ಮಾನವ ಹಕ್ಕುಗಳ ಆಯೋಗದ ಸದಸ್ಯರಿಂದ 13 ಅರ್ಜಿ ಸ್ವೀಕಾರ
ಮೈಸೂರು,ಆ.29. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜಿ. ಹುನಗುಂದ ಅವರು ಮೈಸೂರು ಸರ್ಕಾರಿ ಅತಿಥಿಗೃಹದಲ್ಲಿ ಸಾರ್ವಜನಿಕರಿಂದ 13 ಅರ್ಜಿಗಳನ್ನು ಸ್ವೀಕರಿಸಿದರು.
ಸುರಗಹಳ್ಳಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಮತದಾನದ ಹಕ್ಕು ಚ್ಯುತಿಯಾಗಿರುತ್ತದೆ ಎಂದು ದೂರು ಸಲ್ಲಿಸಿದಾಗ ಮತದಾನ ಹಕ್ಕು ಚ್ಯುತಿಯಾಗಿದ್ದಲ್ಲಿ ಸಂಘದ ನಿರ್ದೇಶಕರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿ ಚುನಾವಣೆಯನ್ನು ತಡೆಗಟ್ಟಬಹುದು. ಈ ಅರ್ಜಿಯಲ್ಲಿ ಕಾನೂನು ಅಂಶಗಳನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಅರ್ಜಿ ಸ್ವೀಕರಿಸಿದ ನಂತರ ಮಾತನಾಡಿದ ಸದಸ್ಯರು ಸ್ವೀಕರಿಸಿರುವ ಬಹಳಷ್ಟು ಅರ್ಜಿಗಳು ಸಿವಿಲ್ ಪ್ರಕರಣಗಳ ಸ್ವರೂಪದಾಗಿರುತ್ತದೆ. ಅರ್ಜಿಗಳನ್ನು ಸ್ವೀಕರಿಸಿ ಅವುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳಿಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪತ್ರ ಬರೆಯಲಾಗುವುದು ಎಂದರು.
ಮಾನವ ಹಕ್ಕುಗಳ ಆಯೋಗಕ್ಕೆ ದೂರು ಅರ್ಜಿಗಳನ್ನು ಸಲ್ಲಿಸುವಾಗ ಅರ್ಜಿದಾರರು ಮಾನವ ಹಕ್ಕುಗಳ ಆಯೋಗದ ಸದಸ್ಯರಿಗೆ ನಮೂದಿಸಿ ದೂರು ಅರ್ಜಿ ನೀಡಬೇಕು. ಬೇರೆ ಇಲಾಖೆಗೆ ದೂರು ಅರ್ಜಿ ನೀಡಿರುವ ಪ್ರತಿಗಳನ್ನು ಸಲ್ಲಿಸಬಾರದು. ಸಲ್ಲಿಸುವ ಅರ್ಜಿ ಸಂಕ್ಷಿಪ್ತವಾಗಿದ್ದು, ಯಾವ ಹಕ್ಕು ಉಲ್ಲಂಘನೆಯಾಗಿದೆ ಮತ್ತು ಯಾರಿಂದ ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಠವಾಗಿ ನಮೂದಿಸುವಂತೆ ತಿಳಿಸಿದರು.
ಪ್ರವಾಸ ಕಾರ್ಯಕ್ರಮ
ಮೈಸೂರು,ಆ.29.ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರು ಆಗಸ್ಟ್ 31 ಹಾಗೂ ಸೆಪ್ಟೆಂಬರ್ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಆಗಸ್ಟ್ 31 ರಂದು ಸಂಜೆ 6 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಕುಶಾಲನಗರಕ್ಕೆ ತೆರಳಲಿದ್ದಾರೆ. ಸೆಪ್ಟೆಂಬರ್ 3 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಜಿಲ್ಲಾ ಕಾಂಗ್ರೇಸ್ ಪಕ್ಷದ ಕಚೇರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನ 3 ಗಂಟೆಗೆ ಮಂಡ್ಯಕ್ಕೆ ತೆರಳಲಿದ್ದಾರೆ.
ವ್ಯಾಸಂಗವೇತನ: ಅರ್ಜಿ ಆಹ್ವಾನ
ಮೈಸೂರು,ಆ.29. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಪೂರ್ಣವಾಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾಸಿಕ ರೂ. 5000/- ವ್ಯಾಸಂಗ ವೇತನ ಮಂಜೂರು ಮಾಡಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ಞಚಿಡಿeಠಿಚಿss.ಛಿgg.gov.iಟಿ / ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ
ನಲ್ಲಿ ಆನ್‍ಲೈನ್ ಮೂಲಕ ಸೆಪ್ಟೆಂಬರ್ 5 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2342917ನ್ನು ಸಂಪರ್ಕಿಸುವುದು.
ನೋಂದಣಿಗೆ ಅರ್ಜಿ ಆಹ್ವಾನ
ಮೈಸೂರು,ಆ.29.ಹೊಸ ಸಂಗೀತ, ನೃತ್ಯ, ನಾಟಕ ಶಾಲೆ ಪ್ರಾರಂಭಿಸಲು ಇಚ್ಫಿಸುವ ಅರ್ಹ ನೋಂದಾಯಿತ ಸಂಸ್ಥೆಗಳು ನೋಂದಣಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿಯಲ್ಲಿ ನಿಗಧಿತ ಅರ್ಜಿ ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಬೇಕಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನಾಂಕವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ವಿಭಾಗೀಯ ಕಾರ್ಯದರ್ಶಿಗಳು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದನಿಮಿತ್ತ ಜಂಟಿನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ದೂರವಾಣಿ ಸಂಖ್ಯೆ 0821-2422208ನ್ನು ಸಂಪರ್ಕಿಸುವುದು.
ಹಿರಿಯ ನಾಗರಿಕರಿಗೆ ಸಾಂಸ್ಕøತಿಕ ಸ್ಪರ್ಧೆ
ಮೈಸೂರು,ಆ.29.ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ದಿನಾಂಕ: 03.09.2015 ರಂದು ಧನ್ವಂತರಿ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಸಾಂಸ್ಕøತಿಕ ಸ್ಪರ್ಧೆ ಆಯೋಜಿಸಿದೆ.
60 ರಿಂದ 70 ವರ್ಷ, 71 ರಿಂದ 80 ವರ್ಷ, 80 ವರ್ಷಕ್ಕೆ ಮೇಲ್ಪಟ್ಟ ಪುರಷರಿಗೆ ಮೂರು ವಿಭಾಗಗಳಲ್ಲಿ ಜಾನಪದ ಗೀತೆ , ಪಿಕ್ ಅಂಡ್ ಸ್ಪೀಕ್ ಯಾವುದೇ ವಿಷಯದ ಬಗ್ಗೆ ಹಾಗೂ 60 ರಿಂದ 70 ವರ್ಷದೊಳಗಿನ ಮಹಿಳೆಯರಿಗೆ ಜಾನಪದ ಗೀತೆ, ಪಿಕ್ ಅಂಡ್ ಸ್ಪೀಕ್ ಯಾವುದೇ ವಿಷಯದ ಬಗ್ಗೆ ಸ್ಪರ್ಧೆ ನಡೆಯಲಿದೆ
ಆಸಕ್ತರು ದಿನಾಂಕ:01.09.2015 ರೊಳಗಾಗಿ ಅಥವಾ ಸ್ಪರ್ಧೆಯ ದಿನ ಸ್ಥಳದಲ್ಲೇ ಹೆಸರನ್ನು ನೊಂದಾಯಿಸಿ ಕೊಳ್ಳುವುದು. ಹೆಚ್ಚಿನ ವಿವರಗಳಿಗೆ ಶ್ರೀ ಹೆಚ್.ವಿ.ಗಣೇಶ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ದೂರವಾಣಿ ಮೊಬೈಲ್ ಸಂಖ್ಯೆ: 9742396193, 9379037678 ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ:0821-2490 111 ಯನ್ನು ಸಂಪರ್ಕಿಸಬಹುದಾಗಿದೆ. ಸಾಂಸ್ಕøತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದದವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪÀರ್ಧೆಯಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ: ಅರ್ಜಿ ಆಹ್ವಾನ
ಮೈಸೂರು,ಆ.29.ಬೆಂಗಳೂರಿನ ಹಿಂದೂಸ್ಥಾನ್ ಏರೋನ್ಯಾಟಿಕ್ಸ (ಲಿ) ಟೆಕ್ನಿಕಲ್ ಟ್ರೈನಿಂಗ್ ಇಸ್ಟಿಟ್ಯೂಟ್ ರವರಿಂದ ವೆಲ್ಡರ್, ಶೀಟ್ ಮೇಟಲ್ ವರ್ಕರ್, ಪಾಸ (PಂSಂಂ)(Pಡಿogಡಿಚಿmmiಟಿg ಂssisಣಚಿಟಿಣ ಚಿಟಿಜ Sಥಿsಣem ಂಜmiಟಿisಣಡಿಚಿಣive) ಟ್ರೇಡ್ ಗಳಿಗೆ ಫುಲ್ ಟರ್ಮ ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ ನೀಡಲಿದ್ದಾರೆ.
ಎಸ್.ಎಸ್.ಎಲ್.ಸಿ ಯನ್ನು ಶೇಕಡ 60 ಅಂಕಗಳೊಂದಿಗೆ ಸಾಮಾನ್ಯ ವರ್ಗ ಹಾಗೂ ಓ.ಬಿ.ಸಿ ಅಭ್ಯರ್ಥಿಗಳು ತೇರ್ಗಡೆಯಾಗಿರಬೇಕು. ಪರಿಶಿಷ್ಟಜಾತಿ/ಪರಶಿಷ್ಟಪಂಗಡ/ವಿಕಲಚೇತರು ಶೇಕಡ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ವಯೋಮಿತಿ 01-10-2015 ಕ್ಕೆ 15 ರಿಂದ 18 ವರ್ಷದೊಳಗಿರಬೇಕು. ತರಬೇತಿ ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಸ್ಟೈಫಂಡ್ 7,000=00 ಹಾಗೂ ಇನ್ನಿತರೆ ಸೌಲಭ್ಯ ನೀಡಲಾಗುವುದು.
ಆಸಕ್ತರು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ. ಕರ್ನಾಟಕ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಕಟ್ಟಡ, ಹುಣಸೂರು ರಸ್ತೆ ಮೈಸೂರು-06 ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 04-09-2015 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2489972 ಯನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಹಾಯಕ ನಿರ್ದೇಶಕ ಸಿ.ವಿಶ್ವನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ವಿಗ್ರಹ ಸ್ಥಾಪಿಸಿ
ಮೈಸೂರು,ಆ.29.ಗಣೇಶ ಹಬ್ಬ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ವಿಷಕಾರಿ ರಸಾಯನಿಕ ಬಣ್ಣ ಬಳಸಿ ತಯಾರಿಸಿರುವ ಗಣೇಶ ಮೂರ್ತಿ ಬಳಕೆ ಮಾಡದೆ ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ವಿಗ್ರಹವನ್ನು ಬಳಸುವಂತೆ ಮೈಸೂರು ಮಹಾನಗರಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.
ಸಾರ್ವಜನಿP್ಪರು ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೇ ಪೂಜಿಸಿ. ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ, ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ. ಬಾವಿ, ಕೆರೆ, ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ. ಹಾಗೆ ಮಾಡಿದರೆ ಅಂತರ್ಜಲ, ಕುಡಿಯುವ ನೀರಿನ ಸೆಲೆ- ಎಲ್ಲವೂ ಹಾಳಾಗುತ್ತವೆ. ಬದಲಿಗೆ ಬಕೆಟ್‍ನಲ್ಲಿ ಸಂಚಾರಿ ವಿಸರ್ಜನಾ ವಾಹನದಲ್ಲಿ ವಿಸರ್ಜಿಸಿ, ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆಯಿರಿ. ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿಯ ಹೊಗೆ ವಿಷಪೂರಿತ; ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ.
ಗಣೇಶ ಮತ್ತು ಗೌರಿ ಮೂರ್ತಿ ಸಿದ್ದಪಡಿಸುವವರು / ತಯಾರಿಸುವವರು / ಮಾರಾಟ ಮಾಡುವವರು ವಿಷಪೂರಿತ, ರಸಾಯನಿಕವುಳ್ಳ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಅನ್ನು ಮೂರ್ತಿಗಳ ತಯಾರಿಕೆಗೆ ಉಪಯೋಗಿಸಬಾರದು. ಒಂದು ವೇಳೆ ಈ ರೀತಿಯ ಮೂರ್ತಿಗಳನ್ನು ತಯಾರಿಸುವುದಾಗಲೀ / ಮಾರಾಟ ಮಾಡುವುದಾಗಲೀ / ಉಪಯೋಗಿಸುವುದಾಗಲೀ ಕಂಡು ಬಂದರೆ ಅಂತಹ ಮೂರ್ತಿಗಳನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಜಪ್ತಿ ಮಾಡಲಾಗುತ್ತದೆ. ಹಾಗೂ ಸಂಬಂಧಪಟ್ಟವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನನ ಮರಣ ಆನ್‍ಲೈನ್ ನೋಂದಣಿ
ಮೈಸೂರು,ಆ.29.ಜನನ, ಮರಣ ಮತ್ತು ನಿರ್ಜೀವ ಜನನ ಘಟನೆಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ಆನ್‍ಲೈನ್ ನೋಂದಣಿ ಮಾಡಿ ಸಾರ್ವಜನಿಕರಿಗೆ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ತಿಳಿಸಿದ್ದಾರೆ.
1ನೇ ಸೆಪ್ಟೆಂಬರ್ 2015ರಿಂದ ನೋಂದಣಾಧಿಕಾರಿಗಳು/ ಉಪ ನೋಂದಣಾಧಿಕಾರಿಗಳು ಆನ್‍ಲೈನ್ ನಲ್ಲಿ ನೋಂದಣಿ ಮಾಡಿ ಗಣಕಯಂತ್ರದಿಂದ ಮುದ್ರಿತವಾದ ಜನನ, ಮರಣ ಪ್ರಮಾಣ ಪತ್ರವನ್ನು ನೀಡುವುದು. ಸಾರ್ವಜನಿಕರು ಸೆಪ್ಟೆಂಬರ್ 1ರಿಂದ ಕೈಬರಹದ ಪ್ರಮಾಣಪತ್ರವನ್ನು ಪಡೆಯಬಾರದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment