Monday, 7 March 2016

ವಿಶ್ವ ಮಹಿಳಾ ದಿನಾಚರಣೆ





ವಿಶ್ವ ಮಹಿಳಾ ದಿನಾಚರಣೆ-2016ಈ ದಿನದ ಬಗ್ಗೆ ಅದೆಷ್ಟು ಮಹಿಳೆಯರಿಗೆ ಗೊತ್ತು?ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದಆಚರಣೆಗೊಂಡ ದಿನವೂ ಅಲ್ಲ. ನ್ಯೂರ್ಯಾರ್ಕ್‍ನಲ್ಲಿ ಕ್ಲಾರಾಜೆಟ್‍ಕಿನ್ ಎಂಬ ಮಹಿಳೆ ಕಾರ್ಮಿಕ ಕೆಲಸಕ್ಕಾಗಿ, ಸಮಾನವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟನಡೆಸಿ, ಗೆಲುವು ಸಾಧಿಸಿದ ದಿನ. ಹುಟ್ಟಿನಿಂದಸಾಯುವವರೆಗೂ ದಿನನಿತ್ಯ ಒಂದಿಲ್ಲೊಂದುಸಂಘರ್ಷದಿಂದ ಸಾಧಿಸಿದ ದಿನದ ಒಂದು ಸ್ಮರಣೆಯ ದಿನಮಾತ್ರ. ವಿಶ್ವಸಂಸ್ಥೆ 1975 ರಲ್ಲಿ ಈ ದಿನವನ್ನು "ವಿಶ್ವ ಮಹಿಳಾ ದಿನ" ಎಂದು ಘೋಷಿಸಿತು.ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹನೀಡುವುದಕ್ಕೆ "ಮಹಿಳಾ ದಿನ" ಎಂದು ಆಚರಿಸಲಾಗುತ್ತದೆ.ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ.ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದುಮಾದರಿಯಾಗಿ ನಿಂತಿದ್ದಾಳೆ. ಬಹುತೇಕ ಪ್ರಮುಖಹುದ್ದೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆರಾರಾಜಿಸುತ್ತಿದ್ದಾಳೆ. ಇವತ್ತು ಮಹಿಳೆ ಉತ್ತಮ ಶಿಕ್ಷಣಪಡೆಯುತ್ತಿದ್ದಾಳೆ.ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆದಿದ್ದರೂಅವಳ ಸ್ಥಿತಿಗತಿ, ಸ್ಥಾನಮಾನ, ಆರ್ಥಿಕ, ಸಾಮಾಜಿಕ, ರಾಜಕೀಯಕ್ಷೇತ್ರಗಳಲ್ಲಿ ಮೇಲಕ್ಕೇರಿಸುವುದು ಹೆಚ್ಚುಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಲವಾರು ಇದ್ದರೂಉತ್ತರ ಅತ್ಯಂತ ಸರಳ. ಮಹಿಳಾ ಅಭಿವೃದ್ಧಿ ಎಂದಾಕ್ಷಣಕೇವಲ ಬೆರಳೆಣಿಕೆಯ ಮಹಿಳೆಯರಿಗೆ ಅವಕಾಶಕಲ್ಪಿಸುವುದು, ಸಬಲೀಕರಣ ಎಂದಾಕ್ಷಣ ಗಂಡನನ್ನುಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಎಂದರ್ಥವಲ್ಲ.'ಮಹಿಳಾ ಪರ ಸಂಘರ್ಷ' ಎನ್ನುವುದು ಒಂದು ದಿನದಕಾರ್ಯಕ್ರಮ ಮಾಡಿ ಮುಗಿಸುವಂತಹದ್ದೂ ಅಲ್ಲ.ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ,ಅತ್ಯಾಚಾರ ಇವುಗಳನ್ನು ತಡೆಯಬೇಕು. ವಿಶ್ವಾಸ, ಪ್ರೀತಿ,ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮಸಮಾಜದ ಕಣ್ಣುಗಳಾಗಬೇಕು. ಮಹಿಳೆಯರಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರನೈಕ ಬೆಂಬಲ ದೊರಕಬೇಕು. "ಯತ್ರ ನಾರ್ಯಸ್ತುಪೂಜ್ಯಂತೆ ರಮಂತೆ ತತ್ರ ದೇವತಾ:" ಎಂಬ ಮಾತು ಕೇವಲಮಾತಾಗಿಯೇ ಇರಬಾರದು. ಅದನ್ನು ಆಚರಣೆಗೆತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ.ಹೀಗಾದಲ್ಲಿ ಮಾತ್ರ ಅಂತರಾಷ್ಟ್ರೀಯ ಮಹಿಳಾದಿನಾಚರಣೆಯ ಉದ್ದೇಶ ಅರ್ಥಪೂರ್ಣ. ಮಹಿಳೆಯರಿಗೆ"ಮಹಿಳಾ ದಿನಾಚರಣೆಯ ಶುಭಾಷಯಗಳು

                           ".ಮೈಸೂರು ಜಿಲ್ಲೆಯಲ್ಲಿ "ವಿಶ್ವ ಮಹಿಳಾದಿನಾಚರಣೆ"ಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿಪ್ರತಿ ವರ್ಷದಂತೆ ಈ ವರ್ಷವೂ ವಿನೂತನವಾಗಿ ಆಚರಿಸಲುಉದ್ದೇಶಿಸಲಾಗಿದೆ. ಅದರಂತೆ ದಿನಾಂಕ:08-03-2016 ರಂದುಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಕೇವಲ ಮಹಿಳೆಯರಲ್ಲದೆ ಪುರುಷರೂ ಸಹಸಕ್ರಿಯವಾಗಿ ಪಾಲ್ಗೊಂಡು ಮಹಿಳೆಯರಿಗಿರುವಹಕ್ಕುಗಳು, ಕಾನೂನುಗಳು ಹಾಗೂ ಸರ್ಕಾರದಿಂದಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು

ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಎಲ್ಲಾ ತಾಲ್ಲೂಕುಕೇಂದ್ರಗಳಲ್ಲಿಯೂ ಸಹ ಮಹಿಳಾ ದಿನಾಚರಣೆ-2016 ರಪ್ರಯುಕ್ತ ವೈವಿಧ್ಯಮಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.ಜಿಲ್ಲಾ ಮಟ್ಟದಲ್ಲಿ ದಿನಾಂಕ:08-03-2016 ರಂದು ಮಧ್ಯಾಹ್ನ

2.30 ಗಂಟೆಗೆ ಚೆಲುವಾಂಬ ಆಸ್ಪತ್ರೆಯಲ್ಲಿ "ಉನ್ನತೀಕರಿಸಿದಮಹಿಳೆಯರ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕ"ದಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳುಉದ್ಘಾಟಿಸಲಿದ್ದು, ಶ್ರೀ ವಾಸು, ಶಾಸಕರು ಚಾಮರಾಜ ಕ್ಷೇತ್ರ

ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಿಷ್ಠಾಚಾರದಂತೆ ಅತಿಥಿಗಣ್ಯರು ಆಗಮಿಸಲಿದ್ದಾರೆ. ಚಿಕಿತ್ಸಾ ಘಟಕದಉನ್ನತೀಕರಣಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ಆರ್ಥಿಕ ನೆರವುಹಾಗೂ ಸ್ವಾಮಿ ವಿವೇಕಾನಂದ ಯೂತ್‍ಮೂವ್‍ಮೆಂಟ್,ಮೈಸೂರುರವರು ಬೆಳಕಿನ ನಡಿಗೆ ಹಾಗೂ ಇತರೆಮನರಂಜನಾ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವಮಾಡಿರುತ್ತಾರೆ. ನಂತರ ಮಧ್ಯಾಹ್ನ 3.00 ಗಂಟೆಗೆ

ವೈದ್ಯಕೀಯ ಕಾಲೇಜು ಶತಮಾನೋತ್ಸವ ಭವನದಲ್ಲಿಸಭಾ ಕಾರ್ಯಕ್ರಮದ ಉದ್ಘಾಟನೆಯಾಗಲಿದ್ದು, ಈಕಾರ್ಯಕ್ರಮದಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹಾಗೂ ಉತ್ತಮ ಸ್ತ್ರೀಶಕ್ತಿ ಗುಂಪುಗಳಿಗೆಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕೈಗಾರಿಕಾಮತ್ತು ವಾಣಿಜ್ಯ ಇಲಾಖೆ ವತಿಯಿಂದ ಮಹಿಳಾ ಉದ್ಯಮಿದಾರರಿಗೆಸಾಲ ಮಂಜೂರಾತಿ ಪತ್ರ ವಿತರಣೆ ಹಾಗೂ ಕೈಗಾರಿಕಾನಿವೇಶನ ಮತ್ತು ಕಟ್ಟಡ ಮಂಜೂರಾತಿ ಪತ್ರಗಳನ್ನುಕೆ.ಐ.ಎ.ಡಿ.ಬಿ. ಮತ್ತು ಕೆ.ಎಸ್.ಎಸ್.ಐ.ಡಿ.ಸಿ.ರವರಿಂದ

ವಿತರಿಸಲಾಗುವುದು. ಅಲ್ಲದೆ ಕಲೆ, ಶಿಕ್ಷಣ, ಸಾಂಸ್ಕøತಿಕಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣೆ ಸಾಧನೆಮಾಡಿದ 8 ಅರ್ಹ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿನೀಡಲಾಗುವುದು.ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಮಹಿಳೆಯರಿಂದ ಅನುಭವ ಹಂಚಿಕೆ ಕಾರ್ಯಕ್ರಮ




No comments:

Post a Comment