ಕೆ.ಆರ್.ಪೇಟೆ,ಆ.09- ತಾಲೂಕಿನಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ ಹಾಗಾಗಿ ರಾಜ್ಯ ಸರ್ಕಾರವು ತಕ್ಷಣ ಕೆ.ಆರ್.ಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಶಾಸಕ ಕೆ.ಸಿ.ನಾರಾಯಣಗೌಡ ಒತ್ತಾಯ ಮಾಡಿದರು.
ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಂಬಂಧ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಿಗೆ ಬರೆದಿರುವ ಮನವಿ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ ತಾಲೂಕಿನ ಮೂರು ತಾಲೂಕು ಸಂಪೂರ್ಣ ಮಳೆಯಾಶ್ರಿತ ಹೋಬಳಿಗಳಿವೆ ಇಲ್ಲಿ ಮಳೆಯಾಗದೇ ಇರುವ ಪರಿಣಾಮ ಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತಿಹೋಗಿದ್ದು ಕನಿಷ್ಠ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ ಈ ಬಗ್ಗೆ ಉಸ್ತುವಾರಿ ಸಚಿವರು ಪರಿಸ್ಥಿತಿಯನ್ನು ಖುದ್ದು ಬೇಟಿ ನೀಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಅಗತ್ಯ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ರೈತರು ಮತ್ತು ನಾಗರೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದಿರುವ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಸಾಲದ ಬಾಧೆಯಿಂದ ತಾಲೂಕಿನ 08 ಜನ ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಪೂರ್ಣ ಮಳೆಯಾಶ್ರಿತ ಪ್ರದೇಶ ಹೊಂದಿರುವ ತಾಲೂಕಿನ ಸಂತೇಬಾಚಹಳ್ಳಿ, ಶೀಳನೆರೆ, ಬೂಕನಕೆರೆ ಮತ್ತು ಅರೆ ನೀರಾವರಿ ಪ್ರದೇಶಗಳನ್ನು ಹೊಂದಿರುವ ಕಸಬಾ, ಅಕ್ಕಿಹೆಬ್ಬಾಳು ಹಾಗೂ ಕಿಕ್ಕೇರಿ ಹೋಬಳಿಗಳಲ್ಲಿ ಅಂತರ್ಜಲ ಸ್ಥಗಿತಗೊಂಡಿದ್ದು ಪಂಪ್ ಸೆಟ್ ಬಳಕೆದಾರ ರೈತರು ಬೆಳೆದಿರುವ ಕಬ್ಬು, ಬಾಳೆ, ತೆಂಗು, ಅಡಕೆ ಮುಂತಾದ ಬೆಳೆಗಳು ರೈತರ ಕಣ್ಣ ಮುಂದೆಯೇ ಒಣಗಲಾರಂಭಿಸಿವೆ. ಬೆಳೆ ಕೈತಪ್ಪಿರುವುದರಿಂದ ರೈತರು ಕೃಷಿಗಾಗಿ ಮಾಡಿದ ಸಾಲದ ಬಡ್ಡಿ ಬೆಲೆಯುತ್ತಿದ್ದು ರೈತ ಸಮುದಾಯ ಆತ್ಮಹತ್ಯೆ ಮಾಡಿಕೊಲ್ಳುವ ಅಥವಾ ಹೊಟ್ಟೆ ಪಾಡಿಗಾಗಿ ಗುಳೇ ಹೋಗುವ ಸನ್ನಿವೇಶ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 03 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಬರದ ಕರಿನೆರಳಿಗೆ ಸಿಕ್ಕಿ ತತ್ತರಿಸುತ್ತಿರುವ ಕೆ.ಆರ್.ಪೇಟೆ ತಾಲೂಕನ್ನು ಮಾತ್ರ ಬರಪಿಡಿತ ಪ್ರದೇಶವೆಂದು ಘೋಷಿಸದೆ ಇರುವುದು ದುರ್ದೈವದ ಸಂಗತಿ ಎಂದು ನೋವಿನಿಂದ ಹೇಳಿದರು.
ಈ ಬಗ್ಗೆ ತಾವು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದರೂ ರಾಜಕೀಯ ಕಾರಣಗಳಿಗಾಗಿ ಕೆ.ಆರ್.ಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದೆ ರೈತರ ಬದುಕಿನ ಮೇಲೆ ಬರೆ ಎಳೆಯಲಾಗುತ್ತಿದೆಯೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಎಲ್ಲಾ ಕೆರೆಕಟ್ಟೆಗಳನ್ನು ಹೇಮಾವತಿ ನೀರಿನಿಂದ ತುಂಬಿಸದೆ ಬೇರೆ ತಾಲೂಕುಗಳಿಗೆ ನೀರು ಹರಿಸಲು ಸಂಚು ರೂಪಿಸಲಾಗುತ್ತಿದೆ ಈಗೇನಾದರೂ ಆದರೆ ತಾಲೂಕಿನ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾರಾಯಣಗೌಡ ಎಚ್ಚರಿಸಿದರು.
ಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಹೆಚ್.ಆರ್.ಲೋಕೇಶ್, ಸಂತೋಷ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕೆ.ಆರ್.ಪೇಟೆ,ಆ.09- ತಾಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಹೆಮ್ಮನಹಳ್ಳಿ ಗ್ರಾಮದ ರೇಣುಕಾಮಂಜೇಗೌಡ ಅವರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಜೆ.ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೊನ್ನೇನಹಳ್ಳಿ ಕೃಷ್ಣೇಗೌಡ, ಹೆಚ್.ವಿ.ಸತೀಶ್, ಹೆಮ್ಮನಹಳ್ಳಿ ಕೃಷ್ಣೇಗೌಡ, ಅಗಸರಹಳ್ಳಿ ದೇವರಾಜು ಇತರರು ಇದ್ದರು.
ಚಿತ್ರಶೀರ್ಷಿಕೆ:09ಞಡಿಠಿeಣ-02 ಕೆ.ಆರ್.ಪೇಟೆ: ತಾಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ರೇಣುಕಮ್ಮಮಂಜೇಗೌಡ ಅವರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿನಂದಿಸಿದರು. ಮುಖಂಡರಾದ ಹೆಚ್.ಜೆ.ರಮೇಶ್, ಹೊನ್ನೇನಹಳ್ಳಿ ಕೃಷ್ಣೇಗೌಡ, ಎಚ್.ವಿ.ಸತೀಶ್, ಹೆಮ್ಮನಹಳ್ಳಿ ಕೃಷ್ಣೇಗೌಡ ಇತರರು ಇದ್ದರು.
=======================
ಕೆ.ಆರ್.ಪೇಟೆ,ಆ.09- ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರಾದ ನಾವು ಆಡಳಿದಲ್ಲಿ ಸಂಪೂರ್ಣ ಕನ್ನಡ ಬಳಕೆಯ ಬಗ್ಗೆ ಪ್ರತಿಜ್ಞೆ ಮಾಡುತ್ತೇವೆ. ನಾಡಿನ ಉದ್ದಗಲಕ್ಕೂ ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡಿಸುವ ಕಾರ್ಯ ಮಾಡುತ್ತೇವೆ. ರಾಜ್ಯದಾದ್ಯಂತ ವಿಚಾರ ಸಂಕಿರಣಗಳ ಮೂಲಕ ಸರ್ಕಾರಿ ನೌಕರರಿಗೆ ಆಡಳಿದಲ್ಲಿ ಕನ್ನಡದ ಬಳಕೆಯ ಬಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಘೋಷಿಸಿದ್ದಾರೆ.
ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಮುದಾಯ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ಕಾರಿ ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ನೌಕರರ ಸಂಘ ಅವಳಿ-ಜವಳಿಗಳಿದ್ದಂತೆ. ಕಸಾಪ ಸಂಘಟಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಸರ್ಕಾರಿ ನೌಕರರ ಸಂಘ ಅಂತಕರಣ ಮತ್ತು ಆರ್ಥಿಕ ಶಕ್ತಿಯನ್ನು ನೀಡಿದೆ. ಸಮ್ಮೆಳನಗಳ ಯಶಸ್ಸಿನಲ್ಲಿ ಸರ್ಕಾರಿ ನೌಕರರ ಪಾಲಿದೆಯೆಂದ ಪಟೇಲ್ ಪಾಂಡು ಪ್ರತಿಯೊಬ್ಬ ಸರ್ಕಾರಿ ನೌಕರನೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಳ್ಳಬೇಕೆಂದರು. ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಪ್ರವೆಶಿಸುವ ಮೂಲಕ ಕನ್ನಡ ಕಟ್ಟುವ ಪರಿಷತ್ತಿನ ಕೆಲಸಕ್ಕೆ ಹೊಸ ಆಯಾಮ ನೀಡಬೇಕೆಂದರು.
ಪ್ರತಿಯುಬ್ಬ ನೌಕರನಲ್ಲೂ ಕನ್ನಡದ ಕೆಚ್ಚು ಪ್ರತಿಫಲಗೊಳ್ಳಬೇಕು. ನಾವು ಬದ್ದತೆಯಿಂದ ಕೆಲಸ ಮಾಡಿದರೆ ಕನ್ನಡ ನಾಡಿನಲ್ಲಿ ಕನ್ನಡ ಕಟ್ಟುವುದು ಸವಾಲಿನ ವಿಚಾರವಲ್ಲ. ಸರ್ಕಾರಿ ನೌಕರರ ಹೋರಾಟದ ಫಲವಾಗಿಯೇ ಇಂದು ಆಡಳಿತದಲ್ಲಿ ಶೇ. 80 ರಷ್ಟು ಕನ್ನಡದ ಬಳಕೆಯಾಗುತ್ತಿದೆ. ಎಲ್ಲಾ ಸರ್ಕಾರಿ ಆದೇಶಗಳೂ ಕನ್ನಡದಲ್ಲಿಯೇ ಹೊರಬರುತ್ತಿವೆ. ಆಡಳಿದಲ್ಲಿ ಕನ್ನಡ ಬಳಸದ ಅಧಿಕಾರಿಗಳಿಗೆ ದಂಡ ವಿಧಿಸುವುದಕ್ಕೆ ನೌಕರರ ಸಂಘದ ಬೆಂಬಲವಿದೆಯೆಂದು ತಿಳಿಸಿದ ಅವರು ಸರ್ಕರಿ ನೌಕರರೂ ಕನ್ನಡದ ಮಕ್ಕಳೇ. ನಮ್ಮ ಉಸಿರಿನಲ್ಲಿ ಕನ್ನಡವಿದೆಯೆಂದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ಭತ್ಯೆಗಳನ್ನು ನೀಡಬೇಕು. ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗವಾಗುತ್ತಿದ್ದು ಇದರಿಂದ ನೌಕರರಿಗೆ ಕಿರುಕುಳವಾಗುತ್ತಿದೆ. ಆಡಳಿತ ಲೋಪ, ಅನುದಾನ ಬಳಕೆಯ ಲೋಪ ಮುಂತಾದ ಆಡಳಿತಾತ್ಮಕ ವಿಷಯಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಬಳಕೆ ಮಾಡಿದರೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ವೈಯಕ್ತಿಕ ಮಾಹಿತಿ ಕೇಳುವುದಕ್ಕೆ ನಮ್ಮ ವಿರೋಧವಿದೆಯೆಂದು ಪಾಂಡು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಕನ್ನಡ ಪರಂಪರೆಯ ಇತಿಹಾಸ ಮತ್ತು ಆಡಳಿದಲ್ಲಿ ಕನ್ನಡ ಬಳಕೆ ಕುರಿತು ವಿಚಾರ ಮಂಡಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮ್ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಪ್ರದಾನ ಕಾರ್ಯದರ್ಶಿ ಎಸ್.ಕೆ.ರವಿಕುಮಾರ್, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮೇಶ್, ಖಜಾಂಚಿ ಬಿ.ಆರ್.ವೆಂಕಟೇಶ್, ಪಿ.ಜೆ.ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಕಂದಾಯ ಇಲಾಖೆಯ ಮಾದೇಗೌಡ, ಕೆ.ಆರ್.ನೀಲಕಂಠ ವೇದಿಕೆಯಲ್ಲಿದ್ದರು.
ಚಿತ್ರಶೀರ್ಷಿಕೆ:09ಞಡಿಠಿeಣ-03: ಕೆ.ಆರ್.ಪೇಟೆ: ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಮುದಾಯ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ಕಾರಿ ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆ ಕುರಿತ ವಿಚಾರ ಸಂಕಿರಣವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಉದ್ಘಾಟಿಸಿ ಮಾತನಾಡಿದರು.
=============================
ಕೆ.ಆರ್.ಪೇಟೆ,ಆ.09: ಖಾಸಗಿ ಶಾಲೆಗೆ ಸರಸಮನಾಗಿ ಸುಮಾರು 500ಮಕ್ಕಳನ್ನು ದಾಖಲು ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಗೆ ವಿಧಾನಪರಿಷತ್ ಸದಸ್ಯ ಗೋ.ಮಧುಸೂಧನ್ 2ಲಕ್ಷ ರೂಗಳ ಅನುಧಾನವನ್ನು ನೀಡುತ್ತಿರುವುದಾಗಿ ಪ್ರಕಟಿಸಿದರು.
ಅವರು ಪಟ್ಟಣದ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷರಾಗಿದ್ದ ಈಚೆಗೆ ನಿಧನರಾದ ದಿವಂಗತ ಯು.ಗೋಪಾಲರಾವ್ ನಿವಾಸಕ್ಕೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಿಕ ಶಾಲೆಗೆ ಬೇಟಿ ನೀಡಿ ಪಾಂಡವಪುರ ಉಪವಿಭಾಗಾಧಿಕಾರಿಗಳ ವಿಶೇಷ ಆಸಕ್ತಿಯಿಂದ 150ಮಕ್ಕಳಿದ್ದ ಈ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ತಕ್ಷಣವೆ ತಮ್ಮ ಅನುದಾನದಲ್ಲಿ 2ಲಕ್ಷ ರೂಗಳನ್ನು ತಕ್ಷಣವೇ ನೀಡುವುದಾಗಿ ತಿಳಿಸಿದರು.ನ ಗುಣಮಟ್ಟದ ಶಿಕ್ಷಣ ನೀಡಲು ಸನ್ನದ್ದವಾಗಿರುವ ಶತಮಾನ ತುಂಬಿದ ಸರ್ಕಾರಿ ಶಾಲೆ ಯ ಬೆಳವಣೆಗೆ ಒಳ್ಳೆಯ ಮುನ್ನುಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಬಿ.ಸಿ.ಎಸ್.ಕುಮಾರ್, ಶಿಕ್ಷಕ ಸುರೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜು, ಕತ್ತರಘಟ್ಟವಾಸು, ಲೇಪಾಕ್ಷಿಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಬಸವರಾಜು ಮತ್ತಿತರರು ಹಾಜರಿದ್ದರು.

'

No comments:
Post a Comment