Wednesday, 30 July 2014

ಮೈಸೂರು ಪ್ರಮುಖ ಸುದ್ದಿಗಳು.

ಓ ಆರ್ ಎಸ್ ದ್ರಾವಣದ ಉಪಯೋಗದ ಬಗ್ಗೆ ಅರಿವು ಮೂಡಿಸಿ: ಡಾ|| ಪುಷ್ಪಾವತಿ ಅಮರನಾಥ್
      ಮೈಸೂರು,ಜು.30.ಆಶಾ ಕಾರ್ಯಕರ್ತೆಯರು 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ಓ ಆರ್ ಎಸ್ ದ್ರಾವಣದ ಉಪಯೋಗ ಹಾಗೂ ಅತಿಸಾರ ಭೇಧಿ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ|| ಪುಷ್ಪಾವತಿ ಅಮರನಾಥ್ ಅವರು  ತಿಳಿಸಿದರು.
   ಅವರು ಸೋಮವಾರ ನಜರ್‍ಬಾದ್‍ನಲ್ಲಿರುವ ಎನ್.ಪಿ.ಸಿ. ಹೆರಿಗೆ ಆಸ್ಪತ್ರೆ ಪ್ರಾಂಗಣದಲ್ಲಿಂದು ಜೋಡಿ ನಂ.1 ಕಾರ್ಯಕ್ರಮವನ್ನು ಉದ್ಘಾಟಿಸಿ  ಸಾಂಕೇತವಾಗಿ ಮಕ್ಕಳಿಗೆ ಜಿಂಕ್ ದ್ರಾವಣ ಮತ್ತು  ಓ ಆರ್ ಎಸ್ ದ್ರಾವಣ ವಿತರಣೆ ಮಾಡಿದರು.
    ಮಕ್ಕಳಲ್ಲಿ ಅತಿಸಾರ ಭೇದಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಯಂದಿರು  ವೈಯಕ್ತಿಕ  ಸ್ವಚ್ಚತೆ, ಶುಚ್ಚಿತ್ವ ಆಹಾರ ಸೇವನೆ ಮತ್ತು ಶುದ್ಧ ಕುಡಿಯುವ ನೀರು ಬಳಕೆಗೆ ಹೆಚ್ಚಿನ ಗಮನಹರಿಸುವಂತೆ ಕರೆ ನೀಡಿದರು.  
    ಜಿಂಕ್ ಮತ್ತು ಓವ್ ಆರ್ ಎಸ್ ದ್ರಾವಣದ ಪ್ರಯೋಜನವನ್ನು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಉಮಾ ಇವರು ವಿವರಿಸುತ್ತಾ ಜಿಂಕ್ ಮತ್ತು  ಓ ಆರ್ ಎಸ್ ದ್ರಾವಣ ಸೇವನೆಯಿಂದ ದ್ವಿಗುಣ ಶಕ್ತಿ ದೊರೆಯುತ್ತದೆ. ಆದರಿಂದ ಈ ಯೋಜನೆಯನ್ನು ಜೋಡಿ ನಂ-1, ಎಂಬುದಾಗಿ ಹೆಸರಿಸಲಾಗಿದೆ ಎಂದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಹೆಚ್.ಟಿ. ಪುಟ್ಟಸ್ವಾಮಿ, ಅವರು ಮಾತನಾಡುತ್ತಾ, ಅತಿಸಾರ ಭೇಧಿಯಾದ ಮಕ್ಕಳಿಗೆ ಅಪೌಷ್ಠಿಕತೆ ಹಾಗೂ ನಿರ್ಜಲೀಕರಣ ಉಂಟಾಗಿ ಸಾವು ನೋವು ಸಂಭವಿಸುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮೈಸೂರು ಜಿಲ್ಲೆಯಾದ್ಯಾಂತ 2,01,726 ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
    ಮಕ್ಕಳ ಸಾವನ್ನು ತಡೆಯುವುದೇ ಆರೋಗ್ಯ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ. ಜಿಂಕ್ ದ್ರಾವಣ ಸೇವನೆಯಿಂದ ಭೇಧಿಯ ನಿಯಂತ್ರಣ, ಮತ್ತೆ ಮತ್ತೆ ರೋಗ ಬರುವುದನ್ನು ತಡೆಗಟ್ಟುವುದು, ಶರೀರದ ತೂಕ ಹೆಚ್ಚಿಸಲು ಸಹಾಯಕವಾಗಿದೆ. ಭೇಧಿ ಪ್ರಕರಣದ 2-6 ತಿಂಗಳ ಮಕ್ಕಳಿಗೆ ದಿನಕ್ಕೊಮ್ಮೆ ಅರ್ಧ ಚಮಚ ಜಿಂಕ್ ಸಿರಫ್ 6ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ 1 ಚಮಚದಂತೆ 14 ದಿನಗಳವರೆಗೆ ನೀಡಲಾಗುತ್ತದೆ.
   ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಉಮಾ ಅವರು ವಂದನಾರ್ಪಣೆ ಸಲ್ಲಿಸಿದರು.
ಮಲೇರಿಯಾ ವಿರೋಧಿ ಮಾಸಾಚರಣೆ
ಮೈಸೂರು,ಜು.30.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ಕ್ಯಾತಮಾರನಹಳ್ಳಿ ಸಮುದಾಯ ಭವನದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲಾಗುವುದು.
     ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
    ಅಂದು ಬೆಳಿಗ್ಗೆ 10 ಗಂಟೆಗೆ ಹುಲಿಯಮ್ಮ ದೇವಾಲಯ ಆವರಣದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಇಂದಿರಾ ಮಹೇಶ್ ಅವರು ಜಾಥಾಗೆ ಚಾಲನೆ ನೀಡಲಿದ್ದಾರೆ.
ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರ ತೆರವುಗೊಳಿಸಲು ಸೂಚನೆ
    ಮೈಸೂರು,ಜು.30.ಮೈಸೂರು ನಗರವನ್ನು ಪಾರಂಪರಿಕ ನಗರವೆಂದು ಘೋಷಿಸಿದ್ದು ಹಾಗೂ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳು ಇತ್ಯಾದಿಗಳಿಂದ ಮುಕ್ತ ನಗರವನ್ನಾಗಿ ಮಾಡಲು ದಿನಾಂಕ 29-12-2011ರ ಮೈಸೂರು ನಗರ ಪಾಲಿಕೆಯ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯವಾಗಿರುತ್ತದೆ.
    ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳು ಇತ್ಯಾದಿಗಳನ್ನು ಆಗಸ್ಟ್ 15 ರೊಳಗೆ ಸಂಬಂಧಪಟ್ಟವರು ಸ್ವ ಇಚ್ಫೆಯಿಂದ ತೆರೆವುಗೊಳಿಸ ತಕ್ಕದ್ದು, ತಪ್ಪಿದಲ್ಲಿ ಖಿhe ಏಚಿಡಿಟಿಚಿಣಚಿಞಚಿ oಠಿeಟಿ Pಟಚಿಛಿes (Pಡಿeveಟಿಣioಟಿ oಜಿ ಆisಜಿiguಡಿemeಟಿಣ ಂಛಿಣ 1981) g ರೀತ್ಯಾ  ಕಾನೂನು ಕ್ರಮ ಜರುಗಿಸಲಾಗುವುದೆಂದು ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಎಕ್ಸಾಮಿನೇಷನ್

     ಮೈಸೂರು,ಜು.30.ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲೊವರ್ ಡಿವಿಜನ್ ಕ್ಲರ್ಕ್ ಹಾಗೂ ಡಾಟ ಎಂಟ್ರಿ ಆಪರೇಟರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
      01-08-2014ಕ್ಕೆ    10+2 (ಪಿಯುಸಿ) ವಿದ್ಯಾರ್ಹತೆ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಹಾಗೂ ವಯೋಮಿತಿ  01-08-2014  ಕ್ಕೆ   18 ರಿಂದ 27 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದು. ಗರಿಷ್ಟ ವಯೋಮಿತಿಯಲ್ಲಿ ಪರಿಶಿಷ್ಟಜಾತಿ & ಪಂಗಡ/ ಓಬಿಸಿ(ಕೇಂದ್ರ)ಇವರಿಗೆ ಕ್ರಮವಾಗಿ 5 & 3 ವರ್ಷಗಳ ರಿಯಾಯಿತಿ  ಇರುತ್ತದೆ. ತಿತಿತಿ.ssಛಿoಟಿಟiಟಿe.ಟಿiಛಿ.iಟಿ   ಅಥವಾ ತಿತಿತಿ.ssಛಿoಟಿಟiಟಿe2.gov.iಟಿ  ಈ ವೆಬ್ ಸೈಟ್‍ಗಳ ಮೂಲಕ ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ hಣಣಠಿ://ssಛಿ.ಟಿiಛಿ.iಟಿ   ವೆಬ್ ಸೈಟ್‍ನಲ್ಲಿ ರುವ ಅರ್ಜಿ ನಮೂನೆಯ ಪ್ರಿಂಟ್ ತೆಗೆದುಕೊಂಡು ಭರ್ತಿಮಾಡಿ ಅಂಚೆ ಮೂಲಕ ದಿನಾಂಕ:  19-8-2014 ರೊಳಗೆ ಅರ್ಜಿಸಲ್ಲಿಸಬಹುದು.
      ಅರ್ಜಿ ನಮೂನೆಯನ್ನು ಸದರಿ ವೆಬ್‍ಸೈಟ್  ಅಥವಾ ಉಪಮುಖ್ಯಸ್ಥರು,   ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2516844, ಮೊಬೈಲ್ ಸಂಖ್ಯೆ 9449686641 ಯನ್ನು ಸಂಪರ್ಕಿಸುವುದು.
ಕಂಬೈನ್ಡ್  ಡಿಫೆನ್ಸ್ ಸರ್ವಿಸಸ್  ಎಕ್ಸಾಮಿನೇಷನ್-2014
   ಮೈಸೂರು,ಜು.30.(ಕ.ವಾ)-ನವದೆಹಲಿ ಕೇಂದ್ರ ಲೋಕ ಸೇವಾ ಆಯೋಗ  ರಕ್ಷಣಾ ಪಡೆಗಳಾದ ಆರ್ಮಿ, ನೇವಿ  & ಏರ್ ಫೋರ್ಸ್ ಗಳಲ್ಲಿ ಸುಮಾರು 464 ಆಫೀಸರ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ  ಯಾವುದಾದರು ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸ ಬಹುದು. ತಿತಿತಿ.uಠಿsಛಿoಟಿಟiಟಿe.ಟಿiಛಿ.iಟಿ  ವೆಬ್ ಸೈಟ್ ನಲ್ಲಿ   ಆನ್‍ಲೈನ್ ಮೂಲಕ ಅರ್ಜಿಯನ್ನು ದಿನಾಂಕ           18-08-2014 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಲೋಕ ಸೇವಾ ಆಯೋಗದ ವೆಬ್ ಸೈಟ್: hಣಣಠಿ://ತಿತಿತಿ.uಠಿsಛಿ.gov.iಟಿ   ಅಥವಾ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ದೂರವಾಣಿ: 0821-2516844,9449686641 ಇವರನ್ನು ಸಂಪರ್ಕಿಸುವುದು.
ಬ್ಯಾಂಕಿಂಗ್ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ
     ಮೈಸೂರು,ಜು.30.(ಕ.ವಾ)-ಭಾರತದ 20 ಕ್ಕಿಂತ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಅಧಿಕಾರಿ ಹುದ್ದೆಗಳನ್ನು  ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ  ಆನ್ ಲೈನ್‍ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

       ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ 20 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ   ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ಒಂದು ವರ್ಷದವರೆಗೆ ಅರ್ಜಿ ಸಲ್ಲಿಸಿ ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು. ಪ್ರತಿಯೊಂದು ಬ್ಯಾಂಕಿನ  ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.
     ಯಾವುದಾದರು ಪದವಿಯಲ್ಲಿ ತೇರ್ಗಡೆ  ಹೊಂದಿರುವ ಹಾಗೂ ವಯೋಮಿತಿ ಕನಿಷ್ಟ  20 ವರ್ಷ ತುಂಬಿರಬೇಕು & ಗರಿಷ್ಟ 30 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟಜಾತಿ/ಪಂಗಡ & ಓಬಿಸಿ(ಕೇಂದ್ರ) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ  ಇರುತ್ತದೆ ತಿತಿತಿ.ibಠಿs.iಟಿ  ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಸಲ್ಲಿಸಲು ಕೊನೆ ದಿನಾಂಕ: 11-08-2014 ಆಗಿರುತ್ತದೆ.
     ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ ತಿತಿತಿ.ibಠಿs.iಟಿ  ನೋಡಿ   ಅಥವಾ
 ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ದೂರವಾಣಿ- 2516844/8892019297 ಇವರನ್ನು ಸಂಪರ್ಕಿಸಿ. 
ಅಪರಿಚಿತÀ ಹೆಂಗಸು ಶವÀ ಪತ್ತೆಗಾಗಿ ಮನವಿ
ಮೈಸೂರು,ಜು.30.(ಕ.ವಾ)-ಮದ್ದೂರು-ಹನಕೆರೆ  ರೈಲು ನಿಲ್ದಾಣಗಳ ಮಧ್ಯ ರೈಲ್ವೆ ಕಿ.ಮೀ. ನಂ.75/500-600 ರಲ್ಲಿ ಜುಲೈ 29 ರಂದು   ಸುಮಾರು 35 ವರ್ಷದ ಅಪರಿಚಿತ ಹೆಂಗಸು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ಹೆಂಗಸು 5.3 ಅಡಿ ಎತ್ತರ, ಗೋಧಿ ಮೈಬಣ್ಣ, ದೃಢವಾದ ಶರೀರ, ದುಂಡುಮುಖ, ದಪ್ಪನೆಯ ಮೂಗು, ತಲೆಯಲ್ಲಿ ಸುಮಾರು 15 ಇಂಚು ಉದ್ದದ ಕಪ್ಪು  ಕೂದಲು, ಬಲ ಮೂಗಿನಲ್ಲಿ ಮೂಗುತಿ, ಬಲಕಾಲಿನಲ್ಲಿ ಕಪ್ಪು ದಾರ ಕಟ್ಟಿರುತ್ತದೆ. ಹಳದಿ ಬಣ್ಣದ ಚೂಡಿದಾರ, ಬಿಸ್ಕೇಟ್ ಬಣ್ಣದ ಜೂಡಿದಾರ್ ಪ್ಯಾಂಟ್ ಅದರಲ್ಲಿ ಕಪ್ಪು ಬಣ್ಣದ ಚುಕ್ಕೆಗಳು, ಕೆಂಪು ಬಣ್ಣದ ಚರ್ಮದ ಚಪ್ಪಲಿ ಧರಿಸಿರುತ್ತಾರೆ.
ಮೃತ ಹೆಂಗಸಿನ ದೇಹವÀನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

ಕಾಣೆಯಾಗಿರುವ ಹೆಂಗಸು ಹಾಗೂ ಮಗುವಿನ ಪತ್ತೆಗಾಗಿ ಮನವಿ
ಮೈಸೂರು,ಜು.30. ಸಿದ್ದಯ್ಯ ಎಂಬುವವರು ತಮ್ಮ ಸೊಸೆ, ಶಿಲ್ಪ ಹಾಗೂ ಅವಳ ಮಗ ದಿನಾಂಕ 9-7-2014 ರಿಂದ  ಕಾಣೆಯಾಗಿದ್ದಾರೆÉ ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಕಾಣೆಯಾದ ಶಿಲ್ಪ  ಚಹರೆ ಇಂತಿದೆ: 22 ವರ್ಷ,  5.2 ಅಡಿ ಎತ್ತರ, ಕಪ್ಪು ಬಣ್ಣ, ತೆಳ್ಳನೇ ಶರೀರ, ಕಪ್ಪ ಕೂದಲು, ಕನ್ನಡ ಮಾತನಾಡುತ್ತಾರೆ.  ಕೆಂಪು ಸೀರೆ, ಬಿಳಿ ರವಿಕೆ ಧರಿಸಿರುತ್ತಾಳೆ.
      ಕಾಣೆಯಾದ ಬಸವರಾಜು ಚಹರೆ ಇಂತಿದೆ:  1 ವರ್ಷ,  ಗಂಡು ಮಗು ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ.
       ಕಾಣೆಯಾದ ಹೆಂಗಸು ಹಾಗೂ ಮಗು ಪತ್ತೆಯ ಬಗ್ಗೆ ವಿವರ ಅಥವಾ ಮಾಹಿತಿ ತಿಳಿದು ಬಂದಲ್ಲಿ ಎಸ್.ಪಿ. ದೂ.ಸಂ: 2520040   ಅಥವಾ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 2444800 ಅಥವಾ ಮೈಸೂರು ಸೌತ್ ಪೊಲೀಸ್ ಠಾಣೆ ದೂ.ಸಂ: 0821-2444955ನ್ನು ಅಥವಾ ಆರಕ್ಷಕ ಉಪ ನಿರೀಕ್ಷಕರವರಿಗಾಗಲಿ ತಿಳಿಸುವಂತೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಕೋರಿದ್ದಾರೆ.

No comments:

Post a Comment