Wednesday, 19 August 2015

“ಗಾಂಧೀಜಿ ದೃಷ್ಟಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಆದರ್ಶಗ್ರಾಮ ಪರಿಕಲ್ಪನೆ

“ಗಾಂಧೀಜಿ ದೃಷ್ಟಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಆದರ್ಶಗ್ರಾಮ ಪರಿಕಲ್ಪನೆ”
ಕುರಿತ ಕಾರ್ಯಾಗಾರ ದ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳು
1. ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಗ್ರಾಮದ ಸಮಸ್ಯೆಗಳು, ವ್ಯಾಜ್ಯಗಳು ಪಂಚಾಯ್ತಿ ಕಟ್ಟೆಯಲ್ಲೇ ತೀರ್ಮಾನ ಕೈಗೊಳ್ಳುವಂತೆ ಅಧಿಕಾರವನ್ನು ನೀಡುವುದೆಂದು ಈ ಸಭೆಯು ಸರ್ಕಾರವನ್ನು ಒತ್ತಾಯಿಸುತ್ತದೆ.
2. ಗ್ರಾಮಗಳ ಮೂಲ ಕಸುಬುಗಳಿಗೆ ಸರ್ಕಾರದಿಂದ ವಿಶೇಷ ರಿಯಾಯಿತಿ ಮತ್ತು ಪ್ಯಾಕೇಜ್‍ಗಳನ್ನು ನೀಡಲು ಸಭೆ ಸರ್ಕಾರವನ್ನು ಆಗ್ರಹಿಸುತ್ತದೆ.
3. ಗ್ರಾಮ ಸ್ವಚ್ಛತೆ, ಗ್ರಾಮ ನೈರ್ಮಲ್ಯ, ಕುಡಿಯುವ ನೀರು, ವಿದ್ಯುಚ್ಛಕ್ತಿ, ರಸ್ತೆ, ಶಾಲೆ, ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿರುವಂತೆ ಗಮನ ಹರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತದೆ.
4. ಆಯಾ ಗ್ರಾಮದಲ್ಲಿ ರೈತರು ಸ್ಥಳೀಯವಾಗಿ ಬೆಳೆಯುವ ದವಸ ಧಾನ್ಯಗಳಿಗೆ, ಸರ್ಕಾರದಿಂದಲೇ ನಿಗದಿಮಾಡಿ, ವೈಜ್ಞಾನಿಕ ಬೆಲೆ ನಿಗದಿಪಡಿಸುವ ಸಮಿತಿಯಲ್ಲಿ ರೈತ ಪ್ರತಿನಿಧಿಗಳನ್ನು ನೇಮಿಸಿಕೊಳ್ಳುವುದೆಂದು ಒತ್ತಾಯಿಸುತ್ತದೆ.
5. ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವಂತಹ ರೇಷ್ಮೆ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಈ ಕೂಡಲೇ ರದ್ದು ಮಾಡುವುದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
6. ರೈತರು ಬೆಳೆದ ಕಬ್ಬಿಗೆ ಆಯಾ ವ್ಯಾಪ್ತಿಗೆ ಬರುವಂತಹ ಸಕ್ಕರೆ ಕಾರ್ಖಾನೆಗಳು ಸೂಕ್ತ ವೈಜ್ಞಾನಿಕ ಬೆಲೆ ನೀಡುವುದರ ಜೊತೆಗೆ ಸೂಕ್ತ ಸಮಯದಲ್ಲಿ ಒಂದು ವಾರದೊಳಗೆ ಹಣ ಪಾವತಿಸುವಂತೆ ಹಾಗೂ ತತ್‍ಕ್ಷಣದಿಂದಲೇ ಕಾರ್ಖಾನೆಗಳು ಪ್ರಾರಂಭಗೊಳ್ಳುವಂತೆ ಸರ್ಕಾರ ಆದೇಶ ನೀಡುವಂತೆ ಸಣೆಯು ಆಗ್ರಹಿಸುತ್ತದೆ.
7. 60 ವರ್ಷ ಮೀರಿದ ಕೃಷಿ ಸ್ವಾವಲಂಬಿತರಿಗೆ ಸರ್ಕಾರಿ ನೌಕರರ ರೀತಿಯ ವೃದ್ಧಾಪ್ಯವೇತನವನ್ನು ಕಡ್ಡಾಯಗೊಳಿಸಲು ಸರ್ಕಾರವನ್ನು ಒತ್ತಾಯಿಸುತ್ತದೆ.
8. ಸಣ್ಣ ಹಿಡುವಳಿದಾರ ರೈತರ ಮಕ್ಕಳಿಗೆ ವೃತ್ತಿಪರ ಕೋರ್ಸ್‍ಗಳ ವೆಚ್ಚವನ್ನು ಸರ್ಕಾರವೇ ಪೂರ್ಣವಾಗಿ ಭರಿಸುವಂತೆ ಸಭೆಯು ಒತ್ತಾಯಿಸುತ್ತದೆ.
9. ಮದ್ಯಪಾನ ಮುಂತಾದ ದುಶ್ಚಟಗಳನ್ನು ಕಡ್ಡಾಯವಾಗಿ ಸರ್ಕಾರ ನಿಷೇಧಿಸುವಂತೆ ಸಭೆ ಆಗ್ರಹ ಪೂರ್ವವಾಗಿ ಒತ್ತಾಯಿಸುತ್ತದೆ.
10. ಸಣ್ಣ ಹಿಡುವಳಿ ರೈತರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದೆಂದು ಸಭೆಯು ಸರ್ಕಾರವನ್ನು ಒತ್ತಾಯಿಸುತ್ತದೆ.
11. ರೈತರು ಅದ್ದೂರಿ ಮದುವೆ, ಹಬ್ಬ, ತಿಥಿ ಇತ್ಯಾದಿ ಸಮಾರಂಭಗಳನ್ನು ಆಚರಿಸದಂತೆ ಮನವೊಲಿಸುವುದು..
12. ಸರ್ಕಾರ ಗಾಂಧಿ ಆದರ್ಶ ಗ್ರಾಮ ಪರಿಕಲ್ಪನೆಯ ಚಿಕ್ಕ-ಚಿಕ್ಕ ಪುಸ್ತಕಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ವಿತರಿಸುವುದು. ಅದರ ಜವಾಬ್ದರಿಯೆಂದು ಅರಿತು ಕಾರ್ಯೋನ್ಮುಖರಾಗುವಂತೆ ಸಭೆ ಆಗ್ರಹಿಸುತ್ತದೆ.
13. ಸರ್ಕಾರ ಪ್ರಾಥಮಿಕ, ಪ್ರೌಢಶಾಲೆ ಮತ್ತು ಉನ್ನತ ಶಿಕ್ಷಣ ಪಠ್ಯ ಪುಸ್ತಕಗಳಲ್ಲಿ ಗಾಂಧೀತತ್ವ, ಸಿದ್ಧಾಂತಗಳನ್ನು ಅಳವಡಿಸಲು ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸುತ್ತದೆ.
14. ಗ್ರಾಮದ ನಿರುದ್ಯೋಗಿ ಯುವಕರಿಗೆ, ರೈತ ಮಹಿಳೆಯರಿಗೆ ಸ್ವಾವಲಂಬನೆಯ ಬದುಕಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ನಿಡುವುದು ಶ್ರೇಯಸ್ಕರ ಎಂದು ಸಭೆಯು ನಿರ್ಣಯಿಸುತ್ತದೆ.
15. ಗ್ರಾಮ ರಾಷ್ಟ್ರ ವ್ಯವಸ್ಥೆಯ ಅತಿಚಿಕ್ಕ ಘಟಕ. ಅದೊಂದು ಪುಟ್ಟ ಸರ್ಕಾರ. ಇಲ್ಲಿಂದಲೇ ಸಮೃದ್ಧ ಭಾರತದ ಸಾಕಾರವಾಗಬೇಕಾಗಿದೆ.
16. ಈ ಮೇಲಿನ ನಿರ್ಣಯಗಳ ಸಮರ್ಪಕ ಕಾರ್ಯನಿರ್ವಹಣೆ ಆದಲ್ಲಿ ರೈತರ ಆತ್ಮಹತ್ಯೆಯನ್ನು ತಡೆಗಟ್ಟಬಹುದೆಂದು ಸಭೆಯು ಸರ್ವಾನುಮತದಿಂದ ಒತ್ತಾಯಿಸುತ್ತದೆ.

No comments:

Post a Comment