ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ : 13-12-2014ರಂದು ಶನಿವಾರ ಬೆಳಿಗ್ಗೆ 10:00 ಗಂಟೆಗೆ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ, ಶಾಂತಿ ಸಾಗರ್ ಹತ್ತಿರ, ಕುವೆಂಪುನಗರ, ಮೈಸೂರು ಇಲ್ಲಿ ನಡೆಯಲಿರುವ ರಾಜೀವ್ ಗಾಂಧಿ ಆವಾವ್ ಯೋಜನೆಗೆ ಆಯ್ಕೆಯಾದ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1329 ಫಲಾನುಭವಿಗಳಿಗೆ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ .
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಮಹಾಮಂಡಳಿಯ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಿನಗೂಲಿ ನೌಕರರ ವೇತನ ಹೆಚ್ಚಿಸಬೇಕು, ರಜೆ ಸೌಲಭ್ಯ ನೀಡಬೇಕು, ತುಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆ ಶೇ 75 ರಷ್ಟು ನೀಡಲು ಆದೇಶಿಸಿದ್ದರೂ, ಇದನ್ನು ಜಾರಿಗೆ ತರಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಹಾಮಂಡಲದ ಅಧ್ಯಕ್ಷ ಕೆ.ಎಸ್.ಶರ್ಮಾ ಮಾತನಾಡಿ, ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಶೇ ನೂರರಷ್ಟುನ್ನು ದಿನಗೂಲಿ ನೌಕರರಿಗೆ ನೀಡಬೇಕು, ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಹ ದಿನಗೂಲಿ ನೌಕರರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ದಿನಗೂಲಿ ನೌಕರರು ಭಾಗವಹಿಸಿದ್ದರು.
ಅಧಿವೇಶನಗಳಲ್ಲಿ ಶಾಸಕ ವರ್ತನೆಗೆ ಕಡಿವಾಣ ಹಾಕಲು ಆಗ್ರಹಿಸಿ ಪ್ರತಿಭಟನೆ ಮೈಸೂರು: ವಿಧಾನಸಭೆ ಹಾಗೂ ಲೋಕಸಭೆ ಅಧಿವೇಶನಗಳಲ್ಲಿ ಶಾಸಕರು ಹಾಗೂ ಸಂಸದರ ವರ್ತನೆಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ನಗರದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ನ್ಯಾಯಲದ ಮುಂದೆ ಇರುವ ಗಾಂಧಿ ಪ್ರತಿಮೆ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ವಿಧಾನ ಸಭೆ ಅಧಿವೇಶನದ ವೇಳೆ ಕೆಲ ಶಾಸಕರು, ಸಂಸದರು ಮೊಬೈಲ್‍ನಲ್ಲಿ ದೃಶ್ಯಗಳು ಹಾಗೂ ಪೋಟೊಗಳನ್ನು ನೋಡುವುದು, ಗೇಮ್ ಆಡುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದು, ಇದರಿಂದಾಗಿ ಅಧಿವೇಶನದ ಪಾವಿತ್ರ್ಯತೆ ಹಾಳಾಗುತ್ತಿದೆ. ಆದ ಕಾರಣ ಇದನ್ನು ನಿಯಂತ್ರಿಸುವ ಸಲುವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು, ಶಾಸಕರಿಗೆ ಹಾಗೂ ಸಂಸದರಿಗೆ ನೀಡಲಾಗುತ್ತಿರುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ಕೆಲವು ಮಾನದಂಡಗಳನ್ನು ಘೋಷಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಡೈರಿ ವೆಂಕಟೇಶ್, ಹಿನಕಲ್ ಉದಯ್, ಹೇಮಾವತಿ, ವಿಕ್ರಾಂತ್ ದೇವೇಗೌಡ, ಆರ್.ರಾಜು, ಶ್ರೀನಿವಾಸ್, ಆರ್.ಹೆಚ್.ಕುಮಾರ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಸತ್ಯಾನಗರ ಅಭಿವೃದ್ಧಿಗೆ ಸಾರ್ವಜನಿಕರ ಒತ್ತಾಯ
ಮೈಸೂರು,ಡಿ.11- ಮೈಸೂರು ನಗರದ ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಗೊಳಪಡುವ ವಾರ್ಡ್ ನಂ. 51ರ ಸತ್ಯಾ ನಗರದಲ್ಲಿ ಮೂಲಭೂತ ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿ ಸತ್ಯಾನಗರ ಬಡಾವಣೆಯ ಮುಖಂಡರುಗಳು ಆ ಕ್ಷೇತ್ರದ ಶಾಸಕರಾದ ತನ್ವೀರ್‍ಸೇಠ್ ರವರಲ್ಲಿ ಮನವಿಮಾಡಿಕೊಂಡಿದ್ದಾರೆ.
ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲ, ಮೋರಿಗಳು ಸ್ವಚ್ಚತೆ ಕಂಡಿಲ್ಲ, ಕುಡಿಯುವ ನೀರಿನ ತೊಂದರೆ ಇದೆ, ರಸ್ತೆಗಳೆಲ್ಲಾ ಕಿತ್ತು ಹಳ್ಳ ಕೊಳ್ಳಗಳಿಂದ ಕೂಡಿವೆ, ಇಲ್ಲಿನ ರಸ್ತೆಗಳು ಡಾಂಬರೀಕರಣ ಕಂಡು ತುಂಬಾ ವರ್ಷಗಳೇ ಕಳೆದಿವೆ, ಬಡಾವಣ ಸ್ವಚ್ಚತೆ ಇರದ ಕಾರಣ ರೋಗ ರುಜಿನಗಳು ಬರುವ ಸಾಧ್ಯತೆಗಳಿರುತ್ತವೆ ಆದ್ದರಿಂದ ಶಾಸಕರು ಸತ್ಯಾ ನಗರದ ಅಭಿವೃದ್ಧಿಗೆ ಕ್ರಮಕೈಗೊಳ್ಳ ಬೇಕೆಂದು ಕೋರಿಕೊಂಡರು.
ಇವರ ಕೋರಿಕೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ತನ್ವೀರ್ ಸೇಠ್, ಅಲ್ಲಿನ ಪರಿಸ್ಥಿತಿಯನ್ನ ಕುದ್ದು ಅವಲೋಕಿಸಿ ಅಲ್ಲಿನ ಮುಖಂಡರೊಡನೆ ಸಮಾಲೋಚನೆ ನಡೆಸಿದರು. ನಂತರ ಮಾತನಾಡಿ ಈ ಬಡಾವಣೆಯ ಅಭಿವೃದ್ಧಿಗಾಗಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು, ಸಾಸಕರ ಅನುಧಾನದ ನಿಧಿ ಒಮದೂ ಮುಕ್ಕಾಲು ಕೋಟಿ ಹಣ ರೆಡಿ ಇದೆ ಆ ಹಣದಲ್ಲಿ ರಸ್ತೆ ಅಭಿವೃದ್ಧಿ, ಮೋರಿ ರಿಪೇರಿ, ಒಳಚರಂಡಿ ಮಾಡಿಸಿಕೊಟ್ಟು ಕುಡಿಯುವ ನೀರು ಸರಬರಾಜಿಗಾಗಿ ಮಾತುಕತೆ ನಡೆಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಮದರ್ಭದಲ್ಲಿ, ಸತ್ಯಾನಗರ ಬಡಾವಣಡಯ ಮುಖಂಡರುಗಳಾದ ಸಹಿನ್‍ಶಾ ಅಹ್ಮದ್, ಮೈನಾರಿಟಿ ಕಮಿಟಿ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಶೌಕxತ್ ಆಲಿಕಾನ್, ಅಹ್ಮದ್‍ಪಾಷ, ಜಾವುಲ್ಲಾ, ಸೈಯದ್ ನಸ್ರುಲ್ಲಾ, ಜಬ್ಬಾರ್‍ಅಹ್ಮದ್, ಅಸ್ಲಮ್‍ಷರಿಫ್ ಸೆರಿದಂತೆ ಹಲವಾರುಮಂದಿ ಉಪಸ್ಥಿತರಿದ್ದರು.
No comments:
Post a Comment