Thursday, 25 December 2014

ಮೈಸೂರು -ಸುದ್ದಿ ಚಿತ್ರಗಳು.



ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ರವರು  ಬಿಷಪ್ ಹೌಸ್‍ನಲ್ಲಿ ಕ್ರೈಸ್ತ ಧರ್ಮಗುರು ಥಾಮಸ್ ವಾಜ್ ಪಿಳೈರವರಿಗೆ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಹೂಗುಚ್ಚ ನೀಡಿ ಶುಭಾಷಯ ಕೋರಿದರು. ಚಿತ್ರದಲ್ಲಿ ಶಾಸಕ ತನ್ವೀರ್ ಸೇಠ್, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ  ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಇದ್ದಾರೆ.
ಕೃಷ್ಣರಾಜಪೇಟೆ. ತಾಲೂಕಿನ ಇತಿಹಾಸ ಪ್ರಸಿದ್ಧವಾದ ಹೇಮಗಿರಿ ದನಗಳ ಜಾತ್ರೆಯ ಕಾಲದ ವಿವಿಧ ಸುಂಕಗಳ ಹರಾಜನ್ನು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಡಿಸೆಂಬರ್-27ರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತ ಬಿಡ್ಡುದಾರರು ಕಛೇರಿಯಲ್ಲಿ ಮಾಹಿತಿಯನ್ನು ಪಡೆದು ಮಂಗಡ ಠೇವಣಿ ಹಣವನ್ನು ಪಾವತಿ ಮಾಡಿ ಹರಾಜು ಬಿಡ್ಡಿನಲ್ಲಿ ಭಾಗವಹಿಸಬಹುದು ಎಂದು ತಹಶೀಲ್ದಾರ್ ಹೆಚ್.ಎಲ್.ಶಿವರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಇಂದು ಪಟ್ಟಣದ ಮಿನಿ ವಿಧಾನಸೌಧದ ತಮ್ಮ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೇಮಗಿರಿ ಜಾತ್ರೆಯ ಪೂರ್ವಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
2015ರ ಜನವರಿ 26ರಂದು ಹೇಮಗಿರಿಯ ಆರಾಧ್ಯದೈವ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯವರ ರಥೋತ್ಸವವು ಜರುಗಲಿದ್ದು ಜಾತ್ರೆಯ ಅಂಗವಾಗಿ ನಡೆಯಲಿರುವ ರಾಜ್ಯದಲ್ಲಿಯೇ ಪ್ರಸಿದ್ಧವಾದ ಹೇಮಗಿರಿ ದನಗಳ ಜಾತ್ರೆಯು ಜನವರಿ 20ರಿಂದ ಆರಂಭವಾಗಲಿದೆ. ಜಾತ್ರೆಯ ಅವಧಿಯಲ್ಲಿ ಮಾತ್ರ ದನಗಳಿಗೆ ಜಾತ್ರೆಯ ಮಾಳಕ್ಕೆ ಪ್ರವೇಶ ನೀಡಲಾಗುವುದು. ಅಲ್ಲದೇ ರಾಸುಗಳಿಗೆ ನೀರು ಮತ್ತು ನೆರಳಿನ ಸೌಲಭ್ಯ, ಜಾತ್ರೆಯ ಮಾಳಕ್ಕೆ ವಿದ್ಯುತ್ ಸೌಲಭ್ಯ ನೀಡಲಾಗುವುದು. ಜಾತ್ರಾ ಕಾಲದ ವಿವಿಧ ಬಾಬುಗಳ ಸುಂಕವನ್ನು ಹರಾಜು ಮೂಲಕ ವಿಲೇ ಮಾಡಲಾಗುವುದು, ದನಗಳ ಸುಂಕ, ಎತ್ತಿನಗಾಡಿಗಳ ಸುಂಕ, ತೆಂಗಿನಕಾಯಿ ಸುಂಕ, ಅಂಗಡಿ ಮುಂಗಟ್ಟುಗಳ ಸುಂಕ, ಗೊಬ್ಬರದ ಸುಂಕ ಸೇರಿದಂತೆ ವಿವಿಧ ಸುಂಕಗಳ ಹರಾಜು ಬಗ್ಗೆ ಕಛೇರಿಯ ವೇಳೆಯಲ್ಲಿ ಮಾಹಿತಿ ಪಡೆಯಬಹುದು. ಜಾತ್ರೆಯಲ್ಲಿ ಭಾಗವಹಿಸುವ ಅತ್ಯುತ್ತಮವಾದ ರಾಸುಗಳನ್ನು ಗುರ್ತಿಸಿ ಬಹುಮಾನ ನೀಡಲಾಗುವುದು ಎಂದು ತಹಶೀಲ್ದಾರ್ ಶಿವರಾಂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಡಿಹೊಳೆ ಗ್ರಾ.ಪಂ ಅಧ್ಯಕ್ಷ ಮಂಜೇಗೌಡ, ಪಿಡಿಓ ಶಿರೀನ್‍ತಾಜ್, ತಾ.ಪಂ ಸದಸ್ಯೆ ಭಾರತಿಅಶೋಕ್, ಪಾರುಪತ್ತೇಗಾರ್ ರಂಗರಾಜ್, ಉಪತಹಶೀಲ್ದಾರ್ ಗೋಪಾಲಕೃಷ್ಣ, ರಾಜಶ್ವನಿರೀಕ್ಷಕ ಬಸವರಾಜು, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮರಿಸಿದ್ಧೇಗೌಡ, ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಪುನೀತ್, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಕೃಷ್ಣರಾಜಪೇಟೆ.ರೈತ ಬಂಧುಗಳು ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ ಎಚ್ಚರಿಕೆಯಿಂದ ಪಾಲನೆ-ಪೋಷಣೆ ಮಾಡಬೇಕು ಎಂದು ಶಾಸಕ ನಾರಾಯಣಗೌಡ ಕರೆ

 ಕೃಷ್ಣರಾಜಪೇಟೆ. ರೈತನ ಅಭಿವೃಧ್ಧಿಯಲ್ಲಿ ತಮ್ಮ ಕಾಣಿಕೆಯನ್ನು ನೀಡಿ ದುಡಿಯುತ್ತಿರುವ ಜಾನುವಾರುಗಳು ದೇಶದ ರಾಷ್ಟ್ರೀಯ ಸಂಪತ್ತಾಗಿದೆ. ರೈತ ಬಂಧುಗಳು ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ ಎಚ್ಚರಿಕೆಯಿಂದ ಪಾಲನೆ-ಪೋಷಣೆ ಮಾಡಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಅವರು ಇಂದು ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ 11ಲಕ್ಷರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪಶು ಚಿಕಿತ್ಸಾಲಯದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ರೈತನ ಬೇಸಾಯ ಚಟುವಟಿಕೆಗಳಿಗೆ ಪೂರಕವಾಗಿ ದುಡಿಯುತ್ತಿರುವ ರಾಸುಗಳು ಈ ರಾಷ್ಟ್ರದ ಸಂಪತ್ತು. ಆದ್ದರಿಂದ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿರುವ ಪಶು ಚಿಕಿತ್ಸಾಲಯಗಳಿಗೆ ವೈಧ್ಯರು ಹಾಗೂ ಸಿಬ್ಬಂಧಿಯನ್ನು ನೇಮಕ ಮಾಡಿಕೊಡಬೇಕು ಎಂದು ಪಶು ಸಂಗೋಪನಾ ಸಚಿವರಲ್ಲಿ ಮನವಿ ಮಾಡಿದ್ದೇನೆ. ಕೃಷ್ಣರಾಜಪೇಟೆ ತಾಲೂಕು ಕೇಂದ್ರದ ಪಶು ಆಸ್ಪತ್ರೆಗೆ ಪಾಲಿಕ್ಲಿನಿಕ್ ಸೇರಿದಂತೆ ಉನ್ನತವಾದ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟು ಜಾನುವಾರುಗಳ ಸಂರಕ್ಷಣೆಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇಂದು ಗ್ರಾಮೀಣ ಪ್ರದೇಶದ ಜನರು ಬೇಸಾಯದ ಜೊತೆಗೆ ಪಶು ಸಂಗೋಪನೆಯನ್ನು ಮುಖ್ಯ ಉಪ ಕಸುಬನ್ನಾಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಮುನ್ನಡೆಯುತ್ತಿದ್ದಾರೆ. ಹೈನುಗಾರಿಕೆಯು ಗ್ರಾಮೀಣ ಜನರ ಜೀವನಾಡಿಯಾಗಿದ್ದು ರೈತರ ಪ್ರಗತಿಗೆ ಮುಖ್ಯ ಕಸುಬಾಗಿ ಆಸರೆಯಾಗಿದೆ. ಗ್ರಾಮೀಣ ಜನರು ಎಚ್ಚರಿಕೆಯಿಂದ ಜಾನುವಾರುಗಳ ಪಾಲನೆ-ಪೋಷಣೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಬೇಸಾಯಕ್ಕೆ ರಾಸುಗಳ ಗೊಬ್ಬರ ಹಾಗೂ ಗಂಜಲದಿಂದ ತಯಾರಿಸಿದ ಜೀವಾಮೃತವನ್ನು ಬಳಸಿಕೊಂಡು ನಾಟಿ ಹಸುಗಳ ತಳಿಯ ಉಳಿವಿಗೆ ಮುಂದಾಗಬೇಕು ಎಂದು ನಾರಾಯಣಗೌಡ ಸಲಹೆ ನೀಡಿದರು.
ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುದ್ಲಾಪುರದ ಪದ್ಮಮ್ಮ ಬೀರೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮಶ್ರೀನಿವಾಸ್, ತಾಲೂಕು ಪಂಚಾಯಿತಿ ಸದಸ್ಯೆ ರೇಣುಕಾಕಿಟ್ಟು, ಮುಖಂಡರಾದ ಎ.ಆರ್,ರಘು, ರಾಮಕೃಷ್ಣೇಗೌಡ, ಶ್ರೀನಿವಾಸ್, ಲಕ್ಷ್ಮೀಪುರ ಜಗಧೀಶ್, ಹೊಸೂರು ಸ್ವಾಮೀಗೌಡ, ಅಂಬಿಗರಹಳ್ಳಿ ಚಂದ್ರೇಗೌಡ, ಮಹಮದ್ ರಫೀ, ತಾಲೂಕು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ, ಪಶುವೈದ್ಯರಾದ ನಾರಾಯಣ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಾಣಿ ಮತ್ತಿತರರು ಭಾಗವಹಿಸಿದ್ದರು.
ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಸ್ವಾಗತಿಸಿದರು, ಪಶುವೈದ್ಯರಾದ ನಾರಾಯಣ ವಂದಿಸಿದರು. ಭೂಸೇನೆಯ ಸಹಾಯಕ ಎಂಜಿನಿಯರ್ ಅಣ್ಣಪ್ಪಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಕೃಷ್ಣರಾಜಪೇಟೆ. ಬ್ರಾಹ್ಮಣ ಸಮುದಾಯದವರು ಅನಾಧಿಕಾಲದಿಂದಲೂ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದು ಅವರ ಸೇವೆ ನಿಸ್ವಾರ್ಥವಾಗಿದ್ದು  ಅದನ್ನು ಸಮಾಜ ಮರೆಯಬಾರದೆಂದು ಶಾಸಕ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟರು
ಅವರು ಪಟ್ಟಣದ ಬ್ರಾಹ್ಮಣರ ಶ್ರೀರಾಮಮಂದಿರದಲ್ಲಿ  ತಾಲೂಕು ಬ್ರಾಹಣರ ಸಂಘವು ಎರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ  ಮಾvನಾಡುತಿದ್ದರು .
ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರದಿರುವ ಬ್ರಾಹ್ಮಣರು ಆರ್ಥಿಕವಾಗಿ ಹಿಂದುಳಿದಿರುವದನ್ನು ನಾನು ವಯಕ್ತಿಕವಾಗಿ ಕಂಡದ್ದೇನೆ. ಅವರು ಸರ್ಕಾರದ ಬಹುತೇಕ ಸವಲತ್ತಗಳಿಂದ ವಂಚಿತರಾಗಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹಣರು ಸರ್ಕಾರಿ ಸಬಲತ್ತುಗಳನ್ನು ಪಡೆಯಲಾಗುತ್ತಿಲ್ಲ ಆದ್ದರಿಂದ ಸರ್ಕಾರ  ಈ ಜನಾಂಗದಲ್ಲಿರು ಬಡವರಿಗೆ ಸವಲತ್ತುಗಳು ಸಿಗುವಂತೆ ಮಾಡಬೇಕೆಂದರು.
ಪ್ರತಿಭೆ ಇಂದು ಯಾವೊಂದು ಜನಾಂಗದ ಸ್ವತ್ತಾಗಿ ಉಳಿದಿಲ್ಲ. ಅದು ಎಲ್ಲಾ ಜನಾಂಗಕ್ಕೂ ಹರಡಿದೆ.ಅದನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ಬ್ರಾಹ್ಮಣರು ಮುಂದುವರಿಸಬೇಕು ಎಂದರು. .ತಮ್ಮ ಕುಂದುಕೊರತೆಯ ನಡುವೆಯೂ ಉತ್ತಮ ಸಮಾಜವನ್ನು ನಿರ್ಮಿಸಲು ಶ್ರಮಿಸಿ ಮಾದರಿ ಜನಾಂಗವಾಗಬೇಕೆಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ವಲಯ ಅರಣ್ಯಾಧಿಕಾರಿ ಎಂ.ಎನ್.ಅನಂತಸ್ವಾಮಿ ಮಾತನಾಡಿ ಬ್ರಾಹ್ಮಣ ಜನಾಂಗದಲ್ಲಿ ಪ್ರತಭೆಗಳಿಗೆ ಕೊರತೆಯಿಲ್ಲ. ಅವರಿಗೆ ಸೂಕ್ತವಾದ ಪ್ರೋತ್ಸಾಹ ಸರ್ಕಾರದ ವತಿಯಿಂದ ಸಿಗಬೇಕಿದೆ. ಮೀಸಲಾತಿ ಇಲ್ಲದೆ ಬದುಕುತ್ತಿರುವ ಜನಾಂಗವೆಂದರೆ ಬ್ರಾಹಣರಾಗಿದ್ದಾರೆ. ಇದರಿಂದ ಪ್ರತಿಭೆಗಳೂ ಗರಿಷ್ಟ ಪ್ರತಿಭೆ ಪ್ರದರ್ಶಿಸಿದರೂ ಸರ್ಕಾರಿ ಸೌಲಭ್ಯದಿಂದ ವಂಚಿತವಾಗುವಂತಾಗಿದೆ ಇದು ನಿವಾರಣೆಯಾಗಬೇಕೆಂದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪರಿಕ್ಷೆಗಳಲ್ಲಿ ಅತ್ಯಧಿಕ ಅಂಕ ತೆಗೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿದ ಸಾಹಿತಿ ಬಲ್ಲೇನಹಳ್ಳಿ  ಮಂಜುನಾಥ್  ಮಾತನಾಡಿ  ಇಂದಿನ ಸ್ಪರ್ಧಾಯುಗದಲ್ಲಿ ಬ್ರಾಹ್ಮಣ ಪ್ರತಿಭೆಗಳು ಉತ್ತಮ ಅಂಕಗಳನ್ನು ಪರಿಕ್ಷೆಯಲ್ಲಿ ಗಳಿಸಲೇಬೇಕು. ಇಲ್ಲದಿದ್ದರೆ  ಮುಂದಿನ ಜನಾಂಗಕ್ಕೆ  ಸರ್ಕಾರಿ ಕೆಲಸಗಳು ಗಗನ ಕುಸುಮವಾಗುತ್ತವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರೀಶ್, ಉಪಾದ್ಯಕ್ಷೆ ರಾಜೇಶ್ವರಿ,  ಅಕ್ಕಿಹೆಬ್ಬಾಳು ರಾಮಕೃಷ್ಣಯ್ಯ ಹಾಗೂ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು, ಬ್ರಾಹ್ಮಣ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.


ಬಾಲ್ಯದಲ್ಲೇ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಿ: ಕೆ.ಟಿ.ಹನುಮಂತು
ಕಾಗೇಹಳ್ಳದದೊಡ್ಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಮಂಡ್ಯ: ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸುವುದು ಅತ್ಯಾವಶ್ಯಕವಾಗಿದೆ ಎಂದು ಕೃಷಿಕ ಲಯನ್ಸ್ ವಲಯಾಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ಸಹಕಾರ ಲಯನ್ಸ್ ವತಿಯಿಂದ ತಾಲ್ಲೂಕಿನ ಕಾಗೇಹಳ್ಳದದೊಡ್ಡಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣಾ ಸಮಾರಂಭವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಹೊಟ್ಟೆಬಾಕತನ, ದುರಾಸೆಯಿಂದಾಗಿ ಈಗಾಗಲೇ ಪರಿಸರ ಸಾಕಷ್ಟು ಕಲುಷಿತಗೊಂಡಿದೆ. ನಮ್ಮ ಪೂರ್ವಿಕರು ಮರ-ಗಿಡಗಳನ್ನು ಪೂಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು. ಇತ್ತೀಚೆಗೆ ಪರಿಸರ ಹಾನಿಯಿಂದಾಗಿ ಹೆಚ್ಚಿನ ಅನಾಹುತಗಳನ್ನು ನೋಡುತ್ತಿದ್ದೇವೆ. ಇನ್ನಾದರೂ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಬಾಲ್ಯದಲ್ಲೇ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಮರ-ಗಿಡಗಳನ್ನು ನೆಟ್ಟು ಪೆÇೀಷಿಸಬೇಕು ಎಂದರು.
ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ಸ್ವಚ್ಛತೆ ಕಾಪಾಡುವ ಮೂಲಕ ಆಂದೋಲನಕ್ಕೆ ಕೈಜೋಡಿಸಬೇಕು. ಗ್ರಾಮ ಪಂಚಾಯಿತಿ, ಸಂಘ ಸಂಸ್ಥೆಗಳು, ಶಾಲಾ- ಕಾಲೇಜುಗಳ ಸಹಕಾರದಲ್ಲಿ ಗ್ರಾಮದಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಪರಿಸರ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಹಿಂದೆ ರಾಜಮಹಾರಾಜು ಸಾಲುಮರಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದರು. ಸಾಲುಮರದ ತಿಮ್ಮಕ್ಕ ಸಹ ನೂರಾರು ಮರಗಳನ್ನು ಮಕ್ಕಳಂತೆ ಪೆÇೀಷಣೆ ಮಾಡಿದ್ದಾರೆ. ಅವರಂತೆಯೇ ಪ್ರತಿಯೊಬ್ಬರೂ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಭಾರಿ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. ಕನ್ನಡ ಶಾಲೆಯಲ್ಲಿ ಓದಿದ ಹಲವರು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಪೆÇೀಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ಗ್ರಾಮೀಣ ಜನತೆ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಸಂಘಸಂಸ್ಥೆಗಳು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಹಕಾರ ಲಯನ್ಸ್ ಅರ್ಧಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ದೈನಂದಿನ ಕೆಲಸ ಕಾರ್ಯಗಳ ಒತ್ತಡದ ನಡುವೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂದರು.
ಸಾಹಿತ್ಯ ಲಯನ್ಸ್ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಚಾಮಲಾಪುರ ರವಿಕುಮಾರ್, ಲಯನ್ಸ್ ಸಂಸ್ಥೆಯ ನಿಂಗೇಗೌಡ, ಜಯಕುಮಾರ್, ರಾಜು, ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ಕೆ.ರಾಮಚಂದ್ರ, ಮುಖಂಡರಾದ ಆತ್ಮಾನಂದ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‍ಬುಕ್, ಸ್ವಚ್ಛತಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ವರುಣಾ ಸೇರಿದಂತೆ ನಾಲ್ಕು ಕಡೆ ಮೆಗಾ ಘಟಕ ಸ್ಥಾಪನೆ .
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರ ವರುಣಾ ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ ತೆಂಗುನಾರಿನ ಉತ್ಪನ್ನಗಳ ಮೆಗಾ ಘಟಕಗಳನ್ನು 25 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ತೆಂಗು ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಡೂರು ಸಿ.ನಂಜಪ್ಪ ತಿಳಿಸಿದರು.
ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ತೆಂಗು ನಾರಿನ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಸಂಬಂಧ ಹೆಚ್ಚು ಹೆಚ್ಚು ಸಂಶೋಧನಾ ಕಾರ್ಯಗಳು ನಡೆಯಬೇಕಾಗಿದೆ, ಇದಕ್ಕಾಗಿ ರಾಜ್ಯದ ಐದಾರು ಕಡೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ , ಉತ್ಪಾಧನೆ ಮತ್ತು ಮಾರಾಟ ವ್ಯವಸ್ಥೆ ಸೇರಿದಂತೆ ಮೆಗಾ ಘಟಕಗಳನ್ನು ಸ್ಥಾಪಿಸಬೇಕಾಗಿದೆ. ಈ ಘಟಕಗಳು ನಾರಿನ ಉತ್ಪನ್ನ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡುವ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸಬೇಕು, ಈ ಮೆಗಾ ಘಟಕಗಳಲ್ಲಿ ವಸ್ತು ಪ್ರದರ್ಶನಕ್ಕೂ ವ್ಯವಸ್ಥೆ ಮಾಡಬಹುದಾಗಿದೆ ಎಂದರು.
ತೆಂಗು ಬೆಳೆ ಹೆಚ್ಚಾಗಿರುವ ಮೈಸೂರು ಭಾಗ ಹಾಗೂ ಸಿಎಂ ತವರು ಕ್ಷೇತ್ರ ವರುಣಾದಲ್ಲಿ ಐದು ಎಕರೆ ಜಾಗ ಖರೀದಿಸಿ, 25 ಕೋಟಿ ರೂ ಅಂದಾಜು ವೆಚ್ಚದಲ್ಲಿ ತೆಂಗಿನ ನಾರು ಉತ್ಪನ್ನ ಘಟಕವನ್ನು ಸ್ಥಾಪಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಘಟಕ ಸ್ಥಾಪನೆಯಿಂದಾಗಿ ಸುತ್ತಮುತ್ತಲಿನ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ತಾಲೂಕುಗಳ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ, ಆ ಭಾಗದ ಯುವಕ, ಯುವತಿಯರಿಗೂ ಉದ್ಯೋಗಾವಕಾಶಗಳು ಒದಗಿ ಬರಲಿದೆ ಎಂದು ಹೇಳಿದರು. ಇದೇ ಮಾದರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು-ಬಿರೂರು ನಡುವೆ ಇರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವಿದ್ದು, ಇದರಲ್ಲಿ 5 ಎಕರೆ ಜಾಗದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಮೆಗಾ ಘಟಕ ಸ್ಥಾಪಿಸಬೇಕಾಗಿದೆ, ಇದರಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಯ ತೆಂಗು ಬೆಳೆಗಾರರಿಗೆ ಪ್ರಯೋಜನವಾಗಲಿದೆ, ಕರಾವಳಿಯ ಉಡುಪಿಯಂತಹ ಕಡೆ ಮೆಗಾ ಘಟಕ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ, ಅಲ್ಲದೆ ತೆಂಗು ಬೆಳೆಯಿಲ್ಲ, ಹೈದಾರ್‍ಬಾದ್ –ಕರ್ನಾಟಕ, ಮುಂಬೈ-ಕರ್ನಾಟಕ ಪ್ರದೇಶಗಳಲ್ಲೂ ಇಂತಹ ಘಟಕ ಸ್ಥಾಪಿಸುವುದರಿಂದ, ಆ ಪ್ರದೇಶಗಳಲ್ಲೂ ತೆಂಗು ಬೆಳೆ ಮತ್ತು ಅದರ ಉತ್ಪನ್ನಗಳನ್ನು ಜನಪ್ರಿಯಗೊಳಿಸಬಹದು, ಇದಕ್ಕಾಗಿ ಬೆಳಗಾವಿಯ ಸುವರ್ಣ ಸೌಧದ ಬಳಿ 5 ಎಕರೆ ಜಾಗದಲ್ಲಿ ಮೆಗಾ ಘಟಕ ಸ್ಥಾಪಿಸಲಾಗುವುದು, ವಿಜಯಪುರದಲ್ಲೂ ಇದೇ ಮಾದರಿಯ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ನಿಗಮದ ನೌಕರರಿಗೆ ಕಡಿಮೆ ಸಂಬಳವಿದ್ದು, ಅವರ ದಿನ ನಿತ್ಯದ ವೇತನವನ್ನು ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ತೆಂಗು ಮಟ್ಟೆಗಳನ್ನು ಸಾಗಿಸುವುದಕ್ಕೆ ವಾಹನಗಳ ಸಮಸ್ಯೆಯಿದೆ. ಇದನ್ನು ನಿವಾರಿಸಬೇಕೆಂದು ಸಿಎಂಗೆ ಪ್ರಸಾವನೆಯಲ್ಲಿ ಕೋರಲಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ನಿಗಮವನ್ನು ಉನ್ನತೀಕರಿಸಿ, ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದರು.
ತೆಂಗಿನ ನಾರಿನಿಂದ ಗುಣಮಟ್ಟದ ಪರಿಸರ ಸ್ನೇಹಿ ಗೃಹಬಳಕೆ ವಸ್ತುಗಳು, ತಟ್ಟೆ, ಮ್ಯಾಟ್, ಹಗ್ಗ, ಹಾಸಿಗೆ, ದಿಂಬು, ಫ್ಲೈವುಡ್, ಕಾಂಪೋಸೀಟ್ ಬೋಡ್ ್ಗಳು ಮುಂತಾದವುಗಳನ್ನು ತಯಾರಿಸಬಹುದಾಗಿದೆ. ಕಿಟಕಿ, ಬಾಗಿಲು, ಶಾಲಾ ಡೆಸ್ಕ್ ಗಳು, ಟೇಬಲ್ ಸೇರಿದಂತೆ ಇತರೆ ಪಿಠೋಪಕರಣಗಳನ್ನು ತಯಾರಿಸಬಹುದಾಗಿದೆ. ರಾಜ್ಯದ ಐದು ಲಕ್ಷಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ 4 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ತೆಂಗಿನ ಮರಗಳಿವೆ, ನಾರಿನ ಉದ್ಯಮಕ್ಕೆ ಶೇ 25 ರಷ್ಟು ತೆಂಗಿನ ಮಟ್ಟೆಗಳನ್ನು ಬಳಸಿಕೊಂಡಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ನಿಗಮವು ನಡೆಸುತ್ತಿರುವ 54 ಉತ್ಪಾಧನಾ ಘಟಕಗಳಲ್ಲಿ ತೆಂಗು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
6 ಕೋಟಿ ರೂ ನಷ್ಟ : ನಿಗಮವು 20 ಕೋಟಿ ರೂ ವಹಿವಾಟು ನಡೆಸುತ್ತಿದ್ದು, 6 ಕೋಟಿ ರೂಗಳಷ್ಟು ನಷ್ಟ ಅನುಭವಿಸುತ್ತಿದೆ, ಇದಕ್ಕೆ ಅದಕ್ಷ ಆಡಳಿತವೇ ಕಾರಣವಾಗಿದೆ, ಇದನ್ನು ಸರಿಪಡಿಸಿ, ನಿಗಮವು ಮುಂದೆ ಲಾಭದಾಯಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದೆಂದರು.
ಗೋಷ್ಠಿಯಲ್ಲಿ ಮಂಡಳಿಯ ಸದಸ್ಯ ಬಿ.ಮರಯ್ಯ, ಬಿ.ಮಂಟೇಲಿಂಗಪ್ಪ, ತಿಮ್ಮಣ್ಣ, ಅಧಿಕಾರಿಗಳಾದ ಗೋವಿಂದೇಗೌಡ, ತಿಪ್ಪೇರುದ್ರಪ್ಪ ಉಪಸ್ಥಿತರಿದ್ದರು.
               ಸಚಿವ ಆಂಜನೇಯ ಕಪಿ: ಪ್ರತಾಪ್ ಸಿಂಹ ಟೀಕೆ
 
ಮೈಸೂರು, ಡಿ.25- ಕರ್ನಾಟಕ ರಾಜ್ಯದ ಸಮಾಜಕಲ್ಯಾಣ ಇಲಾಖೆ ಸಚಿವ  ಎಚ್. ಆಂಜನೇಯ ಕುಟುಂಬದವರು ಮಹಾನ್ ದೈವ ಭಕ್ತರು, ಅದಕ್ಕೇ ಅವರಿಗೆ ಆಂಜನೇಯ ಎಂದು ಹೆಸರಿಟ್ಟಿದ್ದಾರೆ. ಬಹುಸ ಅವರು ನಾಸ್ತಿಕರಾಗಿದ್ದರೆ ಅವರಿಗೆ ಆ ಹೆಸರು ಇಡದೆ ಕಪಿ ಎಂದು  ನಾಮಕರಣ ಮಾಡುತ್ತಿದ್ದರು ಎಂದು ಟೀಕೆ ಮಾಡುವ ಮೂಲಕ ಸಂಸದ ಪ್ರತಾಪ್‍ಸಿಂಹ ಹೊಸದೊಂದು ವಿವಾದ ಹುಟ್ಟುಹಾಕಿದ್ದಾರೆ.
  ಇಂದು ಮೈಸೂರಿನ ರೈಲು ನಿಲ್ದಾಣದ ಬಳಿಯಿರುವ ರೈಲ್ವೆ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಮಾಜಿ ಪ್ರಧಾನಿ ಅಟಲ್  ಬಿಹಾರಿ ವಾಜಪೇಯಿಯವರಿಗೆ  ಭಾರತರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ಸಚಿವ ಆಂಜನೇಯ  ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಭಾರತದ ಒಬ್ಬ  ಶ್ರೇಷ್ಠ ವ್ಯೆಕ್ತಿಗೆ ಈ ಪ್ರಶಸ್ತಿ ನೀಡಿರುವುದನ್ನು ಸಹಿಸಿಕೊಳ್ಳಲಾಗದ  ಆಂಜನೇಯರನ್ನು ಮತ್ತಿನ್ನೇನೆಂದು ಕರೆಯಬೇಕೆಂದು ಸಮರ್ಥನೆ ಮಾಡಿಕೊಂಡ ಸಂಸದ ಒಂದು ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಈ ರೀತಿ ಹಾಳಿಕೆ ನೀಡಬಾರದು,  ವಾಜಪೇಯಿಯವರು ಈ ದೇಶದ ಪ್ರಧಾನಿಯಾಗಿ  ಸ್ವಚ್ಛ ಹಾಗೂ ದಕ್ಷತೆಯಿಂದ ಉತ್ತಮ ಆಡಳಿತ ನಡೆಸಿದವರು ಎಂಬುದನ್ನು ಮರೆಯಬಾರದು, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿಗೌರವಿಸುವುದರಲ್ಲಿ ಯಾವದೇ  ತಪ್ಪಿಲ್ಲ ಎಂದು ಎಂದರಲ್ಲಿದೆ, ಈ ಹಿಂದೆ  ಯುಪಿಎ ಸರ್ಕಾರ ಇದ್ದಾಗ ಸಚಿನ್ ಸೇರಿದಂತೆ ಕೆಲವರಿಗೆ  ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಆಗ ಬಿಜೆಪಿಯ ಯಾರೂ ವಿರೋಧಿಸಲಿಲ್ಲ, ಆದರೆ  ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಈ ಪ್ರಶಸ್ತಿ ನಿಡಿದರೆ ಕಾಂಗ್ರೆಸ್ ನವರು ಅದನ್ನು ವಿರೋಧಿಸುವುದು ಸರಿಯಲ್ಲ,  ಯಾರೇ ಆಗಲಿ ಇನ್ನು ಮುಂದೆ ಈ ರೀತಿ ವಿರೋಧಿಸುವುದನ್ನು ನಿಲ್ಲಿಸಬೇಕು

ಸಂಧ್ಯಾ ಸುರಕ್ಷ ಟ್ರಸ್ಟ್ ಹಾಗೂ ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕರ ವೇದಿಯ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಹುಟ್ಟು ಹಬ್ಬವುನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ವೇದಿಕೆಯ ಅಧ್ಯಕ್ಷ ಬಿ.ಟಿ.ನಟರಾಜ ಜೋಯಿಸ್, ಡಾ.ಭಾನುಪ್ರಕಾಶ್ ಇತರರಿದ್ದಾರೆ.


ಶಾಸಕ ಎಂ.ಕೆ.ಸೋಮಶೇಖರ್ ಮೈಸೂರು ಬಿಷಪ್ ಹೌಸ್‍ನಲ್ಲಿ ಕ್ರೈಸ್ತ ಧರ್ಮಗುರು ಥಾಮಸ್ ವಾಜ್ ಪಿಳೈರವರಿಗೆ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಹೂಗುಚ್ಚ ನೀಡಿ ಶುಭಾಷಯ ಕೋರಿದರು. ಚಿತ್ರದಲ್ಲಿ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಇದ್ದಾರೆ.

ಶಾಸಕ ಎಂ.ಕೆ.ಸೋಮಶೇಖರ್ ಮೈಸೂರು ಬಿಷಪ್ ಹೌಸ್‍ನಲ್ಲಿ ಕ್ರೈಸ್ತ ಧರ್ಮಗುರು ಥಾಮಸ್ ವಾಜ್ ಪಿಳೈರವರಿಗೆ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಹೂಗುಚ್ಚ ನೀಡಿ ಶುಭಾಷಯ ಕೋರಿದರು. ಚಿತ್ರದಲ್ಲಿ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಇದ್ದಾರೆ.

Wednesday, 24 December 2014

           









ನಾಗಮಂಗಲ:ತಾಲ್ಲೂಕಿನಲ್ಲಿಂದು ನಡೆದ ಬ್ರಹ್ಮದೇವರಹಳ್ಳಿ ದತ್ತು ಸ್ವೀಕಾರ ಸಮಾರಂಭವು ಗ್ರಾಮದಲ್ಲಿ  ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು.
ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಹಳ್ಳಿಗಳಿದ್ದು, ಈ ಎಲ್ಲಾ ಹಳ್ಳಿಗಳ ಗ್ರಾಮಸ್ಥರು ದತ್ತು ಸಮಾರಂಭದಲ್ಲಿ ಪಾಲ್ಗೊಂಡು ಸಮಾರಂಭಕ್ಕೆ ವಿಶೇಷ ಮೆರಗು ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಎನ್.ಚಲುವರಾಯಸ್ವಾಮಿ ಹಾಗೂ ಆದಿಚುಂಚನಗಿರಿ ಮಠದ ಸಲಹೆಗಾರರಾದ ಅಮರನಾರಾಯಣ್ ಅವರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಗ್ರಾಮಸ್ಥರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗ್ರಾಮದ ಪ್ರತಿಯೊಂದು ರಸ್ತೆ, ಕಲ್ಯಾಣಿ, ಸೇರಿದಂತೆ ಹಲವಡೆ ಗ್ರಾಮಸ್ಥರು ಸ್ವಚ್ಛತೆ ಕಾರ್ಯ ಕೈಗೊಂಡರು.
ನಂತರ ನಡೆದ ಸಮಾರಂಭದದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ಅಮರನಾರಾಯಣ್, ಅನ್ನ, ಅP್ಷÀರದಾಸೋಹ ನೀಡಿದ ಶ್ರೀ ಮಠ ಗ್ರಾಮವನ್ನು ದತ್ತು ಪಡೆದಿರುವುದು ಸ್ವಾಗತಾರ್ಹ ವಿಚಾರವಾಗಿದೆ. ತಾಲ್ಲೂಕಿನ ಎಲ್ಲಾ ಇಲಾಖೆಗಳಿಂದ ದೊರೆಯುವ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ಮೂರು ವರ್ಷದಲ್ಲಿ ಸಮಗ್ರ ಅಭಿವೃದ್ಧಿ ಮಾಡುವುದಾಗಿ ನುಡಿದರು.
ಗ್ರಾಮದಲ್ಲಿ ರೈತರಿಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ, ವನಸಂವರ್ಧನ ಟ್ರಸ್ಟ್ ವತಿಯಿಂದ ಸಸಿಗಳ ವಿತರಣೆ, ಗ್ರಾಮದಲ್ಲಿ ಒಳಚರಂಡಿ ನಿರ್ಮಾಣ, ವಿದ್ಯುತ್ ದೀಪ, ಶೌಚಾಲಯ ನಿರ್ಮಾಣ, ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಅಲ್ಲದೇ ಗ್ರಾಮಸ್ಥರು ಸ್ವಾಭಿಮಾನಿಗಳಾಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ನುಡಿದರು.

16 ಹಳ್ಳಿಗಳು ಅಭಿವೃದ್ಧಿ- ಸಿಆರ್‍ಎಸ್
ನಾಗಮಂಗಲ:ಬ್ರಹ್ಮ ದೇವರಹಳ್ಳಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 16 ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿದ್ದು, ಅಂತೆಯೇ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಚಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬ್ರಹ್ಮದೇವರಹಳ್ಳಿಯಲ್ಲಿ ನಡೆದ ಬ್ರಹ್ಮದೇವರಹಳ್ಳಿ ದತ್ತು ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮಗಾಂಧೀಜಿ ಅವರ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀಮಠ ಹೆಜ್ಜೆ ಇಟ್ಟಿದ್ದು, ಹಾಗೆಯೇ ಈ ಕಾರ್ಯಕ್ರಮಕ್ಕೆ ತಾವು ಸಂಪೂರ್ಣ ಬೆಂಬಲ  ನೀಡುವುದಾಗಿ ನುಡಿದರು.
ಸ್ವಾತಂತ್ರ್ಯಗಳಿಸಿ 58 ವರ್ಷ ಕಳೆಯುತ್ತಾ ಬಂದಿದ್ದರೂ, ನಾವು ಇನ್ನೂ ಜಾಗೃತಿಯ ಹಂತದಲ್ಲಿದ್ದೇವೆ, ನಮ್ಮ ಮನೆ ಮುಂದಿನ ಕಸವನ್ನು ತೆಗೆಯಲು ಬೇರೊಬ್ಬರನ್ನು ಅವಲಂಬಿಸಿ ನಮ್ಮ ಕೆಲಸಗಳನ್ನು ನಾವೇ ಮರೆತ್ತಿದ್ದೇವೆ ಎಂದು ನುಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಚ್ಛತೆಗಾಗಿ ತಾವೇ ಪೆÇರಕೆ ಹಿಡಿದು ಇತರರನ್ನು ಪ್ರೇರೆಪಿಸಿದ್ದಾರೆ.  ಸಾವಿರಾರು ಮಠಗಳು ದೇಶದಲ್ಲಿದ್ದರೂ ಶ್ರೀ ಮಠದಂತೆ ಕಾರ್ಯಕ್ರಮ ರೂಪಿಸಿದರೆ ಅಭಿವೃದ್ಧಿ ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಒಳ್ಳೆಯದನ್ನು ಮಾಡದಿದ್ದರೂ ಕೆಡುಕನ್ನು ಮಾಡಬಾರದು, ಶ್ರೀ ಮಠ ಈ ಕ್ಷೇತ್ರದಲ್ಲಿರುವುದು ನಮ್ಮ ಪುಣ್ಯ, ಶ್ರೀಗಳು ತಮ್ಮದೇ ಆದ ಸೈನ್ಯ ಕಟ್ಟಿದ್ದು, ಅವರು ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಸಂಸದ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ವೇದಿಕೆಯಲ್ಲಿ ನಿರ್ಮಲಾನಂದನಾಥಸ್ವಾಮೀಜಿ, ಮಾಜಿ ಶಾಸಕ ಸುರೇಶ್‍ಗೌಡ, ತಮಿಳುನಾಡು ಶಾಸಕ ರಾಮಕೃಷ್ಣನ್, ಡಿ.ಸಿ.ಅಜಯ್ ನಾಗಭೂಷಣ್, ಎಸ್ಪಿ ಭೂಷಣ್‍ರಾವ್ ಬೊರಸೆ, ಜಿಪಂ ಸಿಇಓ ರೋಹಿಣಿ ಸಿಂಧೂರಿ, ಪ.ಪಂ ಅಧ್ಯಕ್ಷೆ ನಾಗಮ್ಮ, ಜಿಪಂ ಸದಸ್ಯ ಶಿವಣ್ಣ, ಇತರರಿದ್ದರು.

ಯಾರನ್ನು ಅವಲಂಬಿಸದ ಗ್ರಾಮ ಶ್ರೀಮಂತ ಗ್ರಾಮ
16 ಹಳ್ಳಿಗಳ ಸಮಗ್ರ ಅಭಿವೃದ್ಧಿಯೇ ಮಠದ ಗುರಿ -ಚುಂಚಶ್ರೀ
ನಾಗಮಂಗಲ:ಯಾರನ್ನು ಅಲಂಬಿಸದ ಗ್ರಾಮ ಶ್ರೀಮಂತ ಗ್ರಾಮವಾಗುತ್ತದೆ ಎಂದು ಚುಂಚಶ್ರೀ ಅಭಿಪ್ರಾಯಪಟ್ಟರು.
ಬ್ರಹ್ಮದೇವರಹಳ್ಳಿ ದತ್ತು ಸ್ವೀಕಾರ ಸಮಾರಂಭದಲ್ಲಿ ಗ್ರಾಮವನ್ನು ದತ್ತು ಸ್ವೀಕರಿಸಿ ಮಾತನಾಡಿದ ಅವರು, ಯಾರು ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುತ್ತಾರೋ ಅವರ ಮನೆಗಳು ಶ್ರೀಮಂತವಾಗುತ್ತದೆ. ಅಂತೆಯೇ ಯಾರನ್ನು ಅವಲಂಬಿಸದ ಗ್ರಾಮಗಳು ಶ್ರೀಮಂತ ಗ್ರಾಮಗಳಾಗುತ್ತವೆ ಎಂದು ನುಡಿದರು.
ಹಳ್ಳಿಮಕ್ಕಳಿಗೆ ವಿದ್ಯೆ ನೀಡುವುದು ಮುಖ್ಯವಲ್ಲ, ಅವರನ್ನು ಮೇಲೆತ್ತುವುದು ಬಹಳ ಮುಖ್ಯ ಎನ್ನುವುದನ್ನು ಮನಗಂಡು ಬಾಲಗಂಗಾಧರನಾಥಸ್ವಾಮೀಜಿಗಳು ಕೆಲ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅವರು ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಠವು ಇಂದು ಹೆಜ್ಜೆ ಇಟ್ಟಿದೆ ಎಂದು ನುಡಿದರು.
ಬಾಯಾರಿದವವನ್ನು ಕೆರೆ ಬಳಿಗೆ ಕರೆದ್ದೊಯ್ಯಬಹುದು, ಆದರೆ ಕೆರೆಯನ್ನೇ ಅವನ ಬಳಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ, ಅಂತೆಯೇ ಕಾರ್ಯಕ್ರಮವನ್ನು ಗ್ರಾಮಸ್ಥರ ಮನೆ ಬಾಗಲಿಗೆ ತಂದಿದ್ದೇವೆ , ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ, ಆದ್ದರಿಂದ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ನುಡಿದರು.
ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 16 ಹಳ್ಳಿಗಳಲ್ಲಿ ಗುಣಮಟ್ಟದ ಶಿP್ಷÀಣ ನೀಡಿದರೆ ಅದೇ ಭದ್ರಬೂನಾಧಿಯಾಗುತ್ತದೆ. ಆದ ಕಾರಣ ಉನ್ನತ ವ್ಯಾಸಂಗ ಕೊಡಿಸಲು ಪೆÇೀಷಕರು ವಿಫಲರಾದಲ್ಲಿ ಮಠದ ವತಿಯಿಂದಲೇ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಕ್ರಮ ಕೈಗೊಳ್ಳುತ್ತೇವೆ, ವೃತ್ತಿ ಶಿP್ಷÀಣ, ತರಬೇತಿ, ಗಾರ್ಮೆಂಟ್ಸ್ ತೆರೆದು ಉದ್ಯೋಗ ಹಾಗೂ ಮಠವೇ ಈ ಭಾಗದ ಗ್ರಾಮಸ್ಥರ ಆರೋಗ್ಯದ ಜವಾಬ್ದಾರಿಯನ್ನು ಹೊರಲಿದೆ ಎಂದು ನುಡಿದರು.
ನಿಮ್ಮ ಮನೆ, ನಿಮ್ಮ ಮನಸ್ಸು ಸ್ವಚ್ಛವಾಗಿರಬೇಕು, ರಾತ್ರಿ ವೇಳೆಯಲ್ಲಿ ಮಹಿಳೆ ಸ್ವಾತಂತ್ರ್ಯವಾಗಿ ಓಡಾಡಬೇಕು ಎಂಬ ಕನಸನ್ನು ಗಾಂಧೀಜಿ ಕಂಡಿದ್ದರು. ಅವರ ತತ್ವಾದರ್ಶಗಳನ್ನು ಅಮೆರಿಕಾ ದೇಶ ಅಳವಡಿಸಿಕೊಂಡಿದ್ದು, ಆದೇಶದ ಪ್ರತಿಯೊಬ್ಬರು ವಿದ್ಯಾವಂತರಾಗಿದ್ದಾರೆ. ಹೆಣ್ಣು ಮಕ್ಕಳು ರಾತ್ರಿಯ ಸಮಯದಲ್ಲಿ ಓಡಾಡುತ್ತಿದ್ದಾಳೆ. ರಾತ್ರಿವೇಳೆಯಲ್ಲಿ ಮನೆ ಬಾಗಿಲು ತೆರೆದು ಹೋಗುವ ಪರಿಸ್ಥಿತಿ ಆ ದೇಶದಲ್ಲಿದೆ. ಆದ್ದರಿಂದ ಇಂತಹ ವಾತಾವರಣ ನಮ್ಮಲ್ಲೂ ನಿರ್ಮಾಣವಾಗಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಸಂಸದ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಸಕ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‍ಗೌಡ, ತಮಿಳುನಾಡು ಶಾಸಕ ರಾಮಕೃಷ್ಣನ್, ಡಿ.ಸಿ.ಅಜಯ್ ನಾಗಭೂಷಣ್, ಎಸ್ಪಿ ಭೂಷಣ್‍ರಾವ್ ಬೊರಸೆ, ಜಿಪಂ ಸಿಇಓ ರೋಹಿಣಿ ಸಿಂಧೂರಿ, ಪ.ಪಂ ಅಧ್ಯಕ್ಷೆ ನಾಗಮ್ಮ, ಜಿಪಂ ಸದಸ್ಯ ಶಿವಣ್ಣ, ಇತರರಿದ್ದರು.
 ಮಂಡ್ಯ: ಚಂದಗಾಲು ಹಾಗೂ ಮಾದೇಗೌಡನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಬಾಜಿ ನಾಗರಾಜು ಹಾಗೂ ರಾಮೇಗೌಡ ಅವರನ್ನು ತಾಲೂಕಿನ ಇಂಡುವಾಳು ಅರಣ್ಯಧಾಮದಲ್ಲಿ  ನಡೆದ ಸಮಾರಂಭದಲ್ಲಿ ಹಾಲು ಒಕ್ಕೂಟ ಮತ್ತು ಕಾರ್ಯದರ್ಶಿಗಳ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹಾಲು ಒಕ್ಕೂಟದ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಈ ಇಬ್ಬರು ಕಾರ್ಯದರ್ಶಿಗಳೂ ಕಳೆದ 40 ವರ್ಷಗಳಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುವಂತೆ ಉತ್ಪಾದಕರ ಮನವೊಲಿಸುವಲ್ಲಿ ನೆರವಾಗಿದ್ದಾರೆ ಎಂದು ಹೇಳಿದರು.
ಮನ್‍ಮುಲ್ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಉತ್ಪಾದಕರಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದ ಇವರ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ಇವರ ನಂತರ ಬರುವ ಕಾರ್ಯದರ್ಶಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಮನ್‍ಮುಲ್ ಅಧಿಕಾರಿಗಳಾದ ಡಾ. ಮೋಹನ್‍ಕುಮಾರ್, ನಂಜುಂಡಸ್ವಾಮಿ, ಸಿದ್ದರಾಮು, ರಾಚಯ್ಯ, ಎಚ್.ಕೆ. ನಾಗರಾಜು, ಸಂಘದ ಕಾರ್ಯದರ್ಶಿಗಳಾದ ಎಚ್.ಎನ್. ಶಿವಕುಮಾರ್, ಕ್ಯಾತಯ್ಯ, ಸುರೇಶ್, ರಮೇಶ್, ವೆಂಕಟೇಗೌಡ, ಜಯರಾಮು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ಚಂದಗಾಲು ಹಾಗೂ ಮಾದೇಗೌಡನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಬಾಜಿ ನಾಗರಾಜು ಹಾಗೂ ರಾಮೇಗೌಡ ಅವರನ್ನು ತಾಲೂಕಿನ ಇಂಡುವಾಳು ಅರಣ್ಯಧಾಮದಲ್ಲಿ  ನಡೆದ ಸಮಾರಂಭದಲ್ಲಿ ಹಾಲು ಒಕ್ಕೂಟ ಮತ್ತು ಕಾರ್ಯದರ್ಶಿಗಳ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹಾಲು ಒಕ್ಕೂಟದ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಈ ಇಬ್ಬರು ಕಾರ್ಯದರ್ಶಿಗಳೂ ಕಳೆದ 40 ವರ್ಷಗಳಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುವಂತೆ ಉತ್ಪಾದಕರ ಮನವೊಲಿಸುವಲ್ಲಿ ನೆರವಾಗಿದ್ದಾರೆ ಎಂದು ಹೇಳಿದರು.
ಮನ್‍ಮುಲ್ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಉತ್ಪಾದಕರಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದ ಇವರ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ಇವರ ನಂತರ ಬರುವ ಕಾರ್ಯದರ್ಶಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಮನ್‍ಮುಲ್ ಅಧಿಕಾರಿಗಳಾದ ಡಾ. ಮೋಹನ್‍ಕುಮಾರ್, ನಂಜುಂಡಸ್ವಾಮಿ, ಸಿದ್ದರಾಮು, ರಾಚಯ್ಯ, ಎಚ್.ಕೆ. ನಾಗರಾಜು, ಸಂಘದ ಕಾರ್ಯದರ್ಶಿಗಳಾದ ಎಚ್.ಎನ್. ಶಿವಕುಮಾರ್, ಕ್ಯಾತಯ್ಯ, ಸುರೇಶ್, ರಮೇಶ್, ವೆಂಕಟೇಗೌಡ, ಜಯರಾಮು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ನಗರದ ಕೃಷಿ ಇಲಾಖೆಯ ಪರತಂತ್ರ ಜೀವಿ ಪ್ರಯೋಗಾಲಯದ ಕೋಲ್ಮನ್ ಸಭಾಂಗಣದಲ್ಲಿ ಜಿಪಂ ಹಾಗೂ ಕೃಷಿ ಇಲಾಖೆ ವತಿಯಿಂದ ನಡೆದ ರೈತ ದಿನಾಚರಣೆ ಕಾರ್ಯಕ್ರಮ ನಡೆಯಿತು.
ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ಬಿಂದು ಮಾದವ ವಡವಿ ಮಾತನಾಡಿ, ಹಳ್ಳಿಗಳಲ್ಲಿ ಯುವಕರು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ದೇಶದಲ್ಲಿ 10 ವರ್ಷದಲ್ಲಿ ರೈತರ ಸಂಖ್ಯೆ 80 ಲಕ್ಷ ಕಡಿಮೆಯಾಗಿದೆ. ರೈತರಲ್ಲಿ ಉತ್ಸಾಹ, ಆಶಾವಾದ ಇರಬೇಕು. ಸರ್ಕಾರ ಕೃಷಿ ಕ್ಷೇತ್ರಕ್ಕೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದ್ದು, ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ರೈತರು ಕೃಷಿಯಲ್ಲಿ ನಂಬಿಕೆ ಇಟ್ಟು ಕಾಯಕ ಮಾಡಬೇಕು. ಭೂಮಿ ತಾಯಿ ರೈತರನ್ನು ಕೈಬಿಡುವುದಿಲ್ಲ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆಧುನಿಕ ಕೃಷಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ಮಾತನಾಡಿ, ರೈತರಲ್ಲಿ ಆತ್ಮವಿಶ್ವಾಸವಿದೆ. ತಾನು ರೈತ ಎಂದು ಹೇಳಲು ಹಿಂಜರಿಕೆ ಇರಬಾರದು. ರೈತರ ಶ್ರಮದಿಂದ ದೇಶದ ಅಭಿವೃದ್ಧಿಯಲ್ಲಿದೆ. ಕೃಷಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುತ್ತಿದೆ. ಅವರಂತೆಯೇ ಇತರರು ಉತ್ತಮ ರೀತಿಯಲ್ಲಿ ಕೃಷಿ ಕೈಗೊಳ್ಳಬೇಕು ಎಂದರು.
ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ನೀರಿನ ಹೊಂಡ, ಬೆಳೆ ಬೆಳೆಯಲು ಸಹಾಯ ಧನ ನೀಡಲಾಗುತ್ತಿದೆ. ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಿದ್ದು, ಆಯ್ಕೆಯಾಗಿರುವ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕøತ ರೈತರಾದ ಹನಿಯಂಬಾಡಿ ಸಿದ್ದಮ್ಮ, ಮಾಯಣ್ಣನಕೊಪ್ಪಲು ಎಂ.ಸಿ.ನಾಗರಾಜು, ಹುಳ್ಳೇನಹಳ್ಳಿ ಕುಳ್ಳೇಗೌಡ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಕೆ.ಕೆಂಚೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿ.ಎಂ.ನಾಗರಾಜು, ತಾಲೂಕು ಸಹಾಯಕ ಕೃಷಿ ಅಧಿಕಾರಿಗಳಾದ ಪ್ರಶಾಂತ್, ಟಿ.ಕೃಷ್ಣಯ್ಯ, ಕೃಷಿಕ ಸಮಾಜದ ನಿರ್ದೇಶಕರಾದ ಕೆ.ಪಿ.ವೀರಪ್ಪ, ಜಿ.ಎಸ್.ವೆಂಕಟೇಶ್ ಭಾಗವಹಿಸಿದ್ದರು.
ಕೃಷ್ಣರಾಜಪೇಟೆ. ಬಡವರು, ಬಲ್ಲಿದರು ಎಂಬ ಬೇಧ-ಭಾವವನ್ನು ಮಾಡದೇ ಸಮಾಜದಲ್ಲಿ ವಿದ್ಯೆಯ ಜ್ಞಾನವನ್ನು ಅರಸಿ ಶಾಲೆಗೆ ಬರುವ ಎಲ್ಲಾ ಜಾತಿ ವರ್ಗಗಳ ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿ ಕೈಹಿಡಿದು ಮುನ್ನಡೆಸುತ್ತಿರುವ ಸರ್ಕಾರಿ ಶಾಲೆಗಳು ದೇವಾಲಯಗಳಿಗಿಂತಲೂ ಶ್ರೇಷ್ಠ ಎಂದು ಶಾಸಕ ಕೆ.ಸಿ. ನಾರಾಯಣಗೌಡ ಹೇಳಿದರು.
ಅವರು ಇಂದು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕಿನ 2500 ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಿಸುವ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ಬೈಸಿಕಲ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಅತ್ಯುತ್ತಮವಾದ ಶೈಕ್ಷಣಿಕ ವಾತಾವರಣವನ್ನು ಹೊಂದಿವೆಯಲ್ಲದೇ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಜೊತೆಗೆ ಸರ್ಕಾರವು ಉಚಿತವಾಗಿ ನೀಡುತ್ತಿರುವ ಪಠ್ಯ ಪುಸ್ತಕಗಳು, ಶಾಲಾ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ, ಬೈಸಿಕಲ್ ಸೇರಿದಂತೆ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದರೂ ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಪ್ರಮಾಣವು ಕಡಿಮೆಯಾಗಿ ಕೆಲವು ಗ್ರಾಮಗಳಲ್ಲಿ ಸಕಾರಿ ಶಾಲೆಗಳು ಶಾಶ್ವತವಾಗಿ ಬಾಗಿಲು ಮುಚ್ಚುವ ಹಂತವನ್ನು ತಲುಪಿವೆ. ಈ ನಿಟ್ಟಿನಲ್ಲಿ ಶಿಕ್ಷಕರು ಜಾಗರೂಕತೆಯಿಂದ ಹೆಜ್ಜೆಯನ್ನು ಹಾಕಿ ಪೋಷಕರ ಮನವೊಲಿಸಿ ಸರ್ಕಾರಿ ಶಾಲೆಗಳಲ್ಲಿಯೇ ಇಂದು ಉಚಿತವಾಗಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಮಕ್ಕಳ ಸಾಧನೆಯ ಜವಾಬ್ಧಾರಿ ನಮ್ಮದು ಎಂದು ಮನವರಿಕೆ ಮಾಡಿಕೊಟ್ಟು ಮರಳಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿಕೊಡುವಂತೆ ಮಾಡುವ ಮೂಲಕ ಖಾಸಗೀ ಶಾಲೆಗಳ ಮೋಹವನ್ನು ಜನರು ಬಿಡುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದ ಶಾಸಕರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಶಿಕ್ಷಕರು ಶಾಲೆಗೆ ಕುಡಿದು ಹೋಗುವುದು, ಶಾಲೆಗೆ ಚಕ್ಕರ್ ಹಾಕಿ ರಾಜಕಾರಣ ಮಾಡುವುದು, ಗುಂಪುಗಾರಿಕೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಶಿಕ್ಷಕರು ಗುಂಪುಗಾರಿಕೆಯ ರಾಜಕಾರಣ ಮಾಡುವುದಾದರೆ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣ ಮಾಡಲಿ, ಸರ್ಕಾರವು ನೀಡುತ್ತಿರುವ ಸಂಬಳದ ಹಣವನ್ನು ಪಡೆದುಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸಿ ವೃತ್ತಿ ಗೌರವವನ್ನು ಶಿಕ್ಷಕರು ಕಾಪಾಡಿಕೊಳ್ಳದಿದ್ದರೆ ಸಚಿವರು ಮತ್ತು ಆಯುಕ್ತರಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ, ಈ ಬಗ್ಗೆ ಎಚ್ಚರ ವಹಿಸಿ ಹಾದಿ ತಪ್ಪಿರುವ ಶಿಕ್ಷಕರನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಸರಿದಾರಿಗೆ ತರಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರಥಮ ಸ್ಥಾನಗಳಿಸಬೇಕು: ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ನಮ್ಮ ತಾಲೂಕು ದ್ವಿತೀಯ ಸ್ಥಾನವನ್ನು ಪಡೆದಿದೆ, ಆದರೆ ಈ ಬಾರಿ ತಾಲೂಕು ಫಲಿತಾಂಶದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿ ಪ್ರಥಮ ಸ್ಥಾನವನ್ನು ಪಡೆಯಲೇಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಕ್ರಮವನ್ನು ರೂಪಿಸಿ ಮಕ್ಕಳ ಮನಸ್ಸಿನಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಪರೀಕ್ಷೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದ ಶಾಸಕರು ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳ ಜೊತೆ ಸಮಾಲೋಚನೆ ನಡೆಸಿ ಕಾರ್ಯತಂತ್ರವನ್ನು ರೂಪಿಸಿ ಅದ್ದೂರಿ ಕಾರ್ಯಕ್ರಮವನ್ನು ಸಧ್ಯದಲ್ಲಿಯೇ ನಡೆಸಲು ಕ್ರಿಯಾಶೀಲನಾಗುತ್ತೇನೆ. ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಹುದ್ದೆಯನ್ನು ಅಲಂಕರಿಸಿರುವ ಜನರು ತಾವು ಓದಿ ದೊಡ್ಡವರಾಗಿರುವ ಶಾಲೆಯ ಉನ್ನತಿಯ ಬಗ್ಗೆ ಆಲೋಚನೆ ಮಾಡಿ ಕೈಲಾದ ಸಹಾಯ ಮಾಡಬೇಕು ಎಂದು ನಾರಾಯಣಗೌಡ ಕರೆ ನೀಡಿದರು.
ಪುರಸಭೆಯ ಅಧ್ಯಕ್ಷ ಕೆ.ಗೌಸ್‍ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಜಗಧೀಶ್, ಉಪಾಧ್ಯಕ್ಷೆ ರಾಧಶ್ರೀನಾಗೇಶ್, ಪುರಸಭೆ ಸದಸ್ಯೆ ಪದ್ಮಾವತಿ ಪುಟ್ಟಸ್ವಾಮಿ, ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕ ಕೆ.ಆರ್.ಪುಟ್ಟಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಸಮಾರಂಭದಲ್ಲಿ ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಶಾಲಾಭಿವೃಧ್ಧಿ ಸಮಿತಿಯ ಉಪಾಧ್ಯಕ್ಷೆ ಮಂಜುಳಾ, ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ರಾಮೇಗೌಡ, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಟಿ.ಎಸ್.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ರಾಮೇಗೌಡ ಸ್ವಾಗತಿಸಿದರು, ರಾಘವೇಂದ್ರ ವಂದಿಸಿದರು, ಶಿಕ್ಷಕರಾದ ಬೋರೇಗೌಡ ಮತ್ತು ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ರಚಿತ ಮತ್ತು ಸಂಗಡಿಗರು ಪ್ರಾರ್ಥಿಸಿದರು.



ಮರೆಯಲಾಗದ ಡಿಸೆಂಬರ್
ಮೈಸೂರು ಪ್ರವಾಸಿ ಉತ್ಸವಗಳು-2014
ಉದ್ಘಾಟನಾ ಸಮಾರಂಭ
27-12-2014ನೇ ಶನಿವಾರ
ಸಂಜೆ 6.00 ಗಂಟೆಗೆ
ಬಯಲು ರಂಗಮಂದಿರ, ಮಾನಸ ಗಂಗೋತ್ರಿ

ಉದ್ಘಾಟನೆ                : ಶ್ರೀ ವಿ. ಶ್ರೀನಿವಾಸ ಪ್ರಸಾದ್
                     ಮಾನ್ಯ ಕಂದಾಯ ಸಚಿವರು ಹಾಗೂ
                     ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು.

ಪ್ರವಾಸಿ ಸಾಹಿತ್ಯ ಬಿಡುಗಡೆ     : ಶ್ರೀ ಹೆಚ್. ಸಿ. ಮಹದೇವಪ್ಪ
                   ಮಾನ್ಯ ಲೋಕೋಪಯೋಗಿ ಸಚಿವರು.

ಅಧ್ಯಕ್ಷತೆ                 : ಶ್ರೀ ವಾಸು
                   ಶಾಸಕರು, ಚಾಮರಾಜ ವಿಧಾನ ಸಭಾ ಕ್ಷೇತ್ರ.

ಅತಿಥಿಗಳು                 : ಶ್ರೀ ಆರ್. ಲಿಂಗಪ್ಪ
                   ಪೂಜ್ಯ ಮಹಾಪೌರರು, ಮೈಸೂರು ಮಹಾನಗರ ಪಾಲಿಕೆ.
                 : ಡಾ. ಪುಷ್ಪ ಅಮರನಾಥ್
                   ಮಾನ್ಯ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ಮೈಸೂರು.
                 : ಶ್ರೀ ಪ್ರತಾಪ ಸಿಂಹ
                   ಮಾನ್ಯ ಲೋಕಸಭಾ ಸದಸ್ಯರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ
                 : ಶ್ರೀ ಆರ್ ಧೃವನಾರಾಯಣ
                   ಮಾನ್ಯ ಲೋಕಸಭಾ ಸದಸ್ಯರು, ಚಾಮರಾಜನಗರ ಕ್ಷೇತ್ರ
                 : ಶ್ರೀ ಸಿ. ಎಸ್. ಪುಟ್ಟರಾಜು
                   ಮಾನ್ಯ ಲೋಕಸಭಾ ಸದಸ್ಯರು, ಮಂಡ್ಯ ಲೋಕಸಭಾ ಕ್ಷೇತ್ರ.
                 : ಶ್ರೀ ತನ್ವೀರ್ ಸೇಠ್,
                   ವಿಧಾನಸಭಾ ಸದಸ್ಯರು, ನರಸಿಂಹರಾಜ ಕ್ಷೇತ್ರ.
                 : ಶ್ರೀ ಎಂ. ಕೆ. ಸೋಮಶೇಖರ್,
                   ವಿಧಾನಸಭಾ ಸದಸ್ಯರು, ಕೃಷ್ಣರಾಜ ಕ್ಷೇತ್ರ.
                 : ಶ್ರೀ ಜಿ. ಟಿ. ದೇವೇಗೌಡ,
                 :  ವಿಧಾನಸಭಾ ಸದಸ್ಯರು, ಚಾಮುಂಡೇಶ್ವರಿ ಕೇತ್ರ.
                 : ಶ್ರೀ ಕೆ. ವೆಂಕಟೇಶ್
                   ವಿಧಾನಸಭಾ ಸದಸ್ಯರು, ಪಿರಿಯಾಪಟ್ಟಣ ಕ್ಷೇತ್ರ.
                 : ಶ್ರೀ ಸಾ. ರಾ. ಮಹೇಶ್
                   ವಿಧಾನಸಭಾ ಸದಸ್ಯರು, ಕೆ. ಆರ್. ನಗರ ಕ್ಷೇತ್ರ.
                 : ಶ್ರೀ ಹೆಚ್. ಪಿ. ಮಂಜುನಾಥ್
                   ವಿಧಾನಸಭಾ ಸದಸ್ಯರು, ಹುಣಸೂರು ಕ್ಷೇತ್ರ.
                 : ಶ್ರೀ ಚಿಕ್ಕಮಾದು
                   ವಿಧಾನಸಭಾ ಸದಸ್ಯರು, ಹೆಚ್. ಡಿ. ಕೋಟೆ.
                 : ಶ್ರೀ ಸಿ. ಹೆಚ್. ವಿಜಯಶಂಕರ್
                   ಮಾನ್ಯ ವಿಧಾನ ಪರಿಷತ್ ಸದಸ್ಯರು.
                 : ಶ್ರೀ ಗೋ. ಮಧುಸೂದನ್
                   ಮಾನ್ಯ ವಿಧಾನ ಪರಿಷತ್ ಸದಸ್ಯರು
                  : ಶ್ರೀ ಮರಿತಿಬ್ಬೇಗೌಡ
                   ಮಾನ್ಯ ವಿಧಾನ ಪರಿಷತ್ ಸದಸ್ಯರು.
                 : ಶ್ರೀ ಎಸ್. ನಾಗರಾಜು (ಸಂದೇಶ್ ನಾಗರಾಜು)
                   ಮಾನ್ಯ ವಿಧಾನ ಪರಿಷತ್ ಸದಸ್ಯರು.
                 : ಶ್ರೀ ಆರ್. ಧರ್ಮಸೇನ
                   ಮಾನ್ಯ ವಿಧಾನ ಪರಿಷತ್ ಸದಸ್ಯರು.
                 : ಶ್ರೀ ಪ್ರೊ. ಕೆ. ಎಸ್. ರಂಗಪ್ಪ
                   ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ.
                 : ಶ್ರೀ ಎಂ. ಜಿ. ಕೃಷ್ಣನ್
                   ಕುಲಪತಿಗಳು, ಕರ್ನಾಟಕ ರಾಜ್ಯ ಮುಕ್ರ ವಿಶ್ವವಿದ್ಯಾನಿಲಯ.
                 : ಶ್ರೀಮತಿ sಸರ್ವಮಂಗಳ ಶಂಕರ್
                   ಕುಲಪತಿಗಳು, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು
                   ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ
                 : ಶ್ರೀ ಸಿ. ದಾಸೇಗೌಡ
                   ಅಧ್ಯಕ್ಷರು, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರ, ಮೈಸೂರು.
                 : ಶ್ರೀ ಕೆ. ಆರ್. ಮೋಹನ್ ಕುಮಾರ್
                   ಅಧ್ಯಕ್ಷರು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು.
                 : ಶ್ರೀ ಆರ್. ಮೂರ್ತಿ
                   ಅಧ್ಯಕ್ಷರು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು.
                 : ಶ್ರೀಮತಿ ರೆಹನಾ ಬೇಗಂ,
                   ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು.
                 : ಶ್ರೀ ಅನಂತ
                   ಅಧ್ಯಕ್ಷರು, ಬಣ್ಣ ಮತ್ತು ಅರಗು ಕಾರ್ಖಾನೆ, ಮೈಸೂರು.
                 : ಶ್ರೀಮತಿ ಮಹದೇವಮ್ಮ
                   ಮಾನ್ಯ ಉಪಮಹಾಪೌರರು, ಮೈಸೂರು ಮಹಾನಗರ ಪಾಲಿಕೆ.
                 : ಶ್ರೀ ಎಲ್ ಮಾದಪ್ಪ
                   ಮಾನ್ಯ ಉಪಾಧ್ಯಕ್ಷರು, ಜಿಲ್ಲಾಪಂಚಾಯಿತಿ, ಮೈಸೂರು.
                 : ಶ್ರೀ ಜಿ. ಕುಮಾರ್ ನಾಯಕ, ಐ.ಎ.ಎಸ್.,
                    ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಟಿ.ಸಿ.ಎಲ್. ಬೆಂಗಳೂರು.
                 : ಶ್ರೀಮತಿ ನೀಲಾ ಮಂಜುನಾಥ್, ಐ.ಎ.ಎಸ್.,
                    ನಿರ್ದೇಶಕರು, ಕೆ.ಎಸ್.ಐ.ಸಿ, ಬೆಂಗಳೂರು.
                 : ಶ್ರೀಮತಿ ಜಿ. ಸತ್ಯವತಿ
                   ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು.
                 : ಶ್ರೀ ಕೆ. ಎ. ದಯಾನಂದ್, ಕೆ.ಎ.ಎಸ್.,
                 : ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು.
                 : ಶ್ರೀ ಕುಮಾರ್. ಎನ್
                   ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿ, ಮೈಸೂರು.









ಮೈಸೂರು ಪಾರಂಪರಿಕ ನಡಿಗೆ-2014
25-12-2014 ರಿಂದ 30-12-2014
ಬೆಳಿಗ್ಗೆ 7.00 ರಿಂದ 9.00
ಮೈಸೂರು ಅರಮನೆ ಬಲರಾಮ ದ್ವಾರದಿಂದ
ಮೈಸೂರು ನಗರದ ಪರಂಪರಾ ಸ್ಥಳಗಳಿಗೆ


•    25-12-2014     : ಬೆಳಿಗ್ಗೆ 7.00 ರಿಂದ 9.00 (ಸಾರ್ವಜನಿಕರಿಗೆ)
ಗುರುವಾರ
•    26-12-2014     : ಬೆಳಿಗ್ಗೆ 7.00 ರಿಂದ 9.00 (ವಿದ್ಯಾಥಿಗಳಿಗೆ -ಸೈಕ್ಲಿಂಗ್)
ಶುಕ್ರವಾರ
•    27-12-2014     : ಬೆಳಿಗ್ಗೆ 7.00 ರಿಂದ 9.00. (ಯುವಕ –ಯುವತಿಯರಿಗೆ)
ಶನಿವಾರ
•    28-12-2014         : ಬೆಳಿಗ್ಗೆ 7.00 ರಿಂದ 9.00 (ವಿದೇಶಿ ಪ್ರವಾಸಿಗರಿಗೆ)
ಭಾನುವಾರ
•    29-12-2014     : ಬೆಳಿಗ್ಗೆ 7.00 ರಿಂದ 9.00     (ಹಾಸ್ಟೆಲ್ ವಿದ್ಯಾರ್ಥಿಗಳಿಗೆ)
ಸೋಮವಾರ
•    30-12-2014     : ಬೆಳಿಗ್ಗೆ 7.00 ರಿಂದ 9.00     (ಅಧಿಕಾರಿಗಳಿಗೆ)
ಮಂಗಳವಾರ


ಮೈಸೂರು ದೋಣಿ ವಿಹಾರ ಉತ್ಸವ-2014
26-12-2014ನೇ ಶುಕ್ರವಾರ ದಿಂದ 28-12-2014 ಭಾನುವಾರ
ಬೆಳಿಗ್ಗೆ 10.00 ರಿಂದ ಸಂಜೆ 5.00
ಕಾರಂಜಿಕೆರೆ

•    26-12-2014        : ಬೆಳಿಗ್ಗೆ 10.00 ರಿಂದ ಸಂಜೆ 5.00 ಕಾರಂಜಿ ಕೆರೆ
ಶುಕ್ರವಾರ
•    27-12-2014        : ಬೆಳಿಗ್ಗೆ 10.00 ರಿಂದ ಸಂಜೆ 5.00 ಕಾರಂಜಿ ಕೆರೆ
ಶನಿವಾರ
•    28-12-2014        : ಬೆಳಿಗ್ಗೆ 10.00 ರಿಂದ ಸಂಜೆ 5.00 ಕಾರಂಜಿ ಕೆರೆ
ಭಾನುವಾರ





ಮೈಸೂರು ಕರೋಲ್ ಸಿಂಗಿಂಗ್ ಉತ್ಸವ-2014
26-12-2014ನೇ ಶುಕ್ರವಾರ
ಸಂಜೆ 6.00 ರಿಂದ 8.00
ಸೆಂಟ್ ಫಿಲೋಮಿನಾÀಸ್ ಚರ್ಚ್, ಮೈಸೂರು


ಮೈಸೂರು ಕೇಕ್ ಉತ್ಸವ-2014
27-12-2014 ರಿಂದ 28-12-2014À
ಬೆಳಿಗ್ಗೆ 9.00 ರಿಂದ ರಾತ್ರಿ 9.00
ನಂಜರಾಜ ಬಹದ್ದೂರ್ ಛತ್ರ, ಮೈಸೂರು

27-12-2014        : ಬೆಳಿಗ್ಗೆ 9.00 ರಿಂದ ರಾತ್ರಿ 9.00
ಶನಿವಾರ            : ಮಧ್ಯಾಹ್ನ 4.00 ರಿಂದ 5.00
              ಕೇಕ್ ತಿನ್ನುವ ಸ್ಪರ್ಧೆ: ಪ್ರೌಢಶಾಲೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ.
                         : ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ.

28-12-2014     : ಬೆಳಿಗ್ಗೆ 9.00 ರಿಂದ ರಾತ್ರಿ 9.00
ಭಾನುವಾರ            : ಬೆಳಿಗ್ಗೆ 11.00 ರಿಂದ 12.00
              ಕೇಕ್ ತಿನ್ನುವ ಸ್ಪರ್ಧೆ: ಯುವಕ-ಯುವತಿಯರಿಗೆ
                           [20 ರಿಂದ 40 ವರ್ಷ]
                           ಪುರುಷ-ಮಹಿಳೆಯರಿಗೆ
                           [40 ವರ್ಷ ಮೇಲ್ಪಟ್ಟು]


ಡಿಸೆಂಬರ್ ಮೈಸೂರು ಆಹಾರ ಮೇಳ-2014
27-12-2014 ರಿಂದ 28-12-2014
ಬೆಳಿಗ್ಗೆ 8.00 ರಿಂದ ರಾತ್ರಿ 10.00
ನಂಜರಾಜ ಬಹದ್ದೂರ್ ಛತ್ರದ ಆವರಣ.




   



     
ಘಲ್ಲು ಘಲ್ಲೆನುತಾ ...............
[ಮೈಸೂರು ನೃತ್ಯ ಉತ್ಸವ]
27-12-2014ನೇ ಶನಿವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ

•    ಜನಪದ ದರ್ಶನ            : ಶ್ರೀ ಲಿಂಗÀರಾಜು ಮತ್ತು ತಂಡ           
(ಡೊಳ್ಳು ಕುಣಿತ)             ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ.
•    ಶಾಸ್ತ್ರೀಯ ನೃತ್ಯ            : ಭರತಾಂಜಲಿ
                          ಡಾ. ಶೀಲಾ ಶ್ರೀಧರ್, ಮೈಸೂರು.
•    ಸಮಕಾಲಿನ ನೃತ್ಯ            : ಕೌಟಿಲ್ಯ ಕಾಲೇಜು, ಮೈಸೂರು.

•    ನೃತ್ಯ ವೈಭವ                : ಶ್ರೀಮತಿ ಶುಭಾ ಧನಂಜಯ ಮತ್ತು ವೃಂದ,
                          ಬೆಂಗಳೂರು.
•    ಪ್ಯೂಜನ್/ಸಮಕಾಲೀನ ನೃತ್ಯಗಳು    : ಯೂನಿಕ್ ಸಿಜ್ಲರ್ಸ್, ಮೈಸೂರು.

•    ಪಾಶ್ಚಿಮಾತ್ಯ ನೃತ್ಯ            : ಸೈಕ್ಲೋನ್ ಡಾನ್ಸ್ ಇನ್‍ಸ್ಟಿಟ್ಯೂಟ್, ಮೈಸೂರು.
        : :
•    ಸಾಲ್ಸಾ ನೃತ್ಯ                : ಸಂದೀಪ್ಸ್ ಡ್ಯಾನ್ಸ್ ಕಂಪನಿ, ಮೈಸೂರು.
               
           
                ಚೆಲ್ಲಿದರು ಮಲ್ಲಿಗೆಯಾ ...............
[ಮೈಸೂರು ಸಂಗೀತ ಉತ್ಸವ]
28-12-2014ನೇ ಭಾನುವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ

•    ಕರ್ನಾಟಕ ಬ್ಯಾಂಡ್         : ಪೊಲೀಸ್ ಇಲಾಖೆ, ಮೈಸೂರು ನಗರ.   
•    ಹಿಂದುಸ್ತಾನಿ ಸಂಗೀತ        : ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು    
                      ಪ್ರದರ್ಶಕ ಕಲೆಗಳು ವಿಶ್ವವಿದ್ಯಾನಿಲಯ, ಮೈಸೂರು.       
•    ಕರ್ನಾಟಕ ಸಂಗೀತ        : ಲಲಿತ ಕಲೆಗಳ ಕಾಲೇಜು, ಮೈಸೂರು.
•    ಸುಗಮ ಸಂಗೀತ        : ಶ್ರೀ ಸಿ.ವಿಶ್ವನಾಥ್, ಕು. ಅನನ್ಯ ಹಾಗೂ ಕು. ಹಂಸಿನಿ, ಮೈಸೂರು.       
•    ಜನಪದ ಸಂಗೀತ        : ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗ, ಮೈಸೂರು.
•    ಪಾಶ್ಚಿಮಾತ್ಯ ಸಂಗೀತ        : ಸ್ಟೋನ್ ಏಜ್, ರಾಕ್ ಬ್ಯಾಂಡ್, ಮೈಸೂರು.
•    ಪ್ಯೂಜನ್ ಸಂಗೀತ        : ಹೈಕ್ಳ್ ಬ್ಯಾಂಡ್, ಮೈಸೂರು.                   
•    ಗಾನಯಾನ            : ಶ್ರೀಮತಿ ದಿವ್ಯಾ ರಾಘವನ್ ಮತ್ತು ವೃಂದ
[ಹಳೆಯ ಕನ್ನಡ ಚಿತ್ರಗೀತೆಗಳು]    ಪ್ರಸಿದ್ದ ಗಾಯಕರು, ಬೆಂಗಳೂರು.

[ಗಾನಯಾನ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು, ಪ್ರಾಯೋಜಿತ]



ಮೈಸೂರು ಕಾರ್ನಿವಾಲ್ ಉತ್ಸವ
29-12-2014ನೇ ಸೋಮವಾರ
[ಸಂಜೆ 4.00 ರಿಂದ 6.00 ಗಂಟೆ]
(ಮೈಸೂರು ಅರಮನೆ ಬಲರಾಮ ದ್ವಾರ – ಕೆ. ಆರ್. ವೃತ್ತ –
ದೇವರಾಜ ಅರಸ್ ರಸ್ತೆ – ಓವೆಲ್ ಮೈದಾನ)

•    ಗೊರವರ ಕುಣಿತ             :
•    ನಗಾರಿ ಕುಣಿತ                :   
•    ಗಾರುಡಿ ಗೊಂಬೆ            :
•    ಪಟಾ ಕುಣಿತ                :
•    ವೇಷ ಭೂಷಣ            :    
•    ಪೋಲೀಸ್ ಅಶ್ವಾರೋಹ ಪಡೆ    :                
•    ಎತ್ತಿನ ಗಾಡಿಗಳು            :
•    ಪೊಲೀಸ್ ಬ್ಯಾಂಡ್            :
•    ಸ್ವೀಡನ್‍ಲ್ಯಾಂಡ್ ಬ್ಯಾಂಡ್        :
•    ಮೈಸೂರು ಟಾಂಗಾ            :
•    ಮೈಸೂರು ಸಾರೋಟ         :




ಝಕ್ಕಣಕ ಣಕ್ಕಣಕ ...............
[ಮೈಸೂರು ಯುವ ಉತ್ಸವ]
29-12-2014ನೇ ಸೋಮವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ
•    ಇಂಗ್ಲೀಷ್ ಬ್ಯಾಂಡ್         : ಮೈಸೂರು ಪೊಲೀಸ್, ಮೈಸೂರು       
   
•    ಡೊಳ್ಳು ಕುಣಿತ        : ಕಾವೇರಿ ಪದವಿಪೂರ್ವ ಕಾಲೇಜು                   
                   
•    ಜಾನಪದ ನೃತ್ಯ        : ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜು

•    ಜಾನಪದ ನೃತ್ಯ        : ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜು

•    ದಶಾವತಾರ            : ಜೆ.ಎಸ್.ಎಸ್.ಮಹಿಳಾ ಪದವಿಪೂರ್ವ ಕಾಲೇಜು

•    ಕೊರಿಯಾ ನೃತ್ಯ        : ಟ್ಯಾಲೆಂಟ್ ಕಾಲೇಜು, ಹುಣಸೂರು

•    ಸಮೂಹ ನೃತ್ಯ         : ವಿಜಯ ವಿಠಲ ಪದವಿಪೂರ್ವ ಕಾಲೇಜು

•    ಪ್ಯೂಜನ್ ನೃತ್ಯ        : ಶಾರದಾ ವಿಲಾಸ ಪದವಿಪೂರ್ವ ಕಾಲೇಜು.

•    ಸ್ಯಾಂಡಲ್ ವುಡ್ ಟು     : ಚೈತ್ರಾ ಪದವಿಪೂರ್ವ ಕಾಲೇಜು
ಬಾಲಿವುಡ್
•    ರಾಷ್ಟ್ರೀಯ ಭಾವೈಕ್ಯತೆ    : ಸುಮುಖ ಪದವಿಪೂರ್ವ ಕಾಲೇಜು

•    ಪ್ರಿನ್ಸ್ ಆಫ್ ಇಂಡಿಯಾ    : ಮಹಾರಾಜ ಕಾಲೇಜು ಮೈಸೂರು

•    ದಮ್ ಅಂಡ್ ರಿದಮ್    : ಮೈಸೂರು ವಿಶ್ವವಿದ್ಯಾನಿಲಯ

•    ಪೂಜಾಕುಣಿತ        : ಮೈಸೂರು ವಿಶ್ವವಿದ್ಯಾನಿಲಯ.
•    ಸಮಕಾಲೀನ ನೃತ್ಯ         : ಮಹಾರಾಣಿ ವಾಣಿಜ್ಯ ಕಾಲೇಜು, ಮೈಸೂರು.
•    ದಸರಾ ವೈಭವ        : ಮಹರಾಣಿ ಕಲಾ ಕಾಲೇಜು, ಮೈಸೂರು.
ಝಲಲ ಝಲಲ ಜಲಧಾರೆ................
[ಮೈಸೂರು ರೇಷ್ಮೆ ಪರಂಪರೆ ಉತ್ಸವ-2014]
30-12-2014ನೇ ಮಂಗಳವಾರ
[ಸಂಜೆ 6.00 ರಿಂದ 10.00 ಗಂಟೆ]
ಬಯಲು ರಂಗಮಂದಿರ, ಮಾನಸ ಗಂಗೋತ್ರಿ

•    ಸಮಕಾಲಿನ ಬ್ಯಾಂಡ್ ಸಂಗೀತ    : ಡಿ ಕೋಡ್ ಮೈಸೂರು
   
•    ನಾಟ್ಯ ಪರಂಪರೆ            : ಶ್ರೀ ಮಾತೃಕಾ ನೃತ್ಯ ಶಾಲೆ, ಶ್ರೀರಂಗಪಟ್ಟಣ
                   
•    ಮೈಸೂರು ರೇಷ್ಮೆ ದರ್ಶಿನಿ        : ಕೆ.ಎಸ್.ಐ.ಸಿ. ಸೌಂದರ್ಯ ನಡೆ

•    ಸಮಕಾಲೀನ ನೃತ್ಯ            : ಶ್ರೀ ಬಿಜ್ಜು ಕೋವಿ ಮತ್ತು ತಂಡ, ಬೆಂಗಳೂರು

•    ಸಮಕಾಲೀನ ನೃತ್ಯ            : ಶ್ರೀ ಅಮಿತ್ ಮತ್ತು ತಂಡ, ಮೈಸೂರು
    (ಹಿಪ್‍ಅಪ್ & ಲಾಕಿಂಗ್-ಪಾಪಿಂಗ್)

•    ರೇಷ್ಮೆ ಸೀರೆ ವೈವಿಧ್ಯ            : ಸೌಂದರ್ಯ ನಡೆ
(ಸೌಂದರ್ಯ ದರ್ಶನ)            ವಿನ್ಯಾಸ : ಶ್ರೀಮತಿ ಹೇಮಲತಾ, ಬೆಂಗಳೂರು

•    ಬಾಲಿವುಡ್ ಡಾನ್ಸ್            : ವೈಬ್ಸ್, ಬೆಂಗಳೂರು

•    ಸಮಕಾಲೀನ ನೃತ್ಯ            : ಹಿಪ್‍ಲಾಕ್ಸ್, ಮೈಸೂರು.

•    ಎಲ್.ಇ.ಡಿ. ಡಾನ್ಸ್            : ಶ್ರೀ ಬಿಜ್ಜು ಕೋವಿ ಮತ್ತು ತಂಡ, ಬೆಂಗಳೂರು

•    ಸೀರೆ ಪರಂಪರೆ ದರ್ಶಿನಿ        : ಸೌಂದರ್ಯ ನಡೆ
                          ವಿನ್ಯಾಸ : ಕೌಶಲ್ ವಿಶು, ಮೈಸೂರು
•    ಸಮಕಾಲಿನ ನೃತ್ಯ            : ಶೈನಿಂಗ್ ಡಾನ್ಸ್ ಅಕಾಡೆಮಿ, ಮೈಸೂರು.

•    ಹಿಪ್‍ಆಫ್ ಡಾನ್ಸ್             : ವೈಬ್ಸ್, ಬೆಂಗಳೂರು

•    ಜನಪದ ಶೈಲಿ ನೃತ್ಯ             : ರೆಟ್ರೋ ಡಾನ್ಸ್ ಅಕಾಡೆಮಿ, ಮೈಸೂರು


•    ಮೈಸೂರು ರೇಷ್ಮೆ ದರ್ಶಿನಿ        : ಸೌಂದರ್ಯ ನಡೆ
                          ಕೆ.ಎಸ್.ಐ.ಸಿ.

                          ನಿರ್ದೇಶನ ಕೌಶಲ್ ವಿಶು, ಮೈಸೂರು
                          ಶ್ರೀಮತಿ ಹೇಮಲತಾ, ಬೆಂಗಳೂರು

•    ಪ್ರಾದೇಶಿಕ ನೃತ್ಯಗಳು             : ಶ್ರೀ ಬಿಜ್ಜು ಕೋವಿ ಮತ್ತು ತಂಡ, ಬೆಂಗಳೂರು

  ಉತ್ಸವ ಪ್ರಾಯೋಜನೆ
                          ಕರ್ನಾಟಕ ರೇಷ್ಮೆ ಉದ್ಯಮ ನಿಗಮ, ಬೆಂಗಳೂರು.

                          ನಿರ್ದೇಶನ
            :              ಶ್ರೀಮತಿ ಹೇಮಲತಾ, ಬೆಂಗಳೂರು
                          ಶ್ರೀ ಕೌಶಲ್ ವಿಶು, ಮೈಸೂರು



ಚಾಮುಂಡಿ ಚಾರಣ
31-12-2014ನೇ ಬುಧವಾರ
[ಬೆಳಿಗ್ಗೆ 6.00 ರಿಂದ 9.00]
ಚಾಮುಂಡಿ ಬೆಟ್ಟದ ಪಾದ

ಉತ್ಸವದ ಸಹಪ್ರಾಯೋಜಕರು
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, ಬೆಂಗಳೂರು.
ಹೆಚ್.ಡಿ.ಎಫ್.ಸಿ. ಬ್ಯಾಂಕ್, ಮೈಸೂರು.



  ಸಿ ಶಿಖಾ, ಐ.ಎ.ಎಸ್.,
                            ಜಿಲ್ಲಾಧಿಕಾರಿಗಳು
                             ಮೈಸೂರು ಜಿಲ್ಲೆ.








Saturday, 20 December 2014

     ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಿಂದ ಸರ್.ಎಂ.ವಿ.ಸ್ಟೇಡಿಯಂ ಪರಿಶೀಲನೆ
ಮಂಡ್ಯ.ಡಿ.  ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಪಿ.ಎಂ.ಸೋಮಶೇಖರ್ ಅವರು ಶನಿವಾರ ಜಿಲ್ಲಾ ಕ್ರೀಡಾಂಗಣ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಇರಬೇಕಾದ ಸೌಲಭ್ಯ ಸವಲತ್ತುಗಳು  ಈ ಕ್ರೀಡಾಂಗಣದಲ್ಲಿ ಇಲ್ಲ. ಆದ್ದರಿಂದ ಈ ಕ್ರೀಡಾಂಗಣದ ಉನ್ನತೀಕರಣಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
    ಒಳಾಂಗಣ ಕ್ರೀಡಾಂಗಣದ ನಿರ್ಮಾಣ ಕಾರ್ಯ 2010-11ನೇ ಸಾಲಿನಲ್ಲಿ ಆರಂಭವಾಗಿದೆ. ಈವರೆಗೆ ಈಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೆಲವು ಆರೋಪಗಳು ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದ ನಿರ್ಮಾಣ ಕಾರ್ಯ ಕುಂಠಿತವಾಗಿದೆ. ಮುಂದಿನ ಮಾರ್ಚ್ ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ಹೇಳಿದರು.
    ಕ್ರೀಡಾಂಗಣದಲ್ಲಿ ವ್ಯವಸ್ಥೆ ಸುಧಾರಣೆ ಆಗಬೇಕಾಗಿದೆ. ಬಾಸ್ಕೆಟ್‍ಬಾಲ್ ಕೋರ್ಟ್‍ಗೆ ಸಿಂಥೆಟಿಕ್ ಟ್ರ್ಯಾಕ್ ಹಾಕಬೇಕು, ಫ್ಲೆಡ್‍ಲೈಟ್ ಹಾಕಬೇಕು ಹಾಗೂ ಸುತ್ತ ತಂತಿಬೇಲಿ ಹಾಕಬೇಕು. ಖೋ ಖೋ, ವಾಲಿಬಾಲ್ ಕೋರ್ಟ್‍ಗಳು ಸುಧಾರಣೆಯಾಗಬೇಕು ಎಂದರು.
    ಕ್ರೀಡಾ ತರಬೇತುದಾರರ ಕೊರತೆ ಎಲ್ಲಾ ಜಿಲ್ಲೆಗಳಲ್ಲೂ ಇದೆ. ಈಗಾಗಲೇ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ. ಕಾರ್ಯ ನಿರ್ವಹಿಸುತ್ತಿರುವ ಕ್ರೀಡಾ ತರಬೇತುದಾರರ ಹುದ್ದೆಯನ್ನು ಖಾಯಂಗೊಳಿಸುವಂತೆ ಬೇಡಿಕೆ ಇದೆ. ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರ ಗಮನ ಸೆಳೆಯಲಾಗುವುದು ಎಂದರು.
    ಕ್ರೀಡಾ ವಿದ್ಯಾರ್ಥಿನಿಲಯವನ್ನು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕಿಸಬೇಕಾಗಿದೆ. ಇಡೀ ಕ್ರೀಡಾಂಗಣದಲ್ಲಿ ಒಂದೇ ಒಂದು ಶೌಚಾಲಯವಿದೆ. ಅದಕ್ಕೂ ಸಹ ವಿದ್ಯತ್ ದೀಪದ ವ್ಯವಸ್ಥೆ ಇಲ್ಲ ಎಂದರು.
    ಪರಿಶೀಲನೆ ವೇಳೆ ನಗರಸಭಾ ಸದಸ್ಯ ಎಂ.ಪಿ.ಅರುಣ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಡಾ|| ಎಚ್.ಪಿ.ಮಂಜುಳಾ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಜಗದೀಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಚಂದ್ರಹಾಸ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದು, ವಾಸ್ತುಶಿಲ್ಪಿ ಅಭಿಮನ್ಯು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
     ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
    ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರ ಲಿಫಿಗಾರರು-10, ಬೆರಳಚ್ಚುಗಾರರು-10, ಬೆರಳಚ್ಚು ನಕಲುಗಾರರು-04, ಆದೇಶಿಕ ಜಾರಿಕಾರರು-08 ಹಾಗೂ ಜವಾನರು-14 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ಶೀಘ್ರ ಲಿಫಿಗಾರರ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಬೆರಳಚ್ಚುಗಾರರ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ  ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಬೆರಳಚ್ಚು ನಕಲುಗಾರರ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ  ಬೆರಳಚ್ಚು  ಕಿರಿಯ ದರ್ಜೆ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಆದೇಶಿಕ ಜಾರಿಕಾರರ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು. ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
    ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಕ್ಕೆ ಸೇರಿದ  ಅಭ್ಯರ್ಥಿಯ ವಯೋಮಿತಿ 40 ವರ್ಷ ಮೀರಿರಬಾರದು. ಪ್ರವರ್ಗ-2ಎ, 2ಬಿ, 3ಎ ಹಾಗೂ 3ಬಿ ರವರು 38 ವರ್ಷ ಮೀರಿರಬಾರದು. ಸಾಮಾನ್ಯ ಅಭ್ಯರ್ಥಿಗಳ ವಯೋಮಿತಿ 35 ವರ್ಷ ಮೀರಿರಬಾರದು. ಅಂಗವಿಕಲ ಹಾಗೂ ವಿಧವಾ ಮಹಿಳೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗುವುದು.
    ಭರ್ತಿ ಮಾಡಿದ ಅರ್ಜಿಗಳನ್ನು ಜನವರಿ 24, 2015 ಸಂಜೆ 4.00 ಗಂಟೆಯೊಳಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ ಇಲ್ಲಿಗೆ ಸಲ್ಲಿಸುವುದು. ಒಂದು ವೇಳೆ ಕಡೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿದ್ದ ಪಕ್ಷದಲ್ಲಿ ಮುಂದಿನ ಕೆಲಸದ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೆಬ್‍ಸೈಟ್ hಣಣಠಿ;//eಛಿouಡಿಣ.gov.iಟಿ/mಚಿಟಿಜಥಿಚಿ ನೋಡುವುದು ಹಾಗೂ ಸದರಿ ಕಛೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

           ರಾಷ್ಟ್ರೀಯ ಜನತಾ ನ್ಯಾಯಾಲಯ : 27743 ಪ್ರಕರಣಗಳು ಇತ್ಯರ್ಥ

     ಮಂಡ್ಯ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ ಮತ್ತು ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಾನೂನು ಸೇವಾ ಸಮಿತಿಗಳಲ್ಲಿ ದಿನಾಂಕ 1-9-2014 ರಿಂದ 6-12-2014 ರವರೆಗೆ ರಾಷ್ಟ್ರೀಯ ಜನತಾ ನ್ಯಾಯಾಲಯವನ್ನು ಹಮ್ಮಿಕೊಳ್ಳಲಾಗಿದೆ.
     ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ 27743 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸದರಿ ಪ್ರಕರಣಗಳಲ್ಲಿ 621 ಸಿವಿಲ್ ಪ್ರಕರಣಗಳು, 441 ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, 2505 ಇತರೆ ಕ್ರಿಮಿನಲ್ ಪ್ರಕರಣಗಳು, 140 ಎನ್.ಐ. ಆಕ್ಟ್ ಪ್ರಕರಣಗಳು, 117 ಎಂ.ವಿ.ಸಿ. ಪ್ರಕರಣಗಳು, 69 ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು, 110 ರೈಲ್ವೆ ಹಾಗೂ ಅರಣ್ಯ ಪ್ರಕರಣಗಳು, 16 ವೈವಾಹಿಕ ಪ್ರಕರಣಗಳು, 11414 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ 12147 ರೆವಿನ್ಯೂ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಪ್ರಧಾನ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸದಾನಂದ ಎಂ. ದೊಡ್ಡಮನಿ ಅವರು ತಿಳಿಸಿದ್ದಾರೆ.
ಡಿ.26 ರಂದು ವಾಚನಾಭಿರುಚಿ ಕಮ್ಮಟ ಕಾರ್ಯಕ್ರಮ
        ಕನ್ನಡ ಪುಸ್ತಕ ಪ್ರಾಧಿಕಾರ ಇವರ ಸಹಯೋಗದಲ್ಲಿ ಡಿಸೆಂಬರ್ 26 ಹಾಗೂ 27 ರಂದು ವಾಚನಾಭಿರುಚಿ ಕಮ್ಮಟ ಕಾರ್ಯಕ್ರಮವನ್ನು ಭಾರತಿ ನಗರದ ಭಾರತಿ ಕಾಲೇಜಿನ ಗಾಂಧಿಭವನದಲ್ಲಿ ವಾಚನಾಭಿರುಚಿ ಕಮ್ಮಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
      ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ ಅವರು ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತಾಲ್ಲೂಕು ಮಟ್ಟದ ಯುವಕರ ವಾಲಿಬಾಲ್ ಹಾಗೂ ಯುವತಿಯರ ಥ್ರೋಬಾಲ್ ಪಂದ್ಯಾವಳಿ
      ಮಂಡ್ಯ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀರಂಗಪಟ್ಟಣ ನೀಲಸೀಮೆ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಟ್ರಸ್ಟ್, ಯುವ ಪರಿಷತ್, ಹಾಗೂ ಕಪರನಕೊಪ್ಪಲಿನ ಸಿದ್ದಾರ್ಥ ಯುವ ಬಳಗ ಇವರ ಸಹಯೋಗದಲ್ಲಿ ಡಿಸೆಂಬರ್ 26 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣ ಆವರಣದಲ್ಲಿ ತಾಲ್ಲೂಕು ಮಟ್ಟದ ಯುವಕರ ವಾಲಿಬಾಲ್ ಹಾಗೂ ಯುವತಿಯರ ಥ್ರೋಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ತಾಲ್ಲೂಕಿನ ಕ್ರೀಡಾ ಪ್ರತಿಭೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರಕಟಣೆ ತಿಳಿಸಿದೆ.


                         ಕೆ.ಆರ್ ಆಸ್ಪತ್ರೆಯ ನಕಲಿ ಮೆಡಿಕಲ್ ಸರ್ಟಿಪಿಕೇಟ್ ಮಾಡಿ ಕೊಡುತ್ತಿದ್ದ ಜಾಲ ಪತ್ತೆ
                   * ಆಸ್ಪತ್ರೆಯ ನಿವೃತ್ತ ವೈದ್ಯ, ಡಿ.ಗ್ರೂಪ್ ನೌಕರ ಸೇರಿ ಐವರ ಬಂಧನ


ಮೈಸೂರು : ನಗರದ ಕೆ.ಆರ್. ಆಸ್ಪತ್ರೆಯ ನಕಲಿ ಮೆಡಿಕಲ್ ಸರ್ಟಿಪಿಕೇಟ್ ನ್ನು ಮಾಡಿಕೊಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ನಗರದ ದೇವರಾಜ ಠಾಣೆಯ ಪೊಲೀಸರು 5ಮಂದಿಯನ್ನು ಬಂಧಿಸಿದ್ದಾರೆ.
ಕೆ.ಆರ್ ಆಸ್ಪತ್ರೆಯ ನಿವೃತ್ತ ವೈದ್ಯರಾದ ಮೈಸೂರಿನ ತಿಲಕ್ ನಗರದ ನಿವಾಸಿ ಡಾ..ಮುದ್ದುಕೃಷ್ಣ (69ವರ್ಷ),  ಕೆ.ಆರ್ ಆಸ್ಪತ್ರೆಯಲ್ಲಿ “ಡಿ” ಗ್ರೂಪ್ ನೌಕರನಾಗಿರುವ ಬೆಲವತ್ತ ಗ್ರಾಮದ ನಿವಾಸಿ ಸಗಾಯಿ ರಾಜ್ (48 ವರ್ಷ), ಇದೇ ಆಸ್ಪತ್ರೆಯ ನಿವೃತ್ತ ಆಂಬುಲೈನ್ಸ್ ಚಾಲಕ ಕಲ್ಯಾಣಗಿರಿಯ ನಿವಾಸಿ ಸಿ.ಪಿ.ವೇಲು (65 ವರ್ಷ), ಕೆ.ಆರ್ ಆಸ್ಪತ್ರೆಯ ರಬ್ಬರ್ ಸ್ಟಾಂಪ್ ಸೀಲು ಮಾಡಿಸಿಕೊಟ್ಟ ವಿದ್ಯಾರಣ್ಯಪುರಂನ ನಿವಾಸಿ ಕೃಷ್ಣ (45 ವರ್ಷ) ಹಾಗೂ ಗಾಯಾತ್ರಿಪುರಂನ ನಿವಾಸಿ ನಟರಾಜ್ (45 ವರ್ಷ) ಬಂಧಿತರು.  ಬಂಧಿತ ಆರೋಪಿಗಳು ನಗರದ ಕೆ.ಆರ್ ಆಸ್ಪತ್ರೆಯ ರಬ್ಬರ್ ಸ್ಟಾಂಫ್ ಸೀಲು ಮಾಡಿಸಿಕೊಂಡು ಮೆಡಿಕಲ್ ಸರ್ಟಿಪಿಕೇಟ್ ಮತ್ತು ಮೆಡಿಕಲ್ ಫಿಟ್‍ನೆಸ್ ಸರ್ಟಿಪಿಕೇಟ್‍ಗಳನ್ನು ಮಾಡಿಕೊಟ್ಟು ವಂಚಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇಲೆ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಸಂಬಂಧಿಸಿದ ನಕಲಿ ರಬ್ಬರ್ ಸ್ಟಾಂಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ
         ಈ ಕಾರ್ಯಚರಣೆಯನ್ನು ಮೈಸೂರು ನಗರದ ಉಪ-ಪೊಲೀಸ್ ಆಯುಕ್ತ ರಾಜಣ್ಣ ಮತ್ತು ಎಂ.ಎಂ. ಮಹದೇವಯ್ಯ ಹಾಗು ದೇವರಾಜ ವಿಭಾಗದ ಎಸಿಪಿ ಜಯ ಮಾರುತಿ ರವರ ಮಾರ್ಗದರ್ಶನದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹೆಚ್.ಎಂ. ಕಾಂತರಾಜು, ಉಪ ನಿರೀಕ್ಷಕರಾದ ಬಾಲಕೃಷ್ನ, ಲೇಪಾಕ್ಷ.ಕೆ. ಮತ್ತು ಸಿಬ್ಬಂದಿಗಳು  ನಡೆಸಿದರು . ಈ ಪತ್ತೆ ಕಾರ್ಯವನ್ನು  ನಗರ  ಮಾನ್ಯ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಶ್ಲಾಘಿಸಿದ್ದಾರೆ.  ವಿಜಯನಗರ ಪೊಲೀಸರಿಂದ ಬೈಕ್ ಕಳ್ಳರ ಬಂಧನ
ರೂಃ 2,20,000 ಬೆಲೆ ಬಾಳುವ 3 ದ್ವಿಚಕ್ರ ವಾಹನಗಳ ವಶ.

      ವಿಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು  ವಿಜಯನಗರ 1ನೇ ಹಂತದ ಕೆ.ಡಿ. ರಸ್ತೆಯಲ್ಲಿ ಬರುತ್ತಿದ್ದಾಗ ಒಬ್ಬ ಆಸಾಮಿಯು ಅನುಮಾನಾಸ್ಪದವಾಗಿ ನಂಬರ್ ಪ್ಲೇಟ್ ಇಲ್ಲದ ಒಂದು ಹೀರೋ ಹೊಂಡಾ ಸ್ಲ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದೊಂದಿಗೆ ಇದ್ದು ಇದನ್ನು ಕಂಡು  ಪೊಲೀಸರು ಆತನನ್ನು ವಾಹನದ ಬಗ್ಗೆ ದಾಖಲಾತಿಗಳನ್ನು ಕೇಳಿದಾಗ ಸರಿಯಾದ ಉತ್ತರವನ್ನು ನೀಡದೆ ಇದ್ದಾಗ ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಸದರಿ ದ್ವಿಚಕ್ರ ವಾಹನವನ್ನು ತನ್ನ ಸ್ನೇಹಿತ ರೋಹಿತ್ ಎಂಬುವನ ಜೊತೆ ಸೇರಿ ಈಗ್ಗೆ ಎರಡು ತಿಂಗಳ ಹಿಂದೆ ಮೈಸೂರಿನ ಕೂರ್ಗಳ್ಳಿಯ ಮನೆಯ ಮುಂದೆ ಬೀಗ ಹಾಕಿ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಪ್ಪೊಪ್ಪಿಕೊಂಡನು. ನಂತರ ಈತನನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಇದೇ ರೀತಿ ಬೆಂಗಳೂರಿನಲ್ಲಿ 2 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಚನ್ನಪಟ್ಟಣದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ಚೇತನ್ 22 ವರ್ಷ, ಕಾರ್ ಡ್ರೈವರ್ ಕೆಲಸ, ಯರಗನಹಳ್ಳಿ, ಮೈಸೂರು.
ವಿ.ರೋಹಿತ್ 22 ವರ್ಷ, ಬಾಲಾಜಿನಗರ, ಬಾಲ್ಲಿ ಟೌನ್ ಬೀದರ್ ಜಿಲ್ಲೆ.

     ಇವರು  ಕಳ್ಳತನ ಮಾಡಿ ಮಾರಾಟ ಮಾಡಿದ್ದ (1) ಹೀರೋ ಹೊಂಡಾ ನಂಃ ಕೆಎ 05 ಇಜಡ್ 2527 (2)ಬಜಾಜ್ ಪಲ್ಸರ್  ನಂಃ ಕೆಎ 46 ಹೆಚ್ 6070 ಅನ್ನು ವಶಪಡಿಸಿಕೊಂಡಿರುತ್ತೆ. ಮೇಲ್ಕಂಡ ಮೂರು ಬೈಕ್‍ಗಳ ಒಟ್ಟು ಬೆಲೆ. ರೂಃ 2,20,000/- ಗಳಾಗಿರುತ್ತದೆ.  
          ಈ ಪತ್ತೆ ಕಾರ್ಯವನ್ನು ಉಪಪೊಲೀಸ್ ಆಯುಕ್ತರಾದ ಶ್ರೀಎಂ.ಎಂ. ಮಹದೇವಯ್ಯ ಮತ್ತು ಎ.ಸಿ.ಪಿ. ಎ.ಕೆ. ಸುರೇಶ್‍ರವರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಿ.ವಿ. ರವಿ ಸಬ್‍ಇನ್ಸ್‍ಪೆಕ್ಟರ್ ಎನ್. ರಘುಪ್ರಸಾದ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರ ನೇತೃತ್ವದ ತಂಡವು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ. ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾಃಎಂ.ಎ. ಸಲೀಂ, ಐ.ಪಿ.ಎಸ್. ರವರು ಶ್ಲಾಫಿಸಿರುತ್ತಾರೆ.

                   ಪ್ರಧಾನ ಮಂತ್ರಿ ಮೋದಿ ಯವರ ಜಾಗತಿಕ ಜನಪ್ರಿಯತೆ  - ಹಾರ್ವರ್ಡ್ ವರದಿ

ಲೋಕ ಸಭೆ ಯ ೨೦೧೪ ರ ಚುನಾವಣೆಯ ಚಾರಿತ್ರಿಕ ವಿಜಯದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಜಾಗತಿಕ ಜನಪ್ರಿಯತೆ ವಿಶಾಲವಾಗಿ ವ್ಯಾಪಿಸಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ  ವರದಿ ಯೊಂದು ತಿಳಿಸಿದೆ.' ಅಂತಾ ರಾಷ್ಟ್ರೀಯ ನಾಯಕರು ಮತ್ತು ಜಾಗತಿಕ ಶಕ್ತಿಗಳು - ಸಮೀಕ್ಷೆ ' ಯಲ್ಲಿ ಈ ವಿಷಯ ಬಹಿರಂಗ ಗೊಂಡಿದೆ. ವರದಿಯು ೩೦ ದೇಶಗಳ ನಾಗರಿಕ ರನ್ನು  ವಿಶ್ವದ ೧೦ ಪ್ರಭಾವ ಶಾಲಿ ನಾಯಕರನ್ನು ಸೂಚಿಸಲು ಕೇಳಿತ್ತು. ಮೋದಿ ಯವರು ಮೊದಲ ಸ್ಥಾನ ದಲ್ಲಿ   ಇದ್ದರು . ೮೭.೮೮%  ಜನರು ಮೋದಿ ನೀತಿ ಗಳ ಪರವಾಗಿದ್ದರು.

ಉಳಿದಂತೆ ಅದ್ಯಕ್ಷ ಒಬಾಮ ಅವರು ೨೦ ನೆ ,ಕೆಮೊರೂನ್ ಅವರು ೧೫ ನೆ ಹಾಗೂ ಪ್ರಧಾನಿ ಶಿನ್ಶೊ ಅಬೆ ಅವರು ೨೬ ನೆ ಸ್ತಾನ ದಲ್ಲಿದ್ದರು . ಮೋದಿ ಯವರ 'ಸಬ್ ಕಾ ಸಾಥ್ ,ಸಬ್ ಕಾ ವಿಕಾಸ್ ' ಗುರಿಗೆ ದೊರೆತ ಮನ್ನಣೆ ಇದಾಗಿದೆ.  

ದೇಶಿಯ ಹಾಗೂ ಅಂತಾ ರಾಷ್ಟ್ರೀಯ ವ್ಯವಹಾರ ಗಳನ್ನೂ ಪರಿಣಾಮ ಕಾರಿಯಾಗಿ ನಿರ್ವಹಿಸುವ ವಿಶ್ವ ನಾಯಕರ ಪೈಕಿ ಮೊದಿಯವರದು ೩  ನೆ ಸ್ತಾನ . ಮೊದಲ ಇಬ್ಬರೆಂದರೆ ಜರ್ಮನಿಯ ಚಾನ್ಸಲರ್ ಮೆರ್ಕೆಲ್ ಹಾಗೂ ಚೀನಾ ಅಧ್ಯಕ್ಷ  ಕ್ಷಿ ಜಿನ್ಪಿಂಗ್  ಅವರು. ಜನಪ್ರಿಯತೆ ಯಲ್ಲಿ ಮೋದಿ ಯವರು ಚೀನಾದ ಅಧ್ಯಕ್ಷ ರೀ ಗಿಂತಲೂ ಮುಂದಿದ್ದಾರ 
                                               
  ಕಾಡುಪ್ರಾಣಿಗಳಿಂದ  ಜೀವ ಹಾನಿ : ಹೆಚ್ಚಿನ ಪರಿಹಾರ ನೀಡುವಂತೆ ಮನವಿ
ನವದೆಹಲಿ. ಡಿ. 20  ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಕಾಡು ಪ್ರಾಣಿಗಳು ಹಳ್ಳಿಗಳಿಗೆ ಬಂದು ಸಾರ್ವಜನಿಕರ ಜೀವಹಾನಿಗೈದು,  ತೊಂದರೆ ಮಾಡುತ್ತಿವೆ.    ಕೇಂದ್ರ ಸರ್ಕಾರವು ಅರಣ್ಯ ಸಂರಕ್ಷಣೆ ಮಾಡಿ   ಹಾನಿಯೊಳಗಾದವರ   ಅವಲಂಭಿತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡುವಂತೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಮುದ್ದಹನುಮೇಗೌಡ ತಿಳಿಸಿದರು.
ಲೋಕಸಭೆಯ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಅರಣ್ಯ ನಾಶದಿಂದ ಕಾಡು  ಪ್ರಾಣಿಗಳು ಗ್ರಾಮಗಳಿಗೆ ಬಂದು ಜನತೆಯ ಜೀವ ಹಾನಿ ಹಾಗು ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ.  ಒಣ ಭೂ ಪ್ರದೇಶವಾದ ತುಮಕೂರು ಜಿಲ್ಲೆಯಲ್ಲಿ  ಇತ್ತೀಚೆಗೆ ಡಜನ್ ಗಿಂತ ಹೆಚ್ಚು ಆನೆಗಳು ಹಾಗು ಕೆಲವು ಚಿರತೆಗಳು ಬೀಡುಬಿಟ್ಟು ಜೀವ ಹಾನಿ ಮತ್ತು ತೀವ್ರವಾಗಿ ಗಾಯಗೊಳಿಸಿವೆ. ಮಧುಗಿರಿ ತಾಲೂಕಿನ ಗ್ರಾಮವೊಂದರಲ್ಲಿ ಕರಡಿಯು ಯುವಕನೊಬ್ಬನನ್ನು ಕೊಂದಿದೆ. ಗ್ರಾಮಸ್ಥರೇ ಮೊಬೈಲ್ಗಳಲ್ಲಿ ಚಿತ್ರೀಕರಿಸಿದ್ದಾರೆ. ಕಾಡುಪ್ರಾಣಿಗಳು ಹಳ್ಳಿಗಳನ್ನು ಪ್ರವೇಶಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಸರ್ಕಾರವು ಕಾಡನ್ನು ಸಂರಕ್ಷಿಸಬೇಕು. ಕಾಡು ಪ್ರಾಣಿಗಳು ಹಳ್ಳಿಗಳ ಕಡೆ ಬರದಂತೆ ಕ್ರಮಕೈಗೊಳ್ಳಬೇಕು. ಹಾನಿಗೊಳಗಾದವರ ಅವಲಂಭಿತರಿಗೆ ಹಾಗು ತೀವ್ರವಾಗಿ ಗಾಯಗೊಂಡವರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಸ್ವೀಕರ್ ಅವರಿಗೆ ಸಂಸದರು ಮನವಿ ಮಾಡಿದರು. 

            ಆನ್ ಲೈನ್ ಪಾವತಿ : ಜಾಗೃತಿ ಮೂಡಿಸಲು  ಸಂಸದ ಶ್ರೀ ಚಂದ್ರಪ್ಪ ಮನವಿ
ನವದೆಹಲಿ. ಡಿ.20 ಸಾಮಾಜಿಕ ಭದ್ರತೆ ಸೇರಿದಂತೆ   ಸಮಾಜ ಕಲ್ಯಾಣ  ಕಾರ್ಯಕ್ರಮಗಳಡಿ   ಫಲಾನುಭವಿಗಳಿಗೆ  ಕೇಂದ್ರ ಸರ್ಕಾರವು   ಆನ್ ಲೈನ್ ಮೂಲಕ ಪಾವತಿ ಮಾಡಲು ಉದ್ದೇಶಿಸಿದ್ದು,   ಆನ್ ಲೈನ್ ಪದ್ದತಿ ಕುರಿತು ಫಲಾನುಭವಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಚಂದ್ರಪ್ಪ ತಿಳಿಸಿದರು.
ಲೋಕಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿಂದು ಮಾತನಾಡಿದ ಅವರು, ಈ ಫಲಾನುಭವಿಗಳು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅವಿದ್ಯಾವಂತರ ಪ್ರಮಾಣ ಹೆಚ್ಚಾಗಿದ್ದಾರೆ. ಹಿಂದುಳಿದ, ಪರಿಶಿಷ್ಟ  ಜನಾಂಗದವರಿಗೆ ಆನ್ಲೈನ್ ಪದ್ದತಿ ಜಾಗೃತಿ  ಇರುವುದಿಲ್ಲ.   ಇವರಿಗೆ ಆನ್ ಲೈನ್ ಪದ್ದತಿ ಕುರಿತು ಅರಿವು ಮೂಡಿಸಲು ಕ್ರಮಕೈಗೊಳ್ಳಬೇಕು. ಕೇಂದ್ರ ಹಾಗು ರಾಜ್ಯ ಪುರಸ್ಕøತ ಯೋಜನೆಗಳನ್ನು ವಿಲೀನಗೊಳಿಸಿ ಫಲಾನುಭವಿಗಳಿಗೆ  ಆನ್ ಲೈನ್ ಮೂಲಕ ಪಾವತಿ ಮಾಡುವ ಚಿಂತನೆಯನ್ನು ಸ್ಥಗಿತಗೊಳಿಸಿ,   ಫಲಾನುಭಿಗಳಿಗೆ  ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವವರಿಗೆ  ಪ್ರಸ್ತುತವಾಗಿರುವ ಪದ್ದತಿಯನ್ನು ಮುಂದುವರೆಸುವಂತೆ ಸರ್ಕಾರಕ್ಕೆ ಸೂಚಿಸುವಂತೆ ಲೋಕಸಭೆಯ ಸ್ವೀಕರ್ ಅವರಿಗೆ ಸಂಸದರು ತಿಳಿಸಿದರು. 

                  ಅನಿಲ ಗ್ರಾಹಕರು ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ವಿವರವನ್ನು ಎಲ್‍ಪಿಜಿ
                                              ವಿತರಕರಿಗೆ ನೀಡಲು ಮನವಿ

     ಮಂಡ್ಯ.ಡಿ.20-ಮಂಡ್ಯ ಜಿಲ್ಲೆಯಲ್ಲಿರುವ ಅಡುಗೆ ಅನಿಲ ಗ್ರಾಹಕರಿಗೆ ಪಹಲ್ (ಡಿ.ಬಿ.ಪಿ.ಎಲ್) ಯೋಜನೆ – ಅಂದರೆ ನೇರ ನಗದು ವರ್ಗಾವಣೆ ಯೋಜನೆ ಜನವರಿ 1, 2015ಕ್ಕೆ ಅನುಷ್ಟಾನಕ್ಕೆ ಬರಲಿದ್ದು, ಅನಿಲ ಗ್ರಾಹಕರು ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೇರವಾಗಿ ನಿಮ್ಮ ಎಲ್.ಪಿ.ಜಿ. ವಿತರಕರಿಗೆ ನೀಡುವುದು ಅಥವಾ ಸಿಲಿಂಡರ್ ವಿತರಣೆ ಮಾಡುವ ಹುಡುಗರ ಮೂಲಕ ತಲುಪಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ|| ಅಜಯ್ ನಾಗಭೂಷಣ್ ಅವರು ಮನವಿ ಮಾಡಿದ್ದಾರೆ.
    ಸಾರ್ವಜನಿಕರ ಅನುಕೂಲಕ್ಕಾಗಿ ಕೇವಲ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರ ಸಂಗ್ರಹಿಸಲು ಜಿಲ್ಲೆಯ ಎಲ್ಲಾ ಅನಿಲ ಏಜೆನ್ಸಿಗಳು ಭಾನುವಾರ ಮತ್ತು ರಜಾ ದಿನಗಳಂದು ಸಹ ತೆರೆದಿರುತ್ತದೆ. ಆಧಾರ್ ಸಂಖ್ಯೆ ಹೊಂದಿಲ್ಲದೇ ಇರುವ ಗ್ರಾಹಕರು ಸಧ್ಯಕ್ಕೆ ಬ್ಯಾಂಕ್ ಖಾತೆ ವಿವರಗಳನ್ನು ಅನಿಲ ಏಜೆನ್ಸಿಗಳಿಗೆ ಸಲ್ಲಿಸುವುದು.
    ಜಿಲ್ಲೆಯಾದ್ಯಂತ 19 ಕೇಂದ್ರಗಳಲ್ಲಿ ಆಧಾರ್ ಸಂಖ್ಯೆ ನೋಂದಣಿ ಮಾಡುವ ಕಾರ್ಯ ನಿರ್ವಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮಾಡಿಕೊಳ್ಳಲು ಕೋರಿದ್ದು, ಬ್ಯಾಂಕ್ ಖಾತೆ ಹೊಂದಿಲ್ಲದ ಅನಿಲ ಗ್ರಾಹಕರು ಪ್ರಧಾನ ಮಂತ್ರಿ ಜನ-ಧನ ಯೋಜನೆ ಮೂಲಕ ಬ್ಯಾಂಕ್ ಖಾತೆ ತೆರೆಯಲು ಕೋರಲಾಗಿದೆ.
    ಗ್ರಾಹಕರು ಇದರ ಸದುಪಯೋಗ ಪಡೆದು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅನಿಲ ಏಜೆನ್ಸಿಗಳನ್ನು ಸಂಪರ್ಕಿಸುವುದು ಹಾಗೂ ಶುಲ್ಕ ರಹಿತ ದೂರವಾಣಿ ಸಂಖ್ಯೆ 1800-2333-555 ಗೆ ಕರೆ ಮಾಡಬಹುದು. ವೆಬ್‍ಸೈಟ್ ವಿಳಾಸ ತಿತಿತಿ.mಥಿಟಠಿg.iಟಿ     ನಲ್ಲಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

      ಭತ್ತದಲ್ಲಿ ವಿವಿಧ ಲವಣ ಸಹಿಷ್ಣುತ ತಳಿಗಳ  ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ


  ವಿ.ಸಿ.ಫಾರಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶುಕ್ರವಾರ ಮಂಡ್ಯ ತಾಲ್ಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ‘ಭತ್ತದಲ್ಲಿ ವಿವಿಧ ಲವಣ ಸಹಿಷ್ಣುತ ತಳಿಗಳ  ಪ್ರಾತ್ಯಕ್ಷಿಕೆಯ’ ಕ್ಷೇತ್ರೋತ್ಸವವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿಷಯ ತಜ್ಞರಾದ (ಮಣ್ಣು ವಿಜ್ಞಾನ) ಡಾ. ಭಾಗ್ಯಲಕ್ಷ್ಮಿ, ಟಿ. ಇವರು ಭತ್ತದಲ್ಲಿ ವಿವಿಧ ಲವಣ ಸಹಿಷ್ಣುತ ತಳಿಗಳಾದ ವಿಕಾಸ್, ಐ.ಆರ್-30864 ಮತ್ತು ಗಂಗಾವತಿ ಸೋನಾ ತಳಿಗಳ ಪರಿಚಯ ಮತ್ತು ಬೇಸಾಯ ಕ್ರಮದ ಬಗ್ಗೆ ರ್ಯೆತರಿಗೆ ಮಾಹಿತಿ ನೀಡಿದರು. 
  ಚೌಳು ಮತ್ತು ಕರ್ಲು ಮಣ್ಣುಗಳ ಸಮಸ್ಯೆ ಹಾಗೂ ಸುಧಾರಣೆಯ ಬಗ್ಗೆ ವಿವರವಾಗಿ  ತಿಳಿಸುತ್ತಾ ಸಮಸ್ಯಾತ್ಮಕ ಮಣ್ಣುಗಳಲ್ಲಿ ಹಸಿರೆಲೆ ಗೊಬ್ಬರ ಬಳಕೆ, ಮಣ್ಣು ಪರೀಕ್ಷೆ ಆಧಾರಿತ ಜಿಪ್ಸಂ, ರಸಗೊಬ್ಬರಗಳ ಬಳಕೆ ಮತ್ತು ಲವಣ ಸಹಿಷ್ಣುತ ಭತ್ತದ ತಳಿಗಳನ್ನು ಬಳಸುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು. 

ಈ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡಂತಹ ರೈತ ಎಂ.ಜಿ.ಪ್ರತಾಪ್‍ರವರು ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು. 
ಕಾರ್ಯಕ್ರಮದಲ್ಲಿ ಹೊಳಲು, ಮಲ್ಲನಾಯಕನಕಟ್ಟೆ ಹಾಗೂ ಮೊಡಚಾಕನಹಳ್ಳಿ ಗ್ರಾಮಸ್ಥರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಕುಮಾರಿ ಅಪೂರ್ವ,ಕೆ.ಬಿ., ತರಬೇತಿ ಸಹಾಯಕರು ಮತ್ತು ಶ್ರೀಮತಿ ರತ್ನಮ್ಮ ಉಪಸ್ಥಿತರಿದ್ದರು. (ಭಾವಚಿತ್ರ ಲಗತ್ತಿಸಿದೆ)

ಡಿ.21 ರಂದು ಸಾಂಸ್ಕøತಿಕ ಸಂಜೆ ಯೋಜನೆಯಲ್ಲಿ ಸ್ಯಾಕ್ಸೋಪೋನ್ ಕಾರ್ಯಕ್ರಮ
ಜಿಲ್ಲಾಡಳಿತ  ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಂಡ್ಯ ಇವರ ಸಹಯೋಗದಲ್ಲಿ ಡಿಸೆಂಬರ್ 21 ರಂದು ಸಂಜೆ 6.30 ಗಂಟೆಯಿಂದ 8.00 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿರುವ ಕಾವೇರಿ ವನದಲ್ಲಿ “ಸಾಂಸ್ಕøತಿಕ ಸಂಜೆ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸ್ಯಾಕ್ಸೋಪೋನ್ (ಶ್ರೀ ಪದ್ಮನಾಭ ಮತ್ತು ತಂಡ, ಮೇಲುಕೋಟೆರವರಿಂದ)  ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಇನ್ನು ಮುಂದೆ ಪ್ರತಿ ಭಾನುವಾರ ನಡೆಸಲಾಗುವುದು. ಸಾರ್ವಜನಿಕರು / ಕಲಾವಿದರು ವೀಕ್ಷಿಸಬಹುದು, ಮತ್ತು ಭಾಗವಹಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಎನ್. ಅಣ್ಣೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.24 ರಂದು ಶ್ರೀರಂಗಪಟ್ಟಣದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 24 ರಂದು ಬೆಳಿಗ್ಗೆ 10.30ಕ್ಕೆ ಶ್ರೀರಂಗಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಏರ್ಪಡಿಸಲಾಗಿದೆ.  ಶ್ರೀರಂಗಪಟ್ಟಣ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಂಡ್ಯ ಜಿಲ್ಲಾ ಗ್ರಾಹಕ  ವೇದಿಕೆಯ ಅಧ್ಯಕ್ಷರಾದ ವಿ.ಎಂ.ಆರಾಧ್ಯ ಅವರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


Thursday, 11 December 2014

                             ಆರಾಧ್ಯ ಜನಾಂಗದಿಂದ ಡಿ.13 ರಂದು ಕುರುಕ್ಷೇತ್ರ ನಾಟಕ
ಮಂಡ್ಯ,ಡಿ.11-ಪೌರೋಹಿತ್ಯ ಶಾಸ್ತ್ರ, ಆಯುರ್ವೇದ ಪದ್ಧತಿಯನ್ನು ಕಸುಬಾಗಿ ಅವಲಂಬಿಸಿರುವ ಆರಾಧ್ಯ ಜನಾಂಗದ ವತಿಯಿಂದ ಡಿಸೆಂಬರ್ 13 ರಂದು  ಬೆಳಿಗ್ಗೆ 10.30ಕ್ಕೆ ನಗರದ ಕಾಲಾಮಂದಿರದಲ್ಲಿ ಕುರುಕ್ಷೇತ್ರ ಅಥವಾ ಧರ್ಮಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆರಾಧ್ಯ ಯುವಜನ ಸಮಿತಿ ಕಾರ್ಯದರ್ಶಿ ಭಾಸ್ಕರ್ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರುಕ್ಮಿಣಿ, ಕುಂತಿ, ದ್ರೌಪತಿ, ಸುಭದ್ರ ಇತ್ಯಾದಿ ಸ್ತ್ರೀ ಪಾತ್ರಧಾರಿಗಳು ನಾಟಕದಲ್ಲಿನ ಇತರ ಪಾತ್ರಧಾರಿಗಳೂ ಆರಾಧ್ಯ ಜನಾಂಗದ ಹತ್ತಿರದ ಸಂಬಂಧಿಗಳಾಗಿರುವುದು ವಿಶೇಷವಾಗಿದೆ.
ಸಾಹಳ್ಳಿ ಗುರುಮಠದ ಎಸ್.ಬಿ.ಬಸವಾರಾಧ್ಯರು ದುರ್ಯೋಧನನಾಗಿ ಪಾತ್ರ ನಿರ್ವಹಿಸುತ್ತಿದ್ದು, ಅವರ ಕುಟುಂಬದ ಸದಸ್ಯರು ಸಹ ನಾಟಕದ ಪಾತ್ರಧಾರಿಗಳಾಗಿದ್ದಾರೆ.ಕೊತ್ತತ್ತಿ ಗುರುಮಠದ ಕುಮಾರಾರಾಧ್ಯ ದ್ರೋಣನಾಗಿ, ಮಂಗಲ ಗುರು ಮಠದ ಪುಟ್ಟರೇಣುಕಾರಾಧ್ಯ ಶಕುನಿಯಾಗಿ, ಇವರ ತಮ್ಮ ವಾಗೀಶಆರಾಧ್ಯ ಅಭಿಮನ್ಯು ಪಾತ್ರದಲ್ಲಿ ನಟಿಸಲಿದ್ದಾರೆ ಎಂದರು.
ಬೆಕ್ಕಳಲೆ ಗುರುಮಠದವರು ಕೃಷ್ಣನ ಪಾತ್ರದಾರಿ ಆರಾಧ್ಯ ವಾಗೀಶ್ ಚಂದ್ರಗುರು ಸೇರಿದಂತೆ ಧರ್ಮರಾಯ, ಭೀಮ, ಅರ್ಜುನ ಇವರುಗಳನ್ನೊಳಗೊಂಡಂತೆ ಪರಸ್ಪರ ಬಂಧು-ಬಾಂಧವರುಗಳು ನಾಟಕಗಳಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಟಿ.ಆರ್.ಅಶೋಕ್, ಜಯಶಂಕರ ಆರಾಧ್ಯ, ಶಶಿಕಲಾ ಜಯಶಂಕರ ಆರಾಧ್ಯ. ಹಾಗೂ ಸಿ. ಜಯಶಂಕರ ಆರಾಧ್ಯ ಇದ್ದರು.


ಡಿ.14 ರಂದು ಗುರು ಅಭಿವಂದನಾ ಕಾರ್ಯಕ್ರಮ
ಮಂಡ್ಯ,ಡಿ.11- ತಾಲ್ಲೂಕಿನ ಗೊರವಾಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನಿವೃತ್ತ ಹಾಗೂ ಹಾಲಿ ಸೇವೆ ಸಲ್ಲಿಸುತ್ತಿರುವವರಿಗೆ ಗೌರವಿಸಿ ಸನ್ಮಾನಿಸುವ ಸಲುವಾಗಿ ಶಾಲೆಯ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗ ಸದಸ್ಯರ ಪ್ರಕಟಣೆ ತಿಳಿಸಿದೆ.
ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಗ್ರಾಮದ ಸುತ್ತಮುತ್ತಲ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ, ನೌಕರಿ ಮಾಡುತ್ತಿರುವ, ಬೇರೆಡೆ ಮಧುವೆಗಾಗಿ ವಾಸುತ್ತಿರುವ ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸುವಂತೆ ಕೋರಿದೆ.
4 ಗ್ರಾ.ಪಂ. ಅಧ್ಯಕ್ಷರಿಗೆ ಸುವರ್ಣ ಸೌಧದಲ್ಲಿ ಉಪಹಾರ ಕೂಟಕ್ಕೆ ಸಚಿವರಿಂದ ಆಹ್ವಾನ
ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಿದ ಮಂಡ್ಯ ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಸುವರ್ಣ ಸೌಧದಲ್ಲಿ ಶುಕ್ರವಾರ ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಟಿ. ಮಂಜುಳ ಪರಮೇಶ್ ಅವರು ಉಪಹಾರ ಕೂಟಕ್ಕೆ ಬೆಳಗಾವಿಗೆ ತೆರಳಿದ ಈ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಗುರುವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೀಳ್ಕೊಡುಗೆ ನೀಡಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿಯ ಹರಿರಾಯನಹಳ್ಳಿ, ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕದಲೀಪುರ, ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಗಣಗನೂರು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮ ಪಂಚಾಯಿತಿಯ ತರೀಪುರ ಗ್ರಾಮಗಳು ಶೇ.100 ರಷ್ಟು ಸಾಧನೆ ಮಾಡಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು.
ಹರಿರಾಯನಪುರದಲ್ಲಿ 112 ಕುಟುಂಬಗಳಿದ್ದು ಯಾವೊಂದು ಕುಟುಂಬದಲ್ಲೂ ಶೌಚಾಲಯ ಇರಲಿಲ್ಲ. ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಆಂದೋಲನ ಪ್ರಾರಂಭವಾದ ನಂತರ ಪಿಡಿಒಗಳು ಆಯಾ ಗ್ರಾಮದ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರ ಸಹಕಾರದೊಂದಿಗೆ ಇಡೀ ಗ್ರಾಮವನ್ನು ‘ಬಯಲು ಶೌಚ ಮುಕ್ತ’ ಗ್ರಾಮವನ್ನಾಗಿ ಪರಿವರ್ತಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಾಲಿನ ಆರಂಭದಲ್ಲಿ ಕದಲೀಪುರದಲ್ಲಿ 63 ಕುಟುಂಬಗಳಿದ್ದು, ಕೇವಲ 8 ಶೌಚಾಲಯಗಳಿದ್ದವು. ಗಣಗನೂರು ಗ್ರಾಮದಲ್ಲಿ 55 ಕುಟುಂಬಗಳ ಪೈಕಿ 7 ಶೌಚಾಲಯಗಳಿದ್ದವು. ತರೀಪುರದಲ್ಲಿ 174 ಕುಟುಂಬಗಳ ಪೈಕಿ 44 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಈ ಎಲ್ಲಾ ಗ್ರಾಮಗಳು ಈಗ ಶೇ. 100 ರಷ್ಟು ಸಾಧನೆ ಮಾಡಿವೆ ಎಂದು ಅವರು ತಿಳಿಸಿದರು.
ಭಾರತ ನಿರ್ಮಾಣ ಸ್ವಯಂ ಸೇವಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳು, ಸಾಕ್ಷರ ಪ್ರೇರಕರು, ಯುವಕ ಹಾಗೂ ಯುವತಿ ಮಂಡಳಿಗಳು, ಸ್ವಚ್ಛತಾ ಧೂತರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ನೌಕರರ ನೆರವಿನಿಂದ ಈ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಆರೋಗ್ಯ ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪ್ರತಿ ಕುಟುಂಬದಲ್ಲೂ ಶೌಚಾಲಯ ನಿರ್ಮಿಸಬೇಕು ಎಂದು ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ|| ಅಂಬರೀಷ್ ಅವರ ಧ್ವನಿ ಮುದ್ರಣವನ್ನು ಆಟೋಗಳ ಪ್ರಚಾರ ಮಾಡಲಾಗಿದೆ.
ಅಗ್ರಹಾರಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಮ್ಮ, ಪಿಡಿಒ ಕೆ.ದೇವೇಗೌಡ, ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ಪಿಡಿಒ ಬೇಬಿ ಶ್ವೇತಾ, ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ, ಪಿಡಿಒ ಪ್ರಶಾಂತ ಬಾಬು, ಮಹದೇವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಪಿಡಿಒ ಕೆ.ರಾಜೇಶ್ವರ ಅವರು ಸಚಿವರ ಉಪಹಾರ ಕೂಟಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಎನ್.ಡಿ.ಪ್ರಕಾಶ್ ಹಾಗೂ ಗೋಪಾಲ್ ಅವರು ಉಪಸ್ಥಿತರಿದ್ದರು.
                                    ಡಿ.16 ರಂದು ಜಿ.ಪಂ ಕೆ.ಡಿ.ಪಿ ಸಭೆ
      ಮಂಡ್ಯ ಡಿ.11- ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) 2014-15ನೇ ಸಾಲಿನ ನವೆಂಬರ್ 2014ರ ಅಂತ್ಯದವರೆಗಿನ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಡಿಸೆಂಬರ್ 16 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
              ಸ್ಯಾನಿಟರಿ ನ್ಯಾಪ್‍ಕಿನ್ ತಯಾರಿಕಾ ಘಟಕ ಸ್ಥಾಪನೆ : ಅರ್ಜಿ ಆಹ್ವಾನ.
    ಸ್ತ್ರೀಶಕ್ತಿ ಗುಂಪು/ಒಕ್ಕೂಟಗಳ ಮೂಲಕ ಜಿಲ್ಲೆ/ತಾಲ್ಲೂಕುಗಳಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಸರ್ಕಾರವು ಉದ್ದೇಶಿಸಿದ್ದು, ಯೋಜನೆಯಡಿ ಘಟಕ ಪ್ರಾರಂಭಿಸಲು ಬಯಸುವ ಸ್ತ್ರೀಶಕ್ತಿ ಗುಂಪುಗಳು/ಒಕ್ಕೂಟಗಳು ಯಂತ್ರೋಪಕರಣಗಳ ಖರೀದಿಗೆ ಅವಶ್ಯವಿರುವ ಅಂದಾಜು ರೂ.3.00 ದಿಂದ 3.50 ಲಕ್ಷ ಬಂಡವಾಳ ಹೂಡಲು ಶಕ್ತರಿರಬೇಕು. ಹಾಗೂ ಘಟಕ ಸ್ಥಾಪಿಸಲು ನೀರು, ವಿದ್ಯುಚ್ಛಕ್ತಿ ಸೌಲಭ್ಯದೊಂದಿಗೆ ಕನಿಷ್ಠ 3 ರಿಂದ 4 ಕೊಠಡಿಗಳುಳ್ಳ ಸ್ಥಳಾವಕಾಶ ಹೊಂದಿರಬೇಕು. ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಮೇಲಿನ ಅರ್ಹತೆ ಹೊಂದಿರುವ ಸ್ತ್ರೀಶಕ್ತಿ ಗುಂಪು/ಒಕ್ಕೂಟಗಳು ನಿಗದಿತ ಅರ್ಜಿಯನ್ನು ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಥವಾ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 18 ರಂದು ಸಂಜೆ 5.30ರೊಳಗೆ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸುವುದು ಎಂದು ಶ್ರೀರಂಗಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಯುಕ್ತಿಕ ಕಾರ್ಯಕ್ರಮದಲ್ಲಿ ಫಲಾನುಭವಿಗಳ ಆಯ್ಕೆ: ಸಾರ್ವಜನಿಕರಿಂದ ಆಕ್ಷೇಪಣೆಗಳು ಆಹ್ವಾನ
     2014-15ನೇ ಸಾಲಿನಲ್ಲಿ ಎಸ್.ಎಫ್.ಸಿ ಹಾಗೂ ಪುರಸಭಾ ನಿಧಿಯಲ್ಲಿ ಶೇ22.75, ಶೇ7.25 ಹಾಗೂ ಶೇ3 ರ ಕಾರ್ಯಕ್ರಮಗಳಲ್ಲಿ ಬರುವ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಬರುವ ವೈಯುಕ್ತಿಕ ಕಾರ್ಯಕ್ರಮಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ದಿನಾಂಕ;06-11-2014ರಂದು ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಿ ಕಚೇರಿಯ ನಾಮಫಲಕದಲ್ಲಿ ತಾತ್ಕಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ಫಲಾನುಭವಿಗಳ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸುವವರು ರುಜುವಾತು ಪಡಿಸುವ ದಾಖಲೆಗಳೊಂದಿಗೆ ಡಿಸೆಂಬರ್ 20 ರ ಸಂಜೆ 5-30 ಗಂಟೆಗೆ ಸಲ್ಲಿಸಲು ಕೋರಿದೆ. ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಮದ್ದೂರು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ : ಡಿ.12 ಬೆಳೆ ವಿಮೆ
 ನೊಂದಾಣಿಗೆ ಕಡೆಯ ದಿನ

ರಾಜ್ಯ ಸರ್ಕಾರದ ಆದೇಶದಂತೆ ದಿನಾಂಕ: 19-11-2014ರ ಅನ್ವಯ 2014-15ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಬೆಳೆ ವಿಮಾ ಕಾರ್ಯಕ್ರಮದಡಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದೆ. ಇವುಗಳಲ್ಲಿ ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಮತ್ತು ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ  ಎಂ.ಎನ್.ರಾಜಸುಲೋಚನರವರು ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟ: ಹಿಂಗಾರು ಹಂಗಾಮಿಗೆ ಸದರಿ ಯೋಜನೆಯಡಿ ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಹುರುಳಿ (ಮಳೆಯಾಶ್ರಿತ) ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ. ಬೇಸಿಗೆ ಹಂಗಾಮಿಗೆ ಸದರಿ ಯೋಜನೆಯಡಿ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ.
ಹೋಬಳಿಮಟ್ಟ: ಹಿಂಗಾರು ಹಂಗಾಮಿಗೆ ಸದರಿ ಯೋಜನೆಯಡಿ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ) ಮತ್ತು ಹುರುಳಿ (ಮಳೆಯಾಶ್ರಿತ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ. ಬೇಸಿಗೆ ಹಂಗಾಮಿಗೆ ಸದರಿ ಯೋಜನೆಯಡಿ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ಮತ್ತು ರಾಗಿ (ನೀರಾವರಿ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ.

ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆಯು ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರು ಹಿಂಗಾರು ಹಂಗಾಮಿನ ಬೆಳೆ ವಿಮೆಗೆ ನೊಂದಾಯಿಸಲು ದಿನಾಂಕ 31.12.2014 ಕಡೆಯ ದಿನವಾಗಿರುತ್ತದೆ ಹಾಗೂ ಬೇಸಿಗೆ ಹಂಗಾಮಿಗೆ ನೊಂದಾಯಿಸಲು ದಿನಾಂಕ 28.02.2015 ಕಡೆಯ ದಿನವಾಗಿರುತ್ತದೆ.
ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ  ಗಂಡಸಿನ ಪತ್ತೆಗೆ ಸಹಕರಿಸಲು ಮನವಿ
ಬೆಟ್ಟಾಚಾರ್ ಎಂಬುವರು ಸುಮಾರು 14 ವರ್ಷಗಳ ಹಿಂದೆ ತಿರುಪತಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೋದವರು ಇದೂವರೆವಿಗೂ ಬಂದಿರುವುದಿಲ್ಲ ಎಂದು  ಪೊಲೀಸ್ ಸಬ್‍ಇನ್ಸ್‍ಪೆಕ್ಟರ್, ಗ್ರಾಮಾಂತರ ಪೊಲೀಸ್ ಠಾಣೆ, ಮಂಡ್ಯ ಇವರಿಗೆ ದೂರು ಸಲ್ಲಿಸಿರುತ್ತಾರೆ. 
 ಕಾಣೆಯಾದ ಗಂಡಸಿನ ಚಹರೆ ಇಂತಿದೆ.  ವಯಸ್ಸು 79 ವರ್ಷ, 165 ಸೆಂ.ಮೀ. ಎತ್ತರ, ಗೋದಿ ಮೈಬಣ್ಣ, ಕೋಲು ಮುಖ ಇರುತ್ತದೆ.  ಕಾಣೆಯಾದ ಸಂದರ್ಭದಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್‍ನ್ನು ಧರಿಸಿದ್ದು, ಕನ್ನಡ ಮಾತನಾಡುತ್ತಾರೆ. ಈ ಚಹರೆ ಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಕೂಡಲೇ  ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ: 08232-224500 ಹಾಗೂ ಗ್ರಾಮಾಂತರ  ಪೊಲೀಸ್ ಠಾಣೆ 08232-221107 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. (ಭಾವಚಿತ್ರ ಲಗತ್ತಿಸಿದೆ)
ಮಹಿಳಾ ಮಂಡಳಿಗಳು ಮತ್ತು ಸ್ವಸಹಾಯ ಸಂಘಗಳಿಗೆ ಧನಸಹಾಯ
ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹವನ್ನು ನೀಡಲು ಜಿಲ್ಲೆಗಳಲ್ಲಿರುವ ಮಹಿಳಾ ಮಂಡಳಿಗಳು ಮತ್ತು ಸ್ವ ಸಹಾಯ ಸಂಘಗಳಿಗೆ ನಿಯಮಾನುಸಾರ ಧನಸಹಾಯ ನೀಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉದ್ದೇಶಿಸಿದೆ. ಮಹಿಳಾ ಮಂಡಳಿಗಳು ಮತ್ತು ಸ್ವಸಹಾಯ ಸಂಘಗಳು ನೋಂದಣಿಯಾಗಿ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿದ್ದಲ್ಲಿ ಸಾಂಸ್ಕøತಿಕ ಚಟುವಟಿಕೆಗಳಿಗೆ ಧನಸಹಾಯ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಿದೆ.
ನೋಂದಣಿಯಾದ ವೃದ್ಧಾಶ್ರಮಗಳಲ್ಲಿ ಕಲಾಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ
ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ 50 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರುಗಳು ನೋಂದಣಿಯಾದ ವೃದ್ಧಾಶ್ರಮಗಳಲ್ಲಿ ತಮ್ಮಲ್ಲಿರುವ ಕಲಾ ಪ್ರತಿಭೆಗಳಾದ ಕಾವ್ಯ-ವಾಚನ, ಗಮಕ, ಹರಿಕಥೆ, ಶಾಸ್ತ್ರೀಯ ಸಂಗೀತ ಮತ್ತು ಜಾನಪದ ರಂಗರೂಪಕ ಇತ್ಯಾದಿ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಅವಕಾಶವಿದ್ದು, ಆಯಾ ಜಿಲ್ಲೆಗಳಲ್ಲಿರುವ ವೃದ್ಧಾಶ್ರಮಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ಅವಕಾಶವಿರುತ್ತದೆ. ಈ ರೀತಿ ನಡೆಸಿಕೊಡುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪ್ರಾಯೋಜಿಸುವ ಯೋಜನೆಯನ್ನು ಇಲಾಖೆ ರೂಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಿದೆ.
ಗ್ರಾಮೀಣ ಭಾಗದ ಅಸಂಘಟಿತ ಕಲಾಸಕ್ತರ ನಾಟಕಗಳಿಗೆ ಅವಕಾಶ
ಗ್ರಾಮೀಣ ಭಾಗದ ಅಸಂಘಟಿತ ಕಲಾಸಕ್ತರು ಸಂದರ್ಭಾನುಸಾರ ಗ್ರಾಮ ಮಟ್ಟದಲ್ಲಿ ಸುತ್ತಮುತ್ತಲಿನ ಗ್ರಾಮ ಕಲಾವಿದರು ಒಟ್ಟುಗೂಡಿ ಏರ್ಪಡಿಸುವಂತಹ ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳಿಗೆ ಪ್ರಾಯೋಜನೆ ನೀಡುವ ಯೋಜನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಾರಿಗೊಳಿಸುತ್ತಿದೆ. ತಮ್ಮ ಗ್ರಾಮ ವ್ಯಾಪ್ತಿಗಳಲ್ಲಿ ಅಸಂಘಟಿತ ಕಲಾಸಕ್ತರು ಒಟ್ಟುಗೂಡಿ ನಾಟಕಗಳನ್ನು ಪ್ರದರ್ಶಿಸಿದ್ದಲ್ಲಿ, ಆ ನಾಟಕಗಳ ಪ್ರದರ್ಶಿತ ವೆಚ್ಚಗಳನ್ನು ಇಲಾಖೆಯ ನಿಯಮಾನುಸಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಿದೆ.
                    ತೋಟಗಾರಿಕೆ ವಿಭಾಗದ ಸಪೋಟ, ಮಾವು, ಹುಣಸೇ ಫಸಲುಗಳ ಹರಾಜು
ಶಿವಾರಗುಡ್ಡ ವಿದ್ಯಾಪೀಠದಲ್ಲಿರುವ ತೋಟಗಾರಿಕೆ ವಿಭಾಗದ ಸಪೋಟ, ಮಾವು, ಹುಣಸೇ ಫಸಲುಗಳನ್ನು ಡಿಸೆಂಬರ್ 30 ರಂದು ಮಧ್ಯಾಹ್ನ 12.30 ಗಂಟೆಗೆ ಶಿವಾರಗುಡ್ಡ ವಿದ್ಯಾಪೀಠ ಕಚೇರಿಯಲ್ಲಿ ಟೆಂಡರ್ ಕಂ ಹರಾಜು ಏರ್ಪಡಿಸಲಾಗಿದೆ. ಆಸಕ್ತರು ಡಿಸೆಂಬರ್ 29 ರ ಸಂಜೆ 4.00 ಗಂಟೆಯೊಳಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಶಿವಾರಗುಡ್ಡ ವಿದ್ಯಾಪೀಠ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ಹೆಸರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಶಿವಾರಗುಡ್ಡ ವಿದ್ಯಾಪೀಠ, ಮಂಡ್ಯ ಅಥವಾ ಪ್ರಾಚಾರ್ಯರು, ಶಿವಾರಗುಡ್ಡ ವಿದ್ಯಾಪೀಠ (ದೂರವಾಣಿ ಸಂಖ್ಯೆ 08232-278257/224636) ಇವರನ್ನು ಸಂಪರ್ಕಿಸುವಂತೆ ಕೋರಿದೆ.
ಕಲಾಮಂದಿರ ಆಧುನೀಕರಣ : ಸಾರ್ವಜನಿಕರು/ಸಂಘ ಸಂಸ್ಥೆಗಳು ಸಹಕರಿಸಲು ಮನವಿ
ಮಂಡ್ಯ ಜಿಲ್ಲೆಯ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ  ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವನ್ನು ಆಧುನೀಕರಿಸಲು ವಿದ್ಯುತ್ ದೀಪಗಳು, ಸೌಂಡ್, ಸುಣ್ಣ ಬಣ್ಣ ಬಳಿಯಲು ಕಲಾಮಂದಿರಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 17 ರಿಂದ ಮುಂದಿನ ದಿನಗಳು ಕಲಾಮಂದಿರ ಪೂರ್ಣ ದುರಸ್ತಿಯಾಗುವವರೆಗೆ ಕಲಾಮಂದಿರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಹಕರಿಸಬೇಕಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆ
      ಬೆಂಗಳೂರಿನ ರಾಜ್ಯ ಸಹಕಾರ ಮಹಾ ಮಂಡಳಿ, ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 13 ರಂದು ಬೆಳಿಗ್ಗೆ 10.00 ಗಂಟೆಗೆ ಮಂಡ್ಯದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಡ್ಯ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಂಡ್ಯ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಎಂ.ಶ್ರೀಕಂಠಯ್ಯ  ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷರಾದ ಕೆ.ಜಿ.ತಮ್ಮಣ್ಣ ಅವರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.








ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ  ಅಧ್ಯಕ್ಷತೆಯಲ್ಲಿ ದಿನಾಂಕ : 13-12-2014ರಂದು ಶನಿವಾರ ಬೆಳಿಗ್ಗೆ 10:00 ಗಂಟೆಗೆ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ, ಶಾಂತಿ ಸಾಗರ್ ಹತ್ತಿರ, ಕುವೆಂಪುನಗರ, ಮೈಸೂರು ಇಲ್ಲಿ ನಡೆಯಲಿರುವ ರಾಜೀವ್ ಗಾಂಧಿ ಆವಾವ್ ಯೋಜನೆಗೆ ಆಯ್ಕೆಯಾದ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1329 ಫಲಾನುಭವಿಗಳಿಗೆ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ .
                                   ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಮಹಾಮಂಡಳಿಯ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಿನಗೂಲಿ ನೌಕರರ ವೇತನ ಹೆಚ್ಚಿಸಬೇಕು, ರಜೆ ಸೌಲಭ್ಯ ನೀಡಬೇಕು, ತುಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆ ಶೇ 75 ರಷ್ಟು ನೀಡಲು ಆದೇಶಿಸಿದ್ದರೂ, ಇದನ್ನು ಜಾರಿಗೆ ತರಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಹಾಮಂಡಲದ ಅಧ್ಯಕ್ಷ ಕೆ.ಎಸ್.ಶರ್ಮಾ ಮಾತನಾಡಿ, ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಶೇ ನೂರರಷ್ಟುನ್ನು ದಿನಗೂಲಿ ನೌಕರರಿಗೆ ನೀಡಬೇಕು, ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಹ ದಿನಗೂಲಿ ನೌಕರರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ದಿನಗೂಲಿ ನೌಕರರು ಭಾಗವಹಿಸಿದ್ದರು.
ಅಧಿವೇಶನಗಳಲ್ಲಿ ಶಾಸಕ ವರ್ತನೆಗೆ ಕಡಿವಾಣ ಹಾಕಲು ಆಗ್ರಹಿಸಿ ಪ್ರತಿಭಟನೆ
ಮೈಸೂರು: ವಿಧಾನಸಭೆ ಹಾಗೂ ಲೋಕಸಭೆ ಅಧಿವೇಶನಗಳಲ್ಲಿ ಶಾಸಕರು ಹಾಗೂ ಸಂಸದರ ವರ್ತನೆಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ನಗರದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ನ್ಯಾಯಲದ ಮುಂದೆ ಇರುವ  ಗಾಂಧಿ ಪ್ರತಿಮೆ ಮುಂದೆ  ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ವಿಧಾನ ಸಭೆ ಅಧಿವೇಶನದ ವೇಳೆ ಕೆಲ ಶಾಸಕರು, ಸಂಸದರು ಮೊಬೈಲ್‍ನಲ್ಲಿ ದೃಶ್ಯಗಳು ಹಾಗೂ ಪೋಟೊಗಳನ್ನು ನೋಡುವುದು, ಗೇಮ್ ಆಡುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದು, ಇದರಿಂದಾಗಿ ಅಧಿವೇಶನದ ಪಾವಿತ್ರ್ಯತೆ ಹಾಳಾಗುತ್ತಿದೆ. ಆದ ಕಾರಣ ಇದನ್ನು ನಿಯಂತ್ರಿಸುವ ಸಲುವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು, ಶಾಸಕರಿಗೆ ಹಾಗೂ ಸಂಸದರಿಗೆ  ನೀಡಲಾಗುತ್ತಿರುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ಕೆಲವು ಮಾನದಂಡಗಳನ್ನು ಘೋಷಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಡೈರಿ ವೆಂಕಟೇಶ್, ಹಿನಕಲ್ ಉದಯ್, ಹೇಮಾವತಿ, ವಿಕ್ರಾಂತ್ ದೇವೇಗೌಡ, ಆರ್.ರಾಜು, ಶ್ರೀನಿವಾಸ್, ಆರ್.ಹೆಚ್.ಕುಮಾರ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಸತ್ಯಾನಗರ ಅಭಿವೃದ್ಧಿಗೆ  ಸಾರ್ವಜನಿಕರ ಒತ್ತಾಯ
ಮೈಸೂರು,ಡಿ.11- ಮೈಸೂರು ನಗರದ  ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಗೊಳಪಡುವ ವಾರ್ಡ್ ನಂ. 51ರ ಸತ್ಯಾ ನಗರದಲ್ಲಿ  ಮೂಲಭೂತ ಸಮಸ್ಯೆಗಳಿದ್ದು,  ಅವುಗಳನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿ  ಸತ್ಯಾನಗರ ಬಡಾವಣೆಯ ಮುಖಂಡರುಗಳು ಆ ಕ್ಷೇತ್ರದ ಶಾಸಕರಾದ ತನ್ವೀರ್‍ಸೇಠ್ ರವರಲ್ಲಿ  ಮನವಿಮಾಡಿಕೊಂಡಿದ್ದಾರೆ.
   ಬಡಾವಣೆಯಲ್ಲಿ  ಒಳಚರಂಡಿ ವ್ಯವಸ್ಥೆ ಸರಿಯಿಲ್ಲ,  ಮೋರಿಗಳು ಸ್ವಚ್ಚತೆ ಕಂಡಿಲ್ಲ,  ಕುಡಿಯುವ ನೀರಿನ ತೊಂದರೆ ಇದೆ, ರಸ್ತೆಗಳೆಲ್ಲಾ ಕಿತ್ತು ಹಳ್ಳ ಕೊಳ್ಳಗಳಿಂದ ಕೂಡಿವೆ,  ಇಲ್ಲಿನ ರಸ್ತೆಗಳು ಡಾಂಬರೀಕರಣ ಕಂಡು  ತುಂಬಾ ವರ್ಷಗಳೇ ಕಳೆದಿವೆ, ಬಡಾವಣ ಸ್ವಚ್ಚತೆ ಇರದ ಕಾರಣ ರೋಗ ರುಜಿನಗಳು ಬರುವ ಸಾಧ್ಯತೆಗಳಿರುತ್ತವೆ ಆದ್ದರಿಂದ ಶಾಸಕರು  ಸತ್ಯಾ ನಗರದ ಅಭಿವೃದ್ಧಿಗೆ  ಕ್ರಮಕೈಗೊಳ್ಳ ಬೇಕೆಂದು ಕೋರಿಕೊಂಡರು.
 ಇವರ ಕೋರಿಕೆ ಮೇರೆಗೆ  ಸ್ಥಳಕ್ಕೆ ಭೇಟಿ ನೀಡಿದ ಶಾಸಕ ತನ್ವೀರ್ ಸೇಠ್,  ಅಲ್ಲಿನ ಪರಿಸ್ಥಿತಿಯನ್ನ ಕುದ್ದು ಅವಲೋಕಿಸಿ  ಅಲ್ಲಿನ ಮುಖಂಡರೊಡನೆ ಸಮಾಲೋಚನೆ ನಡೆಸಿದರು. ನಂತರ  ಮಾತನಾಡಿ  ಈ ಬಡಾವಣೆಯ ಅಭಿವೃದ್ಧಿಗಾಗಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು, ಸಾಸಕರ ಅನುಧಾನದ ನಿಧಿ ಒಮದೂ ಮುಕ್ಕಾಲು ಕೋಟಿ ಹಣ ರೆಡಿ ಇದೆ ಆ ಹಣದಲ್ಲಿ ರಸ್ತೆ ಅಭಿವೃದ್ಧಿ, ಮೋರಿ ರಿಪೇರಿ, ಒಳಚರಂಡಿ ಮಾಡಿಸಿಕೊಟ್ಟು ಕುಡಿಯುವ ನೀರು ಸರಬರಾಜಿಗಾಗಿ ಮಾತುಕತೆ ನಡೆಸಿ  ನೀರು ಪೂರೈಕೆಗೆ  ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
  ಈ ಸಮದರ್ಭದಲ್ಲಿ, ಸತ್ಯಾನಗರ ಬಡಾವಣಡಯ ಮುಖಂಡರುಗಳಾದ ಸಹಿನ್‍ಶಾ ಅಹ್ಮದ್, ಮೈನಾರಿಟಿ ಕಮಿಟಿ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಅಹ್ಮದ್,  ಶೌಕxತ್ ಆಲಿಕಾನ್, ಅಹ್ಮದ್‍ಪಾಷ, ಜಾವುಲ್ಲಾ, ಸೈಯದ್ ನಸ್ರುಲ್ಲಾ, ಜಬ್ಬಾರ್‍ಅಹ್ಮದ್, ಅಸ್ಲಮ್‍ಷರಿಫ್ ಸೆರಿದಂತೆ  ಹಲವಾರುಮಂದಿ ಉಪಸ್ಥಿತರಿದ್ದರು.

Wednesday, 10 December 2014

ನವ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೇಸ್ ಸಂಸದರ ನಿಯೋಗ ಕೇಂದ್ರ ಕೃಷಿ ಸಚಿವ ರನ್ನ ಭೇಟಿ ಮಾಡಿ ಬರ ನಿರ್ವಾಹಣೆಗೆ 779.20 ಕೋಟಿ ಮತ್ತು ಪರಿಯಾಯ ಬೆಳೆಗೆ ಹಾಗೂ ತೆಂಗು ನಾಟಿಗೆ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ ಚಾಮರಾಜನಗರ ಸಂಸದ ಧೃವನಾರಾಯಣ್,ಕನಕಪುರ ಸಂಸದ ಡಿ.ಕೆ.ಸುರೇಶ್,ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ,ಬಿ.ಎನ್.ಚಂದ್ರಪ್ಪ,ಬಿ.ವಿ.ನಾಯಕ್.ನಳಿನ್ ಕುಮಾರ್ ಕಟಿಲು,ಉಪಸ್ಥಿತರಿದ್ದರು.

ನವ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೇಸ್ ಸಂಸದರ ನಿಯೋಗ ಕೇಂದ್ರ ಕೃಷಿ ಸಚಿವ ರನ್ನ ಭೇಟಿ ಮಾಡಿ ಬರ ನಿರ್ವಾಹಣೆಗೆ 779.20 ಕೋಟಿ ಮತ್ತು ಪರಿಯಾಯ ಬೆಳೆಗೆ ಹಾಗೂ ತೆಂಗು ನಾಟಿಗೆ  ಹೆಚ್ಚು ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ ಚಾಮರಾಜನಗರ ಸಂಸದ ಧೃವನಾರಾಯಣ್,ಕನಕಪುರ ಸಂಸದ ಡಿ.ಕೆ.ಸುರೇಶ್,ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ,ಬಿ.ಎನ್.ಚಂದ್ರಪ್ಪ,ಬಿ.ವಿ.ನಾಯಕ್.ನಳಿನ್ ಕುಮಾರ್ ಕಟಿಲು,ಉಪಸ್ಥಿತರಿದ್ದರು.

ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ,ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್,ಸಕ್ಕರೆ ಸಚಿವ ಹೆಚ್.ಎಸ್.ಮಹದೇವ್ ಪ್ರಸಾದ್,ದಿನೇಶ್ ಗುಂಡೂರಾವ್,ಶರಣ ಪ್ರಕಾಶ್ ಪಾಟೀಲ್,ನಿರಾವರಿ ಸಚಿವ ಪಾಟೀಲ್.ಇದ್ದಾರೆ


ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ,ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್,ಸಕ್ಕರೆ ಸಚಿವ ಹೆಚ್.ಎಸ್.ಮಹದೇವ್ ಪ್ರಸಾದ್,ದಿನೇಶ್ ಗುಂಡೂರಾವ್,ಶರಣ ಪ್ರಕಾಶ್ ಪಾಟೀಲ್,ನಿರಾವರಿ ಸಚಿವ ಪಾಟೀಲ್.ಇದ್ದಾರೆ

ನವ ದೆಹಲಿ-ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃಧ್ದಿ ನಿಗಮದ ಅಧ್ಯಕ್ಷೆ ಕು.ಮಲ್ಲಾಜಮ್ಮ ರಾಷ್ರ್ಠೀಯಾ scst.ಹಣಕಾಸು ಮತ್ತು ಅಭಿವೃಧ್ಧಿ ನಿಗಮದ ವ್ಯವಸ್ಥಾಪಕ ನರ್ಧೇಶಕ ಆರ್,ಕೆ.ಸಿಂಗ್ ರವರನ್ನ ಭೇಟಿ ಮಾಡಿ ಭೂಕರೀಧಿ ಯೋಜನೆಯಡಿಯಲ್ಲಿ 50 ಕೋಟಿ ಹಣವನ್ನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸದರು.

ನವ ದೆಹಲಿ-ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃಧ್ದಿ ನಿಗಮದ ಅಧ್ಯಕ್ಷೆ ಕು.ಮಲ್ಲಾಜಮ್ಮ ರಾಷ್ರ್ಠೀಯಾ scst.ಹಣಕಾಸು ಮತ್ತು ಅಭಿವೃಧ್ಧಿ ನಿಗಮದ ವ್ಯವಸ್ಥಾಪಕ ನರ್ಧೇಶಕ ಆರ್,ಕೆ.ಸಿಂಗ್ ರವರನ್ನ ಭೇಟಿ ಮಾಡಿ ಭೂಕರೀಧಿ ಯೋಜನೆಯಡಿಯಲ್ಲಿ 50 ಕೋಟಿ ಹಣವನ್ನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸದರು.