ಬಾಲ್ಯದಲ್ಲೇ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಿ: ಕೆ.ಟಿ.ಹನುಮಂತು
ಕಾಗೇಹಳ್ಳದದೊಡ್ಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಮಂಡ್ಯ: ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸುವುದು ಅತ್ಯಾವಶ್ಯಕವಾಗಿದೆ ಎಂದು ಕೃಷಿಕ ಲಯನ್ಸ್ ವಲಯಾಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ಸಹಕಾರ ಲಯನ್ಸ್ ವತಿಯಿಂದ ತಾಲ್ಲೂಕಿನ ಕಾಗೇಹಳ್ಳದದೊಡ್ಡಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣಾ ಸಮಾರಂಭವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಹೊಟ್ಟೆಬಾಕತನ, ದುರಾಸೆಯಿಂದಾಗಿ ಈಗಾಗಲೇ ಪರಿಸರ ಸಾಕಷ್ಟು ಕಲುಷಿತಗೊಂಡಿದೆ. ನಮ್ಮ ಪೂರ್ವಿಕರು ಮರ-ಗಿಡಗಳನ್ನು ಪೂಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು. ಇತ್ತೀಚೆಗೆ ಪರಿಸರ ಹಾನಿಯಿಂದಾಗಿ ಹೆಚ್ಚಿನ ಅನಾಹುತಗಳನ್ನು ನೋಡುತ್ತಿದ್ದೇವೆ. ಇನ್ನಾದರೂ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಬಾಲ್ಯದಲ್ಲೇ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಮರ-ಗಿಡಗಳನ್ನು ನೆಟ್ಟು ಪೆÇೀಷಿಸಬೇಕು ಎಂದರು.
ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ಸ್ವಚ್ಛತೆ ಕಾಪಾಡುವ ಮೂಲಕ ಆಂದೋಲನಕ್ಕೆ ಕೈಜೋಡಿಸಬೇಕು. ಗ್ರಾಮ ಪಂಚಾಯಿತಿ, ಸಂಘ ಸಂಸ್ಥೆಗಳು, ಶಾಲಾ- ಕಾಲೇಜುಗಳ ಸಹಕಾರದಲ್ಲಿ ಗ್ರಾಮದಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಪರಿಸರ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಹಿಂದೆ ರಾಜಮಹಾರಾಜು ಸಾಲುಮರಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದರು. ಸಾಲುಮರದ ತಿಮ್ಮಕ್ಕ ಸಹ ನೂರಾರು ಮರಗಳನ್ನು ಮಕ್ಕಳಂತೆ ಪೆÇೀಷಣೆ ಮಾಡಿದ್ದಾರೆ. ಅವರಂತೆಯೇ ಪ್ರತಿಯೊಬ್ಬರೂ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಭಾರಿ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. ಕನ್ನಡ ಶಾಲೆಯಲ್ಲಿ ಓದಿದ ಹಲವರು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಪೆÇೀಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ಗ್ರಾಮೀಣ ಜನತೆ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಸಂಘಸಂಸ್ಥೆಗಳು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಹಕಾರ ಲಯನ್ಸ್ ಅರ್ಧಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ದೈನಂದಿನ ಕೆಲಸ ಕಾರ್ಯಗಳ ಒತ್ತಡದ ನಡುವೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂದರು.
ಸಾಹಿತ್ಯ ಲಯನ್ಸ್ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಚಾಮಲಾಪುರ ರವಿಕುಮಾರ್, ಲಯನ್ಸ್ ಸಂಸ್ಥೆಯ ನಿಂಗೇಗೌಡ, ಜಯಕುಮಾರ್, ರಾಜು, ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ಕೆ.ರಾಮಚಂದ್ರ, ಮುಖಂಡರಾದ ಆತ್ಮಾನಂದ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‍ಬುಕ್, ಸ್ವಚ್ಛತಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ವರುಣಾ ಸೇರಿದಂತೆ ನಾಲ್ಕು ಕಡೆ ಮೆಗಾ ಘಟಕ ಸ್ಥಾಪನೆ .
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರ ವರುಣಾ ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ ತೆಂಗುನಾರಿನ ಉತ್ಪನ್ನಗಳ ಮೆಗಾ ಘಟಕಗಳನ್ನು 25 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ತೆಂಗು ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಡೂರು ಸಿ.ನಂಜಪ್ಪ ತಿಳಿಸಿದರು.
ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ತೆಂಗು ನಾರಿನ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಸಂಬಂಧ ಹೆಚ್ಚು ಹೆಚ್ಚು ಸಂಶೋಧನಾ ಕಾರ್ಯಗಳು ನಡೆಯಬೇಕಾಗಿದೆ, ಇದಕ್ಕಾಗಿ ರಾಜ್ಯದ ಐದಾರು ಕಡೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ , ಉತ್ಪಾಧನೆ ಮತ್ತು ಮಾರಾಟ ವ್ಯವಸ್ಥೆ ಸೇರಿದಂತೆ ಮೆಗಾ ಘಟಕಗಳನ್ನು ಸ್ಥಾಪಿಸಬೇಕಾಗಿದೆ. ಈ ಘಟಕಗಳು ನಾರಿನ ಉತ್ಪನ್ನ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡುವ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸಬೇಕು, ಈ ಮೆಗಾ ಘಟಕಗಳಲ್ಲಿ ವಸ್ತು ಪ್ರದರ್ಶನಕ್ಕೂ ವ್ಯವಸ್ಥೆ ಮಾಡಬಹುದಾಗಿದೆ ಎಂದರು.
ತೆಂಗು ಬೆಳೆ ಹೆಚ್ಚಾಗಿರುವ ಮೈಸೂರು ಭಾಗ ಹಾಗೂ ಸಿಎಂ ತವರು ಕ್ಷೇತ್ರ ವರುಣಾದಲ್ಲಿ ಐದು ಎಕರೆ ಜಾಗ ಖರೀದಿಸಿ, 25 ಕೋಟಿ ರೂ ಅಂದಾಜು ವೆಚ್ಚದಲ್ಲಿ ತೆಂಗಿನ ನಾರು ಉತ್ಪನ್ನ ಘಟಕವನ್ನು ಸ್ಥಾಪಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಘಟಕ ಸ್ಥಾಪನೆಯಿಂದಾಗಿ ಸುತ್ತಮುತ್ತಲಿನ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ತಾಲೂಕುಗಳ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ, ಆ ಭಾಗದ ಯುವಕ, ಯುವತಿಯರಿಗೂ ಉದ್ಯೋಗಾವಕಾಶಗಳು ಒದಗಿ ಬರಲಿದೆ ಎಂದು ಹೇಳಿದರು. ಇದೇ ಮಾದರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು-ಬಿರೂರು ನಡುವೆ ಇರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವಿದ್ದು, ಇದರಲ್ಲಿ 5 ಎಕರೆ ಜಾಗದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಮೆಗಾ ಘಟಕ ಸ್ಥಾಪಿಸಬೇಕಾಗಿದೆ, ಇದರಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಯ ತೆಂಗು ಬೆಳೆಗಾರರಿಗೆ ಪ್ರಯೋಜನವಾಗಲಿದೆ, ಕರಾವಳಿಯ ಉಡುಪಿಯಂತಹ ಕಡೆ ಮೆಗಾ ಘಟಕ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ, ಅಲ್ಲದೆ ತೆಂಗು ಬೆಳೆಯಿಲ್ಲ, ಹೈದಾರ್‍ಬಾದ್ –ಕರ್ನಾಟಕ, ಮುಂಬೈ-ಕರ್ನಾಟಕ ಪ್ರದೇಶಗಳಲ್ಲೂ ಇಂತಹ ಘಟಕ ಸ್ಥಾಪಿಸುವುದರಿಂದ, ಆ ಪ್ರದೇಶಗಳಲ್ಲೂ ತೆಂಗು ಬೆಳೆ ಮತ್ತು ಅದರ ಉತ್ಪನ್ನಗಳನ್ನು ಜನಪ್ರಿಯಗೊಳಿಸಬಹದು, ಇದಕ್ಕಾಗಿ ಬೆಳಗಾವಿಯ ಸುವರ್ಣ ಸೌಧದ ಬಳಿ 5 ಎಕರೆ ಜಾಗದಲ್ಲಿ ಮೆಗಾ ಘಟಕ ಸ್ಥಾಪಿಸಲಾಗುವುದು, ವಿಜಯಪುರದಲ್ಲೂ ಇದೇ ಮಾದರಿಯ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ನಿಗಮದ ನೌಕರರಿಗೆ ಕಡಿಮೆ ಸಂಬಳವಿದ್ದು, ಅವರ ದಿನ ನಿತ್ಯದ ವೇತನವನ್ನು ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ತೆಂಗು ಮಟ್ಟೆಗಳನ್ನು ಸಾಗಿಸುವುದಕ್ಕೆ ವಾಹನಗಳ ಸಮಸ್ಯೆಯಿದೆ. ಇದನ್ನು ನಿವಾರಿಸಬೇಕೆಂದು ಸಿಎಂಗೆ ಪ್ರಸಾವನೆಯಲ್ಲಿ ಕೋರಲಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ನಿಗಮವನ್ನು ಉನ್ನತೀಕರಿಸಿ, ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದರು.
ತೆಂಗಿನ ನಾರಿನಿಂದ ಗುಣಮಟ್ಟದ ಪರಿಸರ ಸ್ನೇಹಿ ಗೃಹಬಳಕೆ ವಸ್ತುಗಳು, ತಟ್ಟೆ, ಮ್ಯಾಟ್, ಹಗ್ಗ, ಹಾಸಿಗೆ, ದಿಂಬು, ಫ್ಲೈವುಡ್, ಕಾಂಪೋಸೀಟ್ ಬೋಡ್ ್ಗಳು ಮುಂತಾದವುಗಳನ್ನು ತಯಾರಿಸಬಹುದಾಗಿದೆ. ಕಿಟಕಿ, ಬಾಗಿಲು, ಶಾಲಾ ಡೆಸ್ಕ್ ಗಳು, ಟೇಬಲ್ ಸೇರಿದಂತೆ ಇತರೆ ಪಿಠೋಪಕರಣಗಳನ್ನು ತಯಾರಿಸಬಹುದಾಗಿದೆ. ರಾಜ್ಯದ ಐದು ಲಕ್ಷಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ 4 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ತೆಂಗಿನ ಮರಗಳಿವೆ, ನಾರಿನ ಉದ್ಯಮಕ್ಕೆ ಶೇ 25 ರಷ್ಟು ತೆಂಗಿನ ಮಟ್ಟೆಗಳನ್ನು ಬಳಸಿಕೊಂಡಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ನಿಗಮವು ನಡೆಸುತ್ತಿರುವ 54 ಉತ್ಪಾಧನಾ ಘಟಕಗಳಲ್ಲಿ ತೆಂಗು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
6 ಕೋಟಿ ರೂ ನಷ್ಟ : ನಿಗಮವು 20 ಕೋಟಿ ರೂ ವಹಿವಾಟು ನಡೆಸುತ್ತಿದ್ದು, 6 ಕೋಟಿ ರೂಗಳಷ್ಟು ನಷ್ಟ ಅನುಭವಿಸುತ್ತಿದೆ, ಇದಕ್ಕೆ ಅದಕ್ಷ ಆಡಳಿತವೇ ಕಾರಣವಾಗಿದೆ, ಇದನ್ನು ಸರಿಪಡಿಸಿ, ನಿಗಮವು ಮುಂದೆ ಲಾಭದಾಯಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದೆಂದರು.
ಗೋಷ್ಠಿಯಲ್ಲಿ ಮಂಡಳಿಯ ಸದಸ್ಯ ಬಿ.ಮರಯ್ಯ, ಬಿ.ಮಂಟೇಲಿಂಗಪ್ಪ, ತಿಮ್ಮಣ್ಣ, ಅಧಿಕಾರಿಗಳಾದ ಗೋವಿಂದೇಗೌಡ, ತಿಪ್ಪೇರುದ್ರಪ್ಪ ಉಪಸ್ಥಿತರಿದ್ದರು.
ಸಚಿವ ಆಂಜನೇಯ ಕಪಿ: ಪ್ರತಾಪ್ ಸಿಂಹ ಟೀಕೆ
ಮೈಸೂರು, ಡಿ.25- ಕರ್ನಾಟಕ ರಾಜ್ಯದ ಸಮಾಜಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಕುಟುಂಬದವರು ಮಹಾನ್ ದೈವ ಭಕ್ತರು, ಅದಕ್ಕೇ ಅವರಿಗೆ ಆಂಜನೇಯ ಎಂದು ಹೆಸರಿಟ್ಟಿದ್ದಾರೆ. ಬಹುಸ ಅವರು ನಾಸ್ತಿಕರಾಗಿದ್ದರೆ ಅವರಿಗೆ ಆ ಹೆಸರು ಇಡದೆ ಕಪಿ ಎಂದು ನಾಮಕರಣ ಮಾಡುತ್ತಿದ್ದರು ಎಂದು ಟೀಕೆ ಮಾಡುವ ಮೂಲಕ ಸಂಸದ ಪ್ರತಾಪ್‍ಸಿಂಹ ಹೊಸದೊಂದು ವಿವಾದ ಹುಟ್ಟುಹಾಕಿದ್ದಾರೆ.
ಇಂದು ಮೈಸೂರಿನ ರೈಲು ನಿಲ್ದಾಣದ ಬಳಿಯಿರುವ ರೈಲ್ವೆ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ಸಚಿವ ಆಂಜನೇಯ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಭಾರತದ ಒಬ್ಬ ಶ್ರೇಷ್ಠ ವ್ಯೆಕ್ತಿಗೆ ಈ ಪ್ರಶಸ್ತಿ ನೀಡಿರುವುದನ್ನು ಸಹಿಸಿಕೊಳ್ಳಲಾಗದ ಆಂಜನೇಯರನ್ನು ಮತ್ತಿನ್ನೇನೆಂದು ಕರೆಯಬೇಕೆಂದು ಸಮರ್ಥನೆ ಮಾಡಿಕೊಂಡ ಸಂಸದ ಒಂದು ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಈ ರೀತಿ ಹಾಳಿಕೆ ನೀಡಬಾರದು, ವಾಜಪೇಯಿಯವರು ಈ ದೇಶದ ಪ್ರಧಾನಿಯಾಗಿ ಸ್ವಚ್ಛ ಹಾಗೂ ದಕ್ಷತೆಯಿಂದ ಉತ್ತಮ ಆಡಳಿತ ನಡೆಸಿದವರು ಎಂಬುದನ್ನು ಮರೆಯಬಾರದು, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿಗೌರವಿಸುವುದರಲ್ಲಿ ಯಾವದೇ ತಪ್ಪಿಲ್ಲ ಎಂದು ಎಂದರಲ್ಲಿದೆ, ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಸಚಿನ್ ಸೇರಿದಂತೆ ಕೆಲವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಆಗ ಬಿಜೆಪಿಯ ಯಾರೂ ವಿರೋಧಿಸಲಿಲ್ಲ, ಆದರೆ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಈ ಪ್ರಶಸ್ತಿ ನಿಡಿದರೆ ಕಾಂಗ್ರೆಸ್ ನವರು ಅದನ್ನು ವಿರೋಧಿಸುವುದು ಸರಿಯಲ್ಲ, ಯಾರೇ ಆಗಲಿ ಇನ್ನು ಮುಂದೆ ಈ ರೀತಿ ವಿರೋಧಿಸುವುದನ್ನು ನಿಲ್ಲಿಸಬೇಕು
ಸಂಧ್ಯಾ ಸುರಕ್ಷ ಟ್ರಸ್ಟ್ ಹಾಗೂ ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕರ ವೇದಿಯ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಹುಟ್ಟು ಹಬ್ಬವುನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ವೇದಿಕೆಯ ಅಧ್ಯಕ್ಷ ಬಿ.ಟಿ.ನಟರಾಜ ಜೋಯಿಸ್, ಡಾ.ಭಾನುಪ್ರಕಾಶ್ ಇತರರಿದ್ದಾರೆ.
No comments:
Post a Comment