Friday, 21 August 2015

ಮಂಡ್ಯ: ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆ ಇದೆ ಎಂದು ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಂದು ಬಹುತೇಕ ಪಾಲಕರು ಮಕ್ಕಳನ್ನು ಅಂಕಗಳಿಸಲಿಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಇದ್ದರಿಂದಾಗಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗುವಂತಾಗಿದೆ ಎಂದರು.
ಪಠ್ಯದಂತೆ ಕ್ರೀಡಾ ಚಟುವಟಿಗಳಿಗೂ ಹೆಚ್ಚಿನ ಮಹತ್ವ ನೀಡಬೇಕು. ಕ್ರೀಡಾ ಚಟುವಟಿಕೆಗಳಿಂದ ಮನುಷ್ಯ ಮಾನಸಿಕ, ದೈಹಿಕವಾಗಿ ಸಧೃಡವಾಗಬಹುದು. ಅದೇ ರೀತಿ ಕ್ರೀಡೆಯಿಂದ ಶಿಸ್ತು ಬೆಳೆಯುತ್ತದೆ. ಇಂದು ಜನಪ್ರತಿನಿಧಿಗಳಿಗೆ ಶಿಸ್ತು ಎನ್ನುವುದಿದ್ದರೆ ಅದು ಕ್ರೀಡೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರುವುದು ಎಂದರು.
ಪಠ್ಯೇತರ ಚಟುವಟಿಕೆಗಳಲ್ಲಿ ಬದಲಾವಣೆ ತರುವ ಉz್ದÉೀಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅಲ್ಲದೆ ಸಮಿತಿ ರಚಿಸಿದ್ದು, ಇದರಲ್ಲಿ ತಾನು ಕೂಡ ಸದಸ್ಯನಾಗಿz್ದÉೀನೆ. ಈಗಾಗಲೇ ಈ ಸಂಬಂಧ ಎರಡು ಸಭೆ ನಡೆದಿವೆ ಎಂದರು.
 ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಕ್ರೀಡಾ ಚಟುವಟಿಕೆಗಳು ಮನುಷ್ಯ ಮತ್ತು ದೇಶದ ನಡುವೆ ಸಂಬಂಧ ವೃದ್ದಿಸುತ್ತದೆ. ಜಗತ್ತಿನೆಲ್ಲೆಡೆ ಮಾನವ ಸಂಬಂಧ ಹುಟ್ಟುಹಾಕುತ್ತದೆ ಎಂದರು
ನಮ್ಮ ದೇಶದಲ್ಲಿ ಕ್ರಿಕೆಟ್ ಆಟಕ್ಕೆ ಇರುವಷ್ಟು ಬೆಂಬಲ ಬೇರೆ ಕ್ರೀಡೆಗಳಿಗೆ ಸಿಗುತ್ತಿಲ್ಲ. ಆದರೆ, ಈ ಕ್ರಿಕೆಟ್‍ನಿಂದಾಗಿ ಜೂಜಾಡುವವರ ಸಂಖ್ಯೆ ಹೆಚ್ಚಿದ್ದು, ಮಧ್ಯರಾತ್ರಿಯಾದರೂ ನಡೆಯುತ್ತಲೇ ನಡೆಯುತ್ತಿರುತ್ತದೆ. ಆದ್ದರಿಂದ ಮೊದಲು ಕ್ರಿಕೆಟ್ ಅನ್ನು ತೆಗದುಹಾಕಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರ ವೇತನದಲ್ಲಿರುವ ತಾರತಮ್ಯ ಹೋಗಲಾಡಿಸಲು ಕುಮಾರ ನಾಯಕ ವರದಿ ಜಾರಿಯಾಗಬೇಕು. ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು ಎಂದರು.
ಮೊದಲು ದೈಹಿಕ ಶಿಕ್ಷಣ ಶಿಕ್ಷಕರು ಆಟ ಮಾತ್ರ ಆಡಿಸುತ್ತಿದ್ದರು. ಆದರೆ ಇಂದು ಪಾಠವನ್ನು ಮಾಡುತ್ತಿದ್ದು, ಈಗಲೂ ಅವರನ್ನು ಸಹ ಶಿಕ್ಷಕರ ಎನ್ನಲು ಆಗದಿದ್ದರೆ ಅದು ಮೂರ್ಖತನದ ಪರಮಾವಧಿ ಎಂದರು.
ವಿಧಾನ ಪರಿಷತ್ತಿನ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೋಮಲಾಸ್ವಾಮಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಇತರರು ಇದ್ದರು.

ಕೋಟ್
ವಿಶ್ವ ಮಾನವ ಪದಕ್ಕೆ ಅರ್ಹ
ಕ್ರೀಡೆ ಎಲ್ಲರಲ್ಲಿಯೂ ಸಮಾನತೆಯನ್ನು ಸೃಷ್ಠಿಸುತ್ತದೆ. ಇಂತಹ ಕ್ರೀಡೆಯನ್ನು ಕಲಿಸುವ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಆದ್ದರಿಂದ ವಿಶ್ವ ಮಾನವ ಪದವನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡಬೇಕು.
 ಕೆ.ಎಸ್.ಪುಟ್ಟಣ್ಣಯ್ಯ
ಶಾಸಕರು

No comments:

Post a Comment