ಸರ್ಕಾರದ ವಿರುದ್ಧ ನಾಳೆ ಸುವರ್ಣ ಸೌದಕ್ಕೆ ಮುತ್ತಿಗೆ -ಸಿ.ಟಿ.ರವಿ
ಮೈಸೂರು, ಡಿ,8- ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರದ ಕ್ರಮ ವಿರೋಧಿಸಿ, ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ನಾಳೆ ಬೆಳಗಾಂನಲ್ಲಿರುವ ಸುವರ್ಣ ಸೌದಕ್ಕೆ ಬಿಜೆಪಿ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿಯ ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ಮೈಸೂರಿನಲ್ಲಿ ಸುಧ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ, ನುಸಿರೋಗ ತಗುಲಿಕೊಂಡಿದೆ, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಕಾಂಗ್ರೆಸ್‍ನವರಲ್ಲೇ ಒಳ ಜಗಳಗಳಿವೆ ಈ ಎಲ್ಲಾವನ್ನೂ ವಿರೋಧಿಸಿ, ಸರ್ಕಾರವನ್ನು ಎಚ್ಚರಿಸಲು 50 ಸಾವಿರಕ್ಕೂ ಹೆಚ್ಚುಮಂದಿ ಸಮ್ಮುಖದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ, ನಂತರ ಬೆಳಗಾವಿ ಅಧಿವೇಶನದಲ್ಲಿ ಇವುಗಳ ಬಗ್ಗೆ ಪ್ರಶ್ನೆ ಕೇಳಲು ಸಜ್ಜಾಗಿದೆ ಎಂದರು.
ಇನ್ನೂ ಕಾಲ ಮಿಂಚಿಲ್ಲ, ಇನ್ನೂ 24 ಗಂಟೆಗಳ ಸಮಯಾವಕಾಶವಿದೆ ಅಷ್ಟರೊಳಗೆ ಸರ್ಕಾರ ತಮ್ಮ ನಿಲುವನ್ನು ಬದಲಾಯಿಸಿಕೊಂಡು ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಬೇಕು ಇಲ್ಲದಿದ್ದಲ್ಲಿ ಅಧಿಕಾರ ತೊಲಗೆ ಜನಾಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ ಎಂದರಲ್ಲದೆ, ಸರ್ಕಾರವನ್ನು ಬೀಳಿಸುವ ಇಚ್ಚೆ ನಮಗಿಲ್ಲ, ಅವರಿಗೆ ಇನ್ನೂ ಮೂರುವರೆ ವರ್ಷಗಳ ಕಾಲಾವಕಾಶವಿದೆ ಆದ್ದರಿಂದ ಹಳಿತಪ್ಪಿರುವ ಸರ್ಕಾರವನ್ನು ಸರಿದಾರಿಗೆ ತರುವುದೇ ನಮ್ಮ ಉದ್ದೇಶವೆಂದು ಹೇಳಿದರು.
ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿದ್ದು, ಈವರೆಗೆ ದೇಶಾದ್ಯಂತ 1 ಕೋಟಿ 25 ಲಕ್ಷ ಮಂದಿ ನೊಮದಣಿಮಾಡಿಸಿಕೊಮಡಿದ್ದಾರೆ. ಹತ್ತು ಕೋಟಿ ನೋಂದಣಿ ದಿವಸ ಸುವರ್ಣ ದಿನವಾಗಿರುತ್ತದೆ ಎಂದರು.
ಇಂದು ಇಬ್ಬರು ನಕ್ಸಲರು ಶಾರಣಾಗತಿಯಾಗುತ್ತಿರುವುದರ ಹಿಂದೆ ಯಾವುದೋ ಮರ್ಮ, ಕೈವಾಡವಿದೆ ಆದ್ದರಿಂದ ಸರ್ಕಾರ ಎಚ್ಚರದಿಂದ ಇದ್ದು, ಶರಣಾಗತಿ ಹಿನ್ನೆಲೆಯ ಬಗ್ಗೆ ಯೋಚಿಸಬೇಕು, ಅವರ ಹಿಡನ್ ಅಜೆಂಡಾಕ್ಕೆ ಸರ್ಕಾರ ಬೆಲೆ ತರಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಗ್ರಾಮ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಶೇಖಡ 50 ರಷ್ಟು ಕಡಿತ ಗೊಳಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಈ ಉದ್ಯೋಗ ಕಾತ್ರಿ ಯೋಜನೆಯಡಿಯಲ್ಲಿನ ಅರ್ಧದಷ್ಟು ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಪಿಡಿಓ ಗಳು ಬ್ರಷ್ಠಾಚಾರ ನಡೆಸಿ ಹಣ ಪೋಲು ಮಾಡುತ್ತಿದ್ದ್ದಾರೆ ಆದ್ದರಿಂದ ಮೊದಿ ಸರ್ಕಾರ ಈ ಯೋಜನೆ ಅನುದಾನ ಕಡಿತಗೊಳಿಸಿದೆ ಎಂದು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ, ಬಿಜೆಪಿ ಮುಖಂಡರುಗಳಾದ ಯಶಸ್ವಿನಿ ಸೋಮಶೇಖರ್, ವಿಧಾನ -ಪರಿಷತ್ತಿನ ಮಾಜಿ ಶಾಸಕ ಸಿದ್ದರಾಜು, ಮುಖಂಡರುಗಳಾದ ಮೋಹನ್, ಮಹೇಶ್ ಉಪಸ್ಥಿತರಿದ್ದರು.
15ನೇ ವಾರ್ಡ್ ಚುನಾವಣೆ ಬಿಜೆಪಿ ಅಭ್ಯರ್ಥಿಗೆ ಜಯ
ಮೈಸೂರು,ಡಿ.8- ಮೈಸೂರು ನಗರಪಾಲಿಕೆಯಲ್ಲಿ ಮಂಜುಳಾ ಮಾನಸರಿಂದ ತೆರವಾಗಿದ್ದ 15ನೇ ವಾರ್ಡ್‍ಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸಿಮಾ ಪ್ರಸಾದ್ ಜಯಬೇರಿ ಭಾರಿಸಿದ್ದಾರೆ.
ಕಳೆದ ಶುಕ್ರವಾರ ನಡೆದ ಚುನಾವಣೆಯ ಮತಗಳ ಣಿಕೆ ಕಾರ್ಯ ಇಂದು ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಜಯನಗರದಲ್ಲಿರುವ ವಲಯ ಕಚೇರಿ 2ರಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡು 11 ಗಂಟೆಗೆ ಮುಕ್ತಾಯವಾಯಿತು. ಬಿಜೆಪಿ ಅಭ್ಯರ್ಥಿ ಸೀಮಾ ಪ್ರಸಾದ್ ರವರು 2 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿ 862 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.
ಇವರೊಂದಿಗೆ ಪ್ರತಿಸ್ಪರ್ಧಿಗಳಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಸಮಬಲವಾಗಿ ಪ್ರಚಾರ ನಡೆಸಿದ್ದರೂ ಕಾಂಗ್ರೆಸ್ ಎಡರನೇ ಸ್ಥಾನಕ್ಕೆ , ಜೆಡಿಎಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.
ಇವರ ಗೆಲುವಿನಿಂದಾಗಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು. ಈ ಗೆಲುವು ನಗರ ಪಾಲಿಕೆ ಸದಸ್ಯರ ಸದಸ್ಯತ್ವಕ್ಕೆ ಮತ್ತೊಂದು ಗರಿ ಮೂಡಿದಂತಿದೆ.
ಅಂಬೇಡ್ಕರ್ ಪರಿನಿರ್ವಾಣ ದಿನ : ಮೊಂಬತ್ತಿ ಮೆರವಣಿಗೆ
ಮೈಸೂರು : ಮೈಸೂರು ಮಹಾನಗರ ಪಾಲಿಕೆ ಪರಿಶಿಷ್ಟಜಾತಿ, ವರ್ಗಗಳ ನೌಕರರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 58 ನೇ ಪರಿನಿರ್ವಾಣ ದಿನದ ಅಂಗವಾಗಿ ಶನಿವಾರ ಸಂಜೆ ಮೊಂಬತ್ತಿ ಮೆರವಣಿಗೆಯನ್ನು ನಡೆಸಲಾಯಿತು.
ಸುಮಾರು ನೂರಕ್ಕೂ ಹೆಚ್ಚು ಮಂದಿ ಇದ್ದ ನೌಕರರು ಮೇಯರ್ ಲಿಂಗಪ್ಪ, ಉಪ ಮೇಯರ್ ಮಹಾದೇವಮ್ಮ, ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವಾರು ಮಂದಿ ನಗರ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಪಾಲಿಕೆಯ ಆವರಣದಿಂದ ಮೆರವಣಿಗೆ ಹೊರಟು ಪುರಭವನದ ಎದುರು ಇರುವ ಅಂಬೇಡ್ಕರ್ ಪ್ರತಿಮೆ ತನಕ ನಡೆಸಿ ನಂತರ ಅಂಬೇಡ್ಕರ್ ಅವರಿಗೆ ಮೊಂಬತ್ತಿಯ ಗೌರವ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಸಂದೇಶ್ ಸ್ವಾಮಿ ಮಾತನಾಡಿ ಅಂಬೇಡ್ಕರ್ ಅವರ ಆಶಯಗಳು ಸರ್ವಕಾಲಿಕವಾಗಿದ್ದು, ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವುದಕ್ಕೆ ವಿಫಲವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಅಂಬೇಡ್ಕರ್ ಅವರು ಒಂದು ಧರ್ಮ, ಜಾತಿಗೆ ಸೀಮಿತವಾಗಿರದೆ, ಇಡೀ ಮನುಕುಲದ ಒಳತಿಗಾಗಿ ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಮೀಸಲಾತಿಯ ಫಲವನ್ನು ಅನುಭವಿಸಿ ಆರ್ಥಿಕವಾಗಿ ಮುಂದುವರಿದು, ತಾವು ನಡೆದು ಬಂದ ಸಮಾಜವನ್ನು ಮರೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಅಂಬೇಡ್ಕರ್ ಅವರು ಸಮ ಸಮಾಜದ ನಿರ್ಮಾಣಕ್ಕಾಗಿ ಸಂವಿಧಾನ ರಚನೆಗೂ ಮುನ್ನಾ ವಿದ್ಯಾರ್ಥಿ ದೆಸೆಯಿಂದಲೂ ಅನುಭವಿಸಿದ ಸಾಮಾಜಿಕ ಅನಿಷ್ಠ ಪದ್ಧತಿಯ ವ್ಯವಸ್ಥೆಯು ಕಲ್ಪನಿಗೂ ಮೀರಿದ್ದಾಗಿದೆ , ಇಂತಹ ಮಹನೀಯರ ಕಾರ್ಯಕ್ರಮಗಳು ಇತ್ತೀಚೆಗೆ ಮನರಂಜನೆಯ ಕಾರ್ಯಕ್ರಮಗಳಾಗಿ ರೂಪುಗೊಳ್ಳಿತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಸಂಚಾಲಕ ಜಿ.ಶಿವಸಿದ್ದು, ಎಸ್. ವೆಂಕಟೇಶ್, ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

No comments:
Post a Comment