟಿನೀಡಿ ಸಮಸ್ಯೆಗಳನ್ನು ನಿಯಂತ್ರಿಸಲು ಬೆಳಿಗ್ಗೆಯಿಂದ ಸಂಜೆಯವರೆಗೆ ಜಾಗೃತಿ ಮೂಡಿಸುವ ಮೂಲಕ ಮುಂದಾದರು.
ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಪಟ್ಟಣಕ್ಕೆ ಕರೆಸಿ ವಿವಿಧ ಕಾಲೇಜುಗಳಲ್ಲಿ ಇರುವ ಪ್ರಾಂಶುಪಾಲರ ಅಭಿಪ್ರಾಯವನ್ನು ಕೇಳಿದ ನಂತರ ಬಸ್‍ನ ಮುಂಭಾಗದ ಬಾಗಿಲಿಗೆ ಮಹಿಳೆಯರು ಮಾತ್ರ ಹತ್ತಬೇಕು ಎಂಬ ಭಿತ್ತಿಚಿತ್ರವನ್ನು ಅಟ್ಟಿಸುವುದುರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಇತ್ತೀಚಿಗೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುನ್ನೇಚ್ಚರಿಕೆಯಾಗಿ ಹಲವು ಕಟ್ಟುನಿಟ್ಟಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಕಾಲೇಜು ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಾರಿಗೆ ಬಸ್‍ನಲ್ಲಿ ಮುಂದಿನ ಬಾಗಿಲು ಮತ್ತು ಮುಂದಿನ ನಾಲ್ಕು ಸೀಟುಗಳು ಮಹಿಳೆಯರಿಗೆ ಮೀಸಲಿಟ್ಟಿರುವುದರಿಂದ ಪುರುಷರು ತೊಂದರೆ ನೀಡದೆ ಸಹಕರಿಸಬೇಕೆಂದು ಕೋರಿದರು. ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್‍ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿರುವುದಾಗಿ ತಿಳಿಸಿದರು.
ರಸ್ತೆಬದಿಯಲ್ಲಿ ಅಡ್ಡದಿಡ್ಡಿಯಿಂದ ನಿಲ್ಲಿಸಲಾಗಿದ್ದ ಪಾದಚಾರಿಗಳಿಗೆ ತುಂಬಾತೊಂದರೆ ಉಂಟಾಗಿತ್ತು. ಆದ್ದರಿಂದ ಸಾರ್ವಜನಿಕರಿಗೆ ಪ್ರತ್ಯೇಕ ಸ್ಥಳನಿರ್ಮಿಸಿ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.
ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯ ಎಡಬದಿಯಲ್ಲಿ ಮಾತ್ರ ಚಲಿಸಬೇಕು. ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಮುಂದಿನ ದಿನಗಳಲ್ಲಿ ಕೇಸು ದಾಖಲಿಸಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್, ಸಬ್ಬ್‍ಇನ್ಸ್‍ಪೆಕ್ಟರ್ ಗೋವಿಂದರಾಜು, ಕೆಎಸ್‍ಆರ್‍ಟಿಸಿ ಅಧಿಕಾರಿ ರಮೇಶ್, ಸಿಬ್ಬಂದಿಗಳಾದ ಎಂ.ಮಹದೇವಯ್ಯ, ಸಿ.ಮಹದೇವು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಆಗ್ರಹಿಸಿ ಜು. 28ರಂದು ಪಾಂಡವಪುರ ಬಂದ್
ಪಾಂಡವಪುರ: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುತ್ತಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕು ಹಾಗೂ ಅತ್ಯಾಚಾರ ಪ್ರಕರಣವನ್ನು ಹತ್ತಿಕ್ಕುವಲ್ಲಿ ವಿಫಲವಾಗಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಟೌನ್ ಬಿಜೆಪಿ ಘಟಕದ ವತಿಯಿಂದ ಜು. 28ರಂದು ಸೋಮವಾರ `ಪಾಂಡವಪುರ ಬಂದ್' ನಡೆಸಲಾಗುವುದು ಎಂದು ಟೌನ್ ಬಿಜೆಪಿ ಘಟಕ ಅಧ್ಯಕ್ಷ ಬೀರಶೆಟ್ಟಹಳ್ಳಿ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳು, ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಒಂದು ದಿನದ ಮಟ್ಟಿಗೆ ಬಾಗಿಲು ಮುಚ್ಚಿ ಸ್ಥಗಿತಗೊಳಿಸುವ ಮೂಲಕ ಬಂದ್ ಆಚರಣೆಗೆ ಸಹಕಾರ ನೀಡಬೇಕು. ಜತೆಗೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಿಕೊಡಬೇಕು ಎಂದು ಬೀರಶೆಟ್ಟಹಳ್ಳಿ ಭಾಸ್ಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಿದ್ದ ಕಬ್ಬು ಮತ್ತು ಭತ್ತ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತ ಕೃಷಿ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಯೋಗಿಶ್ ಉದ್ಘಾಟಿಸಿದರು.
ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕಬ್ಬು ಮತ್ತು ಭತ್ತ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಯೋಗಿಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತ ಕೇವಲ ಒಂದು ಬೆಳೆಯನ್ನು ಬೆಳೆಯಲು ತನ್ನ ಭೂಮಿಯನ್ನು ಸಿಮೀತವಾಗಿರಿಸದೆ ವೈವಿಧ್ಯಮಯ ಬೆಳೆಗಳನ್ನು ಬೆಳೆದಾಗ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾದಾಗಲೂ ರೈತನಿಗೆ ಒಂದು ನಷ್ಟ ಹೊಂದಿದರೂ ಮತ್ತೊಂದು ಬೆಳೆಯಲ್ಲಿ ಲಾಭವನ್ನು ಹೊಂದುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈತರು ಚಿಂತೆಯನ್ನು ಬಿಟ್ಟು ವೈವಿಧ್ಯಮಯ ಬೆಳೆ ಬೆಳೆಯುವತ್ತ ಚಿಂತನೆಯನ್ನು ಮಾಡಬೇಕು ಎಂದರು.
ಕೃಷಿಯನ್ನು ನಂಬಿ ಬದುಕುತ್ತಿರುವ ರೈತರಲ್ಲಿ ಕೃಷಿಯು ಲಾಭದಾಯಕ ಎಂಬ ವಿಷಯ ಕುರಿತು ಧೈರ್ಯ ತುಂಬುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸುತ್ತಿದೆ. ಹೀಗಾಗಿ ಆತಂಕಗೊಳ್ಳದೆ ಕಬ್ಬು ಮತ್ತು ಭತ್ತ ಬೆಳೆಯಲ್ಲಿ ಸುಧಾರಿಯ ಬೇಸಾಯ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟೇಲ್ ವೆಂಕಟೇಗೌಡ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಗಿರಿಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಚಿಕ್ಕಾಡೆ ವಿಜೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಯಜಮಾನ್ ಕೋಡಿಗೌಡ, ಯಜಮಾನ್ ಪ್ರಕಾಶ, ಗ್ರಾಮದ ಮುಖಂಡರಾದ ಸಿ.ಎಚ್.ರಾಮು, ರಘು, ಸಿ.ಬಿ.ಹರೀಶ, ಚಂದ್ರಿಕಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಗಣೇಶ್ ಬಾನಪ್ಪನವರ್, ಸಿಬ್ಬಂದಿಗಳಾದ ಅಮಿತಾ, ಅನಿತಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ನಡೆದ ವಿಚಾರ ಗೋಷ್ಠಿಯಲ್ಲಿ ಮಂಡ್ಯ ವಿ.ಸಿ.ಫಾರಂನ ಪ್ರಾಧ್ಯಾಪಕ ಡಾ.ರಾಮಚಂದ್ರ ಅವರು `ಭತ್ತ ಬೇಸಾಯದಲ್ಲಿ ಶ್ರೀಪದ್ದತಿ ಕ್ರಮಗಳ ಕುರಿತು' ಸಮಗ್ರ ಮಾಹಿತಿ ತಿಳಿಸಿದರು. ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೇಂದ್ರ ಕಚೇರಿಯ ಕೃಷಿ ನಿರ್ದೇಶಕ ಮನೋಜ್ ಮಿನೇಜಸ್ ಅವರು `ಕಬ್ಬಿನ ಸುಸ್ಥಿರ ಬೇಸಾಯದ ಕುರಿತು' ಹಾಗೂ `ಕಬ್ಬಿನಲ್ಲಿ ಅಂತರ್ ಬೆಳೆಯುವ ಕುರಿತು' ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಕೆ.ವಾಸುದೇವಮೂರ್ತಿ ಹಾಗೂ ಇತರರು ಕಬ್ಬಿನ ಬೇಸಾಯದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಜತೆಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನೂ ನಡೆಸಲಾಯಿತು.

No comments:
Post a Comment