ನಾಗಮಂಗಲ:ತಾಲ್ಲೂಕಿನಲ್ಲಿಂದು ನಡೆದ ಬ್ರಹ್ಮದೇವರಹಳ್ಳಿ ದತ್ತು ಸ್ವೀಕಾರ ಸಮಾರಂಭವು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು.
ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಹಳ್ಳಿಗಳಿದ್ದು, ಈ ಎಲ್ಲಾ ಹಳ್ಳಿಗಳ ಗ್ರಾಮಸ್ಥರು ದತ್ತು ಸಮಾರಂಭದಲ್ಲಿ ಪಾಲ್ಗೊಂಡು ಸಮಾರಂಭಕ್ಕೆ ವಿಶೇಷ ಮೆರಗು ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಎನ್.ಚಲುವರಾಯಸ್ವಾಮಿ ಹಾಗೂ ಆದಿಚುಂಚನಗಿರಿ ಮಠದ ಸಲಹೆಗಾರರಾದ ಅಮರನಾರಾಯಣ್ ಅವರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಗ್ರಾಮಸ್ಥರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗ್ರಾಮದ ಪ್ರತಿಯೊಂದು ರಸ್ತೆ, ಕಲ್ಯಾಣಿ, ಸೇರಿದಂತೆ ಹಲವಡೆ ಗ್ರಾಮಸ್ಥರು ಸ್ವಚ್ಛತೆ ಕಾರ್ಯ ಕೈಗೊಂಡರು.
ನಂತರ ನಡೆದ ಸಮಾರಂಭದದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ಅಮರನಾರಾಯಣ್, ಅನ್ನ, ಅP್ಷÀರದಾಸೋಹ ನೀಡಿದ ಶ್ರೀ ಮಠ ಗ್ರಾಮವನ್ನು ದತ್ತು ಪಡೆದಿರುವುದು ಸ್ವಾಗತಾರ್ಹ ವಿಚಾರವಾಗಿದೆ. ತಾಲ್ಲೂಕಿನ ಎಲ್ಲಾ ಇಲಾಖೆಗಳಿಂದ ದೊರೆಯುವ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ಮೂರು ವರ್ಷದಲ್ಲಿ ಸಮಗ್ರ ಅಭಿವೃದ್ಧಿ ಮಾಡುವುದಾಗಿ ನುಡಿದರು.
ಗ್ರಾಮದಲ್ಲಿ ರೈತರಿಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ, ವನಸಂವರ್ಧನ ಟ್ರಸ್ಟ್ ವತಿಯಿಂದ ಸಸಿಗಳ ವಿತರಣೆ, ಗ್ರಾಮದಲ್ಲಿ ಒಳಚರಂಡಿ ನಿರ್ಮಾಣ, ವಿದ್ಯುತ್ ದೀಪ, ಶೌಚಾಲಯ ನಿರ್ಮಾಣ, ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಅಲ್ಲದೇ ಗ್ರಾಮಸ್ಥರು ಸ್ವಾಭಿಮಾನಿಗಳಾಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ನುಡಿದರು.
16 ಹಳ್ಳಿಗಳು ಅಭಿವೃದ್ಧಿ- ಸಿಆರ್‍ಎಸ್
ನಾಗಮಂಗಲ:ಬ್ರಹ್ಮ ದೇವರಹಳ್ಳಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 16 ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿದ್ದು, ಅಂತೆಯೇ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಚಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬ್ರಹ್ಮದೇವರಹಳ್ಳಿಯಲ್ಲಿ ನಡೆದ ಬ್ರಹ್ಮದೇವರಹಳ್ಳಿ ದತ್ತು ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮಗಾಂಧೀಜಿ ಅವರ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀಮಠ ಹೆಜ್ಜೆ ಇಟ್ಟಿದ್ದು, ಹಾಗೆಯೇ ಈ ಕಾರ್ಯಕ್ರಮಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ನುಡಿದರು.
ಸ್ವಾತಂತ್ರ್ಯಗಳಿಸಿ 58 ವರ್ಷ ಕಳೆಯುತ್ತಾ ಬಂದಿದ್ದರೂ, ನಾವು ಇನ್ನೂ ಜಾಗೃತಿಯ ಹಂತದಲ್ಲಿದ್ದೇವೆ, ನಮ್ಮ ಮನೆ ಮುಂದಿನ ಕಸವನ್ನು ತೆಗೆಯಲು ಬೇರೊಬ್ಬರನ್ನು ಅವಲಂಬಿಸಿ ನಮ್ಮ ಕೆಲಸಗಳನ್ನು ನಾವೇ ಮರೆತ್ತಿದ್ದೇವೆ ಎಂದು ನುಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಚ್ಛತೆಗಾಗಿ ತಾವೇ ಪೆÇರಕೆ ಹಿಡಿದು ಇತರರನ್ನು ಪ್ರೇರೆಪಿಸಿದ್ದಾರೆ. ಸಾವಿರಾರು ಮಠಗಳು ದೇಶದಲ್ಲಿದ್ದರೂ ಶ್ರೀ ಮಠದಂತೆ ಕಾರ್ಯಕ್ರಮ ರೂಪಿಸಿದರೆ ಅಭಿವೃದ್ಧಿ ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಒಳ್ಳೆಯದನ್ನು ಮಾಡದಿದ್ದರೂ ಕೆಡುಕನ್ನು ಮಾಡಬಾರದು, ಶ್ರೀ ಮಠ ಈ ಕ್ಷೇತ್ರದಲ್ಲಿರುವುದು ನಮ್ಮ ಪುಣ್ಯ, ಶ್ರೀಗಳು ತಮ್ಮದೇ ಆದ ಸೈನ್ಯ ಕಟ್ಟಿದ್ದು, ಅವರು ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಸಂಸದ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ವೇದಿಕೆಯಲ್ಲಿ ನಿರ್ಮಲಾನಂದನಾಥಸ್ವಾಮೀಜಿ, ಮಾಜಿ ಶಾಸಕ ಸುರೇಶ್‍ಗೌಡ, ತಮಿಳುನಾಡು ಶಾಸಕ ರಾಮಕೃಷ್ಣನ್, ಡಿ.ಸಿ.ಅಜಯ್ ನಾಗಭೂಷಣ್, ಎಸ್ಪಿ ಭೂಷಣ್‍ರಾವ್ ಬೊರಸೆ, ಜಿಪಂ ಸಿಇಓ ರೋಹಿಣಿ ಸಿಂಧೂರಿ, ಪ.ಪಂ ಅಧ್ಯಕ್ಷೆ ನಾಗಮ್ಮ, ಜಿಪಂ ಸದಸ್ಯ ಶಿವಣ್ಣ, ಇತರರಿದ್ದರು.
ಯಾರನ್ನು ಅವಲಂಬಿಸದ ಗ್ರಾಮ ಶ್ರೀಮಂತ ಗ್ರಾಮ
16 ಹಳ್ಳಿಗಳ ಸಮಗ್ರ ಅಭಿವೃದ್ಧಿಯೇ ಮಠದ ಗುರಿ -ಚುಂಚಶ್ರೀ
ನಾಗಮಂಗಲ:ಯಾರನ್ನು ಅಲಂಬಿಸದ ಗ್ರಾಮ ಶ್ರೀಮಂತ ಗ್ರಾಮವಾಗುತ್ತದೆ ಎಂದು ಚುಂಚಶ್ರೀ ಅಭಿಪ್ರಾಯಪಟ್ಟರು.
ಬ್ರಹ್ಮದೇವರಹಳ್ಳಿ ದತ್ತು ಸ್ವೀಕಾರ ಸಮಾರಂಭದಲ್ಲಿ ಗ್ರಾಮವನ್ನು ದತ್ತು ಸ್ವೀಕರಿಸಿ ಮಾತನಾಡಿದ ಅವರು, ಯಾರು ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುತ್ತಾರೋ ಅವರ ಮನೆಗಳು ಶ್ರೀಮಂತವಾಗುತ್ತದೆ. ಅಂತೆಯೇ ಯಾರನ್ನು ಅವಲಂಬಿಸದ ಗ್ರಾಮಗಳು ಶ್ರೀಮಂತ ಗ್ರಾಮಗಳಾಗುತ್ತವೆ ಎಂದು ನುಡಿದರು.
ಹಳ್ಳಿಮಕ್ಕಳಿಗೆ ವಿದ್ಯೆ ನೀಡುವುದು ಮುಖ್ಯವಲ್ಲ, ಅವರನ್ನು ಮೇಲೆತ್ತುವುದು ಬಹಳ ಮುಖ್ಯ ಎನ್ನುವುದನ್ನು ಮನಗಂಡು ಬಾಲಗಂಗಾಧರನಾಥಸ್ವಾಮೀಜಿಗಳು ಕೆಲ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅವರು ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಠವು ಇಂದು ಹೆಜ್ಜೆ ಇಟ್ಟಿದೆ ಎಂದು ನುಡಿದರು.
ಬಾಯಾರಿದವವನ್ನು ಕೆರೆ ಬಳಿಗೆ ಕರೆದ್ದೊಯ್ಯಬಹುದು, ಆದರೆ ಕೆರೆಯನ್ನೇ ಅವನ ಬಳಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ, ಅಂತೆಯೇ ಕಾರ್ಯಕ್ರಮವನ್ನು ಗ್ರಾಮಸ್ಥರ ಮನೆ ಬಾಗಲಿಗೆ ತಂದಿದ್ದೇವೆ , ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ, ಆದ್ದರಿಂದ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ನುಡಿದರು.
ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 16 ಹಳ್ಳಿಗಳಲ್ಲಿ ಗುಣಮಟ್ಟದ ಶಿP್ಷÀಣ ನೀಡಿದರೆ ಅದೇ ಭದ್ರಬೂನಾಧಿಯಾಗುತ್ತದೆ. ಆದ ಕಾರಣ ಉನ್ನತ ವ್ಯಾಸಂಗ ಕೊಡಿಸಲು ಪೆÇೀಷಕರು ವಿಫಲರಾದಲ್ಲಿ ಮಠದ ವತಿಯಿಂದಲೇ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಕ್ರಮ ಕೈಗೊಳ್ಳುತ್ತೇವೆ, ವೃತ್ತಿ ಶಿP್ಷÀಣ, ತರಬೇತಿ, ಗಾರ್ಮೆಂಟ್ಸ್ ತೆರೆದು ಉದ್ಯೋಗ ಹಾಗೂ ಮಠವೇ ಈ ಭಾಗದ ಗ್ರಾಮಸ್ಥರ ಆರೋಗ್ಯದ ಜವಾಬ್ದಾರಿಯನ್ನು ಹೊರಲಿದೆ ಎಂದು ನುಡಿದರು.
ನಿಮ್ಮ ಮನೆ, ನಿಮ್ಮ ಮನಸ್ಸು ಸ್ವಚ್ಛವಾಗಿರಬೇಕು, ರಾತ್ರಿ ವೇಳೆಯಲ್ಲಿ ಮಹಿಳೆ ಸ್ವಾತಂತ್ರ್ಯವಾಗಿ ಓಡಾಡಬೇಕು ಎಂಬ ಕನಸನ್ನು ಗಾಂಧೀಜಿ ಕಂಡಿದ್ದರು. ಅವರ ತತ್ವಾದರ್ಶಗಳನ್ನು ಅಮೆರಿಕಾ ದೇಶ ಅಳವಡಿಸಿಕೊಂಡಿದ್ದು, ಆದೇಶದ ಪ್ರತಿಯೊಬ್ಬರು ವಿದ್ಯಾವಂತರಾಗಿದ್ದಾರೆ. ಹೆಣ್ಣು ಮಕ್ಕಳು ರಾತ್ರಿಯ ಸಮಯದಲ್ಲಿ ಓಡಾಡುತ್ತಿದ್ದಾಳೆ. ರಾತ್ರಿವೇಳೆಯಲ್ಲಿ ಮನೆ ಬಾಗಿಲು ತೆರೆದು ಹೋಗುವ ಪರಿಸ್ಥಿತಿ ಆ ದೇಶದಲ್ಲಿದೆ. ಆದ್ದರಿಂದ ಇಂತಹ ವಾತಾವರಣ ನಮ್ಮಲ್ಲೂ ನಿರ್ಮಾಣವಾಗಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಸಂಸದ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಸಕ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‍ಗೌಡ, ತಮಿಳುನಾಡು ಶಾಸಕ ರಾಮಕೃಷ್ಣನ್, ಡಿ.ಸಿ.ಅಜಯ್ ನಾಗಭೂಷಣ್, ಎಸ್ಪಿ ಭೂಷಣ್‍ರಾವ್ ಬೊರಸೆ, ಜಿಪಂ ಸಿಇಓ ರೋಹಿಣಿ ಸಿಂಧೂರಿ, ಪ.ಪಂ ಅಧ್ಯಕ್ಷೆ ನಾಗಮ್ಮ, ಜಿಪಂ ಸದಸ್ಯ ಶಿವಣ್ಣ, ಇತರರಿದ್ದರು.
ಮಂಡ್ಯ: ಚಂದಗಾಲು ಹಾಗೂ ಮಾದೇಗೌಡನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಬಾಜಿ ನಾಗರಾಜು ಹಾಗೂ ರಾಮೇಗೌಡ ಅವರನ್ನು ತಾಲೂಕಿನ ಇಂಡುವಾಳು ಅರಣ್ಯಧಾಮದಲ್ಲಿ ನಡೆದ ಸಮಾರಂಭದಲ್ಲಿ ಹಾಲು ಒಕ್ಕೂಟ ಮತ್ತು ಕಾರ್ಯದರ್ಶಿಗಳ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹಾಲು ಒಕ್ಕೂಟದ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಈ ಇಬ್ಬರು ಕಾರ್ಯದರ್ಶಿಗಳೂ ಕಳೆದ 40 ವರ್ಷಗಳಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುವಂತೆ ಉತ್ಪಾದಕರ ಮನವೊಲಿಸುವಲ್ಲಿ ನೆರವಾಗಿದ್ದಾರೆ ಎಂದು ಹೇಳಿದರು.
ಮನ್‍ಮುಲ್ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಉತ್ಪಾದಕರಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದ ಇವರ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ಇವರ ನಂತರ ಬರುವ ಕಾರ್ಯದರ್ಶಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಮನ್‍ಮುಲ್ ಅಧಿಕಾರಿಗಳಾದ ಡಾ. ಮೋಹನ್‍ಕುಮಾರ್, ನಂಜುಂಡಸ್ವಾಮಿ, ಸಿದ್ದರಾಮು, ರಾಚಯ್ಯ, ಎಚ್.ಕೆ. ನಾಗರಾಜು, ಸಂಘದ ಕಾರ್ಯದರ್ಶಿಗಳಾದ ಎಚ್.ಎನ್. ಶಿವಕುಮಾರ್, ಕ್ಯಾತಯ್ಯ, ಸುರೇಶ್, ರಮೇಶ್, ವೆಂಕಟೇಗೌಡ, ಜಯರಾಮು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಂಡ್ಯ: ಚಂದಗಾಲು ಹಾಗೂ ಮಾದೇಗೌಡನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಬಾಜಿ ನಾಗರಾಜು ಹಾಗೂ ರಾಮೇಗೌಡ ಅವರನ್ನು ತಾಲೂಕಿನ ಇಂಡುವಾಳು ಅರಣ್ಯಧಾಮದಲ್ಲಿ ನಡೆದ ಸಮಾರಂಭದಲ್ಲಿ ಹಾಲು ಒಕ್ಕೂಟ ಮತ್ತು ಕಾರ್ಯದರ್ಶಿಗಳ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹಾಲು ಒಕ್ಕೂಟದ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಈ ಇಬ್ಬರು ಕಾರ್ಯದರ್ಶಿಗಳೂ ಕಳೆದ 40 ವರ್ಷಗಳಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುವಂತೆ ಉತ್ಪಾದಕರ ಮನವೊಲಿಸುವಲ್ಲಿ ನೆರವಾಗಿದ್ದಾರೆ ಎಂದು ಹೇಳಿದರು.
ಮನ್‍ಮುಲ್ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಉತ್ಪಾದಕರಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದ ಇವರ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ಇವರ ನಂತರ ಬರುವ ಕಾರ್ಯದರ್ಶಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಮನ್‍ಮುಲ್ ಅಧಿಕಾರಿಗಳಾದ ಡಾ. ಮೋಹನ್‍ಕುಮಾರ್, ನಂಜುಂಡಸ್ವಾಮಿ, ಸಿದ್ದರಾಮು, ರಾಚಯ್ಯ, ಎಚ್.ಕೆ. ನಾಗರಾಜು, ಸಂಘದ ಕಾರ್ಯದರ್ಶಿಗಳಾದ ಎಚ್.ಎನ್. ಶಿವಕುಮಾರ್, ಕ್ಯಾತಯ್ಯ, ಸುರೇಶ್, ರಮೇಶ್, ವೆಂಕಟೇಗೌಡ, ಜಯರಾಮು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಂಡ್ಯ: ನಗರದ ಕೃಷಿ ಇಲಾಖೆಯ ಪರತಂತ್ರ ಜೀವಿ ಪ್ರಯೋಗಾಲಯದ ಕೋಲ್ಮನ್ ಸಭಾಂಗಣದಲ್ಲಿ ಜಿಪಂ ಹಾಗೂ ಕೃಷಿ ಇಲಾಖೆ ವತಿಯಿಂದ ನಡೆದ ರೈತ ದಿನಾಚರಣೆ ಕಾರ್ಯಕ್ರಮ ನಡೆಯಿತು.
ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ಬಿಂದು ಮಾದವ ವಡವಿ ಮಾತನಾಡಿ, ಹಳ್ಳಿಗಳಲ್ಲಿ ಯುವಕರು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ದೇಶದಲ್ಲಿ 10 ವರ್ಷದಲ್ಲಿ ರೈತರ ಸಂಖ್ಯೆ 80 ಲಕ್ಷ ಕಡಿಮೆಯಾಗಿದೆ. ರೈತರಲ್ಲಿ ಉತ್ಸಾಹ, ಆಶಾವಾದ ಇರಬೇಕು. ಸರ್ಕಾರ ಕೃಷಿ ಕ್ಷೇತ್ರಕ್ಕೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದ್ದು, ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ರೈತರು ಕೃಷಿಯಲ್ಲಿ ನಂಬಿಕೆ ಇಟ್ಟು ಕಾಯಕ ಮಾಡಬೇಕು. ಭೂಮಿ ತಾಯಿ ರೈತರನ್ನು ಕೈಬಿಡುವುದಿಲ್ಲ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆಧುನಿಕ ಕೃಷಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ಮಾತನಾಡಿ, ರೈತರಲ್ಲಿ ಆತ್ಮವಿಶ್ವಾಸವಿದೆ. ತಾನು ರೈತ ಎಂದು ಹೇಳಲು ಹಿಂಜರಿಕೆ ಇರಬಾರದು. ರೈತರ ಶ್ರಮದಿಂದ ದೇಶದ ಅಭಿವೃದ್ಧಿಯಲ್ಲಿದೆ. ಕೃಷಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುತ್ತಿದೆ. ಅವರಂತೆಯೇ ಇತರರು ಉತ್ತಮ ರೀತಿಯಲ್ಲಿ ಕೃಷಿ ಕೈಗೊಳ್ಳಬೇಕು ಎಂದರು.
ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ನೀರಿನ ಹೊಂಡ, ಬೆಳೆ ಬೆಳೆಯಲು ಸಹಾಯ ಧನ ನೀಡಲಾಗುತ್ತಿದೆ. ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಿದ್ದು, ಆಯ್ಕೆಯಾಗಿರುವ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕøತ ರೈತರಾದ ಹನಿಯಂಬಾಡಿ ಸಿದ್ದಮ್ಮ, ಮಾಯಣ್ಣನಕೊಪ್ಪಲು ಎಂ.ಸಿ.ನಾಗರಾಜು, ಹುಳ್ಳೇನಹಳ್ಳಿ ಕುಳ್ಳೇಗೌಡ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಕೆ.ಕೆಂಚೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿ.ಎಂ.ನಾಗರಾಜು, ತಾಲೂಕು ಸಹಾಯಕ ಕೃಷಿ ಅಧಿಕಾರಿಗಳಾದ ಪ್ರಶಾಂತ್, ಟಿ.ಕೃಷ್ಣಯ್ಯ, ಕೃಷಿಕ ಸಮಾಜದ ನಿರ್ದೇಶಕರಾದ ಕೆ.ಪಿ.ವೀರಪ್ಪ, ಜಿ.ಎಸ್.ವೆಂಕಟೇಶ್ ಭಾಗವಹಿಸಿದ್ದರು.
ಕೃಷ್ಣರಾಜಪೇಟೆ. ಬಡವರು, ಬಲ್ಲಿದರು ಎಂಬ ಬೇಧ-ಭಾವವನ್ನು ಮಾಡದೇ ಸಮಾಜದಲ್ಲಿ ವಿದ್ಯೆಯ ಜ್ಞಾನವನ್ನು ಅರಸಿ ಶಾಲೆಗೆ ಬರುವ ಎಲ್ಲಾ ಜಾತಿ ವರ್ಗಗಳ ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿ ಕೈಹಿಡಿದು ಮುನ್ನಡೆಸುತ್ತಿರುವ ಸರ್ಕಾರಿ ಶಾಲೆಗಳು ದೇವಾಲಯಗಳಿಗಿಂತಲೂ ಶ್ರೇಷ್ಠ ಎಂದು ಶಾಸಕ ಕೆ.ಸಿ. ನಾರಾಯಣಗೌಡ ಹೇಳಿದರು.
ಅವರು ಇಂದು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕಿನ 2500 ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಿಸುವ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ಬೈಸಿಕಲ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಅತ್ಯುತ್ತಮವಾದ ಶೈಕ್ಷಣಿಕ ವಾತಾವರಣವನ್ನು ಹೊಂದಿವೆಯಲ್ಲದೇ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಜೊತೆಗೆ ಸರ್ಕಾರವು ಉಚಿತವಾಗಿ ನೀಡುತ್ತಿರುವ ಪಠ್ಯ ಪುಸ್ತಕಗಳು, ಶಾಲಾ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ, ಬೈಸಿಕಲ್ ಸೇರಿದಂತೆ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದರೂ ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಪ್ರಮಾಣವು ಕಡಿಮೆಯಾಗಿ ಕೆಲವು ಗ್ರಾಮಗಳಲ್ಲಿ ಸಕಾರಿ ಶಾಲೆಗಳು ಶಾಶ್ವತವಾಗಿ ಬಾಗಿಲು ಮುಚ್ಚುವ ಹಂತವನ್ನು ತಲುಪಿವೆ. ಈ ನಿಟ್ಟಿನಲ್ಲಿ ಶಿಕ್ಷಕರು ಜಾಗರೂಕತೆಯಿಂದ ಹೆಜ್ಜೆಯನ್ನು ಹಾಕಿ ಪೋಷಕರ ಮನವೊಲಿಸಿ ಸರ್ಕಾರಿ ಶಾಲೆಗಳಲ್ಲಿಯೇ ಇಂದು ಉಚಿತವಾಗಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಮಕ್ಕಳ ಸಾಧನೆಯ ಜವಾಬ್ಧಾರಿ ನಮ್ಮದು ಎಂದು ಮನವರಿಕೆ ಮಾಡಿಕೊಟ್ಟು ಮರಳಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿಕೊಡುವಂತೆ ಮಾಡುವ ಮೂಲಕ ಖಾಸಗೀ ಶಾಲೆಗಳ ಮೋಹವನ್ನು ಜನರು ಬಿಡುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದ ಶಾಸಕರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಶಿಕ್ಷಕರು ಶಾಲೆಗೆ ಕುಡಿದು ಹೋಗುವುದು, ಶಾಲೆಗೆ ಚಕ್ಕರ್ ಹಾಕಿ ರಾಜಕಾರಣ ಮಾಡುವುದು, ಗುಂಪುಗಾರಿಕೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಶಿಕ್ಷಕರು ಗುಂಪುಗಾರಿಕೆಯ ರಾಜಕಾರಣ ಮಾಡುವುದಾದರೆ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣ ಮಾಡಲಿ, ಸರ್ಕಾರವು ನೀಡುತ್ತಿರುವ ಸಂಬಳದ ಹಣವನ್ನು ಪಡೆದುಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸಿ ವೃತ್ತಿ ಗೌರವವನ್ನು ಶಿಕ್ಷಕರು ಕಾಪಾಡಿಕೊಳ್ಳದಿದ್ದರೆ ಸಚಿವರು ಮತ್ತು ಆಯುಕ್ತರಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ, ಈ ಬಗ್ಗೆ ಎಚ್ಚರ ವಹಿಸಿ ಹಾದಿ ತಪ್ಪಿರುವ ಶಿಕ್ಷಕರನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಸರಿದಾರಿಗೆ ತರಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರಥಮ ಸ್ಥಾನಗಳಿಸಬೇಕು: ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ನಮ್ಮ ತಾಲೂಕು ದ್ವಿತೀಯ ಸ್ಥಾನವನ್ನು ಪಡೆದಿದೆ, ಆದರೆ ಈ ಬಾರಿ ತಾಲೂಕು ಫಲಿತಾಂಶದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿ ಪ್ರಥಮ ಸ್ಥಾನವನ್ನು ಪಡೆಯಲೇಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಕ್ರಮವನ್ನು ರೂಪಿಸಿ ಮಕ್ಕಳ ಮನಸ್ಸಿನಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಪರೀಕ್ಷೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದ ಶಾಸಕರು ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳ ಜೊತೆ ಸಮಾಲೋಚನೆ ನಡೆಸಿ ಕಾರ್ಯತಂತ್ರವನ್ನು ರೂಪಿಸಿ ಅದ್ದೂರಿ ಕಾರ್ಯಕ್ರಮವನ್ನು ಸಧ್ಯದಲ್ಲಿಯೇ ನಡೆಸಲು ಕ್ರಿಯಾಶೀಲನಾಗುತ್ತೇನೆ. ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಹುದ್ದೆಯನ್ನು ಅಲಂಕರಿಸಿರುವ ಜನರು ತಾವು ಓದಿ ದೊಡ್ಡವರಾಗಿರುವ ಶಾಲೆಯ ಉನ್ನತಿಯ ಬಗ್ಗೆ ಆಲೋಚನೆ ಮಾಡಿ ಕೈಲಾದ ಸಹಾಯ ಮಾಡಬೇಕು ಎಂದು ನಾರಾಯಣಗೌಡ ಕರೆ ನೀಡಿದರು.
ಪುರಸಭೆಯ ಅಧ್ಯಕ್ಷ ಕೆ.ಗೌಸ್‍ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಜಗಧೀಶ್, ಉಪಾಧ್ಯಕ್ಷೆ ರಾಧಶ್ರೀನಾಗೇಶ್, ಪುರಸಭೆ ಸದಸ್ಯೆ ಪದ್ಮಾವತಿ ಪುಟ್ಟಸ್ವಾಮಿ, ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕ ಕೆ.ಆರ್.ಪುಟ್ಟಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಸಮಾರಂಭದಲ್ಲಿ ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಶಾಲಾಭಿವೃಧ್ಧಿ ಸಮಿತಿಯ ಉಪಾಧ್ಯಕ್ಷೆ ಮಂಜುಳಾ, ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ರಾಮೇಗೌಡ, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಟಿ.ಎಸ್.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ರಾಮೇಗೌಡ ಸ್ವಾಗತಿಸಿದರು, ರಾಘವೇಂದ್ರ ವಂದಿಸಿದರು, ಶಿಕ್ಷಕರಾದ ಬೋರೇಗೌಡ ಮತ್ತು ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ರಚಿತ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಮರೆಯಲಾಗದ ಡಿಸೆಂಬರ್
ಮೈಸೂರು ಪ್ರವಾಸಿ ಉತ್ಸವಗಳು-2014
ಉದ್ಘಾಟನಾ ಸಮಾರಂಭ
27-12-2014ನೇ ಶನಿವಾರ
ಸಂಜೆ 6.00 ಗಂಟೆಗೆ
ಬಯಲು ರಂಗಮಂದಿರ, ಮಾನಸ ಗಂಗೋತ್ರಿ
ಉದ್ಘಾಟನೆ : ಶ್ರೀ ವಿ. ಶ್ರೀನಿವಾಸ ಪ್ರಸಾದ್
ಮಾನ್ಯ ಕಂದಾಯ ಸಚಿವರು ಹಾಗೂ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು.
ಪ್ರವಾಸಿ ಸಾಹಿತ್ಯ ಬಿಡುಗಡೆ : ಶ್ರೀ ಹೆಚ್. ಸಿ. ಮಹದೇವಪ್ಪ
ಮಾನ್ಯ ಲೋಕೋಪಯೋಗಿ ಸಚಿವರು.
ಅಧ್ಯಕ್ಷತೆ : ಶ್ರೀ ವಾಸು
ಶಾಸಕರು, ಚಾಮರಾಜ ವಿಧಾನ ಸಭಾ ಕ್ಷೇತ್ರ.
ಅತಿಥಿಗಳು : ಶ್ರೀ ಆರ್. ಲಿಂಗಪ್ಪ
ಪೂಜ್ಯ ಮಹಾಪೌರರು, ಮೈಸೂರು ಮಹಾನಗರ ಪಾಲಿಕೆ.
: ಡಾ. ಪುಷ್ಪ ಅಮರನಾಥ್
ಮಾನ್ಯ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ಮೈಸೂರು.
: ಶ್ರೀ ಪ್ರತಾಪ ಸಿಂಹ
ಮಾನ್ಯ ಲೋಕಸಭಾ ಸದಸ್ಯರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ
: ಶ್ರೀ ಆರ್ ಧೃವನಾರಾಯಣ
ಮಾನ್ಯ ಲೋಕಸಭಾ ಸದಸ್ಯರು, ಚಾಮರಾಜನಗರ ಕ್ಷೇತ್ರ
: ಶ್ರೀ ಸಿ. ಎಸ್. ಪುಟ್ಟರಾಜು
ಮಾನ್ಯ ಲೋಕಸಭಾ ಸದಸ್ಯರು, ಮಂಡ್ಯ ಲೋಕಸಭಾ ಕ್ಷೇತ್ರ.
: ಶ್ರೀ ತನ್ವೀರ್ ಸೇಠ್,
ವಿಧಾನಸಭಾ ಸದಸ್ಯರು, ನರಸಿಂಹರಾಜ ಕ್ಷೇತ್ರ.
: ಶ್ರೀ ಎಂ. ಕೆ. ಸೋಮಶೇಖರ್,
ವಿಧಾನಸಭಾ ಸದಸ್ಯರು, ಕೃಷ್ಣರಾಜ ಕ್ಷೇತ್ರ.
: ಶ್ರೀ ಜಿ. ಟಿ. ದೇವೇಗೌಡ,
: ವಿಧಾನಸಭಾ ಸದಸ್ಯರು, ಚಾಮುಂಡೇಶ್ವರಿ ಕೇತ್ರ.
: ಶ್ರೀ ಕೆ. ವೆಂಕಟೇಶ್
ವಿಧಾನಸಭಾ ಸದಸ್ಯರು, ಪಿರಿಯಾಪಟ್ಟಣ ಕ್ಷೇತ್ರ.
: ಶ್ರೀ ಸಾ. ರಾ. ಮಹೇಶ್
ವಿಧಾನಸಭಾ ಸದಸ್ಯರು, ಕೆ. ಆರ್. ನಗರ ಕ್ಷೇತ್ರ.
: ಶ್ರೀ ಹೆಚ್. ಪಿ. ಮಂಜುನಾಥ್
ವಿಧಾನಸಭಾ ಸದಸ್ಯರು, ಹುಣಸೂರು ಕ್ಷೇತ್ರ.
: ಶ್ರೀ ಚಿಕ್ಕಮಾದು
ವಿಧಾನಸಭಾ ಸದಸ್ಯರು, ಹೆಚ್. ಡಿ. ಕೋಟೆ.
: ಶ್ರೀ ಸಿ. ಹೆಚ್. ವಿಜಯಶಂಕರ್
ಮಾನ್ಯ ವಿಧಾನ ಪರಿಷತ್ ಸದಸ್ಯರು.
: ಶ್ರೀ ಗೋ. ಮಧುಸೂದನ್
ಮಾನ್ಯ ವಿಧಾನ ಪರಿಷತ್ ಸದಸ್ಯರು
: ಶ್ರೀ ಮರಿತಿಬ್ಬೇಗೌಡ
ಮಾನ್ಯ ವಿಧಾನ ಪರಿಷತ್ ಸದಸ್ಯರು.
: ಶ್ರೀ ಎಸ್. ನಾಗರಾಜು (ಸಂದೇಶ್ ನಾಗರಾಜು)
ಮಾನ್ಯ ವಿಧಾನ ಪರಿಷತ್ ಸದಸ್ಯರು.
: ಶ್ರೀ ಆರ್. ಧರ್ಮಸೇನ
ಮಾನ್ಯ ವಿಧಾನ ಪರಿಷತ್ ಸದಸ್ಯರು.
: ಶ್ರೀ ಪ್ರೊ. ಕೆ. ಎಸ್. ರಂಗಪ್ಪ
ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ.
: ಶ್ರೀ ಎಂ. ಜಿ. ಕೃಷ್ಣನ್
ಕುಲಪತಿಗಳು, ಕರ್ನಾಟಕ ರಾಜ್ಯ ಮುಕ್ರ ವಿಶ್ವವಿದ್ಯಾನಿಲಯ.
: ಶ್ರೀಮತಿ sಸರ್ವಮಂಗಳ ಶಂಕರ್
ಕುಲಪತಿಗಳು, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು
ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ
: ಶ್ರೀ ಸಿ. ದಾಸೇಗೌಡ
ಅಧ್ಯಕ್ಷರು, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರ, ಮೈಸೂರು.
: ಶ್ರೀ ಕೆ. ಆರ್. ಮೋಹನ್ ಕುಮಾರ್
ಅಧ್ಯಕ್ಷರು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು.
: ಶ್ರೀ ಆರ್. ಮೂರ್ತಿ
ಅಧ್ಯಕ್ಷರು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು.
: ಶ್ರೀಮತಿ ರೆಹನಾ ಬೇಗಂ,
ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು.
: ಶ್ರೀ ಅನಂತ
ಅಧ್ಯಕ್ಷರು, ಬಣ್ಣ ಮತ್ತು ಅರಗು ಕಾರ್ಖಾನೆ, ಮೈಸೂರು.
: ಶ್ರೀಮತಿ ಮಹದೇವಮ್ಮ
ಮಾನ್ಯ ಉಪಮಹಾಪೌರರು, ಮೈಸೂರು ಮಹಾನಗರ ಪಾಲಿಕೆ.
: ಶ್ರೀ ಎಲ್ ಮಾದಪ್ಪ
ಮಾನ್ಯ ಉಪಾಧ್ಯಕ್ಷರು, ಜಿಲ್ಲಾಪಂಚಾಯಿತಿ, ಮೈಸೂರು.
: ಶ್ರೀ ಜಿ. ಕುಮಾರ್ ನಾಯಕ, ಐ.ಎ.ಎಸ್.,
ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಟಿ.ಸಿ.ಎಲ್. ಬೆಂಗಳೂರು.
: ಶ್ರೀಮತಿ ನೀಲಾ ಮಂಜುನಾಥ್, ಐ.ಎ.ಎಸ್.,
ನಿರ್ದೇಶಕರು, ಕೆ.ಎಸ್.ಐ.ಸಿ, ಬೆಂಗಳೂರು.
: ಶ್ರೀಮತಿ ಜಿ. ಸತ್ಯವತಿ
ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು.
: ಶ್ರೀ ಕೆ. ಎ. ದಯಾನಂದ್, ಕೆ.ಎ.ಎಸ್.,
: ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು.
: ಶ್ರೀ ಕುಮಾರ್. ಎನ್
ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿ, ಮೈಸೂರು.
ಮೈಸೂರು ಪಾರಂಪರಿಕ ನಡಿಗೆ-2014
25-12-2014 ರಿಂದ 30-12-2014
ಬೆಳಿಗ್ಗೆ 7.00 ರಿಂದ 9.00
ಮೈಸೂರು ಅರಮನೆ ಬಲರಾಮ ದ್ವಾರದಿಂದ
ಮೈಸೂರು ನಗರದ ಪರಂಪರಾ ಸ್ಥಳಗಳಿಗೆ
• 25-12-2014 : ಬೆಳಿಗ್ಗೆ 7.00 ರಿಂದ 9.00 (ಸಾರ್ವಜನಿಕರಿಗೆ)
ಗುರುವಾರ
• 26-12-2014 : ಬೆಳಿಗ್ಗೆ 7.00 ರಿಂದ 9.00 (ವಿದ್ಯಾಥಿಗಳಿಗೆ -ಸೈಕ್ಲಿಂಗ್)
ಶುಕ್ರವಾರ
• 27-12-2014 : ಬೆಳಿಗ್ಗೆ 7.00 ರಿಂದ 9.00. (ಯುವಕ –ಯುವತಿಯರಿಗೆ)
ಶನಿವಾರ
• 28-12-2014 : ಬೆಳಿಗ್ಗೆ 7.00 ರಿಂದ 9.00 (ವಿದೇಶಿ ಪ್ರವಾಸಿಗರಿಗೆ)
ಭಾನುವಾರ
• 29-12-2014 : ಬೆಳಿಗ್ಗೆ 7.00 ರಿಂದ 9.00 (ಹಾಸ್ಟೆಲ್ ವಿದ್ಯಾರ್ಥಿಗಳಿಗೆ)
ಸೋಮವಾರ
• 30-12-2014 : ಬೆಳಿಗ್ಗೆ 7.00 ರಿಂದ 9.00 (ಅಧಿಕಾರಿಗಳಿಗೆ)
ಮಂಗಳವಾರ
ಮೈಸೂರು ದೋಣಿ ವಿಹಾರ ಉತ್ಸವ-2014
26-12-2014ನೇ ಶುಕ್ರವಾರ ದಿಂದ 28-12-2014 ಭಾನುವಾರ
ಬೆಳಿಗ್ಗೆ 10.00 ರಿಂದ ಸಂಜೆ 5.00
ಕಾರಂಜಿಕೆರೆ
• 26-12-2014 : ಬೆಳಿಗ್ಗೆ 10.00 ರಿಂದ ಸಂಜೆ 5.00 ಕಾರಂಜಿ ಕೆರೆ
ಶುಕ್ರವಾರ
• 27-12-2014 : ಬೆಳಿಗ್ಗೆ 10.00 ರಿಂದ ಸಂಜೆ 5.00 ಕಾರಂಜಿ ಕೆರೆ
ಶನಿವಾರ
• 28-12-2014 : ಬೆಳಿಗ್ಗೆ 10.00 ರಿಂದ ಸಂಜೆ 5.00 ಕಾರಂಜಿ ಕೆರೆ
ಭಾನುವಾರ
ಮೈಸೂರು ಕರೋಲ್ ಸಿಂಗಿಂಗ್ ಉತ್ಸವ-2014
26-12-2014ನೇ ಶುಕ್ರವಾರ
ಸಂಜೆ 6.00 ರಿಂದ 8.00
ಸೆಂಟ್ ಫಿಲೋಮಿನಾÀಸ್ ಚರ್ಚ್, ಮೈಸೂರು
ಮೈಸೂರು ಕೇಕ್ ಉತ್ಸವ-2014
27-12-2014 ರಿಂದ 28-12-2014À
ಬೆಳಿಗ್ಗೆ 9.00 ರಿಂದ ರಾತ್ರಿ 9.00
ನಂಜರಾಜ ಬಹದ್ದೂರ್ ಛತ್ರ, ಮೈಸೂರು
27-12-2014 : ಬೆಳಿಗ್ಗೆ 9.00 ರಿಂದ ರಾತ್ರಿ 9.00
ಶನಿವಾರ : ಮಧ್ಯಾಹ್ನ 4.00 ರಿಂದ 5.00
ಕೇಕ್ ತಿನ್ನುವ ಸ್ಪರ್ಧೆ: ಪ್ರೌಢಶಾಲೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ.
: ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ.
28-12-2014 : ಬೆಳಿಗ್ಗೆ 9.00 ರಿಂದ ರಾತ್ರಿ 9.00
ಭಾನುವಾರ : ಬೆಳಿಗ್ಗೆ 11.00 ರಿಂದ 12.00
ಕೇಕ್ ತಿನ್ನುವ ಸ್ಪರ್ಧೆ: ಯುವಕ-ಯುವತಿಯರಿಗೆ
[20 ರಿಂದ 40 ವರ್ಷ]
ಪುರುಷ-ಮಹಿಳೆಯರಿಗೆ
[40 ವರ್ಷ ಮೇಲ್ಪಟ್ಟು]
ಡಿಸೆಂಬರ್ ಮೈಸೂರು ಆಹಾರ ಮೇಳ-2014
27-12-2014 ರಿಂದ 28-12-2014
ಬೆಳಿಗ್ಗೆ 8.00 ರಿಂದ ರಾತ್ರಿ 10.00
ನಂಜರಾಜ ಬಹದ್ದೂರ್ ಛತ್ರದ ಆವರಣ.
ಘಲ್ಲು ಘಲ್ಲೆನುತಾ ...............
[ಮೈಸೂರು ನೃತ್ಯ ಉತ್ಸವ]
27-12-2014ನೇ ಶನಿವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ
• ಜನಪದ ದರ್ಶನ : ಶ್ರೀ ಲಿಂಗÀರಾಜು ಮತ್ತು ತಂಡ
(ಡೊಳ್ಳು ಕುಣಿತ) ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ.
• ಶಾಸ್ತ್ರೀಯ ನೃತ್ಯ : ಭರತಾಂಜಲಿ
ಡಾ. ಶೀಲಾ ಶ್ರೀಧರ್, ಮೈಸೂರು.
• ಸಮಕಾಲಿನ ನೃತ್ಯ : ಕೌಟಿಲ್ಯ ಕಾಲೇಜು, ಮೈಸೂರು.
• ನೃತ್ಯ ವೈಭವ : ಶ್ರೀಮತಿ ಶುಭಾ ಧನಂಜಯ ಮತ್ತು ವೃಂದ,
ಬೆಂಗಳೂರು.
• ಪ್ಯೂಜನ್/ಸಮಕಾಲೀನ ನೃತ್ಯಗಳು : ಯೂನಿಕ್ ಸಿಜ್ಲರ್ಸ್, ಮೈಸೂರು.
• ಪಾಶ್ಚಿಮಾತ್ಯ ನೃತ್ಯ : ಸೈಕ್ಲೋನ್ ಡಾನ್ಸ್ ಇನ್‍ಸ್ಟಿಟ್ಯೂಟ್, ಮೈಸೂರು.
: :
• ಸಾಲ್ಸಾ ನೃತ್ಯ : ಸಂದೀಪ್ಸ್ ಡ್ಯಾನ್ಸ್ ಕಂಪನಿ, ಮೈಸೂರು.
ಚೆಲ್ಲಿದರು ಮಲ್ಲಿಗೆಯಾ ...............
[ಮೈಸೂರು ಸಂಗೀತ ಉತ್ಸವ]
28-12-2014ನೇ ಭಾನುವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ
• ಕರ್ನಾಟಕ ಬ್ಯಾಂಡ್ : ಪೊಲೀಸ್ ಇಲಾಖೆ, ಮೈಸೂರು ನಗರ.
• ಹಿಂದುಸ್ತಾನಿ ಸಂಗೀತ : ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು
ಪ್ರದರ್ಶಕ ಕಲೆಗಳು ವಿಶ್ವವಿದ್ಯಾನಿಲಯ, ಮೈಸೂರು.
• ಕರ್ನಾಟಕ ಸಂಗೀತ : ಲಲಿತ ಕಲೆಗಳ ಕಾಲೇಜು, ಮೈಸೂರು.
• ಸುಗಮ ಸಂಗೀತ : ಶ್ರೀ ಸಿ.ವಿಶ್ವನಾಥ್, ಕು. ಅನನ್ಯ ಹಾಗೂ ಕು. ಹಂಸಿನಿ, ಮೈಸೂರು.
• ಜನಪದ ಸಂಗೀತ : ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗ, ಮೈಸೂರು.
• ಪಾಶ್ಚಿಮಾತ್ಯ ಸಂಗೀತ : ಸ್ಟೋನ್ ಏಜ್, ರಾಕ್ ಬ್ಯಾಂಡ್, ಮೈಸೂರು.
• ಪ್ಯೂಜನ್ ಸಂಗೀತ : ಹೈಕ್ಳ್ ಬ್ಯಾಂಡ್, ಮೈಸೂರು.
• ಗಾನಯಾನ : ಶ್ರೀಮತಿ ದಿವ್ಯಾ ರಾಘವನ್ ಮತ್ತು ವೃಂದ
[ಹಳೆಯ ಕನ್ನಡ ಚಿತ್ರಗೀತೆಗಳು] ಪ್ರಸಿದ್ದ ಗಾಯಕರು, ಬೆಂಗಳೂರು.
[ಗಾನಯಾನ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು, ಪ್ರಾಯೋಜಿತ]
ಮೈಸೂರು ಕಾರ್ನಿವಾಲ್ ಉತ್ಸವ
29-12-2014ನೇ ಸೋಮವಾರ
[ಸಂಜೆ 4.00 ರಿಂದ 6.00 ಗಂಟೆ]
(ಮೈಸೂರು ಅರಮನೆ ಬಲರಾಮ ದ್ವಾರ – ಕೆ. ಆರ್. ವೃತ್ತ –
ದೇವರಾಜ ಅರಸ್ ರಸ್ತೆ – ಓವೆಲ್ ಮೈದಾನ)
• ಗೊರವರ ಕುಣಿತ :
• ನಗಾರಿ ಕುಣಿತ :
• ಗಾರುಡಿ ಗೊಂಬೆ :
• ಪಟಾ ಕುಣಿತ :
• ವೇಷ ಭೂಷಣ :
• ಪೋಲೀಸ್ ಅಶ್ವಾರೋಹ ಪಡೆ :
• ಎತ್ತಿನ ಗಾಡಿಗಳು :
• ಪೊಲೀಸ್ ಬ್ಯಾಂಡ್ :
• ಸ್ವೀಡನ್‍ಲ್ಯಾಂಡ್ ಬ್ಯಾಂಡ್ :
• ಮೈಸೂರು ಟಾಂಗಾ :
• ಮೈಸೂರು ಸಾರೋಟ :
ಝಕ್ಕಣಕ ಣಕ್ಕಣಕ ...............
[ಮೈಸೂರು ಯುವ ಉತ್ಸವ]
29-12-2014ನೇ ಸೋಮವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ
• ಇಂಗ್ಲೀಷ್ ಬ್ಯಾಂಡ್ : ಮೈಸೂರು ಪೊಲೀಸ್, ಮೈಸೂರು
• ಡೊಳ್ಳು ಕುಣಿತ : ಕಾವೇರಿ ಪದವಿಪೂರ್ವ ಕಾಲೇಜು
• ಜಾನಪದ ನೃತ್ಯ : ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜು
• ಜಾನಪದ ನೃತ್ಯ : ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜು
• ದಶಾವತಾರ : ಜೆ.ಎಸ್.ಎಸ್.ಮಹಿಳಾ ಪದವಿಪೂರ್ವ ಕಾಲೇಜು
• ಕೊರಿಯಾ ನೃತ್ಯ : ಟ್ಯಾಲೆಂಟ್ ಕಾಲೇಜು, ಹುಣಸೂರು
• ಸಮೂಹ ನೃತ್ಯ : ವಿಜಯ ವಿಠಲ ಪದವಿಪೂರ್ವ ಕಾಲೇಜು
• ಪ್ಯೂಜನ್ ನೃತ್ಯ : ಶಾರದಾ ವಿಲಾಸ ಪದವಿಪೂರ್ವ ಕಾಲೇಜು.
• ಸ್ಯಾಂಡಲ್ ವುಡ್ ಟು : ಚೈತ್ರಾ ಪದವಿಪೂರ್ವ ಕಾಲೇಜು
ಬಾಲಿವುಡ್
• ರಾಷ್ಟ್ರೀಯ ಭಾವೈಕ್ಯತೆ : ಸುಮುಖ ಪದವಿಪೂರ್ವ ಕಾಲೇಜು
• ಪ್ರಿನ್ಸ್ ಆಫ್ ಇಂಡಿಯಾ : ಮಹಾರಾಜ ಕಾಲೇಜು ಮೈಸೂರು
• ದಮ್ ಅಂಡ್ ರಿದಮ್ : ಮೈಸೂರು ವಿಶ್ವವಿದ್ಯಾನಿಲಯ
• ಪೂಜಾಕುಣಿತ : ಮೈಸೂರು ವಿಶ್ವವಿದ್ಯಾನಿಲಯ.
• ಸಮಕಾಲೀನ ನೃತ್ಯ : ಮಹಾರಾಣಿ ವಾಣಿಜ್ಯ ಕಾಲೇಜು, ಮೈಸೂರು.
• ದಸರಾ ವೈಭವ : ಮಹರಾಣಿ ಕಲಾ ಕಾಲೇಜು, ಮೈಸೂರು.
ಝಲಲ ಝಲಲ ಜಲಧಾರೆ................
[ಮೈಸೂರು ರೇಷ್ಮೆ ಪರಂಪರೆ ಉತ್ಸವ-2014]
30-12-2014ನೇ ಮಂಗಳವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ
• ಸಮಕಾಲಿನ ಬ್ಯಾಂಡ್ ಸಂಗೀತ : ಡಿ ಕೋಡ್ ಮೈಸೂರು
• ನಾಟ್ಯ ಪರಂಪರೆ : ಶ್ರೀ ಮಾತೃಕಾ ನೃತ್ಯ ಶಾಲೆ, ಶ್ರೀರಂಗಪಟ್ಟಣ
• ಮೈಸೂರು ರೇಷ್ಮೆ ದರ್ಶಿನಿ : ಕೆ.ಎಸ್.ಐ.ಸಿ. ಸೌಂದರ್ಯ ನಡೆ
• ಸಮಕಾಲೀನ ನೃತ್ಯ : ಶ್ರೀ ಬಿಜ್ಜು ಕೋವಿ ಮತ್ತು ತಂಡ, ಬೆಂಗಳೂರು
• ಸಮಕಾಲೀನ ನೃತ್ಯ : ಶ್ರೀ ಅಮಿತ್ ಮತ್ತು ತಂಡ, ಮೈಸೂರು
(ಹಿಪ್‍ಅಪ್ & ಲಾಕಿಂಗ್-ಪಾಪಿಂಗ್)
• ರೇಷ್ಮೆ ಸೀರೆ ವೈವಿಧ್ಯ : ಸೌಂದರ್ಯ ನಡೆ
(ಸೌಂದರ್ಯ ದರ್ಶನ) ವಿನ್ಯಾಸ : ಶ್ರೀಮತಿ ಹೇಮಲತಾ, ಬೆಂಗಳೂರು
• ಬಾಲಿವುಡ್ ಡಾನ್ಸ್ : ವೈಬ್ಸ್, ಬೆಂಗಳೂರು
• ಸಮಕಾಲೀನ ನೃತ್ಯ : ಹಿಪ್‍ಲಾಕ್ಸ್, ಮೈಸೂರು.
• ಎಲ್.ಇ.ಡಿ. ಡಾನ್ಸ್ : ಶ್ರೀ ಬಿಜ್ಜು ಕೋವಿ ಮತ್ತು ತಂಡ, ಬೆಂಗಳೂರು
• ಸೀರೆ ಪರಂಪರೆ ದರ್ಶಿನಿ : ಸೌಂದರ್ಯ ನಡೆ
ವಿನ್ಯಾಸ : ಕೌಶಲ್ ವಿಶು, ಮೈಸೂರು
• ಸಮಕಾಲಿನ ನೃತ್ಯ : ಶೈನಿಂಗ್ ಡಾನ್ಸ್ ಅಕಾಡೆಮಿ, ಮೈಸೂರು.
• ಹಿಪ್‍ಆಫ್ ಡಾನ್ಸ್ : ವೈಬ್ಸ್, ಬೆಂಗಳೂರು
• ಜನಪದ ಶೈಲಿ ನೃತ್ಯ : ರೆಟ್ರೋ ಡಾನ್ಸ್ ಅಕಾಡೆಮಿ, ಮೈಸೂರು
• ಮೈಸೂರು ರೇಷ್ಮೆ ದರ್ಶಿನಿ : ಸೌಂದರ್ಯ ನಡೆ
ಕೆ.ಎಸ್.ಐ.ಸಿ.
ನಿರ್ದೇಶನ ಕೌಶಲ್ ವಿಶು, ಮೈಸೂರು
ಶ್ರೀಮತಿ ಹೇಮಲತಾ, ಬೆಂಗಳೂರು
• ಪ್ರಾದೇಶಿಕ ನೃತ್ಯಗಳು : ಶ್ರೀ ಬಿಜ್ಜು ಕೋವಿ ಮತ್ತು ತಂಡ, ಬೆಂಗಳೂರು
ಉತ್ಸವ ಪ್ರಾಯೋಜನೆ
ಕರ್ನಾಟಕ ರೇಷ್ಮೆ ಉದ್ಯಮ ನಿಗಮ, ಬೆಂಗಳೂರು.
ನಿರ್ದೇಶನ
: ಶ್ರೀಮತಿ ಹೇಮಲತಾ, ಬೆಂಗಳೂರು
ಶ್ರೀ ಕೌಶಲ್ ವಿಶು, ಮೈಸೂರು
ಚಾಮುಂಡಿ ಚಾರಣ
31-12-2014ನೇ ಬುಧವಾರ
[ಬೆಳಿಗ್ಗೆ 6.00 ರಿಂದ 9.00]
ಚಾಮುಂಡಿ ಬೆಟ್ಟದ ಪಾದ
ಉತ್ಸವದ ಸಹಪ್ರಾಯೋಜಕರು
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, ಬೆಂಗಳೂರು.
ಹೆಚ್.ಡಿ.ಎಫ್.ಸಿ. ಬ್ಯಾಂಕ್, ಮೈಸೂರು.
ಸಿ ಶಿಖಾ, ಐ.ಎ.ಎಸ್.,
ಜಿಲ್ಲಾಧಿಕಾರಿಗಳು
ಮೈಸೂರು ಜಿಲ್ಲೆ.
No comments:
Post a Comment