Friday, 28 August 2015

ಅದಾಲತ್‍ನಲ್ಲಿ 15 ಕ್ರಿಮಿನಲ್ ಮೊಕ್ಕದಮೆ ವಿಲೇವಾರಿ

 ಅದಾಲತ್‍ನಲ್ಲಿ 15 ಕ್ರಿಮಿನಲ್ ಮೊಕ್ಕದಮೆ ವಿಲೇವಾರಿ
     ಮೈಸೂರು,ಆ.27.ಜಿಲ್ಲಾ ನ್ಯಾಯಾಲಯದಲ್ಲಿ ಇಂದು ನಡೆದ ಲೋಕ ಅದಾಲತ್‍ನಲ್ಲಿ ಮೈಸೂರು ನಗರಕ್ಕೆ ಸಂಬಂಧಪಟ್ಟ 15 ಕ್ರಿಮಿನಲ್ ಮೊಕ್ಕದಮೆಯನ್ನು ಸಂದಾನ ಮೂಲಕ ವಿಲೇವಾರಿ ಮಾಡಲಾಯಿತು.
    ಜಿಲ್ಲೆಯಲ್ಲಿ  01, ಜನವರಿ 2015 ರಿಂದ ಲೋಕ ಅದಾಲತ್ ನಡೆಯುತ್ತಿದ್ದು, ಇಂದು ಮೈಸೂರು ನಗರದ ಕ್ರಿಮಿನಲ್ ಮೊಕ್ಕದಮೆಗೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಹಾಗೂ  ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರುಗಳು ಲೋಕ ಅದಾಲತ್ ನಡೆಸಿ ಸಂದಾನದ ಮೂಲಕ ಮೊಕ್ಕದಮೆಗಳನ್ನು ವಿಲೇವಾರಿ ಮಾಡಿದರು.
     ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು 11 ಕ್ರಿಮಿನಲ್ ಮೊಕ್ಕದಮೆಗಳನ್ನು ಸಂಕೇತಿಕವಾಗಿ ವಿಲೇವಾರಿ ಮಾಡಿದರು. ಇನ್ನುಳಿದ ಮೊಕ್ಕದಮೆಗಳು ವಿವಿಧ ನ್ಯಾಯಾಧೀಶರ ನೇತೃತ್ವದಲ್ಲಿ ವಿಲೇವಾರಿ ಮಾಡಲಾಯಿತು.
    ಮೈಸೂರು ಜಿಲ್ಲೆಯಲ್ಲಿ 4233 ಕ್ರಿಮಿನಲ್ ಮೊಕ್ಕದಮೆಗಳಿದ್ದು ಲೋಕ ಅದಾಲತ್‍ನಲ್ಲಿ  ವಿಲೇವಾರಿ ಮಾಡಲು 3 ಸಾವಿರ ಮೊಕ್ಕದಮೆಗಳನ್ನು ಗುರುತಿಸಲಾಗಿದೆ. ಈವರೆಗೆ 1500 ಮೊಕ್ಕದಮೆಗಳು ವಿಲೇವಾರಿ ಮಾಡಲಾಗಿದೆ. ಮೈಸೂರು ತಾಲ್ಲೂಕಿಗೆ ಸಂಬಂಧಿಸಿದಂತೆ 650 ಮೊಕ್ಕದಮೆಗಳಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ಸೆಪ್ಟೆಂಬರ್ 2 ರಂದು ಲೋಕ ಅದಾಲತ್ ನಡೆಸಲಾಗುವುದು. ಮೈಸೂರು ಜಿಲ್ಲೆಯ ನ್ಯಾಯಾಲಯಗಳಲ್ಲಿ ದಿನಾಂಕ 12-09-2015 ರವರೆಗೆ ಲೋಕ ಅದಾಲತ್ ನಡೆಯಲಿದೆ. ಆಗಸ್ಟ್ 28 ರಂದು ಮೈಸೂರು ಕೇಂದ್ರ ಕಾರಾಗೃಹದಲ್ಲಿಯೂ ಸಹ ಲೋಕ ಅದಾಲತ್ ನಡೆಸಲಾಗುವುದು.
      

No comments:

Post a Comment