ಮಂಡ್ಯ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಲ ಸಂಪನ್ಮೂಲ ಇಲಾಖೆ(ಸಣ್ಣ ನೀರಾವರಿ) 5ನೇ ಸಣ್ಣ ನೀರಾವರಿ ಗಣತಿಯ ಜಿಲ್ಲಾ ಮಟ್ಟದ ಕಾರ್ಯಾಗಾರ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ನಡೆಯಿತು.
ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯು ಶೇ.100ರಷ್ಟು ಕೇಂದ್ರ ಪುರಸ್ಕøತ ಸಣ್ಣ ನೀರಾವರಿ ಅಂಕಿಅಂಶಗಳ ಸಮನ್ವಯೀಕರಣ ಯೋಜನೆಯಡಿಯಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಸಣ್ಣ ನೀರಾವರಿ ಗಣತಿ ಕೈಗೊಳ್ಳಲಾಗುತ್ತಿದೆ. ಸಣ್ಣ ನೀರಾವರಿ ಯೋಜನೆ ಗಣತಿಯಡಿ ಎರಡು ಮುಖ್ಯ ವಿಧಗಳಾಗಿ ಅಂತರ್ಜಲ ಯೋಜನೆ ಮತ್ತು ಮೇಲ್ಮೈಜಲ ಯೋಜನೆಗಳೆಂದು ಪರಿಗಣಿಸಿ ಗಣತಿ ಮಾಡಲಾಗುತ್ತಿದೆ ಎಂದರು.
ಜಾತಿಗಣತಿ ಮಾದರಿಯಲ್ಲಿ ನೀರಾವರಿ ಗಣತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಸಮಿತಿ ಅಧ್ಯಕ್ಷರಾಗಿದ್ದು, ಜಂಟಿ ಕೃಷಿ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ವಿಭಾಗದ ಎಂಜಿನಿಯರ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಚನ್ನಕೇಶವ, ಸಾಂಖ್ಯಿಕ ಅಧಿಕಾರಿ ಸತ್ಯನ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲ ಎಂಜಿನಿಯರ್ ಕೆ.ವೆಂಕಟೇಶ್ ಸೇರಿದಂತೆ ತಹಸೀಲ್ದಾರ್‍ಗಳು, ತಾಪಂ ಇಒಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಮಂಡ್ಯ: ನಗರದ ಸಿದ್ದಾರ್ಥ ವಿದ್ಯಾಸಂಸ್ಥೆಯಲ್ಲಿ ರೋಟರಿ, ಇನ್ನರ್‍ವ್ಹೀಲ್ ಸಂಸ್ಥೆ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ಅಂಗವಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂಗಳನ್ನು ಇನ್ನರ್‍ವ್ಹೀಲ್ ಅಧ್ಯಕ್ಷೆ ರಮ್ಯಾರಾಣಿ ವಿತರಿಸಿದರು.
ನಂತರ ಅವರು ಮಾತನಾಡಿ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವು ಯೋಜನೆಗಳ ಮೂಲಕ ಸಾವಿರಾರು ಕೋಟಿ ರೂ. ನೀಡುತ್ತಿದೆ. ಇದರ ಜತೆಗೆ ಸಂಘಸಂಸ್ಥೆಗಳು ಸಹ ಸಮವಸ್ತ್ರ, ನೋಟ್‍ಬುಕ್ ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸುತ್ತಿವೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರುವಂತೆ ತಿಳಿಸಿದರು.
ಇನ್ನರ್ ವ್ಹೀಲ್ ಸಂಸ್ಥೆಯ ಚಂದ್ರ ರವೀಂದ್ರ, ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್.ರವೀಂದ್ರ, ಸಿದ್ದಾರ್ಥ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಡಿ.ಜಯರಾಮ್, ನಗರಸಭೆ ಸದಸ್ಯರಾದ ಬಿ.ಸಿದ್ದರಾಜು, ಅರುಣ್‍ಕುಮಾರ್, ಉಪನ್ಯಾಸಕ ಎಚ್.ಎಸ್.ನಾಗೇಶ್ ಭಾಗವಹಿಸಿದ್ದರು.
No comments:
Post a Comment