ಆದಾಯ ತೆರಿಗೆ ವಿವರ ಸಲ್ಲಿಕೆಗಾಗಿ 80 ವಿಶೇಷ ಕೌಂಟರ್‍ಗಳು
ಬೆಂಗಳೂರು , ಜುಲೈ 25, 2014
ವಾರ್ಷಿಕ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ತೆರಿಗೆದಾರರ ಅನುಕೂಲತೆಗಾಗಿ ಆದಾಯ ತೆರಿಗೆ ವಿಭಾಗ ಇದೇ ಜುಲೈ 29ರಿಂದ 31ರವರಗೆ ಮೂರು ದಿನಗಳ ಕಾಲ ಬೆಂಗಳೂರಿನ ಗಾಯತ್ರಿ ವಿಹಾರ ಅರಮನೆ ಮೈದಾನದಲ್ಲಿ 80 ತೆರಿಗೆ ವಿವರ ಸಲ್ಲಿಕೆ ಕೌಂಟರ್‍ಗಳಮ್ಮು ತೆರೆಯಲಿದೆ. ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶ್ರೀ. ತಿರುಮಲ ಕುಮಾರ್ , ಹಿರಿಯ ಆದಾಯ ತೆರಿಗೆ ಆಯುಕ್ತ, ಬೆಂಗಳೂರು v, ಆದಾಯ ತೆರಿಗೆ ಪಾವತಿ ಪ್ರತಿಯೊಬ್ಬ ತೆರಿಗೆದಾರನ ಆದ್ಯ ಕರ್ತವ್ಯ ಈ ಬಾರಿ ಆದಾಯ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ತೆರಿಗೆದಾರರಿಗೆ ಸಹಕರಿಸಲು ನಗರದಲ್ಲಿ ಮೂರು ದಿನಗಳ ಕಾಲ ವಿಶೇಷ ಆದಾಯ ತೆರಿಗೆ ಪಾವತಿ ಕೌಂಟರ್‍ಗಳನ್ನು ತೆರೆಯಲಾಗುತ್ತದೆ. ಈ ಕೌಂಟರ್‍ಗಳು ಮೂರು ದಿನಗಳ ಕಾಲ ಬೆಳಗ್ಗೆ 9:30 ರಿಂದ ಸಂಜೆ 5ರವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಐದು ಲಕ್ಷಕ್ಕೂ ಅಧಿಕ ಆದಾಯವನ್ನು ಹೊಂದಿರುವ ತೆರಿಗೆದಾರರು ಇ-ಪೈಲಿಂಗ್ ಮೂಲಕವಷ್ಟೇ ತೆರಿಗೆ ವಿವರಗಳನ್ನು ಸಲ್ಲಿಸಬಹುದಾದ ಕಾರಣ ಈ ಬಾರಿ ಇ-ಫೈಲಿಂಗ್ ಕೌಂಟರ್‍ಗಳನ್ನು ತೆರೆಯಲಾಗುತ್ತದೆ ಎಂದು ಶ್ರೀ. ತಿರುಮಲ ಕುಮಾರ್ ಹೇಳಿದರು.
ಶ್ರೀ . ಪ್ರವೀಣ್ ಕಾರಂತ್ , ಜಂಟಿ ಆಯುಕ್ತರು, ರೇಂಜ್-14/15 , ಆದಾಯ ತೆರಿಗೆ ಇಲಾಖೆ, ಬೆಂಗಳೂರು ಮಾತನಾಡಿ ಇ-ಫೈಲಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಲು ಈ ಬಾರಿ 60 ಮದ್ಯವರ್ತಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಇ-ಫೈಲಿಂಗ್ ಮೂಲಕ ತೆರಿಗೆ ಸಲ್ಲಿಸಲು ಇಚ್ಛಿಸುವ ತೆರಿಗೆದಾರರಿಗೆ ಅವರು ಸಹಕರಿಸಲಿದ್ದಾರೆ. 60 ಇ-ಫೈಲಿಂಗ್ ಕೌಂಟರ್‍ಗಳನ್ನು ಈ ಉದ್ದೆಶಕ್ಕಾಗಿ ತೆರೆಯಲಾಗುತ್ತದೆ ಎಂದು ಹೇಳಿದರು.ಶ್ರೀಮತಿ. ಹರಿತಾ, ಜಂಟಿ ಆಯುಕ್ತರು, ರೇಂಜ್-13, ಆದಾಯ ತೆರಿಗೆ ಇಲಾಖೆ, ಬೆಂಗಳೂರು ಮಾತನಾಡಿ ತೆರಿಗೆದಾರರು ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಲು ಕರೆ ನೀಡಿದರು.

No comments:
Post a Comment