Monday, 1 December 2014

ಮಂಡ್ಯ: ಕ್ರೀಡೆಗೆ ಯಾವುದೇ ಜಾತಿ, ಮತವಿಲ್ಲ ಎಂದು ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್ ತಿಳಿಸಿದರು.
ನಗರದ ವಕೀಲರ ಸಂಘದಲ್ಲಿ ವಕೀಲರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಅನುಕೂಲವಾಗಲು ಸಹಕಾರಿಯಾಗಲು ಅನೇಕ ಕ್ರೀಡಾಪಟುಗಳನ್ನು ಗುರುತಿಸಿ ಪೆÇ್ರೀ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕ್ರೀಡಾ ಮನೋಭಾವದಿಂದ ಕೆಲಸ ಮಾಡಿ ಕ್ರೀಡಾ ಚಟುವಟಿಕೆಗಳನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಮಹೇಶ್, ರಾಜು, ಹೊಸಹಳ್ಳಿ ಚಂದ್ರು, ಕೃಷ್ಣಮೂರ್ತಿ, ರಾಜೇಂದ್ರಬಾಬು ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ತಿಳಿಸಿದರು.
ನಗರದ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 18002662020 ಸಂಖ್ಯೆಗೆ ಮಿಸ್ ಕಾಲ್ ಮಾಡಿ, ಪ್ರತಿಯೊಬ್ಬರೂ ಬಿಜೆಪಿಯ ಸದಸ್ಯರಾಗಿ ಎಂದು ಕರೆ ನೀಡಿದರು.
ಬಸ್ ನಿಲ್ದಾಣ, ರೈಲು ನಿಲ್ದಾಣ, ಸಿನಿಮಾ ಮಂದಿರಗಳ ಬಳಿ, ಹೊಟೇಲ್ ಬಳಿ, ಸರ್ಕಾರಿ ಕಚೇರಿ, ನ್ಯಾಯಾಲಯಗಳ ಬಳಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸದಸ್ಯತ್ವ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 1 ಕೋಟಿ ಮಂದಿಗೆ ಸದಸ್ಯತ್ವವನ್ನು ಆನ್‍ಲೈನ್ ಮೂಲಕ ನೀಡುವ ಕಾರ್ಯವೂ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ಬಿಜೆಪಿ ಸದಸ್ಯತ್ವ ಆಂದೋಲನ ಮಾರ್ಚ್ ಅಂತ್ಯದವರೆವಿಗೂ ನಡೆಸಲಾಗುವುದು ಎಂದು ಹೇಳಿದರು. 
ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಕಾಡೇನಹಳ್ಳಿ ನಾಗಣ್ಣಗೌಡ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕೆಂಪಬೋರಯ್ಯ, ಮಾಧ್ಯಮ ಪ್ರಮುಖ್ ಪೆÇ್ರ. ಎಚ್. ಎಸ್ ನರಸಿಂಹಮೂರ್ತಿ, ಮುಖಂಡ ಚಿಕ್ಕಣ್ಣ ಇತರರು ಭಾಗವಹಿಸಿದ್ದರು.

No comments:

Post a Comment